ಬೀದರ್: ಅಪ್ರಾಪ್ತ ವಿದ್ಯಾರ್ಥಿನಿಯನ್ನು (Minor Student) ಪುಸಲಾಯಿಸಿ ಗೌಪ್ಯವಾಗಿ ವಿವಾಹ (Marriage) ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಶಾಲಾ ಶಿಕ್ಷಕನನ್ನು (Teacher) ಅಮಾನತು (Suspend) ಮಾಡಲಾಗಿದೆ.
ಶಿಕ್ಷಕ ಸಂದೀಪ್ ಕುಮಾರ್ ಅಜೂರೆ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಡಿಡಿಪಿಐ ಸಲೀಂ ಪಾಷಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ (Bhalki) ತಾಲೂಕಿನ ಹಲಸಿ ತೂಗಾಂವ್ ಗ್ರಾಮದಲ್ಲಿ 15 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಯಾರಿಗೂ ತಿಳಿಯದಂತೆ ಶಿಕ್ಷಕ ಗೌಪ್ಯವಾಗಿ ಮದುವೆಯಾಗಿದ್ದ. ಇದನ್ನೂ ಓದಿ: Shivamogga: ಈದ್ ಮಿಲಾದ್ ಹಬ್ಬದ ಸಭೆಯಲ್ಲಿ ಗಲಾಟೆ – ಓರ್ವನ ಕೊಲೆಯಲ್ಲಿ ಅಂತ್ಯ
ಈಗಾಗಲೇ ಆತನಿಗೆ ಮದುವೆಯಾಗಿ ಮಗುವಿದ್ದರೂ ಸಹಿತ ಹಲಸಿ ತೂಗಾಂವ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಮದುವೆಯಾಗಿದ್ದ. ಈ ಕುರಿತು ಶಿಶು ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಬಾಳುವಾಲೆ ಶಿಕ್ಷಕನ ವಿರುದ್ಧ ಸೂಕ್ತ ಕ್ರಮಕ್ಕಾಗಿ ಮೇಹಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯಿಂದ್ಲೇ 14ರ ಬಾಲಕಿ ಮೇಲೆ ರೇಪ್ – ಪತಿ, ಪತ್ನಿ ಅರೆಸ್ಟ್
ತಿರುವನಂತಪುರಂ: 5 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿದ (Sexual Assault) ಬಳಿಕ ಆಕೆಯ ಕತ್ತು ಹಿಸುಕಿ ಕೊಂದು ಗೋಣಿಚೀಲದಲ್ಲಿ ಮೃತದೇಹವನ್ನು ತುಂಬಿಸಿ ಹೂತುಹಾಕಿದ ಘಟನೆ ಕೇರಳದ (Kerala) ಎರ್ನಾಕುಲಂ (Ernakulam) ಜಿಲ್ಲೆಯಲ್ಲಿ ನಡೆದಿದೆ.
ಬಿಹಾರ (Bihar) ಮೂಲದ ದಂಪತಿಯ 5 ವರ್ಷದ ಮಗಳು ಶುಕ್ರವಾರ ಸಂಜೆ ನಾಪತ್ತೆಯಾಗಿದ್ದು, ಆರೋಪಿ ಆಕೆಯನ್ನು ಕರೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಯನ್ನು ಅಸ್ಫಾಕ್ ಅಸ್ಲಾಮ್ ಎಂದು ಗುರುತಿಸಲಾಗಿದ್ದು, ಸಿಸಿಟಿವಿಯಲ್ಲಿ ಆತ ಬಾಲಕಿಯನ್ನು ಕರೆದುಕೊಂಡು ಹೋಗುವ ದೃಶ್ಯ ಕಂಡುಬಂದಿದೆ. ಆದ್ದರಿಂದ ಆತನನ್ನು ಅದೇ ದಿನ ರಾತ್ರಿ 9:30ಕ್ಕೆ ವಶಕ್ಕೆ ಪಡೆದೆವು. ಮದ್ಯಪಾನ ಮಾಡಿದ್ದರಿಂದ ನಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಸ್ಥಿತಿಯಲ್ಲಿ ಆತ ಇರಲಿಲ್ಲ ಎಂದು ಎರ್ನಾಕುಲಂ ಎಸ್ಪಿ ವಿವೇಕ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಬೆಂಕಿ ಅವಘಡ – 125 ರೋಗಿಗಳ ಸ್ಥಳಾಂತರ
ಶನಿವಾರ ಬೆಳಗ್ಗೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಬಾಲಕಿಯನ್ನು ಕೊಂದು ಹೂತುಹಾಕಿದ ಜಾಗವನ್ನು ತೋರಿಸಿದ್ದಾನೆ. ಆರೋಪಿ ಇತ್ತೀಚಿಗೆ ಬಾಲಕಿ ಮತ್ತು ಆಕೆಯ ಕುಟುಂಬ ವಾಸಿಸುತ್ತಿದ್ದ ಕಟ್ಟಡಕ್ಕೆ ತೆರಳಿದ್ದ. ಬಳಿಕ ಆಕೆಯನ್ನು ಅಲ್ಲಿಂದ ಬೇರೆಡೆಗೆ ಕರೆದೊಯ್ದು ಲೈಂಗಿಕ ತೃಷೆ ತೀರಿಸಿಕೊಂಡ ಬಳಿಕ ಆಕೆಯ ಕತ್ತು ಹಿಸುಕಿ ಕೊಂದು ಆಕೆಯ ಮೃತದೇಹ ಯಾರಿಗೂ ಕಾಣದ ರೀತಿಯಲ್ಲಿ ಮುಚ್ಚಲು ಕಸಗಳು ಮತ್ತು ಗೋಣಿ ಚೀಲಗಳನ್ನು ಬಳಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: Instagram ಪ್ರಿಯಕರನನ್ನ ಭೇಟಿಯಾಗಲು ಪಾಕಿಸ್ತಾನಕ್ಕೆ ಹೊರಟಿದ್ದ ರಾಜಸ್ಥಾನದ 16ರ ಹುಡುಗಿ ಅರೆಸ್ಟ್
ಬಾಲಕಿ ನಾಪತ್ತೆಯಾದ ಬಳಿಕ ಆಕೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ಇದನ್ನು ನೋಡಿದ್ದ ವ್ಯಕ್ತಿಯೋರ್ವರು ಮಾರುಕಟ್ಟೆ ಪ್ರದೇಶದಲ್ಲಿ ಆರೋಪಿ ಜೊತೆ ಬಾಲಕಿ ಇರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಲ್ಲದೇ, ಮಗುವಿನ ಬಗ್ಗೆ ಆರೋಪಿ ಬಳಿ ವಿಚಾರಿಸಿದ್ದಾರೆ. ಈ ವೇಳೆ ಆರೋಪಿ ಈಕೆ ತನ್ನ ಮಗಳು ಎಂದು ತಿಳಿಸಿದ್ದಲ್ಲದೇ, ಮದ್ಯಪಾನ ಮಾಡುವ ಸಲುವಾಗಿ ಮಾರುಕಟ್ಟೆಯ ಹಿಂಬದಿಗೆ ಹೋಗಿದ್ದಾನೆ. ಅಲ್ಲದೇ ಬಾಲಕಿಯ ಕೈಯಲ್ಲಿ ಮಿಠಾಯಿ ಇತ್ತು ಎಂದು ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇಷ್ಟು ದಿನ ಎಲ್ಲಿಗೆ ಹೋಗಿದ್ದೆ? ಪತಿ ಎಂದು ಬೇರೊಬ್ಬನನ್ನು ಕರೆದೊಯ್ದ ಪತ್ನಿ!
ಮಾಹಿತಿಯ ಆಧಾರದ ಮೇರೆಗೆ ಪೊಲೀಸರು ಮಾರುಕಟ್ಟೆಯ ಹಿಂಭಾಗದಲ್ಲಿ ಶೋಧಕಾರ್ಯವನ್ನು ನಡೆಸಿದ್ದಾರೆ. ಘಟನೆಯ ಬಳಿಕ ಬಾಲಕಿಯನ್ನು ಪೋಷಕರಿಗೆ ಜೀವಂತವಾಗಿ ಮರಳಿಸಲಾಗದ್ದರಿಂದ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಷಕರಲ್ಲಿ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ: ಮನೆಗೆ ತೆರಳಿದ್ದ ಯೋಧನ ಕಿಡ್ನ್ಯಾಪ್ – ಸೇನೆಯಿಂದ ತೀವ್ರ ಹುಡುಕಾಟ
ಶುಕ್ರವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಬಾಲಕಿ ನಾಪತ್ತೆಯಾಗಿದ್ದು, ಸಂಜೆ 5:30ರ ವೇಳೆಗೆ ಆಕೆಯ ನೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಲಾಗಿದೆ. ಮಗಳು ನಾಪತ್ತೆಯಾದ ಹಿನ್ನೆಲೆ ಪೋಷಕರು ರಾತ್ರಿ 7:30ರ ಸುಮಾರಿಗೆ ದೂರು ದಾಖಲಿಸಿದ್ದು, ಮಾಹಿತಿಯ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರ ರಕ್ಷಣೆ
ಘಟನೆಯ ಬಳಿಕ ಬಾಲಕಿಯ ಮೃತದೇಹವನ್ನು ಆಕೆ ಓದುತ್ತಿದ್ದ ಶಾಲೆಯಲ್ಲಿ ಇರಿಸಲಾಗಿದ್ದು, ನೂರಾರು ಮಂದಿ ಅಂತಿಮ ನಮನ ಸಲ್ಲಿಸಿ ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿದರು. ಈ ಕುರಿತು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು, ಇದು ಅತ್ಯಂತ ದುಃಖಕರ ಮತ್ತು ದುರಾದೃಷ್ಟಕರವಾದ ಸಂಗತಿಯಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಪಟಾಕಿ ಗೋದಾಮಿನಲ್ಲಿ ಸ್ಫೋಟ – ಒಂದೇ ಕುಟುಂಬದ ನಾಲ್ವರು ಸೇರಿ 9 ಮಂದಿ ಸಾವು
ಜೈಪುರ: ಇನ್ಸ್ಟಾಗ್ರಾಂ (Instagram) ಸ್ನೇಹಿತನನ್ನು ಭೇಟಿ ಮಾಡುವ ಸಲುವಾಗಿ ಪಾಸ್‌ಪೋರ್ಟ್ (Passport) ಮತ್ತು ವೀಸಾ (Visa) ಇಲ್ಲದೆ ಪಾಕಿಸ್ತಾನಕ್ಕೆ (Pakistan) ತೆರಳಲು ಮುಂದಾಗಿದ್ದ 16 ವರ್ಷದ ಅಪ್ರಾಪ್ತ (Minor) ಬಾಲಕಿಯನ್ನು ಜೈಪುರ (Jaipur) ವಿಮಾನ ನಿಲ್ದಾಣದಲ್ಲಿ (Airport) ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ಬಾಲಕಿಯನ್ನು ಗಜಲ್ ಪರ್ವಿನ್ ಎಂದು ಗುರುತಿಸಲಾಗಿದೆ. ಈಕೆ ರಾಜಸ್ಥಾನದ ಸಿಕಾರ್‌ನ ಶ್ರೀಮಧೋಪುರದ ನಿವಾಸಿಯಾಗಿದ್ದು, ಪಾಕಿಸ್ತಾನಕ್ಕೆ ತೆರಳಲು ಬೇಕಾದ ಅಗತ್ಯ ದಾಖಲೆಗಳನ್ನು ಆಕೆ ಹೊಂದಿರಲಿಲ್ಲ ಎಂದು ವಿಮಾನ ನಿಲ್ದಾಣದ ಠಾಣಾಧಿಕಾರಿ ದಿಗ್ಪಾಲ್ ಸಿಂಗ್ ಹೇಳಿದ್ದಾರೆ. ತನ್ನ ಇನ್ಸ್ಟಾಗ್ರಾಂ ಸ್ನೇಹಿತನನ್ನು ಭೇಟಿ ಮಾಡಲು ಪಾಕಿಸ್ತಾನದ ಲಾಹೋರ್‌ಗೆ ತೆರಳಲು ನಿರ್ಧರಿಸಿ ವಿಮಾನ ನಿಲ್ದಾಣಕ್ಕೆ ಬಂದಿರುವುದಾಗಿ ವಿಚಾರಣೆ ವೇಳೆ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಮಣಿಪುರ ಹಿಂಸಾಚಾರದಲ್ಲಿ ವಿದೇಶಿ ಏಜೆನ್ಸಿಗಳ ಹಸ್ತಕ್ಷೇಪ: ಮಾಜಿ ಸೇನಾ ಮುಖ್ಯಸ್ಥ
ಈ ಕುರಿತು ಆಕೆಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಆಕೆಯನ್ನು ಅವರಿಗೆ ಒಪ್ಪಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನಕ್ಕೆ ಟಿಕೆಟ್ ಪಡೆಯುವ ಸಲುವಾಗಿ ಈಕೆ ಸುಳ್ಳು ಕಥೆಯೊಂದನ್ನು ಹೆಣೆದಿದ್ದು, ವಿಚಾರಣೆ ವೇಳೆ ನಿಜಾಂಶ ಹೊರಬಿದ್ದಿದೆ. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರ ರಕ್ಷಣೆ
ವಿಮಾನ ನಿಲ್ದಾಣಕ್ಕೆ ಇಬ್ಬರು ಹುಡುಗರೊಂದಿಗೆ ಬಂದ ಬಾಲಕಿ ತಾನು ಪಾಕಿಸ್ತಾನದ ನಿವಾಸಿಯಾಗಿದ್ದು, ಮೂರು ವರ್ಷಗಳ ಹಿಂದೆ ಚಿಕ್ಕಮ್ಮನೊಂದಿಗೆ ಭಾರತಕ್ಕೆ ಬಂದು ಸಿಕಾರ್‌ನ ಶ್ರೀಮಧೋಪುರದಲ್ಲಿ ನೆಲೆಸಿದ್ದೆ. ಇದೀಗ ಆಕೆಯ ಜೊತೆ ಹೊಂದಾಣಿಕೆಯಾಗದೆ ವಾಪಸ್ ಪಾಕಿಸ್ತಾನಕ್ಕೆ ತೆರಳುವ ಸಲುವಾಗಿ ಇಲ್ಲಿಗೆ ಬಂದಿದ್ದೇನೆ ಎಂದು ವಿಮಾನ ನಿಲ್ದಾಣದಲ್ಲಿ ಬಾಲಕಿ ಹೈಡ್ರಾಮ ಮಾಡಿದ್ದಳು. ಆದರೆ ಆಕೆಯ ಬಳಿ ಯಾವುದೇ ವೀಸಾ ಮತ್ತು ಪಾಸ್‌ಪೋರ್ಟ್ ಇಲ್ಲದ ಹಿನ್ನೆಲೆ ಆಕೆಯನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು. ಇದನ್ನೂ ಓದಿ: ಪಟಾಕಿ ಗೋದಾಮಿನಲ್ಲಿ ಸ್ಫೋಟ – ಒಂದೇ ಕುಟುಂಬದ ನಾಲ್ವರು ಸೇರಿ 9 ಮಂದಿ ಸಾವು
ರಾಯಚೂರು: ಚಾಕೊಲೇಟ್ (Chocolate) ಆಮಿಷವೊಡ್ಡಿ 11 ವರ್ಷದ ಅಪ್ರಾಪ್ತ (Minor) ಬಾಲಕಿಯ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರವೆಸಗಿರುವ (Rape) ಘಟನೆ ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ತಾಲೂಕಿನ ಆರ್‌ಹೆಚ್ ಕ್ಯಾಂಪ್‌ನಲ್ಲಿ ನಡೆದಿದೆ.
ಸಪನ್ ಮಂಡಲ್ (52) ಅತ್ಯಾಚಾರ ಎಸಗಿರುವ ಆರೋಪಿ. ಈತ ಬಾಲಕಿಯ ಮನೆಯ ಪಕ್ಕದಲ್ಲೇ ವಾಸಿಸುತ್ತಿದ್ದು, ಚಾಕೊಲೇಟ್ ಕೊಡಿಸುವುದಾಗಿ ಬಾಲಕಿಯನ್ನು ಕರೆದೊಯ್ದಿದ್ದಾನೆ. ಬಳಿಕ ಆಕೆಗೆ ಸ್ಕೂಟರ್ ಕಲಿಸುವುದಾಗಿ ಗ್ರಾಮದ ಹೊರವಲಯಕ್ಕೆ ಕರೆದೊಯ್ದು ಜಮೀನಿನಲ್ಲಿ ಅತ್ಯಾಚಾರ ಮಾಡಿದ್ದಾನೆ. ಅತ್ಯಾಚಾರಕ್ಕೆ ಒಳಗಾದ ಬಾಲಕಿ ಕಣ್ಣೀರು ಹಾಕುತ್ತಾ ಮನೆಗೆ ಬಂದ ವೇಳೆ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಒಂಟಿ ಮಹಿಳೆ ಕೊಲೆ ಪ್ರಕರಣ – ಆರೋಪಿಯ ತಾಯಿಯಿಂದ ಆತ್ಮಹತ್ಯೆ ಯತ್ನ
ಸಂತ್ರಸ್ತ ಬಾಲಕಿ 4ನೇ ತರಗತಿ ಓದುತ್ತಿದ್ದು, ಆಕೆಯ ಪೋಷಕರು ಆರೋಪಿ ಸಪನ್ ಮಂಡಲ್ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೌಟುಂಬಿಕ ಕಲಹ – ಮಕ್ಕಳ ಕತ್ತು ಸೀಳಿ ಕೊಲೆಗೈದ ಪಾಪಿ ತಂದೆ
ನವದೆಹಲಿ: ಅಪ್ರಾಪ್ತ (Minor) ಬಾಲಕಿಯನ್ನು ಮದುವೆಯಾಗಿ ಗರ್ಭಿಣಿ (Pregnant) ಮಾಡಿದ ಆರೋಪದ ಮೇಲೆ 17 ವರ್ಷದ ಹುಡುಗನನ್ನು ಬಂಧಿಸಿದ ಘಟನೆ ಪೂರ್ವ ದೆಹಲಿಯ (Delhi) ಲಕ್ಷ್ಮೀನಗರ ಪ್ರದೇಶದಲ್ಲಿ ನಡೆದಿದೆ.
ಲಾಲ್ ಬಹದ್ದೂರ್ ಶಾಸ್ತ್ರಿ (LBS) ಆಸ್ಪತ್ರೆಯಿಂದ ಪಿಸಿಆರ್ ಪೊಲೀಸರಿಗೆ ಕರೆ ಮಾಡಿದ್ದು, ಏಳು ತಿಂಗಳ ಅಪ್ರಾಪ್ತ ಗರ್ಭಿಣಿ ತಪಾಸಣೆಗಾಗಿ ಬಂದಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ ಬಾಲಕಿ ತಾನು ಮತ್ತು ಸೋದರ ಸಂಬಂಧಿ ಪರಸ್ಪರ ಪ್ರೀತಿಸಿದ್ದು, 2022ರ ಆಗಸ್ಟ್ 25 ರಂದು ಪಶ್ಚಿಮ ಬಂಗಾಳದಲ್ಲಿ (West Bengal) ‘ನಿಕಾಹ್’ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾಳೆ. ಇದನ್ನೂ ಓದಿ: ಸಾಕ್ಷಿ ಕೊಲ್ಲಲು 15 ದಿನಗಳ ಹಿಂದೆಯೇ ಹರಿದ್ವಾರದಿಂದ ಚಾಕು ಖರೀದಿಸಿದ್ದ ಸಾಹಿಲ್!
ಜನವರಿಯಲ್ಲಿ ದೆಹಲಿಗೆ ಬಂದ ಅವರು, ಪಶ್ಚಿಮ ಜವಾಹರ್ ಪಾರ್ಕ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ತಪಾಸಣೆಗಾಗಿ ಎಲ್‌ಬಿಎಸ್ ಆಸ್ಪತ್ರೆಗೆ ಬಂದಿದ್ದು, ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ವೈದ್ಯರು ಸಖಿ ಕೇಂದ್ರಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮರಕ್ಕೆ ಕಾರು ಡಿಕ್ಕಿ – ಕುಟುಂಬದ ನಾಲ್ವರು ಸಜೀವ ದಹನ
ಅಪ್ರಾಪ್ತೆಯ ಜೊತೆ ಸಮಾಲೋಚನೆ ನಡೆಸಿ ವೈದ್ಯಕೀಯ ಪರೀಕ್ಷೆಯ ನಂತರ ಆಕೆಯನ್ನು ಆಸ್ಪತ್ರೆಯ ನಿಗಾದಲ್ಲಿ ಇರಿಸಲಾಗಿದೆ. ಅಲ್ಲದೇ ಹುಡುಗನನ್ನು ಬಂಧಿಸಿ ಜುವೆನೈಲ್ ಜಸ್ಟೀಸ್ ಬೋರ್ಡ್ (JJB) ಮುಂದೆ ಹಾಜರುಪಡಿಸಲಾಗಿದೆ. ಜೆಜೆಬಿ ಬಾಲಾಪರಾಧಿಯನ್ನು ಒಪ್ಪಂದದ ಮೇರೆಗೆ ಬಿಡುಗಡೆ ಮಾಡಿದ್ದು, ವಯಸ್ಸಿನ ಪರಿಶೀಲನೆಗಾಗಿ ಮುಂದಿನ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಕರ್ನಾಟಕ ಸೇರಿದಂತೆ 3 ರಾಜ್ಯಗಳ 25 ಕಡೆ ಎನ್‌ಐ ದಾಳಿ – 17.50 ಲಕ್ಷ ಜಪ್ತಿ
ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ನಡೆದ ಅಪ್ರಾಪ್ತೆಯ ಭೀಕರ ಹತ್ಯೆಗೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಆರೋಪಿ ಸಾಹಿಲ್ (Sahil) ಗೆ ಹುಡುಗಿ ಬೆದರಿಕೆ ಹಾಕಿದ್ದೇ ಕೊಲೆಗೆ ಕಾರಣವಾಯ್ತಾ ಎಂಬ ಪ್ರಶ್ನೆ ಮೂಡಿದೆ.
ಮೂಲಗಳ ಪ್ರಕಾರ, ಹುಡುಗಿ ತಮ್ಮ ಮೂರು ವರ್ಷಗಳ ಸಂಬಂಧ (Relationship) ವನ್ನು ಕೊನೆಗೊಳಿಸಲು ಬಯಸಿದ್ದರಿಂದ ಇಬ್ಬರೂ ಇತ್ತೀಚೆಗೆ ಜಗಳವಾಡುತ್ತಿದ್ದರು. ಆ ಬಳಿಕ ನನಗೆ ತೊಂದರೆ ಕೊಟ್ಟರೆ ಪೊಲೀಸರ ಮೊರೆ ಹೋಗುವುದಾಗಿ ಬೆದರಿಕೆ ಹಾಕಿದ್ದಳು. ಅಲ್ಲದೆ ಹುಡುಗಿ ತನ್ನ ಕೈಯಲ್ಲಿ ಇನ್ನೊಬ್ಬನ ಹೆಸರನ್ನು ಹಚ್ಚೆ ಹಾಕಿಸಿದ್ದಳು. ಕೆಲವು ದಿನಗಳ ಹಿಂದೆ ಹದಿಹರೆಯದವರು ಸಾಹಿಲ್‍ಗೆ ಆಟಿಕೆ ಪಿಸ್ತೂಲ್ (Toy Gun) ತೋರಿಸಿ ಹೆದರಿಸಿದ್ದಾರೆ. ಇವೆಲ್ಲವೂ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಫ್ರಿಡ್ಜ್ ಮತ್ತು ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಸಾಹಿಲ್, ಜನನಿಬಿಡ ಪ್ರದೇಶದಲ್ಲಿ ಹುಡುಗಿಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ. ಹುಡುಗಿ ನೆಲಕ್ಕೆ ಬೀಳುತ್ತಿದ್ದಂತೆಯೇ ಆಕೆಯ ಮೇಲೆ ಪದೇ ಪದೇ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ. ಈ ಎಲ್ಲಾ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಘಟನೆಯ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ದೆಹಲಿ ಪೊಲೀಸರು ಉತ್ತರ ಪ್ರದೇಶದ ಬುಲಂದ್‍ಶಹರ್‍ನಲ್ಲಿರುವ ಆತನ ಚಿಕ್ಕಮ್ಮನ ಮನೆಯಿಂದ ಬಂಧಿಸಿದ್ದಾರೆ. ಸದ್ಯ ಕೊಲೆಯ ಹಿಂದಿನ ರಹಸ್ಯವೇನು..?, ಕೊಲೆಗೆ ಪ್ರೇರಣೆ ಏನು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಸಾಹಿಲ್ ತನ್ನ ಹೆಸರನ್ನು ಹುಡುಗಿಯ ಸ್ನೇಹಕ್ಕಾಗಿ ಬದಲಾಯಿಸಿದ್ದನೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರಿಯಕರನಿಂದ 16 ವರ್ಷದ ಹುಡುಗಿಯ ಬರ್ಬರ ಹತ್ಯೆ- ಆರೋಪಿ ಅರೆಸ್ಟ್
Sahil, accused of killing a 16-year-old minor girl in Delhi's Shahbad dairy, was brought to Bawana Police Station in Outer North district in Delhi. https://t.co/3prt8muZWVpic.twitter.com/jhCONuWCrJ
ಘಟನೆಯ ಕುರಿತು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ (Lt Governor VK Saxena) ಅವರನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal), ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅವರ ಜವಾಬ್ದಾರಿಯಾಗಿರುವುದರಿಂದ ಏನಾದರೂ ಮಾಡಿಕೊಳ್ಳಲಿ ಎಂದಿದ್ದಾರೆ. ಇನ್ನು ದೆಹಲಿ ಮಹಿಳಾ ಸಮಿತಿಯ ಮುಖ್ಯಸ್ಥೆ ಸ್ವಾತಿ ಮಲಿವಾಲ್ (Swati Maliwal) ಕೂಡ ಪೊಲೀಸರ ವಿರುದ್ಧವೇ ಕಿಡಿಕಾರಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸರು ಅಥವಾ ಕಾನೂನಿಗೆ ಯಾರೂ ಹೆದರುವುದಿಲ್ಲ ಎಂದು ಹೇಳಿದ್ದಾರೆ.
ತಾನು ನಿನ್ನ ಪ್ರೀತಿಸುವುದಾಗಿ ನಂಬಿಸಿ ಅಪ್ರಾಪ್ತೆಯ ಜೊತೆಗಿನ ಕೆಲವೊಂದಷ್ಟು ಫೋಟೋಗಳನ್ನು ಪಡೆದುಕೊಳ್ಳುತ್ತಾನೆ. ಬಳಿಕ ತನ್ನ ಗೆಳೆಯರಿಗೆ ಆ ಫೋಟೋಗಳನ್ನು ಕಳುಹಿಸುತ್ತಾನೆ. ಇದೀಗ ನಾಲ್ವರು ಅಪ್ರಾಪ್ತೆಯ ಲೈಂಗಿಕ ದೌರ್ಜನ್ಯ (Sexually Abuse) ಪ್ರಕರಣದಲ್ಲಿದ್ದಾರೆ ಎಂಬುದಾಗಿ ತನಿಖೆಯ ವೇಳೆ ಬಯಲಾಗಿದೆ.
ಇಷ್ಟು ಮಾತ್ರವಲ್ಲದೆ ಆರೋಪಿಗಳು ಅಪ್ರಾಪ್ತೆಗೆ ಬೆದರಿಕೆ ಹಾಕಿ 5 ಸಾವಿರ ರೂ. ಪಟಾಯಿಸಿಕೊಂಡಿದ್ದಾರೆ. ಈ ಎಲ್ಲಾ ಘಟನೆಯ ಬಳಿಕ ಬಾಲಕಿ ತನ್ನ ಪೋಷಕರ ಮುಂದೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಆ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರು ಆರೋಪಿಗಳ ವಿರುದ್ಧ ಪೂವಾರ್ ಠಾಣೆ (Poovar police Station)ಯಲ್ಲಿ ದೂರು ದಾಖಲಿಸಿದ್ದಾರೆ.
ನವದೆಹಲಿ: ತನ್ನ ಮೇಲೆ ಅತ್ಯಾಚಾರಗೈದ ಆರೋಪಿಯ ತಾಯಿಗೆ (Mother) ಅಪ್ರಾಪ್ತೆಯೊಬ್ಬಳು (Girl) ಗುಂಡಿಕ್ಕಿ ಗಾಯಗೊಳಿಸಿದ ಘಟನೆ ನವದೆಹಲಿಯಲ್ಲಿ (New Delhi) ನಡೆದಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಭಜನ್‍ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 2021ರಲ್ಲಿ 16 ವರ್ಷದ ಹುಡುಗಿಯ ಮೇಲೆ ಹದಿಹರೆಯದ ಹುಡುಗನೊಬ್ಬ (Boy) ಅತ್ಯಾಚಾರವೆಸಗಿದ್ದ. ಇದರಿಂದಾಗಿ ಆಕೆ ಆ ಹುಡುಗನ ತಾಯಿಯನ್ನು ಕೊಲೆ ಮಾಡಲು ಯೋಜಿಸಿದ್ದಾಳೆ. ತನ್ನ ಯೋಜನೆಯಂತೆ ಆಕೆ ಪಿಸ್ತೂಲ್‍ನಿಂದ ಆತನ ತಾಯಿಗೆ ಗುಂಡು ಹಾರಿಸಿದ್ದಾಳೆ.
ಆದರೆ ಅದೃಷ್ಟವಶಾತ್ ಆತನ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು 16 ವರ್ಷ ಹುಡುಗಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಇಂದು ಕೂಡಲಸಂಗಮ, ಗೋಕರ್ಣದಲ್ಲಿ ಸಿದ್ದೇಶ್ವರ ಶ್ರೀ ಅಸ್ಥಿ ವಿಸರ್ಜನೆ
ವಿಜಯಪುರ: ಯುವ ಪ್ರೇಮಿಗಳಿಬ್ಬರು ಪ್ರೀತಿಗಾಗಿ (Love) ಬಲಿಯಾಗಿರುವ ಘಟನೆ ವಿಜಯಪುರ (Vijayapura) ಜಿಲ್ಲೆ ತಿಕೋಟಾ ತಾಲೂಕಿನ ಕಳ್ಳಕವಟಗಿಯಲ್ಲಿ ನಡೆದಿದೆ.
ಕಳ್ಳಕವಟಗಿಯ ಅಪ್ರಾಪ್ತೆ ಹಾಗೂ ಘೋಣಸಗಿ ಗ್ರಾಮ ಮಲ್ಲು ಜಮಖಂಡಿ ಮಧ್ಯೆ ಪ್ರೇಮಾಂಕುರವಾಗಿತ್ತು. ಇಬ್ಬರು ಏಕಾಂತದಲ್ಲಿದ್ದಾಗ ಹುಡುಗಿ ತಂದೆ ಗುರಪ್ಪನ ಕೈಗೆ ಸಿಕ್ಕಿಕೊಂಡಿದ್ದರು. ಆಗ ಗುರುಪ್ಪ ಇಬ್ಬರಿಗೂ ಬುದ್ಧಿ ಹೇಳಿದ್ದರು. ಆದರೆ ತಂದೆಯ (Father) ಮಾತು ಕೇಳದೆ ಆತುರದಲ್ಲಿ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಅದಾದ ಬಳಿಕ ಮಲ್ಲು ಜಮಖಂಡಿ ಶವ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾ ನದಿಯಲ್ಲಿ ಸಿಕ್ಕಿದೆ. ಸೆಪ್ಟೆಂಬರ್ 22 ರಂದು ನಡೆದ ಘಟನೆ ಇಂದು ಶವ ಸಿಕ್ಕಿದ ಬಳಿಕ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತನ್ನ ಮಗಳ ಸಾವಿಗೆ ಕಾರಣವಾದ ಪ್ರೇಮಿ ಮಲ್ಲುವನ್ನು ಬಿಡಬಾರದು ಎಂದು ಕೈಕಾಲು ಕಟ್ಟಿ ಅದೇ ವಿಷವನ್ನು ಯುವಕನಿಗೆ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಮಲ್ಲು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಹೋಟೆಲ್ ಮಾಲೀಕರಿಗೆ ಗುಡ್‌ನ್ಯೂಸ್ – ಮಧ್ಯರಾತ್ರಿ 1 ಗಂಟೆವರೆಗೂ ಹೋಟೆಲ್ ತೆರೆಯಲು ಅನುಮತಿ
ತಿಕೋಟಾ ಹಾಗೂ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ತಿಕೋಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ತಂದೆ ಗುರಪ್ಪ ಹಾಗೂ ಆತನ ಅಳಿಯ ಅಜೀತ್‌ನನ್ನು ತಿಕೋಟಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಬೈಕ್ ಸಮೇತ ನದಿಯಲ್ಲಿ ಕೊಚ್ಚಿ ಹೋದ ಸವಾರರು- ಓರ್ವ ಸಾವು
Live Tv
[brid partner=56869869 player=32851 video=960834 autoplay=true]
ಕೊಪ್ಪಳ: ಅಪ್ರಾಪ್ತ ಬಾಲಕಿಯನ್ನು ವಿವಾಹಿತನೋರ್ವ ಕಿಡ್ನ್ಯಾಪ್(Kidnap) ಮಾಡಿ, ಅತ್ಯಾಚಾರವನ್ನು ಮಾಡಿರುವ ಘಟನೆ ಕೊಪ್ಪಳದ(Koppala) ಗಂಗಾವತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕೊಪ್ಪಳದ ಗಂಗಾವತಿಯ ಎಚ್‍ಆರ್‌ಎಸ್ ಕಾಲೋನಿಯ ನಿವಾಸಿ ಹುಲ್ಲೇಶ್ ಕಜ್ಜಿ ಎಂದು ಗುರುತಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾದ ಬಾಲಕಿಯು ನಗರದ ಖಾಸಗಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಹುಲ್ಲೇಶ್ ಕಜ್ಜಿ ಪ್ರತಿನಿತ್ಯ ಬಾಲಕಿಯನ್ನು ಚುಡಾಯಿಸುವುದು, ರಸ್ತೆಗೆ ಅಡ್ಡ ನಿಂತು ಮಾತನಾಡಿಸುವುದು ಮಾಡುತ್ತಿದ್ದನು.
ಸೆ.7ರಂದು ಬಾಲಕಿಯು ಶಾಲೆಗೆ ಹೋಗುತ್ತಿದ್ದ ವೇಳೆಯಲ್ಲಿ ಮಾವನ ಸಹಾಯದಿಂದ ಹುಲ್ಲೇಶ್ ಬೈಕ್‍ನಲ್ಲಿ ಕಿಡ್ನ್ಯಾಪ್ ಮಾಡಿದ್ದಾನೆ. ಗಂಗಾವತಿ ಹೊರವಲಯದ ಸಿದ್ದಿಕೇರಿ ಸಮೀಪದ ವಾಣಿಭದ್ರೇಶ್ವರ ದೇವಸ್ಥಾನದ ಬಳಿಯ ಗುಡ್ಡದಲ್ಲಿ ಕರೆದುಕೊಂಡು ಹೋಗಿ, ಅಲ್ಲಿ ಹುಲ್ಲೇಶ್ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಎರಡು ದಿನಗಳ ಕಾಲ ಅಲ್ಲಿಯೇ ಇದ್ದಿದ್ದು ಸೆ. 9ರಂದು ಬಾಲಕಿಯನ್ನು ಗಂಗಾವತಿ ನಗರದ ಬಸ್ ನಿಲ್ದಾಣ ಬಳಿ ಬಿಟ್ಟು ಹೋಗಲಾಗಿದೆ. ಇದನ್ನೂ ಓದಿ: ಉಗ್ರನ ಶವವನ್ನು ಹೊರತೆಗೆದು ಅಂತ್ಯಸಂಸ್ಕಾರಕ್ಕೆ ಅವಕಾಶ ಕೋರಿದ್ದ ಅರ್ಜಿ ವಜಾ
ನಂತರ ಘಟನೆಗೆ ಸಂಬಂಧಿಸಿದಂತೆ ಬಾಲಕಿಯು ಮನೆಗೆ ಹೋಗಿ ಮಾಹಿತಿ ನೀಡಿದ್ದಾಳೆ. ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಗಂಗಾವತಿಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹುಲ್ಲೇಶ್ ಕಜ್ಜಿಯನ್ನು ಬಂಧಿಸಲಾಗಿದೆ.(Arrest) ಇದನ್ನೂ ಓದಿ: ಗಣೇಶನ ಪ್ರಸಾದಕ್ಕೆ ಫುಲ್ ಡಿಮ್ಯಾಂಡ್ – 12 ಕೆಜಿ ಲಡ್ಡು 60 ಲಕ್ಷಕ್ಕೆ ಹರಾಜು
Live Tv
[brid partner=56869869 player=32851 video=960834 autoplay=true]