Tag: ಅಪ್ಲೋಡ್

  • ಅಶ್ಲೀಲ ವೆಬ್‍ಸೈಟ್‍ನಲ್ಲಿ ಬೆಂಗ್ಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರ ಫೋಟೋ ಅಪ್ಲೋಡ್

    ಅಶ್ಲೀಲ ವೆಬ್‍ಸೈಟ್‍ನಲ್ಲಿ ಬೆಂಗ್ಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರ ಫೋಟೋ ಅಪ್ಲೋಡ್

    – ಸಾಮಾಜಿಕ ಜಾಲತಾಣದಲ್ಲಿ ಫೋಟೋ ಕದ್ದು ದುರ್ಬಳಕೆ

    ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯರಿಗೆ ಫೋಟೋಗಳ ದುರ್ಬಳಕೆ ಆತಂಕ ಮನೆ ಮಾಡಿದೆ. ವಿದ್ಯಾರ್ಥಿನಿಯರಿಗೆ ಗೊತ್ತಾಗದಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಕದ್ದು ಅಶ್ಲೀಲ ವೆಬ್‍ಸೈಟ್‍ಗಳಲ್ಲಿ ಅಪ್ಲೋಡ್ ಮಾಡಲಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳು ಅಪ್ಲೋಡ್ ಮಾಡಿದ್ದ ಫೋಟೋಗಳನ್ನು ಕದ್ದು ಕೃತ್ಯ ಎಸಲಾಗಿದೆ. ನಕಲಿ ಖಾತೆ ಸೃಷ್ಟಿಸಿ ಫೇಸ್‍ಬುಕ್ ಹಾಗೂ ಇನ್ಸ್ ಸ್ಟಾದಲ್ಲಿ ವಿದ್ಯಾರ್ಥಿನಿಯರಿಗೆ ರಿಕ್ವೆಸ್ಟ್ ಕಳಿಸಿ ಬಳಿಕ ಫೋಟೋಗನ್ನು ಶೇರ್ ಮಾಡಿಕೊಂಡಿದ್ದಾರೆ.

    ಘಟನೆ ಕುರಿತು ಬೆಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ಮುಂದುವರಿಸಿದ್ದಾರೆ. ಅಶ್ಲೀಲ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿರುವುದರಿಂದ ವಿದ್ಯಾರ್ಥಿನಿಯರು ಆತಂಕಕ್ಕೊಳಗಾಗಿದ್ದಾರೆ. ಕಾಲೇಜಿನ ಹಲವು ವಿದ್ಯಾರ್ಥಿನಿಯರು ಮಾತ್ರವಲ್ಲದೇ ಮಹಿಳಾ ಭೋದಕ ಸಿಬ್ಬಂದಿಯ ಫೋಟೋಗಳನ್ನು ಕದ್ದು ಅಪ್ಲೋಡ್ ಮಾಡಲಾಗಿದೆ. ಸದ್ಯ ನಗರದ ಒಂದು ಕಾಲೇಜು ಮಾತ್ರವಲ್ಲದೇ ಹಲವು ಕಾಲೇಜು ವಿದ್ಯಾರ್ಥಿನಿಯರ ಫೋಟೋಗಳನ್ನು ಇದೇ ರೀತಿ ಕದ್ದು ಬಳಕೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ.

    ಈ ಹಿಂದೆ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಹೆಚ್ಚು ಫೋಟೋ ಅಪ್ಲೋಡ್ ಮಾಡದಂತೆ ಮನವಿ ಮಾಡಿದ್ದರು. ಇದರ ನಡುವೆಯೇ ವಿದ್ಯಾರ್ಥಿನಿಯರ ಫೋಟೋವನ್ನು ಕದ್ದು ದುರ್ಬಳಕೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿನಿಯರ ಫೋಟೋಗೆ ಅಶ್ಲೀಲ ದೇಹದ ಫೋಟೋಗಳನ್ನು ಎಡಿಟ್ ಮಾಡಿ ಅಪ್ಲೋಡ್ ಮಾಡಲಾಗಿದೆ. ಕಾಲೇಜಿನ ಪ್ರಾಂಶುಪಾಲರು ಹಾಗೂ ಎಚ್‍ಒಡಿ ಅವರು ಕೂಡ ಈ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿದಂತೆ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

  • 50 ಯೂಟ್ಯೂಬ್ ಚಾನೆಲ್‍ನಲ್ಲಿ ನಟಿಯ ಅಶ್ಲೀಲ ವಿಡಿಯೋ ಅಪ್ಲೋಡ್

    50 ಯೂಟ್ಯೂಬ್ ಚಾನೆಲ್‍ನಲ್ಲಿ ನಟಿಯ ಅಶ್ಲೀಲ ವಿಡಿಯೋ ಅಪ್ಲೋಡ್

    ಹೈದರಾಬಾದ್: ತೆಲುಗು ನಟಿ ಪೂನಂ ಕೌರ್ ಅವರ ಅಶ್ಲೀಲ ವಿಡಿಯೋಗಳನ್ನು ಕಿಡಿಗೇಡಿಗಳು 50 ಯೂಟ್ಯೂಬ್ ಚಾನೆಲ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಬಗ್ಗೆ ಪೂನಂ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ನನ್ನ ನಕಲಿ ವಿಡಿಯೋಗಳನ್ನು ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ ಈ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ ಎಂದು ಬುಧವಾರ ಪೂನಂ ಕೌರ್ ಸಿಟಿ ಪೊಲೀಸ್ ಕಮಿಷನರ್ ಬಳಿಕ ದೂರು ದಾಖಲಿಸಿದ್ದರು.

    ಹಣ ಪಡೆಯುವ ಸಲುವಾಗಿ ಕಿಡಿಗೇಡಿಗಳು 50 ಯೂಟ್ಯೂಬ್ ಚಾನೆಲ್‍ನಲ್ಲಿ ನನ್ನ ನಕಲಿ ವಿಡಿಯೋ ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ ಎಂದು ಪೂನಂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೂನಂ ದೂರಿನ ಆಧಾರದಲ್ಲಿ ಸೈಬರ್ ಕ್ರೈಂ ಪೊಲೀಸರು ಕಿಡಿಗೇಡಿಗಳ ವಿರುದ್ಧ ಐಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪೂನಂ ‘ಶೌರ್ಯಂ’, ‘ವಿನಾಯಾಕುಡು’ ಹಾಗೂ ‘ಗಣೇಶ್ ಜಸ್ಟ್ ಗಣೇಶ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರ ‘ಬಂಧು-ಬಳಗ’ ಚಿತ್ರ ಸೇರಿದಂತೆ ತಮಿಳು, ಮಲೆಯಾಳಂ ಚಿತ್ರದಲ್ಲೂ ಅಭಿನಯಿಸಿದ್ದಾರೆ.

  • ಟಿಕ್ ಟಾಕ್ ವಿಡಿಯೋ ಮಾಡಿ ಅಪ್ಲೋಡ್ ಮಾಡುವವರೇ ಎಚ್ಚರ

    ಟಿಕ್ ಟಾಕ್ ವಿಡಿಯೋ ಮಾಡಿ ಅಪ್ಲೋಡ್ ಮಾಡುವವರೇ ಎಚ್ಚರ

    ಬೆಂಗಳೂರು: ಟಿಕ್ ಟಾಕ್ ಮಾಡುವುದು ಈಗಿನ ಫ್ಯಾಶನ್ ಆಗಿದೆ. ದೊಡ್ಡವರಿಂದ ಚಿಕ್ಕವರತನಕ ಎಲ್ಲರೂ ಟಿಕ್ ಟಾಕ್ ವಿಡಿಯೋ ಮಾಡಿ ಎಂಜಾಯ್ ಮಾಡುತ್ತಾರೆ. ಅದನ್ನು ಮಾಡುವ ಮುನ್ನ ಎಚ್ಚರವಾಗಿರಿ ಏಕೆಂದರೆ ಕೆಲ ಕಿರಾತಕರು ಟಿಕ್ ಟಾಕ್ ವಿಡಿಯೋ ಬಳಸಿ ತಮಗೆ ಬೇಕಾದ ರೀತಿಯಲ್ಲಿ ಅದನ್ನು ಟ್ರೋಲ್ ಮಾಡುತ್ತಿದ್ದಾರೆ.

    ಮೂಲತಃ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ನಿವಾಸಿ ರಮ್ಯಾಗೆ ಟಿಕ್ ಟಾಕ್‍ನಲ್ಲಿ ವಿಡಿಯೋ ಅಪ್ಲೋಡ್ ಮಾಡುವುದು ಎಂದರೆ ತುಂಬಾನೇ ಇಷ್ಟ. ಕಳೆದ 1 ತಿಂಗಳಿನಿಂದ ರಮ್ಯಾ ಮಾಡಿರುವ ಟಿಕ್ ಟಾಕ್ ವಿಡಿಯೋಗಳಿಗೆ ತುಂಬಾನೇ ಲೈಕ್ಸ್ ಬರುತ್ತಿತ್ತು. ಇದನ್ನು ನೋಡಿದ ಕೆಲ ಪುಂಡ ಹುಡುಗರ ಗುಂಪು, ರಮ್ಯಾ ವಿಡಿಯೋ ಬಳಸಿ ಅಶ್ಲೀಲ ಆಡಿಯೋ ಸೇರಿಸಿ ಮತ್ತೊಂದು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಬಳಿಕ ಟಿಕ್ ಟಾಕ್‍ನಲ್ಲಿ ಕ್ಷಮೆ ಕೇಳುವಂತೆ ಕಿಡಿಗೇಡಿಗಳು ವಾರ್ನ್ ಮಾಡಿದ್ದಾರೆ. ಅಲ್ಲದೆ ಒಂದು ಹೆಜ್ಜೆ ಮುಂದೆ ಹೋಗಿ ರಮ್ಯಾಳ ಕಾಲೇಜ್ ಬಳಿ ಬಂದು ಬೆದರಿಕೆ ಹಾಕಿದ್ದಾರೆ. ಇನ್ನು ಮುಂದೆ ಹಿಂಗೆಲ್ಲ ಮಾಡಿದ್ರೆ ಸರಿ ಇರಲ್ಲ, ಮೊದಲು ವಿಡಿಯೋ ಡಿಲೀಟ್ ಮಾಡು ಎಂದು ಧಮ್ಕಿ ಹಾಕಿ ಹೋಗಿದ್ದಾರೆ ಎನ್ನಲಾಗಿದೆ.

    ಯುವತಿ ವಿಡಿಯೋ ಬಳಸಿಕೊಳ್ಳಿ ಆದರೆ ಟ್ರೋಲ್ ಮಾಡಬೇಡಿ ಎಂದರೂ ಅವರು ಕೇಳುತ್ತಿಲ್ಲ. ಇದರಿಂದ ನೊಂದ ಯುವತಿ ರಮ್ಯಾ ಈ ಕುರಿತು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸ್ಟಾರ್​ಗಳ ನಂತರ ಬಚ್ಚಾ ಪಾರ್ಟಿ ಚಾಲೆಂಜ್ ಶುರು- ವಿಡಿಯೋ

    ಸ್ಟಾರ್​ಗಳ ನಂತರ ಬಚ್ಚಾ ಪಾರ್ಟಿ ಚಾಲೆಂಜ್ ಶುರು- ವಿಡಿಯೋ

    ಮುಂಬೈ: ಭಾರತದ ಎಲ್ಲ ಕಲಾವಿದರು ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಆದರೆ ಈಗ ಸ್ಟಾರ್​ಗಳ ನಂತರ ಬಚ್ಚಾ ಪಾರ್ಟಿ ಈ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ.

    ಇತ್ತೀಚೆಗೆ ರಿತೇಶ್ ದೇಶಮುಖ್ ಕಿಚ್ಚ ಸುದೀಪ್ ಅವರ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ತಮ್ಮ ಫಿಟ್ನೆಸ್ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಅಲ್ಲದೇ ತಮ್ಮ ಫಿಟ್ನೆಸ್ ಚಾಲೆಂಜ್ ಸ್ವೀಕರಿಸುವಂತೆ ತಮ್ಮ ಮಗ ರಹೈಲ್‍ನಿಗೆ ಟ್ಯಾಗ್ ಕೂಡ ಮಾಡಿದ್ದರು.

    ಸದ್ಯ ರಹೈಲ್ ಇನ್‍ಡೋರ್ ರಾಕ್ ಕ್ಲೈಬಿಂಗ್ ಮಾಡುವ ಮೂಲಕ ತಮ್ಮ ತಂದೆ ನೀಡಿದ ಚಾಲೆಂಜ್ ಅನ್ನು ಸ್ವೀಕರಿಸಿದ್ದಾನೆ. ರಿತೇಶ್ ಅವರ ಪತ್ನಿ ಜೆನಿಲಿಯಾ ದೇಶಮುಖ್ ತಮ್ಮ ಮಗನ ಫಿಟ್ನೆಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಜೆನಿಲಿಯಾ ವಿಡಿಯೋ ಪೋಸ್ಟ್ ಮಾಡಿ ಅದಕ್ಕೆ, “ರಹೈಲ್ ಈ ಬೇಬಿ ಫಿಟ್ನೆಸ್ ಚಾಲೆಂಜ್ ಸ್ವೀಕರಿಸುತ್ತಿದ್ದಾನೆ. ಅಲ್ಲದೇ ಕರೀನಾ ಹಾಗೂ ಸೈಫ್ ಮಗ ತೈಮೂರ್ ನಿಗೆ, ಕರಣ್ ಜೋಹರ್ ಅವಳಿ ಮಕ್ಕಳಾದ ರೂಹಿ ಹಾಗೂ ಯಶ್, ತುಶಾರ್ ಕಪೂರ್ ಮಗ ಲಕ್ಷ್ಯ ಹಾಗೂ ಅರ್ಪಿತಾ ಖಾನ್ ಮಗ ಅಹಿಲ್ ಗೆ ಈ ಚಾಲೆಂಜ್ ನೀಡಿದ್ದಾನೆ.

    ಸದ್ಯ ರಹೈಲ್ ಫಿಟ್ನೆಸ್ ವಿಡಿಯೋ ನೋಡಿ ಬಾಲಿವುಡ್ ಮಂದಿ ಖುಷಿಯಾಗಿದ್ದಾರೆ. ಅಲ್ಲದೇ ಕರಣ್ ಜೋಹರ್, “ಓಎಂಜಿ. ಆತನನ್ನು ನೋಡಿ. ಅವನೊಬ್ಬ ರಾಕ್‍ಸ್ಟಾರ್. ಆತನನ್ನು ನೋಡಿ ನನಗೆ ತುಂಬಾ ಭಯವಾಗುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/karanjohar/status/1034707327906021378?ref_src=twsrc%5Etfw%7Ctwcamp%5Etweetembed%7Ctwterm%5E1034707327906021378&ref_url=https%3A%2F%2Fwww.ndtv.com%2Fentertainment%2Friteish-deshmukh-and-genelia-dsouzas-son-rahyl-2-adorably-nominates-taimur-in-cute-fitness-challenge-1908114