Tag: ಅಪ್ರಾಪ್ತರು

  • ಇಬ್ಬರು ಬಾಲಕಿಯರ ರೇಪ್ – ಮೂವರು ಅಪ್ರಾಪ್ತರು ಸೇರಿ 6 ಮಂದಿ ಅರೆಸ್ಟ್

    ಚೆನ್ನೈ: ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ (Rape) ಎಸಗಿದ ಆರೋಪದ ಮೇಲೆ ಮೂವರು ಅಪ್ರಾಪ್ತ (Minors) ಬಾಲಕರು ಸೇರಿ 6 ಮಂದಿಯನ್ನು ಬಂಧಿಸಿದ ಘಟನೆ ತಮಿಳುನಾಡಿನ (Tamil Nadu) ತಿರುಪ್ಪೂರ್ (Tiruppur) ಜಿಲ್ಲೆಯಲ್ಲಿ ನಡೆದಿದೆ.

    ಅತ್ಯಾಚಾರಕ್ಕೆ ಒಳಗಾದ ಬಾಲಕಿಯರು 13 ಮತ್ತು 17 ವರ್ಷದವರಾಗಿದ್ದಾರೆ. 17 ವರ್ಷದ ಬಾಲಕಿ ಗರ್ಭಿಣಿಯಾದ ಬಳಿಕ ವಿಷಯ ಬೆಳಕಿಗೆ ಬಂದಿದೆ. 17ರ ಬಾಲಕಿ ಚಿಕ್ಕ ವಯಸ್ಸಿನಲ್ಲೇ ತನ್ನ ಪೋಷಕರನ್ನು ಕಳೆದುಕೊಂಡು ಚಿಕ್ಕಮ್ಮನ ಮನೆಯಲ್ಲಿ ವಾಸವಿದ್ದಳು. ಶಾಲೆಯನ್ನು ತೊರೆದು ಕೆಲಸಕ್ಕಾಗಿ ಹುಡುಕಾಡುತ್ತಿದ್ದಾಗ 15 ವರ್ಷದ ಬಾಲಕ ಆಕೆಯೊಂದಿಗೆ ಸ್ನೇಹವನ್ನು ಬೆಳೆಸಿದ್ದಾನೆ. ಬಳಿಕ ಕೆಲಸ ಕೊಡಿಸುವ ನೆಪದಲ್ಲಿ ಆಕೆಯನ್ನು ತನ್ನ ಸ್ನೇಹಿತರ ಬಳಿ ಕರೆದೊಯ್ದು ಸ್ನೇಹಿತರೊಂದಿಗೆ ಸೇರಿಕೊಂಡು ಅತ್ಯಾಚಾರವೆಸಗಿದ್ದಾರೆ. ಇದನ್ನೂ ಓದಿ: ಎಣ್ಣೆ ಸಾಲ ಕೊಡದಿದ್ದಕ್ಕೆ ಬಾರ್ ಮಾಲೀಕನ ಮೇಲೆ ಹಲ್ಲೆ – ಆರೋಪಿ ಅರೆಸ್ಟ್

    ಇದೇ ರೀತಿ ಹಲವು ಬಾರಿ ಅತ್ಯಾಚಾರ ಮಾಡಿದ್ದು, 17 ವರ್ಷದ ಬಾಲಕಿ ಜೊತೆ 13 ವರ್ಷದ ಬಾಲಕಿಯೂ ಹೋಗಿದ್ದ ಸಂದರ್ಭ ಆಕೆಯ ಮೇಲೂ ಅತ್ಯಾಚಾರವೆಸಗಿದ್ದಾರೆ. 17 ವರ್ಷದ ಬಾಲಕಿ ತನ್ನ ಋತುಚಕ್ರ ಸರಿಯಾಗಿ ಆಗುತ್ತಿಲ್ಲ ಎಂದು ತಿಳಿದು ಚಿಕ್ಕಮ್ಮನ ಬಳಿ ಅತ್ಯಾಚಾರದ ವಿಷಯ ಹೇಳಿದ್ದಾಳೆ. ವಿಷಯ ತಿಳಿದ ಆಕೆಯ ಚಿಕ್ಕಮ್ಮ ಉಡುಮಲೈಪೆಟ್ಟೈ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ನನ್ನ ವಿರುದ್ಧ ರಾಘವೇಂದ್ರ ಷಡ್ಯಂತ್ರ – ಬಂಧಿಸುವಂತೆ ಈಶ್ವರಪ್ಪ ದೂರು

    ಜಯ ಕಾಳೀಶ್ವರನ್, ಮಥನ್ ಕುಮಾರ್, ಬರಣಿ ಕುಮಾರ್ ಮತ್ತು ಇತರ ಮೂವರು ಬಾಲಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: 6 ವರ್ಷ ಮೋದಿಯನ್ನು ಚುನಾವಣೆಯಿಂದ ನಿರ್ಬಂಧಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

  • ಅಪ್ರಾಪ್ತರಿಗೆ ಮದ್ಯ ಸಪ್ಲೈ – ಬೆಂಗಳೂರಿನ 510 ಪಬ್, ಬಾರ್‌ಗಳ ಮೇಲೆ ಸಿಸಿಬಿ ದಾಳಿ

    ಅಪ್ರಾಪ್ತರಿಗೆ ಮದ್ಯ ಸಪ್ಲೈ – ಬೆಂಗಳೂರಿನ 510 ಪಬ್, ಬಾರ್‌ಗಳ ಮೇಲೆ ಸಿಸಿಬಿ ದಾಳಿ

    ಬೆಂಗಳೂರು: ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮದ್ಯ (Alcohol) ಸಪ್ಲೈ ಮಾಡುತ್ತಿದ್ದ ಆರೋಪದ ಹಿನ್ನೆಲೆ ಬೆಂಗಳೂರಿನ (Benagluru) ಪಬ್, ಬಾರ್, ಹುಕ್ಕಾಬಾರ್‌ಗಳ ಮೇಲೆ ಸಿಸಿಬಿ ಪೊಲೀಸರು (CCB Police) ದೊಡ್ಡ ಮಟ್ಟದ ರೇಡ್ ನಡೆಸಿ ಕೇಸ್ ಜಡಿದಿದ್ದಾರೆ. ಎಂಎಲ್‌ಎ ಸಂಬಂಧಿಕರು ಎಂದು ಹೇಳಿಕೊಂಡಿರುವ ಅಪ್ರಾಪ್ತರು ರೇಡ್ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆಸಿದ ಘಟನೆ ಕೂಡ ನಡೆದಿದೆ.

    ಶುಕ್ರವಾರ ರಾತ್ರಿ ಬೆಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನ 510 ಕ್ಕೂ ಹೆಚ್ಚು ಪಬ್, ಬಾರ್, ಹುಕ್ಕಾಬಾರ್‌ಗಳ ಮೇಲೆ ದಾಳಿ ನಡೆಸಿದರು. ದಾಳಿ ವೇಳೆ ಅಬಕಾರಿ ನಿಯಮ ಸೇರಿದಂತೆ ಕಾನೂನುಗಳನ್ನು ಉಲ್ಲಂಘನೆ ಮಾಡುತ್ತಿದ್ದ ಆರೋಪದ ಮೇಲೆ ಕೆಲ ಪಬ್‌ಗಳ ಮೇಲೆ ಕೇಸ್ ಜಡಿಯಲಾಗಿದೆ.

    ಇತ್ತೀಚೆಗೆ ಶಾಲಾ ಮುಖ್ಯಸ್ಥರು ಪೊಲೀಸ್ ಆಯುಕ್ತರಿಗೆ ಮನವಿಯೊಂದನ್ನು ಕೊಟ್ಟಿದ್ದರು. ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮದ್ಯ ನೀಡಲಾಗುತ್ತಿದೆ. ಇದನ್ನು ಸರಿಪಡಿಸುವಂತೆ ಕೇಳಿಕೊಂಡಿದ್ದರು. ಈ ಬಗ್ಗೆ ಕಮಿಷನರ್ ಅವರಿಂದ ನಿರ್ದೇಶನ ಪಡೆದು ಪೊಲೀಸರು ಏಕಕಾಲಕ್ಕೆ ದಾಳಿ ಮಾಡಿ, ತಪಾಸಣೆ ನಡೆಸಿ ನಿಯಮ ಉಲ್ಲಂಘನೆ ಆಗುತ್ತಿರುವುದನ್ನು ಪತ್ತೆ ಮಾಡಿದ್ದಾರೆ. ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಮೈತ್ರಿ ಮಾತುಕತೆ ಆರಂಭಿಕ ಹಂತದಲ್ಲಿದೆ: ಹೆಚ್.ಡಿ.ಕುಮಾರಸ್ವಾಮಿ

    ಅನಧಿಕೃತವಾಗಿ ಪಬ್‌ಗಳಲ್ಲಿ ಧೂಮಪಾನಕ್ಕೆ ಅವಕಾಶ ಕೊಡಲಾಗಿದೆ. ಪ್ರತಿ ಪಬ್‌ಗಳಲ್ಲಿ ಧೂಮಪಾನಕ್ಕೆ ಪ್ರತ್ಯೇಕ ರೂಂ ವ್ಯವಸ್ಥೆ ಇರಬೇಕು. ಇದಲ್ಲದೆ ಅಬಕಾರಿ ನಿಯಮಗಳನ್ನು ಸಹ ಉಲ್ಲಂಘನೆ ಮಾಡಿದ್ದಾರೆ. ಅಪ್ರಾಪ್ತರಿಗೆ ಮದ್ಯ ನೀಡುತ್ತಿರೋದು ಕಂಡುಬಂದಿದ್ದು, ಜುವೆನಿಲ್ ಜಸ್ಟಿಸ್ ಆಕ್ಟ್ ಹಾಗೂ ಕೋಪ್ಟಾ ಆಕ್ಟ್ ಅಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ.

    ಬಾಣಸವಾಡಿಯ ಪಬ್ ಒಂದರಲ್ಲಿ ಕಿರುತೆರೆ ನಟಿಯರು ಎಂದು ಹೇಳಿಕೊಂಡ ಅಪ್ರಾಪ್ತೆಯರು ಮದ್ಯ ಸೇವನೆ ವೇಳೆ ಸಿಸಿಬಿ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ. ನಾವು ಮಾಜಿ ಸಚಿವ, ಹಾಲಿ ಶಾಸಕರ ಸಂಬಂಧಿಕರು ಅಂತಾ ವಾಗ್ವಾದ ನಡೆಸಿದ್ದಾರೆ. ಇದನ್ನೂ ಓದಿ: ಜಿ20 ಅತಿಥಿಗಳಿಗೆ ಭಾರತದ ವಾಸ್ತವತೆ ಮರೆಮಾಡುವ ಅಗತ್ಯವಿಲ್ಲ: ರಾಹುಲ್ ಗಾಂಧಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಲಿಕಾನ್ ಸಿಟಿ ಪಬ್, ಹುಕ್ಕಾಬಾರ್‌ಗಳಲ್ಲಿ ಅಪ್ರಾಪ್ತರ ಮೋಜು-ಮಸ್ತಿ; ಗೃಹಸಚಿವರಿಗೆ ಖಾಸಗಿ ಶಾಲೆಗಳ ಒಕ್ಕೂಟ ಪತ್ರ

    ಸಿಲಿಕಾನ್ ಸಿಟಿ ಪಬ್, ಹುಕ್ಕಾಬಾರ್‌ಗಳಲ್ಲಿ ಅಪ್ರಾಪ್ತರ ಮೋಜು-ಮಸ್ತಿ; ಗೃಹಸಚಿವರಿಗೆ ಖಾಸಗಿ ಶಾಲೆಗಳ ಒಕ್ಕೂಟ ಪತ್ರ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ಪಬ್, ಹುಕ್ಕಾಬಾರ್‌ಗಳಲ್ಲಿ ಅಪ್ರಾಪ್ತರ ಮೋಜು-ಮಸ್ತಿ ಹೆಚ್ಚುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳ ದುಶ್ಚಟಗಳಿಗೆ ಕಡಿವಾಣ ಹಾಕಿ ಎಂದು ಖಾಸಗಿ ಶಾಲೆಗಳ ಒಕ್ಕೂಟ (Union of Private Schools) ಗೃಹಸಚಿವರಿಗೆ (Home Minister) ಪತ್ರ ಬರೆದಿದೆ.

    ನಗರದಲ್ಲಿ ವಿದ್ಯಾರ್ಥಿಗಳು (Students) ಶಾಲಾ-ಕಾಲೇಜಿಗೆ ಚಕ್ಕರ್ ಹಾಕಿ ಪಬ್ (Pub) , ಬಾರ್ ಹಾಗೂ ಹುಕ್ಕಾಬಾರ್‌ಗಳಿಗೆ ಹಾಜರಾಗುತ್ತಿರುವ ಸಂಖ್ಯೆ ಹೆಚ್ಚಳವಾಗಿದೆ. ಅಪ್ರಾಪ್ತರಿಗೆ (Minors) ಪ್ರವೇಶ ಕೊಡುವ ಪಬ್, ಹುಕ್ಕಾಬಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕ್ಯಾಮ್ಸ್ ಸಂಘಟನೆಯಿಂದ ಗೃಹಸಚಿವರಿಗೆ ಪತ್ರ (Letter) ಬರೆಯಲಾಗಿದೆ. ಇದನ್ನೂ ಓದಿ: ಸಂಸದ ಸ್ಥಾನದಿಂದ ಪುತ್ರ ಅನರ್ಹತೆ ಬೆನ್ನಲ್ಲೇ ಶಾಸಕ ಹೆಚ್‌.ಡಿ.ರೇವಣ್ಣಗೆ ಹೈಕೋರ್ಟ್‌ ಸಮನ್ಸ್‌

    ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಪಬ್, ರೆಸ್ಟ್ರೋ ಬಾರ್, ಹುಕ್ಕಾ ಬಾರ್‌ಗಳು ಮದ್ಯಪಾನ, ಧೂಮಪಾನ ಸೇವಿಸುವ ತಾಣಗಳಾಗಿವೆ ಎಂದು ಕೆಲ ಶಿಕ್ಷಣ ಸಂಸ್ಥೆಗಳಿಂದ ಹಾಗೂ ಪೋಷಕರಿಂದ ಕ್ಯಾಮ್ಸ್‌ಗೆ ನಿರಂತರ ದೂರು ಬರುತ್ತಿತ್ತು. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್‌ ಇನ್ನೂ ಬಚ್ಚ – ಮುತಾಲಿಕ್ ಕಿಡಿ

    ಈ ಹಿನ್ನೆಲೆ ಖಾಸಗಿ ಶಾಲೆಗಳ ಒಕ್ಕೂಟ ಗೃಹಸಚಿವರಿಗೆ ಪತ್ರ ಬರೆದಿದ್ದು, ಅಪ್ರಾಪ್ತ ವಯಸ್ಸಿನವರಿಗೆ ಮದ್ಯಪಾನ, ಧೂಮಪಾನ ಮಾರಾಟ ಮಾಡುವುದು ನಿಷೇಧ. ಹೀಗಿದ್ದರೂ ನಗರದ ಪಬ್, ಬಾರ್‌ಗಳಿಗೆ ಮಕ್ಕಳಿಗೆ ಎಂಟ್ರಿ ಸಿಗುತ್ತಿದೆ. ಈ ಹಿನ್ನೆಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ವಿರುದ್ಧ ಆಕ್ರೋಶ; ಆನ್‌ಲೈನ್ ಮೂಲಕ ದೂರು ದಾಖಲಿಸಲು ಮುಂದಾದ ಹಿಂದೂ ಸಂಘಟನೆಗಳು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೂವರು ಅಪ್ರಾಪ್ತರಿಂದಲೇ 12ರ ಬಾಲಕನ ಭೀಕರ ಹತ್ಯೆ – ತಲೆಗೆ ಜಜ್ಜಿ ಕತ್ತು ಸೀಳಿದ್ರು

    ಮೂವರು ಅಪ್ರಾಪ್ತರಿಂದಲೇ 12ರ ಬಾಲಕನ ಭೀಕರ ಹತ್ಯೆ – ತಲೆಗೆ ಜಜ್ಜಿ ಕತ್ತು ಸೀಳಿದ್ರು

    ಭೋಪಾಲ್: 12 ವರ್ಷದ ಬಾಲಕನನ್ನು (Boy) ಆತನ ಮೂವರು ಗೆಳೆಯರೇ ಸೈಕಲ್ ಸರಪಳಿಯಿಂದ ಕತ್ತು ಹಿಸುಕಿ, ತಲೆಗೆ ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಕತ್ತು ಸೀಳಿ ಭೀಕರವಾಗಿ ಹತ್ಯೆ (Murder) ನಡೆಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ (Madhya Pradesh) ಸಿಯೋನಿ ಜಿಲ್ಲೆಯಲ್ಲಿ ನಡೆದಿದೆ.

    ಘಟನೆ ಭಾನುವಾರ ನಡೆದಿದ್ದು, ಸಿಯೋನಿ ಸಮೀಪದ ಮಗರ್ಕಥಾ ಗ್ರಾಮದಲ್ಲಿ ನಡೆದಿದೆ. ಮೂವರು ಆರೋಪಿಗಳೂ ಅಪ್ರಾಪ್ತರಾಗಿದ್ದು (Minors) ಹತ್ಯೆ ನಡೆಸಿದ ಬಳಿಕ ಗೆಳೆಯನ ಶವವನ್ನು ಪಾಲಿಥಿನ್ ಚೀಲದಲ್ಲಿ ತುಂಬಿ ಎಸೆದಿದ್ದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

    ಆರೋಪಿ ಬಾಲಕರು ಕ್ರಮವಾಗಿ 16, 14 ಹಾಗೂ 11 ವರ್ಷ ವಯಸ್ಸಿನವರಾಗಿದ್ದಾರೆ. 16 ವರ್ಷದ ಆರೋಪಿ 12 ವರ್ಷದ ಬಾಲಕನ ಸಹೋದರಿಯೊಂದಿಗೆ ಮಾತನಾಡಲು ಪ್ರಯತ್ನಿಸಿದಾಗ ಅವರಿಬ್ಬರ ನಡುವೆ ವಾಗ್ವಾದ ನಡೆದಿದೆ. ಜಗಳ ಕೊನೆಗೆ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ.

    ವರದಿಗಳ ಪ್ರಕಾರ 16 ವರ್ಷದ ಆರೋಪಿ ಬಾಲಕ ತನ್ನ ಇನ್ನಿಬ್ಬರು ಸ್ನೇಹಿತರನ್ನು ಸೇರಿಸಿಕೊಂಡು ಸಂತ್ರಸ್ತ ಬಾಲಕನನ್ನು ನಿರ್ಜನ ಪ್ರದೇಶಕ್ಕೆ ಕರೆದಿದ್ದಾರೆ. ಅಲ್ಲಿ ಅವರು ಬಾಲಕನಿಗೆ ಸೈಕಲ್ ಚೈನ್‌ನಿಂದ ಕತ್ತು ಹಿಸುಕಿದ್ದಾರೆ. ಆತ ನೋವಿನಿಂದ ಅಳಲು ಪ್ರಾರಂಭಿಸಿದಾಗ ದೊಡ್ಡ ಕಲ್ಲಿನಿಂದ ಆತನ ತಲೆಯನ್ನು ಚಚ್ಚಿದ್ದಾರೆ. ಬಳಿಕ ಹರಿತವಾದ ಚಾಕುವಿನಿಂದ ಆತನ ಗಂಟಲನ್ನು ಸೀಳಿದ್ದಾರೆ.

    ಬಳಿಕ ಬಾಲಕನ ಶವವನ್ನು ಪಾಲಿಥಿನ್ ಚೀಲದಲ್ಲಿ ತುಂಬಿ ಮನೆಯ ಸಮೀಪ ಕಲ್ಲಿನ ರಾಶಿಯಲ್ಲಿ ಎಸೆದಿದ್ದಾರೆ. ಮಹಿಳೆಯೊಬ್ಬರು ರಕ್ತದ ಕಲೆಯುಳ್ಳ ಚೀಲವನ್ನು ಪತ್ತೆ ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮೊದಲ ಮತದಾನಕ್ಕೆ ಬಂದು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ವಿದ್ಯಾರ್ಥಿನಿ

    ಮೂವರು ಅಪ್ರಾಪ್ತ ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು 14 ದಿನಗಳ ಕಾಲ ಬಾಲಾಪರಾಧಿಗಳ ಸುಧಾರಣಾ ಗೃಹಕ್ಕೆ ಕಳುಹಿಸಲಾಗಿದೆ. ಇದನ್ನೂ ಓದಿ: ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಹಲ್ಲೆ ಆರೋಪಕ್ಕೆ ಟ್ವಿಸ್ಟ್ – ಉಲ್ಟಾ ಹೊಡೆದ ಆಟೋ ಚಾಲಕ

  • ಅಪ್ರಾಪ್ತ ಸ್ನೇಹಿತರ ನಡುವೆ ಜಗಳ- ದವಡೆಗೆ ಚಾಕು ಹಾಕಿ ಹಲ್ಲೆ

    ಅಪ್ರಾಪ್ತ ಸ್ನೇಹಿತರ ನಡುವೆ ಜಗಳ- ದವಡೆಗೆ ಚಾಕು ಹಾಕಿ ಹಲ್ಲೆ

    ರಾಯಚೂರು: ನಗರದ ಜಹಿರಾಬಾದ್‍ನಲ್ಲಿ ಇಬ್ಬರು ಅಪ್ರಾಪ್ತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಚಾಕು ಹಾಕುವ ಹಂತಕ್ಕೆ ತಿರುಗಿದ ಘಟನೆ ನಡೆದಿದೆ.

    ಮಾತಿಗೆ ಮಾತು ಬೆಳೆದು ಸ್ನೇಹಿತ ಎನ್ನುವುದನ್ನೇ ಮರೆತು ದವಡೆಗೆ ಚಾಕು ಹಾಕಿದ್ದಾನೆ. ರಾತ್ರಿ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಶುರುವಾದ ಜಗಳ ಚಾಕು ಹಾಕುವ ಹಂತಕ್ಕೆ ತಿರುಗಿದೆ. ಹಲ್ಲೆಗೊಳಗಾದ 17 ವರ್ಷದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆ (RIIMS Hospital) ಗೆ ದಾಖಲಾಗಿದ್ದಾನೆ.

    ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಚಾಕು ಹೊರ ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಯುವಕ ಚೇತರಿಸಿಕೊಳ್ಳುತ್ತಿದ್ದಾನೆ. ಘಟನೆ ಹಿನ್ನೆಲೆ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಫೋನಲ್ಲಿ ಮಾತನಾಡುತ್ತಿದ್ದ ವಿವಾಹಿತೆಯ ಮೇಲೆ ಅತ್ಯಾಚಾರ ಯತ್ನ – ಆರೋಪಿಗಳಿಗಾಗಿ ಪೊಲೀಸರ ಶೋಧ

     

  • 9ರ ಬಾಲಕಿ ಮೇಲೆ ಅಪ್ರಾಪ್ತರಿಂದ ರೇಪ್- ವೀಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್

    9ರ ಬಾಲಕಿ ಮೇಲೆ ಅಪ್ರಾಪ್ತರಿಂದ ರೇಪ್- ವೀಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್

    ಲಕ್ನೋ: ಬಾಲಕಿಯ (Girl) ಮೇಲೆ ಇಬ್ಬರು ಅಪ್ರಾಪ್ತ ಹುಡುಗರು (Minors) ಅತ್ಯಾಚಾರವೆಸಗಿ, ಈ ಕೃತ್ಯವನ್ನು ವೀಡಿಯೋ (Video) ಮಾಡಿ ವಿಕೃತಿ ಮೆರೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಮಥುರಾದಲ್ಲಿ 9 ವರ್ಷದ ಬಾಲಕಿಯು ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನೆರೆಯ ಮನೆಯ ಇಬ್ಬರು ಅಪ್ರಾಪ್ತ ಹುಡುಗರು ಆಕೆಯ ಮನೆಗೆ ನುಗ್ಗಿದ್ದಾರೆ. ಈ ವೇಳೆ ಆ ಇಬ್ಬರು ಹುಡುಗರು ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಆದರೆ ಆಕೆ ಇದನ್ನು ಪ್ರತಿಭಟಿಸಿದಾಗ ಆಕೆಯ ಮೇಲೆ ಇಬ್ಬರು ಹುಡುಗರು ಅತ್ಯಾಚಾರವೆಸಗಿದ್ದಾರೆ.

    ಈ ವೇಳೆ ಅತ್ಯಾಚಾರವೆಸಗಿದ ಘಟನೆಯನ್ನು ತಮ್ಮ ಮೊಬೈಲ್‍ನಲ್ಲಿ ವೀಡಿಯೋ ಮಾಡಿಕೊಂಡಿದ್ದಾರೆ. ಈ ಬಗ್ಗೆ ಯಾರಿಗಾದರೂ ತಿಳಿಸಿದರೇ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ಅಶ್ವಿನಿ ಚೌಬೆ ಬೆಂಗಾವಲು ವಾಹನ ಪಲ್ಟಿ – ಪೊಲೀಸರಿಗೆ ಗಂಭೀರ ಗಾಯ

    ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಪೋಷಕರು ಹೆದ್ದಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಲೇಡಿ ಡಾಕ್ಟರ್ ವೇಷದಲ್ಲಿ ಆಸ್ಪತ್ರೆಗೆ ನುಗ್ಗಿ ರೋಗಿಗಳ ಚಿನ್ನಾಭರಣ ಕಳವು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾರಿನಲ್ಲೇ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್ – ಓರ್ವ ಅರೆಸ್ಟ್, ಆರೋಪಿಗಳ ಪೈಕಿ ಮೂವರು ಅಪ್ರಾಪ್ತರು

    ಕಾರಿನಲ್ಲೇ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್ – ಓರ್ವ ಅರೆಸ್ಟ್, ಆರೋಪಿಗಳ ಪೈಕಿ ಮೂವರು ಅಪ್ರಾಪ್ತರು

    ಹೈದರಾಬಾದ್: ಮರ್ಸಿಡಿಸ್ ಕಾರಿನಲ್ಲಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ. ಗುರುತಿಸಲಾದ ಐದು ಆರೋಪಿಗಳಲ್ಲಿ ಮೂವರು ಅಪ್ರಾಪ್ತರು ಎಂದು ಪೊಲೀಸರು ತಿಳಿಸಿದ್ದಾರೆ.

    ಮೇ 28 ರಂದು ಹೈದರಾಬಾದ್‍ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯ ಕುರಿತು ಅಪ್ರಾಪ್ತ ಬಾಲಕಿಯ ತಂದೆ ಪೆÇಲೀಸರಿಗೆ ದೂರು ನೀಡಿದ ನಂತರ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ಮತ್ತು 323 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 9 ಅನ್ನು ಪೋಕ್ಸೊ ಕಾಯಿದೆಯ 10 ರೊಂದಿಗೆ ಈ ಪ್ರಕರಣದಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.

    ಪೊಲೀಸ್ ಅಧಿಕಾರಿ ಜೋಯಲ್ ಡೇವಿಸ್ ಈ ಕುರಿತು ಮಾಹಿತಿ ಕೊಟ್ಟಿದ್ದು, ಆರೋಪಿಗಳ ಬಗ್ಗೆ ಸಂತ್ರಸ್ತೆ ಏನನ್ನೂ ಬಹಿರಂಗಪಡಿಸಿಲ್ಲ. ಆದರೆ ಆಕೆ ಒಬ್ಬನ ಹೆಸರನ್ನು ಮಾತ್ರ ತಿಳಿಸಿದ್ದಾಳೆ. ತಕ್ಷಣ ಅವನನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಿದ್ದು, ಒಬ್ಬನನ್ನು ಬಂಧಿಸಲಾಗಿದೆ. ಪ್ರಸ್ತುತ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಐದು ಆರೋಪಿಗಳ ಬಗ್ಗೆ ಪತ್ತೆ ಮಾಡಲಾಗಿದೆ. ಸಂತ್ರಸ್ತೆ ಪ್ರಸ್ತುತ ಯಾರನ್ನು ಗುರುತಿಸುವ ಸ್ಥಿತಿಯಲ್ಲಿ ಇಲ್ಲ ಎಂದರು. ಇದನ್ನೂ ಓದಿ: ಶ್ರೀರಂಗಪಟ್ಟಣ ಮಸೀದಿ ವಿವಾದ – ಹಿಂದೂ, ಮುಸ್ಲಿಮರ ವಾದ ಏನು? 

    ಸಿಸಿಟಿವಿಯಲ್ಲಿ ಏನಿದೆ?
    ಶಂಕಿತ ಆರೋಪಿಗಳು ಪಬ್‍ನ ಹೊರಗೆ ಅಪ್ರಾಪ್ತೆ ಜೊತೆ ನಿಂತಿರುವುದನ್ನು ಕಾಣಿಸುತ್ತೆ. ಈ ವೇಳೆ ಹುಡುಗರು ಸಂತ್ರಸ್ತೆಯನ್ನು ಮನೆಗೆ ಬಿಡಲು ಮುಂದಾಗಿದ್ದಾರೆ. ಸಂತ್ರಸ್ತೆ ಕಾರಿನ ಬಳಿ ಹೋಗುತ್ತಿದಂತೆ ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ. ನಂತರ ಕಾರಿನೊಳಗೆಯೇ ಆರೋಪಿಗಳು ಸರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಇತರರು ಕಾರಿನ ಹೊರಗೆ ಕಾವಲು ನಿಂತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • 3 ವರ್ಷದ ಕಂದಮ್ಮನ ಮೇಲೆ ಇಬ್ಬರು ಅಪ್ರಾಪ್ತರಿಂದ ಗ್ಯಾಂಗ್ ರೇಪ್

    3 ವರ್ಷದ ಕಂದಮ್ಮನ ಮೇಲೆ ಇಬ್ಬರು ಅಪ್ರಾಪ್ತರಿಂದ ಗ್ಯಾಂಗ್ ರೇಪ್

    ಮುಂಬೈ: ಮೂರು ವರ್ಷದ ಮಗುವಿನ ಮೇಲೆ ಇಬ್ಬರು ಅಪ್ರಾಪ್ತರು ಸಾಮೂಹಿಕ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.

    ಮುಂಬೈನ ಕಸ್ತೂರಬಾ ಮಾರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇಬ್ಬರು ಅಪ್ರಾಪ್ತ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 376 ಹಾಗೂ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇಬ್ಬರು ಅಪ್ರಾಪ್ತರು ನನ್ನ ಮೂರು ವರ್ಷದ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಮಗುವಿನ ತಾಯಿ ದೂರು ನೀಡಿದ್ದು, ಈ ಹಿನ್ನೆಲೆ ಐಪಿಸಿ ಸೆಕ್ಷನ್ 376 ಹಾಗೂ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ ಎಂದು ಕಸ್ತೂರಬಾ ಮಾರ್ಗ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್‍ಸ್ಪೆಕ್ಟರ್ ವಿವರಿಸಿದ್ದಾರೆ.

    ಇಬ್ಬರು ಅಪ್ರಾಪ್ತ ಆರೋಪಿಗಳು ಮಗುವಿನ ಕುಟುಂಬಕ್ಕೆ ಚಿರಪರಿಚಿತರಾಗಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಸಂಬಂಧ ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

  • ಬೈಕ್ ಸ್ಟಂಟ್ ಮಾಡಲು ಆಕ್ಷೇಪ – ವ್ಯಕ್ತಿಯನ್ನು ನಡುಬೀದಿಯಲ್ಲಿ 28 ಬಾರಿ ಚುಚ್ಚಿ ಕೊಂದ ಅಪ್ರಾಪ್ತರು

    ಬೈಕ್ ಸ್ಟಂಟ್ ಮಾಡಲು ಆಕ್ಷೇಪ – ವ್ಯಕ್ತಿಯನ್ನು ನಡುಬೀದಿಯಲ್ಲಿ 28 ಬಾರಿ ಚುಚ್ಚಿ ಕೊಂದ ಅಪ್ರಾಪ್ತರು

    – ಬರ್ಬರ ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ
    – ಸಿನಿಮಾ ರೀತಿ ಕೊಲೆಗೈದ ಬಾಲಕರು

    ನವದೆಹಲಿ: ಬೈಕ್ ಸ್ಟಂಟ್ ಮಾಡಲು ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಯನ್ನು ಮೂವರು ಅಪ್ರಾಪ್ತ ಬಾಲಕರು ನಡುಬೀದಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಯ ರಘುಬೀರ್ ನಗರದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು 25 ವರ್ಷದ ಮನೀಶ್ ಜಗ್ಗಿ ಎಂದು ಗುರುತಿಸಲಾಗಿದೆ. ಮನೀಶ್ ವಾಸವಿದ್ದ ಏರಿಯಾದಲ್ಲಿ ದಿನ ಮೂವರು ಅಪ್ರಾಪ್ತ ಬಾಲಕರು ಬೈಕ್ ರೈಸ್ ಮಾಡುವುದು ಮತ್ತು ಜನರು ಓಡಾಡುವ ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡುತ್ತಿದ್ದರು. ಇದರಿಂದ ಕಿರಿಕಿರಿಗೊಂಡು ಮನೀಶ್ ಇಲ್ಲಿ ಬೈಕ್ ರೇಸ್‌ ಮಾಡಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ.

    ಮನೀಶ್ ಬೈಕ್ ಸ್ಟಂಟ್‍ಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಕೋಪಗೊಂಡ ಅಪ್ರಾಪ್ತರು ಆತನ ಮೇಲೆ ಜಗಳಕ್ಕೆ ನಿಂತಿದ್ದಾರೆ. ಈ ಜಗಳ ವಿಕೋಪಕ್ಕೆ ಹೋಗಿ, ಮೂವರು ಬಾಲಕರು ನಡುರಸ್ತೆಯಲ್ಲಿ ಆತನನ್ನು ಕೊಂದು ಹಾಕಿದ್ದಾರೆ. ಬಾಲಕರು ನಡುರಸ್ತೆಯಲ್ಲಿ ಆತನ್ನು ಎಳೆದಾಡಿಕೊಂಡು ಮರ್ಡರ್ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿನಿಮಾ ರೀತಿಯಲ್ಲಿ ಕೊಲೆ ಮಾಡಲಾಗಿದೆ. ಚಾಕುವಿನಿಂದ 28 ಬಾರಿ ಇರಿದು ಮನೀಶ್‍ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಘಟನೆಯಲ್ಲಿ ಇನ್ನೊಂದು ಶಾಂಕಿಂಗ್ ಸಂಗತಿ ಎಂದರೆ, ಮನೀಶ್ ಕೊಲೆಯಾಗುವ ವೇಳೆ ರಸ್ತೆಯಲ್ಲಿ ನೂರಾರು ಜನರು ಓಡಾಡುತ್ತಿದ್ದರು. ಆದರೆ ಯಾರೂ ಕೂಡ ಮನೀಶ್ ಸಹಾಯಕ್ಕೆ ಬಂದಿಲ್ಲ. ವಾಹನ ಸವಾರರು, ದಾರಿಹೋಕರು ಎಲ್ಲರೂ ಮನೀಶ್ ಸಾಯುವುದನ್ನು ನೋಡುತ್ತಾ ಮುಂದೆ ಹೋಗಿದ್ದಾರೆ. ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯ ಪೊಲೀಸರು, ಮನೀಶ್‌ನನ್ನು ಆಸ್ಪತ್ರೆಗೆ ತೆಗೆದುಕೊಂಡು ಬರಲಾಗಿದೆ. ಆದರೆ ಆತ ಆಸ್ಪತ್ರೆಗೆ ತರುವ ಮುನ್ನವೇ ಮೃತಪಟ್ಟಿದ್ದ ಎಂದು ಹೇಳಿದ್ದಾರೆ.

  • ಸಿನಿಮಾ ಸ್ಟೈಲ್‍ನಲ್ಲಿ ದರೋಡೆ – ನಾಲ್ವರು ಅಪ್ರಾಪ್ತರು ಸೇರಿ 5 ದರೋಡೆಕೋರರು ಅಂದರ್

    ಸಿನಿಮಾ ಸ್ಟೈಲ್‍ನಲ್ಲಿ ದರೋಡೆ – ನಾಲ್ವರು ಅಪ್ರಾಪ್ತರು ಸೇರಿ 5 ದರೋಡೆಕೋರರು ಅಂದರ್

    ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾರಾಕಾಸ್ತ್ರ ತೋರಿಸಿ ದರೋಡೆ ಮಾಡುತ್ತಿದ್ದ ನಾಲ್ವರು ಅಪ್ರಾಪ್ತರು ಸೇರಿದಂತೆ ಐವರು ಆರೋಪಿಗಳನ್ನು ಶ್ರೀರಂಗಪಟ್ಟಣ ಪೊಲೀಸರು ಬಂಧಿಸಿದ್ದಾರೆ.

    ಮೂಲತಃ ಮಂಡ್ಯ ಜಿಲ್ಲೆಯವನಾದ ಹಾಲಿ ಬೆಂಗಳೂರಿನಲ್ಲಿ ವಾಸವಿರುವ ಉದಯ್(19) ಅಲಿಯಾಸ್ ಗೊಗ್ಗಯ್ಯ, ಕಲಾಕಾರ್‍ನನ್ನು ಬಂಧಿಸಲಾಗಿದೆ. ಹಾಗೆಯೇ ಆತನ ಜೊತೆಗಿದ್ದ ಅಪ್ರಾಪ್ತರನ್ನು ಮೈಸೂರಿನ ಬಾಲಮಂದಿರಕ್ಕೆ ದಾಖಲಿಸಲಾಗಿದ್ದು, ಆರೋಪಿಗಳಿಂದ 21.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಡ್ಯ ಎಸ್‍ಪಿ ಕೆ. ಪರಶುರಾಮ ತಿಳಿಸಿದ್ದಾರೆ.

    ಪ್ರಕರಣ ಬೆಳಕಿಗಿ ಬಂದಿದ್ದು ಹೀಗೆ?
    ಫೆ. 2ರಂದು ಶ್ರೀರಂಗಪಟ್ಟಣ ಟೌನ್ ನಿವಾಸಿ ಮಣಿಕುಮಾರ್ ಗೌರಿಪುರ ಅವರು ಗ್ರಾಮದ ಸಮೀಪ ಬೆಳಗ್ಗೆ 5.20ರ ಸುಮಾರಿಗೆ ಬೈಕ್‍ನಲ್ಲಿ ಹೋಗುತ್ತಿದ್ದರು. ಈ ವೇಳೆ ಮೈಸೂರು ಕಡೆಯಿಂದ ಎರಡು ಬೈಕ್‍ನಲ್ಲಿ ಬರುತ್ತಿದ್ದ ಐವರು ಅವರನ್ನು ಅಡ್ಡ ಹಾಕಿದರು. ಬಳಿಕ ಲಾಂಗ್‍ಗಳನ್ನು ತೋರಿಸಿ ಹಲ್ಲೆ ಮಾಡಿ, ಮಣಿಕುಮಾರ್ ಬಳಿಯಿದ್ದ ಒಂದು ಮೊಬೈಲ್, 500 ರೂ. ಹಣ ಹಾಗೂ ಇತರೆ ದಾಖಲಾತಿ ಜೊತೆಗೆ ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ಈ ಸಂಬಂಧ ಕಾರ್ಯಾಚರಣೆಗಿಳಿದ ಪೊಲೀಸರು ತಮಗೆ ಸಿಕ್ಕ ಮಾಹಿತಿ ಆಧಾರದ ಮೇಲೆ ಫೆ. 12ರಂದು ಶ್ರೀರಂಗಪಟ್ಟಣ ಬಸ್ ನಿಲ್ದಾಣದ ಬಳಿ ಐವರನ್ನು ಬಂಧಿಸಿದರು. ನಂತರ ನ್ಯಾಯಾಲಯದ ಎದುರು ಹಾಜರುಪಡಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಹಲವು ವಿಷಯ ಹೊರಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಉದಯ್ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರಿಮ್ಯಾಂಡ್ ರೂಮಿಗೆ ಹೋಗಿ, ಅಲ್ಲಿನ ಸಿಬ್ಬಂದಿಯನ್ನು ಬೆದರಿಸಿ ಕಾನೂನು ಸಂಘರ್ಷಕ್ಕೊಳಗಾದ ಅಪ್ರಾಪ್ತರನ್ನು ಕರೆದುಕೊಂಡು ವಾಪಾಸ್ ಬರುವಾಗ ಗೌರಿಪುರ ಬಳಿ ದರೋಡೆ ಮಾಡಿದ್ದಾನೆ ಎಂಬುದು ಬೆಳಕಿಗೆ ಬಂದಿತ್ತು. ಅಲ್ಲದೆ ಆರೋಪಿಗಳ ವಿರುದ್ಧ ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿವೆ. ಈ ಪೈಕಿ ಉದಯ್ ವಿರುದ್ಧ 32ಕ್ಕೂ ಹೆಚ್ಚು ಹಾಗೂ ಉಳಿದವರ ವಿರುದ್ಧ 34ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ತಿಳಿದುಬಂದಿದೆ.

    ಆರೋಪಿಗಳಿಂದ 1 ಮಾರುತಿ ಸ್ವಿಫ್ಟ್ ಡಿಜೈರ್ ಕಾರು, 8 ದ್ವಿಚಕ್ರ ವಾಹನ, 12 ಗ್ರಾಂ ತೂಕದ ತಾಳಿ ಸಹಿತ ಕರಿಮಣಿ, ಚಿನ್ನದ ಗುಂಡು ಸಹಿತ ಸರ, 4 ಗ್ರಾಂ ಚಿನ್ನದ ಉಂಗುರ, 25 ಮೊಬೈಲ್, 1 ಟ್ಯಾಬ್, 1 ವೈಫೈ ಹಾಟ್‍ಸ್ಪಾಟ್, ಎರಡು ಕ್ಯಾಮೆರಾ, ಎರಡು ಲಾಂಗ್, ಎರಡು ಕಬ್ಬಿಣದ ರಾಡು, ಎರಡು ಸ್ಪಾನರ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‍ಪಿ ಮಾಹಿತಿ ನೀಡಿದ್ದಾರೆ.

    ತನಿಖಾ ತಂಡದಲ್ಲಿದ್ದ ಡಿವೈಎಸ್‍ಪಿ ಅರುಣ್ ನಾಗೇಗೌಡ, ಸಿಪಿಐ ಕೆ.ವಿ ಕೃಷ್ಣಪ್ಪ, ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಹರೀಶ್‍ಬಾಬು, ಪಿಎಸ್‍ಐಗಳಾದ ಕೆ.ಎನ್ ಗಿರೀಶ್, ಮುದ್ದುಮಹದೇವ, ಸಿಬ್ಬಂದಿ ಚಿಕ್ಕಯ್ಯ, ಮಹೇಶ, ಆನಂದ, ಎಸ್.ಎಸ್ ರವೀಶ್, ಕೃಷ್ಣಶೆಟ್ಟಿ, ಶ್ರೀನಿವಾಸಮೂರ್ತಿ, ಟಿ.ಎಸ್ ಕುಮಾರ, ಎಸ್. ಅರುಣ್‍ಕುಮಾರ್, ರವಿಕುಮಾರಸ್ವಾಮಿ, ಎಸ್.ಎಸ್ ಚಂದ್ರಶೇಖರ್, ಮಲ್ಲಿಕಾರ್ಜುನ, ಕೃಷ್ಣೇಗೌಡ, ದಿನೇಶ್, ಜಗದೀಶಯ್ಯ ವಸ್ತ್ರದ್, ಎಚ್.ಟಿ ಮಂಜು, ಸಿಡಿಆರ್ ವಿಭಾಗದ ರವಿಕಿರಣ್, ಲೋಕೇಶ್, ಮಂಜುನಾಥ್, ಭಾರ್ಗವ, ಪ್ರಕಾಶ್ ಅವರನ್ನು ಜಿಲ್ಲಾ ಎಸ್‍ಪಿ ಅಭಿನಂದಿಸಿ ನಗದು ಬಹುಮಾನ ನೀಡಿದರು.