Tag: ಅಪ್ರಾಪ್ತೆಯರು

  • ಅಂತರಾಜ್ಯಕ್ಕೆ ಅಪ್ರಾಪ್ತೆಯರನ್ನು ಮಾರಾಟ ಮಾಡ್ತಿದ್ದ ಮೂವರಿಗೆ ಜೀವಾವಧಿ ಶಿಕ್ಷೆ

    ಅಂತರಾಜ್ಯಕ್ಕೆ ಅಪ್ರಾಪ್ತೆಯರನ್ನು ಮಾರಾಟ ಮಾಡ್ತಿದ್ದ ಮೂವರಿಗೆ ಜೀವಾವಧಿ ಶಿಕ್ಷೆ

    ಬೆಳಗಾವಿ: ಹಣದಾಸೆಗೆ ಅಂತರಾಜ್ಯಕ್ಕೆ ಅಪ್ರಾಪ್ತ ಬಾಲಕಿಯರನ್ನು ಮಾರಾಟ ಮಾಡುವ ಉದ್ದೇಶದಲ್ಲಿ ಮನೆಯಲ್ಲಿ ಕೂಡಿಟ್ಟ ಪ್ರಕರಣವನ್ನು 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿದ್ದು, ಇಂದು ಮೂವರು ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಜೊತೆಗೆ ದಂಡ ವಿಧಿಸಿ ತೀರ್ಪು ಹೊರಡಿಸಿದೆ.

    ಕಿತ್ತೂರು ತಾಲೂಕಿನ ಹೊಳಿನಾಗಲಾಪುರ ಗ್ರಾಮದ ಮಂಜುಳಾ ಅಡಿವೆಪ್ಪ ಚೌಡಪ್ಪನವರ(60), ಬೈಲಹೊಂಗಲ ತಾಲೂಕಿನ ಅಮಟೂರ ಗ್ರಾಮದ ಈರನಗೌಡ ಅಣ್ಣಪ್ಪಗೌಡ ಪಾಟೀಲ್(37), ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಸಂದೀಪ ಪಾರಸ್ ಗಳಗ(32) ಶಿಕ್ಷೆಗೆ ಗುರಿಯಾದವರು.

    2015 ಅಕ್ಟೋಬರ್ 5ರಂದು ಹೊಳಿನಾಗಲಾಪುರ ಗ್ರಾಮದಲ್ಲಿ ಮಂಜುಳಾ ಇಬ್ಬರು ಪುರುಷರೊಂದಿಗೆ ಸೇರಿ ಈ ಕೃತ್ಯವೆಸೆಗಿದ್ದಳು. ತನ್ನ ಮನೆಯಲ್ಲಿ ಇಬ್ಬರು ಅಪ್ರಾಪ್ತೆಯರನ್ನು ಬೇರೆ ಕಡೆಗಳಿಂದ ಕರೆತಂದು ವೇಶ್ಯಾವಾಟಿಕೆಗಾಗಿ ಮಾರಾಟ ಮಾಡುವ ಮೂಲಕ ಹಣಗಳಿಕೆಗೆ ಮುಂದಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೆರೆಗೆ ಕಿತ್ತೂರು ಠಾಣೆಯ ಪಿಎಸ್‍ಐ ನಿಂಗನಗೌಡ ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಅರುಣ ನೀರಗಟ್ಟಿ ಹಾಗೂ ಸ್ಪಂದನ ಸಂಸ್ಥೆ ಸುಶೀಲಾ ಅವರು ದಾಳಿ ನಡೆಸಿ ಮೂವರು ಅಪರಾಧಿಗಳನ್ನು ಬಂಧಿಸಿ, ಅಪ್ರಾಪ್ತೆಯರನ್ನು ರಕ್ಷಣೆ ಮಾಡಿದ್ದರು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‍ಐ ನಿಂಗನಗೌಡ ಪಾಟೀಲ್ ಸ್ವಂ ದೂರು ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದರು.

  • ಅಪ್ರಾಪ್ತೆಯರ ಗುಪ್ತಾಂಗಕ್ಕೆ ಪೆನ್ಸಿಲ್ ಹಾಕಿ ಪ್ರಿಯಕರನಿಗೆ ವಿಡಿಯೋ ಕಳಿಸಿದ ಶಿಕ್ಷಕಿ

    ಅಪ್ರಾಪ್ತೆಯರ ಗುಪ್ತಾಂಗಕ್ಕೆ ಪೆನ್ಸಿಲ್ ಹಾಕಿ ಪ್ರಿಯಕರನಿಗೆ ವಿಡಿಯೋ ಕಳಿಸಿದ ಶಿಕ್ಷಕಿ

    ಭೋಪಾಲ್: ಟ್ಯೂಶನ್ ಶಿಕ್ಷಕಿಯೊಬ್ಬಳು ಅಪ್ರಾಪ್ತೆಯರ ಗುಪ್ತಾಂಗಕ್ಕೆ ಪೆನ್ಸಿಲ್ ಹಾಕಿ ಅದನ್ನು ವಿಡಿಯೋ ಮಾಡಿ ತನ್ನ ಪ್ರಿಯಕರನಿಗೆ ಕಳುಹಿಸಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಮಹೌನಲ್ಲಿ ನಡೆದಿದೆ.

    19 ವರ್ಷದ ಟ್ಯೂಶನ್ ಶಿಕ್ಷಕಿ ಮನೆಗೆ ಬರುತ್ತಿದ್ದ 3 ಹಾಗೂ 6 ವರ್ಷದ ಬಾಲಕಿಯರ ಬಟ್ಟೆ ಬಿಚ್ಚಿ ಅವರ ಗುಪ್ತಾಂಗಕ್ಕೆ ಪೆನ್ಸಿಲ್ ಹಾಕುತ್ತಿದ್ದಳು. ಅಲ್ಲದೆ ಅದನ್ನು ವಿಡಿಯೋ ಮಾಡಿ ತನ್ನ ಪ್ರಿಯಕರನಿಗೆ ಕಳುಹಿಸುತ್ತಿದ್ದಳು. ಟ್ಯೂಶನ್ ಮುಗಿಸಿಕೊಂಡು ಅಪ್ರಾಪ್ತೆಯರು ಮನೆಗೆ ಹೋದಾಗ ಆರು ವರ್ಷದ ಬಾಲಕಿಯ ಖಾಸಗಿ ಅಂಗದಲ್ಲಿ ನೋವಾಗುತ್ತಿದೆ ಎಂದು ತನ್ನ ತಾಯಿಯ ಬಳಿ ಹೇಳಿದ್ದಾಳೆ. ತಕ್ಷಣ ತಾಯಿ ತನ್ನ ಹಿರಿಯ ಮಗಳನ್ನು ಕರೆದು ಕೇಳಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

    ಮಕ್ಕಳ ಮಾತು ಕೇಳಿದ ತಕ್ಷಣ ತಾಯಿ ಪೊಲೀಸ್ ಠಾಣೆಗೆ ಹೋಗಿ ಶಿಕ್ಷಕಿ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಅಪ್ರಾಪ್ತೆಯರನ್ನು ಕರೆದು ಘಟನೆಯ ವಿವರ ಕೇಳಿದ್ದಾರೆ. ಈ ವೇಳೆ ಅಪ್ರಾಪ್ತೆಯರು ಶಿಕ್ಷಕಿ ನಮ್ಮ ಬಟ್ಟೆ ಬಿಚ್ಚಿ ಗುಪ್ತಾಂಗಕ್ಕೆ ಪೆನ್ಸಿಲ್ ಹಾಕುತ್ತಿದ್ದಳು. ನಾವು ನೋವಿನಿಂದ ಜೋರಾಗಿ ಕಿರುಚಿಕೊಳ್ಳುತ್ತಿದ್ದಾಗ ನಮಗೆ ಬಟ್ಟೆ ಹಾಕಿ ಓದಿಸುವುದನ್ನು ಮುಂದುವರಿಸುತ್ತಿದ್ದಳು ಎಂದು ವಿವರಿಸಿದ್ದಾರೆ.

    ಮಕ್ಕಳು ಘಟನೆಯನ್ನು ವಿವರಿಸುತ್ತಿದ್ದಂತೆಯೇ ಪೋಷಕರು ಆಕೆಯ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಬಳಿಕ ಆಕೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಪೊಲೀಸರು ಶಿಕ್ಷಕಿ ವಿರುದ್ಧ ಐಪಿಸಿ ಸೆಕ್ಷನ್ ಹಾಗೂ ಪೋಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿಕ್ಷಕಿಯನ್ನು ವಿಚಾರಣೆ ನಡೆಸಿದಾಗ ಆಕೆ ಅಪ್ರಾಪ್ತೆಯರ ವಿಡಿಯೋವನ್ನು ತನ್ನ ಪ್ರಿಯಕರನಿಗೆ ಕಳುಹಿಸಿದ್ದೇನೆ ಎಂದು ಹೇಳಿದ್ದಾಳೆ. ಬಳಿಕ ಪೊಲೀಸರು ಆಕೆಯ ಪ್ರಿಯಕರನನ್ನು ಸಹ ಬಂಧಿಸಿದ್ದಾರೆ.

  • ಬಾಲ್ಯ ವಿವಾಹದ ಎಫೆಕ್ಟ್ – ಮೂವರು ಅಪ್ರಾಪ್ತೆಯರು ಗರ್ಭಿಣಿಯರು

    ಬಾಲ್ಯ ವಿವಾಹದ ಎಫೆಕ್ಟ್ – ಮೂವರು ಅಪ್ರಾಪ್ತೆಯರು ಗರ್ಭಿಣಿಯರು

    ರಾಮನಗರ: ರಾಜ್ಯ ಸರ್ಕಾರ ಬಾಲ್ಯ ವಿವಾಹಗಳನ್ನು ತಡೆಯಬೇಕೆಂದು ಹಲವು ರೀತಿಯಲ್ಲಿ ಯೋಜನೆಗಳನ್ನು ಕೈಗೊಂಡಿದೆ. ಆದರೆ ಚನ್ನಪಟ್ಟಣ ತಾಲೂಕಿನ ಇರುಳಿಗರ ಕಾಲೋನಿಯಲ್ಲಿ ಯಾವ ಕಾನೂನುಗಳು ಬಾಲ್ಯ ವಿವಾಹಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ. ಈ ಗ್ರಾಮದ ಮಕ್ಕಳು ಬಾಲ್ಯದಲ್ಲೇ ಮದುವೆಯಾಗಿ ಗರ್ಭಿಣಿಯಾಗ್ತಿದ್ದು, ಹುಟ್ಟುವ ಮಕ್ಕಳು ಕೂಡ ಅಪೌಷ್ಟಿಕತೆಯಿಂದಾಗಿ ಬಳಲಿ ಅನಾರೋಗ್ಯಕ್ಕೆ ತುತ್ತಾಗುತಿದ್ರು ಜನರಲ್ಲಿ ಅರಿವು ಮಾತ್ರ ಮೂಡಿಲ್ಲ.

    ಈ ಗ್ರಾಮದಲ್ಲಿ 50 ಕುಟುಂಬಗಳು ವಾಸವಾಗಿದ್ದು, ಒಟ್ಟು ಜನಸಂಖ್ಯೆ 381 ಆಗಿದ್ರೆ, ಇದರಲ್ಲಿ 120 ಮಕ್ಕಳೇ ಇದ್ದಾರೆ. 6 ವರ್ಷದೊಳಗಿನ ಮಕ್ಕಳು 42 ಜನ, 1 ರಿಂದ 5ನೇ ತರಗತಿ ವ್ಯಾಸಂಗ ಮಾಡುವ ಮಕ್ಕಳು 45 ಜನ, 6 ರಿಂದ 10ನೇ ತರಗತಿ ವ್ಯಾಸಂಗ ಮಾಡುವ ಮಕ್ಕಳು 35 ಜನ ಸದ್ಯ ಈ ಗ್ರಾಮದಲ್ಲಿದ್ದಾರೆ. ಆದರೆ ಈ ಗ್ರಾಮದಲ್ಲಿ ಸುಮಾರು ವರ್ಷಗಳಿಂದಲೂ ಕೂಡ ಬಾಲ್ಯ ವಿವಾಹ ಎಂಬ ಪಿಡುಗು ಎಗ್ಗಿಲ್ಲದೇ ನಡೆದುಕೊಂಡು ಬಂದಿದೆ.

    ಕಳೆದ 3 ತಿಂಗಳ ಹಿಂದೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 3 ಜನ ಹೆಣ್ಣುಮಕ್ಕಳು ಗರ್ಭಿಣಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದ ಜಿಲ್ಲಾ ರಕ್ಷಣಾ ಘಟಕದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಕೊಟ್ಟು ಸಂಬಂಧಪಟ್ಟ ಕುಟುಂಬಸ್ಥರಿಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದ್ದಾರೆ.

    ನಾಲ್ಕು ತಿಂಗಳ ಹಿಂದೆ ಗ್ರಾಮದಲ್ಲಿ ನಾಲ್ವರ ಬಾಲ್ಯ ವಿವಾಹ ನಡೆದಿದ್ದು, ಮೂವರು ಅಪ್ರಾಪ್ತೆಯರು ಗರ್ಭಿಣಿಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣ ಘಟಕದ ಅಧಿಕಾರಿಗಳು ಎಂ.ಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪ್ರಾಪ್ತೆಯರು ಗರ್ಭಿಣಿಯರಾಗಿರುವ ವಿಚಾರವಾಗಿ ಪೋಕ್ಸೋ ಅಡಿಯಲ್ಲಿ ದೂರು ದಾಖಲಾಗಿದ್ರೆ, ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿದ್ದಕ್ಕೆ ಹೆದರಿ ಓರ್ವ ಅಪ್ರಾಪ್ತೆ ಗರ್ಭಿಣಿ ಹಾಗೂ ಆಕೆಯ ಪತಿ ಇಬ್ಬರೂ ಕೂಡ ನಾಪತ್ತೆಯಾಗಿದ್ದಾರೆ.

    ಈ ಗ್ರಾಮದಲ್ಲಿನ ಜನ ಸರ್ಕಾರದ ಯೋಜನೆಗಳಾದ ಮಾತೃಶ್ರೀ ಯೋಜನೆ, ತಾಯಿ ಕಾರ್ಡ್, ಭಾಗ್ಯಲಕ್ಷ್ಮಿ ಬಾಂಡ್ ಸೇರಿದಂತೆ ಆಧಾರ್ ಕಾರ್ಡ್, ಪಡಿತರ ಯಾವುದೊಂದು ಸೌಲಭ್ಯಗಳನ್ನು ಸಹ ಬಹುತೇಕ ಮಂದಿ ಪಡೆದುಕೊಂಡಿಲ್ಲ. ಈ ಯೋಜನೆಗಳ ಪಲಾನುಭವಿಗಳಾದ್ರೆ ಬಾಲ್ಯ ವಿವಾಹ ಹೊರ ಬೀಳುತ್ತೆ ಅಂತಲೇ ದೂರ ಉಳಿದಿದ್ದಾರೆ ಎನ್ನಲಾಗಿದೆ.

    ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾಡಳಿತ ಬಾಲ್ಯ ವಿವಾಹ ತಡೆಗೆ ಮುಂದಾಗಿದ್ದು ಇರುಳಿಗರ ಕಾಲೋನಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ. ಅಲ್ಲದೇ ಜನರಲ್ಲಿ ಮೂಢನಂಬಿಕೆಯನ್ನು ಹೊರ ಹಾಕಿ ಉತ್ತಮ ಜೀವನ ನಡೆಸಲು ಅಗತ್ಯ ರೀತಿಯ ಅರಿವು ಹಾಗೂ ಮನಪರಿವರ್ತನೆಗೆ ಮುಂದಾಗಿದೆ.

  • ಅವಳೊಂದಿಗೆ ಬೇಜಾರಾದಾಗ, ಅಪ್ರಾಪ್ತೆಗೆ ತಾಳಿಕಟ್ಟಿದ- ಕಾಮಾಂಧನ ಮದ್ವೆ ಕಹಾನಿ

    ಅವಳೊಂದಿಗೆ ಬೇಜಾರಾದಾಗ, ಅಪ್ರಾಪ್ತೆಗೆ ತಾಳಿಕಟ್ಟಿದ- ಕಾಮಾಂಧನ ಮದ್ವೆ ಕಹಾನಿ

    – ಯುವಕನ ಬೆಂಬಲಕ್ಕೆ ನಿಂತ್ರಾ ಶಾಸಕ ವೆಂಕಟರಮಣಪ್ಪ?

    ತುಮಕೂರು: ಆತ ಈಗಿನ್ನೂ 21 ವರ್ಷದ ಚಿಗುರು ಮೀಸೆಯ ಯುವಕ. ಆತನ ವಯಸ್ಸು ಚಿಕ್ಕದಾದರೂ ಚಪಲತನಕ್ಕೇನು ಕಡಿಮೆ ಇಲ್ಲ. ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ತಪ್ಪಿಗೆ ಆಕೆಯೊಂದಿಗೆ ಮದುವೆಯಾದ. ಒಂದಿಷ್ಟು ದಿನ ಕಳೆದ ಬಳಿಕ ಇನ್ನೊಬ್ಬಳು ಅಪ್ರಾಯ್ತೆಯೊಂದಿಗೆ ಲವ್ವಿಡವ್ವಿ ಶುರುವಿಟ್ಟುಕೊಂಡು ಆಕೆಗೂ ತಾಳಿಕಟ್ಟಿದ್ದಾನೆ.

    ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಾಗಲಾಪುರದ ಮಂಜುನಾಥ್ ಅಪ್ರಾಪ್ತೆಯರೊಂದಿಗೆ ಮನಸ್ಸೋ ಇಚ್ಛೆ ವರ್ತಿಸುತ್ತಿದ್ದನು. ಒಂದಲ್ಲಾ, ಇಬ್ಬರು ಅಪ್ರಾಪ್ತೆಯರನ್ನು ಮದುವೆಯಾಗಿ ಈಗ ಜೈಲು ಕಂಬಿ ಎಣಿಸುತ್ತಿದ್ದಾನೆ.

    ಇದೇ ತಾಲೂಕಿನ ದೊಡ್ಡಹಳ್ಳಿಯ ಅಪ್ರಾಪ್ತೆಯ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಆಕೆ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಾನೆ. ಬಾಲಕಿ ಮನೆಯವರಿಗೆ ಈ ವಿಚಾರ ಗೊತ್ತಾದಾಗ ಆಕೆಯೊಂದಿಗೆ ಮದುವೆಯಾಗುತ್ತೇನೆ ಎಂದು ಅಪ್ರಾಪ್ತೆಯೊಂದಿಗೆ ಮದುವೆಯೂ ಆದ. 2018ರ ಡಿಸೆಂಬರ್ 27 ರಂದು ಶಾಸ್ತ್ರೋಕ್ತವಾಗಿ ಬಾಲಕಿಗೆ ತಾಳಿಕಟ್ಟಿದ್ದಾನೆ. ಸಾಲದ್ದಕ್ಕೆ 1 ಲಕ್ಷ ರೂ. ಪಲ್ಸರ್ ಬೈಕನ್ನೂ ವರದಕ್ಷಿಣೆಯಾಗಿ ತೆಗೆದುಕೊಂಡಿದ್ದಾನೆ. ಮದುವೆಯಾದ 8 ತಿಂಗಳ ಬಳಿಕ ರಾಗ ಬದಲಿಸಿದ ಈ ಚಪಲಚನ್ನಿಗರಾಯ ಮತ್ತೊಬ್ಬಳು ಅಪ್ರಾಪ್ತೆಯನ್ನು ತನ್ನ ಪ್ರೇಮಪಾಶಕ್ಕೆ ಬೀಳಿಸಿಕೊಂಡಿದ್ದಾನೆ.

    ದೊಡ್ಡಹಳ್ಳಿಯ ಬಾಲಕಿಯೊಂದಿಗೆ ಮದುವೆಯಾದ ಈ ಭೂಪ ಗೊತ್ತಿಲ್ಲದೇ ನಾಗಲಾಪುರದ ಬಾಲಕಿಯೊಂದಿಗೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದ. ತಾನು ಮದುವೆಯಾಗಿದ್ದೇನೆ ಅನ್ನೋದನ್ನು ಮರೆತ ಈ ಕಾಮಾಂಧ ಆ ಬಾಲಕಿಯೊಂದಿಗೂ ಸಂಬಂಧವಿಟ್ಟುಕೊಂಡ. ಸಿನಿಮಾ, ಪಾರ್ಕ್ ಸುತ್ತಾಡಿ ಜೊತೆಯಲ್ಲಿ ಪಾನಿಪೂರಿನೂ ತಿಂದಿದ್ದಾರೆ. ಅಲ್ಲದೆ ಆ ಬಾಲಕಿಯೊಂದಿಗೆ ಅಶ್ಲೀಲ ಎನ್ನುವ ರೀತಿ ಸೆಲ್ಫಿ ತೆಗೆಸಿಕೊಂಡಿದ್ದಾನೆ. ಮಂಜುನಾಥನ ಈ ಮಹಿಮೆ ಯಾರಿಗೂ ತಿಳಿದಿರಲಿಲ್ಲ. ಕೊನೆಗೊಂದು ದಿನ ಬಾಲಕಿಯೊಂದಿಗೆ ಓಡಿ ಮದುವೆಯಾಗಿದ್ದಾಗಲೇ ಗೊತ್ತಾಗಿದ್ದು. ಈಗ ಮೊದಲ ಪತ್ನಿಯನ್ನು ತನ್ನ ಮನೆಯಿಂದ ಹೊರಹಾಕಿದ್ದಾನೆ. ಎರಡನೇ ಪತ್ನಿಯೊಂದಿಗೆ ಮನೆಯಲ್ಲಿ ಸಂಸಾರ ಹೂಡಿದ್ದಾನಂತೆ. ಆರೋಪಿ ಮಂಜುನಾಥ್‍ನ ಬೆಂಬಲಕ್ಕೆ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ನಿಂತಿದ್ದಾರೆ ಎಂದು ಬಾಲಕಿ ಪೋಷಕರು ಆರೋಪಿಸುತ್ತಾರೆ.

    ಮೊದಲ ಬಾಲಕಿ ಪೋಷಕರು ವೈ.ಎನ್ ಹೊಸಕೋಟೆ ಪೊಲೀಸರಿಗೆ ದೂರುಕೊಟ್ಟಿದ್ದರಿಂದ ಮಂಜುನಾಥ್ ಅರೆಸ್ಟ್ ಆಗಿದ್ದಾನೆ. ತನ್ನ ಗಂಡ ತನ್ನೊಂದಿಗೆ ಸಂಸಾರ ಮಾಡೋದಾದ್ರೆ ಜೈಲಿನಿಂದ ಹೊರಕ್ಕೆ ಬರಲಿ, ಇಲ್ಲಾಂದ್ರೆ ಜೈಲಿನಲ್ಲಿಯೇ ಕೊಳೆಯಲಿ ಎನ್ನುತ್ತಾಳೆ. ಈತನ ಮಹಿಮೆ ಇಷ್ಟಕ್ಕೆ ಮುಗಿಯುವುದಿಲ್ಲ. ಆಂಧ್ರದಲ್ಲೂ ಎರಡು ಅತ್ಯಾಚಾರ ಕೇಸ್ ಇವನ ಮೇಲಿದೆಯಂತೆ ಅಷ್ಟರ ಮಟ್ಟಿಗೆ ಈತ ಚಿಕ್ಕವಯಸ್ಸಿನಲ್ಲೇ ದಾರಿತಪ್ಪಿದ್ದಾನೆ.

  • 50 ಸಾವಿರ ವಿದ್ಯುತ್ ಬಿಲ್ ಕಟ್ಟಲು ತನ್ನಿಬ್ಬರು ಅಪ್ರಾಪ್ತೆಯರನ್ನು ವೇಶ್ಯಾವಾಟಿಕೆಗೆ ದೂಡಿದ ತಾಯಿ!

    50 ಸಾವಿರ ವಿದ್ಯುತ್ ಬಿಲ್ ಕಟ್ಟಲು ತನ್ನಿಬ್ಬರು ಅಪ್ರಾಪ್ತೆಯರನ್ನು ವೇಶ್ಯಾವಾಟಿಕೆಗೆ ದೂಡಿದ ತಾಯಿ!

    ಮುಂಬೈ: ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಸ್ವತಃ ತಾಯಿಯೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ಪ್ರಕರಣವೊಂದನ್ನು ಮುಂಬೈನ ಖೆರ್ ವಾಡಿ ಪೊಲೀಸರು ಬೇಧಿಸಿದ್ದಾರೆ.

    ಇಲ್ಲಿನ ಎಸ್‍ಆರ್ ಎ ಕಟ್ಟಡದ ನಿವಾಸಿಯಾಗಿರೋ ಮಹಿಳೆ, ಸುಮಾರು 50,000 ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗದೇ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆ ಅಡ್ಡೆಗೆ ದೂಡಲು ಪ್ರಯತ್ನಿಸಿದ್ದಾಳೆ. ಸದ್ಯ ಈಕೆ ಪೊಲೀಸರ ಅತಿಥಿಯಾಗಿದ್ದಾಳೆ.

    ಘಟನೆಯ ವಿವರ:
    ಖೆರ್ ವಾಡಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಜಗದೀಶ್ ಎಂಬವರಿಗೆ ಬಾಂದ್ರಾದಲ್ಲಿ ಮಹಿಳೆಯೊಬ್ಬರು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿಯುತ್ತದೆ. ಈ ವಿಚಾರ ತಿಳಿದ ಕೂಡಲೇ ಪ್ರಕರಣವನ್ನು ಬೇಧಿಸಲು 11 ಮಂದಿ ಸಿಬ್ಬಂದಿಯ ತಂಡವೊಂದನ್ನು ರಚಿಸಿದ್ದಾರೆ. ಹೀಗಾಗಿ ಸೋಮವಾರ ಮಾಹಿತಿ ನೀಡಿದ ವ್ಯಕ್ತಿ ಸೇರಿ 12 ಜನರ ತಂಡ ಮಹಿಳೆಗೆ ಕರೆ ಮಾಡಿ 4 ಹೆಣ್ಣು ಮಕ್ಕಳನ್ನು ಸಪ್ಲೈ ಮಾಡುವಂತೆ ಹೇಳಿದ್ದಾರೆ. ಈ ವೇಳೆ ಮಹಿಳೆ 4 ಮಂದಿಗೆ 50,000 ಕೊಡುವಂತೆ ಕೇಳಿದ್ದಾಳೆ. ಪೊಲೀಸರಿಗೆ ಮಾಹಿತಿ ನೀಡಿದ ವ್ಯಕ್ತಿಯೇ ಈ ಕುರಿತು ಮಹಿಳೆ ಜೊತೆ ಮಾತುಕತೆ ನಡೆಸಿ 40,000 ಕೊಡುವುದಾಗಿ ಒಪ್ಪಿದ್ದಾರೆ.

     

    ಇತ್ತ ಸಾಯಿ ಪ್ರಸಾದ್ ಹೊಟೇಲಿನಲ್ಲಿ ತನ್ನನ್ನು ಭೇಟಿಯಾಗುವಂತೆ ಮಹಿಳೆ ವ್ಯಕ್ತಿಗೆ ತಿಳಿಸಿದ್ದಾಳೆ. ಮೊದಲೇ ಪ್ಲಾನ್ ಮಾಡಿದಂತೆ ಪೊಲೀಸರ ತಂಡ ಸಮವಸ್ತ್ರ ಧರಿಸದೇ ಸಾಮಾನ್ಯ ಉಡುಪಿನಲ್ಲಿ ಬಂದು ಹೊಟೇಲಿನಲ್ಲಿ ಮಹಿಳೆಗಾಗಿ ಕಾದು ಕುಳಿತಿದ್ದರು. ಇಬ್ಬರು ಯುವತಿಯರ ಜೊತೆ ಮಹಿಳೆ ಬಂದೇ ಬಿಟ್ಟಳು. ಹಾಗೆಯೇ ವ್ಯಕ್ತಿ ಜೊತೆ ಅವರನ್ನು ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾಳೆ.

    ಇದೇ ವೇಳೆ ಮಹಿಳೆ ಮುಂಚಿತವಾಗಿ ವ್ಯಕ್ತಿಯಲ್ಲಿ 10,000 ಕೊಡುವಂತೆ ಕೇಳಿದ್ದಾಳೆ. ಈ ಸಂದರ್ಭದಲ್ಲಿ ಸಾಮಾನ್ಯ ಧಿರಿಸಿನಲ್ಲಿ ಬಂದು ಕಾದು ಕುಳಿತಿದ್ದ ತಂಡ ಮಹಿಳೆಯನ್ನು ಹಿಡಿದಿದ್ದಾರೆ. ಹಾಗೆಯೇ ಮಹಿಳೆಯ ಜೊತೆ ಇದ್ದ ಇಬ್ಬರು ಹೆಣ್ಣು ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

    ಇಬ್ಬರು ಹೆಣ್ಣು ಮಕ್ಕಳ ವಯಸ್ಸು 15 ಮತ್ತು 19 ಆಗಿತ್ತು. ಈ ವೇಳೆ ಅದರಲ್ಲಿ ಓರ್ವ ಹೆಣ್ಣು ಮಗಳು ಸತ್ಯ ಬಾಯ್ಬಿಟ್ಟಿದ್ದಾಳೆ. 50,000 ಕರೆಂಟ್ ಬಿಲ್ ಕಟ್ಟಲು ಸಾಧ್ಯವಾಗದಿದ್ದರಿಂದ ತಾಯಿ ಈ ಕೆಲಸಕ್ಕೆ ನಮ್ಮನ್ನು ತಳ್ಳಿರುವುದಾಗಿ ಹೇಳಿದ್ದಾಳೆ. ಇತ್ತ ಹೆಣ್ಮಕ್ಕಳ ತಾಯಿ ಮಾತ್ರ ತನ್ನ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾಳೆ. ಹೆಣ್ಣು ಮಕ್ಕಳನ್ನು ಈ ಕೆಲಸಕ್ಕೆ ದೂಡಬೇಡ ಅಂತ ನಾನು ಅನೇಕ ಬಾರಿಗೆ ಪತ್ನಿಗೆ ಹೇಳಿದ್ದೆ. ಆದ್ರೆ ಆಕೆ ನನ್ನ ಮಾತು ಕೇಳಲಿಲ್ಲ ಅಂತ ಹೆಣ್ಣು ಮಕ್ಕಳ ತಂದೆ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

    ಸದ್ಯ ಆರೋಪಿ ಮಹಿಳೆ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.