Tag: ಅಪ್ರಾಪ್ತ ಬಾಲಕ

  • Kolar | ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪ – ಅಪ್ರಾಪ್ತ ವಶಕ್ಕೆ

    Kolar | ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪ – ಅಪ್ರಾಪ್ತ ವಶಕ್ಕೆ

    ಕೋಲಾರ: ದೇಶ ವಿರೋಧಿ ಚಟುವಟಿಕೆಯಲ್ಲಿ (Anti-National Activity) ತೊಡಗಿದ ಹಾಗೂ ಕೆಲವೊಂದು ಉಗ್ರವಾದಿ ಸಂಘಟನೆಗಳ ಕುರಿತ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದಡಿಯಲ್ಲಿ ಓರ್ವ ಅಪ್ರಾಪ್ತ ಬಾಲಕನನ್ನು (Minor Boy) ಆಂತರಿಕ ಭದ್ರತಾ ಅಧಿಕಾರಿಗಳು (Internal Security Officers) ಮತ್ತು ಕೇಂದ್ರ ಗುಪ್ತಚರ ಇಲಾಖೆ (Central Intelligence Agency) ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಕೋಲಾರ (Kolar) ಜಿಲ್ಲೆ ಕೆಜಿಎಫ್ (KGF) ತಾಲೂಕು ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸುಮಾರು 15 ವರ್ಷದ ಬಾಲಕನೊಬ್ಬ ಕೆಲವೊಂದು ಉಗ್ರಗಾಮಿ ಸಂಘಟನೆಗೆ ಸಂಬಂಧಿಸಿದಂತೆ ಕೆಲವೊಂದು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದ. ಅಲ್ಲದೆ ಪದೇ ಪದೇ ಉಗ್ರಗಾಮಿ ಸಂಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಡುತ್ತಿದ್ದ ಹಿನ್ನೆಲೆ ಅಧಿಕಾರಿಗಳು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಒಂದು ಇಡೀ ದಿನ ಆತನನ್ನು ವಿಚಾರಣೆ ನಡೆಸಿ ನಂತರ ಆತನನ್ನು ಬೇತಮಂಗಲ ಪೊಲೀಸರ ವಶಕ್ಕೆ ನೀಡಲಾಗಿದೆ. ಇದನ್ನೂ ಓದಿ: ಭಾರೀ ಗಾಳಿ ಸಹಿತ ಮಳೆ – ಮನೆ ಕುಸಿದು ಕಾರ್ಮಿಕ ಮಹಿಳೆ ಸಾವು

    ಇನ್ನು ಈ ಬಾಲಕ ಮೂಲತಃ ಆಂದ್ರದ ಮುಸ್ಲಿಂ ಕುಟುಂಬಕ್ಕೆ ಸೇರಿದ್ದ. ಕಳೆದ ಹಲವು ವರ್ಷಗಳ ಹಿಂದೆಯೇ ಆಂದ್ರದ ರಾಮಕುಪ್ಪಂ ತೊರೆದು ಬೆಂಗಳೂರಿನ ಮೇಡಹಳ್ಳಿ ಕೆಲಸ ಮಾಡಿಕೊಂಡಿದ್ದ ಕುಟುಂಬ ಇತ್ತೀಚೆಗೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ದ್ಯಾವರಹಳ್ಳಿ ಗ್ರಾಮದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಮೇಡಹಳ್ಳಿ ಬಳಿ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಬಾಲಕ ಕಳೆದ 20 ದಿನಗಳ ಹಿಂದಷ್ಟೇ ಬೇತಮಂಗಲ ಬಳಿ ಚಿಕನ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಸದ್ಯ ಈತನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಆಂತರಿಕ ಭದ್ರತಾ ಅಧಿಕಾರಿಗಳು ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಸೋನ್‌ಪ್ರಯಾಗ್ ಬಳಿ ಭೂಕುಸಿತ – ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

    ಸದ್ಯ ಈತನ ವಿರುದ್ಧ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೇಶದ್ರೋಹ ಹಾಗೂ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಾಲಕನ್ನು ವಶಕ್ಕೆ ಪಡೆದು ಕೆಜಿಎಫ್ ಬಾಲ ಮಂದಿರದಲ್ಲಿ ಇರಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ | ಬೈಕ್ ತಪ್ಪಿಸಲು ಹೋಗಿ ಕಾರಿನ ಮೇಲೆ ಲಾರಿ ಪಲ್ಟಿ – ಇಬ್ಬರು ದುರ್ಮರಣ

  • 7ನೇ ತರಗತಿ ವಿದ್ಯಾರ್ಥಿಯಿಂದ ಕೇರಳ ಸಿಎಂಗೆ  ಬೆದರಿಕೆ ಕರೆ

    7ನೇ ತರಗತಿ ವಿದ್ಯಾರ್ಥಿಯಿಂದ ಕೇರಳ ಸಿಎಂಗೆ ಬೆದರಿಕೆ ಕರೆ

    ತಿರುವನಂತಪುರ: ಅಪ್ರಾಪ್ತ ಬಾಲಕನೋರ್ವ (Minor) ಕೇರಳ (Kerala) ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ (Pinarayi Vijayan) ಬೆದರಿಕೆ (Threat) ಹಾಕಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.

    ಬುಧವಾರ ರಾತ್ರಿ ಕೇರಳ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ನಿಯಂತ್ರಣ ಕೊಠಡಿಗೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿರುವುದಾಗಿ ಗುರುವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸರ್ಯು ನದಿಯಲ್ಲಿ ದೋಣಿ ಮುಳುಗಿ ಇಬ್ಬರ ದುರ್ಮರಣ, 7 ಮಂದಿ ನಾಪತ್ತೆ

    ಈ ಕುರಿತು ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದು, ಕರೆ ಮಾಡಿದಾತ 12 ವರ್ಷದ ಬಾಲಕ ಎಂದು ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಳಿಕ ಪೊಲೀಸರು ಬಾಲಕನ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಬಾಲಕನ ಪೋಷಕರು, 7 ನೇ ತರಗತಿಯಲ್ಲಿ ಓದುತ್ತಿರುವ ತಮ್ಮ ಮಗ ಮೊಬೈಲ್‌ನಲ್ಲಿ ಆಟವಾಡುವ ವೇಳೆ ಅಚಾತುರ್ಯವಾಗಿ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬಾಯಿಂದ ಬಾಯಿಗೆ ಎಂಜಲು ನೀರು ಉಗಿದುಕೊಂಡು ಚೆಲ್ಲಾಟ – ಪ್ರೇಮಿಗಳಿಗೆ ಶುರುವಾಯ್ತು ಪೀಕಲಾಟ

    ಪೋಷಕರ ಹೇಳಿಕೆ ಪೊಲೀಸರಿಗೆ ಸಮಂಜಸವೆನಿಸಲಿಲ್ಲ. ಆದ್ದರಿಂದ ತನಿಖೆ ಮುಂದುವರಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಪಿಣರಾಯಿ ವಿಜಯನ್ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮ್ಯೂಸಿಯಂ ಪೊಲೀಸ್ ಠಾಣೆಯಲ್ಲಿ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 118 (ಬಿ) (ಪೊಲೀಸ್, ಅಗ್ನಿಶಾಮಕ ದಳ ಅಥವಾ ಇತರ ಯಾವುದೇ ಅಗತ್ಯ ಸೇವೆಯನ್ನು ದಾರಿತಪ್ಪಿಸಲು ಉದ್ದೇಶಪೂರ್ವಕವಾಗಿ ವದಂತಿಗಳನ್ನು ಹರಡುವುದು ಅಥವಾ ಸುಳ್ಳು ಎಚ್ಚರಿಕೆಗಳನ್ನು ನೀಡುವುದರೊಂದಿಗೆ ವ್ಯವಹರಿಸುತ್ತದೆ) ಮತ್ತು 120 (ಒ) (ಯಾವುದೇ ಸಂವಹನ ವಿಧಾನದ ಮೂಲಕ ಯಾವುದೇ ವ್ಯಕ್ತಿಗೆ ತೊಂದರೆ ಉಂಟುಮಾಡುವ ಬಗ್ಗೆ ವ್ಯವಹರಿಸುತ್ತದೆ) ಅಡಿಯಲ್ಲಿ ಬೆದರಿಕೆ ಹಾಕಲು ಬಳಸಿದ ಮೊಬೈಲ್ ಸಂಖ್ಯೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಐಬ್ರೋಸ್ ಮಾಡಿಸಿದ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೈಸೂರಿನಲ್ಲಿ 17ರ ಹುಡುಗನನ್ನು ಇರಿದು ಕೊಂದ 15ರ ಬಾಲಕ!

    ಮೈಸೂರಿನಲ್ಲಿ 17ರ ಹುಡುಗನನ್ನು ಇರಿದು ಕೊಂದ 15ರ ಬಾಲಕ!

    ಮೈಸೂರು: ಅಪ್ರಾಪ್ತರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸುರಿನ (Mysuru) ಸುನ್ನಿಚೌಕ್ ಬಳಿ ನಡೆದಿದೆ.

    ಫರ್ವೇಜ್ ಖಾನ್ (17) ಕೊಲೆಯಾದ ಹುಡುಗ. ಆತನನ್ನು 15 ವರ್ಷದ ಬಾಲಕ (Boy) ಕೊಲೆ ಮಾಡಿದ್ದಾನೆ. ಆಟವಾಡುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಫರ್ವೇಜ್ ಖಾನ್‌ಗೆ ಬಾಲಕ ಚಾಕುವಿನಿಂದ ಇರಿದಿದ್ದಾನೆ. ಇದನ್ನೂ ಓದಿ: ಪತಿ, ಆತನ ಗರ್ಲ್‍ಫ್ರೆಂಡ್ ವಿರುದ್ಧ ಡೆತ್‍ನೋಟ್ ಬರೆದಿಟ್ಟು ಪತ್ನಿ ಆತ್ಮಹತ್ಯೆ

    ಚಾಕು ಇರಿತಕ್ಕೊಳಗಾದ ಫರ್ವೇಜ್ ಖಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪ್ರಾಪ್ತ ಆರೋಪಿಯನ್ನು ಮಂಡಿ ಪೊಲೀಸರು (Mandi Police) ಇದೀಗ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಮಂಗಳೂರಿನ ಪಂಪ್‍ವೆಲ್ ಫ್ಲೈಓವರ್ ಕೆಳಭಾಗ ಜಲಾವೃತ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 5 ವರ್ಷದ ಹಿಂದೆ ಹೆಂಡತಿ, ಈಗ ತನ್ನ ಮಗನನ್ನೇ ಕೊಂದ ಪಾಪಿ

    5 ವರ್ಷದ ಹಿಂದೆ ಹೆಂಡತಿ, ಈಗ ತನ್ನ ಮಗನನ್ನೇ ಕೊಂದ ಪಾಪಿ

    ಕೋಲಾರ : ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯೊಬ್ಬ ತನ್ನ ಅಪ್ರಾಪ್ತ ಮಗನನ್ನು (Boy) ಚಾಕುವಿನಿಂದ ಬರ್ಬರವಾಗಿ ಹತ್ಯೆಗೈದ ಘಟನೆ ಕೋಲಾರ (Kolar) ಜಿಲ್ಲೆಯ ಮುಳಬಾಗಿಲು (Mulabagilu) ತಾಲೂಕಿನ ನಂಗಲಿ ಗ್ರಾಮದಲ್ಲಿ ನಡೆದಿದೆ.

    ಭುವನ್‌ (8) ಕೊಲೆಯಾದ ಬಾಲಕ ಹಾಗೂ ಸುಬ್ರಹ್ಮಣ್ಯಂ ಎಂಬಾತ ಕೊಲೆಗೈದ ಆರೋಪಿ. ಈತ 5 ವರ್ಷಗಳ ಹಿಂದೆ ತನ್ನ ಪತ್ನಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ. ಆದರೆ ಸೋಮವಾರ ಬೆಂಗಳೂರಿನಿಂದ (Bengaluru) ಬಂದ ಸುಬ್ರಹ್ಮಣ್ಯಂ ಮಧ್ಯಾಹ್ನ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಮಗ ಭುವನ್‌ ಅನ್ನು ಕರೆದುಕೊಂಡು ಬಂದಿದ್ದಾನೆ. ಶಾಲೆಯಿಂದ ಕರೆತಂದ ಸುಬ್ರಹ್ಮಣ್ಯಂ ಕೋಲಾರದ ಗದ್ದೆಕಣ್ಣೂರು ಬಳಿ ಕರೆದುಕೊಂಡು ಬಂದು ಭೀಕ್ಷೆ ಬೇಡಲು ಬಿಟ್ಟಿದ್ದ. ಶಾಲೆಯ ಸಮವಸ್ತ್ರ ಧರಿಸಿದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    ಸ್ಥಳಕ್ಕೆ ಬಂದ ಪೊಲೀಸರು ಭುವನ್‌ ಅನ್ನು ವಿಚಾರಿಸಿದಾಗ ನಂಗಲಿ ಗ್ರಾಮದಲ್ಲಿ ಅಜ್ಜಿ ಮನೆಯಲ್ಲಿದ್ದು ತಂದೆ ಇಲ್ಲಿಗೆ ಕರೆದುಕೊಂಡು ಬಂದಿರುವುದಾಗಿ ತಿಳಿಸಿದ್ದಾನೆ. ಆದರೆ ಯಾವುದಕ್ಕೂ ಇರಲಿ ಎಂದು ಅಜ್ಜಿಯನ್ನು ಕರೆಸಿ ವಿಚಾರಣೆ ನಡೆಸಿದ ಪೊಲೀಸರು ಮಗುವಿನ ಒಪ್ಪಿಗೆಯಂತೆ ಅಜ್ಜಿಯ ಜೊತೆಗೆ ಕಳಿಸಿ, ತಂದೆ ಸುಬ್ರಹ್ಮಣ್ಯಂನನ್ನು ಬೆಂಗಳೂರಿಗೆ ಹೋಗಲು ತಿಳಿಸಿದ್ದಾರೆ. ಆದರೆ ಬೆಂಗಳೂರಿಗೆ ಹೋಗದ ಸುಬ್ರಮಣ್ಯಂ ಅಜ್ಜಿ ಮನೆಗೆ ಬರುವ ಮೊದಲೇ ಮಗನನ್ನು ಮನೆಗೆ ಬಿಡುವುದಾಗಿ ಕರೆದುಕೊಂಡು ಹೋಗಿ ಮನೆಯಲ್ಲೇ ಮಗುವನ್ನು ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ.

    ಇನ್ನೂ ಕಳೆದ 8 ವರ್ಷದ ಹಿಂದೆ ಶ್ರೀನಿವಾಸಪುರ ತಾಲೂಕಿನ ಕತ್ತಿಬಿಸೇನಹಳ್ಳಿ ಗ್ರಾಮದ ಸುಮಾ ಎನ್ನುವವರನ್ನು ಮುಳಬಾಗಲು ತಾಲೂಕಿನ ಪಟ್ರಹಳ್ಳಿ ಗ್ರಾಮದ ಸುಬ್ರಹ್ಮಣ್ಯಂ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು. ಟೈಲ್ಸ್ ಮತ್ತು ಗಾರೆ ಕೆಲಸ ಮಾಡುತ್ತಿದ್ದ ಸುಬ್ರಮಣ್ಯಂ ಅನೇಕಲ್‌ನಲ್ಲಿ ವಾಸವಾಗಿದ್ದ. 5 ವರ್ಷಗಳ ಕಾಲ ಚೆನ್ನಾಗಿದ್ದ ಸುಬ್ರಮಣ್ಯಂ ನಂತರ ಮಾನಸಿಕ ಸ್ಥಿಮಿತ ಕಳೆದುಕೊಂಡು ಮನೆಯಲ್ಲಿ ಆಗಾಗ ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದ. ಕಳೆದ 5 ವರ್ಷದ ಹಿಂದೆ ಆನೇಕಲ್ ಮನೆಯಲ್ಲಿ ಹೆಂಡತಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದು, ಇದರ ಬಗ್ಗೆ ಪತಿಯ ಸಂಬಂಧಿಕರು ದೂರಿನನ್ವಯ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಹರಕೆ ಕುರಿ ಮಾಡ್ಬೇಡಿ: ನಿಖಿಲ್ ಸಲಹೆ

    crime

    ಈ ಸಂದರ್ಭದಲ್ಲಿ ಒಂದೂವರೆ ವರ್ಷದ ಮಗುವನ್ನು ಸುಮಾನ ಸಂಬಂಧಿಕರು ತಮ್ಮ ಮನೆಗೆ ಕರೆದುಕೊಂಡು ಬಂದು ಸಾಕುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಸುಬ್ರಹ್ಮಣ್ಯಂ ಜೈಲಿನಿಂದ ಹೊರಬಂದ ಮೇಲೆ ಮಾನಸಿಕ ಸ್ಥಿಮಿತ ಕಳೆದುಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಯನ್ನು ಸಹ ಕೊಡಿಸಲಾಗಿತ್ತು. ಇನ್ನು ಸುಮಾ ಸಂಬಂಧಿಕರ ಮನೆಯಲ್ಲಿದ್ದ ಭುವನ್‌ನನ್ನು ನಾನೇ ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿ ಕರೆದುಕೊಂಡು ಬಂದು ತನ್ನ ತಾಯಿ ಸುಬ್ಬಲಕ್ಷ್ಮೀ ಜೊತೆ ನಂಗಲಿಯಲ್ಲಿ ಬಾಡಿಗೆ ಮನೆಯಲ್ಲಿ ಬಿಟ್ಟಿದ್ದ. ಆದ್ರೆ ನಿನ್ನೆ ರಾತ್ರಿ ತನ್ನ ಮಗುವನ್ನು ಕೊಂದು ತಾಯಿ ಮೇಲೆ ಸಹ ಹಲ್ಲೆಗೆ ಯತ್ನಿಸಿದ್ದಾನೆ. ಈ ಸಂಬಂಧ ಆರೋಪಿಯನ್ನು ನಂಗಲಿ ಪೊಲೀಸರು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಹರಕೆ ಕುರಿ ಮಾಡ್ಬೇಡಿ: ನಿಖಿಲ್ ಸಲಹೆ

  • ಕಾರಿನಿಂದ ಆಟೋಗೆ ಡಿಕ್ಕಿ ಹೊಡೆದ ಅಪ್ರಾಪ್ತ- ಊಟ ಮಾಡಿ ಕುಳಿತಿದ್ದ ಚಾಲಕ ಸ್ಥಳದಲ್ಲೇ ದುರ್ಮರಣ

    ಕಾರಿನಿಂದ ಆಟೋಗೆ ಡಿಕ್ಕಿ ಹೊಡೆದ ಅಪ್ರಾಪ್ತ- ಊಟ ಮಾಡಿ ಕುಳಿತಿದ್ದ ಚಾಲಕ ಸ್ಥಳದಲ್ಲೇ ದುರ್ಮರಣ

    ಬೆಂಗಳೂರು: 15 ವರ್ಷದ ಅಪ್ರಾಪ್ತ ಬಾಲಕ ಕಾರು ಓಡಿಸುತ್ತಾ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಆಟೋ ಚಾಲಕ ಸಾವನ್ನಪ್ಪಿ ಮತ್ತೊಬ್ಬ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಭೂಪಸಂದ್ರ ಬಳಿ ನಡೆದಿದೆ.

    ಮಧ್ಯಾಹ್ನದ ಊಟ ಮುಗಿಸಿ ಆಟೋದಲ್ಲಿ ಕುಳಿತಿದ್ದ ಚಾಲಕ ನಾಗರಾಜ್ (47) ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಇಂದು ಸಂಜೆ 4 ಗಂಟೆ ವೇಳೆಯಲ್ಲಿ ಅಪಘಾತ ನಡೆದಿದ್ದು, ಸ್ವಿಫ್ಟ್ ಕಾರು ಚಲಾಯಿಸಿಕೊಂಡು ಬಂದ ಬಾಲಕ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಆಟೋದಲ್ಲಿ ಕುಳಿತಿದ್ದ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರು.

    ಇದೇ ವೇಳೆ ಮತ್ತೊಬ್ಬ ಆಟೋ ಚಾಲಕ ಕೂಡ ಆಟೋದಲ್ಲಿ ಇದ್ದರು ಎಂಬ ಮಾಹಿತಿ ಲಭಿಸಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಘಟನೆ ಕಾರಣ ಎನ್ನಲಾಗಿದೆ. ಆಟೋದಲ್ಲಿದ್ದ ಇಬ್ಬರು ಚಾಲಕರು ಕೂಡ ನಾಗಶೆಟ್ಟಿಹಳ್ಳಿ ಮೂಲವರಾಗಿದ್ದಾರೆ.

    ಕೆಎ 31 ಎಎ 3298 ಸಂಖ್ಯೆಯ ಸ್ವಿಫ್ಟ್ ಕಾರಿನಲ್ಲಿ ಬಾಲಕ ಬಂದಿದ್ದು, ಕಾರು ಡಿಕ್ಕಿಯಾದ ರಭಸಕ್ಕೆ ಆಟೋ ಸಂಪೂರ್ಣ ಜಖಂಗೊಂಡಿದೆ. ಅಪಘಾತದ ವೇಳೆ ಆಟೋ ಒಳಗೆ ಸಿಲುಕಿಕೊಂಡಿದ್ದ ಮೃತ ದೇಹವನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಅಪಘಾತದ ಕುರಿತು ಮಾಹಿತಿ ಪಡೆದ ಆರ್.ಟಿ.ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಐಪಿಸಿ ಸೆಕ್ಷನ್ 279, 304ಎ, 337 ಅಡಿಯಲ್ಲಿ ಆರ್.ಟಿ.ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಪ್ರಾಪ್ತ ಬಾಲಕನಿಂದ ಅಡ್ಡಾದಿಡ್ಡಿ ಜೀಪ್ ಚಾಲನೆ – ವಿದ್ಯಾರ್ಥಿನಿ ಸೇರಿ ಮೂವರಿಗೆ ಗಂಭೀರ ಗಾಯ

    ಅಪ್ರಾಪ್ತ ಬಾಲಕನಿಂದ ಅಡ್ಡಾದಿಡ್ಡಿ ಜೀಪ್ ಚಾಲನೆ – ವಿದ್ಯಾರ್ಥಿನಿ ಸೇರಿ ಮೂವರಿಗೆ ಗಂಭೀರ ಗಾಯ

    ಬೆಂಗಳೂರು: ಅಪ್ರಾಪ್ತ ಬಾಲಕನೊಬ್ಬ ಮಹೀಂದ್ರ ಜೀಪನ್ನು ಅಡ್ಡಾದಿಡ್ಡಿ ಚಾಲನೆ ಮಾಡಿದ ಪರಿಣಾಮ ಶಾಲಾ ವಿದ್ಯಾರ್ಥಿನಿ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಕಾಮಾಕ್ಷಿಪಾಳ್ಯಾ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಕಾರು ಚಲಾಯಿಸಿದ ಯುವಕ ಸ್ಥಳೀಯ ನಿವಾಸಿಯಾಗಿದ್ದು, ತನ್ನ ಇತರೇ ಇಬ್ಬರು ಗೆಳೆಯರೊಂದಿಗೆ ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ಮಹೀಂದ್ರ ಥಾರ್ ಜೀಪ್ ಚಲಾಯಿಸಿಕೊಂಡು ಬಂದಿದ್ದ. ಈ ವೇಳೆ ಜೀಪನ್ನು ನಿಯಂತ್ರಿಸಲು ವಿಫಲವಾಗಿದ್ದು, ರಸ್ತೆಬದಿ ನಿಲ್ಲಿಸಿದ್ದ ಬೈಕಿಗೆ ಡಿಕ್ಕಿ ಹೊಡೆದು ನಂತರ ಮಹಿಳೆಯೋರ್ವರಿಗೆ ಕಾರು ಡಿಕ್ಕಿಯಾಗಿದೆ. ಆ ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಜೀಪ್ ನಿಂತಿದೆ.

    ಪುಟ್ ಪಾತ್ ಮೇಲೆ ನಡೆದುಹೋಗುತ್ತಿದ್ದ ಮಹಿಳೆಗೆ ಜೀಪ್ ಡಿಕ್ಕಿ ಹೊಡೆದಿದ್ದು, ಕ್ಷಣ ಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯಲ್ಲಿ ಗಾಯಗೊಂಡ ಶಾಲಾ ವಿದ್ಯಾರ್ಥಿನಿ ತಂದೆಯೊಂದಿಗೆ ಶೂ ಖರೀದಿ ಮಾಡಲು ಆಗಮಿಸಿದ್ದರು. ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ವಿದ್ಯಾರ್ಥಿನಿ ಸಿದ್ಧತೆ ನಡೆಸಿದ್ದರು ಎಂಬ ಮಾಹಿತಿ ಲಭಿಸಿದೆ.

    ಕಾರು ಡಿಕ್ಕಿಯಾದ ರಭಸಕ್ಕೆ ಕಾರಿನ ಅಡಿ ಸಿಕ್ಕ ಸ್ಕೂಟರ್ ನಜ್ಜುಗುಜ್ಜಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಹಾಗೂ ಕಾಮಾಕ್ಷಿಪಾಳ್ಯಾ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಜೀಪನ್ನು ಸ್ಥಳದಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.