Tag: ಅಪ್ಪು

  • ಪುನೀತ್ ಹೆಸರಲ್ಲಿ ‘ಮಾಲೆ’ ಧರಿಸಿದ ಹೊಸಪೇಟೆ ಅಭಿಮಾನಿಗಳು

    ಪುನೀತ್ ಹೆಸರಲ್ಲಿ ‘ಮಾಲೆ’ ಧರಿಸಿದ ಹೊಸಪೇಟೆ ಅಭಿಮಾನಿಗಳು

    ವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿಮಾನಿಗಳು ಶಬರಿ ಮಲೈ ಮಾಲಾಧಾರಿಗಳಂತೆ ಅಪ್ಪು (Appu) ಮಾಲೆ (Maale) ಧರಿಸಿದ್ದಾರೆ. ಹೊಸಪೇಟೆಯ (Hospet) ಸಾಕಷ್ಟು ಅಭಿಮಾನಿಗಳು ಮಾಲೆ ಧರಿಸಿದ್ದು, 18 ದಿನಗಳ ವ್ರತವನ್ನು ಮುಗಿಸಿಕೊಂಡು ಇಂದು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಅಪ್ಪು ಸ್ಮಾರಕಕ್ಕೆ ಭೇಟಿ ನೀಡಿ ವ್ರತ ಮುಗಿಸಲಿದ್ದಾರೆ.

    ಹೊಸಪೇಟೆ ಅಪ್ಪು ಅಭಿಮಾನಿಗಳು ಕಳೆದ 18 ದಿನಗಳಿಂದ ಮಾಲೆಹಾಕಿಕೊಂಡು ವ್ರತ ಮಾಡುತ್ತಿದ್ದರು. ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬದವರೆಗೂ ಈ ವ್ರತವನ್ನು ಆಚರಿಸುತ್ತಿದ್ದರು. ನಿನ್ನೆಯಷ್ಟೇ ವ್ರತ ಮುಗಿದಿದ್ದು ಇಂದು ಬೆಳಗ್ಗೆ 6 ಗಂಟೆಗೆ ಹೊಸಪೇಟೆಯಿಂದ ಮಾಲಾಧಾರೆಗಳು ಬೆಂಗಳೂರಿಗೆ ಬರುತ್ತಿದ್ದಾರೆ. ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ವಿಶೇಷ ಪೂಜೆಯನ್ನು ಮಾಡಲಿದ್ದಾರೆ. ಇದನ್ನೂ ಓದಿ: ಭಾರತ- ಆಸ್ಟ್ರೇಲಿಯಾ ಏಕದಿನ ಪಂದ್ಯ ವೀಕ್ಷಿಸಿದ ರಜನಿಕಾಂತ್‌

    ಬೆಂಗಳೂರಿನತ್ತ ಬರುತ್ತಿರುವ ಮಾಲೆಧಾರಿ ಅಭಿಮಾನಿಗಳನ್ನು ರಾಘವೇಂದ್ರ ರಾಜ್ ಕುಮಾರ್ ಬರಮಾಡಿಕೊಳ್ಳಲಿದ್ದು, ಅವರಿಗಾಗಿ ವಿಶೇಷ ಪೂಜೆಯ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ಅಪ್ಪು ಸ್ಮಾರಕಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸುವ ಮೂಲಕ ಇಂದು ವ್ರತವನ್ನು ಕೈ ಬಿಡಲಿದ್ದಾರೆ ಅಭಿಮಾನಿಗಳು.

  • ರಾಜಕುಮಾರನಂತೆಯೇ ಬಂದ ಪುನೀತ್, ಅಪ್ಪು ಕಲಾಕೃತಿಗೆ ಫ್ಯಾನ್ಸ್ ಫಿದಾ

    ರಾಜಕುಮಾರನಂತೆಯೇ ಬಂದ ಪುನೀತ್, ಅಪ್ಪು ಕಲಾಕೃತಿಗೆ ಫ್ಯಾನ್ಸ್ ಫಿದಾ

    ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಜನ್ಮದಿನವನ್ನ (ಮಾ.17) ಫ್ಯಾನ್ಸ್‌ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಈ ದಿನ ಅಪ್ಪು (Appu) ಅಭಿಮಾನಿಗಳಿಗೆ (Fans) ವಿಶೇಷ ದಿನವಾಗಿದ್ದು, ಪುನೀತ್ ಮೇಲಿನ ಅಭಿಮಾನದಿಂದ ಅಭಿಮಾನಿಯೊಬ್ಬ ಅಪ್ಪು ಮೇಣದ ಪ್ರತಿಮೆ ಮಾಡಿಸಿದ್ದಾರೆ. ಅಪ್ಪು ಸಮಾಧಿ ಬಳಿ ಪುನೀತ್ ಕಲಾಕೃತಿಯನ್ನ ಇಡಲಾಗಿದೆ.

    ಅಪ್ಪು ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಯೊಬ್ಬರು, ಪುನೀತ್ ತದ್ರೂಪಿ ಕಲಾಕೃತಿ ಕೊಟ್ಟಿರೋದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಕೆಂಪು ಸೋಫಾದಲ್ಲಿ ಆಸೀನರಾಗಿರುವ ಅವರ ಮೇಣದ ಪ್ರತಿಮೆ (Statue) ನೋಡಿದರೆ ಮತ್ತೊಮ್ಮೆ ಎದುರಿಗೆ ಬಂದಂತೆ ಭಾಸವಾಗುತ್ತದೆ. ಇದನ್ನೂ ಓದಿ: ಪವನ್ ಕಲ್ಯಾಣ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಆರ್.ಚಂದ್ರು

    ಬೆಂಗಳೂರಿನ ಪೀಣ್ಯದ ಉದ್ಯಮಿ ಅದ್ವಿಕ್ ಅವರು ಅಪ್ಪು ಮೇಣದ ಕಲಾಕೃತಿಯನ್ನ ನೀಡಿದ್ದಾರೆ. ಖ್ಯಾತ ಶಿಲ್ಪ ಕಲಾವಿದರಾದ ಶ್ರೀಧರ್ ಮೂರ್ತಿ ಅವರು ಅಪ್ಪು ಕಲಾಕೃತಿಯನ್ನ ಸಿದ್ಧತೆ ಮಾಡಿದ್ದಾರೆ. 8 ತಿಂಗಳ ಶ್ರಮದಿಂದ ಕಲಾಕೃತಿ ಸಿದ್ಧತೆ ಮಾಡಲಾಗಿದೆ. ಜೀವಂತವಾಗಿ ಅಪ್ಪು ಸೋಫಾದಲ್ಲಿ ಕುಳಿತಿದ್ದಾರೇನೋ ಎನ್ನಿಸುವಷ್ಟು ನೈಜವಾಗಿದೆ. ಇನ್ನೂ ಪುನೀತ್ ಸಮಾಧಿ ಬಳಿ ಬಂದವರು ಕಲಾಕೃತಿ ನೋಡಿ ಕಣ್ತುಂಬಿಕೊಳ್ತಿದ್ದಾರೆ.

  • ಅಪ್ಪುಗಾಗಿ ಭಾವುಕ ಪತ್ರ ಬರೆದ ಸಹೋದರ ಶಿವರಾಜ್ ಕುಮಾರ್

    ಅಪ್ಪುಗಾಗಿ ಭಾವುಕ ಪತ್ರ ಬರೆದ ಸಹೋದರ ಶಿವರಾಜ್ ಕುಮಾರ್

    ಇಂದು ಪುನೀತ್ ರಾಜ್ ಕುಮಾರ್ (Puneeth RajKumar) ಇಲ್ಲದ ಅವರ ಎರಡನೇ ವರ್ಷದ ಹುಟ್ಟು ಹಬ್ಬವನ್ನು (Birthday) ಆಚರಿಸಲಾಗುತ್ತಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ಪುನೀತ್ ಅಭಿಮಾನಿಗಳು ಅಪ್ಪು ಸಮಾಧಿಗೆ ಬಂದು ಪೂಜೆ ಸಲ್ಲಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಕಂಠೀರವ ಸ್ಟುಡಿಯೋಗೆ ಬಂದಿದ್ದಾರೆ ಅಪ್ಪು (Appu) ಅಭಿಮಾನಿಗಳು. ಈ ಸಂದರ್ಭದಲ್ಲಿ ಸಹೋದರನನ್ನು ನೆನಪಿಸಿಕೊಂಡು ನಟ ಶಿವರಾಜ್ ಕುಮಾರ್ (Shivraj Kumar) ಭಾವುಕವಾಗಿ ಪತ್ರ ಬರೆದಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ‘ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಉಕ್ಕಿ ಹರಿಯುತ್ತಿತ್ತು. ನಿನ್ನ ಕಣ್ಣಲ್ಲಿದ್ದ ಹೊಳಪು ನೀನು ಪವರ್ ಸ್ಟಾರ್ ಆಗೋದನ್ನ ಆವಾಗ್ಲೇ ಹೇಳ್ತಾ ಇತ್ತು. ನೀನು ನಕ್ಕರೆ ಎಲ್ರು ನಗ್ತಾ ಇದ್ರು. ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡ್ತಾ ಇದ್ರು, ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡ್ರಾ ಇದ್ರು, ಮನೆಗೆ ಬಂದ ಅತಿಥಿ ನೆಂಟರುಗಳಿಗೆಲ್ಲ ನೀನೇ ಬೇಕು. ಅಂತಹ ಪುಟ್ಟ ಅಪ್ಪು ಮಿಂಚಿನಂತೆ ತೆರೆಯ ಮೇಲೆ ಬಂದು ಹೆಮ್ಮರವಾಗಿ, ಕೋಟ್ಯಾಂತರ ಜನರಿಗೆ ನೆರಳಾಗಿದ್ದನ್ನು ಹತ್ತಿರದಿಂದ ನೋಡಿದ ನಾನೇ ಪುನೀತ.  ನಿನ್ನನು ಎತ್ತಿ ಆಡಿಸಿದ ಅಣ್ಣನಾಗಿ, ನಿನ್ನ ಜೊತೆ ಕೂಡಿ ಆಡಿದ ಸ್ನೇಹಿತನಾಗಿ, ನಿನ್ನ ಕೆಲಸಗಳನ್ನು ಮೆಚ್ಚಿ ಅಪ್ಪಿಕೊಂಡ ಕನ್ನಡಿಗನಾಗಿ, ಹಬ್ಬ ಯಾವುದೇ ಆಗಿದ್ರೂ ನಿನ್ನ ಹೆಸರಿನಲ್ಲಿ ಪಟಾಕಿಗಳನ್ನು ಹಚ್ಚೋ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳ್ತಾ ಇದೀನಿ, ನೀನು ಹುಟ್ಟಿದ್ದೇ ಒಂದು ಉತ್ಸವ. ನೀನು ಬೆಳೆದಿದ್ದು ಇತಿಹಾಸ, ನಿನ್ನ ಜೀವನ ಒಂದು ದಂತಕಥೆ. ನಿನ್ನ ನೆನಪುಗಳು ಎಂದಿಗೂ ಅಮರ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪು’ ಎಂದು ಬರೆದುಕೊಂಡಿದ್ದಾರೆ ಶಿವಣ್ಣ.

    ರಾಜ್ಯದ ನಾನಾ ಕಡೆಗಳಲ್ಲಿ ಅಪ್ಪು ಪುತ್ಥಳಿ ಅನಾವರಣ, ಅನ್ನ ಸಂತರ್ಪಣೆ, ಅನಾಥಾಶ್ರಮದಲ್ಲಿ ಹುಟ್ಟು ಹಬ್ಬ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಧಾರವಾಡದಲ್ಲಿ ಅಪ್ಪು ಹೆಸರಿನಲ್ಲೇ ಚಂದ್ರಶೇಖರ್ ಮಾಡಲಗೇರಿ ಮತ್ತು ತಂಡ ಚಿತ್ರೋತ್ಸವವನ್ನು ಆಯೋಜನೆ ಮಾಡಲಾಗಿದೆ. ಮೂರು ದಿನಗಳ ಕಾಲ ಅಪ್ಪು ಹೆಸರಿನಲ್ಲೇ ಈ ಚಿತ್ರೋತ್ಸವ ನಡೆಯಲಿದೆ. ಅಪ್ಪು ಹೆಸರಿನಲ್ಲಿ ಪ್ರಶಸ್ತಿಗಳನ್ನೂ ನೀಡಲಾಗುತ್ತಿದೆ. ಇದನ್ನೂ ಓದಿ: ನಟ ಜಗ್ಗೇಶ್ ಹುಟ್ಟು ಹಬ್ಬಕ್ಕೆ ಡಬಲ್ ಧಮಾಕಾ

    ಬೆಂಗಳೂರಿನ ಅನೇಕ ಕಡೆ ಇಂದು ಅಪ್ಪು ಹೆಸರಿನಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೇ, ಪುನೀತ್ ಅವರ ಹುಟ್ಟು ಹಬ್ಬದ ದಿನದಂದೆ ಆರ್.ಚಂದ್ರು ನಿರ್ದೇಶನದ ಉಪೇಂದ್ರ, ಸುದೀಪ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ಕಬ್ಜ ಚಿತ್ರ ರಿಲೀಸ್ ಆಗಿದೆ. ಬಿಡುಗಡೆಯಾದ ಅಷ್ಟೂ ಚಿತ್ರಮಂದಿರಗಳಲ್ಲೂ ಅಪ್ಪು ಕಟೌಟ್ ಹಾಕಿದೆ ಚಿತ್ರತಂಡ.

  • Special- ಪುನೀತ್ ಹುಟ್ಟುಹಬ್ಬ: ದಿನಪೂರ್ತಿ ಕಾರ್ಯಕ್ರಮ

    Special- ಪುನೀತ್ ಹುಟ್ಟುಹಬ್ಬ: ದಿನಪೂರ್ತಿ ಕಾರ್ಯಕ್ರಮ

    ವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಹುಟ್ಟುಹಬ್ಬವನ್ನು (Birthday) ಅಭಿಮಾನಿಗಳು ರಾಜ್ಯಾದ್ಯಂತ ಆಚರಿಸುತ್ತಿದ್ದಾರೆ. ಅಪ್ಪು (Appu) ಪುಣ್ಯಭೂಮಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6ರ ತನಕ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೆ, ರಾಜ್ಯದ ನಾನಾ ಕಡೆಗಳಲ್ಲಿ ಅಭಿಮಾನಿಗಳು ಹಲವು ರೀತಿಯಲ್ಲಿ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ. ಅಪ್ಪು ನಮ್ಮೊಂದಿಗೆ ದೈಹಿಕವಾಗಿ ಇಲ್ಲವೆಂದರೆ ಸಂಭ್ರಮಕ್ಕೇನೂ ಕೊರತೆ ಕಾಣುತ್ತಿಲ್ಲ.

    ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಬೆಳಗ್ಗೆ ಎಂಟು ಗಂಟೆಗೆ ಪೂಜೆ ಸಲ್ಲಿಸುವ ಮೂಲಕ ಹುಟ್ಟು ಹಬ್ಬಕ್ಕೆ ಚಾಲನೆ ನೀಡಲಾಗುತ್ತಿದೆ. ಬೆಳಗ್ಗೆ 10 ರಿಂದ ಅನ್ನ ಸಂತರ್ಪಣೆ ಹಾಗೂ ಸಂಜೆ 6 ಗಂಟೆಗೆ ಅಪ್ಪು ಹಿಟ್ ಹಾಡುಗಳ ಸಂಗೀತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಡಾ.ರಾಜ್ ಕುಟುಂಬದ ಅನೇಕ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಜಿನಿವಾದಲ್ಲಿ ಇಂದು ‘ಕಾಂತಾರ’ ಸಿನಿಮಾ ಪ್ರದರ್ಶನ : ರಿಷಬ್ ಶೆಟ್ಟಿ ಭಾಗಿ

    ರಾಜ್ಯದ ನಾನಾ ಕಡೆಗಳಲ್ಲಿ ಅಪ್ಪು ಪುತ್ಥಳಿ ಅನಾವರಣ, ಅನ್ನ ಸಂತರ್ಪಣೆ, ಅನಾಥಾಶ್ರಮದಲ್ಲಿ ಹುಟ್ಟು ಹಬ್ಬ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಧಾರವಾಡದಲ್ಲಿ ಅಪ್ಪು ಹೆಸರಿನಲ್ಲೇ ಚಂದ್ರಶೇಖರ್ ಮಾಡಲಗೇರಿ ಮತ್ತು ತಂಡ ಚಿತ್ರೋತ್ಸವವನ್ನು (Film Festival) ಆಯೋಜನೆ ಮಾಡಲಾಗಿದೆ. ಮೂರು ದಿನಗಳ ಕಾಲ ಅಪ್ಪು ಹೆಸರಿನಲ್ಲೇ ಈ ಚಿತ್ರೋತ್ಸವ ನಡೆಯಲಿದೆ. ಅಪ್ಪು ಹೆಸರಿನಲ್ಲಿ ಪ್ರಶಸ್ತಿಗಳನ್ನೂ ನೀಡಲಾಗುತ್ತಿದೆ.

    ಬೆಂಗಳೂರಿನ ಅನೇಕ ಕಡೆ ಇಂದು ಅಪ್ಪು ಹೆಸರಿನಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೇ, ಪುನೀತ್ ಅವರ ಹುಟ್ಟು ಹಬ್ಬದ ದಿನದಂದೆ ಆರ್.ಚಂದ್ರು ನಿರ್ದೇಶನದ ಉಪೇಂದ್ರ, ಸುದೀಪ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ಕಬ್ಜ ಚಿತ್ರ ರಿಲೀಸ್ ಆಗಿದೆ. ಬಿಡುಗಡೆಯಾದ ಅಷ್ಟೂ ಚಿತ್ರಮಂದಿರಗಳಲ್ಲೂ ಅಪ್ಪು ಕಟೌಟ್ ಹಾಕಿದೆ ಚಿತ್ರತಂಡ.

  • ಮಾರ್ಚ್ 17ಕ್ಕೆ `ಯುವರತ್ನ’ ಸಿನಿಮಾ ಮತ್ತೆ ತೆರೆಗೆ

    ಮಾರ್ಚ್ 17ಕ್ಕೆ `ಯುವರತ್ನ’ ಸಿನಿಮಾ ಮತ್ತೆ ತೆರೆಗೆ

    ನ್ನಡ ಚಿತ್ರರಂಗದಲ್ಲಿ ಮಾರ್ಚ್ 17ಕ್ಕೆ ಎರಡೆರಡು ಸಂಭ್ರಮ. ಒಂದು ಅಪ್ಪು ಅವರ ಹುಟ್ಟುಹಬ್ಬ ಮತ್ತೊಂದು `ಕಬ್ಜ’ ಸಿನಿಮಾ ಬಹುಭಾಷೆಗಳಲ್ಲಿ ತೆರೆಕಾಣುತ್ತಿದೆ. ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ 49ನೇ ವರ್ಷದ ಹುಟ್ಟುಹಬ್ಬವನ್ನ (Birthday) ಅದ್ದೂರಿಯಾಗಿ ಆಚರಿಸಲು ಅಪ್ಪು ಫ್ಯಾನ್ಸ್ ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ: ಲೈಗರ್ ಬ್ಯೂಟಿ ಜೊತೆ ಹಸೆಮಣೆ ಏರಲಿದ್ದಾರೆ `ಆಶಿಕಿ 2′ ಹೀರೋ

    ಪುನೀತ್ ರಾಜ್‌ಕುಮಾರ್ ಅವರು ಅಗಲಿ 2 ವರ್ಷಗಳಾಗಿದೆ. ಆದರೆ ಅವರ ನೆನಪು ಮಾತ್ರ ಇನ್ನೂ ಮಾಸಿಲ್ಲ. ಕಳೆದ ವರ್ಷದಂತೆ ಈ ಬಾರಿ ಕೂಡ ಅಪ್ಪು ಫ್ಯಾನ್ಸ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಮಾರ್ಚ್ 17ರಂದು ಏನೆಲ್ಲಾ ವಿಶೇಷತೆಗಳು ಇರುತ್ತೆ ಅನ್ನೋದರ ಮಾಹಿತಿ ಇಲ್ಲಿದೆ.

    ಅಪ್ಪು ಹುಟ್ಟುಹಬ್ಬಕ್ಕೆ ಬೆಂಗಳೂರಿನ ಜೆಪಿ ನಗರದ ಸಿದ್ಧಲಿಂಗೇಶ್ವರ ಚಿತ್ರಮಂದಿರ ವಿಶೇಷವಾಗಿ ರೆಡಿಯಾಗಿದೆ. ನಾಳೆ ಅಪ್ಪು ಅಭಿನಯದ `ಯುವರತ್ನ’ (Yuvaratna) ಸಿನಿಮಾವನ್ನು ವಿಶೇಷವಾಗಿ ಉಚಿತ ಪ್ರದರ್ಶನ ಮಾಡಲಾಗುತ್ತಿದೆ. ಯುವರತ್ನ ಸಿನಿಮಾ ರಾತ್ರಿ 9.30ಕ್ಕೆ ವಿಶೇಷ ಪ್ರದರ್ಶನ ಮಾಡಲಾಗುತ್ತೆ. ಆ ಬಳಿಕ ರಾತ್ರಿ 12 ಗಂಟೆಗೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಗುತ್ತದೆ. ಮಾರ್ಚ್ 12ರ ಬೆಳಗ್ಗೆ 9 ಗಂಟೆಗೆ ರಕ್ತದಾನ ಶಿಬಿರವನ್ನು ಅಪ್ಪು ಫ್ಯಾನ್ಸ್ ಹಮ್ಮಿಕೊಂಡಿದ್ದಾರೆ. ಜೆಪಿ ನಗರದ ದೊಡ್ಮನೆ ಅಭಿಮಾನಿಗಳ ಸಂಘ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಉಳಿದಂತೆ ಹಲವೆಡೆ ಅಪ್ಪು ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತೆ.

    ಅಪ್ಪು ನಟನೆಯ ಕೊನೆಯ ಸಾಕ್ಷ್ಯಚಿತ್ರ `ಗಂಧದಗುಡಿ’ ಮಾರ್ಚ್ 17ರಂದು ಒಟಿಟಿಗೆ ಲಗ್ಗೆ ಇಡುತ್ತಿದೆ. ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ. ಜೊತೆಗೆ ಅದೇ ದಿನ `ಕಬ್ಜ’ ಚಿತ್ರ ಕೂಡ ತೆರೆ ಕಾಣುತ್ತಿದ್ದು, ಚಿತ್ರತಂಡವು ಸಿನಿಮಾವನ್ನ ಪುನೀತ್‌ಗೆ ಅರ್ಪಣೆ ಮಾಡ್ತಿದ್ದಾರೆ.

  • ಅಪ್ಪು ಹೆಸರಿನಲ್ಲಿ ಜೆಡಿಎಸ್, ಕಾಂಗ್ರೆಸ್ ರಾಜಕೀಯ – PSI ಮೇಲೆ ಹಲ್ಲೆ

    ಅಪ್ಪು ಹೆಸರಿನಲ್ಲಿ ಜೆಡಿಎಸ್, ಕಾಂಗ್ರೆಸ್ ರಾಜಕೀಯ – PSI ಮೇಲೆ ಹಲ್ಲೆ

    ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ಸುಮಾರು ಒಂದು ದಶಕದಿಂದ ಕಾಮಗಾರಿ ನೆನೆಗುದಿಗೆ ಬಿದ್ದು ಈಗ ಉದ್ಘಾಟನೆಯಾಗಿರುವ ನೂತನ ರಂಗಮಂದಿರಕ್ಕೆ ಪುನೀತ್ ರಾಜಕುಮಾರ್ (Puneeth Rajkumar) ಹೆಸರಿಡಲು ಗಲಾಟೆ ನಡೆದಿದೆ.

    ರಂಗಮಂದಿರ ಮುಂದೆ ಅಪ್ಪು ಪುತ್ಥಳಿ ಪ್ರತಿಷ್ಠಾಪಿಸಲು ಜೆಡಿಎಸ್ ಮುಂದಾಗಿದ್ದು, ಮೆರವಣಿಗೆ ವೇಳೆ ಜೆಡಿಎಸ್ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಗಲಾಟೆಯಾಗಿದೆ. ಸಿಂಧನೂರು ಗ್ರಾಮೀಣ ಠಾಣೆ ಪಿಎಸ್‌ಐ (PSI) ಮಣಿಕಂಠರ ಕಾಲರ್ ಹಿಡಿದು ಹಲ್ಲೆ ಮಾಡಲಾಗಿದೆ. ಸಿಂಧನೂರು ಜೆಡಿಎಸ್ (JDS) ಶಾಸಕ ವೆಂಕಟರಾವ್ ನಾಡಗೌಡ ಪುತ್ರ ಅಭಿಷೇಕ ನಾಡಗೌಡ ಹಾಗೂ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ.

    ಸಿಂಧನೂರು ನಗರದ ಸುಕಾಲಪೇಟೆ ರಸ್ತೆಯಲ್ಲಿ ನಿರ್ಮಾಣವಾಗಿರುವ ನೂತನ ರಂಗಮಂದಿರಕ್ಕೆ ಪುನೀತ್ ರಾಜಕುಮಾರ್ ಹೆಸರಿಡಲು ಶಾಸಕರ ಪುತ್ರ ಒತ್ತಾಯಿಸಿದ್ದು, ಕಾಂಗ್ರೆಸ್ (Congress) ಕೈಯಲ್ಲಿರುವ ನಗರಸಭೆ ಆಡಳಿತ ಮಂಡಳಿ ಅಪ್ಪು ಹೆಸರಿಡಲು ವಿರೋಧಿಸಿದ್ದು, ಸ್ಥಳೀಯ ಕಲಾವಿದರ ಹೆಸರಿಡಲು ಕಾಂಗ್ರೆಸ್ ಮುಂದಾಗಿತ್ತು. ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಸೋಮಣ್ಣ ಕಣ್ಣೀರು – ಬಿಜೆಪಿ ಬಿಡಲ್ಲ ಎಂದು ಸ್ಪಷ್ಟನೆ

    ಮಾ. 13ರಂದು ರಂಗಮಂದಿರ ಉದ್ಘಾಟನೆಯಾಗಿದ್ದು, ಇಂದು (ಮಾರ್ಚ್ 14) ಪುನೀತ್ ರಾಜಕುಮಾರ್ ಪುತ್ಥಳಿ ಪ್ರತಿಷ್ಠಾಪಿಸಲು ಜೆಡಿಎಸ್ ಮುಂದಾಗಿದ್ದು, ನಗರದ ಎಪಿಎಂಸಿಯಿಂದ ರಂಗಮಂದಿರದವರೆಗೆ ಅಪ್ಪು ಪುತ್ಥಳಿ ಮೆರವಣಿಗೆ ವೇಳೆ ಗಲಾಟೆ ನಡೆದಿದೆ. ಪಿಎಸ್‌ಐ ಮೇಲೆ ಹಲ್ಲೆ ನಡೆದಿದ್ದನ್ನು ಖಂಡಿಸಿ ಅವರ ಪರವಾಗಿ ಸಾರ್ವಜನಿಕರು ಪ್ರತಿಭಟನೆಯನ್ನು ನಡೆಸಿದರು. ಸದ್ಯ ಮೆರವಣಿಗೆಯನ್ನು ಅರ್ಧಕ್ಕೆ ನಿಲ್ಲಿಸಿದ್ದು, ಮೆರವಣಿಗೆಗೆ ಸೇರಿದ್ದವರನ್ನು ಚದುರಿಸಲಾಗಿದೆ. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದನ್ನೂ ಓದಿ: ಗುಬ್ಬಿ ಶ್ರೀನಿವಾಸ್‌ಗೆ ಆಹ್ವಾನ – ಇಬ್ರಾಹಿಂ ವಿರುದ್ಧ ಹೆಚ್‌ಡಿಕೆ ಗರಂ

  • ಅಪ್ಪು ನಟಿಸಬೇಕಿದ್ದ ಕತೆಯಲ್ಲಿ ವಿನಯ್ ರಾಜ್‌ಕುಮಾರ್ ಹೀರೋ

    ಅಪ್ಪು ನಟಿಸಬೇಕಿದ್ದ ಕತೆಯಲ್ಲಿ ವಿನಯ್ ರಾಜ್‌ಕುಮಾರ್ ಹೀರೋ

    ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಇದೀಗ `ಒಂದು ಸರಳ ಪ್ರೇಮಕಥೆ’ ಚಿತ್ರದ ಮೂಲಕ ನವಿರಾದ ಪ್ರೇಮಕಥೆಯನ್ನ ತೆರೆಯ ಮೇಲೆ ಹೇಳಲು ರೆಡಿಯಾಗಿದ್ದಾರೆ. ಈ ಹಿಂದೆ ಅಪ್ಪು ಇಷ್ಟಪಟ್ಟಿದ್ದ ಕಥೆಯಲ್ಲಿ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದಾರೆ.

    `ಒಂದು ಸರಳ ಪ್ರೇಮಕಥೆ’ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ಭರದಿಂದ ಚಿತ್ರೀಕರಣ ನಡೆಯುತ್ತಿದ್ದು, ಮಾ.08ರಂದು ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಸಿಂಪಲ್ ಸುನಿ ನಿರ್ದೇಶನದ `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾ ಬಿಡುಗಡೆ ಆಗಿ ಹತ್ತು ವರ್ಷವಾದ ಹಿನ್ನೆಲೆಯಲ್ಲಿ `ಒಂದು ಸರಳ ಪ್ರೇಮ ಕತೆ’ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ವೇಳೆ 2 ವರ್ಷಗಳ ಹಿಂದೆ ನಡೆದ ಅಪ್ಪು ಜೊತೆಗಿನ ಸಂಭಾಷಣೆ ಬಗ್ಗೆ ಸಿಂಪಲ್ ಸುನಿ ಹಂಚಿಕೊಂಡಿದ್ದಾರೆ.‌ ಸುನಿ ರಚಿಸಿದ ಸ್ಟೋರಿಯನ್ನ ಅಪ್ಪು ಮೆಚ್ಚಿಕೊಂಡಿದ್ದರು. ಈ ಬಗ್ಗೆ ಸುನಿ ಮಾತನಾಡಿದ್ದಾರೆ. ಇದನ್ನೂ ಓದಿ: ತಾಯಿ ದೀಪಾ ಅಯ್ಯರ್ ಡ್ರೆಸ್ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿದವರಿಗೆ ಬೆಂಡೆತ್ತಿದ ಸಾನ್ಯ

    ಈ ಸಿನಿಮಾದ ಕತೆಯನ್ನು ಪುನೀತ್ ರಾಜ್‌ಕುಮಾರ್ ಇಷ್ಟಪಟ್ಟಿದ್ದರು. ಮೊದಲು ನಾಲ್ಕು ಸಾಲಲ್ಲಿ ಕತೆ ಹೇಳಿದ್ದೆ ಆಗ ಅಪ್ಪು ಸರ್ ಒಪ್ಪಿದ್ದರು. ಕತೆಯನ್ನು ಡೆವೆಲಪ್ ಮಾಡಬೇಕಿತ್ತು. ಆದರೆ ಅಷ್ಟರಲ್ಲಿ ದುರ್ಘಟನೆ ಸಂಭವಿಸಿತು. ಈಗ ಅದೇ ಕತೆಯಲ್ಲಿ ವಿನಯ್ ರಾಜ್‌ಕುಮಾರ್ ನಟಿಸುತ್ತಿದ್ದಾರೆ ಎಂದು ನಿರ್ದೇಶಕ ಸುನಿ ತಿಳಿಸಿದ್ದಾರೆ. ವಿನಯ್ ರಾಜ್ ಕುಮಾರ್ ನಟಿಸುತ್ತಿರುವ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಒಂದು ಸರಳ ಪ್ರೇಮಕಥೆ. ಚಿತ್ರದಲ್ಲಿ ನಾಯಕಿಯರಾಗಿ ಸ್ವಾತಿಷ್ಠ ಕೃಷ್ಣನ್, `ರಾಧಾ ಕೃಷ್ಣ’ ಧಾರಾವಾಹಿ ನಟಿ ಮಲ್ಲಿಕಾ ಸಿಂಗ್ ನಟಿಸುತ್ತಿದ್ದಾರೆ.

    ನಟ ವಿನಯ್ ರಾಜ್ ಕುಮಾರ್ ಮಾತನಾಡಿ ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ. ನನಗೆ ಮೊದಲಿನಿಂದಲೂ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ತುಂಬಾ ಇಷ್ಟ ಜೊತೆಗೆ ಸುನಿ ಅವರ ನಿರ್ದೇಶನದ ಶೈಲಿ ಕೂಡ ತುಂಬಾ ಇಷ್ಟ. ಸುನಿ ಅವರು ಈ ಸಿನಿಮಾ ಕಥೆ ಹೇಳಲು ಬಂದಾಗ ಅವರ ನಿರ್ದೇಶನದಲ್ಲಿ ಸಿನಿಮಾ ಮಾಡ್ತಿದ್ದೀನಿ ಅನ್ನೋದೇ ತುಂಬಾ ಖುಷಿ ಕೊಟ್ಟಿತ್ತು. ಈ ಚಿತ್ರದಲ್ಲಿ ಅತಿಶಯ್ ಪಾತ್ರದಲ್ಲಿ ನಟಿಸಿದ್ದೇನೆ. ಸಂಗೀತ ನಿರ್ದೇಶಕನ ಪಾತ್ರ. ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಆಗಬೇಕು ಅನ್ನೋದು ಅವನ ಕನಸು. ಆತನ ಮನಸ್ಸಲ್ಲಿ ಒಂದು ಹುಡುಗಿಯ ಹುಡುಕಾಟ ಯಾವಾಗಲೂ ಇರುತ್ತೆ ಇದು ಸಿನಿಮಾದ ಒಂದು ಎಳೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

    ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ ʻಸಿಂಪಲ್ಲಾಗ್ ಒಂದ್ ಲವ್ ಸ್ಟೋರಿʼಗೆ ಇಟ್ಟ ಮೊದಲ ಟೈಟಲ್ ʻಒಂದು ಸರಳ ಪ್ರೇಮಕಥೆʼ. ಯಾವುದಾದರೂ ಸಿನಿಮಾಗೆ ಈ ಟೈಟಲ್ ಇಡೋಣ ಎಂದು ಹತ್ತು ವರ್ಷದಿಂದ ಟೈಟಲ್ ರಿನಿವಲ್ ಮಾಡಿಕೊಂಡು ಬಂದಿದ್ದೆ. ಈ ಚಿತ್ರದ ಕಥೆ ಕೇಳಿ ವಿನಯ್ ರಾಜ್ ಕುಮಾರ್ ಒಕೆ ಮಾಡಿದರು. ಚಿತ್ರಕ್ಕೆ ಪ್ರಸನ್ನ ಅವರು ಕಥೆ ಬರೆದಿದ್ದಾರೆ. ಜ.23ರಂದು ಸಿನಿಮಾ ಮುಹೂರ್ತ ಆಗಿತ್ತು, ಬೆಂಗಳೂರು, ಚಿಕ್ಕಪೇಟೆಯಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಮೈಸೂರಿನಲ್ಲಿ ಇವತ್ತು ಕೊನೆಯ ದಿನದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಶೇಕಡಾ 50%ರಷ್ಟು ಚಿತ್ರೀಕರಣ ಮುಗಿದಿದೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

     

    View this post on Instagram

     

    A post shared by ಸುನಿ SuNi (@simplesuni)

    ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದು ತುಂಬಾ ಖುಷಿ ಕೊಟ್ಟಿದೆ. ಕನ್ನಡ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು ಎಂದು ಮಲ್ಲಿಕಾ ಸಿಂಗ್ ಮೊದಲ ಕನ್ನಡ ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡರು. ಸಾಧುಕೋಕಿಲ, ರಾಜೇಶ್ ನಟರಂಗ, ಅರುಣ ಬಾಲರಾಜ್ ಒಳಗೊಂಡ ಕಲಾವಿದರು ಒಂದು ಸರಳ ಪ್ರೇಮಕಥೆ ಚಿತ್ರದಲ್ಲಿದ್ದು, ಕಾರ್ತಿಕ್ ಛಾಯಾಗ್ರಹಣ, ಆದಿ ಸಂಕಲನ, ವೀರ್ ಸಮರ್ಥ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

  • Exclusive Details- ಯುವರಾಜ್ ಸಿನಿಮಾಗೆ ಮೂರು ಟೈಟಲ್: ‘ಯುವ’ ಫಿಕ್ಸ್ ಆಗಿದ್ದು ಯಾಕೆ?

    Exclusive Details- ಯುವರಾಜ್ ಸಿನಿಮಾಗೆ ಮೂರು ಟೈಟಲ್: ‘ಯುವ’ ಫಿಕ್ಸ್ ಆಗಿದ್ದು ಯಾಕೆ?

    ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ನಿನ್ನೆ ಸಿನಿಮಾ ರಂಗಕ್ಕೆ ಅಧಿಕೃತ ಪ್ರವೇಶ ಮಾಡಿದೆ. ಪುನೀತ್ ರಾಜ್ ಕುಮಾರ್ (Puneeth Rajkumar) ಉತ್ತರಾಧಿಕಾರಿ ಎಂದು ಬಿಂಬಿತರಾಗಿರುವ ಯುವರಾಜ್ ಕುಮಾರ್ (Yuvaraj Kumar) ನಟನೆಯ ಚೊಚ್ಚಲು ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಹಾಗೂ ಸಿನಿಮಾದ ಮುಹೂರ್ತ ಕೂಡ ನಡೆದಿದೆ. ಯುವರಾಜ್ ನಟನೆಯ ಮೊದಲ ಸಿನಿಮಾಗೆ ಶೀರ್ಷಿಕೆ ಏನಿರಬಹುದು ಎನ್ನುವ ಕುತೂಹಲ ಹಲವು ದಿನಗಳಿಂದ ಇತ್ತು. ಅದಕ್ಕೂ ತೆರೆ ಬಿದ್ದಿದೆ. ಆದರೆ, ಈ ಟೈಟಲ್ ಆಯ್ಕೆಯ ಹಿಂದೆ ಹಲವು ಲೆಕ್ಕಾಚಾರಗಳು ಇರುವುದು ಸುಳ್ಳಲ್ಲ.

    ಚಿತ್ರರಂಗಕ್ಕೆ ಯುವರಾಜ್ ಕುಮಾರ್ ಅವರನ್ನು ಲಾಂಚ್ ಮಾಡಲು ಮತ್ತು ಸಿನಿಮಾದ ಶೀರ್ಷಿಕೆ ಇಡಲು ಹಲವು ರೀತಿಯಲ್ಲಿ ಯೋಚನೆ ಮತ್ತು ಯೋಜನೆಯನ್ನು ಸಿದ್ಧ ಮಾಡಿತ್ತು ಹೊಂಬಾಳೆ ಫಿಲ್ಮ್ಸ್. ಇದರ ಭಾಗವಾಗಿ ಮೂರು ಸಿನಿಮಾ ಶೀರ್ಷಿಕೆಗಳನ್ನೂ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿತ್ತು. ಡಾ.ರಾಜ್ ನಟನೆಯ ಜ್ವಾಲಾಮುಖಿ ಮತ್ತು ಅಶ್ವಮೇಧ ಚಿತ್ರಗಳ ಶೀರ್ಷಿಕೆಯನ್ನೂ ಆಯ್ಕೆ ಮಾಡಿತ್ತು. ಆದರೆ, ಕೊನೆಯ ಬದಲಾವಣೆ ಎನ್ನುವಂತೆ ‘ಯುವ’ (Yuva) ಟೈಟಲ್ ಅನ್ನು ಅಂತಿಮಗೊಳಿಸಿದೆ. ಇದನ್ನೂ ಓದಿ: Breaking:ಸ್ಯಾಂಡಲ್‌ವುಡ್‌ನಲ್ಲಿ ಯುವ ಪರ್ವ ಆರಂಭ

    ಈಗಾಗಲೇ ಚಿತ್ರೋದ್ಯಮದಲ್ಲಿ ಯುವರಾಜ್ ಕುಮಾರ್, ‘ಯುವ’ ಹೆಸರಿನಲ್ಲಿ ಬ್ರ್ಯಾಂಡ್ ಆಗಿದ್ದಾರೆ. ಅಲ್ಲದೇ, ಪುನೀತ್ ರಾಜ್ ಕುಮಾರ್ ಮೊದಲ ಸಿನಿಮಾ ‘ಅಪ್ಪು’ (Appu) ಕೂಡ ಹೀಗೆಯೇ ಆಯ್ಕೆಯಾಗಿದ್ದು. ಈ ಎಲ್ಲವನ್ನೂ ಅಳೆದು ತೂಗಿ ಕೊನೆಗೂ ‘ಯುವ’ ಟೈಟಲ್ ಅನ್ನೇ ನಿರ್ದೇಶಕರು ಮತ್ತು ನಿರ್ಮಾಣ ಸಂಸ್ಥೆ ಅಂತಿಮಗೊಳಿಸಿದ್ದಾರೆ. ಮೊದಲ ಚಿತ್ರದಲ್ಲೇ ಪುನೀತ್ ರಾಜ್ ಕುಮಾರ್ ‘ಅಪ್ಪು’ ಆಗಿ ಫೇಮಸ್ ಆದರು. ಯುವರಾಜ್ ಕುಮಾರ್ ಕೂಡ ‘ಯುವ’ ಹೆಸರಿನಿಂದಲೇ ಮುಂದುವರೆಯಲಿ ಎನ್ನುವ ಗುರಿಯೂ ಈ ಟೈಟಲ್ ಹಿಂದಿದೆ.

    ಈಗಾಗಲೇ ಯುವ ಟೈಟಲ್ ಅನ್ನು ಎಲ್ಲರೂ ಮೆಚ್ಚಿದ್ದಾರೆ. ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕೂಡ ಆಗಿದೆ. ಇದು ಸೂಕ್ತ ಟೈಟಲ್ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗಿದೆ. ಸಿನಿಮಾದ ಕಥೆಯಲ್ಲೂ ನಾಯಕನ ಪಾತ್ರ ಯುವ ಹೆಸರಿನಿಂದಲೇ ಇರುವುದು ಪಕ್ಕಾ ಆಗಿದೆ. ಸಂತೋಷ್ ಆನಂದ್ ರಾಮ್ ಹೊಸ ರೀತಿಯಲ್ಲಿ ಕಥೆ ಬರೆದುಕೊಂಡು ಯುವರಾಜ್ ಕುಮಾರ್ ಅವರನ್ನು ಲಾಂಚ್ ಮಾಡುತ್ತಿದ್ದಾರೆ. ಇದೇ ತಿಂಗಳಿನಿಂದ ಚಿತ್ರೀಕರಣ ಕೂಡ ಶುರುವಾಗಲಿದೆ.

  • ಅಪ್ಪು ಸ್ಟೈಲಿನಲ್ಲಿ ಅಶ್ವಿನಿ ಭರ್ಜರಿ ವರ್ಕೌಟ್

    ಅಪ್ಪು ಸ್ಟೈಲಿನಲ್ಲಿ ಅಶ್ವಿನಿ ಭರ್ಜರಿ ವರ್ಕೌಟ್

    ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಪತ್ನಿ ಅಶ್ವಿನಿ (Ashwini) ಅವರು ಇದೀಗ ಪುನೀತ್ ಹಾದಿಯಲ್ಲೇ ಹೆಜ್ಜೆ ಇಡುತ್ತಿದ್ದಾರೆ. ಅಪ್ಪು ಸ್ಟೈಲಿನಲ್ಲಿಯೇ ಜಿಮ್ ವರ್ಕೌಟ್ (Workout)  ಮಾಡುತ್ತಾ ಬೆವರಿಳಿಸುತ್ತಿದ್ದಾರೆ. ಸದ್ಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    Ashwini Puneeth Rajkumar

    ಅಪ್ಪು (Appu) ಅಗಲಿಕೆ ನಂತರ ಮನೆಯ ಜವಾಬ್ದಾರಿಯನ್ನ ಅಶ್ವಿನಿ ಕೈಗೆತ್ತಿಕೊಂಡಿದ್ದಾರೆ. ಮುದ್ದು ಮಕ್ಕಳ ಪಾಲನೆಯ ಜೊತೆ ಪಿಆರ್‌ಕೆ ಸಂಸ್ಥೆಯನ್ನ ಮುನ್ನಡೆಸುತ್ತಿದ್ದಾರೆ. ಹೊಸ ಸಿನಿಮಾಗೆ(Film) ಬೆಂಬಲ(Support) ಸೂಚಿಸುವ ಮೂಲಕ ಚಿತ್ರರಂಗದಲ್ಲೂ ಆಕ್ಟೀವ್ ಆಗಿದ್ದಾರೆ.

    Appu wife Ashwini

    ಪುನೀತ್ ಅವರಿಗೆ ಜಿಮ್, ವರ್ಕೌಟ್ ಎಂದರೆ ತುಂಬಾ ಇಷ್ಟ. ಪ್ರತಿದಿನ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದರು. ಆದರೀಗ ಅಪ್ಪು ನೆನಪು ಮಾತ್ರ. ಆದರೆ ಅವರ ಪತ್ನಿ ಅಶ್ವಿನಿ ಈಗ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಪವರ್‌ಸ್ಟಾರ್ ಹಾಗೆ ಅಶ್ವಿನಿ ಕೂಡ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದಾರೆ. ಅಶ್ವಿನಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಶ್ವಿನಿ ಫಿಟ್ ಆಗಲು ವರ್ಕೌಟ್ ಪ್ರಾರಂಭಿಸಿದ್ದಾರೆ.

    ಇನ್ನೂ ತಮ್ಮ ಸಂಸ್ಥೆ ಪಿಆರ್‌ಕೆ (Prk Productions) ಕಡೆಯಿಂದ ಹೊಸ ಸಿನಿಮಾ ನಿರ್ಮಾಣದತ್ತ ಅಶ್ವಿನಿ ಬ್ಯುಸಿಯಾಗಿದ್ದಾರೆ. ಹೊಸ ಬಗೆಯ ಕಥೆಗಳನ್ನ ಅಶ್ವಿನಿ ಕೇಳುತ್ತಿದ್ದಾರೆ. ಅಪ್ಪು (Appu) ಕನಸಿನ (Dreams) ಹಾದಿಯಲ್ಲಿ ಪತ್ನಿ ಅಶ್ವಿನಿ ಸಾಗುತ್ತಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪುನೀತ್ ಹೆಸರಿನಲ್ಲಿ ‘ಮಕ್ಕಳ ಚಿತ್ರೋತ್ಸವ’: ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಬಾಲನಟರು

    ಪುನೀತ್ ಹೆಸರಿನಲ್ಲಿ ‘ಮಕ್ಕಳ ಚಿತ್ರೋತ್ಸವ’: ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಬಾಲನಟರು

    ಕ್ಕಳ ದಿನಾಚರಣೆ ಪ್ರಯುಕ್ತ ಉಲ್ಲಾಸ್ ಸ್ಕೂಲ್ ಸಿನಿಮಾಸ್ ವತಿಯಿಂದ ‘ಮಕ್ಕಳ ಚಿತ್ರೋತ್ಸವ’ ಲೋಗೋ ಲಾಂಚ್ ಮಾಡಲಾಯಿತು. ಜನವರಿ 26ರಿಂದ ಮೂರು ದಿನ ನಡೆಯುವ ಮಕ್ಕಳ ಚಲನ ಚಿತ್ರೋತ್ಸವವನ್ನು ಇದೇ ಮೊದಲ ಬಾರಿಗೆ ಉಲ್ಲಾಸ್ ಸ್ಕೂಲ್ ಸಿನಿಮಾಸ್ ಆಯೋಜನೆ ಮಾಡಿದೆ.  ಅದರ ಪೂರ್ವಭಾವಿಯಾಗಿ ಇಂದು ಚಂದನವನದ ಬಾಲನಟರನ್ನೆಲ್ಲ ಒಟ್ಟು ಗೂಡಿಸಿ ಮಕ್ಕಳ ಚಲನಚಿತ್ರೋತ್ಸವ ಲೋಗೋ ಲಾಂಚ್ ಮಾಡಿಸಲಾಯಿತು.

    ಜನವರಿ 26ರಿಂದ ಮೂರು ದಿನಗಳ ಕಾಲ ‘ಮಕ್ಕಳ ಚಲನಚಿತ್ರೋತ್ಸವ’ ನಡೆಯಲಿದ್ದು, ಈ ಬಾರಿ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಕೇವಲ ಕನ್ನಡ ಸಿನಿಮಾಗಳಿಗೆ ಆದ್ಯತೆ ನೀಡಲಾಗಿದೆ.  ಕಾರ್ಯಕ್ರಮದಲ್ಲಿ ಬಾಲ ನಟರಾಗಿ ಪ್ರಖ್ಯಾತಿ ಗಳಿಸಿದ್ದ ಕಲಾವಿದರನ್ನು ಒಂದೆಡೆ ಸೇರಿಸಿದ್ದು ವಿಶೇಷವಾಗಿತ್ತು. ಮಾಸ್ಟರ್ ಮಂಜುನಾಥ್, ಮಾಸ್ಟರ್ ರೋಹಿತ್, ಸುನಿಲ್ ರಾವ್, ವಿಜಯ ರಾಘವೇಂದ್ರ, ಮಾಸ್ಟರ್ ಆನಂದ್, ಅಭಿಷೇಕ್, ವಿನಾಯಕ ಜೋಶಿ, ಹೇಮಾ ಪಂಚಮುಖಿ, ಎಸ್.ಎಸ್. ಕೀರ್ತನ, ನಟರಾಜ್ ಗುಬ್ಬಿ ಸೇರಿದಂತೆ ಹಲವು ಕಲಾವಿದರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

    ಮಕ್ಕಳ ಚಿತ್ರಕ್ಕೆ ಆದ್ಯತೆ ಕಡಿಮೆಯಾಗುತ್ತಿದೆ. ಎಲ್ಲಾ ಫಿಲಂ ಪೆಸ್ಟಿವಲ್ ಗಳಿಗೆ ಹತ್ತು ಹದಿನೈದು ಸಿನಿಮಾಗಳನ್ನು ಕಳುಹಿಸಿದ್ರು ಒಂದೂ ಸಿನಿಮಾ ಕೂಡ ಸೆಲೆಕ್ಟ್ ಆಗೋದಿಲ್ಲ. ಮಕ್ಕಳ ಚಿತ್ರಕ್ಕೆ ಆದ್ಯತೆ ನೀಡೋ ದೃಷ್ಟಿಕೋನದಿಂದ ಉಲ್ಲಾಸ್ ಸ್ಕೂಲ್ ಸಿನಿಮಾಸ್ ವತಿಯಿಂದ ಇದೇ ಮೊದಲ ಬಾರಿಗೆ ಮಕ್ಕಳ ಚಲನಚಿತ್ರೋತ್ಸವ ಆಯೋಜಿಸಲಾಗಿದೆ. ಈ ಬಾರಿ ಅಪ್ಪು ಅವರ ಸ್ಮರಣಾರ್ಥ ಕೇವಲ ಕನ್ನಡ ಸಿನಿಮಾಗಳನ್ನು ಮಾತ್ರ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಮಾಡಲಾಗುವುದು ಎಂದು ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ಮಾಲೀಕರಾದ ಉಲ್ಲಾಸ್ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದೊಡ್ಮನೆಯಲ್ಲಿ ರಂಪಾಟ: ಕೈ ಕೈ ಮಿಲಾಯಿಸಿದ ಸಂಬರ್ಗಿ-ಗೊಬ್ಬರಗಾಲ

    ಲೋಗೋ ಲಾಂಚ್ ಮಾಡಿ ಮಾತನಾಡಿದ ನಟ ವಿಜಯ ರಾಘವೇಂದ್ರ ನಾವು ತುಂಬಾ ಅದೃಷ್ಟವಂತ ತಲೆಮಾರು ಅಂತ ಹೇಳೋಕೆ ಇಷ್ಟಪಡ್ತಿನಿ. ಮುಂಬರುವ ಜನರೇಷನ್ ಗೆ ಈ ರೀತಿ ಸಪೋರ್ಟ್ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಇವತ್ತು ಎಲ್ಲಾ ಬಾಲನಟರೂ ಒಂದೇ ವೇದಿಕೆಯಲ್ಲಿ ಮತ್ತೆ ಸೇರುವಂತಾಯ್ತು ಇದನ್ನು ಸಾಧ್ಯವಾಗಿಸಿದಕ್ಕೆ ಎಲ್ಲರಿಗೂ ಆಭಾರಿ. ಬಾಲನಟರಾಗಿದ್ದಾಗ ನಿರ್ದೇಶಕರಿಂದ, ಹಿರಿಯ ಕಲಾವಿದರಿಂದ ಸಿಕ್ಕ ಸಪೋರ್ಟ್, ತರಭೇತಿ ಎಲ್ಲವೂ ನಮ್ಮನ್ನು ಇಲ್ಲಿವರೆಗೆ ಕರೆತಂದು ನಿಲ್ಲಿಸಿವೆ. ಮಕ್ಕಳ ಚಿತ್ರಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆರಂಭವಾಗಿರುವ ಮಕ್ಕಳ ಚಲನಚಿತ್ರೋತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ರು. ಕಾರ್ಯಕ್ರಮದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಮಾಜಿ ಅಧ್ಯಕ್ಷರಾದ ಚಿನ್ನೇಗೌಡ್ರು, ಸುಂದರ್ ರಾಜ್, ಎಮ್ ಏನ್ ಕುಮಾರ್, ಟಿ ಪಿ ಸಿದ್ದರಾಜು ಸೇರಿದಂತೆ ಹಲವರು ಭಾಗಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]