Tag: ಅಫಜಲಪುರ

  • Kalaburagi | ಗುಟ್ಕಾ ತಿನ್ನಬೇಡ ಎಂದಿದ್ದಕ್ಕೆ ಬಾಲಕ ಆತ್ಮಹತ್ಯೆ

    Kalaburagi | ಗುಟ್ಕಾ ತಿನ್ನಬೇಡ ಎಂದಿದ್ದಕ್ಕೆ ಬಾಲಕ ಆತ್ಮಹತ್ಯೆ

    ಕಲಬುರಗಿ: ಗುಟ್ಕಾ (Gutka) ತಿನ್ನಬೇಡ, ಶರೀರ ಹಾಳಾಗುತ್ತದೆ ಎಂದು ಅಜ್ಜಿ ಬುದ್ಧಿವಾದ ಹೇಳಿದ್ದಕ್ಕೆ, ಮೊಮ್ಮಗನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಅಫಜಲಪುರ (Afzalpur) ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಶನಿವಾರ ನಡೆದಿದೆ.

    ರೋಹಿತ್ ಮಣ್ಣಾಂಕಲಗಿ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದ ರೋಹಿತ್ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ದಮಯಂತಿ ಎಂಬ ಅಜ್ಜಿ ತನ್ನ ಮೊಮ್ಮಗನನ್ನು ಕಳೆದ ಏಳೆಂಟು ವರ್ಷಗಳಿಂದ ಸಾಕಿ ಸಲುಹಿ, ವಿದ್ಯಾಭ್ಯಾಸ ಕೊಡಿಸುತ್ತಿದ್ದಳು. ಅಜ್ಜಿಗೆ ಮೊಮ್ಮಗ ಗುಟ್ಕಾ ತಿನ್ನುವ ವಿಚಾರ ಆತನ ಸ್ನೇಹಿತರಿಂದ ಗೊತ್ತಾಗಿದ್ದು, ತಿನ್ನಬೇಡಾ ಎಂಬ ಬುದ್ಧಿಮಾತುಗಳನ್ನು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿಂದು ʻಧರ್ಮ ಸಂರಕ್ಷಣಾʼ ಸಮಾವೇಶ

    ಬುದ್ಧಿವಾದದ ಮಾತುಗಳನ್ನು ಹೇಳಿದ ಒಂದೇ ಕಾರಣಕ್ಕಾಗಿ, ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಅಫಜಲಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಮೀರ್ ಮುಲ್ಲಾನ ಕುತಂತ್ರಕ್ಕೆ ಕೊನೇ ಮೊಳೆ ಹೊಡೆಯೋಣ – ಚಕ್ರವರ್ತಿ ಸೂಲಿಬೆಲೆ

  • ಕನ್ನಡ ಮೀಡಿಯಂ ಹುಡುಗನ ಅದ್ಭುತ ಸಾಧನೆ – ಕಲಬುರಗಿ ಕುವರ ಮಂಜುನಾಥ ಸಿಂಗೆ ಈಗ ಸಿಬಿಐ ಡಿಐಜಿ

    ಕನ್ನಡ ಮೀಡಿಯಂ ಹುಡುಗನ ಅದ್ಭುತ ಸಾಧನೆ – ಕಲಬುರಗಿ ಕುವರ ಮಂಜುನಾಥ ಸಿಂಗೆ ಈಗ ಸಿಬಿಐ ಡಿಐಜಿ

    ಕಲಬುರಗಿ: ನಕಾರಾತ್ಮಕ ಸುದ್ದಿಗಳಿಂದಲೇ ಗುರುತಿಸಿಕೊಳ್ಳುತ್ತಿದ್ದ ಕಲಬುರಗಿ ಜಿಲ್ಲೆಯ ಅಫಜಲಪುರ (Afzalpur) ತಾಲೂಕಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ರಾಷ್ಟ್ರದ ಭೂಪಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ.

    ಐಪಿಎಸ್ 2011ನೇ ಬ್ಯಾಚ್ ಅಧಿಕಾರಿ ಮಂಜುನಾಥ ಸಿಂಗೆ (Manjunath Singe) ಅವರು ಸಿಬಿಐ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (CBI DIG) ಹುದ್ದೆಗೇರುವ ಮೂಲಕ ದೇಶದ ಉದ್ದಗಲಕ್ಕೂ ಕಲಬುರಗಿ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ್ದಾರೆ.  ಇದೇ ಜ.13ರಂದು ಭಾರತ ಸರ್ಕಾರದ ಅಧೀನ ಕಾರ್ಯದರ್ಶಿ ಸತ್ಯಂ ಶ್ರೀವಾಸ್ತವ ಈ ಕುರಿತಾಗಿ ಆದೇಶ ಹೊರಡಿಸಿದ್ದು, ಸಿಂಗೆ ಅವರು 2028ರ ಫೆ.28ರ ವರೆಗೆ (5 ವರ್ಷ) ಸಿಬಿಐ ಡಿಐಜಿ ಹುದ್ದೆಯನ್ನು ನಿಭಾಯಿಸಲಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ & ಕೊಲೆ ಕೇಸ್‌ – ಅಪರಾಧಿ ಸಂಜಯ್‌ ರಾಯ್‌ಗೆ ಜೀವಾವಧಿ ಶಿಕ್ಷೆ

    ಹಳ್ಳಿಯಿಂದ ದಿಲ್ಲಿವರೆಗಿನ ಪಯಣ ಹೇಗಿತ್ತು?
    ಅಫಜಲಪುರ ತಾಲೂಕಿನ ಗೌರ್(ಬಿ) ಗ್ರಾಮದ ಮಂಜುನಾಥ ಅವರು ನಿವೃತ್ತ ಹೆಡ್‍ ಕಾನ್ಸ್‌ಟೇಬಲ್ ಹುಚ್ಚಪ್ಪ ಸಿಂಗೆ ಅವರ ಏಕೈಕ ಪುತ್ರ. 3ನೇ ತರಗತಿವರೆಗೆ ಹುಟ್ಟೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿತು, ಅಪ್ಪನ ವರ್ಗಾವಣೆಗೆ ಅನುಗುಣವಾಗಿ ಚಿತ್ತಾಪುರದ ಶಿಶು ವಿಹಾರ ಶಾಲೆಯಲ್ಲಿ 4ರಿಂದ 7ನೇ ತರಗತಿ ಮುಗಿಸಿದ್ದಾರೆ. ಇದಾದ ಬಳಿಕ ಯಾದಗಿರಿಯ ನ್ಯೂ ಕನ್ನಡ ಸರ್ಕಾರಿ ಶಾಲೆಯಲ್ಲಿ ಹೈಸ್ಕೂಲು ಮುಗಿಸಿದ್ದಲ್ಲದೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದರು ಎಂದು ಮಂಜುನಾಥ ಅವರ ಚಿಕ್ಕಪ್ಪ ಮಲ್ಲಿಕಾರ್ಜುನ ಸಿಂಗೆ ಸಂತಸದ ಕ್ಷಣಗಳನ್ನು ಹಂಚಿಕೊಂಡರು.

    ಧಾರವಾಡದ ಕರ್ನಾಟಕ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಮುಗಿಸಿದರು. ಬಳಿಕ ಸಿಇಟಿ ಬರೆದು ಪ್ರತಿಷ್ಠಿತ ಸುರತ್ಕಲ್‍ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸೋದಕ್ಕೆ ಆರೇ ತಿಂಗಳು ಬಾಕಿ ಇತ್ತು. ಆಗ ಅಮೆರಿಕ ಮೂಲದ ಪ್ರತಿಷ್ಠಿತ ಐಬಿಎಂ ಕಂಪನಿಗೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಮಂಜುನಾಥ ಸಿಂಗೆ ಅವರು ಆಯ್ಕೆಯಾದರು. ಪಿಯುಸಿ ಹಂತದಿಂದಲೇ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಿಗೆ ಸಿದ್ಧತೆ ಆರಂಭಿಸಿದ್ದ ಇವರು, ಐಬಿಎಂ ಸೇರ್ಪಡೆಗೊಂಡ ಬೆನ್ನಲ್ಲೇ ಯುಪಿಎಸ್ಸಿ ಪರೀಕ್ಷೆ ಎದುರಿಸಲು ಅಗತ್ಯವಿರುವ ಅಧ್ಯಯನವನ್ನು ಮತ್ತಷ್ಟು ಪ್ರಖರಗೊಳಿಸಿದ್ದರು. 2009-10ರಲ್ಲಿ ಐಆರ್‍ಎಸ್ ಉತ್ತೀರ್ಣರಾಗಿ ಗೋವಾದ ಆದಾಯ ತೆರಿಗೆ ಇಲಾಖೆಯಲ್ಲಿ 1 ವರ್ಷ ಸೇವೆ ಸಲ್ಲಿಸುತ್ತಲೇ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗಿ 2010-11ರಲ್ಲಿ ಐಪಿಎಸ್ ಗುರಿ ಮುಟ್ಟುವಲ್ಲಿ ಯಶಸ್ವಿಯಾದರು.

    ಆರಂಭಿಕ ತರಬೇತಿಯ ಬಳಿಕ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಎಎಸ್ಪಿ ಆಗಿ 1 ವರ್ಷ ಸೇವೆ ಸಲ್ಲಿಸಿದರು. ಇದಾದ ನಂತರ ಗಡಚಿರೋಲಿ ವಿಭಾಗದ ನಕ್ಸಲ್ ನಿಗ್ರಹ ಪಡೆಯಲ್ಲೂ ಎಎಸ್ಪಿ ಆಗಿ 2 ವರ್ಷ ಸೇವೆ ಸಲ್ಲಿಸಿದರು. ಆಮೇಲೆ ಪಾಲ್ಗಾರ್ ಎಸ್ಪಿಯಾಗಿ, ನಂತರ ಮುಂಬೈ ವಸಾಯಿ ಪ್ರಾಂತ್ಯದ ಡಿಸಿಪಿ, ನಂತರ ಬಾಂದ್ರಾ ಡಿಸಿಪಿಯಾಗಿ ಕಾರ್ಯನಿರ್ವಹಿಸಿದರು. ಈ ಬೆನ್ನಲ್ಲೇ ಕೋವಿಡ್ ಅವಧಿ ಮುಗಿಯುತ್ತಿದ್ದಂತೆಯೇ ಸಿಬಿಐ ಅಧಿಕಾರಿಯಾಗಿ ಸೇವೆ ಆರಂಭಿಸಿದ ಕೂಡಲೇ ಮಣಿಪುರ ಗಲಭೆಗಳ ಕುರಿತು ತನಿಖೆ ಕೈಗೊಳ್ಳುವ ಅಧಿಕಾರಿಗಳ ತಂಡದಲ್ಲಿ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡರು.

    ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಸಿಬಿಐ ಎಸ್ಪಿಯಾಗಿ ಬೆಂಗಳೂರಿನಲ್ಲಿ ಅಧಿಕಾರ ವಹಿಸಿಕೊಂಡಿದ್ದ ಮಂಜುನಾಥ ಸಿಂಗೆ ಅವರಿಗೆ ಇದೀಗ ಸಿಬಿಐ ಡಿಐಜಿ ಹುದ್ದೆ ಒಲಿದು ಬಂದಿದೆ. ಇದು ತವರೂರು ಅಫಜಲಪುರ ಹಾಗೂ ತವರು ಜಿಲ್ಲೆ ಕಲಬುರಗಿ ಸೇರಿದಂತೆ ಇಡೀ ರಾಜ್ಯದ ಯುವಪೀಳಿಗೆಗೆ ಹೆಮ್ಮೆಯಾಗಿದೆ. ಇದನ್ನೂ ಓದಿ: ನನ್ನನ್ನು ಟಾರ್ಗೆಟ್ ಮಾಡೋರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಯತ್ನಾಳ್‌ಗೆ ವಿಜಯೇಂದ್ರ ತಿರುಗೇಟು

    ಮಣಿಪುರ ಗಲಭೆ, ನೀಟ್ ರಗಳೆ ತನಿಖೆ
    ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ, ಮಣಿಪುರ ಗಲಭೆಗಳ ಕುರಿತು ತನಿಖೆ ಕೈಗೊಳ್ಳುವ ಜವಾಬ್ದಾರಿ ಐಪಿಎಸ್ ಅಧಿಕಾರಿ ಮಂಜುನಾಥ ಸಿಂಗೆ ಅವರ ಹೆಗಲಿಗೇರಿತ್ತು. ಈ ಕುರಿತು ಸಮಗ್ರ ತನಿಖೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದ್ದ ತಂಡದ ಭಾಗವಾಗಿದ್ದ ಸಿಂಗೆ ಅವರಿಗೆ ನೀಟ್ ಪರೀಕ್ಷಾ ರಾದ್ಧಾಂತದ ತನಿಖೆಯ ಹೊಣೆಯನ್ನೂ ಕೇಂದ್ರ ಸರ್ಕಾರ ವಹಿಸಿತ್ತು. ಈ ಎರಡೂ ಜವಾಬ್ದಾರಿಗಳನ್ನು ಅತ್ಯಂತ ಚಾಣಾಕ್ಷತೆಯಿಂದ ನಿಭಾಯಿಸಿದ ಅವರಿಗೆ ಈಗ ಸಿಬಿಐ ಡಿಐಜಿ ಹುದ್ದೆ ಅರಸಿ ಬಂದಿದೆ. ಇದನ್ನೂ ಓದಿ: ಮೊದಲು ಕಾಂಗ್ರೆಸ್ ಶಾಸಕರನ್ನ ಉಳಿಸಿಕೊಳ್ಳಲಿ: ಎಂ.ಬಿ ಪಾಟೀಲ್‌ಗೆ ವಿಜಯೇಂದ್ರ ಟಕ್ಕರ್

  • ಕಲಬುರಗಿ| ತಲೆ ಮೇಲೆ ಶಾಲಾ ವಾಹನ ಹರಿದು 3 ವರ್ಷದ ಬಾಲಕಿ ದುರ್ಮರಣ

    ಕಲಬುರಗಿ| ತಲೆ ಮೇಲೆ ಶಾಲಾ ವಾಹನ ಹರಿದು 3 ವರ್ಷದ ಬಾಲಕಿ ದುರ್ಮರಣ

    ಕಲಬುರಗಿ: ತಲೆ ಮೇಲೆ ಶಾಲಾ ವಾಹನ (School Bus) ಹರಿದ ಪರಿಣಾಮ 3 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಅಫಜಲಪುರ (Afzalpur) ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.

    ರಾಜಶೇಖರ್ ಎಂಬವರ ಪುತ್ರಿ ಖುಷಿ ಬನ್ನಟ್ಟಿ (3) ಮೃತ ಬಾಲಕಿ. ಶಾಲಾ ವಾಹನದಲ್ಲಿ ಅಣ್ಣ ಬಂದಿದ್ದ ವೇಳೆ ಆತನನ್ನು ಕರೆಯಲು ತಂದೆಯ ಹಿಂದೆ ಖುಷಿ ಹೋಗಿದ್ದಳು. ಆದರೆ ತಂದೆ ಈಕೆ ಬಂದಿರುವುದನ್ನು ಗಮನಿಸಿರಲಿಲ್ಲ. ಅಣ್ಣ ಬಸ್‌ನಿಂದ ಇಳಿದ ಬಳಿಕ ಶಾಲಾ ವಾಹನದ ಚಾಲಕ ಬಸ್ ಹಿಂದೆ ತಿರುಗಿಸಿದ್ದಾನೆ. ಈ ವೇಳೆ ಖುಷಿ ಬಸ್‌ನಡಿಗೆ ಸಿಲುಕಿದ್ದು, ಆಕೆಯ ತಲೆ ಮೇಲೆ ಶಾಲಾ ಬಸ್ ಹರಿದಿದೆ. ಘಟನೆಯ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಕಲ್ಲು ತೂರಾಟ, ತಲವಾರ್‌ ಪ್ರದರ್ಶನ, ಸಿಕ್ಕ ಸಿಕ್ಕ ವಾಹನಗಳ ಮೇಲೆ ದಾಳಿ – ನಾಗಮಂಗಲ ಧಗಧಗಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ಸುದ್ದಿ

    ಘಟನೆಯ ಬಳಿಕ ಶಾಲಾ ವಾಹನ ಚಾಲಕ ಶ್ರೀಶೈಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಹೈಡ್ರಾಮ – ಭಾರೀ ಭದ್ರತೆಯಲ್ಲಿ ನಗರಸಭಾ ಸದಸ್ಯರನ್ನು ಬರಮಾಡಿಕೊಂಡ ಸುಧಾಕರ್

  • ಸಂಕಷ್ಟ ನಿವಾರಣೆಗಾಗಿ ಗಾಣಗಾಪುರದ ದತ್ತನ ಮೊರೆ ಹೋದ ರೇವಣ್ಣ

    ಸಂಕಷ್ಟ ನಿವಾರಣೆಗಾಗಿ ಗಾಣಗಾಪುರದ ದತ್ತನ ಮೊರೆ ಹೋದ ರೇವಣ್ಣ

    – ದತ್ತನ ನಿರ್ಗುಣ ಪಾದುಕೆಗಳಿಗೆ ರೇವಣ್ಣ ವಿಶೇಷ ಪೂಜೆ

    ಕಲಬುರಗಿ: ಪ್ರಜ್ವಲ್ ರೇವಣ್ಣ ಪೆನ್ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಹಿಳೆಯ ಕಿಡ್ನ್ಯಾಪ್ ಪ್ರಕರಣದಲ್ಲಿ ಬಂಧನವಾಗಿ ಜಾಮೀನು ಮೇಲೆ ಬಂದಿರುವ ಮಾಜಿ ಸಚಿವ ಹೆಚ್‌ಡಿ ರೇವಣ್ಣ (HD Revanna) ಟೆಂಪಲ್ ರನ್ ಮುಂದುವರಿಸಿದ್ದಾರೆ. ಸಂಕಷ್ಟ ನಿವಾರಣೆಗಾಗಿ ಇಂದು ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರದ (Ganagapur) ದತ್ತನ (Dattatreya Temple) ಮೊರೆ ಹೋಗಿದ್ದಾರೆ.

    ಇಂದು ಬೆಳಗ್ಗೆ 9:30ಕ್ಕೆ ಬೆಂಗಳೂರಿನಿಂದ ಕಲಬುರಗಿ (Kalaburagi) ವಿಮಾನ ನಿಲ್ದಾಣಕ್ಕೆ ಆಗಮಿಸಿದ ರೇವಣ್ಣ, ಬಳಿಕ ರಸ್ತೆ ಮೂಲಕ ಗಾಣಗಾಪುರಕ್ಕೆ ತೆರಳಿದರು. ಈ ವೇಳೆ ದೇವಸ್ಥಾನದಲ್ಲಿ ದತ್ತನ ನಿರ್ಗುಣ ಪಾದುಕೆಗಳಿಗೆ ರೇವಣ್ಣ ವಿಶೇಷ ಪೂಜೆ ಸಲ್ಲಿಸಿ, ಎದುರಾಗಿರೋ ಸಂಕಷ್ಟಗಳನ್ನ ನಿವಾರಿಸು ಸ್ವಾಮಿ ಎಂದು ಪ್ರಾರ್ಥಿಸಿದರು. ಒಂದು ಗಂಟೆಗಳ ಕಾಲ ದೇವಸ್ಥಾನದಲ್ಲಿ ಕಾಲ ಕಳೆದ ರೇವಣ್ಣ ಅವರಿಗೆ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಸತ್ಕರಿಸಲಾಯಿತು. ಇನ್ನೂ ಇದಕ್ಕೂ ಮುನ್ನ ಏರ್‌ಪೋರ್ಟ್‌ನಲ್ಲಿ ಹೆಚ್‌ಡಿ ರೇವಣ್ಣ ಜೊತೆ ಸಾರ್ವಜನಿಕರು ಸೆಲ್ಫಿ ತೆಗೆಸಿಕೊಂಡು ಸಂಭ್ರಮಪಟ್ಟರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಲು ರೇವಣ್ಣ ನಿರಾಕರಿಸಿ ದಯವಿಟ್ಟು ನನ್ನನ್ನ ಬಿಟ್ಟು ಬಿಡಿ ಬ್ರದರ್ ಎಂದು ಹೇಳಿದರು. ಇದನ್ನೂ ಓದಿ: ಯಾದಗಿರಿಯಲ್ಲಿ ವಿಪರೀತ ಬಿಸಿಲಿನಿಂದ ಮೀನುಗಳ ಮಾರಣಹೋಮ

    ಈ ಹಿಂದೆ ಕೂಡ ಅನೇಕ ಬಾರಿ ಸಂಕಷ್ಟ ಎದುರಾಗಿದ್ದಾಗ ಹೆಚ್‌ಡಿ ರೇವಣ್ಣ ಗಾಣಗಾಪುರದ ದತ್ತಾತ್ರೇಯನ ಸನ್ನಿಧಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದರು. ಪ್ರಜ್ವಲ್ ರೇವಣ್ಣರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಲು ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಏರ್‌ಪೋರ್ಟ್‌ನಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರಜ್ವಲ್ ವಿದೇಶಕ್ಕೆ ಪರಾರಿಯಾಗೋವರೆಗೂ ಕತ್ತೆ ಕಾಯ್ತಿದ್ರ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಹೊರದೇಶಕ್ಕೆ ಹೋದವರನ್ನು ಕರೆತರಲು ಅದರದ್ದೇ ಆದ ರೀತಿ ಇದ್ದು, ಡಿಪ್ಲೊಮೆಟಿಕ್ ಪಾಸ್‌ಪೋರ್ಟ್ ರದ್ದುಪಡಿಸಲು ಸಹ ಅದರದ್ದೇ ಆದ ಪ್ರಕ್ರಿಯೆಗಳಿವೆಯೆಂದು ಹೇಳಿದರು. ಪ್ರಜ್ವಲ್ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತಿದ್ದು, ಪ್ರಜ್ವಲ್ ತಪ್ಪು ಮಾಡಿದ್ದೇ ಆದಲ್ಲಿ ಆತನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಜೋಶಿ ಹೇಳಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮನಿಗೆ ಬೆಳ್ಳಿಯ ಬಿಲ್ಲು-ಬಾಣ ಕೊಡುಗೆ

  • ಸಾಂಬಾರ್ ಪಾತ್ರೆಗೆ ಬಿದ್ದು 2ನೇ ಕ್ಲಾಸ್ ವಿದ್ಯಾರ್ಥಿನಿ ದಾರುಣ ಸಾವು

    ಸಾಂಬಾರ್ ಪಾತ್ರೆಗೆ ಬಿದ್ದು 2ನೇ ಕ್ಲಾಸ್ ವಿದ್ಯಾರ್ಥಿನಿ ದಾರುಣ ಸಾವು

    ಕಲಬುರಗಿ: ಬಿಸಿಯೂಟದ ಸಾಂಬಾರ್ ಪಾತ್ರೆಗೆ (Sambar Pot) ಬಿದ್ದು, ಗಂಭೀರವಾದ ಸುಟ್ಟ ಗಾಯಗಳಾಗಿದ್ದ 2ನೇ ತರಗತಿಯ ವಿದ್ಯಾರ್ಥಿನಿ (Student) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

    ಮಹಾಂತಮ್ಮ (6) ಸಾಂಬಾರ್ ಪಾತ್ರೆಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ 2ನೇ ತರಗತಿಯ ವಿದ್ಯಾರ್ಥಿನಿ. ಕಲಬುರಗಿ (Kalaburagi) ಜಿಲ್ಲೆಯ ಅಫಜಲಪುರ ತಾಲೂಕಿನ ಚಿಣಮಗೇರ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ (School) ನವೆಂಬರ್ 16ರಂದು ಈ ಘೋರ ದುರಂತ ನಡೆದಿತ್ತು. ವಿದ್ಯಾರ್ಥಿನಿ ಸಾಂಬಾರ್ ಪಾತ್ರೆಗೆ ಬಿದ್ದ ಹಿನ್ನೆಲೆ ಆಕೆಗೆ ಗಂಭೀರವಾದ ಸುಟ್ಟ ಗಾಯಗಳಾಗಿತ್ತು.

    ಆಕೆಯನ್ನು ಮೊದಲಿಗೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆಯಷ್ಟೇ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಶಮಿ ಕೈಯಲ್ಲಿ ಬೆಂಕಿ ಚೆಂಡು- ಕಾಂಗರೂಗಳ ನಿದ್ದೆಗೆಡಿಸಿರೋ ಸ್ವಿಂಗ್ ಮಾಸ್ಟರ್

    ಈ ದುರ್ಘಟನೆಯ ಹಿನ್ನೆಲೆ ನಿರ್ಲಕ್ಷ್ಯದಡಿ ಶಾಲೆಯ ಮುಖ್ಯ ಶಿಕ್ಷಕ ಸೇರಿದಂತೆ ಹಲವರನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಮಾರಣಾಂತಿಕ ಹಲ್ಲೆ

  • ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ – ಐವರು ಸ್ಥಳದಲ್ಲೇ ಸಾವು

    ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ – ಐವರು ಸ್ಥಳದಲ್ಲೇ ಸಾವು

    ಕಲಬುರಗಿ: ಬೈಕಿಗೆ (Bike) ಲಾರಿ (Lorry) ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿಯ (Kalaburagi) ಅಫಜಲಪುರ (Afzalpur) ತಾಲೂಕಿನ ಹಳ್ಳೋಳ್ಳಿ ಕ್ರಾಸ್ ಬಳಿ ನಡೆದಿದೆ.

    ಘಟನೆಯಲ್ಲಿ ನೇಪಾಳ (Nepal) ಮೂಲದ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಂದೇ ಬೈಕ್‌ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ತೆರಳುತ್ತಿದ್ದರು. ಈ ವೇಳೆ ದುದುನಿಯಿಂದ ಅಫಜಲಪುರ ಕಡೆಗೆ ಬರುತ್ತಿದ್ದ ಲಾರಿ ಬೈಕಿಗೆ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ:‌ ಮಾಲ್‌ನಲ್ಲಿ ಮಹಿಳೆಯರ ಜೊತೆ ಅನುಚಿತ ವರ್ತನೆ – ಆರೋಪಿ ಕೋರ್ಟ್‌ಗೆ ಶರಣು

    ಮೃತರು ಅಫಜಲಪುರದಲ್ಲಿ ಫಾಸ್ಟ್‌ಫುಡ್ ಹೋಟೆಲ್ ನಡೆಸುತ್ತಿದ್ದರು. ನೇಪಾಳ ಮೂಲದ ಈ ಕುಟುಂಬ ಕಳೆದ ಹಲವು ವರ್ಷಗಳಿಂದ ಅಫಜಲಪುರದಲ್ಲಿ ವಾಸವಿತ್ತು. ಘಟನಾ ಸ್ಥಳಕ್ಕೆ ಅಫಜಲಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹಾಸನ ಕಾಲೇಜಿನ 5ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಾಡಹಗಲೇ ಗ್ರಾಮ ಪಂಚಾಯತ್ ಅಧ್ಯಕ್ಷನ ಬರ್ಬರ ಕೊಲೆ

    ಹಾಡಹಗಲೇ ಗ್ರಾಮ ಪಂಚಾಯತ್ ಅಧ್ಯಕ್ಷನ ಬರ್ಬರ ಕೊಲೆ

    ಕಲಬುರಗಿ: ಗ್ರಾಮ ಪಂಚಾಯತ್ ಅಧ್ಯಕ್ಷನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಶುಕ್ರವಾರ ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪೂರದಲ್ಲಿ ನಡೆದಿದೆ.

    ಅಫಜಲಪುರ ತಾಲೂಕಿನ ಚೌಡಾಪೂರದ ಮದರಾ ಬಿ ಗ್ರಾಮ ಪಂಚಾಯತ್ ಅಧ್ಯಕ್ಷ ಗೌಡಪ್ಪಗೌಡ ಪಾಟೀಲ್ (50) ಅವರನ್ನು ದುಷ್ಕರ್ಮಿಗಳು ತಲ್ವಾರ್‌ಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಇದನ್ನೂ ಓದಿ: ಮಂತ್ರವಾದಿಯ ನಾಟಿ ಔಷಧಿಗೆ ಬಾಲಕ ಬಲಿ? – ತಂದೆ, ಮಗಳು ಆಸ್ಪತ್ರೆಗೆ ದಾಖಲು

    ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಭೀಮಾ ತೀರದಲ್ಲಿ ಸೇಡಿನ ಜ್ವಾಲೆ ಮತ್ತೆ ಸ್ಫೋಟಗೊಂಡಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ದೇವಲಗಾಣಗಾಪುರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಮುರುಡೇಶ್ವರದ ಕಡಲಲ್ಲಿ ಅಲೆಗಳಿಗೆ ಸಿಲುಕಿದ್ದ ಮೂವರ ರಕ್ಷಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪೊಲೀಸ್ ಕಸ್ಟಡಿಯಿಂದ ಎಸ್ಕೇಪ್‌ಗೆ ಯತ್ನ – 2ನೇ ಮಹಡಿಯಿಂದ ಜಿಗಿದು ಕೈಕಾಲು ಮುರಿದುಕೊಂಡ ಬಿಜೆಪಿ ಕಾರ್ಯಕರ್ತ

    ಪೊಲೀಸ್ ಕಸ್ಟಡಿಯಿಂದ ಎಸ್ಕೇಪ್‌ಗೆ ಯತ್ನ – 2ನೇ ಮಹಡಿಯಿಂದ ಜಿಗಿದು ಕೈಕಾಲು ಮುರಿದುಕೊಂಡ ಬಿಜೆಪಿ ಕಾರ್ಯಕರ್ತ

    ಕಲಬುರಗಿ: ಪೊಲೀಸ್ ಕಸ್ಟಡಿಯಿಂದ ಎಸ್ಕೇಪ್ ಆಗಲು ಯತ್ನಿಸಿ 2ನೇ ಮಹಡಿಯಿಂದ ಜಿಗಿದು ಬಿಜೆಪಿ ಕಾರ್ಯಕರ್ತನೊಬ್ಬ (BJP Worker) ಕೈಕಾಲು ಮುರಿದುಕೊಂಡ ಘಟನೆ ಕಲಬುರಗಿ (Kalaburagi) ನಗರದಲ್ಲಿ ನಡೆದಿದೆ.

    ಅಫಜಲಪುರ (Afzalpur) ತಾಲೂಕಿನ ಮಾಶಾಳ ಗ್ರಾಮದ ಮಹಾಂತೇಶ್ ಎಸ್ಕೇಪ್ ಆಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತ. ಹೋಟೆಲ್‌ನಲ್ಲಿ ಊಟ ಮಾಡಿ ಕಿಚನ್‌ನಿಂದ ಎಸ್ಕೇಪ್ ಆಗಲು ಯತ್ನಿಸಿದ್ದು, 2ನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದಾನೆ.

    ವಿದ್ಯುತ್ ಬಿಲ್ ವಿಚಾರಕ್ಕೆ ಜೆಸ್ಕಾಂ ಸಿಬ್ಬಂದಿ ಜೊತೆ ಮಹಾಂತೇಶ್ ಗಲಾಟೆ ನಡೆಸಿದ್ದ. ಜೆಸ್ಕಾಂ ಎಇಇ ಚಿದಾನಂದ ಜೊತೆ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಹಿನ್ನೆಲೆ ಆತನ ವಿರುದ್ಧ ದೂರು ದಾಖಲಾಗಿತ್ತು. 1 ತಿಂಗಳ ವಿದ್ಯುತ್ ಬಿಲ್ 8 ಸಾವಿರ ರೂ. ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆಯಾದ ಹಿನ್ನೆಲೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದನ್ನೂ ಓದಿ: ಬೆಂಗ್ಳೂರಿಗರು ಭಾಗಿಯಾಗದ್ದಕ್ಕೆ ಆಕ್ರೋಶ- ಕಾವೇರಿ ನೀರು ಸರಬರಾಜು ಮಾಡೋ ಪಂಪ್ ಹೌಸ್‍ಗೆ ಮುತ್ತಿಗೆ

    ಬಳಿಕ ಮಹಾಂತೇಶ್‌ನನ್ನು ಅಫಜಲಪುರ ಪೊಲೀಸರು ಬಂಧಿಸಿದ್ದು, ಕಲಬುರಗಿಗೆ ಕರೆತಂದು ಊಟಕ್ಕೆ ಕೂತಾಗ ಹೋಟೆಲ್‌ನಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ಅವಾಂತರದಿಂದ ಮಹಾಂತೇಶ್ ಕೈ ಕಾಲು ಮುರಿದುಕೊಂಡಿದ್ದಾನೆ. ಇದನ್ನೂ ಓದಿ: ಮಂಡ್ಯ ಬಂದ್‌ಗೆ ಕರೆ – ಪ್ರತಿಭಟನಾಕಾರರಿಗೆ ಎಚ್ಚರಿಕೆ ಕೊಟ್ಟ ಗೃಹಸಚಿವ ಜಿ.ಪರಮೇಶ್ವರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚುನಾವಣಾ ಕಣಕ್ಕಿಳಿಯಲು ಪಿಎಸ್‍ಐ ಹಗರಣದ ಕಿಂಗ್‍ಪಿನ್ ಆರ್‌ಡಿ ಪಾಟೀಲ್ ಸಜ್ಜು

    ಚುನಾವಣಾ ಕಣಕ್ಕಿಳಿಯಲು ಪಿಎಸ್‍ಐ ಹಗರಣದ ಕಿಂಗ್‍ಪಿನ್ ಆರ್‌ಡಿ ಪಾಟೀಲ್ ಸಜ್ಜು

    ಕಲಬುರಗಿ: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರುತ್ತಿದೆ. ಪಿಎಸ್‍ಐ ನೇಮಕಾತಿ ಪರೀಕ್ಷಾ ಅಕ್ರಮ (PSI recruiment scam) ಪ್ರಕರಣದ ಕಿಂಗ್‍ಪಿನ್ ಆರ್.ಡಿ ಪಾಟೀಲ್ ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾನೆ.

    ಅಫಜಲಪುರ (Afzalpur) ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧಿಸಲು ಈಗಾಗಲೇ ಎಲ್ಲಾ ತಯಾರಿ ನಡೆಸಿರುವ ಆರ್.ಡಿ ಪಾಟೀಲ್, ಪಕ್ಷೇತರನಾಗಿ ಅಖಾಡಕ್ಕೆ ಇಳಿಯಲು ಮುಂದಾಗಿದ್ದ. ಆದರೆ ಇದೀಗ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ (KRPP) ಸ್ಪರ್ಧಿಸಲು ತಯಾರಿ ನಡೆಸಿದ್ದಾನೆ. ಏ.10 ರಂದು ಅಫಜಲಪುರಕ್ಕೆ ಆಗಮಿಸುತ್ತಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿಯವರ ಸಮ್ಮುಖದಲ್ಲಿ ಆರ್.ಡಿ ಪಾಟೀಲ್ ಸಹೋದರ ಮಹಾಂತೇಶ್ ಪಾಟೀಲ್ ಹಾಗೂ ಬೆಂಬಲಿಗರು ಕೆಆರ್‌ಪಿಪಿಗೆ ಸೇರ್ಪಡೆಯಾಗಲು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಮೀಸಲಾತಿ ತೆಗೆದವರಿಗೆ ಶಾಪ ತಟ್ಟಲಿದೆ: ಹೆಚ್‌ಡಿ ರೇವಣ್ಣ

    ಸದ್ಯ ಕಲಬುರಗಿ ಜೈಲಿನಲ್ಲಿರುವ ಆರ್.ಡಿ ಪಾಟೀಲ್ ಪರ ಆತನ ಸಹೋದರ ಮಹಾಂತೇಶ್ ಪಾಟೀಲ್ ಅಫಜಲಪುರ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾನೆ. ಇದನ್ನೂ ಓದಿ: ಪುನೀತ್ ಕೆರೆಹಳ್ಳಿ ಬಂಧನಕ್ಕೆ ನಾಲ್ಕು ತಂಡ ರಚನೆ, ಪ್ರಕರಣದಲ್ಲಿ 3 ಎಫ್‌ಐಆರ್ – ಎಸ್ಪಿ ಕಾರ್ತಿಕ್ ರೆಡ್ಡಿ

  • ಜೋಡೆತ್ತುಗಳ ಮೇಲೆ ತಡರಾತ್ರಿ ಮಾರಣಾಂತಿಕ ಹಲ್ಲೆ: ದುಷ್ಕರ್ಮಿಗಳಿಗಾಗಿ ಪೊಲೀಸರ ಶೋಧ

    ಜೋಡೆತ್ತುಗಳ ಮೇಲೆ ತಡರಾತ್ರಿ ಮಾರಣಾಂತಿಕ ಹಲ್ಲೆ: ದುಷ್ಕರ್ಮಿಗಳಿಗಾಗಿ ಪೊಲೀಸರ ಶೋಧ

    ಕಲಬುರಗಿ: ಜೋಡೆತ್ತುಗಳ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಅಫಜಲಪುರ ತಾಲೂಕಿನ ಬಳೂರ್ಗಿ ಗ್ರಾಮದಲ್ಲಿ ನಡೆದಿದೆ.

    ಬಳೂರ್ಗಿ ಗ್ರಾಮದ ರೈತ ಇರಸಂಗಪ್ಪ ಬಾಲಕುಂದಿ ಅವರಿಗೆ ಸೇರಿದ ಜೋಡೆತ್ತುಗಳ ಮೇಲೆ ದುಷ್ಕರ್ಮಿಗಳು ನಿನ್ನೆ ರಾತ್ರಿ ಮನಬಂದಂತೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಭಾರತ ದೇಶ ಪಾತಾಳಕ್ಕೆ ಕುಸಿಯಲು ಕಾಂಗ್ರೆಸ್ ಕಾರಣ: ಶ್ರೀ ರಾಮುಲು

    ರಾತ್ರಿ ಸುಮಾರು 12 ಗಂಟೆಗೆ ಯಾರೂ ಇಲ್ಲದ ಸಮಯದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ ಎತ್ತುಗಳಿಗೆ ದುಷ್ಕರ್ಮಿಗಳು ಬಡಿಗೆಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ದುಷ್ಕರ್ಮಿಗಳ ಹಲ್ಲೆಯಿಂದ ಒಂದು ಎತ್ತಿನ ಮೂಗು, ಮೈಮೇಲೆ ರಕ್ತ ಬಂದಿದೆ. ಇನ್ನೊಂದು ಎತ್ತು ಸಂಪೂರ್ಣವಾಗಿ ಕುಸಿದು ಬಿದ್ದು ಮೇವನ್ನು ಸಹ ತಿನ್ನದಂತಾಗಿದೆ. ಇದನ್ನೂ ಓದಿ: ಸ್ಪೈಡರ್ ಮ್ಯಾನ್‍ನಂತೆ ಗೋಡೆ ಹತ್ತುವ ಬಾಲಕಿ – ವೀಡಿಯೋ ವೈರಲ್

    ಸ್ಥಳಕ್ಕೆ ಪಶು ವೈದ್ಯರು ಬಂದು ಚಿಕಿತ್ಸೆ ನೀಡಿದರೂ ಸದ್ಯ ಜೋಡೆತ್ತುಗಳ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಎತ್ತುಗಳ ಸ್ಥಿತಿಯನ್ನು ನೋಡಿ ರೈತ ಇರಸಂಗಪ್ಪ ಕಣ್ಣೀರು ಹಾಕುತ್ತಿದ್ದಾರೆ.

    ನಾನು ಎತ್ತುಗಳನ್ನೇ ನಂಬಿಕೊಂಡು ಬದುಕುತ್ತಿದ್ದೇನೆ. 2 ಲಕ್ಷ ಬೆಲೆಬಾಳುವ ಎತ್ತುಗಳಿಗೆ ಜೀವ ಹೋಗುವಂತೆ ಉದ್ದೇಶಪೂರ್ವಕವಾಗಿಯೇ ಹೊಡೆದಿದ್ದಾರೆ. ಮನುಷ್ಯರಿಗೆ ನೋವಾದರೆ ಹೇಳಿಕೊಳ್ಳುತ್ತಾರೆ. ಮೂಕ ಪ್ರಾಣಿಗಳು ತಮ್ಮ ವೇದನೆಯನ್ನು ಯಾರ ಮುಂದೆಯೂ ಹೇಳಿಕೊಳ್ಳಲಾಗದು. ಈ ಕೂಡಲೇ ಎತ್ತುಗಳ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.