Tag: ಅಫ್ಘಾನಿಸ್ತಾ

  • ಅಫ್ಘಾನಿಸ್ತಾನದ ಮಾಜಿ ಸಂಸದೆ ಗುಂಡೇಟಿಗೆ ಬಲಿ

    ಅಫ್ಘಾನಿಸ್ತಾನದ ಮಾಜಿ ಸಂಸದೆ ಗುಂಡೇಟಿಗೆ ಬಲಿ

    ಕಾಬೂಲ್: ಅಫ್ಘಾನಿಸ್ತಾನವನ್ನು (Afghanistan) ತಾಲಿಬಾನ್ (Taliban) ವಶಪಡಿಸಿಕೊಳ್ಳುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದಿದ್ದ ಮಾಜಿ ಸಂಸದೆ (Former Lawmaker) ಗುಂಡಿಕ್ಕಿ ಕೊಂದಿರುವ ಘಟನೆ ಅಫ್ಘನ್ ರಾಜಧಾನಿ ಕಾಬೂಲ್‌ನಲ್ಲಿ (Kabul) ನಡೆದಿರುವುದಾಗಿ ಅಲ್ಲಿನ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

    ಅಫ್ಘಾನಿಸ್ತಾನದ ಮಾಜಿ ಸಂಸದೆ ಮುರ್ಸಲ್ ನಬಿಜಾದಾ (Mursal Nabizada)(32) ಅವರ ಮನೆಗೆ ಶನಿವಾರ ರಾತ್ರಿ ವೇಳೆ ಬಂದೂಕುಧಾರಿಗಳು ನುಗ್ಗಿದ್ದು, ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಗುಂಡಿನ ದಾಳಿ ವೇಳೆ ನಬಿಜಾದಾ ಅವರ ಅಂಗರಕ್ಷಕರೊಬ್ಬರು ಕೂಡಾ ಸಾವನ್ನಪ್ಪಿದ್ದಾರೆ ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ಹೇಳಿದ್ದಾರೆ.

    ಮುರ್ಸಲ್ ನಬಿಜಾದಾ ಅವರು ಈ ಹಿಂದಿನ ಅಮೆರಿಕ ಬೆಂಬಲಿತ ಸರ್ಕಾರದ ಸಂಸತ್ತಿನ ಸದಸ್ಯರಾಗಿದ್ದರು. ಅವರು ಅಫ್ಘಾನಿಸ್ತಾನದ ಒಬ್ಬ ನಿರ್ಭೀತ ನಾಯಕಿಯಾಗಿದ್ದರು ಎಂದು ಮಾಜಿ ಶಾಸಕ ಮರಿಯಮ್ ಸೊಲೈಮಂಖಿಲ್ ತಿಳಿಸಿದ್ದಾರೆ. ಆಗಸ್ಟ್ 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ವೇಳೆ ಅವರು ತಮ್ಮ ಅಧಿಕಾರದಿಂದ ಕೆಳಗಿಳಿಯಬೇಕಾಯಿತು.

    ಶನಿವಾರ ರಾತ್ರಿ ನಡೆದಿರುವ ಗುಂಡಿನ ದಾಳಿಯಲ್ಲಿ ಮುರ್ಸಲ್ ನಬಿಜಾದಾ ಹಾಗೂ ಅವರ ಅಂಗರಕ್ಷಕ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಬಿಜಾದಾ ಅವರ ಸಹೋದರ ಕೂಡಾ ಗಾಯಗೊಂಡಿದ್ದಾರೆ. ಘಟನೆಯನ್ನು ಭದ್ರತಾ ಪಡೆಗಳು ಗಂಭೀರವಾಗಿ ತೆಗೆದುಕೊಂಡಿದ್ದು, ತನಿಖೆಯನ್ನು ಪ್ರಾರಂಭಿಸಿದೆ. ಇದನ್ನೂ ಓದಿ: ಹಾಕಿ ವಿಶ್ವಕಪ್‌ – ಭಾರತ, ಇಂಗ್ಲೆಂಡ್‌ ಪಂದ್ಯ ಡ್ರಾನಲ್ಲಿ ಅಂತ್ಯ

    ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಉನ್ನತ ಸರ್ಕಾರಿ ಹುದ್ದೆಯಲ್ಲಿರುವವರಿಗೆ ದೇಶವನ್ನು ತೊರೆಯಲು ಅವಕಾಶ ನೀಡಲಾಗಿತ್ತು. ಅಂತಹ ಉನ್ನತ ಹುದ್ದೆಯಲ್ಲಿದ್ದ ಹಲವಾರು ಮಹಿಳೆಯರು ವಿದೇಶಕ್ಕೆ ತೆರಳಿದ್ದರು. ಆದರೆ ನಬಿಜಾದಾ ಮಾತ್ರ ತನ್ನ ಜನರಿಗಾಗಿ ಅಫ್ಘಾನಿಸ್ತಾನದಲ್ಲೇ ಉಳಿಯಲು ಹಾಗೂ ಹೋರಾಡಲು ನಿರ್ಧರಿಸಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸೋಮವಾರ ಬೆಂಗಳೂರಿನಲ್ಲಿ ಪ್ರಿಯಾಂಕಾ ಅಬ್ಬರ- 1 ಲಕ್ಷ ಮಹಿಳಾ ಕಾರ್ಯಕರ್ತರು ಭಾಗಿ ಸಾಧ್ಯತೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಯವಿಟ್ಟು ಸಹಾಯ ಮಾಡೋದನ್ನ ನಿಲ್ಲಿಸಬೇಡಿ- ಅಮೆರಿಕಾಗೆ ತಾಲಿಬಾನ್ ಬೇಡಿಕೆ

    ದಯವಿಟ್ಟು ಸಹಾಯ ಮಾಡೋದನ್ನ ನಿಲ್ಲಿಸಬೇಡಿ- ಅಮೆರಿಕಾಗೆ ತಾಲಿಬಾನ್ ಬೇಡಿಕೆ

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪ ಬರೋಬ್ಬರಿ 1,150 ಜನರ ಪ್ರಾಣವನ್ನು ತೆಗೆದುಕೊಂಡಿತು. ಇದೀಗ ಭಾರೀ ನಷ್ಟ ಎದುರಿಸುತ್ತಿರುವ ತಾಲಿಬಾನ್ ಸರ್ಕಾರ ಅಮೆರಿಕಾಗೆ ಸಹಾಯ ಮಾಡಲು ಹಣಕಾಸಿನ ನಿರ್ಬಂಧವನ್ನು ತೆಗೆದುಹಾಕುವಂತೆ ಒತ್ತಾಯಿಸಿದೆ.

    ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುಟ್ಟಾಕಿ ಅವರು ಶನಿವಾರ ಕಾಬೂಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಇಂತಹ ಕಷ್ಟದ ಸಮಯದಲ್ಲಿ ಅಫ್ಘಾನಿಸ್ತಾನದ ಹೆಪ್ಪುಗಟ್ಟಿದ ಆಸ್ತಿಗಳನ್ನು ಬಿಡುಗಡೆ ಮಾಡಲು ಹಾಗೂ ಅಫ್ಘಾನಿಸ್ತಾನದ ಬ್ಯಾಂಕುಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ನಾವು ಅಮೆರಿಕಗೆ ಬೇಡಿಕೆ ಇಡುತ್ತಿದ್ದೇವೆ. ಇದರಿಂದಾಗಿ ಸಹಾಯ ಸಂಸ್ಥೆಗಳು ಸುಲಭವಾಗಿ ನಮಗೆ ಸಹಾಯವನ್ನು ತಲುಪಿಸಬಹುದು ಎಂದು ಹೇಳಿದರು. ಇದನ್ನೂ ಓದಿ: ಸ್ಕೂಲ್ ಡೇಸ್‍ನಿಂದ ಪ್ರೀತಿಸಿದವಳ ಮೇಲೆ ಗುಂಡು ಹಾರಿಸಿದ – ಯುವತಿಗೆ ಗಂಭೀರ ಗಾಯ

    ಫೆಬ್ರವರಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಅಮೆರಿಕದಲ್ಲಿ ಹೆಪ್ಪುಗಟ್ಟಿರುವ ಅಫ್ಘಾನ್ ಸೆಂಟ್ರಲ್ ಬ್ಯಾಂಕ್ ಆಸ್ತಿಯಲ್ಲಿ ಅರ್ಧದಷ್ಟು ಎಂದರೆ, 7 ಬಿಲಿಯನ್ ಡಾಲರ್(ಸುಮಾರು 54 ಸಾವಿರ ಕೋಟಿ ರೂ.) ಅನ್ನು ಮುಕ್ತಗೊಳಿಸಲು ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ್ದರು. ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು ಮತ್ತು ತಾಲಿಬಾನ್ ವಿರುದ್ಧದ ಭಯೋತ್ಪಾದನೆ ಸಂಬಂಧಿತ ಮೊಕದ್ದಮೆಗಳನ್ನು ಹೂಡಲು ಹಣವನ್ನು ವಿಭಜಿಸಿದರು ಎಂದು ವರದಿಗಳು ತಿಳಿಸಿವೆ.

    ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 1,150 ಜನರು ಸಾವನ್ನಪ್ಪಿದ್ದಾರೆ. 1,600 ಜನ ಗಾಯಗೊಂಡಿದ್ದಾರೆ ಸುಮಾರು 3,000 ಮನೆಗಳು ನಾಶವಾಗಿವೆ. ಸಾವನ್ನಪ್ಪಿರುವವರಲ್ಲಿ 121 ಮಕ್ಕಳು ಸೇರಿದ್ದಾರೆ ಎಂದು ತಾಲಿಬಾನ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚಿಕ್ಕೋಡಿಯಲ್ಲಿ ಆರಕ್ಷಕರಿಗೇ ಇಲ್ಲ ಸೋರದ ಸೂರು!

    ಅಫ್ಘಾನಿಸ್ತಾನದ ಜನರಿಗೆ ಸಹಾಯ ಮಾಡಲು ಭಾರತ ಅಗತ್ಯ ವಸ್ತುಗಳನ್ನು ಕಳುಹಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ. ನೆರವಿನಲ್ಲಿ ವಸತಿ ಕಳೆದುಕೊಂಡ ಕುಟುಂಬಗಳಿಗೆ ರಿಡ್ಜ್ ಟೆಂಟ್, ಮಲಗುವ ಚೀಲಗಳು, ಕಂಬಳಿ ಸೇರಿದಂತೆ ಅಗತ್ಯ ವಸ್ತುಗಳನ್ನು ಕಳುಹಿಸಿದೆ.

    Live Tv