Tag: ಅಫ್ಘಾನಿಸ್ಥಾನ

  • ಕುಂದುಜ್ಹ್‌ ಮಸೀದಿ ಮೇಲೆ ಬಾಂಬ್ ದಾಳಿ- 10ಕ್ಕೂ ಹೆಚ್ಚು ಮಂದಿ ದಾರುಣ ಸಾವು

    ಕುಂದುಜ್ಹ್‌ ಮಸೀದಿ ಮೇಲೆ ಬಾಂಬ್ ದಾಳಿ- 10ಕ್ಕೂ ಹೆಚ್ಚು ಮಂದಿ ದಾರುಣ ಸಾವು

    ಕಾಬೂಲ್: ಅಫ್ಘಾನಿಸ್ತಾನದ ಮಝಾರ್ ಇ-ಷರೀಫ್ ಮಸೀದಿ ಮೇಲೆ ಉಗ್ರರು ಬಾಂಬ್ ಸ್ಫೋಟ ನಡೆಸಿದ ಪರಿಣಾಮ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 65 ಜನರು ಗಾಯಗೊಂಡಿರುವ ಘಟನೆ ನಡೆದಿದೆ.

    BOMB BLAST (1)

    ಪ್ರಾರ್ಥನಾ ಸಮಯದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಉತ್ತರ ಅಫ್ಘಾನ್ ನಗರದ ಶಿಯಾ ಪಂಗಡದ ಮಝಾರ್ ಇ ಷರೀಫ್ ಮಸೀದಿ ಮೇಲೆ ಬಾಂಬ್ ದಾಳಿ ನಡೆಸಿರುವುದು ತಾನೇ ಎಂದು ತಾಲಿಬಾನ್‌ನ ಸ್ಥಳೀಯ ಮುಖಂಡನೊಬ್ಬ ಹೊಣೆ ಹೊತ್ತುಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಮಾಹಿತಿಯನ್ನು ಪೊಲೀಸ್ ವಕ್ತಾರ ಒಬೈದುಲ್ಲಾ ಅಬೇದಿ ಎಎಫ್‌ಪಿಗೆ ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿಮಾಡಿದೆ. ಇದನ್ನೂ ಓದಿ: ಇಮ್ಲಿವಾಲಿ ಮಸೀದಿ ಮುಂದೆ ನಮಾಜ್ ಮಾಡಿದ 150 ಮಂದಿ ವಿರುದ್ಧ FIR

    BOMB BLAST

    ಶಿಯಾ ಮಸೀದಿಯೊಳಗೆ ಸಂಭವಿಸಿರುವ ಬಾಂಬ್ ಸ್ಫೋಟದಲ್ಲಿ 10ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 30-40 ಮಂದಿ ಗಾಯಗೊಂಡಿರುವುದಾಗಿ ತಾಲಿಬಾನ್ ಕಮಾಂಡರ್‌ನ ವಕ್ತಾರ ಮೊಹಮ್ಮದ್ ಅಸೀಫ್ ವಾಝೇರಿ ತಿಳಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಪ್ರಾಂತೀಯ ಆರೋಗ್ಯ ಮಂಡಳಿಯ ವಕ್ತಾರ ಝಿಯಾ ಝೆಂಡಾನಿ ಅವರು, ಸ್ಫೋಟದಲ್ಲಿ 5ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕವಾಗಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಲಂಡನ್‌ ವ್ಯಕ್ತಿಯ ದೇಹದಲ್ಲಿ ಬರೋಬ್ಬರಿ ಒಂದೂವರೆ ವರ್ಷ ಅಡಗಿತ್ತು ಕೋವಿಡ್‌ – ಅಧ್ಯಯನದಿಂದ ದೃಢ

    TALIBAN
    ಅಫ್ಘಾನಿಸ್ಥಾನದ ಕಾಬೂಲ್‌ನಲ್ಲಿ ತಾಲಿಬಾನಿ ಉಗ್ರರು ನಿಂತಿದ್ದ ದೃಶ್ಯ

    ಸಾಮಾಜಿಕ ಜಾಲತಾಣದಲ್ಲಿ ಬಾಂಬ್ ದಾಳಿ ಬಗೆಗಿನ ಚಿತ್ರಗಳನ್ನು ಪರಿಶೀಲಿಸಲಾಗಿ ಬಾಂಬ್ ದಾಳಿಯಾಗಿರುವುದು ಬೆಳಕಿಗೆ ಬಂದಿದೆ. ಪ್ರತ್ಯಕ್ಷದರ್ಶಿಯೊಬ್ಬರು ಎಎಫ್‌ಪಿಗೆ ದೂರವಾಣಿ ಕರೆಯ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಅಧೀಕೃತ ದಾಖಲೆಗಳು ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

    ತಾಲಿಬಾನ್ ಅಫ್ಘಾನಿಸ್ಥಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ಬಾಂಬ್ ದಾಳಿಗಳು ಕಡಿಮೆಯಾಗಿದೆ. ಆದರೂ ಆಗಾಗ್ಗೆ ಶಿಯಾ ಉಪಸಮುದಾಯದವರ ಮಸೀದಿಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ವರದಿಗಳಲ್ಲಿ ಉಲ್ಲೇಖವಾಗಿದೆ.

  • 11.44 ಕೋಟಿ ಬೆಲೆಯ ಡ್ರಗ್ಸ್ ಸಾಗಿಸುತ್ತಿದ್ದ ಅಫ್ಘಾನಿಯರ ಬಂಧನ

    11.44 ಕೋಟಿ ಬೆಲೆಯ ಡ್ರಗ್ಸ್ ಸಾಗಿಸುತ್ತಿದ್ದ ಅಫ್ಘಾನಿಯರ ಬಂಧನ

    ನವದೆಹಲಿ: ಡ್ರಗ್ಸ್ ಸಾಗಿಸುತ್ತಿದ್ದ ಇಬ್ಬರು ಅಫ್ಘಾನಿಸ್ಥಾನದವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಬರೋಬ್ಬರಿ 11.44 ಕೋಟಿ ರೂ. ಬೆಲೆಯ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.

    ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಡಿ.25ರಂದು ದುಬೈನಿಂದ ಆಗಮಿಸಿದ್ದರು. ಒಟ್ಟು 208 ಕ್ಯಾಪ್ಸಲ್ಸ್ ಗಳಲ್ಲಿ 1.635 ಕೆ.ಜಿ. ಹೆರಾಯಿನ್ ರೂಪದ ಡ್ರಗ್ಸ್ ನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 11.44 ಕೋಟಿ ರೂ. ಆಗಿದೆ ಎಂದು ಅಂದಾಜಿಸಲಾಗಿದೆ.

    ನಾರ್ಕೋಟಿಕ್ ಡ್ರಗ್ಸ್ ಹಾಗೂ ಸೈಕೋಟ್ರೋಪಿಕ್ ಸಬ್‍ಸ್ಟೇನ್ಸಸ್ ಆಕ್ಟ್-1985 ಅಡಿ ಪ್ರಕರಣ ದಾಖಲಾಗಿದ್ದು, ಜನವರಿ 25ರಂದು ಇಕೆ 512 ವಿಮಾನದಲ್ಲಿ ಆಗಮಿಸಿದ ಇಬ್ಬರು ಅಫ್ಘಾನಿಸ್ಥಾನದವರನ್ನು ದೆಹಲಿ ಕಸ್ಟಮ್ಸ್ ಅಧಿಕಾರಿಗಳು ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 208 ಕ್ಯಾಪ್ಸಲ್ಸ್ ಒಟ್ಟು 1,635 ಗ್ರಾಂ. ವೈಟ್ ಪೌಡರ್ ರೀತಿಯ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

  • ವಾಯು ಸೇನೆಯ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ

    ವಾಯು ಸೇನೆಯ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ

    – ಸ್ಥಳದಲ್ಲಿ 8 ಸಾವು, ಒಟ್ಟು 15 ಮಂದಿ ದುರ್ಮರಣ

    ಕಾಬೂಲ್: ಅಫ್ಘಾನಿಸ್ಥಾನದ ವಾಯು ಸೇನೆಯ ಎರಡು ಹೆಲಿಕಾಪ್ಟರ್ ಗಳ ನಡುವೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 15 ಜನರು ಮೃತಪಟ್ಟಿದ್ದಾರೆ.

    ಮಂಗಳವಾರ ರಾತ್ರಿ ದಕ್ಷಿಣ ಹೆಲ್‍ಮಂದ್ ವ್ಯಾಪ್ತಿಯ ನವಾ ಜಿಲ್ಲೆಯಲ್ಲಿ ಅಫ್ಘಾನ್ ವಾಯುಸೇನೆ ಎರಡು ಹೆಲಿಕಾಪ್ಟರ್ ಗಳ ನಡುವೆ ಡಿಕ್ಕಿಯಾಗಿದೆ. ಒಂದು ಹೆಲಿಕಾಪ್ಟರ್ ನಲ್ಲಿ ಕಮಾಂಡೋಗಳನ್ನು ಒಂದು ಸ್ಥಳಕ್ಕೆ ಕರೆದೊಯ್ಯಲಾಗುತ್ತಿತ್ತು. ಮತ್ತೊಂದರಲ್ಲಿ ಗಾಯಾಳುಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಅಪಘಾತ ನಡೆದಿದ್ದು, ಸ್ಥಳದಲ್ಲಿಯೇ ಎಂಟು ಜನ ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ವಿಮಾನಗಳ ಮುಖಾಮುಖಿ ಡಿಕ್ಕಿ – ಓರ್ವ ಜನಪ್ರತಿನಿಧಿ ಸೇರಿ 7 ಜನ ಸಾವು

    ಇದುವರೆಗೂ ಅಫ್ಘಾನಿಸ್ಥಾನ ವಾಯುಸೇನೆ ಘಟನೆಯ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಆದ್ರೆ ಸ್ಥಳೀಯ ಗವರ್ನರ್ ನವಾ ಜಿಲ್ಲೆಯಲ್ಲಿ ನಡೆದಿರುವ ಅಪಘಾತದ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 2 ಸೂರ್ಯಕಿರಣ್ ಯುದ್ಧವಿಮಾನಗಳು ಡಿಕ್ಕಿ

  • ಏರ್ ಸ್ಟ್ರೈಕ್ ನಂತರ ಅಫ್ಘಾನಿಸ್ಥಾನದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಉಗ್ರರು

    ಏರ್ ಸ್ಟ್ರೈಕ್ ನಂತರ ಅಫ್ಘಾನಿಸ್ಥಾನದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಉಗ್ರರು

    ನವದೆಹಲಿ: ಪಾಕಿಸ್ತಾನದ ಬಾಲಾಕೋಟ್ ಮೇಲೆ ಭಾರತೀಯ ವಾಯು ಸೇನೆ ದಾಳಿ ನಡೆಸಿ, ತರಬೇತಿ ಕೇಂದ್ರಗಳನ್ನು ಧ್ವಂಸಗೊಳಿಸಿದ ನಂತರ ಜೈಷ್-ಎ-ಮೊಹಮ್ಮದ್(ಜೆಇಎಂ) ಹಾಗೂ ಲಷ್ಕರ್-ಎ-ತೈಯ್ಬಾ(ಎಲ್‍ಇಟಿ) ಸಂಘಟನೆಯ ಉಗ್ರರು ಅಫ್ಘಾನಿಸ್ಥಾನದಲ್ಲಿ ತರಬೇತಿ ಪಡೆಯುತ್ತಿರುವ ಕುರಿತು ಗುಪ್ತಚರ ದಳ ಮಾಹಿತಿ ನೀಡಿದೆ.

    ಅಫ್ಘಾನಿಸ್ಥಾನದಲ್ಲಿ ಉಗ್ರರು ತರಬೇತಿ ಪಡೆಯುತ್ತಿದ್ದಾರೆ ಎಂದು ಮಾಹಿತಿ ತಿಳಿದ ಬೆನ್ನಲ್ಲೇ ಭಾರತದ ಡಿಪ್ಲೊಮ್ಯಾಟಿಕ್ ಮಿಶನ್ಸ್ ಮತ್ತು ಕಾಬೂಲ್, ಕಂದಾಹರ್ ಪ್ರದೇಶದ ಸುತ್ತಮುತ್ತ ಹೈ ಅಲರ್ಟ್ ಘೋಷಿಸಲಾಗಿದೆ. ಜೈಷ್ ಹಾಗೂ ಎಲ್‍ಇಟಿ ಸಂಘಟನೆಯ ಉಗ್ರರು ಅಫ್ಘಾನಿಸ್ಥಾನದ ಕುನಾರ್, ನಂಗರ್‍ಹಾರ್, ನುರಿಸ್ಥಾನ್ ಹಾಗೂ ಕಂದಹಾರ್ ಪ್ರದೇಶದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

    ಫೆ.14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‍ಪಿಎಫ್ ಬೆಂಗಾವಲು ವಾಹನದ ಮೇಲೆ ಜೈಷ್ ಸಂಘಟನೆಯ ಉಗ್ರನೊಬ್ಬ ಸ್ಫೋಟಕಗಳನ್ನು ತುಂಬಿದ್ದ ಮಾರುತಿ ಇಕೋ ಕಾರನ್ನು ಗುದ್ದಿಸಿ ದಾಳಿ ನಡೆಸಿದ್ದ. ಇದಕ್ಕೆ ಪ್ರತಿಯಾಗಿ ಭಾರತೀಯ ವಾಯು ಸೇನೆ ಮಿರಾಜ್ ಜೆಟ್‍ಗಳ ಮೂಲಕ ಬಾಲಾಕೋಟ್‍ನಲ್ಲಿದ್ದ ಜೈಷ್ ಉಗ್ರರ ಅಡಗುತಾಣಗಳ ಮೇಲೆ ಏರ್ ಸ್ಟ್ರೈಕ್ ಮಾಡಿತ್ತು.

    ಇದೀಗ ಜೈಷ್ ಹಾಗೂ ಎಲ್‍ಇಟಿ ಉಗ್ರ ಸಂಘಟನೆಗಳು ಅಫ್ಘಾನಿಸ್ಥಾನದ ತಾಲಿಬಾನ್ ಹಾಗೂ ಅಫ್ಘಾನ್ ಇನ್ಸರ್ಜೆಂಟ್ ಗ್ರೂಪ್, ಹಕ್ಕಾನಿ ನೆಟ್‍ವರ್ಕ್‍ನೊಂದಿಗೆ ಕೈ ಜೋಡಿಸಿವೆ. ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಬೇರ್ಪಡಿಸುವ ಡುರಾಂಡ್ ರೇಖೆಯಾದ್ಯಂತ ಉಗ್ರರಿಗೆ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ಗುಪ್ತಚರ ದಳ ತಿಳಿಸಿದೆ.

    ಜುಲೈ 1, 2ರಂದು ಎಲ್‍ಇಟಿಯ 15 ನಾಯಕರು ಹಾಗೂ ಅವರಿಗೆ ಹಣದ ನೆರವು ನೀಡುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ.

    ಉಗ್ರರಿಗೆ ಹಣಕಾಸು ನೀಡುವ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡುತ್ತಿರುವ ಜಾಲ ಹತ್ತಿಕ್ಕಿ, ಅಕ್ಟೋಬರ್ ಒಳಗಾಗಿ ಅವರ ವಿರುದ್ಧ ನಿರ್ದಿಷ್ಟ ಕ್ರಮ ಕೈಗೊಳ್ಳದೇ ಇದ್ದಲ್ಲಿ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫ್ಲೋರ್ಸ್(ಎಫ್‍ಎಟಿಎಫ್) ಈಗಾಗಲೇ ಎಚ್ಚರಿಕೆ ನೀಡಿದೆ. ಇದನ್ನೂ ಓದಿ:  ಆರ್ಥಿಕವಾಗಿ ಕುಸಿದಿರುವ ಪಾಕಿಗೆ ಎಫ್‍ಎಟಿಎಫ್‍ನಿಂದ ಕೊನೆಯ ಎಚ್ಚರಿಕೆ

    ಫ್ಲೋರಿಡಾ ಒರ್ಲಾಂಡೋದಲ್ಲಿ ನಡೆದ ಉಗ್ರರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯಾದ ಹಣಕಾಸು ಕ್ರಮ ಕ್ರಿಯಾ ಪಡೆಯ (ಎಫ್‍ಎಟಿಎಫ್) ವಾರ್ಷಿಕ ಮಹಾಸಭೆಯಲ್ಲಿ ಉಗ್ರರನ್ನು ಹತ್ತಿಕ್ಕುವಲ್ಲಿ ಪಾಕಿಸ್ತಾನದ ವೈಫಲ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಗಿತ್ತು. ಸದ್ಯ ಈಗ ಎಫ್‍ಎಟಿಎಫ್ ಅಲ್ಲಿ ಪಾಕಿಸ್ತಾನ ಬೂದು ಬಣ್ಣದ ಪಟ್ಟಿಯಲ್ಲಿದೆ. ಆದರೆ ಉಗ್ರರಿಗೆ ಹಣ ನೀಡಿ ಸಹಾಯ ಮಾಡುತ್ತಿರುವ ಜಾಲದ ವಿರುದ್ಧ ಅಕ್ಟೋಬರ್ ಒಳಗೆ ಕ್ರಮ ಕೈಗೊಳ್ಳಲು ಪಾಕಿಸ್ಥಾನ ವಿಫಲವಾದರೆ ಎಫ್‍ಎಟಿಎಫ್‍ನ ಕಪ್ಪು ಪಟ್ಟೆಗೆ ಪಾಕ್ ಸೇರಲಿದೆ.

    ಈ ಹಿಂದೆ ಉಗ್ರರ ದಮನದ ಕ್ರಿಯಾ ಯೋಜನೆ ಸಿದ್ಧಪಡಿಸಿ ಕ್ರಮ ಕೈಗೊಳ್ಳಲು ಜನವರಿಯವರೆಗೂ ಪಾಕ್‍ಗೆ ಗಡುವು ನೀಡಲಾಗಿತ್ತು. ಆದರೆ ಅದನ್ನು ಪೂರೈಸುವಲ್ಲಿ ಪಾಕ್ ವಿಫಲವಾಗಿತ್ತು. ಅಷ್ಟೇ ಅಲ್ಲ, ಮೇ 2019ರೊಳಗೆ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಗಡುವು ನೀಡಿತ್ತು. ಆದರೆ ಈ ಅವಕಾಶವನ್ನು ಕೂಡ ಉಪಯೋಗಿಸಿಕೊಳ್ಳುವಲ್ಲಿ ಪಾಕ್ ವಿಫಲವಾಗಿತ್ತು.

  • ಪಾಕ್ ಟೀಂ ಗೆಲುವನ್ನು ಅಸಭ್ಯವಾಗಿ ಸಂಭ್ರಮಿಸಿದ ಆ್ಯಂಕರ್- ವಿಡಿಯೋ ನೋಡಿ

    ಪಾಕ್ ಟೀಂ ಗೆಲುವನ್ನು ಅಸಭ್ಯವಾಗಿ ಸಂಭ್ರಮಿಸಿದ ಆ್ಯಂಕರ್- ವಿಡಿಯೋ ನೋಡಿ

    ಇಸ್ಲಾಮಾಬಾದ್: ಪಾಕ್ ತಂಡದ ಗೆಲುವನ್ನು ಪಾಕಿಸ್ತಾನದ ಟಿವಿ ಚಾನೆಲ್‍ವೊಂದರ ಆ್ಯಂಕರ್ ಅಸಭ್ಯವಾಗಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಶುಕ್ರವಾರ ಪಾಕಿಸ್ತಾನ ತಂಡವು ಅಫ್ಘಾನಿಸ್ಥಾನ ವಿರುದ್ಧ 3 ವಿಕೆಟ್ ಅಂತರದ ಗೆಲವು ಸಾಧಿಸಿತ್ತು. ಈ ವೇಳೆ ತಮ್ಮ ದೇಶದ ಆಟಗಾರರ ಗೆಲುವವನ್ನು ನ್ಯೂಸ್ ಬುಲೆಟಿನ್‍ನಲ್ಲಿ ಹೇಳುತ್ತಿದ್ದಾಗ ಆ್ಯಂಕರ್ ಅಸಭ್ಯವಾಗಿ ಸನ್ನೆ ಮಾಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ಪಾಕಿಸ್ತಾನದ ಟಿವಿ ಚಾನೆಲ್‍ವೊಂದು ಸುದ್ದಿ ಪ್ರಸಾರ ಮಾಡುತ್ತಿತ್ತು. ಈ ವೇಳೆ ಮಹಿಳಾ ಆ್ಯಂಕರ್ ಜೊತೆಗೆ ಕುಳಿತಿದ್ದ ಆ್ಯಂಕರ್, ತಮ್ಮ ಎರಡೂ ಕೈಗಳ ಮಧ್ಯದ ಬೆರಳು ತೋರಿಸಿ, ಡಾನ್ಸ್ ಮಾಡಿದ್ದಾರೆ. ಈ ಮೂಲಕ ಪಾಕ್ ಟೀಂ ಸಾಧನೆಯ ಸುದ್ದಿಯನ್ನು ನಗುತ್ತಲೇ ಹೇಳಿದ್ದಾರೆ.

    ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಭಾರೀ ಆಕ್ರೋಶ ಹೊರ ಹಾಕಿದ್ದಾರೆ. ಶನಿವಾರ ನಡೆದ ಇಂಡೊ ಪಾಕ್ ವಿರುದ್ಧ ಕದನದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಧವನ್‍ರ ಅಬ್ಬರದ ಶತಕಗಳ ನೆರವಿನಿಂದ ಭಾರತ 9 ವಿಕೆಟ್ ಗಳ ಭರ್ಜರಿ ಜಯ ಪಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತ -ಅಫ್ಘಾನಿಸ್ಥಾನ ಟೆಸ್ಟ್ ಕ್ರಿಕೆಟ್‍ಗೆ ಶುಭಕೋರಿದ ಪ್ರಧಾನಿ ಮೋದಿ

    ಭಾರತ -ಅಫ್ಘಾನಿಸ್ಥಾನ ಟೆಸ್ಟ್ ಕ್ರಿಕೆಟ್‍ಗೆ ಶುಭಕೋರಿದ ಪ್ರಧಾನಿ ಮೋದಿ

    ಬೆಂಗಳೂರು: ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯ ಆಡುತ್ತಿರುವ ಅಫ್ಘಾನಿಸ್ಥಾನ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಾರೆ.

    ಬುಧವಾರ ಟ್ವೀಟ್ ಮಾಡಿರುವ ನರೇಂದ್ರ ಮೋದಿ ಅವರು, ಅಫ್ಘಾನಿಸ್ಥಾನ ತಂಡವು ಮೊದಲ ಬಾರಿಗೆ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಆಡಲು ಭಾರತವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಅಭಿನಂದನೆ. ಇದೊಂದು ಐತಿಹಾಸಿಕ ಪಂದ್ಯವಾಗಿದ್ದು, ನಮ್ಮ ನೆಲವನ್ನು ಆಯ್ಕೆ ಮಾಡಿರುವುದು ಸಂತೋಷ ತಂದಿದೆ. ಉಭಯ ತಂಡಗಳಿಗೆ ಶುಭವಾಗಲಿ. ಕ್ರೀಡೆ ಎರಡು ದೇಶಗಳ ಜನರನ್ನು ಮತ್ತಷ್ಟು ಹತ್ತಿರಗೊಳಿಸುತ್ತಿದೆ ಹಾಗೂ ಸಂಬಂಧ ಬಲಪಡಿಸುತ್ತದೆ ಎಂದು ಬರೆದಿದ್ದಾರೆ.

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ನಲ್ಲಿ ಟಾಸ್ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇತ್ತೀಚಿನ ವರದಿ ಬಂದಾಗ 45.1 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 248 ರನ್ ಗಳಿಸಿದೆ.

    ಶಿಖರ್ ಧವನ್ 107 ರನ್(96 ಎಸೆತ, 19 ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟಾದರು. ಮುರಳಿ ವಿಜಯ್ ಔಟಾಗದೇ 94 ರನ್(128 ಎಸೆತ, 14 ಬೌಂಡರಿ, 1 ಸಿಕ್ಸ್), ಕೆಎಲ್ ರಾಹುಲ್ ರಾಹುಲ್ ಔಟಾಗದೇ 33 ರನ್(48 ಎಸೆತ, 4 ಬೌಂಡರಿ) ಹೊಡೆದಿದ್ದಾರೆ.