Tag: ಅಪ್ಪು

  • `ಕಾಂತಾರ’ ಶಿವನ ಪಾತ್ರದಲ್ಲಿ ಅಪ್ಪು: ಪುನೀತ್ ಪೋಸ್ಟರ್ ವೈರಲ್

    `ಕಾಂತಾರ’ ಶಿವನ ಪಾತ್ರದಲ್ಲಿ ಅಪ್ಪು: ಪುನೀತ್ ಪೋಸ್ಟರ್ ವೈರಲ್

    ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡುತ್ತಿರುವ ಸಿನಿಮಾ `ಕಾಂತಾರ’ಗೆ(Kantara Film)  ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಶಿವನ ಪಾತ್ರದಲ್ಲಿ ಮಿಂಚಿ ಗಮನ ಸೆಳೆದ ರಿಷಬ್ ಶೆಟ್ಟಿಗೆ(Rishab Shetty) ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿಂದೆ `ಕಾಂತಾರ’ ಶಿವನ ಪಾತ್ರಕ್ಕೆ ಪುನೀತ್‌ಗೆ(Puneeth Rajkumar) ನಟಿಸಲು ಕೇಳಲಾಗಿತ್ತು. ಆದರೆ ಅಪ್ಪು ಈ ಚಿತ್ರದಲ್ಲಿ ನಟಿಸಿಲ್ಲ. ಆದರೆ ಅಪ್ಪು ನಟಿಸಿದ್ದರೆ ಹೇಗಿರುತ್ತಿತ್ತು ಎಂಬ ಪರಿಕಲ್ಪನೆಯಲ್ಲಿ ಪುನೀತ್ ಪೋಸ್ಟರ್ ಮಾಡಲಾಗಿದೆ. ಈ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ಅಪ್ಪು ಒಂದು ವೇಳೆ `ಕಾಂತಾರ’ ಸಿನಿಮಾದಲ್ಲಿ ನಟಿಸಿದ್ದರೆ ಹೇಗಿರುತ್ತಿತ್ತು ಎಂದು ಅಭಿಮಾನಿಯೊಬ್ಬರ ಕಲ್ಪನೆಯಲ್ಲಿ ಮೂಡಿಬಂದ ಪೋಸ್ಟರ್ ವೈರಲ್ ಆಗಿದೆ. ಪುನೀತ್ `ಕಾಂತಾರ’ ಶಿವನಾಗಿ ಕಾಣಿಸಿಕೊಂಡಿದ್ದರೆ ಹೇಗಿರುತ್ತಿತ್ತು ಎಂದು ಅಭಿಮಾನಿಯೊಬ್ಬರು ತನ್ನ ಕಲ್ಪನೆಯಲ್ಲಿ ಪೋಸ್ಟರ್ ಮಾಡಿದ್ದಾರೆ. ಈ ಪೋಸ್ಟರ್ ಈಗ ವೈರಲ್ ಆಗಿದೆ. ಈ ಪೋಸ್ಟರ್‌ಗೆ ಅಪ್ಪು ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಲ್ಲಿ ರೂಪೇಶ್‌ ಶೆಟ್ಟಿಗೆ ಶಿಕ್ಷೆ

    ಈ ಪೋಸ್ಟರ್ ಡಿಸೈನ್ ಮಾಡಿದ್ದು ಡಿಜಿಟಲ್ ಆರ್ಟಿಸ್ಟ್ ಕುಶಾಲ್ ಹಿರೇಮಠ್(Kushal Hiremath). ಪುನೀತ್ ಅವರ ಬೇರೆ ಫೋಟೋವನ್ನು ಬಳಸಿಕೊಂಡು ಈ ರೀತಿ ವಿನ್ಯಾಸ ಮಾಡಲಾಗಿದೆ. `ಕಾಂತಾರ’ ಚಿತ್ರದ ಹೀರೋ ಶಿವನ ಪಾತ್ರವನ್ನು ಪುನೀತ್ ನಿರ್ವಹಿಸಿದ್ದರೆ ಅವರ ಗೆಟಪ್ ಹೇಗಿರುತ್ತಿತ್ತು ಎಂದು ಈ ರೀತಿಯಾಗಿ ಅವರು ಕಲ್ಪಿಸಿಕೊಂಡು ಡಿಸೈನ್ ಮಾಡಿದ್ದಾರೆ. ಈ ಫೋಟೋ ನೋಡಿ ಪುನೀತ್ ಅಭಿಮಾನಿಗಳು ಭಾವುಕರಾಗಿದ್ದಾರೆ.

     

    View this post on Instagram

     

    A post shared by kushal_hiremath (@kushal_p_hiremath)

    ಇನ್ನೂ `ಕಾಂತಾರ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಒಟ್ಟು 350 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿದೆ. ಸಿನಿ ಪ್ರೇಕ್ಷಕರು ಮುಗಿಬಿದ್ದು ಈ ಚಿತ್ರವನ್ನ ನೋಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಸೀತಾರಾಮಂ’ ನಿರ್ದೇಶಕನ ಹೊಸ ಚಿತ್ರಕ್ಕೆ ಜ್ಯೂ.ಎನ್‌ಟಿಆರ್ ಸಾಥ್

    `ಸೀತಾರಾಮಂ’ ನಿರ್ದೇಶಕನ ಹೊಸ ಚಿತ್ರಕ್ಕೆ ಜ್ಯೂ.ಎನ್‌ಟಿಆರ್ ಸಾಥ್

    ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ(Puneeth Rajkumar) ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನ ನೀಡಲಾಯಿತು. ಈ ಸಮಾರಂಭದಲ್ಲಿ ಅಪ್ಪು ಸ್ನೇಹಿತನಾಗಿ ಬೆಂಗಳೂರಿಗೆ ಬಂದು ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದರು. ಈ ಬೆನ್ನಲ್ಲೇ ಜ್ಯೂ.ಎನ್‌ಟಿಆರ್ (Jr.Ntr) ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

    ಪುನೀತ್ ಸಾಧನೆ ಮತ್ತು ಸಮಾಜಮುಖಿ ಕಾರ್ಯವನ್ನ ನೋಡಿ, ಅಪ್ಪುಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಯಿತು. ಪುನೀತ್ ಮೇಲಿನ ಪ್ರೀತಿಗಾಗಿ ಟಾಲಿವುಡ್ ನಟ ಜ್ಯೂ.ಎನ್‌ಟಿಆರ್ ಬೆಂಗಳೂರಿಗೆ ಆಗಮಿಸಿ, ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು. ಅಪ್ಪು ಮೇಲಿನ ತಾರಕ್ ಪ್ರೀತಿ, ಕನ್ನಡದ ಮೇಲಿರುವ ಅಭಿಮಾನ ಕಂಡು ಫ್ಯಾನ್ಸ್ ಕೂಡ ಫಿದಾ ಆಗಿದ್ದರು. ಬೆಂಗಳೂರಿಂದ ಹಿಂದಿರುಗಿದ ಬೆನ್ನಲ್ಲೇ `ಸೀತಾರಾಮಂ'(Seetharamam) ನಿರ್ದೇಶಕನ ಜೊತೆ ತಾರಕ್ ಕೈ ಜೋಡಿಸಿದ್ದಾರೆ.

    `ಆರ್‌ಆರ್‌ಆರ್’ ಸೂಪರ್ ಸಕ್ಸಸ್ ನಂತರ ಇದೀಗ ಮತ್ತೊಂದು ಹೊಸ ಪ್ರಾಜೆಕ್ಟ್ಗೆ ಓಕೆ ಎಂದಿದ್ದಾರೆ. ಸೀತಾರಾಮಂ ನಿರ್ದೇಶಕನ ಹನು ರಾಘವಪುಡಿ ಜೊತೆ ಹೊಸ ಚಿತ್ರ ಮಾಡಲಿದ್ದಾರೆ. ಒಂದು ಸುತ್ತಿನ ಚರ್ಚೆಯಾಗಿತ್ತು. ಸದ್ಯದಲ್ಲೇ ಚಿತ್ರದ ಕುರಿತು ಅಧಿಕೃತ ಅಪ್‌ಡೇಟ್ ನೀಡಲಿದ್ದಾರೆ. ಇದನ್ನೂ ಓದಿ:ಅನುಪಮಾ ಗೌಡ ವಿರುದ್ಧ ಸಿಡಿದೆದ್ದ ರೂಪೇಶ್‌ ರಾಜಣ್ಣ

    ಅಂದ್ಹಾಗೆ, ದುಲ್ಕರ್ ಮತ್ತು ಮೃಣಾಲ್ ನಟನೆಯ `ಸೀತಾರಾಮಂ’ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿದ್ದು, ಇದೀಗ ಈ ಚಿತ್ರದ ನಿರ್ದೇಶಕನ ಜೊತೆ ತಾರಕ್‌ ಸಾಥ್‌ ನೀಡಿದ್ದಾರೆ. ಹನು ರಾಘವಪುಡಿ ಡೈರೆಕ್ಷನ್‌ನಲ್ಲಿ ಯಂಗ್‌ ಟೈಗರ್‌ ತಾರಕ್‌ ನಟನೆ ಮಾಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ಮೇಲಿನ ಜ್ಯೂನಿಯರ್ ಎನ್.ಟಿ.ಆರ್ ಅಭಿಮಾನಕ್ಕೆ ಪುನೀತ್ ಫ್ಯಾನ್ಸ್ ಮೆಚ್ಚುಗೆ

    ಅಪ್ಪು ಮೇಲಿನ ಜ್ಯೂನಿಯರ್ ಎನ್.ಟಿ.ಆರ್ ಅಭಿಮಾನಕ್ಕೆ ಪುನೀತ್ ಫ್ಯಾನ್ಸ್ ಮೆಚ್ಚುಗೆ

    ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅಪ್ಪು ಗೆಳೆಯ ಜ್ಯೂನಿಯರ್ ಎನ್.ಟಿ.ಆರ್ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಪ್ಪು (Appu) ಬಗ್ಗೆ ಜ್ಯೂನಿಯರ್ (Jr. NTR) ಮನದಾಳದ ಮಾತುಗಳನ್ನು ಆಡಿದರು. ನಾನೊಬ್ಬ ಸ್ಟಾರ್ ಆಗಿ ಇಲ್ಲಿಗೆ ಬಂದಿಲ್ಲ, ಕೇವಲ ಅಪ್ಪು ಸ್ನೇಹಿತನಾಗಿ ಇಲ್ಲಿದ್ದೇನೆ ಎಂದು ತಿಳಿಸಿದರು. ಅಲ್ಲದೇ, ಬಹುತೇಕ ಕನ್ನಡದಲ್ಲೇ ಅಪ್ಪು ಬಗ್ಗೆ ಮಾತನಾಡಿದರು. ಈ ನಡೆ ಅಪ್ಪು ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚಿಸಿದೆ, ಅಪ್ಪು ಫ್ಯಾನ್ಸ್ ಜ್ಯೂನಿಯರ್ ಮಾತಿಗೆ ಫಿದಾ ಆಗಿದ್ದಾರೆ.

    ವ್ಯಕ್ತಿತ್ವ ಎನ್ನುವುದು ವ್ಯಕ್ತಿಯ ಸಂಪಾದನೆ. ವ್ಯಕ್ತಿತ್ವದಿಂದ, ನಗುವಿನಿಂದ, ಅಹಂಕಾರವಿಲ್ಲದೇ ಯಾರಾದರೂ ಈ ರಾಜ್ಯದ ಸಕಲ ಹೃದಯವನ್ನು ಗೆದ್ದಿದ್ದಾರೆ ಅಂದರೆ, ಅದು ಪುನೀತ್ ರಾಜ್ ಕುಮಾರ್ ಎಂದು ಅಪ್ಪುನನ್ನು ಗುಣಗಾನ ಮಾಡಿದರು ಗೆಳೆಯ, ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್. ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನು ಹೇಳುತ್ತಾ, ಅವರು ಕನ್ನಡದಲ್ಲೇ ಮಾತು ಶುರು ಮಾಡಿದರು.  ಇದನ್ನೂ ಓದಿ:ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ: ಅತಿಥಿಯಾಗಿ ಬೆಂಗಳೂರಿಗೆ ಬಂದ ಜ್ಯೂನಿಯರ್ ಎನ್.ಟಿ.ಆರ್

    ನಿನ್ನೆ ಬೆಂಗಳೂರಿನಲ್ಲಿ ನಡೆದ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ (Karnataka Ratna) ಪ್ರದಾನ ಸಮಾರಂಭದ ಅತಿಥಿಯಾಗಿ ಭಾಗಿಯಾಗಿದ್ದ ಜ್ಯೂನಿಯರ್ ಎನ್.ಟಿ.ಆರ್ ‘ಪುನೀತ್ ಒಬ್ಬ ಸೂಪರ್ ಸ್ಟಾರ್, ಗ್ರೇಟ್ ಸ್ಟಾರ್, ಅದ್ಭುತ ಪತಿ, ಹೃದಯ ಶ್ರೀಮಂತ. ಅವರ ನಗುವಿನಲ್ಲಿದ್ದ ಶ್ರೀಮಂತಿಕೆ ನಾವು ಎಲ್ಲಿ ಹುಡುಕೋನ? ಅವರು ನಗುವಿನ ಒಡೆಯರಾಗಿದ್ದರು’ ಎಂದು ಗೆಳೆಯನ ಕುರಿತು ಮಾತನಾಡಿದರು.

    ಪುನೀತ್ ರಾಜ್ ಕುಮಾರ್ ಅವರಿಗೆ ಸಿಕ್ಕಿರುವುದು ಕರ್ನಾಟಕ ರತ್ನ, ಆದರೆ, ಯಾರೂ ತಪ್ಪಾಗಿ ಭಾವಿಸಬಾರದು. ನನ್ನ ಪ್ರಕಾರ ಕರ್ನಾಟಕ ರತ್ನದ ಅರ್ಥನೇ ಪುನೀತ್ ರಾಜ್ ಕುಮಾರ್. ನಾನು ಇಲ್ಲಿಗೆ ಬಂದಿದ್ದು, ಹೆಮ್ಮೆಯ ಗೆಳೆಯನಾಗಿ. ಅವನಿಗಾಗಿ ನಾನು ಇಲ್ಲಿ ನಿಂತಿದ್ದೇನೆ. ಈ ಗೆಳೆತನ ಯಾವಾಗಲೂ ನನ್ನ ಹೃದಯದಲ್ಲಿ ಇರುತ್ತದೆ ಎಂದು ಮಾತು ಮುಗಿಸಿದರು ಜ್ಯೂನಿಯರ್ ಎನ್.ಟಿ.ಆರ್.

    ಕರ್ನಾಟಕ ರತ್ನ ಪ್ರಶಸ್ತಿ ಪ್ರಾರಂಭವಾದಾಗ ಮೊದಲ ಪ್ರಶಸ್ತಿಯನ್ನು ರಾಷ್ಟ್ರಕವಿ ಕುವೆಂಪು ಮತ್ತು ಡಾ.ರಾಜ್ ಕುಮಾರ್ ಅವರಿಗೆ ದೊರೆತಿತ್ತು. ಮೂವತ್ತು ವರ್ಷಗಳ ನಂತರ ಮತ್ತೆ ಸಿನಿಮಾ ರಂಗಕ್ಕೆ ಅದರಲ್ಲೂ ಡಾ.ರಾಜ್ ಕುಟುಂಬಕ್ಕೆ ಈ ಗೌರವ ದೊರೆತಿದೆ. ಹಾಗಾಗಿಯೇ ಡಾ.ರಾಜ್ ಕುಟುಂಬದ ಅನೇಕ ಸದಸ್ಯರು ಈ ಸಮಾರಂಭದಲ್ಲಿ ಹಾಜರಿದ್ದರು. ಡಾ.ರಾಜ್ ಕುಮಾರ್ ಅವರ ಅಷ್ಟೂ ಮಕ್ಕಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • ಅಂದು ಅಪ್ಪ, ಇಂದು ಅಪ್ಪು: ಕರ್ನಾಟಕ ರತ್ನ ಪ್ರಶಸ್ತಿಗೆ ರಾಘಣ್ಣ ಪ್ರತಿಕ್ರಿಯೆ

    ಅಂದು ಅಪ್ಪ, ಇಂದು ಅಪ್ಪು: ಕರ್ನಾಟಕ ರತ್ನ ಪ್ರಶಸ್ತಿಗೆ ರಾಘಣ್ಣ ಪ್ರತಿಕ್ರಿಯೆ

    ಪುನೀತ್ ರಾಜ್‌ಕುಮಾರ್(Puneeth Rajkumar) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ (Karnataka Ratna Prashati) ನೀಡಿದ್ದಕ್ಕಾಗಿ ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ತಿಳಿಸುವುದರ ಜೊತೆಗೆ ಈ ಸಂದರ್ಭಕ್ಕೆ ಹೆಮ್ಮೆ ಪಡಬೇಕು ಎಂದು ಮಾತನಾಡಿದ್ದಾರೆ.

    ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳ ಕಾಲ ತಮ್ಮ ಸಿನಿಮಾಗಳ ಮೂಲಕ ಅಪ್ಪು ರಂಜಿಸಿದ್ದರು. ಅಷ್ಟೇ ಅಲ್ಲ, ಸಮಾಜಮುಖಿ ಕಾರ್ಯಗಳ ಮೂಲಕ ಸಾಕಷ್ಟು ಜನರಿಗೆ ಆದರ್ಶ ವ್ಯಕ್ತಿಯಾಗಿದ್ದರು. ಪುನೀತ್ ಪ್ರತಿಭೆ, ಕಲಾಸೇವೆಯನ್ನ ಗುರುತಿಸಿ ನವೆಂಬರ್ 1 ಕನ್ನಡ ಹಬ್ಬದಂದು ಪುನೀತ್ ರಾಜ್‌ಕುಮಾರ್ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನ ಪತ್ನಿ ಅಶ್ವಿನಿ ನೀಡಿ ಗೌರವಿಸಲಾಯಿತು. ಈ ಕುರಿತು ರಾಘಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

    ಈ ಸಂದರ್ಭಕ್ಕೆ ಹೆಮ್ಮೆ ಪಡಬೇಕು. ನಮ್ಮ ತಂದೆ ಕರ್ನಾಟಕ ರತ್ನ ಪಡೆದುಕೊಳ್ಳುವಾಗ 30 ವರ್ಷದ ಹಿಂದೆ ನಮ್ಮನ್ನು ಕರೆಸಿಕೊಂಡು ಬಂದಿದ್ದರು. ಈಗ ನನ್ನ ತಮ್ಮ ಅಪ್ಪು ಕರೆಸಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಗೂ ಒಂದು ಶಕ್ತಿ ಇರುತ್ತದೆ ಎಂದು ಅಪ್ಪು ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:‘ಕರ್ನಾಟಕ ರತ್ನ’ದ ಅರ್ಥನೇ ಪುನೀತ್ ರಾಜ್ ಕುಮಾರ್ : ಜ್ಯೂನಿಯರ್ ಎನ್.ಟಿ.ಆರ್

    `ಗಂಧದಗುಡಿ’ ಯಾಕೆ ಆ ಚಿತ್ರ ಮಾಡಿದ ಪ್ರಾಣಿ ಕಾಡಿನ ಬಗ್ಗೆ ಅವನಿಗಿದ್ದ ಕಾಳಜಿ, ಪ್ಲಾಸ್ಟಿಕ್ ಬಳಸಬೇಡಿ ಎಂಬ ಸಂದೇಶವಿತ್ತು. ಚಿಕ್ಕ ಮಕ್ಕಳಿಗೂ ಅದನ್ನ ಕಲಿಸಬೇಕು ಅದು ನಿಜವಾದ ಅವಾರ್ಡ್ ಎಂದು ರಾಘಣ್ಣ ಮಾತನಾಡಿದ್ದಾರೆ. ಅಭಿಮಾನಿ ದೇವರುಗಳು ಮಳೆಯಲ್ಲಿ ನಿಂತು ಕಾರ್ಯಕ್ರಮ ನೋಡಿದ್ದೀರ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಎಂದು ರಾಘಣ್ಣ ಧನ್ಯವಾದಗಳನ್ನ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಕ್ಷತ್ರದ ಕಣ್ಣುಗಳಿರುವ ಅಪ್ಪು ದೇವರ ಮಗು ಎಂದು ಹಾಡಿ ಹೊಗಳಿದ ರಜನಿಕಾಂತ್

    ನಕ್ಷತ್ರದ ಕಣ್ಣುಗಳಿರುವ ಅಪ್ಪು ದೇವರ ಮಗು ಎಂದು ಹಾಡಿ ಹೊಗಳಿದ ರಜನಿಕಾಂತ್

    ಪುನೀತ್ ರಾಜ್‌ಕುಮಾರ್(Puneeth Rajkumar) ಮಾಡಿರುವ ಕಲಾಸೇವೆ ಮತ್ತು ಸಾಮಾಜಿಕ ಸೇವೆಯನ್ನ ಗುರುತಿಸಿ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಅಪ್ಪು ರಜನಿಕಾಂತ್‌ ಅವರು ಮಾತನಾಡಿದ್ದಾರೆ. ಅಪ್ಪು ಕರ್ನಾಟಕ ರತ್ನ ಕಾರ್ಯಕ್ರಮಕ್ಕೆ ರಜನಿಕಾಂತ್ ಮತ್ತು ಜ್ಯೂ.ಎನ್‌ಟಿಆರ್ ಕೂಡ ಭಾಗವಹಿಸಿದ್ದು, ಈ ವೇಳೆ ತಲೈವಾ ಅಪ್ಪು ಬಗ್ಗೆ ಹಾಡಿ ಹೊಗಳಿದ್ದಾರೆ.

    ಕನ್ನಡದ ಚಿತ್ರರಂಗದ ಮಹಾನ್ ವ್ಯಕ್ತಿ ಆಗಿರುವ ಅಪ್ಪು ಇಂದು ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಸಮಾರಂಭಕ್ಕೆ ರಜನಿಕಾಂತ್ ಕೂಡ ಸಾಕ್ಷಿಯಾಗಿದ್ದಾರೆ. ಪುನೀತ್ ಬಗ್ಗೆ ಕಾಲಿವುಡ್ ನಟ ರಜನಿಕಾಂತ್ ಮಾತನಾಡಿದ್ದಾರೆ. ಮೊದಲಿಗೆ ಕನ್ನಡದ ಹಬ್ಬಕ್ಕೆ ಶುಭಾಶಯಗಳು ತಿಳಿಸಿ, ಪುನೀತ್ ಒಬ್ಬರು ಅಪ್ಪು ದೇವರ ಮಗುವಾಗಿದ್ದರು. ಅವರ ಆತ್ಮ ನಮ್ಮ ನಡುವೆ ಇದೆ ಎಂದಿದ್ದಾರೆ.

    1979ರಂದು ನಾನು ಅಪ್ಪುನ ಮೊದಲು ಚೆನ್ನೈನಲ್ಲಿ ನೋಡಿದ್ದು, ರಾಜ್‌ಕುಮಾರ್ ಜೊತೆ ಪುನೀತ್ ಕೂಡ ಶಬರಿಮಲೆಗೆ ಬರುತ್ತಿದ್ದರು. ನಕ್ಷತ್ರದ ಕಣ್ಣುಗಳಿರುವ ಅಪ್ಪುನ, ಅಣ್ಣಾವ್ರ ಹೆಗೆಲ ಮೇಲೆ ಕೂರಿಸಿಕೊಂಡು 48 ಕಿಲೋ ಮೀ. ನಡೆಯುತ್ತಿದ್ದರು. ಅಂದು ಅಪ್ಪು ಸಿನಿಮಾ ನೋಡುತ್ತೀರಾ ಎಂದು ಅಣ್ಣಾವ್ರು ಹೇಳಿದ್ದರು. ಅಪ್ಪು ಚಿತ್ರ ನೋಡಿ, 100 ದಿನ ಓಡುತ್ತೆ ಎಂದಿದ್ದೇ ಅಂದರಂತೆ ಅಪ್ಪು ಸಿನಿಮಾ 100 ದಿನ ಓಡಿತ್ತು. ನಂತರ ಪುನೀತ್‌ ನಟಿಸಿದ ಅಪ್ಪು ಸಿನಿಮಾಗೆ ನಾನೇ ಅವಾರ್ಡ್ ಕೊಟ್ಟಿದ್ದೆ ಆ ದಿನವನ್ನ ಇಂದಿಗೂ ಮರೆಯಲು ಸಾಧ್ಯವಿಲ್ಲ.

    ಅಪ್ಪು ಸಾವಿನ ಸಮಯಲ್ಲಿ ಅಷ್ಟೊಂದು ಜನ ಯಾಕೆ ಬಂದರು. ಅವರ ವ್ಯಕ್ತಿತ್ವಕ್ಕೆ ಬಂದರು. ಅಪ್ಪು ಮಾಡಿರುವ ಕೆಲಸಕ್ಕೆ ಅಷ್ಟೊಂದು ಜನ ಬಂದರು, ಅವರು ಸಮಾಜಕ್ಕೆ ಆದರ್ಶವಾಗಿದ್ದರು ಎಂದು ಅಪ್ಪುನ ರಜನೀಕಾಂತ್ ಹಾಡಿಹೊಗಳಿದ್ದಾರೆ. ಈ ವೇಳೆ ಪುನೀತ್ ರಾಜ್‌ಕುಮಾರ್ ಮರಣೋತ್ತರ ಪ್ರಶಸ್ತಿಯನ್ನ ಅಶ್ವಿನಿ ಪುನೀತ್‌ಗೆ ಸರ್ಕಾರ ಪರವಾಗಿ ಸಿಎಂ ಬೊಮ್ಮಾಯಿ ಪ್ರದಾನ ಮಾಡಿದ್ದಾರೆ. ಈ ವೇಳೆ ರಜನೀಕಾಂತ್ ಜೊತೆ ಸುಧಾಮೂರ್ತಿ, ಜ್ಯೂ.ಎನ್‌ಟಿಆರ್, ರಾಜ್‌ಕುಮಾರ್ ಕುಟುಂಬ ಕೂಡ ಭಾಗಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮೂರು ದಿನದ ಗಂಧದ ಗುಡಿ ಕಲೆಕ್ಷನ್ 20 ಕೋಟಿ: ಅಪ್ಪುಗಾಗಿ ನಿಲ್ಲುತ್ತಿಲ್ಲ ಕಂಬನಿ

    ಮೂರು ದಿನದ ಗಂಧದ ಗುಡಿ ಕಲೆಕ್ಷನ್ 20 ಕೋಟಿ: ಅಪ್ಪುಗಾಗಿ ನಿಲ್ಲುತ್ತಿಲ್ಲ ಕಂಬನಿ

    ದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗಿರುವ ಗಂಧದ ಗುಡಿ (Gandhad Gudi) ಡಾಕ್ಯುಮೆಂಟರಿ ಮಾದರಿ ಸಿನಿಮಾಗೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗೆಯೇ ಬಾಕ್ಸ್ ಆಫೀಸಿನಿಂದಲೂ ಹಣದ ಹೊಳೆ ಹರಿದು ಬಂದಿದೆ. ಗುರುವಾರ ಪೇಯ್ಡ್ ಪ್ರಿಮಿಯರ್, ಶುಕ್ರವಾರ, ಶನಿವಾರ ಮತ್ತು ಭಾನುವಾರದ ಒಟ್ಟು ಕಲೆಕ್ಷನ್ ಅಂದಾಜು 20 ಕೋಟಿ ಎಂದು ಹೇಳಲಾಗುತ್ತಿದೆ.

    ಇದೊಂದು ಡಾಕ್ಯುಮೆಂಟರಿ ಮಾದರಿಯ ಸಿನಿಮಾವಾಗಿದ್ದರೂ, ಅಪ್ಪು (Appu) ಅವರ ಅಭಿಮಾನಿಗಳಿಗೆ ಎಂದಿನಂತೆ, ಡೈಲಾಗ್, ಫೈಟ್ಸ್ , ಹಾಡು, ಡಾನ್ಸ್ ಇಲ್ಲದೇ ಇದ್ದರೂ, ಅಪ್ಪು ನೀಡಿರುವ ಸಂದೇಶವನ್ನು ಸಖಯ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲದೇ, ಪುನೀತ್ ಅವರ ಕೆಲವು ಮಾತುಗಳನ್ನು ಅಭಿಮಾನಿಗಳಿಗೆ ಕಣ್ಣೀರು ಹಾಕಿಸಿವೆ. ಸಾಕಷ್ಟು ಅಭಿಮಾನಿಗಳು ಥಿಯೇಟರ್ ನಲ್ಲಿ ಕಣ್ಣೀರು ಹಾಕಿರುವುದು ಸಾಮಾನ್ಯವಾಗಿದೆ.

    ಪುನೀತ್ ರಾಜ್ ಕುಮಾರ್ (Puneeth Rajkumar) ನಟನೆಯ ಗಂಧದ ಗುಡಿ ಡಾಕ್ಯುಡ್ರಾಮಾ ಚಿತ್ರ ಇಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈ ಚಿತ್ರದ ವಿಶೇಷ ಅಂದರೆ, ಅಪ್ಪು ಅಪ್ಪು ಆಗಿಯೇ ಕಾಣಿಸಿಕೊಂಡಿದ್ದಾರೆ. ಯಾವುದೇ ಮೇಕಪ್ ಇಲ್ಲದೇ, ಡೈಲಾಗ್ ಹೊಡೆಯದೇ ಸರಳವಾಗಿ ಹಾಗೂ ಸಹಜವಾಗಿದ್ದಾರೆ. ಹಾಗಾಗಿ ಪುನೀತ್ ಮತ್ತಷ್ಟು ಹತ್ತಿರವಾಗುತ್ತಾರೆ. ಈ ಚಿತ್ರದಲ್ಲಿ ಪುನೀತ್ ಕಾಡಿನ ಮಧ್ಯೆ ಹೋದಾಗ, ವಿಷ ಸರ್ಪಗಳನ್ನು ಕಾಣುತ್ತಾರೆ. ಹುಲಿ, ಚಿರತೆಗಳನ್ನು ನೋಡುತ್ತಾರೆ. ಈ ಸಂದರ್ಭದಲ್ಲಿ ಅವರು ಮಾತೊಂದನ್ನು ಆಡುತ್ತಾರೆ. ಆ ಮಾತು ನೋಡುಗನನ್ನು ಭಾವುಕನಾಗಿಸುತ್ತದೆ.

    ಕಾಡಿನೊಳಗೆ ವಿಷದ ಹಾವು ಕಾಣುತ್ತಾ, ನಿರ್ದೇಶಕ ಅಮೋಘ ವರ್ಷ ಜೊತೆ ತಮಾಷೆಯಾಗಿ ಮಾತನಾಡಿದರೂ ಅದೀಗ ಪ್ರೇಕ್ಷಕರನ್ನು ಕಣ್ಣೀರು ಹಾಕಿಸುತ್ತದೆ. ಹಾವು ನೋಡುತ್ತಾ, ‘ಹೆಂಡ್ತಿ ಮಕ್ಕಳನ್ನು ಮನೇಲಿ ಬಿಟ್ಟು ಬಂದಿದ್ದೀನಿ. ಸೇಫ್ ಆಗಿ ಮನೆ ಸೇರ್ತೀನಿ ತಾನೆ?’ ಎಂದು ಪ್ರಶ್ನೆ ಮಾಡುತ್ತಾರೆ. ಅಂದು ಸೇಫ್ ಆಗಿಯೇ ಮನೆಗೆ ಬಂದ ಪುನೀತ್ ರಾಜ್ ಕುಮಾರ್, ಆ ನಂತರ ಆಸ್ಪತ್ರೆಗೆ ಹೋದವರು ಮತ್ತೆ ಸೇಫ್ ಆಗಿ ಬರಲಿಲ್ಲ ಎನ್ನುವುದು ನೋವಿನ ಸಂಗತಿ. ಈ ಮಾತು ಕೇಳುತ್ತಿದ್ದಂತೆಯೇ ಕಣ್ಣೀರು ಬರುವುದು ಸತ್ಯ.

    Live Tv
    [brid partner=56869869 player=32851 video=960834 autoplay=true]

  • ಪುನೀತ್ ಜೀವನ ಪಠ್ಯಪುಸ್ತಕಕ್ಕೆ ಸೇರಿಸಿ ಬೇಡಿಕೆಗೆ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ

    ಪುನೀತ್ ಜೀವನ ಪಠ್ಯಪುಸ್ತಕಕ್ಕೆ ಸೇರಿಸಿ ಬೇಡಿಕೆಗೆ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ

    ಭಿಮಾನಿಗಳ ಪಾಲಿನ ದೇವರೇ ಆಗಿರುವ ಪುನೀತ್ ರಾಜ್ ಕುಮಾರ್ (Puneeth Raj Kumar) ಜೀವನವನ್ನು ಪಠ್ಯಪುಸ್ತಕದಲ್ಲಿ ಸೇರಿಸುವ ಕುರಿತು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆದಿದ್ದಾರೆ. ಈ ಕುರಿತು ಸಚಿವ ಆರ್.ಅಶೋಕ್ (R. Ashok) ಪ್ರತಿಕ್ರಿಯೆ ನೀಡಿದ್ದು, ಈ ಕುರಿತು ಶಿಕ್ಷಣ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.

    ಪುನೀತ್ ಬದುಕು ಮಾದರಿ. ಅವರ ಚಿತ್ರಗಳು ಕೂಡ ಸಮಾಜಕ್ಕೆ ಅದ್ಭುತ ಸಂದೇಶವನ್ನು ನೀಡಿವೆ. ಹಾಗಾಗಿ ಮಕ್ಕಳಿಗೆ ಅವರ ಬದುಕನ್ನು ಓದಿಸಬೇಕು. ಈ ಕುರಿತು ಕೂಡಲೇ ಸರಕಾರ ಗಮನ ಹರಿಸಬೇಕು ಎಂದು ಸಾಕಷ್ಟು ಅಭಿಮಾನಿಗಳು ಸರಕಾರದ ಗಮನ ಸೆಳೆದಿದ್ದರು. ಈ ಕುರಿತು ಮಾತನಾಡಿರುವ ಅಶೋಕ್, ‘ಪುನೀತ್ ಅವರ ಬದುಕು ಎಲ್ಲರಿಗೂ ಆದರ್ಶ. ಪಠ್ಯ ಪುಸ್ತಕದಲ್ಲಿ (Text Book) ಸೇರಿಸಿದರೆ, ಯಾರೂ ಪ್ರಶ್ನೆ ಮಾಡಲಾರವು. ಮುಂದಿನ ವರ್ಷ ಸೇರಿಸುವ ಕುರಿತು ಶಿಕ್ಷಣ ಸಚಿವರ ಜೊತೆ ಮಾತನಾಡುವೆ’ ಎಂದಿದ್ದಾರೆ. ಇದನ್ನೂ ಓದಿ:`ಹೃದಯದ ರಾಣಿ’ ಎಂದು ಪ್ರೇಯಸಿಯನ್ನ ಹಾಡಿ ಹೊಗಳಿದ ಸಿದ್ಧಾರ್ಥ್

    ಪುನೀತ್ ರಾಜ್ ಕುಮಾರ್ ಅವರ ಮೊದಲ ಪುಣ್ಯಸ್ಮರಣೆ ಸಂದರ್ಭದಲ್ಲೇ ಸರಕಾರ ಕೂಡ ಅವರಿಗೆ ನವೆಂಬರ್ 1 ರಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ದಕ್ಷಿಣ ಇಬ್ಬರು ಸ್ಟಾರ್ ನಟರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇದರಲ್ಲಿ ಒಬ್ಬ ನಟರು ಈಗಾಗಲೇ ಒಪ್ಪಿಕೊಂಡಿದ್ದು, ಮತ್ತೋರ್ವ ನಟರು ಇನ್ನೂ ಉತ್ತರಿಸಬೇಕಿದೆ ಎಂದಿದ್ದಾರೆ. ಇಬ್ಬರಿಗೂ ಕರ್ನಾಟಕದ ನಂಟಿರುವುದು ಮತ್ತೊಂದು ವಿಶೇಷ.

    ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ಅವರಿಗೆ ಕರ್ನಾಟಕ ಸರಕಾರವು ಆಹ್ವಾನ ನೀಡಿದ್ದು, ಜ್ಯೂನಿಯರ್ ಎನ್.ಟಿ.ಆರ್ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದು, ರಜನಿಕಾಂತ್ ಅವರ ಒಪ್ಪಿಗೆ ಪತ್ರ ಇನ್ನಷ್ಟೇ ಸಿಗಬೇಕಿದೆ. ಈ ಕಾರ್ಯಕ್ರವನ್ನು ನವೆಂಬರ್ 1 ರಂದು ವಿಧಾನಸೌಧದ ಮುಂಭಾಗದಲ್ಲಿ ಆಯೋಜನೆ ಮಾಡಿದ್ದು, ಡಾ.ರಾಜ್ ಕುಟುಂಬ ಹಾಗೂ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಡುಗಡೆಯ ದಿನವೇ 2000 ಪ್ರದರ್ಶನ ಕಂಡ ಗಂಧದ ಗುಡಿ

    ಬಿಡುಗಡೆಯ ದಿನವೇ 2000 ಪ್ರದರ್ಶನ ಕಂಡ ಗಂಧದ ಗುಡಿ

    ಪುನೀತ್ ರಾಜ್ ಕುಮಾರ್ (Puneeth Rajkumar) ನಟನೆಯ ಗಂಧದ ಗುಡಿ ಸಿನಿಮಾ ಬಿಡುಗಡೆ ಆದ ಮೊದಲ ದಿನ ಎರಡು ಸಾವಿರಕ್ಕೂ ಅಧಿಕ ಪ್ರದರ್ಶನ ಕಂಡಿದೆ ಎಂದು ಅಂದಾಜಿಸಲಾಗಿದೆ. ನೂರಾರು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರುವ ಈ ಸಿನಿಮಾವನ್ನು ಅಭಿಮಾನಿಗಳು ಬೆಳಗ್ಗೆಯಿಂದಲೇ ಕಣ್ತುಂಬಿಕೊಂಡಿದ್ದಾರೆ. ಶುಕ್ರವಾರ ಬಹುತೇಕ ಕಡೆ ಸಿನಿಮಾ ಹೌಸ್ ಫೂಲ್ ಆಗಿದ್ದು, ವಾರಾಂತ್ಯದ ಟಿಕೆಟ್ ಕೂಡ ಸೋಲ್ಡ್ ಔಟ್ ಆಗಿವೆ.

    ಸಿಲೆಬ್ರಿಟಿಗಾಗಿ ಗುರುವಾರ ಗಂಧದ ಗುಡಿ (Gandhad Gudi) ಸ್ಪೆಷಲ್ ಶೋ ಆಯೋಜನೆ ಮಾಡಲಾಗಿತ್ತು. ಕನ್ನಡದ ಬಹುತೇಕ ನಟ, ನಟಿಯರು ಹಾಗೂ ತಂತ್ರಜ್ಞರ ಜೊತೆ ಲೇಖಕಿ, ಇನ್ಫೋಸಿಸ್ ನ ಸುಧಾಮೂರ್ತಿ (Sudhamurthy) ಕೂಡ ಆಗಮಿಸಿದ್ದರು. ಸಿನಿಮಾ ನೋಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಕನ್ನಡದಲ್ಲಿ ಇಂಥದ್ದೊಂದು ಸಿನಿಮಾ ಬಂದಿರುವುದು ನೋಡಿ ಗರ್ವ ಬಂತು. ಅವರ ಈ ಪ್ರಯತ್ನಕ್ಕೆ ಫುಲ್ ಮಾರ್ಕ್ಸ್ ಕೊಡುತ್ತೇನೆ’ ಎಂದು ಹೆಮ್ಮೆಯಿಂದ ಮಾತನಾಡಿದರು. ಇದನ್ನೂ ಓದಿ:ಪುನೀತ್ ಪ್ರಥಮ ಪುಣ್ಯಸ್ಮರಣೆ: ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾವುಕ ಪತ್ರ

    ಈ ಗಂಧದ ಗುಡಿಯಲ್ಲಿ ಯುವಕರು ನೋಡಿ ತಿಳಿದುಕೊಳ‍್ಳಬಹುದಾದ ಸಾಕಷ್ಟು ವಿಷಯಗಳು ಇವೆ. ಅದರಲ್ಲೂ ನನ್ನ ಉತ್ತರ ಕರ್ನಾಟಕದ ಬಗ್ಗೆ ತೋರಿಸಿದಾಗ ಮತ್ತು ಪುನೀತ್ ಅವರು ಉತ್ತರ ಕರ್ನಾಟಕದ ಬಗ್ಗೆ ಹೆಮ್ಮೆಯಿಂದ ಮಾತನಾಡಿದಾಗ ನಾನೂ ಭಾವುಕಳಾದೆ. ನಮ್ಮ ನೆಲದ ಚಿತ್ರ ಇದಾಗಿದ್ದರಿಂದ ಹೆಚ್ಚು ಆಪ್ತತೆ ಅನಿಸಿತು ಎಂದು ಸುಧಾಮೂರ್ತಿ ಮಾತನಾಡಿದರು.

     

    ಗಂಧದ ಗುಡಿ ಡಾಕ್ಯುಡ್ರಾಮಾ ಸಿನಿಮಾ ನಿನ್ನೆ ಬಿಡುಗಡೆ ಆಗಿ, ಬೆಳಗ್ಗೆಯೇ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸ್ಪೆಷಲ್ ಶೋ ಆಯೋಜನೆಗೊಂಡಿದ್ದವು. ಮೊದಲ ಪ್ರದರ್ಶನದಲ್ಲೇ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಭಾವುಕರಾದರು. ಅಭಿಮಾನಿಗಳ ಜೊತೆಯೇ ಡಾ.ರಾಜ್ ಕುಟುಂಬ ಕೂಡ ಸಿನಿಮಾ ವೀಕ್ಷಿಸಿದೆ.

    Live Tv
    [brid partner=56869869 player=32851 video=960834 autoplay=true]

  • ನಾನು ಹುಷಾರಾಗಿದ್ದೀನಿ, ಅಪ್ಪು ಹಳೆಯ ಪೋಸ್ಟ್ ವೈರಲ್

    ನಾನು ಹುಷಾರಾಗಿದ್ದೀನಿ, ಅಪ್ಪು ಹಳೆಯ ಪೋಸ್ಟ್ ವೈರಲ್

    ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್(Puneeth Rajkumar) ಅಗಲಿ ಇಂದಿಗೆ ಒಂದು ವರ್ಷವಾಗಿದೆ. ಆದರೂ ಅಪ್ಪು ಸಾವು ಅಭಿಮಾನಿಗಳಿಗೆ ಕಾಡುತ್ತಲೇ ಇದೆ. ಸದ್ಯ ಪುನೀತ್ ಈ ಹಿಂದೆ ಮಾಡಿರುವ ಪೋಸ್ಟ್‌ವೊಂದು ಸಖತ್ ವೈರಲ್ ಆಗುತ್ತಿದೆ. ಅಪ್ಪು(Appu) ಪೋಸ್ಟ್‌ಗೆ ಮತ್ತೆ ಹುಟ್ಟಿ ಬನ್ನಿ ಎಂದು ಮನವಿ ಮಾಡ್ತಿದ್ದಾರೆ.

    ನಟ ಪುನೀತ್, ಅವರ ನೆನಪು, ಸಾಧನೆಗಳ ಮೂಲಕ ಎಲ್ಲರ ಮನದಲ್ಲಿ ಜೀವಂತವಾಗಿ ನೆಲೆಸಿದ್ದಾರೆ. ಅದರಲ್ಲೂ ಅಕ್ಟೋಬರ್ 29 ಅಭಿಮಾನಿಗಳ ಪಾಲಿಗೆ ಕರಾಳ ದಿನ ಎಂದರೆ ತಪ್ಪಾಗಲಾರದು. ಇಂದು ಅಪ್ಪು ಅಗಲಿ ಒಂದು ವರ್ಷವಾಗಿದೆ. ಈ ಬೆನ್ನಲ್ಲೇ ಪುನೀತ್ ಪೋಸ್ಟೊಂದು ವೈರಲ್ ಆಗುತ್ತಿದೆ. ನಾನು ಹುಷಾರಾಗಿದ್ದೀನಿ, ಡೋಂಟ್ ವರಿ ಎಂಬ ಈ ಹಿಂದಿನ ಪೋಸ್ಟ್ ಇದೀಗ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:`ಹೃದಯದ ರಾಣಿ’ ಎಂದು ಪ್ರೇಯಸಿಯನ್ನ ಹಾಡಿ ಹೊಗಳಿದ ಸಿದ್ಧಾರ್ಥ್

    ನಾಲ್ಕು ವರ್ಷಗಳ ಹಿಂದೆ 2018ರಲ್ಲಿ ಪುನೀತ್ ಹುಷಾರಿಲ್ಲ ಎಂಬ ಗಾಳಿ ಸುದ್ದಿಯೊಂದು ಹಬ್ಬಿತ್ತು. ಈ ವೇಳೆ, ಕುಟುಂಬಸ್ಥರು, ಅಪ್ಪು ಅಭಿಮಾನಿಗಳು ಗಾಬರಿಯಾಗಿದ್ದರು. ನಾನು ಹುಷಾರಾಗಿದ್ದೀನಿ, ಡೋಂಟ್ ವರಿ ನಿಮ್ಮ ಕಾಳಜಿಗೆ ಧನ್ಯವಾದಗಳು ಎಂದು ಪೋಸ್ಟ್‌ ಮಾಡಿದ್ದರು. ಇದೀಗ ಈ ಪೋಸ್ಟ್ ವೈರಲ್ ಆಗುತ್ತಿದ್ದು, ಮತ್ತೆ ಇದೇ ಪೋಸ್ಟ್ ಹಾಕಿ ಸರ್ ಎಂದು ಫ್ಯಾನ್ಸ್ ಕೇಳ್ತಾ ಇದ್ದಾರೆ.

    ಇನ್ನೂ ಪುನೀತ್‌ ನಟನೆಯ ಕೊನೆಯ ಚಿತ್ರ ಗಂಧದಗುಡಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಪ್ಪು ಕನಸಿನ ಸಿನಿಮಾಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ: ಕನ್ನಡದಲ್ಲಿಯೇ ಕೇಜ್ರಿವಾಲ್ ಟ್ವೀಟ್

    ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ: ಕನ್ನಡದಲ್ಲಿಯೇ ಕೇಜ್ರಿವಾಲ್ ಟ್ವೀಟ್

    ನವದೆಹಲಿ: ಸ್ಯಾಂಡಲ್‌ವುಡ್‌ (Sandalwood) ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ (PowerStar Puneeth Raj Kumar) ಅವರು ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷವಾಯಿತು. ಈ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು, ಗಣ್ಯರು ಹಾಗೂ ಅಭಿಮಾನಿಗಳು ಸೇರಿದಂತೆ ಎಲ್ಲರೂ ಅಪ್ಪುವನ್ನು ಪ್ರತನಿತ್ಯದಂತೆ ಇಂದು ಕೂಡ ಸ್ಮರಿಸಿಕೊಂಡಿದ್ದಾರೆ. ಈ ಮಧ್ಯೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಕೂಡ ಅಪ್ಪುವನ್ನು ನೆನಪು ಮಾಡಿಕೊಂಡಿದ್ದು, ಗಮನಸೆಳೆದಿದೆ.

    ಹೌದು. ಕನ್ನಡದಲ್ಲಿಯೇ ಟ್ವೀಟ್ ಮಾಡಿರುವ ಕೇಜ್ರಿವಾಲ್, ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನಗಳು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಡಾ ಪುನೀತ್ ರಾಜ್‍ಕುಮಾರ್ ಅವರ ಪುಣ್ಯತಿಥಿಯಾಗಿರುವ ಇಂದು ಅವರನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅವರು ನಟಿಸಿರುವ ಸಿನಿಮಾ, ಹಾಡುಗಳು ಮತ್ತು ಸಾಮಾಜಿಕ ಕಾರ್ಯಗಳು ಅವರು ನಮ್ಮನ್ನು ಎಂದಿಗೂ ಬಿಟ್ಟು ಹೋಗಿಲ್ಲ ಎಂದು ಅನಿಸುತ್ತದೆ. ಅವರು ಯಾವತ್ತೂ ಪವರ್ ಸ್ಟಾರ್ ಆಗಿಯೇ ಇರುತ್ತಾರೆ ಎಂದು ತಿಳಿಸಿದ್ದಾರೆ.

    ಕಳೆದ ವರ್ಷ ಅಕ್ಟೋಬರ್ 29ರಂದು ಹೃದಯ ಸ್ತಂಭನಕ್ಕೆ ಒಳಗಾಗಿ ಅಪ್ಪು ಅವರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅಪ್ಪು ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಅಪ್ಪು ಸಮಾಧಿಯತ್ತ ಅಭಿಮಾನಿಗಳ ದಂಡೇ ಹರಿದುಬರುತ್ತಿದೆ. ಇಂದು ರಾಜ್ ಕುಮಾರ್ ಕುಟುಂಬಸ್ಥರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ ಬೆಳಗ್ಗಿಂದ ಸಂಜೆಯವರೆಗೂ ಅಭಿಮಾನಿಗಳಿಗೆ ಅನ್ನಸಂತರ್ಪನೆ ಕೂಡ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]