Tag: ಅಪ್ಪು

  • ಮೊಹರಂ ಹಬ್ಬದಲ್ಲೂ ಅಪ್ಪು – ಹೊಂಡದಲ್ಲಿ ಪುನೀತ್ ಫೋಟೋ ಹಿಡಿದು ಬಂದ ಬಾಲಕ

    ಮೊಹರಂ ಹಬ್ಬದಲ್ಲೂ ಅಪ್ಪು – ಹೊಂಡದಲ್ಲಿ ಪುನೀತ್ ಫೋಟೋ ಹಿಡಿದು ಬಂದ ಬಾಲಕ

    ಕೊಪ್ಪಳ: ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಎಲ್ಲರನ್ನು ಅಗಲಿ 10 ತಿಂಗಳು ಕಳೆಯುತ್ತಿದ್ದರೂ ಅವರ ಮೇಲಿನ ಅಭಿಮಾನ ಮಾತ್ರ ಅಭಿಮಾನಿಗಳಿಗೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಚಿಕ್ಕ-ಚಿಕ್ಕ ಮಕ್ಕಳಿಗೆ ಅಪ್ಪು ಮೇಲಿನ ಅಭಿಮಾನ ಮತ್ತು ಪ್ರೀತಿ ಹೆಚ್ಚಾಗುತ್ತ ಹೋಗುತ್ತಿದೆ. ಅದಕ್ಕೆ ಇಲ್ಲೊಬ್ಬ ಬಾಲಕ ಉದಾಹರಣೆಯಾಗಿದ್ದಾನೆ.

    ಇಂದು ಮೊಹರಂ ಹಬ್ಬ. ಈ ಹಬ್ಬ ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯತೆ ಸಾರುವ ಹಬ್ಬವಾಗಿದೆ. ಈ ಹಬ್ಬವನ್ನು ಹಿಂದೂ ಮತ್ತು ಮುಸ್ಲಿಮರು ಒಟ್ಟಿಗೆ ಮಾಡುತ್ತಾರೆ. ಅದಕ್ಕೆ ಈ ಹಬ್ಬಕ್ಕೆ ತುಂಬಾ ವಿಶೇಷ ಸ್ಥಾನವಿದೆ. ಈ ವಿಶೇಷ ಸಂದರ್ಭದಲ್ಲಿ ಇಲ್ಲೊಬ್ಬ ಪುಟಾಣಿ ಕೊಪ್ಪಳ ತಾಲೂಕಿನ ಹೂವಿನಾಳ ಗ್ರಾಮದಲ್ಲಿ ಎಲ್ಲರ ಗಮನ ಸೆಳೆದಿದ್ದಾನೆ. ಇದನ್ನೂ ಓದಿ: ಮದುವೆಗೆ ಮುಸ್ಲಿಂ ವಧು ಹಾಜರ್ – ಮಹಲ್ ಸಮಿತಿಯ ಕ್ಷಮೆಗೆ ಆಗ್ರಹ 

    ಮೋಹರಂ ಆಚರಣೆ ವೇಳೆ ಪುಟ್ಟ ಬಾಲಕನೊಬ್ಬ ಪುನೀತ್ ರಾಜಕುಮಾರ್ ಫೋಟೋ ಹಿಡಿದು ಬೆಂಕಿ ತುಂಬಿದ ಹೊಂಡವನ್ನು ದಾಟಿದ್ದಾನೆ. ಅಲಾಯಿ ದೇವರ ಜೊತೆಗೆಯೇ ಬಾಲಕ ಪುನೀತ್ ಫೋಟೋ ಹಿಡಿದು ಅಗ್ನಿ ಹೊಂಡ ದಾಟಿದನ್ನು ನೋಡಿದ ನೋಡುಗರು ಅಚ್ಚರಿ ವ್ಯಕ್ತಪಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ನವೆಂಬರ್ 1ಕ್ಕೆ ಪುನೀತ್ ರಾಜ್ ಕುಮಾರ್ ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ

    ನವೆಂಬರ್ 1ಕ್ಕೆ ಪುನೀತ್ ರಾಜ್ ಕುಮಾರ್ ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ

    ಟ ಪುನೀತ್ ರಾಜ್ ಕುಮಾರ್ ನಿಧನದ ನಂತರ ಕರ್ನಾಟಕ ಸರಕಾರವು ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ ಮಾಡಿತ್ತು. ಆದರೆ, ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿರಲಿಲ್ಲ. ತಮ್ಮ ನೆಚ್ಚಿನ ನಟನಿಗೆ ಈ ಅತ್ಯುನ್ನತ ಪ್ರಶಸ್ತಿಯನ್ನು ಯಾವಾಗ ಪ್ರದಾನ ಮಾಡಲಾಗುತ್ತದೆ ಎಂದು ಅಭಿಮಾನಿಗಳು ಕಾದಿದ್ದರು. ಕೊನೆಗೂ ಆ ದಿನಾಂಕ ಘೋಷಣೆಯಾಗಿದೆ. ಕರ್ನಾಟಕ ರಾಜ್ಯೋತ್ಸವದ ಸಂಭ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

    ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಡೆದ ಫಲ ಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಅಪ್ಪುಗೆ ಘೋಷಣೆ ಮಾಡಿರುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ನವೆಂಬರ್ 1 ರಂದು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಇಡೀ ಕುಟುಂಬ ಹಾಜರಿತ್ತು. ಇದನ್ನೂ ಓದಿ:ಪ್ರಾಣಿಗಳಿಗಾಗಿ ಬೆತ್ತಲಾಗುವಂತೆ ರಣವೀರ್ ಸಿಂಗ್ ಗೆ ಮನವಿ ಮಾಡಿದ ಪೇಟಾ

    ಸಾಂದರ್ಭಿಕ ಚಿತ್ರ

    ಇಂದು ಉದ್ಘಾಟನೆಗೊಂಡ ಫಲ ಪುಷ್ಪ ಪ್ರದರ್ಶನದಲ್ಲಿ ಡಾ.ರಾಜ್ ಕುಮಾರ್ ಮತ್ತು ಅಪ್ಪು ನೆನಪಿನಲ್ಲಿ ವಿಶೇಷ ಪ್ರದರ್ಶನ ಆಯೋಜನೆಗೊಂಡಿದೆ. ಪುನೀತ್ ಮತ್ತು ಡಾ.ರಾಜ್ ಪುತ್ಥಳಿಗಳನ್ನು ಲಾಲ್ ಬಾಗ್ ನಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಮೂಲಕ ಮೇರು ನಟರಿಗೆ ಸರಕಾರವು ಗೌರವ ಸಲ್ಲಿಸಿದೆ. ಇಂದಿನಿಂದ ಹತ್ತು ದಿನಗಳ ಕಾಲ ನಡೆಯುವ ಈ ಪ್ರದರ್ಶನದಲ್ಲಿ ನೆಚ್ಚಿನ ನಟರ ವಿವಿಧ ಕಲಾಕೃತಿಗಳನ್ನೂ ಅಲ್ಲಿ ನೋಡಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • Exclusive-ಪುನೀತ್ ನಟನೆಯ ‘ಗಂಧದ ಗುಡಿ’ ಡಾಕ್ಯುಮೆಂಟರಿ ಅಲ್ಲ,  ಸಿನಿಮಾ : ನಿರ್ದೇಶಕ ಅಮೋಘ ವರ್ಷ

    Exclusive-ಪುನೀತ್ ನಟನೆಯ ‘ಗಂಧದ ಗುಡಿ’ ಡಾಕ್ಯುಮೆಂಟರಿ ಅಲ್ಲ, ಸಿನಿಮಾ : ನಿರ್ದೇಶಕ ಅಮೋಘ ವರ್ಷ

    ವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿನ್ನೆಯಷ್ಟೇ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಿನಿಮಾದ ನಿರ್ದೇಶಕ ಅಮೋಘ ವರ್ಷ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಈ ಸಿನಿಮಾದ ಹತ್ತು ಹಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.

    ಗಂಧದ ಗುಡಿ ಚಿತ್ರವನ್ನು ರಾಜ್ಯೋತ್ಸವದ ವಾರವೇ ರಿಲೀಸ್ ಮಾಡಬೇಕು ಎಂದೇ ಅಕ್ಟೋಬರ್ 28 ದಿನಾಂಕವನ್ನು ಆಯ್ಕೆ ಮಾಡಿಕೊಂಡಿರುವ ಅವರು ಅಂದು ಪುನೀತ್ ಅವರ ಮೊದಲ ವರ್ಷದ ಪುಣ್ಯಾರಾಧನೆ ಎನ್ನುವುದನ್ನೂ ನೆನಪಿಸಿದರು. ಮತ್ತೆ ಗಂಧದ ಗುಡಿಯನ್ನು ನೆನಪಿಸಿಕೊಳ್ಳುತ್ತಾ, “ಇದು ಡಾಕ್ಯುಮೆಂಟರಿ ಅಂತ ಜನ ಈಗಲೂ ಅನ್ಕೊಂಡಿದಾರೆ. ಇದು ಯಾವುದೇ ಕಾರಣಕ್ಕೂ ಡಾಕ್ಯುಮೆಂಟರಿ ಅಲ್ಲ. ಗಂಧದ ಗುಡಿ ಇದು ಫೀಚರ್ ಫಿಲ್ಮ್. ಒಂದು ಸಿನಿಮಾ.  ಒಂದು ಸಿನಿಮಾಕ್ಕೆ ಬೇಕಾಗುವ ಡ್ಯುರೇಷನ್ ಎಷ್ಟಿರಬೇಕೋ ಅಷ್ಟೇ ಡ್ಯುರೇಷನ್ ನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತೆ” ಎನ್ನುತ್ತಾರೆ. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್

    ಈ ಸಿನಿಮಾವನ್ನು ಪ್ಯಾನ್ ವರ್ಲ್ಡ್ ರಿಲೀಸ್ ಮಾಡುವ ತಯಾರಿ ನಡೆಯುತ್ತಿದೆಯಂತೆ.  ಎಷ್ಟು ಭಾಷೆ , ಅಥವಾ ಸಬ್ ಟೈಟಲ್ ಇಡಬೇಕಾ ಅದೆಲ್ಲ ಇನ್ನೂ ಚರ್ಚೆ ಹಂತದಲ್ಲಿದ್ದು,  ಅಪ್ಪು ಅಭಿಮಾನಿಗಳಿಗೆ ಇದು ಕೊನೆಯ ಚಿತ್ರವಾಗಲಿದೆ. “ನಾಡು, ನುಡಿ, ವನ್ಯಜೀವಿಗಳ ಬಗ್ಗೆ ಅಪ್ಪು ಅವ್ರಿಗಿದ್ದ ಅಪಾರ ಪ್ರೀತಿ ಕಾಳಜಿ ಈ  ಚಿತ್ರದಲ್ಲಿ ಕಾಣುತ್ತದೆ. ವಿಶೇಷ ಅಂದ್ರೆ ಚಿತ್ರದಲ್ಲಿ ಹಾಡುಗಳೂ ಇರ್ತವೆ. ಎಷ್ಟಿರುತ್ತೆ ಹೇಗಿರುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ” ಎನ್ನುತ್ತಾರೆ ಅಮೋಘ.

    ಅಕ್ಟೋಬರ್ 29 ಕ್ಕೆ ಅಪ್ಪು ಅಗಲಿ ಒಂದು ವರ್ಷ ಆಗುತ್ತೆ. ಅಕ್ಟೋಬರ್ 28 ಕ್ಕೆ ಗಂಧದ ಗುಡಿ ಚಿತ್ರ ಬರ್ತಿರೋದು ಅಭಿಮಾನಿಗಳಿಗೆ ಭಾವುಕ ಸುದ್ದಿ ಹೌದು. ಆದರೆ ಅಪ್ಪು ಎಲ್ಲೂ ಹೋಗಿಲ್ಲ. ನಮ್ಮ ಜೊತೆ ಒಂದಲ್ಲ ಒಂದು ವಿಧದಲ್ಲಿ ಇದ್ದಾರೆ. ಸಿನಿಮಾಕ್ಕಾಗಿ ಬೇಕು ಅಂತ ಡಬ್ ಮಾಡ್ಸಿಲ್ಲ ಇದಕ್ಕೆ ನಾವು, ಅಪ್ಪು ಧ್ವನಿಯಲ್ಲೇ ಪೂರ್ತಿ ಸಿನಿಮಾ ಇರುತ್ತದೆ. ಅಪ್ಪು ಧ್ವನಿ ಶೂಟಿಂಗ್ ವೇಳೆಯೇ ರೆಕಾರ್ಡ್ ಆಗಿದೆ ಎನ್ನುವುದು ಅಮೋಘ ವರ್ಷ ಮಾತು.

    Live Tv
    [brid partner=56869869 player=32851 video=960834 autoplay=true]

  • ಪುನೀತ್ ಸ್ಮಾರಕ ನಿರ್ಮಾಣ ಮಾಡಿದ ಸಾಗರ ತಾಲೂಕಿನ ಗ್ರಾಮಸ್ಥರು

    ಪುನೀತ್ ಸ್ಮಾರಕ ನಿರ್ಮಾಣ ಮಾಡಿದ ಸಾಗರ ತಾಲೂಕಿನ ಗ್ರಾಮಸ್ಥರು

    ರುನಾಡ ರತ್ನ ಪುನೀತ್ ರಾಜ್‌ಕುಮಾರ್ ಅಗಲಿ ಸುಮಾರು 8 ತಿಂಗಳು ಕಳೆದಿದೆ. ಆದರೆ ಅಭಿಮಾನಿಗಳು ಮಾತ್ರ ಎಂದಿಗೂ ಅವರನ್ನು ಮರೆತಿಲ್ಲ. ಅವರ ಹೆಸರಿನಲ್ಲಿ ದಿನಕ್ಕೊಂದು ಸಾಮಾಜಿಕ ಕಾರ್ಯಗಳು ನಡೆಯುತ್ತದೆ. ಪುನೀತ್ ನೆನಪಿಗಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಳಗೆರೆ ಗ್ರಾಮದಲ್ಲಿ ಅತ್ಯಾಕರ್ಷಕವಾದ ಪುನೀತ್ ಸ್ಮಾರಕ ನಿರ್ಮಾಣ ಮಾಡಿದ್ದಾರೆ.

    ಪುನೀತ್ ಮೇಲಿರುವ ಪ್ರೀತಿಗಾಗಿ ಅವರ ನೆನಪಿನಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಇದೀಗ ಅಭಿಮಾನಿಗಳು ಅವರ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಳಗೆರೆ ಗ್ರಾಮದಲ್ಲಿ ಅಭಿಮಾನಿಗಳು ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಸ್ಮಾರಕ ನಿರ್ಮಿಸಿದ್ದಾರೆ. ಅಗಲಿದ ಅಪ್ಪುವಿನ ನೆನಪಿಗೆ ಗ್ರಾಮಸ್ಥರು ಸ್ಮಾರಕ ನಿರ್ಮಾಣ ಮಾಡಿದ್ದು, ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ. ಇದನ್ನೂ ಓದಿ:ಕಿರುತೆರೆಗೆ ಮರಳಿದ ಎವರ್‌ಗ್ರೀನ್ ನಟಿ ಸುಧಾರಾಣಿ

    ಅಪ್ಪುಗಾಗಿ ವಿಭಿನ್ನ ಸ್ಮಾರಕವನ್ನು ಪುನೀತ್ ಅಭಿಮಾನಿಗಳು ನಿರ್ಮಿಸಿದ್ದು, ಜೊತೆಗೆ ಕಾರಂಜಿಯನ್ನು ಸಹ ನಿರ್ಮಾಣ ಮಾಡಿದ್ದಾರೆ. ಗ್ರಾಮದವರೆಲ್ಲರೂ ಸೇರಿ ಈ ಅದ್ಭುತ ಕಾರ್ಯವನ್ನು ಮಾಡಿದ್ದು, ಗ್ರಾಮದ ಹಿರಿಯರಿಂದಲೇ ಸ್ಮಾರಕ ಉದ್ಘಾಟನೆ ಮಾಡಿಸಲಾಗಿದೆ. ಸಮಾರಂಭದಲ್ಲಿ ಅಭಿಮಾನಿಗಳು ಪುನೀತ್ ನೆನೆದು ಅವರ ಅದ್ಭುತ ಕೆಲಸಗಳನ್ನು ಗುಣಗಾನ ಮಾಡಿದ್ದು, ಪುನೀತ್ ಮರೆಯಲಾಗದ ಮಾಣಿಕ್ಯ ಎಂದು ಗ್ರಾಮಸ್ಥರು ಕೊಂಡಾಡಿದ್ದಾರೆ.

    Live Tv

  • ಜೇಮ್ಸ್ 100 ದಿನ : ಶತಕದ ಸಂಭ್ರಮದಲ್ಲಿ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ

    ಜೇಮ್ಸ್ 100 ದಿನ : ಶತಕದ ಸಂಭ್ರಮದಲ್ಲಿ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ

    ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ‘ಜೇಮ್ಸ್’ ರಿಲೀಸ್ ಆಗಿ ನೂರು ದಿನಗಳನ್ನು ಪೂರೈಸಿದೆ. ಮಾರ್ಚ್ 17 ರಂದು ಅಪ್ಪು ಹುಟ್ಟು ಹಬ್ಬದಂದು ಬಿಡುಗಡೆಯಾದ ಆದ ಸಿನಿಮಾ ಇಂದಿಗೆ ಶತದಿನ ಆಚರಿಸಿದೆ. ಹಾಗಾಗಿ ಅಪ್ಪು ಅಭಿಮಾನಿಗಳು ಅಲ್ಲಲ್ಲಿ ಶತದಿನದ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ನೆಚ್ಚಿನ ನಟನಿಗೆ ಈ ಮೂಲಕ ಅಭಿಮಾನ ತೋರುತ್ತಿದ್ದಾರೆ. ನೂರನೇ ದಿನದ ಸಂಭ್ರಮದಂದು ಶತದಿನ ಪೋಸ್ಟರ್ ಕೂಡ ರಿಲೀಸ್ ಮಾಡಿದ್ದಾರೆ.

    ಬಹಾದ್ದೂರ್ ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಬಾಕ್ಸ್ ಆಫೀಸಿನಲ್ಲೂ ಸಖತ್ ಸದ್ದು ಮಾಡಿತ್ತು. ರಿಲೀಸ್ ಆದ ಕೆಲವೇ ದಿನಗಳಲ್ಲಿ ನೂರು ಕೋಟಿ ಕ್ಲಬ್ ಕೂಡ ಸೇರಿತ್ತು. ಇದೀಗ ನೂರು ದಿನ ಪೂರೈಸಿದೆ. ಈ ಮೂಲಕ ಅಪ್ಪು ಅವರ ನೂರು ದಿನಗಳ ಪ್ರದರ್ಶನ ಕಂಡ ಸಿನಿಮಾಗಳ ಸಾಲಿಗೆ ಜೇಮ್ಸ್ ಕೂಡ ಸೇರ್ಪಡೆಯಾಗಿದೆ. ಇದನ್ನೂ ಓದಿ : ಚಾಮುಂಡಿ ದರ್ಶನ ಮುಗಿಸಿ ಮೈಸೂರಿನಲ್ಲಿ ಉಪಾಧ್ಯಕ್ಷನನ್ನು ಭೇಟಿಯಾದ ಶಿವರಾಜ್ ಕುಮಾರ್

    ಅ‍ಪ್ಪು ನಟನೆಯ ಕೊನೆಯ ಸಿನಿಮಾ ಇದಾಗಿದ್ದರಿಂದ, ಅಭಿಮಾನಿಗಳು ಕೂಡ ಭಾವನಾತ್ಮಕವಾಗಿಯೇ ಚಿತ್ರವನ್ನು ತಗೆದುಕೊಂಡರು. ನೂರಾರು ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಯಿತು. ಬಿಡುಗಡೆಯಾದ ಅಷ್ಟೂ ಚಿತ್ರಮಂದಿರಗಳಲ್ಲೂ ತುಂಬಿದ ಪ್ರದರ್ಶನ ಕಂಡಿತು. ಭಾರತದಲ್ಲಿ ಮಾತ್ರವಲ್ಲ, ಅನೇಕ ದೇಶಗಳಲ್ಲೂ ಈ ಚಿತ್ರವು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತು. ಇದೀಗ ಕರ್ನಾಟಕ ಕೆಲವು ಚಿತ್ರಮಂದಿರಗಳಲ್ಲಿ ಶತದಿನದ ಪ್ರದರ್ಶನವನ್ನೂ ಮುಗಿಸಿದೆ.

    Live Tv

  • ಬೆಂಗಳೂರು ತೊರೆದ ಪುನೀತ್ ರಾಜ್ ಕುಮಾರ್ ಗನ್ ಮ್ಯಾನ್ ಚಲಪತಿ

    ಬೆಂಗಳೂರು ತೊರೆದ ಪುನೀತ್ ರಾಜ್ ಕುಮಾರ್ ಗನ್ ಮ್ಯಾನ್ ಚಲಪತಿ

    ದೆಷ್ಟೇ ಜನಸಂದಣಿ ಇರಲಿ, ಅಭಿಮಾನಿಗಳು ಮುತ್ತಿಕ್ಕಿಕೊಳ್ಳಲು ಪುನೀತ್ ರಾಜ್ ಕುಮಾರ್ ಅವರನ್ನು ಸೇಫಾಗಿ ಕರೆದುಕೊಂಡು ಹೋಗುತ್ತಿದ್ದವರು ಅವರ ಗನ್ ಮ್ಯಾನ್ ಚಲಪತಿ. ಮಾಜಿ ಸೈನಿಕರು ಆಗಿರುವ ಚಲಪತಿ ಹಲವು ವರ್ಷಗಳಿಂದ ಅಪ್ಪು ಅವರ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಅಂದು ಕೊನೆಯ ಬಾರಿಗೆ ಪುನೀತ್ ಅವರು ಆಸ್ಪತ್ರಗೆ ಹೋದಾಗ, ಅವರನ್ನು ಕಾರ್ ವರೆಗೂ ಕರೆದುಕೊಂಡು ಹೋಗಿ ಬಿಟ್ಟವರು ಆನಂತರ ಅಪ್ಪು ಅವರ ಅಗಲಿಗೆ ಸುದ್ದಿ ಕೇಳಿ ಕಣ್ಣಿರಾಗಿದ್ದರು. ಅಷ್ಟೊಂದು ಭಾವನಾತ್ಮಕವಾಗಿ ಅಪ್ಪು ಅವರನ್ನು ಅಭಿಮಾನಿಸುತ್ತಿದ್ದರು.

    ಈಗ ಅಪ್ಪು ಇಲ್ಲ, ಸುಮ್ಮನೆ ಅವರ ಮನೆಯಲ್ಲಿ ಕುಳಿತುಕೊಳ್ಳಲು ಆಗಲ್ಲ. ಅಲ್ಲದೇ, ಬೇರೆ ಯಾವ ನಟರ ಬಳಿಯೂ ಇವರಿಗೆ ಕೆಲಸ ಮಾಡಲು ಇಷ್ಟವಿಲ್ಲವಂತೆ. ಹಾಗಾಗಿ ಅಪ್ಪು ಇಲ್ಲದ ಬೆಂಗಳೂರನ್ನೇ ತೊರೆದು, ವಾಪಸ್ಸು ತಮ್ಮೂರಿಗೆ ಹೋಗಿದ್ದಾರೆ ಚಲಪತಿ. ಬೇರೆ ಯಾರಿಗಾದರೂ ಗನ್ ಮ್ಯಾನ್ ಆಗುತ್ತೇನೆ. ಮತ್ತೆ ನಟರಿಗೆ ಆಗಲಾರೆ. ಅಪ್ಪು ಸಾರ್ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದು ಮಾಧ್ಯಮಗಳ ಜೊತೆ ನೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್

    ಅಪ್ಪು ಸಾರ್ ನಿಧನದ ನಂತರ ಐದಾರು ತಿಂಗಳು ಅಶ್ವಿನಿ ಮೇಡಂ ಜೊತೆ ಕೆಲಸ ಮಾಡಿದೆ. ಇದೀಗ ಕೆಲಸ ಬಿಟ್ಟು ಒಂದು ತಿಂಗಳಾಗಿದೆ. ಊರಲ್ಲೇ ಇದ್ದೇನೆ. ಅಪ್ಪ ಸರ್ ನೆನಪಿನಲ್ಲೇ ದಿನಗಳನ್ನು ಸಾಗಿಸುತ್ತಿದ್ದೇನೆ. ಅಲ್ಲದೇ, ಅಪ್ಪು ಸರ್ ಮನೆಯಲ್ಲಿ ನಾನು ಮಾಡುವಂತಹ ಕೆಲಸ ಏನೂ ಇರಲಿಲ್ಲ. ಸುಮ್ಮನೆ ಕೂರುವುದು ನನಗೆ ಕಷ್ಟ. ಹಾಗಾಗಿ ವಾಪಸ್ಸು ಊರಿಗೆ ಬಂದಿದ್ದೇನೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಯಾವತ್ತೂ ಅಪ್ಪು ಸರ್ ನನ್ನನ್ನು ಗನ್ ಮ್ಯಾನ್ ಆಗಿ ನೋಡಲಿಲ್ಲ. ಸಹೋದರನಂತೆ ಕಂಡರು ಎಂದು ನೆನಪಿಸಿಕೊಳ್ಳುತ್ತಾರೆ.

    Live Tv

  • ನಾಳೆ ಹೊಸಪೇಟೆಯಲ್ಲಿ ಪುನೀತ್ ಬೃಹತ್ ಪುತ್ಥಳಿ ಉದ್ಘಾಟನೆ

    ನಾಳೆ ಹೊಸಪೇಟೆಯಲ್ಲಿ ಪುನೀತ್ ಬೃಹತ್ ಪುತ್ಥಳಿ ಉದ್ಘಾಟನೆ

    ಪುನೀತ್ ರಾಜ್ ಕುಮಾರ್ ಅಗಲಿ ಏಳು ತಿಂಗಳು ಕಳೆದರೂ, ಅವರ ಆರಾಧನೆ ಮಾತ್ರ ಇನ್ನೂ ನಿಂತಿಲ್ಲ. ಅಪ್ಪು ಅಭಿಮಾನಿಗಳು ಒಂದಿಲ್ಲೊಂದು ರೀತಿಯಲ್ಲಿ ನೆಚ್ಚಿನ ನಟನನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಜೊತೆಗೆ ನೂರಾರು ಅಭಿಮಾನಿಗಳು ನಿತ್ಯವೂ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಬಂದು ನಮನ ಸಲ್ಲಿಸುತ್ತಲೇ ಇದ್ದಾರೆ. ಅಷ್ಟೊಂದು ಅಭಿಮಾನ ಮತ್ತು ಪ್ರೀತಿಯನ್ನು ಅಪ್ಪು ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.

    ಈಗಾಗಲೇ ಪುನೀತ್ ಅವರ ಪುತ್ಥಳಿಗಳು ರಾಜ್ಯದ ನಾನಾ ಕಡೆ ಸ್ಥಾಪಿಸಲಾಗಿದ್ದು, ನಾಳೆ ಹೊಸಪೇಟೆಯಲ್ಲಿ ಬೃಹತ್ ಪುತ್ಥಳಿಯ ಉದ್ಘಾಟನೆ ಆಗಲಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಅಪ್ಪು ಹುಡುಗರು ಡಾ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಬಳಗದಿಂದ ಈ ಪ್ರತಿಮೆ ಸ್ಥಾಪಿಸಲಾಗುತ್ತಿದ್ದು, ನಾಳೆ ಅದನ್ನು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರು ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

    ಈ ಕಾರ್ಯಕ್ರಮಕ್ಕೆ ಪುನೀತ್ ಅವರ ಸಹೋದರ, ನಟ ರಾಘವೇಂದ್ರ ರಾಜ್ ಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಸಂಗೀತ ನಿರ್ದೇಶಕ ಗುರುಕಿರಣ್ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಈ ಪುತ್ಥಳಿ ಉದ್ಘಾಟನೆಯ ಕಾರ್ಯಕ್ರಮವನ್ನು ರಾಘವೇಂದ್ರ ರಾಜ್ ಕುಮಾರ್ ಮತ್ತು ಕುಟುಂಬದವರು ನೆರವೇರಿಸಲಿದ್ದಾರೆ. ನಾಳೆ ಸಂಜೆ 4 ಗಂಟೆಗೆ ಪುನೀತ್ ರಾಜ್ ಕುಮಾರ್ ಸರ್ಕಲ್ ನಲ್ಲಿ ಈ ಪುತ್ಥಳಿ ಉದ್ಘಾಟನೆ ಆಗಲಿದೆ.

  • ಪುನೀತ್‌ಗೆ ಅವಮಾನ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಅಭಿಮಾನಿಗಳು ಮುತ್ತಿಗೆ

    ಪುನೀತ್‌ಗೆ ಅವಮಾನ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಅಭಿಮಾನಿಗಳು ಮುತ್ತಿಗೆ

    ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುವಾಗ ಕಾರಿನ ಮೇಲಿದ್ದ ಪುನೀತ್ ರಾಜ್ ಕುಮಾರ್ ಫೋಟೋ ಮತ್ತು ನಾಡಧ್ವಜವನ್ನು ತೆರುವುಗೊಳಿಸಿರುವ ಟಿಟಿಡಿ ನಡೆಗೆ ಕರ್ನಾಟಕ ರಾಜ್ಯ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಮತ್ತು ದೊಡ್ಮನೆ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಸ್ಪಷ್ಟನೆಗಾಗಿ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ತಿರುಪತಿ ತಿರುಮಲ ದೇವಸ್ಥಾನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಇದನ್ನೂ ಓದಿ : ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

    ಕಾರಿನ ಮೇಲಿದ್ದ ಅಪ್ಪು ಫೋಟೋ ಮತ್ತು ನಾಡಧ್ವಜವನ್ನು ತೆಗೆಸುತ್ತಿರುವ ವಿಡಿಯೋ ಹಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲೇ ಅಕ್ಷರ ರೂಪದ ಪ್ರತಿಭಟನೆಯ ದಾಖಲಿಸಲಾಗುತ್ತಿತ್ತು. ಇದೀಗ ದೇವಸ್ಥಾನಕ್ಕೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ಮಾಡಲಾಗುತ್ತಿದೆ. ಇದನ್ನೂ ಓದಿ : ವಾಮನ ತೆಕ್ಕೆಗೆ ತುಳುನಾಡ ಬೆಡಗಿ ರಚನಾ ರೈ

    ಪುನೀತ್ ರಾಜ್ ಕುಮಾರ್ ಅವರನ್ನು ಅಭಿಮಾನಿಗಳು ದೇವರ ರೀತಿಯಲ್ಲೇ ಆರಾಧಿಸುತ್ತಿದ್ದಾರೆ. ಅವರು ಮಾಡಿದ ಪುಣ್ಯದ ಕೆಲಸಗಳು ದೇವರಿಗೆ ಮಾಡಿದ ಸೇವೆಯಷ್ಟೇ ಪವಿತ್ರವಾಗಿವೆ. ಹೀಗಿದ್ದಾಗಲೂ ಅವರ ಫೋಟೋವನ್ನು ತಗೆದರೆ ಮಾತ್ರ ದೇವಸ್ಥಾನಕ್ಕೆ ಹೋಗಬಹುದು ಎನ್ನುವ ನಡೆ ಸರಿಯಾದದ್ದಲ್ಲ. ಇದನ್ನು ಪ್ರಶ್ನಿಸಿ, ಸ್ಪಷ್ಟನೆಗಾಗಿ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಟಿಟಿಡಿ ದೇವಸ್ಥಾನಕ್ಕೆ ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಾರೆ.

  • ಅಪ್ಪು ಪುಣ್ಯ ಸ್ಮರಣೆ: ಪುನೀತ್ ಸ್ಮಾರಕಕ್ಕೆ ಕುಟುಂಬದವರಿಂದ ಪೂಜೆ

    ಅಪ್ಪು ಪುಣ್ಯ ಸ್ಮರಣೆ: ಪುನೀತ್ ಸ್ಮಾರಕಕ್ಕೆ ಕುಟುಂಬದವರಿಂದ ಪೂಜೆ

    ವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 6 ತಿಂಗಳು ಕಳೆದಿದೆ. ಅಪ್ಪು ನಿಧನ ಇಂದಿಗೂ ಅಭಿಮಾನಿಗಳಿಗೆ, ಕುಟುಂಬದವರಿಗೆ ಕಾಡ್ತಿದೆ. ಅಪ್ಪು ಆರು ತಿಂಗಳ ಪುಣ್ಯ ತಿಥಿ ಹಿನ್ನೆಲೆ ಪುನೀತ್ ಕುಟುಂಬದವರಿಂದ ಪುನೀತ್ ಸ್ಮಾರಕಕ್ಕೆ ಪೂಜೆ ಸಲ್ಲಿಸಲಾಗಿದೆ.

    ಪುನೀತ್ ರಾಜ್‌ಕುಮಾರ್ ಅವರು ಇಹಲೋಕ ತ್ಯಜಿಸಿದ ದಿನದಿಂದ ಎಲ್ಲವನ್ನು ಅಚ್ಚುಕಟ್ಟಾಗಿ ನೆರವೇರಿಸಲಾಗುತ್ತಿದೆ. ಪ್ರತಿ ತಿಂಗಳು 29ನೇ ದಿನಾಂಕದಂದು ಕಂಠೀರವ ಸ್ಟುಡಿಯೋದಲ್ಲಿರೋ ಪುನೀತ್ ಸ್ಮಾರಕಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಈ ಬಾರಿಯು ಕೂಡ 6 ತಿಂಗಳ ಪುಣ್ಯ ಸ್ಮರಣೆ ಹಿನ್ನೆಲೆ ಪೂಜೆ ಕಾರ್ಯಗಳನ್ನು ದೊಡ್ಮನೆ ಕುಟುಂಬದವರು ಮಾಡಿದ್ದಾರೆ. ಇದನ್ನು ಓದಿ: ವಾಮನ ತೆಕ್ಕೆಗೆ ತುಳುನಾಡ ಬೆಡಗಿ ರಚನಾ ರೈ

    ಅಪ್ಪು ಪುಣ್ಯ ಸ್ಮರಣೆ ಹಿನ್ನೆಲೆ ರಾಘವೇಂದ್ರ ರಾಜ್‌ಕುಮಾರ್, ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಯುವರಾಜ್ ಮತ್ತು ಪುನೀತ್ ಸಹೋದರಿಯರು ಕೂಡ ಕಂಠೀರವ ಸ್ಟುಡಿಯೋದಲ್ಲಿರೋ ಪುನೀತ್  ಪುಣ್ಯ ಸ್ಮರಣೆಯಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದ್ದಾರೆ.

  • ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ

    ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ

    ಹೊಂಬಾಳೆ ಫಿಲ್ಮ್ಸ್ ಮೂಲಕ ಇಂದು ಸಿನಿಮಾ ಜಗತ್ತಿಗೆ ಲಾಂಚ್ ಆಗಿರುವ ಯುವ ರಾಜ್ ಕುಮಾರ್, ಈ ಮೊದಲು ಗುರು ಎಂದೇ ಗುರುತಿಸಿಕೊಂಡಿದ್ದರು. ಇವತ್ತಿಗೂ ಡಾ.ರಾಜ್ ಕುಟುಂಬದಲ್ಲಿ ಇವರನ್ನು ಕರೆಯುವುದು ಗುರು ಅಂತಾನೆ. ಆದರೆ, ಯುವ ರಾಜ್ ಕುಮಾರ್ ಎಂದು ಹೆಸರು ಬದಲಾಯಿಸಿಕೊಂಡಿದ್ದಕ್ಕೆ ಕಾರಣವೂ ಇದೆ.  ಇದನ್ನೂ ಓದಿ : ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ

    ಡಾ.ರಾಜ್ ಕುಟುಂಬದಲ್ಲಿ ಹೆಸರನ್ನು ಬದಲಾಯಿಸಿಕೊಂಡಿರುವುದು ಇದೇ ಮೊದಲೇನೂ ಅಲ್ಲ. ಸ್ವತಃ ಡಾ.ರಾಜ್ ಕುಮಾರ್ ಅವರೇ ತಮ್ಮ ಮೂಲ ಹೆಸರು ಮುತ್ತುರಾಜ್ ಎಂದಿದ್ದನ್ನು ರಾಜ್ ಕುಮಾರ್ ಆಗಿ ಬದಲಾದರು. ಅದನ್ನು ಅವರೇ ಮಾಡಿಕೊಳ್ಳದಿದ್ದರೆ, ಸಿನಿಮಾಗಾಗಿ ರಾಜ್ ಕುಮಾರ್ ಎಂದು ಬದಲಾಯಿತು. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ಆನಂತರ ಡಾ.ರಾಜ್ ಹಿರಿಯ ಪುತ್ರ, ನಟ ಶಿವರಾಜ್ ಕುಮಾರ್ ಹೆಸರು ಕೂಡ ಸಿನಿಮಾಗಾಗಿಯೇ ಬದಲಾಯಿತು. ನಾಗರಾಜು ಶಿವ ಪುಟ್ಟಸ್ವಾಮಿ ಎಂದಿದ್ದ ಜನ್ಮನಾಮವನ್ನು ಶಿವರಾಜ್ ಕುಮಾರ್ ಆಗಿ ಬದಲಾಯಿಸಿಕೊಂಡರು ಶಿವಣ್ಣ. ಈಗ  ಇದೇ ಹೆಸರಿನಿಂದಲೇ ಅವರು ಫೇಮಸ್. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ಆನಂತರ ಪುನೀತ್ ಅವರ ಸರದಿ. ಅಪ್ಪು ಜನ್ಮನಾಮ ಲೋಹಿತ್‍. ಹಿರಿಕರೊಬ್ಬರು ಲೋಹಿತ್ ಹೆಸರಿನವರಿಗೆ ಅಲ್ಪಾಯುಷ್ಯವೆಂದು ತಿಳಿಸಿ, ಪುನೀತ್ ಎಂದು ಹೆಸರನ್ನು ಬದಲಾಯಿಸಿದರು. ಅಪ್ಪು ಸಿನಿಮಾದಿಂದಾಗಿ ಪ್ರೀತಿಯಿಂದಲೇ ಅವರನ್ನು ಬಹುತೇಕರು ಅಪ್ಪು ಎಂದೇ ಕರೆದು ಅಭಿಮಾನಿಸುತ್ತಿದ್ದರು. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

    ಇದೀಗ ಗುರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಈ ಕುರಿತು ಅವರು ಸಂದರ್ಶನವೊಂದರಲ್ಲಿ ಹೇಳುತ್ತಾ, ‘ನಮ್ಮ ಕುಟುಂಬದಲ್ಲಿ ಹೆಸರು ಬದಲಾಯಿಸಿಕೊಂಡಿರುವುದು ಇದೇ ಮೊದಲೇನೂ ಅಲ್ಲ. ನನ್ನ ಜನ್ಮನಾಮದ ಬಗ್ಗೆ ವಿಚಾರಿಸಿದಾಗ ‘ಯ’ ಅಕ್ಷರ ಅದೃಷ್ಟವೆಂದು ಹೇಳಿದರು. ಹಾಗಾಗಿ ಯುವರಾಜ್ ಎಂದು ಬದಲಾಯಿಸಲಾಯಿತು’ ಎಂದಿದ್ದರು.