Tag: ಅಪ್ಪು

  • ಅಪ್ಪು ಕನಸಿನ ಗಂಧದಗುಡಿ ದರ್ಶನ- ಥಿಯೇಟರ್ ಅಂಗಳದಲ್ಲಿ ಅಭಿಮಾನಿಗಳ ಸಂಭ್ರಮ

    ಅಪ್ಪು ಕನಸಿನ ಗಂಧದಗುಡಿ ದರ್ಶನ- ಥಿಯೇಟರ್ ಅಂಗಳದಲ್ಲಿ ಅಭಿಮಾನಿಗಳ ಸಂಭ್ರಮ

    ಬೆಂಗಳೂರು: ಪುನೀತ್‌ ರಾಜ್‌ ಕುಮಾರ್ (puneeth Raj Kumar) ಕೊನೆಯ ಚಿತ್ರ ಗಂದಧಗುಡಿ (Gandhada Gudi) ಬೆಳ್ಳಿತೆರೆಯಲ್ಲಿ ರಾರಾಜಿಸಿದೆ. ಗಂಧದಗುಡಿ ಚಿತ್ರ ಇಂದು ಆಫಿಷಿಯಲ್ ತೆರೆಕಂಡಿದೆ.

    `ಪರಮಾತ್ಮ’ನ ಕನಸಿನ ಕೂಸು ಬೆಳ್ಳಿ ತೆರೆಗೆ ಬಂದಿದೆ. ರಾಜ್ಯಾದ್ಯಂತ ಗಂಧದಗುಡಿ ಸಾಕ್ಷ್ಯಚಿತ್ರ ಪ್ರದರ್ಶನವಾಗಿದೆ. ಇಂದು ಬೆಳಗ್ಗೆ 6 ಗಂಟೆಯಿಂದಲೇ ಥಿಯೇಟರ್ ಗಳಲ್ಲಿ ಗಂಧದಗುಡಿ ಪ್ರದರ್ಶನ ಕಂಡಿದೆ. ಅಭಿಮಾನಿಗಳು ದೊಡ್ಮನೆ ಹುಡುಗನನ್ನ ಕಣ್ತುಂಬಿಸಿಕೊಂಡಿದ್ದಾರೆ. ಥಿಯೇಟರ್ ಗಳೆಲ್ಲಾ ಹೌಸ್‍ಫುಲ್ ಆಗಿದ್ದು, ಎಲ್ಲೆಲ್ಲೂ ಅಪ್ಪು ಜಾತ್ರೆ ನಡೆಯುತ್ತಿದೆ.

    ಟೀಶರ್ಟ್, ಪುಲ್ ಓವರ್, ಶರ್ಟ್ ಮೇಲೆ ಅಪ್ಪು (Appu) ಭಾವಚಿತ್ರಗಳು ರಾರಾಜಿಸುತ್ತಿದೆ. ಅಪ್ಪು ಭಾವಚಿತ್ರವಿರುವ ಟೀ ಶರ್ಟ್ ಗಳನ್ನ ಹಾಕಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಗಂಧದಗುಡಿಯ ಅಪ್ಪು ನೋಡಿ ಜೈಕಾರ ಶಿಳ್ಳೆ ಹಾಕಿ ಸ್ವಾಗತಿಸಿದ್ದಾರೆ. ಅದಕ್ಕೂ ಮುನ್ನ ಗುರುವಾರ ಏರ್ಪಡಿಸಲಾಗಿದ್ದ ಪ್ರೀಮಿಯರ್ ಶೋ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ. ನಗರದ ವಿವಿಧ ಮಲ್ಟಿಫ್ಲೆಕ್ಸ್ ಗಳಲ್ಲಿ ಪ್ರೀಮಿಯರ್ ಶೋ ನಡೆದಿದೆ. ಇದನ್ನೂ ಓದಿ: ಗಂಧದಗುಡಿ ಸಿನಿಮಾ ಅಲ್ಲವೇ ಅಲ್ಲ, ಅದೊಂದು ಅನುಭೂತಿ

    ಖಾಸಿ ಮಾಲ್ ಲ್ಲಿ ಸೆಲೆಬ್ರಿಟಿಗಳೂ ಚಿತ್ರ ವೀಕ್ಷಿಸಿದ್ದಾರೆ. ಗಣ್ಯರನ್ನ ಖುದ್ದು ಆಹ್ವಾನಿಸಿದ್ದ ಅಶ್ವಿನಿ ಪುನೀತ್ ರಾಜ್ ಕುಮಾರ್ ಎಲ್ಲರ ಜೊತೆ ಕುಳಿತು ಚಿತ್ರ ವೀಕ್ಷಿಸಿದ್ದಾರೆ. ಇನ್ಫೋಸಿಸ್ ನ ಸುಧಾಮೂರ್ತಿ ಸೇರಿ ನಟಿ ರಮ್ಯಾ, ರಕ್ಷಿತ್, ರಿಷಬ್, ದೇವರಾಜ್, ಪ್ರಜ್ವಲ್ ದೇವರಾಜ್, ಸಂಗೀತಾ ಶೃಂಗೇರಿ ಸೇರಿ ಹಲವರು ಚಿತ್ರ ವೀಕ್ಷಿಸಿದ್ರು. ಪ್ರಕೃತಿ ಮಡಿಲಲ್ಲಿ ಅಪ್ಪು ಕಳೆದಿರುವ ಅತ್ಯದ್ಭುತ ಕ್ಷಣಗಳನ್ನ ಕಣ್ತುಂಬಿಕೊಂಡ ಅಭಿಮಾನಿಗಳು ಹಾಗೂ ಅಪ್ಪು ಆಪ್ತ ಕಲಾವಿದರು ಭಾವುಕರಾದ್ರು. ಅಪ್ಪು ಅಪ್ಪುವಾಗಿ ಜೀವಿಸಿರುವ ಚಿತ್ರ ‘ಗಂಧದಗುಡಿ’ ವೀಕ್ಷಿಸಿದ ಅಪ್ಪು ಸ್ನೇಹಿತರು ಮಂತ್ರಮುಗ್ಧರಾಗಿದ್ದಾರೆ. ಇದನ್ನೂ ಓದಿ: ‘ಗಂಧದಗುಡಿ’ ಪೇಯ್ಡ್ ಪ್ರೀಮಿಯರ್ ಟಿಕೆಟ್ ಖಾಲಿ ಖಾಲಿ

    Live Tv
    [brid partner=56869869 player=32851 video=960834 autoplay=true]

  • ಗಂಧದಗುಡಿ ಸಿನಿಮಾ ಅಲ್ಲವೇ ಅಲ್ಲ, ಅದೊಂದು ಅನುಭೂತಿ

    ಗಂಧದಗುಡಿ ಸಿನಿಮಾ ಅಲ್ಲವೇ ಅಲ್ಲ, ಅದೊಂದು ಅನುಭೂತಿ

    ಪುನೀತ್ ರಾಜ್‍ಕುಮಾರ್ (Puneeth Rajkumar) ಗಂಧದಗುಡಿ (Gandhada Gudi)  ಹೆಸರಿನಲ್ಲಿ ಡಾಕ್ಯುಮೆಂಟರಿ ಮಾಡಿದ್ದಾರೆ ಅಂದಾಗ, ಕುತೂಹಲಕ್ಕಿಂತ ಅನುಮಾನಿಸಿದವರೆ ಹೆಚ್ಚು. ಓಟಿಟಿ (OTT) ಮೂಲಕ ಜಗತ್ತಿನ ಸಿನಿಮಾಗಳು ನಮ್ಮುಂದಿರುವಾಗ, ಡಿಸ್ಕವರಿ ಚಾನೆಲ್‍ಗಳು ನಮ್ಮ ಬೆರಳ ತುದಿಯಲ್ಲೇ ನಲಿಯುತ್ತಿರುವಾಗ, ಅದಕ್ಕಿಂತ ಅಪ್ಪು (Appu) ಇನ್ನೇನು ಮಾಡುವುದಕ್ಕೆ ಸಾಧ್ಯ? ಅಂತ ಅನಿಸಿದ್ದೂ ಇದೆ.

    ಪುನೀತ್ ಡ್ಯಾನ್ಸ್, ಪುನೀತ್ ಡೈಲಾಗ್, ಪುನೀತ್ ನಟನೆ, ಪುನೀತ್ ನಗುವನ್ನು ಬೆಳ್ಳಿ ಪರದೆಯಲ್ಲಿ ನೋಡಿ, ಕಣ್ತುಂಬಿಕೊಂಡಿರುವ ಅಭಿಮಾನಿಗಳು, ಇದ್ಯಾವುದೂ ಇಲ್ಲದ ಕಾಡು ಮೇಡುಗಳನ್ನು ನೋಡುವುದಕ್ಕೆ ಇಷ್ಟ ಪಡುತ್ತಾರಾ ಅಂತ ಚರ್ಚೆ ಮಾಡಿದ್ದೂ ಇದೆ. ಆದರೆ, ಅದೆಲ್ಲದರ ಆಚೆ ಗಂಧದ ಗುಡಿ ಹೊಸ ಅನುಭವವನ್ನು ನೀಡುತ್ತದೆ. ಸಿನಿಮಾ ಕೊಡುವ ಥ್ರಿಲ್‍ಗಿಂತ ಅಪ್ಪು ಇಲ್ಲಿ ಹೊಸ ಅನುಭೂತಿಯನ್ನು ಯಥಾವತ್ತಾಗಿ ಕಟ್ಟಿ ಕೊಡುತ್ತಾರೆ. ಇದನ್ನೂ ಓದಿ: ಪುನೀತ್ ಗೆ ‘ಕರ್ನಾಟಕ ರತ್ನ’ ಪ್ರದಾನ ಸಮಾರಂಭಕ್ಕೆ ರಜನಿಕಾಂತ್ ಗೆ ಆಹ್ವಾನ

    ಅವರು ಬೆಟ್ಟ ಹತ್ತಿದರೇ ನಾವೇ ಬೆಟ್ಟ ಹತ್ತಿದಷ್ಟು ಖುಷಿ, ಅವರು ಕಾಡಲ್ಲಿ ನಡೆದು ಹೊರಟರೇ ಅವರನ್ನು ನಾವೇ ಹಿಂಬಾಲಿಸುವಂತಹ ಅನುಭವ. ನಡು ನಡುವೆ ಅಪ್ಪು ಮಾತು, ತಮಾಷೆ, ಭಯ ಎಲ್ಲವೂ ಇಷ್ಟ ಇಷ್ಟ. ಆನೆ, ಹುಲಿ, ಕರಡಿ, ಚಿರತೆ, ಕಪ್ಪೆ, ಹಾವು, ಚೇಳು, ಜಿಂಕೆ, ಪಾತರಗಿತ್ತಿ, ಮೀನು, ಮೊಸಳೆ ಅಬ್ಬಬ್ಬಾ ಎಷ್ಟೊಂದು ಪಾತ್ರಗಳು? ಅವಕ್ಕೆ ನಟನೆ ಕಲಿಸಿದವರಾರು, ಹಾಡು ಹೇಳಿಕೊಟ್ಟವರು ಯಾರು? ಅವು ಏಕೆ ಹಾಗೆ ಜೀವಿಸುತ್ತವೆ? ಇವೆಲ್ಲ ಪ್ರಶ್ನೆಗಳು ಪುನೀತ್ ಉತ್ತರ ಕೊಡುತ್ತಾ, ಕೊಡಿಸುತ್ತಾ ಸಾಗುತ್ತಾರೆ. ಇದೇ ಗಂಧದ ಗುಡಿಯ ಬ್ಯೂಟಿ. ಇದನ್ನೂ ಓದಿ: ಗಂಧದ ಗುಡಿ: ಅಶ್ವಿನಿ ಪುನೀತ್ ರಾಜ್ ಕುಮಾರ್ ಮೊದಲ ಸಂದರ್ಶನ

    ಕರ್ನಾಟಕ ಸಂಸ್ಕೃತಿಗಳ ತವರು. ಕಾಡು ಮೇಡುಗಳ ನಾಡು, ಆರಾಧನೆಗಳ ಬೀಡು. ಎಲ್ಲವನ್ನೂ 96 ನಿಮಿಷಗಳಲ್ಲಿ ಹಿಡಿದಿಟ್ಟು ನಮ್ಮನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ನಿರ್ದೇಶಕ ಅಮೋಘ ವರ್ಷ (Amoghavarsha), ಕ್ಯಾಮೆರಾ ಟೀಮ್, ಹಿನ್ನೆಲೆ ಸಂಗೀತ ಈ ಗಂಧದಗುಡಿಯ ಘಮವನ್ನು ಮತ್ತಷ್ಟು ಹೆಚ್ಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಕಳೆದ ವರ್ಷ ಇದೇ ದಿನ ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದ ಅಪ್ಪು!

    ಕಳೆದ ವರ್ಷ ಇದೇ ದಿನ ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದ ಅಪ್ಪು!

    ವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Powerstar PuneethRajkumar) ಈಗ ನೆನಪು ಮಾತ್ರ. ಜೊತೆಗೆ ಇರದ ಜೀವ ಎಂದಿಗೂ ಜೀವಂತ ಅನ್ನುವ ಹಾಗೆ ಪುನೀತ್ ಆಗಲಿ ವರ್ಷ ಆಗುತ್ತಿದ್ರೂ ಅವರ ನೆನಪು ಮಾತ್ರ ಅಜರಾಮರ.

    ಹೌದು. ಪುನೀತ್ ರನ್ನ ಕಳೆದುಕೊಂಡು ಇದೇ ತಿಂಗಳ 29 ಕ್ಕೆ ವರ್ಷ ಕಳೆಯಲಿದೆ. ಅಂದಹಾಗೆ ಕಳೆದ ವರ್ಷ ಇದೇ ದಿನ ಅಕ್ಟೋಬರ್ 26 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಮಣ್ಯ ದೇವಾಲಯ (Ghat Subrahamanya) ಕ್ಕೆ ಅಪ್ಪು ಭೇಟಿ ನೀಡಿದ್ದರು.

    ದೇವರ ದರ್ಶನ ಪಡೆದ ನಂತರ ಪುನೀತ್ ದೇವಾಲಯದ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಕೆಲ ಕಾಲ ಮಾತನಾಡಿದ್ದರು. ಈ ವೇಳೆ ಪುಟಾಣಿ ಅಪ್ಪು ಅಭಿಮಾನಿ ಸಹ ಪುನೀತ್ ರ ಸಿನಿಮಾದ ಡೈಲಾಗ್ ಹೇಳಿ ಅಪ್ಪು ರನ್ನ ಸಂತೋಷಪಡಿಸಿದ್ದರು. ಇದನ್ನೂ ಓದಿ: Exclusive -‘ಕಾಂತಾರ’ ನೋಡಿದ ರಜನಿಕಾಂತ್: ಕಾಲ್ ಮಾಡಿ ಸರ್ ಪ್ರೈಸ್ ಕೊಟ್ಟ ತಲೈವ

    ಇದೀಗ ಇದೇ ಫೋಟೋಗಳನ್ನ ಘಾಟಿ ದೇವಾಲಯದ ಸಿಬ್ಬಂದಿ ಹಂಚಿಕೊಂಡು ಅಪ್ಪು ಅವರ ನೆನಪು ಮಾಡಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪುನೀತ್ ರಾಜಕುಮಾರ್ ಪುಣ್ಯಸ್ಮರಣೆಗೆ ‘ಮತ್ತೊಮ್ಮೆ ಬಾ ಮಗುವಾಗಿ ಬಾ’ ಹಾಡು ರಿಲೀಸ್

    ಪುನೀತ್ ರಾಜಕುಮಾರ್ ಪುಣ್ಯಸ್ಮರಣೆಗೆ ‘ಮತ್ತೊಮ್ಮೆ ಬಾ ಮಗುವಾಗಿ ಬಾ’ ಹಾಡು ರಿಲೀಸ್

    ಪುನೀತ್ ರಾಜ್ ಕುಮಾರ್ (Puneeth Rajkumar) ನಿಧನಾನಂತರ ಅವರ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಅಲ್ಲದೇ, ಅವರ ಅಭಿಮಾನಿಗಳು ನಾನಾ ರೀತಿಯಲ್ಲಿ ಅವರನ್ನು ಸ್ಮರಿಸುತ್ತಿದ್ದಾರೆ. ಸಿನಿಮಾ ತಂಡಗಳು ಕೂಡ ಅಪ್ಪು (Appu) ಸ್ಮರಣೆ ಮಾಡುತ್ತಿವೆ. ಅವರ ಕನಸಾಗಿದ್ದ ಗಂಧದ ಗುಡಿ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಈ ಹೊತ್ತಿನಲ್ಲಿ ಅವರಿಗಾಗಿ ಹಾಡೊಂದು ಸಿದ್ಧವಾಗಿದೆ. ಪುನೀತ್ ಅವರ ಪುಣ್ಯ ಸ್ಮರಣೆಗಾಗಿ ಈ ಹಾಡು ಸಿದ್ಧಗೊಂಡಿದೆ.

    ಜನಪದ, ಸಿನಿಮಾ‌ ಸೇರಿದಂತೆ ಸಾಕಷ್ಟು ಶೈಲಿಯ ಹಾಡುಗಳನ್ನು (Song) ಹಲವಾರು ವರ್ಷಗಳಿಂದ ಸಂಗೀತಪ್ರಿಯರಿಗೆ ನೀಡುತ್ತಾ ಬಂದಿರುವ ಖ್ಯಾತ ಜಂಕಾರ್ ಮ್ಯೂಸಿಕ್ ಸಂಸ್ಥೆ ಪುನೀತ್ ರಾಜಕುಮಾರ್ ಪ್ರಥಮ ಪುಣ್ಯಸ್ಮರಣೆಯ ನೆನಪಿಗಾಗಿ “ಮತ್ತೊಮ್ಮೆ ಬಾ ಮಗುವಾಗಿ ಬಾ” ಎಂಬ ಹಾಡನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ:ಚೇತನ್ ಹೇಳಿಕೆ ಬಗ್ಗೆ ಏನೂ ಹೇಳಲ್ಲ: ರಿಷಬ್ ಶೆಟ್ಟಿ

    ಪುನೀತ್ ಎಸ್ ಎಸ್ ಬರೆದಿರುವ ಈ ಹಾಡನ್ನು ಅರ್ಫಜ್ ಉಲ್ಲಾಳ್ ಸುಮಧುರವಾಗಿ ಹಾಡಿದ್ದಾರೆ. ಅವರೆ ಸಂಗೀತವನ್ನು ನೀಡಿದ್ದಾರೆ. ನಗುವಿನ ರಾಜ ಕನ್ನಡದ ತೇಜ ಡಾ|| ಪುನೀತ್ ರಾಜ್‍ಕುಮಾರ್ ಅವರ ಸ್ಮರಣೆಗಾಗಿ ಎಂಬ ವಾಕ್ಯದೊಂದಿಗೆ ಈ ಹಾಡು ಬಿಡುಗಡೆಯಾಗಿದೆ. ಅಭಿಮಾನಿಗಳ ಆರಾಧ್ಯದೈವ ಪುನೀತ್ ರಾಜ್‍ಕುಮಾರ್ ಅವರ ಮೇಲಿರುವ ಅಪಾರ ಅಭಿಮಾನ ಈ ಹಾಡಿನಲ್ಲಿ ಎದ್ದು ಕಾಣುತ್ತಿದೆ. ಬಿಡುಗಡೆಯಾದ ಕ್ಷಣದಿಂದಲೇ ಈ ಹಾಡಿಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ಪುನೀತ್  ಪರ್ವ’ ಕಾರ್ಯಕ್ರಮಕ್ಕೆ ಪೊಲೀಸ್ ಸರ್ಪವಾಗಲು

    ‘ಪುನೀತ್ ಪರ್ವ’ ಕಾರ್ಯಕ್ರಮಕ್ಕೆ ಪೊಲೀಸ್ ಸರ್ಪವಾಗಲು

    ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ‘ಪುನೀತ್ ಪರ್ವ’ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಪುನೀತ್ ನಟನೆಯ ಕಟ್ಟಕಡೆಯ ಡಾಕ್ಯುಮೆಂಟರಿ ಮಾದರಿಯ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕೂಡ ಇದಾಗಿದ್ದು, ಭಾರತೀಯ ಸಿನಿಮಾ ರಂಗದ ಅನೇಕ ದಿಗ್ಗಜರು ಸಮಾರಂಭದಲ್ಲಿ ಭಾಗಿ ಆಗುತ್ತಿದ್ದಾರೆ. ಅಲ್ಲದೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಹ್ವಾನ ನೀಡಲಾಗಿದೆ.

    ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಮಾತ್ರವಲ್ಲ, 40 ಸಾವಿರಕ್ಕೂ ಅಧಿಕ ಅಭಿಮಾನಿಗಳು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಿರುವುದರಿಂದ ಪೊಲೀಸ್ ಬಂದೋಬಸ್ತ್ ಕೂಡ ಮಾಡಿಕೊಳ್ಳಲಾಗಿದೆ. ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭವು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುವುದಕ್ಕಾಗಿ ಬೆಂಗಳೂರು ಪೊಲೀಸರು ಭಾರೀ ಸಿದ್ದತೆಯನ್ನೇ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ʻಕಾಂತಾರʼ ಸಿನಿಮಾ ನೋಡದ ರಶ್ಮಿಕಾ ಮಂದಣ್ಣ ಬಗ್ಗೆ ಪ್ರಮೋದ್‌ ಶೆಟ್ಟಿ ಪ್ರತಿಕ್ರಿಯೆ

    ಈ ಕುರಿತು ಮಾಹಿತಿ ನೀಡಿದ ಡಿಸಿಪಿ ಶ್ರೀನಿವಾಸ್ ಗೌಡ, 1400 ಪೊಲೀಸರ್, 180 ಪಿಎಸ್.ಐ, 60 ಇನ್ಸೆಪೆಕ್ಟರ್, 14 ಎಸಿಪಿ ಹಾಗೂ 3 ಮಂದಿ ಡಿಸಿಪಿಗಳನ್ನು ನಿಯೋಜಿಸಲಾಗಿದೆ. ಅಷ್ಟೇ ಅಲ್ಲದೇ, 20 ಕೆ.ಎಸ್.ಆರ್ಪಿ ತುಕಡಿ ಕೂಡ ಆ ಸ್ಥಳದಲ್ಲಿ ಇರಲಿದೆ. ಕಾರ್ಯಕ್ರಮವನ್ನು ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಕೂಡ ಮಾಡಲಾಗಿದ್ದು, ಪಾಸ್ ಇದ್ದವರಿಗೆ ಪ್ರವೇಶವನ್ನು ಕಲ್ಪಿಸಲಾಗಿದೆ.

    ಭಾರತೀಯ ಸಿನಿಮಾ ರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿರುವುದರಿಂದ ಮತ್ತು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾವಣೆಗೊಳ್ಳುವುದರಿಂದ ಈ ಪ್ರಮಾಣದಲ್ಲಿ ಭದ್ರತೆಯನ್ನು ಕಲ್ಪಿಸಲಾಗಿದ್ದು, ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಅಲ್ಲದೇ, ಪಾರ್ಕಿಂಗ್ ಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲುವ ಮೂಲಕ ಟ್ರಾಫಿಕ್ ಜಾಮ್ ತಪ್ಪಿಸಲು ಕಸರತ್ತು ನಡೆಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್: ವೇದಿಕೆ ಮೇಲೆ ಇಷ್ಟೂ ನಟರನ್ನೂ ನೋಡಬಹುದು

    ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್: ವೇದಿಕೆ ಮೇಲೆ ಇಷ್ಟೂ ನಟರನ್ನೂ ನೋಡಬಹುದು

    ಪುನೀತ್ ರಾಜ್ ಕುಮಾರ್ (Puneeth Rajkumar) ಕನಸಿನ ಗಂಧದ ಗುಡಿ (Gandhad Gudi) ಪ್ರಿ ರಿಲೀಸ್ ಇವೆಂಟ್ ಗೆ ಬೆಂಗಳೂರಿನ ಅರಮನೆ ಮೈದಾನ ಸಿಂಗಾರಗೊಳ್ಳುತ್ತಿದೆ. ಇದೊಂದು ಅಪ್ಪು ಹಬ್ಬ ಎಂದೇ ಭಾವಿಸಲಾಗಿದ್ದು, ದಕ್ಷಿಣ ಸಿನಿಮಾ ರಂಗದ ಅನೇಕ ಕಲಾವಿದರು ಇದರಲ್ಲಿ ಭಾಗಿಯಾಗಲಿದ್ದಾರೆ. ಅಭಿಮಾನಿಗಳಿಗೂ ಕೂಡ ಉಚಿತವಾಗಿ ಪ್ರವೇಶ ಕಲ್ಪಿಸಿದ್ದು, ನಾನಾ ರೀತಿಯ ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

    ಈ ಕುರಿತು ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ (Raghavendra Rajkumar), ‘ಅಪ್ಪು ಇದ್ದರೆ ಎಷ್ಟು ಅದ್ಧೂರಿಯಾಗಿ ಈ ಕಾರ್ಯಕ್ರಮವನ್ನು ಮಾಡುತ್ತಿದ್ದರೋ, ಅಷ್ಟೇ ಅದ್ದೂರಿಯಾಗಿಯೇ ಪ್ಲ್ಯಾನ್ ಮಾಡಿದ್ದೇವೆ. ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಹಾಡು, ಡಾನ್ಸ್ ಸೇರಿದಂತೆ ಇತರ ಕಾರ್ಯಕ್ರಮಗಳನ್ನೂ ಆಯೋಜನೆ ಮಾಡಲಾಗಿದೆ. ಅಭಿಮಾನಿಗಳು ಎಷ್ಟೇ ಬಂದರೂ, ಎಲ್ಲರಿಗೂ ಕಾರ್ಯಕ್ರಮವನ್ನು ತೋರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು. ಇದನ್ನೂ ಓದಿ:ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್

    ಈ ಕಾರ್ಯಕ್ರಮಕ್ಕೆ ತಮಿಳು ಸಿನಿಮಾ ರಂಗದ ಕಮಲ್ ಹಾಸ್, ಪ್ರಭುದೇವ, ಸೂರ್ಯ, ತೆಲುಗು ನಟರಾದ ರಾಣಾ ದಗ್ಗುಬಾರಿ, ನಂದಮೂರಿ ಬಾಲಕೃಷ್ಣ, ಕನ್ನಡದಿಂದ ಸುದೀಪ್, ಯಶ್, ರಮ್ಯಾ, ರವಿಚಂದ್ರನ್, ಜಗ್ಗೇಶ್ ರಮೇಶ್ ಅರವಿಂದ್, ನೀನಾಸಂ ಸತೀಶ್, ಶ್ರೀಮುರಳಿ, ಗಣೇಶ್, ಉಪೇಂದ್ರ ಸೇರಿದಂತೆ ಬಹುತೇಕ ಕಲಾವಿದರು ಹಾಜರಿರಲಿದ್ದಾರೆ. ಬಹುತೇಕ ಕಲಾವಿದರಿಗೂ ಪ್ರತ್ಯೇಕ ಆಹ್ವಾನವನ್ನು ಅಪ್ಪು ಕುಟುಂಬ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಪುನೀತ್ ರಾಜ್ ಕುಮಾರ್ ನೆನಪಿಗೆ ಅಪ್ಪು ಹೆಸರಿನಲ್ಲಿ ಫುಡ್ ಫೆಸ್ಟ್

    ಪುನೀತ್ ರಾಜ್ ಕುಮಾರ್ ನೆನಪಿಗೆ ಅಪ್ಪು ಹೆಸರಿನಲ್ಲಿ ಫುಡ್ ಫೆಸ್ಟ್

    ನ್ನೇನು ಕೆಲವೇ ಕೆಲವು ದಿನಗಳಲ್ಲಿ ಗಂಧದ ಗುಡಿಯಲ್ಲಿ ಪುನೀತ್ ರಾಜ್ ಕುಮಾರ್ (Puneeth Rajkumar)  ಬೆಳ್ಳಿ ತೆರೆ ಮೇಲೆ ರಾರಾಜಿಸಲಿದ್ದಾರೆ. ಕನ್ನಡನಾಡು ಮಾತ್ರ ಅಲ್ಲ, ದೇಶದ ಜನರು ಅಷ್ಟೇ ಅಲ್ಲ. ಇಡೀ ವಿಶ್ವವೇ ಪುನೀತ್ ರಾಜಕುಮಾರ್ ಕೊನೇ ಚಿತ್ರವನ್ನು ನೋಡಲು ತುದಿಗಾಲಲ್ಲಿ ನಿಂತಿದೆ. ಆ ಚಿತ್ರವನ್ನು ಬರ ಮಾಡಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಸಜ್ಜಾಗಿದ್ದಾರೆ. ಅಭಿಮಾಗಳ ಜೊತೆ ಅಶ್ವಿನಿ ಪುನೀತ್ ರಾಜಕುಮಾರ್ ಕೂಡ ಕೈ ಜೋಡಿಸಿದ್ದಾರೆ. ಅಪ್ಪು ಕಡೇ ಚಿತ್ರವನ್ನು ಎಲ್ಲರಿಗೂ ತಲುಪಿಸುವುದು ಮಾತ್ರ ಅಲ್ಲ, ಎಲ್ಲರಿಗೂ ಹೊಸ ಸಂದೇಶವನ್ನು ಈ ಮೂಲಕ ನೀಡಲು ರೆಡಿಯಾಗಿದ್ದಾರೆ. ಇದೇ 21ರಂದು ಅದ್ದೂರಿ ಪ್ರಿ ಇವೆಂಟ್ ರಿಲೀಸ್ ಕಾರ್ಯಕ್ರಮ ಕೂಡ ಬೆಂಗಳೂರಿನಲ್ಲಿ ನಡೆಯಲಿದೆ.

    ಗಂಧದಗುಡಿ (Gandhad Gudi) ಬಿಡುಗಡೆ ಮುನ್ನ ನಡೆಯುವ ಈ ಕಾರ್ಯಕ್ರಮದಲ್ಲಿ ಭಾರತದ ಸಿನಿ ದಿಗ್ಗಜರು ಹಾಜರಾಗಲಿದ್ದಾರೆ. ಎಲ್ಲ ಭಾಷೆಯ ಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಯಾರೆಲ್ಲ ಬರುತ್ತಾರೆ ಎನ್ನುವುದು ಪಕ್ಕಾ ಆಗಿದೆ. ಜೊತೆಗೆ ಅಪ್ಪು (Appu) ಬಳಗ ಎಲ್ಲ ಕಾರ್ಯಗಳನ್ನು ನಿಯತ್ತಾಗಿ ಮಾಡುತ್ತಿದೆ. ಇದೇ ಪ್ರಿ ಇವೆಂಟ್ ಕಾರ್ಯಕ್ರಮ ನಡೆದ ಮರುದಿನ, ಅಂದರೆ ಅಕ್ಟೋಬರ್ 22 ಹಾಗೂ 23 ರಂದು ಬೆಂಗಳೂರಿನಲ್ಲಿ ಪುನೀತ್ ಫುಡ್ ಫೆಸ್ಟ್ (Food Fest) ಅದ್ದೂರಿಯಾಗಿ ನಡೆಯಲಿದೆ. ಅಪ್ಪುಗೆ ಇಷ್ಟವಾದ ನಾನ್ ವೆಜ್ ತಿನಿಸುಗಳನ್ನು ಕೆಲವು ಹೋಟೆಲ್‌ಗಳಲ್ಲಿ ಮಾಡಲಾಗುತ್ತದೆ. ಅದರಲ್ಲಿ ಮೋದಿ ಆಸ್ಪತ್ರೆ ಬಳಿಯ ಡಾ.ರಾಜ್ ದೊನ್ನೆ ಬಿರಿಯಾನಿ ಮನೆ ಕೂಡ ಒಂದು. ಖ್ಯಾತ ನಿರೂಪಕಿ ಅನುಶ್ರೀ (Anushree) ಹೋಟೆಲ್ ಉದ್ಘಾಟಿಸಿದರು.

    ಈ ಹೋಟೆಲ್‌ನಲ್ಲಿ ಅಪ್ಪುಗೆ ಬಲು ಇಷ್ಟವಾದ ಮಟನ್ ಚಾಪ್ಸ್ ಸೇರಿದಂತೆ ಮತ್ತಿತರ ತಿನಿಸುಗಳನ್ನು ಮಾಡಲಾಗುತ್ತದೆ. ಅಪ್ಪು ಅಬಿಮಾನಿಗಳು ಇದನ್ನು ಸವಿಯಬಹುದು. ಬರೀ ಇಲ್ಲಷ್ಟೇ ಅಲ್ಲ, ಬೆಂಗಳೂರಿನ ಅನೇಕ ಹೋಟೆಲ್‌ಗಳು ಈ ಫುಡ್‌ಫೆಸ್ಟ್ನಲ್ಲಿ ಭಾಗವಹಿಸಲಿವೆ. ವೆರೈಟಿ ವೆರೈಟಿ ಅಪ್ಪುಗೆ ಇಷ್ಟವಾದ ನಾನ್‌ವೆಜ್ ಐಟಂ ಮಾಡಲಾಗುತ್ತದೆ. ಹೋಟೆಲ್‌ನಲ್ಲೂ ಇದನ್ನು ತಿನ್ನಬಹುದು. ಅಥವಾ ಆರ್ಡರ್ ಕೂಡ ಮಾಡಬಹುದು. ಇದನ್ನೂ ಓದಿ:ದೊಡ್ಮನೆಯಲ್ಲಿ ಮಕ್ಕಳ ದರ್ಬಾರ್: ಮಗುವನ್ನು ತಬ್ಬಿ ಗಳಗಳನೆ ಅತ್ತ ಮಯೂರಿ

    ಅಪ್ಪು ಅಗಲಿ ಇದೇ ಅಕ್ಟೋಬರ್ ಕೊನೆಯ ವಾರಕ್ಕೆ ಒಂದು ವರ್ಷ. ಮೊದಲ ವರ್ಷದ ಪುಣ್ಯ ತಿಥಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಪ್ಪು ಕುಟುಂಬ ಮತ್ತು ಅಭಿಮಾನಿಗಳ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ, ಅಪ್ಪು ಅವರ ಕನಸುಗಳಲ್ಲಿ ಒಂದಾಗಿದ್ದ ಗಂಧದ ಗುಡಿ ಡಾಕ್ಯುಮೆಂಟರಿ ಕೂಡ ಬಿಡುಗಡೆ ಆಗುತ್ತಿದೆ. ಅಭಿಮಾನಿಗಳು ಕೂಡ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನೆಚ್ಚಿನ ನಟನನ್ನು ನೆನೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಯುವ ದಸರಾದಲ್ಲಿ ಅಪ್ಪು ನಮನ- ಗಂಧದ ಗುಡಿ ಟೀಸರ್ ನೋಡಿ ಕಣ್ಣೀರಿಟ್ಟ ಅಶ್ವಿನಿ

    ಯುವ ದಸರಾದಲ್ಲಿ ಅಪ್ಪು ನಮನ- ಗಂಧದ ಗುಡಿ ಟೀಸರ್ ನೋಡಿ ಕಣ್ಣೀರಿಟ್ಟ ಅಶ್ವಿನಿ

    – ಪುನೀತ್ ಹಾಡಿಗೆ ಸೊರೆಗೊಂಡ ಪ್ರೇಕ್ಷಕರ ಕಣ್ಮನ

    ಮೈಸೂರು: ಅಭಿಮಾನಿಗಳ ಆರಾಧ್ಯದೈವ, ಕೋಟಿ ಹೃದಯಗಳ ಒಡೆಯ, ನಗುವಿನ ಪರಮಾತ್ಮ, ಕನ್ನಡದ ಕಂದ, ಕರ್ನಾಟಕ ರತ್ನ ಡಾ. ಪುನೀತ್ ರಾಜ್‍ಕುಮಾರ್ (Dr. Puneeth Raj Kumar). ಈ ಹೆಸರು ಕೇಳಿದ್ದೇನೆ ರೋಮಾಂಚನವಾಗುತ್ತೆ. ಹೀಗಿರುವಾಗ ಮೈಸೂರಿನ ಯುವ ದಸರಾ (Yuva Dasara) ದಲ್ಲಿ ಇಡೀ ರಾತ್ರಿ ಅಪ್ಪುಮಯವಾಗಿತ್ತು.

    ಅಪ್ಪು.. ಅಪ್ಪು.. ಅಪ್ಪು.. ಎಲ್ಲೇ ನೋಡಿದ್ರೂ ಅಪ್ಪು.. ಎಲ್ಲೇ ಕೇಳಿದ್ರೂ ಅಪ್ಪು. ಕರ್ನಾಟಕ ರತ್ನ.. ಕನ್ನಡದ ಕಂದ.. ಡಾ. ಪುನೀತ್ ರಾಜ್‍ಕುಮಾರ್ ಅಗಲಿ 11 ತಿಂಗಳೇ ಕಳೆದಿದೆ. ಆದರೂ ಅಪ್ಪುವಿನ ಮೇಲಿನ ಅಭಿಮಾನ, ಪ್ರೀತಿ ಮಾತ್ರ ಕಿಂಚಿತ್ತು ಕಡಿಮೆ ಆಗಿಲ್ಲ. ಅದ್ದೂರಿ ಮೈಸೂರು ಯುವ ದಸರಾ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು, ಈ ಬಾರಿಯ 6 ದಿನಗಳ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಮೇಳೈಸಿದ ದಸರಾ ವೈಭವ – ರಂಗೋಲಿ ಸ್ಪರ್ಧೆಯಲ್ಲಿ ಮಿಂಚಿದ ನಾರಿಯರು

    ‘ಅಪ್ಪು ನಮನ’ ಹೆಸರಲ್ಲಿ ಉದ್ಘಾಟಿಸಲಾಗಿದೆ. ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ (Ashwini Puneeth Raj Kumar), ರಾಘಣ್ಣ, ದೀಪ ಬೆಳಗುವ ಮೂಲಕ ಚಾಲನೆ ಕೊಟ್ಟರು. ಯುವ ದಸರಾಗೆ ಚಾಲನೆ ಸಿಕ್ಕೊಡನೆ ಕೂಗಿ ಬಂದಿದ್ದು ಒಂದೇ ಕೂಗು ಅದು ಅಪ್ಪು.. ಅಪ್ಪು.. ಒಂದ್ಕಡೆ ಅಪ್ಪು ಹಾಡುಗಳಿಗೆ ಕಲಾವಿದರು ನೃತ್ಯ ಮಾಡ್ತಿದ್ರೇ ಇನ್ನೊಂದೆಡೆ ಯುವಕರು ಅಪ್ಪು ಭಾವಚಿತ್ರ ಹಿಡಿದು, ಮೊಬೈಲ್ ಟಾರ್ಚ್ ಹಾಕಿಕೊಂಡು ಕುಣಿದು ಕುಪ್ಪಳಿಸಿದ್ರು. ಇದನ್ನೂ ಓದಿ: ಪ್ರಮೋದಾ ದೇವಿ ಮುಂದೆ ಮಂಡಿಯೂರಿ ನಮಸ್ಕರಿಸಿದ ಸುಧಾಮೂರ್ತಿ – ಫೋಟೋ ವೈರಲ್

    ಅನುಶ್ರೀ (Anushree) ನಿರೂಪಣೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ಕೊಟ್ಟಿತ್ತು. ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕ ವಿಜಯ್ ಪ್ರಕಾಶ್, ಕುನಾಲ್ ಗಾಂಜಾವಾಲ, ಚೈತ್ರ, ಅನುರಾಧ ಭಟ್‍ರವರ ಗಾಯನ ಎಲ್ಲರ ಮನ ಸೆಳೆಯಿತು. ಅಪ್ಪು ಚಿತ್ರದ ಹಾಡಿಗೆ ನೃತ್ಯ ನೆರೆದಿದ್ದವರನ್ನು ಹುಚ್ಚೆದ್ದು ಕುಣಿಯುವಂತೆ ಮಾಡ್ತು. ಕಾರ್ಯಕ್ರಮದಲ್ಲಿ ಅಪ್ಪುವಿನ ಕನಸು ಗಂಧದಗುಡಿ ಟೀಸರ್ ಪ್ರಸಾರ ವೇಳೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಭಾವುಕರಾಗಿ ಕಣ್ಣೀರಿಟ್ಟರು. ಇದು ಎಂಥವರನ್ನು ಒಮ್ಮೆ ಮೌನವಾಗಿರುವಂತೆ ಮಾಡ್ತು.

    Live Tv
    [brid partner=56869869 player=32851 video=960834 autoplay=true]

  • ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಗೆಲುವಿನ ಜೋಡಿಗೆ ಸಿಕ್ತು ಭರ್ಜರಿ ಬಹುಮಾನ ಜೊತೆ ಅಪ್ಪು ಟ್ರೋಫಿ

    ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಗೆಲುವಿನ ಜೋಡಿಗೆ ಸಿಕ್ತು ಭರ್ಜರಿ ಬಹುಮಾನ ಜೊತೆ ಅಪ್ಪು ಟ್ರೋಫಿ

    ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – 6  (Dance Karnataka Dance 6), ಇಡೀ ಕರ್ನಾಟಕವೇ ಮೆಚ್ಚಿ ಮೆರೆಸಿದ ಅದ್ಧೂರಿ ಡ್ಯಾನ್ಸ್ ಶೋ . ಡ್ಯಾನ್ಸಿಂಗ್ ಮಹಾಗುರು ಕರುನಾಡ ಚಕ್ರವರ್ತಿ ಡಾ . ಶಿವರಾಜ್ ಕುಮಾರ್ ಅವರ ಸಾರಥ್ಯದಲ್ಲಿ ಯಶಸ್ವಿಗೊಂಡ ಈ ಕಾರ್ಯಕ್ರಮ ಕಳೆದ ಶನಿವಾರವಷ್ಟೇ ಭರ್ಜರಿಯಾಗಿ ಫಿನಾಲೆ ಮುಗಿಸಿದೆ. ಈ ಸೀಸನ್ ನ ಆರಂಭದಿಂದಲೂ ನೃತ್ಯದ ಅನೇಕ ಪ್ರಯೋಗಗಳಿಂದ ವೀಕ್ಷಕರ ಮನಸೆಳೆದಿದ್ದ ಈ ಶೋ ಕೊನೆಯ ಹಂತದಲ್ಲೂ ಅದನ್ನು ಮುಂದುವರೆಸಿ ದೊಡ್ಡ ಮಟ್ಟದ ಚಪ್ಪಾಳೆ ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ವಾರದಿಂದ ವಾರಕ್ಕೆ ಸ್ಪರ್ಧಿಗಳ ಧೈರ್ಯ , ಶಿಸ್ತು ಮತ್ತು ಛಲದಿಂದ ಸ್ಪರ್ಧೆ ಕಠಿಣವಾಗುತ್ತಿದ್ದಿದ್ದು ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

    ಇನ್ನು ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ” ಪವರ್ ಸ್ಟಾರ್ ಟ್ರೋಫಿ ” (Trophy). ಇಡೀ ರಾಜ್ಯದಾದ್ಯಂತ ಸಂಚರಿಸಿ ಅಭಿಮಾನಿಗಳ ಅಪ್ಪುಗೆ (Appu) ಪಡೆದು ಬಂದಿದ್ದ ಈ ಟ್ರೋಫಿಯನ್ನು ಹಾಗು ಅಪ್ಪು ಅವರ ಆಶೀರ್ವಾದವನ್ನು ಪಡೆದಿದ್ದಾರೆ ” ಸಧ್ವಿನ್ – ಶಾರಿಕಾ” ಜೋಡಿ. ಶಿವಣ್ಣ (Shivraj Kumar)ಅವರ ಕೈಯಿಂದ ಈ ಪ್ರಶಸ್ತಿಯನ್ನು ಪಡೆದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ ಆರರ ವಿಜೇತರಾಗಿದ್ದಾರೆ. ಇದನ್ನೂ ಓದಿ:‘ಸಂಸ್ಕಾರ ಭಾರತ’ದಲ್ಲಿ ಅನಾಮಿಕನ ರೋಚಕ ಸ್ಟೋರಿ

    ಈ ಫಿನಾಲೆ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆಗಟ್ಟಿದವರು ಎಂದರೆ ಇದೇ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗುತ್ತಿರುವ ನವರಸನಾಯಕ ಜಗ್ಗೇಶ್ (Jaggesh)   , ಅದಿತಿ ಪ್ರಭುದೇವ ಮತ್ತು ನಟ ರಾಕ್ಷಸ ಡಾಲಿ ಧನಂಜಯ ಅಭಿನಯದ ” ತೋತಾಪುರಿ ” ಚಿತ್ರತಂಡ .  ಸೂಪರ್ ಹಿಟ್ ಸಿನಿಮಾ ಸಿದ್ಲಿಂಗು ಖ್ಯಾತಿಯ ಎಂ . ಸಿ . ವಿಜಯ್ ಪ್ರಸಾದ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಸುರೇಶ್ .ಕೆಎ  ಅವರು ಹಣಹೂಡಿಕೆ ಮಾಡಿದ್ದಾರೆ.

    ಫಿನಾಲೆ ಕಾರ್ಯಕ್ರಮದ ವೇದಿಕೆಯಲ್ಲೊಂದು ಸಾರ್ಥಕ ಕ್ಷಣಕ್ಕೆ ಕಾರಣರಾದ ಈ ತಂಡ ಹಾಗು ನಿರ್ಮಾಪಕ ಸುರೇಶ್ ಅವರು ನವರಸ ನಾಯಕ ಜಗ್ಗೇಶ್ ಮತ್ತು ಡಾ . ಶಿವರಾಜ್ ಕುಮಾರ್ ಹಾಗು “ತೋತಾಪುರಿ ” ಚಿತ್ರ ತಂಡದ ಸಮ್ಮುಖದಲ್ಲಿ ಡಿಕೆಡಿ -6 ಕಾರ್ಯಕ್ರಮದ ವಿಶೇಷ ಪ್ರತಿಭೆಗಳಾದ ಹೃಷಿಕೇಶ್ ಮತ್ತು ಸಹನಾ ಜೋಡಿಗೆ ತಲಾ 1 ಲಕ್ಷ ರೂ ವನ್ನು ಬಹುಮಾನವಾಗಿ ನೀಡಿ ಪ್ರೋತ್ಸಾಹಿಸಿದ್ದಾರೆ.

    ಇದೇ ಸೆಪ್ಟೆಂಬರ್ 30 ಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗಿತ್ತಿರುವ ಈ ವಿಶೇಷ ಸಿನಿಮಾಕ್ಕೆ ಅದ್ಧೂರಿಯಾದ ಯಶಸ್ಸು ಸಿಗಲಿ ಕನ್ನಡ ಚಿತ್ರೋದ್ಯಮ , ಚಿತ್ರಪ್ರೇಮಿಗಳು ಇದನ್ನು ಪ್ರೀತಿಯಿಂದ ಒಪ್ಪಿಕೊಂಡು ಅಪ್ಪಿಕೊಳ್ಳಲಿ ಎಂದು ಜೀ ಕನ್ನಡ ವಾಹಿನಿ ಈ ಮೂಲಕ ಆಶಿಸಿ , ಹಾರೈಸುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ಜೊತೆಗಿನ ನೆನಪು ಬಿಚ್ಚಿಟ್ಟ `ಬಾ ಬಾರೋ ರಸಿಕಾ’ ಖ್ಯಾತಿಯ ನಟಿ ಆಶಿತಾ

    ಅಪ್ಪು ಜೊತೆಗಿನ ನೆನಪು ಬಿಚ್ಚಿಟ್ಟ `ಬಾ ಬಾರೋ ರಸಿಕಾ’ ಖ್ಯಾತಿಯ ನಟಿ ಆಶಿತಾ

    ನ್ನಡದ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದ ನಟಿ ಆಶಿತಾ(Ashitha) ಮತ್ತೆ ಸುದ್ದಿಯಲ್ಲಿದ್ದಾರೆ. `ಆಕಾಶ್’ ಸಿನಿಮಾದಲ್ಲಿ ಪುನೀತ್ (Puneeth) ತಂಗಿಯಾಗಿ ನಟಿಸಿದ್ದ ಆಶಿಕಾ, ಅವರ ಜೊತೆಗಿನ ಒಡನಾಟದ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ತವರಿನ ಸಿರಿ ಮತ್ತು ಆಕಾಶ್ ಚಿತ್ರದಲ್ಲಿ ಶಿವಣ್ಣ ಮತ್ತು ಪುನೀತ್ ತಂಗಿಯಾಗಿ ಆಶಿತಾ ನಟಿಸಿದ್ದರು. ಇದೀಗ ಅಪ್ಪು ಜೊತೆಗಿನ ಒಡನಾಟದ ಬಗ್ಗೆ ನಟಿ ಮಾತನಾಡಿದ್ದಾರೆ. ನಾನು ಅದೆಷ್ಟೋ ಜನರೊಂದಿಗೆ ನಟಿಸಿದ್ದೇನೆ, ಅದರಲ್ಲಿ ಅಪ್ಪು ಮಾತ್ರ ನಿಜಕ್ಕೂ ಅದ್ಭುತ ವ್ಯಕ್ತಿ. ಇನ್ನು ಶೂಟಿಂಗ್ ಇಲ್ಲದ ಸಂದರ್ಭದಲ್ಲಿ ನಾನು, ರಮ್ಯಾ(Ramya) ಮತ್ತು ಅಪ್ಪು(Appu) ಸಾಕಷ್ಟು ಬಾರಿ ಲಾಂಗ್ ಡ್ರೈವ್ ಹೋಗಿದ್ದೇವೆ. ಪುನೀತ್ ನನ್ನ ಅಣ್ಣನ ಸಮಾನರು ಎಂದಿದ್ದಾರೆ. ಇದನ್ನೂ ಓದಿ:ವೆಬ್ ಸಿರೀಸ್‌ನತ್ತ ಮುಖ ಮಾಡಿದ ಹರ್ಷಿಕಾ ಪೂಣಚ್ಚ

    ನಾನು ಡ್ಯಾನ್ಸ್ ಮಾಡೋದು ನೋಡಿ, ನನ್ನ ಹೊಗೊಳೋರು. ಅಪ್ಪು ಕೂಡ ಒಬ್ಬ ಒಳ್ಳೆಯ ಡ್ಯಾನ್ಸರ್ ಆಗಿ ನನ್ನ ಹೊಗಳೋದು ನಿಜಕ್ಕೂ ಇದು ದೊಡ್ಡ ವಿಚಾರ. ಅಪ್ಪು ತುಂಬಾ ಸಿಂಪಲ್ ಆಗಿದ್ದರು. ನನ್ನ ಸಹೋದರಿಯ ಮದುವೆಗೆ 3 ದಿನ ಮುನ್ನವೇ ಕರೆದಿದ್ದೆ, ಅಪ್ಪು ಕೂಡ ಬಂದಿದ್ದರು. ಅವರು ಬೇರೆ ಸೆಲೆಬ್ರಿಟಿಗಳ ಹಾಗಲ್ಲ. ಗಂಟೆಗಟ್ಟಲೇ ನಮ್ಮ ಮದುವೆಯಲ್ಲಿ ಇದ್ದರು.

    ಅದರಲ್ಲೂ ಅಪ್ಪು ಅವರಿಗೆ ಮುಸ್ಲಿಮರ ದಮ್ ಬಿರಿಯಾನಿ ಅಂದ್ರೆ ಸಖತ್ ಇಷ್ಟ. ಅದಕ್ಕಾಗಿ ಎಲ್ಲರಂತೆ 15 ನಿಮಿಷ ಕ್ಯೂನಲ್ಲಿ ನಿಂತು ತಿಂದರು. ಎರೆಡೆರಡು ಸಲ ಬಿರಿಯಾನಿ ಹಾಕಿಸಿಕೊಂಡು ಎಂಜಾಯ್ ಮಾಡಿದ್ದರು ಎಂದು ಅಪ್ಪು ಜೊತೆಗಿನ ನೆನಪನ್ನ ಆಶಿತಾ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]