Tag: ಅಪ್ಸರ ರಾಣಿ

  • ತೆಲುಗಿನತ್ತ ಧರ್ಮ ಕೀರ್ತಿರಾಜ್- ಅಪ್ಸರ ರಾಣಿ ಜೊತೆ ಸಿನಿಮಾ

    ತೆಲುಗಿನತ್ತ ಧರ್ಮ ಕೀರ್ತಿರಾಜ್- ಅಪ್ಸರ ರಾಣಿ ಜೊತೆ ಸಿನಿಮಾ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11)  ಸ್ಪರ್ಧಿ ಧರ್ಮ ಕೀರ್ತಿರಾಜ್ (Dharma Kirthiraj) ಇದೀಗ ತೆಲುಗಿನತ್ತ ಮುಖ ಮಾಡಿದ್ದಾರೆ. ಟಾಲಿವುಡ್‌ನ ಬೋಲ್ಡ್ ಬ್ಯೂಟಿ ಅಪ್ಸರ ರಾಣಿ ಜೊತೆ ಧರ್ಮ ತೆರೆಹಂಚಿಕೊಳ್ಳುತ್ತಿದ್ದಾರೆ. ‘ಬ್ಲಡ್ ರೋಸಸ್’ (Blood Roses) ಚಿತ್ರಕ್ಕೆ ಅವರು ಸಾಥ್ ನೀಡಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಕೂಡ ಅನಾವರಣ ಆಗಿದೆ. ಇದನ್ನೂ ಓದಿ:‘ಲಾಪತಾ ಲೇಡಿಸ್’ ಚಿತ್ರತಂಡದ ಮೇಲೆ ಕಥೆ ಕದ್ದ ಆರೋಪ- ಟೀಕಿಸಿದ ನೆಟ್ಟಿಗರು

    ‘ಬ್ಲಡ್ ರೋಸಸ್’ ಎಂಬ ತೆಲುಗಿನ ಸಿನಿಮಾದಲ್ಲಿ ಧರ್ಮಗೆ ಪವರ್‌ಫುಲ್ ಪಾತ್ರಕ್ಕೆ ಸಿಕ್ಕಿದೆ. ಆರ್‌ಜಿವಿ ನಿರ್ದೇಶನದ ‘ಡೇಂಜರಸ್’ ಚಿತ್ರದಲ್ಲಿ ನಟಿಸಿದ್ದ ಅಪ್ಸರ ರಾಣಿ (Apasara Rani) ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಪೊಲೀಸ್ ಪಾತ್ರದಲ್ಲಿ ಅವರು ಖದರ್ ತೋರಿಸಲಿದ್ದಾರೆ. ಕನ್ನಡದ ನಟ ಧರ್ಮಗೆ ಅಪ್ಸರ ಜೊತೆಯಾಗಿದ್ದಾರೆ. ಸದ್ಯ ರಿವೀಲ್ ಆಗಿರೋ ಚಿತ್ರದ ಫಸ್ಟ್ ಲುಕ್‌ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಇದನ್ನೂ ಓದಿ:ಏ.16ಕ್ಕೆ ಕಾದಿದೆ ಕಿಚ್ಚನಿಂದ ಬಿಗ್‌ ಸರ್ಪ್ರೈಸ್-‌ ಸುದೀಪ್‌ ಕಟ್ಟು ಮಸ್ತಾದ ಬಾಡಿ ನೋಡಿ ಫ್ಯಾನ್ಸ್‌ ಫಿದಾ

    ಚಿತ್ರತಂಡದ ಜೊತೆಗಿನ ಫೋಟೋಗಳನ್ನು ಧರ್ಮ ಶೇರ್ ಮಾಡಿ ತೆಲುಗಿನಲ್ಲಿ ನಟಿಸಿರುವ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸುದ್ದಿ ತಿಳಿದು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸದ್ಯದಲ್ಲೇ ಚಿತ್ರದ ರಿಲೀಸ್‌ ಬಗ್ಗೆ ತಂಡ ಅಪ್‌ಡೇಟ್‌ ನೀಡಲಿದೆ. ತೆಲುಗಿನ ಜೊತೆ ಕನ್ನಡದಲ್ಲೂ ಈ ಸಿನಿಮಾ ಬರಲಿದೆಯಾ ಎಂದು ಕಾಯಬೇಕಿದೆ. ಈ ಚಿತ್ರತಂಡ ಈ ಬಗ್ಗೆ ಏನಾದರೂ ಅಪ್‌ಡೇಟ್ ಕೊಡಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.