Tag: ಅಪ್ಪು

  • ಭತ್ತದ ಬೆಳೆಯಲ್ಲಿ ಮೂಡಿ ಬಂದ ಅಪ್ಪು ಚಿತ್ರ – ವಿಭಿನ್ನ ಕಲೆ ಮೂಲಕ ಅಭಿಮಾನ ಮೆರೆದ ರೈತ

    ಭತ್ತದ ಬೆಳೆಯಲ್ಲಿ ಮೂಡಿ ಬಂದ ಅಪ್ಪು ಚಿತ್ರ – ವಿಭಿನ್ನ ಕಲೆ ಮೂಲಕ ಅಭಿಮಾನ ಮೆರೆದ ರೈತ

    ರಾಯಚೂರು: ಕರ್ನಾಟಕ ರತ್ನ, ಕನ್ನಡ ಚಿತ್ರರಂಗದ ದೊಡ್ಮನೆ ಕಣ್ಮಣಿ ಪುನೀತ್ ರಾಜಕುಮಾರ್ (Puneeth Rajkumar) ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಸಾಕಷ್ಟು ಅಭಿಮಾನಿಗಳು ಈಗಾಗಲೇ ಭಿನ್ನ ವಿಭಿನ್ನ ರೀತಿಯಲ್ಲಿ ಅಪ್ಪು ಮೇಲಿನ ಅಭಿಮಾನ ಮೆರೆದಿದ್ದಾರೆ. ಆದರೆ ರಾಯಚೂರಿನ (Raichur) ಅಭಿಮಾನಿ ರೈತ ಕಲಾವಿದ ಸತ್ಯನಾರಾಯಣ ಮಾತ್ರ ವಿಶೇಷವಾಗಿ ನಿಲ್ಲುತ್ತಾರೆ.

    ಸಿರವಾರ ತಾಲೂಕಿನ ಡೋಣಿ ಬಸವಣ್ಣ ಕ್ಯಾಂಪ್‌ನ ರೈತ, ಅಪ್ಪು ಅಭಿಮಾನಿ ಸತ್ಯನಾರಾಯಣ ತನ್ನ ಎರಡು ಎಕರೆ ಗದ್ದೆಯಲ್ಲಿ ಜಪಾನ್ ತಂತ್ರಜ್ಞಾನ ಮೂಲಕ ವಿವಿಧ ಭತ್ತದ ತಳಿಗಳನ್ನು ಬೆಳೆದು ಅಪ್ಪು ಚಿತ್ರ ಬಿಡಿಸಿದ್ದಾರೆ. ಈ ಮೂಲಕ ಭತ್ತದ ಬೆಳೆಯಲ್ಲಿ ಪುನೀತ್ ರಾಜಕುಮಾರ್‌ನ ಜೀವಂತವಿರಿಸಿದ್ದಾರೆ.

    ತೆಲಂಗಾಣ, ಗುಜರಾತ್‌ನಿಂದ ತಂದ ಕಾವೇರಿ, ಗೋಲ್ಡನ್ ರೋಸ್, ಕಾಲ ಭಟ್ಟಿ ಹೆಸರಿನ 100 ಕೆ.ಜಿ ಭತ್ತದ ಬೀಜಗಳನ್ನು ನೆಟ್ಟು ಸಾವಯವ ಪದ್ಧತಿಯಲ್ಲಿ ಬೆಳೆದು ಅಪ್ಪು ಮೇಲಿನ ಅಭಿಮಾನ ಮೆರೆದಿದ್ದಾರೆ. ಬರದ ನಡುವೆಯೇ ಟ್ಯಾಂಕರ್ ಮೂಲಕ ಗದ್ದೆಗೆ ನೀರು ಹಾಯಿಸಿ ಸುಮಾರು 3 ಲಕ್ಷ ರೂ. ಖರ್ಚು ಮಾಡಿ, ನಿತ್ಯ ನಿಗಾವಹಿಸಿ 90 ದಿನದ ಬೆಳೆಯಲ್ಲಿ ಅದ್ಭುತ ಕಲಾಚಿತ್ರ ಮೂಡಿಸಿದ್ದಾರೆ. ಭಾವಚಿತ್ರದ ಕೆಳಗೆ ‘ಕರ್ನಾಟಕ ರತ್ನ’ ಅನ್ನೋ ಅಕ್ಷರಗಳನ್ನೂ ಬೆಳೆಯಲ್ಲೇ ಬರೆದಿದ್ದಾರೆ. ಒಂದೊಂದು ಅಕ್ಷರ 40 ಅಡಿ ಇದೆ. ತನ್ನ ಅಂಗವೈಕಲ್ಯ ಮೆಟ್ಟಿ ನಿಂತು ಉತ್ತಮ ಬೆಳೆ ಬೆಳೆಯುವ ಮೂಲಕ ಅಪ್ಪು ದ್ವಿತೀಯ ಪುಣ್ಯಸ್ಮರಣೆಗೆ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ಇದನ್ನೂ ಓದಿ: Operation Ajay: ಇಸ್ರೇಲ್‌ನಿಂದ 230 ಮಂದಿ ಭಾರತೀಯರ ಆಗಮನ – ಕನ್ನಡಿಗರಿಗೆ ಟಿ.ಬಿ ಜಯಚಂದ್ರ ಆತ್ಮೀಯ ಸ್ವಾಗತ

    ರೈತ (Farmer) ಸತ್ಯನಾರಾಯಣ ಅವರಿಗೆ ಅಪ್ಪು ಮೇಲೆ ಇರುವ ಅಭಿಮಾನಕ್ಕೆ ಇಡೀ ಗ್ರಾಮವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಚಪ್ಪಲಿ ಹಾಕದೆ ಬರಿಗಾಲಲ್ಲೇ ಉಳುಮೆ ಮಾಡಿರುವ ರೈತ ಸತ್ಯನಾರಾಯಣ, ಗದ್ದೆಗೆ ಪೂಜೆ ಮಾಡುವ ಮೂಲಕ ಅಪ್ಪು ಮೇಲಿನ ಅಭಿಮಾನದ ಭಕ್ತಿಯನ್ನೂ ಮೆರೆಯುತ್ತಿದ್ದಾರೆ. ಸಾಮಾನ್ಯ ಕಣ್ಣಿಗೆ ಕಪ್ಪು, ಹಸಿರು ಬೆಳೆ ಮಾತ್ರ ಕಾಣುತ್ತಿದ್ದರೂ ಡ್ರೋನ್ ಕ್ಯಾಮೆರಾ ಕಣ್ಣಿಲ್ಲಿ ಅಪ್ಪು ಚಿತ್ರ ಮನಮೋಹಕವಾಗಿ ಮೂಡಿಬಂದಿದೆ.

    ಈಗಾಗಲೇ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಿರುವ ಸತ್ಯನಾರಾಯಣ ಮೆಚ್ಚುಗೆಯನ್ನೂ ಪಡೆದಿದ್ದಾರೆ. ಅಶ್ವಿನಿಯವರ ಕೈಯಿಂದ ಅಪ್ಪು ಭಾವಚಿತ್ರವನ್ನು ಲೋಕಾರ್ಪಣೆ ಮಾಡಿಸುವ ಇಂಗಿತ ಹೊಂದಿದ್ದಾರೆ. ಒಟ್ಟಿನಲ್ಲಿ ಇಡೀ ದೇಶದಲ್ಲೇ ಅಪರೂಪದ ಕಲೆಯ ಮೂಲಕ ಅಪ್ಪು ಅಭಿಮಾನಿ ತನ್ನ ಅಭಿಮಾನವನ್ನು ಜಗತ್ತಿಗೆ ತೋರಿಸಿದ್ದಾರೆ. ಇದನ್ನೂ ಓದಿ: ಐಟಿ ಭರ್ಜರಿ ಬೇಟೆ- ಬಾಕ್ಸ್‌ಗಳಲ್ಲಿ ಕಂತೆ ಕಂತೆ ಸಂಗ್ರಹಿಸಿಟ್ಟಿದ್ದ 42 ಕೋಟಿ ರೂ. ಸೀಜ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪುನೀತ್‌ ನೆನಪಲ್ಲಿ ಅನದಾನ ಮಾಡಿದ ಅಪ್ಪು ಅಭಿಮಾನಿಗೆ ಭೇಷ್‌ ಎಂದ ಫ್ಯಾನ್ಸ್

    ಪುನೀತ್‌ ನೆನಪಲ್ಲಿ ಅನದಾನ ಮಾಡಿದ ಅಪ್ಪು ಅಭಿಮಾನಿಗೆ ಭೇಷ್‌ ಎಂದ ಫ್ಯಾನ್ಸ್

    ಪ್ಪು (Appu) ಸದಾ ಕಣ್ಣ ಮುಂದಿನ ದೀಪ. ಅದು ಯಾವತ್ತೂ ಆರುವುದಿಲ್ಲ. ಅದೆಂಥ ಬಿರುಗಾಳಿ ಬಂದರೂ ಅಲುಗಾಡುವುದಿಲ್ಲ. ಅದಕ್ಕೆ ಆ ಜೀವವನ್ನು ಅಪ್ಪು ಎನ್ನುತ್ತಾರೆ. ಆ ಕನ್ನಡದ ಕಂದ ಮಾಡಿದ ಸಮಾಜ ಸೇವೆಯೆಷ್ಟೋ? ಹಸಿದವರಿಗೆ ಅನ್ನ ಬಡಿಸಿದ್ದೆಷ್ಟೊ? ದೇಹಿ ಎಂದವರಿಗೆ ಕೈ ತುಂಬಾ ಕೊಟ್ಟಿದ್ದೆಷ್ಟೋ? ಈಗ ಅದೇ ನೆನಪಲ್ಲಿ ಆಂಧ್ರ ಪ್ರದೇಶದ ಅಪ್ಪು ಅಭಿಮಾನಿ(Appu Fan) ನಿತ್ಯ ನೂರಾರು ಹಸಿದ ಹೊಟ್ಟೆಗಳಿಗೆ ಅನ್ನ ಕೊಡುತ್ತಿದ್ದಾರೆ. ಏನಿದು ಅಪ್ಪು ಅಭಿಮಾನಿ ಅನ್ನ ದಾನದ ಕಥೆ. ಇಲ್ಲಿದೆ ಮಾಹಿತಿ.

    ಆ ಕೂಸು ಜೀವಂತ ಇದ್ದಾಗ ಗೊತ್ತಾಗಲಿಲ್ಲ. ಆ ಕೂಸು ಉಸಿರಾಡುತ್ತಿದ್ದಾಗ ಅರಿವಿಗೆ ಬರಲಿಲ್ಲ. ಆ ಕೂಸು ನಡೆದಾಡುತ್ತಿದ್ದಾಗ…ಎರಡು ಕಣ್ಣಿಗೆ ನಿಲುಕಲಿಲ್ಲ. ಬಹುಶಃ ಈ ಗುಣವೇ ಇಂದು ಅವರನ್ನು ದೇವರ ಮುಂದಿನ ನಂದಾದೀಪವಾಗಿಸಿದೆ. ಸೂರ್ಯ ಚಂದ್ರ ಇರೋವರೆಗೂ ಮರೆಯದಂಥ ಪಾಠ ಕಲಿಸಿ ಹೋಗಿದೆ. ಪುನೀತ್ ರಾಜ್‌ಕುಮಾರ್ ಈ ರೀತಿ ನಮ್ಮನ್ನು ಈ ಕ್ಷಣಕ್ಕೂ ಕಾಡುತ್ತಿದ್ದಾರೆ, ಕಂಗಾಲಾಗಿಸುತ್ತಾರೆ, ಬೆರಗು ಮೂಡಿಸುತ್ತಾರೆ. ಕೊನೆಗೆ ನಿಷ್ಕಲ್ಮಶ ನಗುವಿನಿಂದ ಕಣ್ಣ ಪಾಪೆಯಲ್ಲಿ ಹನಿ ನೀರಾಗುತ್ತಾರೆ. ಜೊತೆಗೆ ಇರದ ಜೀವ ಎಂದೆಂದೂ ಜೀವಂತ. ಈ ಸಾಲು ನಮ್ಮ ಹೃದಯ ಬಡಿತವಾಗುವುದು ಹೀಗೆ. ತಾಯಿಯ ಸೀರೆ ಸೆರಗಲ್ಲಿ ಮಲಗಿದ ಹಸಗೂಸಿನ ಹಾಗೆ. ಇದನ್ನೂ ಓದಿ:ಅಕ್ಷಯ್ ನಟನೆಯ ‘ವೆಲ್‌ಕಮ್ 3’ ಸಿನಿಮಾದಲ್ಲಿ ಸ್ಟಾರ್ ಕಲಾವಿದರ ದಂಡು

    ಪುನೀತ್‌ ರಾಜ್‌ಕುಮಾರ್ (Puneeth Rajkumar) ಹೋಗಿ 2 ವರ್ಷ ಸಮೀಪ. ಕಂಠೀರವ ಸ್ಟುಡಿಯೋದಲ್ಲಿ ಅವರ ಸಮಾಧಿ ಮುಂದೆ ನಿತ್ಯ ನೂರಾರು ಜನರು ಹಣತೆ ಬೆಳಗುತ್ತಾರೆ. ಮಗುವಿನ ನಾಮಕರಣ ಮಾಡುತ್ತಾರೆ. ಜೋಡಿಗಳು ದಾಂಪತ್ಯಕ್ಕೆ ಕಾಲಿಡುತ್ತಾರೆ. ಇದ್ದಾಗ ನೋಡಲಾಗಲಿವಲ್ಲ ಅಣ್ಣಾವ್ರ ಮಗನೇ ಎನ್ನುತ್ತಾ ಬಿಕ್ಕುತ್ತಾರೆ. ಯಾರು ಏನು ಮಾಡಿದರೂ ಅಪ್ಪು ಅದೇ ರಾಜಕುಮಾರನ ನಗೆ ಚೆಲ್ಲುತ್ತಾ ನಿದ್ದೆ ಮಾಡುತ್ತಿದ್ದಾರೆ. ಪಕ್ಕದಲ್ಲಿ ಅಪ್ಪ-ಅಮ್ಮ ಅನಿವಾರ್ಯವಾಗಿ ಜೋಗುಳ ಹಾಡುತ್ತಾರೆ. ಜೀವಂತ ಇರುವ ಇಡೀ ಕರುನಾಡು ದೇವರು ಗೀಚಿದ ಕಪ್ಪು ಅಕ್ಷರಕ್ಕೆ ಹಿಡಿ ಶಾಪ ಹಾಕುತ್ತದೆ. ಆದರೆ ಅಪ್ಪು ಬಿಟ್ಟು ಹೋದ ದಾನ ಧರ್ಮದ ಪಾಠ. ಹೊಸ ದಿಕ್ಕಿಗೆ ದಾರಿ ತೋರಿಸುತ್ತದೆ. ಅದಕ್ಕೆ ಸಾಕ್ಷಿ ಆಂಧ್ರಪ್ರದೇಶ ಅನಂತಪುರದ ರನ್ನ ರೆಡ್ಡಿಯ(Ranna Reddy) ಅನ್ನ ದಾಸೋಹ.

    ಅಪ್ಪು ಕರುನಾಡಿನಲ್ಲಿ ಹುಟ್ಟಿ ಇಲ್ಲೇ ಮಣ್ಣಾದರು. ಆದರೆ ಅವರು ಹೋದ ಮೇಲೆ ನಡೆದ ಮನ್ವಂತರ ಇದೆಯಲ್ಲ. ಅದನ್ನು ಊಹಿಸಿಕೊಳ್ಳಲೂ ಸಾಧ್ಯ ಇಲ್ಲ. ಒಬ್ಬ ವ್ಯಕ್ತಿ ಜೀವಂತ ಇದ್ದಾಗ ಇಷ್ಟೆಲ್ಲ ಮಾಡಿದ್ದರಾ? ಒಂದು ಕೈಯಿಂದ ಕೊಟ್ಟಿದ್ದು ಇನ್ನೊಂದು ಕೈಗೆ ಗೊತ್ತಾಗಬಾರದು. ಹಾಗೆ ಬಿಚ್ಚುಗೈಯಾಗಿ ಬದುಕಿದ್ದರಾ? ಇದೆಲ್ಲವೂ ಹೊರಬಿದ್ದದ್ದು ಅವರು ಲೋಕ ಬಿಟ್ಟು ಹೋದ ಮೇಲೆ. ಅದೇ ಕೋಟಿ ಕೋಟಿ ಜನರಿಗೆ ಸ್ಪೂರ್ತಿಯಾಯಿತು. ಅನ್ನದಾನದಿಂದ ಹಿಡಿದು ನೇತ್ರದಾನವರೆಗೆ. ಮಾದರಿಯಾಯಿತು. ಅದನ್ನೆಲ್ಲ ನೋಡಿಯೇ ರನ್ನ ರೆಡ್ಡಿ ಸಂಜೀವಿನಿ ಟ್ರಸ್ಟ್ ಮೂಲಕ ಅನಂತಪುರದ ಸಾವಿರಾರು ಹಸಿದ ಹೊಟ್ಟೆಗಳಿಗೆ ನಿತ್ಯ ತಾಯಿಯಾಗಿದ್ದಾರೆ. ಬಡವರು, ವೃದ್ಧರು, ಅನಾಥರು ಇವರನ್ನು ಹುಡುಕಿಕೊಂಡು ಹೋಗಿ ತುತ್ತು ತಿನ್ನಿಸಿ ಪುನೀತರಾಗುತ್ತಾರೆ.

    ಒಬ್ಬ ವ್ಯಕ್ತಿ ಬಳಿ ಕೋಟಿ ಕೋಟಿ ಹಣ ಇರಬಹುದು. ಆದರೆ ಅದರ ಮುಷ್ಟಿ ಪಾಲನ್ನು ಹಂಚುವ ಗುಣ ಇರದಿದ್ದರೆ ಹೇಗೆ? ಆ ಆಕಾಂಕ್ಷೆ ಇದ್ದಿದ್ದರಿಂದಲೇ ಅಪ್ಪು ನೊಂದವರ ಪಾಲಿಗೆ ದೇವರು ಕೊಟ್ಟ ಮಗನಾದರು. ಅದನ್ನೆಲ್ಲ ನೋಡಿ ಕೇಳಿ ಓದಿಯೇ ರನ್ನ ರೆಡ್ಡಿ ಅನ್ನ ಸಂತರ್ಪಣೆಗೆ ಮನಸು ಮಾಡಿದರು. ಕೈಯಾರೆ ಕಾಸು ಸುರಿದು ಹಸಿದ ಜೀವಗಳಿಗೆ ಅಮೃತ ನೀಡಿದರು. ಅಪ್ಪು ನನ್ನ ಪಾಲಿನ ದೇವರು ಬದುಕು ಕಲಿಸಿದ ಹೆತ್ತವ್ವ ಹೀಗೆ ಹೇಳುತ್ತಾರೆ ಅವರು. ಇದು ನೋಡಿ ಒಬ್ಬ ಮನುಷ್ಯ ಕಲಿಯಬೇಕಾದ ನೀತಿ ಪ್ರೀತಿ. ಇಷ್ಟೆಲ್ಲ ಕೊಟ್ಟು ಕೆಲವನ್ನು ಇಲ್ಲೇ ಬಿಟ್ಟು ಅಪ್ಪು ಆಕಾಶದ ನಕ್ಷತ್ರವಾಗಿದ್ದಾರೆ. ಆ ನಕ್ಷತ್ರದ ಬೆಳಕಿನಲ್ಲಿ ದಾರಿ ಹುಡುಕುತ್ತಾ ನಡೆಯುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪ್ಪು ಕನಸಿಗೆ ಮಹತ್ವದ ನಿರ್ಧಾರ ಕೈಗೊಂಡ ಅಶ್ವಿನಿ ಪುನೀತ್‌ ರಾಜ್‌ಕುಮಾರ್

    ಅಪ್ಪು ಕನಸಿಗೆ ಮಹತ್ವದ ನಿರ್ಧಾರ ಕೈಗೊಂಡ ಅಶ್ವಿನಿ ಪುನೀತ್‌ ರಾಜ್‌ಕುಮಾರ್

    ಪ್ಪು (Appu) ಮಹಾ ಕನಸನ್ನು ನನಸಾಗಿಸುತ್ತಿದ್ದಾರೆ ಪತ್ನಿ ಅಶ್ವಿನಿ. ಅಂದು ಪಾರ್ವತಮ್ಮ ಮಾಡಿದ ಕಾಯಕವನ್ನು ಮುಂದವರೆಸಿಕೊಂಡು ಹೋಗುತ್ತಿದ್ದಾರೆ. ರಾಜ್ ಹೇಗೆ ಪತ್ನಿ ಯನ್ನು ಬೆಂಬಲಿಸಿದ್ದರೊ ಅದೇ ರೀತಿ ಅಶ್ವಿನಿ(Ashwini Puneeth Rajkumar) ಹಿಂದೆ ಪುನೀತ್ ಇದ್ದರು. ಮೂವರು ದೇವರ ಆಶೀರ್ವಾದದಿಂದ ಇಂದು ಅಶ್ವಿನಿ ಹೊಸ ಸಾಹಸ ಮಾಡುತ್ತಿದ್ದಾರೆ.

    ಅಪ್ಪು ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ಹೀಗೊಂದು ಮಾತನ್ನು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಕಣ್ಣ ಮುಂದೆ ಇಲ್ಲದ ಜೀವವನ್ನು ನೆನೆಸಿಕೊಂಡು ಸಂಕಟ ಪಡುತ್ತಾರೆ. ಒಂದೊಂದು ದಿನವನ್ನು ಒಂದೊಂದು ವರ್ಷದಂತೆ ಕಳೆಯುತ್ತಿದ್ದಾರೆ. ಇನ್ನು ಅಶ್ವಿನಿ ಹಾಗೂ ಮಕ್ಕಳ ಸ್ಥಿತಿ ಏನಾಗಿರಬೇಡ? ಎಲ್ಲವೂ ದೈವೆಚ್ಛೆ. ಹೀಗಂತ ಅಂದುಕೊಂಡು ಅಪ್ಪು ಕನಸನ್ನು ನನಸು ಮಾಡುವತ್ತ ಹೊಸ ಹೆಜ್ಜೆ ಇಟ್ಟಿದ್ದಾರೆ ಅಶ್ವಿನಿ. ಮಹಿಳೆಯರ ಶಕ್ತಿಯನ್ನು ಕರುನಾಡಿಗೆ ತೋರಿಸಲು ಸಜ್ಜಾಗಿದ್ದಾರೆ.

    ಪಾರ್ವತಮ್ಮ ರಾಜ್‌ಕುಮಾರ್ (Parvatamma Rajkumar) ಕನ್ನಡದ ಧೀಮಂತ ನಿರ್ಮಾಪಕಿ. ಅವರಿಗೆ ಬೆಂಬಲವಾಗಿ ನಿಂತಿದ್ದರು ಅಣ್ಣಾವ್ರು. ಒಬ್ಬ ಹೆಣ್ಣು ಮಗಳು ನಿರ್ಮಾಪಕಿಯಾಗಲು ಹೇಗೆ ಸಾಧ್ಯ? ಆಡಿಕೊಂಡವರು ಇದ್ದರು. ಅದಕ್ಕೆಲ್ಲ ಸೊಪ್ಪು ಹಾಕದೆ, ಎದೆಗುಂದದೆ ಮುಂದಿಟ್ಟ ಹೆಜ್ಜೆ ಹಿಂದಿಡದ ಕಾರಣಕ್ಕೆ ಪಾರ್ವತಮ್ಮ ಹೆಡ್ಡಾಫೀಸ್ ಎಂದು ಕರೆಸಿಕೊಂಡರು. ಮಹಿಳೆಯರಿಗಾಗಿ ಅವರು ಶಕ್ತಿಧಾಮವನ್ನು ಸ್ಥಾಪಿಸಿದ್ದು ಗೊತ್ತು. ಹಾಗೆಯೇ ಬಣ್ಣದ ಲೋಕದಲ್ಲಿ ಅನೇಕ ಹೊಸ ನಟಿಯರಿಗೆ ಅವಕಾಶ ಕೊಟ್ಟು ಗಾಢ್‌ ಮದರ್ ಎಂದು ಕರೆಸಿಕೊಡರು. ಇದನ್ನೂ ಓದಿ:ತಮಿಳಿಗೆ ಹಾರಿದ ‘ಸೀತಾರಾಮಂ’ ನಟಿ- ಶಿವಕಾರ್ತಿಕೇಯನ್‌ಗೆ ಮೃಣಾಲ್ ನಾಯಕಿ

    ರಾಜ್‌ಕುಮಾರ್ ಸಿನಿಮಾಗಳಿಗೆ ನಾಯಕಿಯರನ್ನು ಆಯ್ಕೆ ಮಾಡುತ್ತಿದ್ದರು ಪಾರ್ವತಮ್ಮ. ಜಯಮಾಲಾ, ಮಂಜುಳಾ, ಆರತಿ. ಇವರನ್ನು ರಾಜ್ ಚಿತ್ರಗಳಿಗೆ ಆಯ್ಕೆ ಮಾಡಿ ಅವರಿಗೆಲ್ಲ ಸ್ಟಾರ್ ಪಟ್ಟ ನೀಡಿದರು. ಶಿವಣ್ಣನಿಗಾಗಿ ಸುಧಾರಾಣಿ, ಆಶಾರಾಣಿ, ಅನು ಪ್ರಭಾಕರ್ ಸೇರಿದಂತೆ ಹಲವು ನಟಿಯರು ಪಾರ್ವತಮ್ಮನವರ ಆಶೀರ್ವಾದ ಪಡೆದರು. ರಾಘಣ್ಣನ ನಂಜುಂಡಿ ಕಲ್ಯಾಣ್‌ಕ್ಕೆ ಮಾಲಾಶ್ರೀ. ಅಪ್ಪು ಚಿತ್ರಗಳಿಗೆ ರಕ್ಷಿತಾ, ರಮ್ಯಾ ಬಂದು ಈಗಲೂ ಹೆಸರು ಉಳಿಸಿಕೊಂಡಿರು. ಈ ನಟಿಯರಿಗೆ ಸ್ತ್ರಿ ಶಕ್ತಿಯಾಗಿದ್ದು ಪಾರ್ವತಮ್ಮ.

    ಇದೀಗ ಅಶ್ವಿನಿ ಇನ್ನೊಂದು ರೂಪದಲ್ಲಿ ಮಹಿಳೆಯರಿಗೆ ಬಲ ನೀಡಲು ತಯಾರಾಗಿದ್ದಾರೆ. ಪಿಆರ್‌ಕೆ ಬ್ಯಾನರ್‌ನಲ್ಲಿ ಮಹಿಳೆಯರಿಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಿದ್ದಾರೆ. ಮಹಿಳಾ ನಿರ್ದೇಶಕಿರು, ಕತೆಗಾರರು, ಸಂಭಾಷಣೆಕಾರರು, ನಟಿಯರು. ಹೀಗೆ ಎಷ್ಟು ಸಾಧ್ಯವೋ ಅಷ್ಟು ಕಡೆ ಮಹಿಳೆಯರಿಗೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಘೋಷಿಸಿದ್ದಾರೆ. ಅಪ್ಪು ಕೂಡ ಪತ್ನಿಯನ್ನು ಅನುಮೋದಿಸುತ್ತಿದ್ದರು. ಈಗದನ್ನು ಇನ್ನಷ್ಟು ಪ್ರಬುದ್ಧವಾಗಿ ಮಾಡುತ್ತಿದ್ಧಾರೆ ಅಶ್ವಿನಿ. ಮೂವರು ದೇವರು ಹಾರೈಸುತ್ತಿದ್ದಾರೆ. ಅಶ್ವಿನಿ ಅವರ ನಿಷ್ಕಲ್ಮಶ ಮನಸ್ಸಿಗೆ ಕನ್ನಡಿಗರು ಕೈ ಹಿಡಿಯದಿರುತ್ತಾರಾ ಹೇಳಿ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಕ್ತಿ ಯೋಜನೆ ಎಫೆಕ್ಟ್: ನಿತ್ಯವೂ ಅಪ್ಪು ಸಮಾಧಿ ಬಳಿ ಅಭಿಮಾನಿಗಳ ಜಾತ್ರೆ

    ಶಕ್ತಿ ಯೋಜನೆ ಎಫೆಕ್ಟ್: ನಿತ್ಯವೂ ಅಪ್ಪು ಸಮಾಧಿ ಬಳಿ ಅಭಿಮಾನಿಗಳ ಜಾತ್ರೆ

    ಪ್ಪು (Appu) ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿ ಎರಡು ವರ್ಷವೇ ಸಮೀಪಿಸುತ್ತಿದೆ. ಈಗಂತೂ ಸಮಾಧಿ (Samadhi) ಸಾಕ್ಷಾತ್ ದೇವಸ್ಥಾನವೇ ಆಗಿಬಿಟ್ಟಿದೆ. ಜೀವಿತಾವಧಿಯಲ್ಲೊಮ್ಮೆ ಪರಮಾತ್ಮ ಚಿರನಿದ್ರೆಗೆ ಜಾರಿರುವ ಆ ಜಾಗವನ್ನ ಕಣ್ಣಾರೆ ನೋಡಬೇಕೆಂಬ ಹಂಬಲದಿಂದ ನಿತ್ಯವೂ ಕಂಠೀರವ ಸ್ಟುಡಿಯೋಗೆ ಆಗಮಿಸುವವರ ಸಂಖ್ಯೆ ಅಧಿಕವಾಗ್ತಿದೆ. ಆಶ್ಚರ್ಯ ಅನ್ನೋ ರೀತಿಯಲ್ಲಿ ಈ ಒಂದು ತಿಂಗಳಲ್ಲಿ ಅಪ್ಪು ಸಮಾಧಿಗೆ ಭೇಟಿ ಕೊಡುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ಭಾಗದ ಮಹಿಳೆಯರು ತಂಡೋಪತಂಡವಾಗಿ ಅಪ್ಪು ಸಮಾಧಿ ದರ್ಶನಕ್ಕೆ ಬರುತ್ತಿದ್ದಾರೆ.

    ಹೌದು, ಪರಮಾತ್ಮನ ಪೂಜೆಗೆ ಕೊನೆಯಿಲ್ಲ. ಹೃದಯದಲ್ಲಿ ಅಪ್ಪು ಜಪ ನಿಲ್ಲೋದಿಲ್ಲ. ಇದ್ದಾಗಲೂ ಉಪಕಾರಿ, ಹೋದಮೇಲೂ ಜನಹಿತಕ್ಕಾಗಿ ಹುಟ್ಟಿರುವ ಜೀವವೇ ಅಪ್ಪು. ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲಾ ಬಿಟ್ಟುಹೋಗಿ ಒಂದು ವರ್ಷ ಎಂಟು ತಿಂಗಳೇ ಉರುಳಿದೆ. ಅಪ್ಪುವನ್ನ ನೆನೆದರೆ ಸಾಕು ಅಂದಿನಿಂದ ಇಂದಿಗೂ ಕಣ್ಣಂಚಲಿ ಇಳಿಯುವ ಕಂಬನಿ ನಿಲ್ಲಿಸಲಾಗದು. ಜನತೆಗೆ ಜೀವಿತಾವಧಿಯಲ್ಲೊಮ್ಮೆ ಕಾಶಿಗೋ, ಧರ್ಮಸ್ಥಳಕ್ಕೋ, ಮಂತ್ರಾಲಯಕ್ಕೋ ಹೋಗಬೇಕೆನ್ನುವ ಆಸೆಯೊಂದಿಗೆ ಅಪ್ಪು ಸಮಾಧಿಗೂ ಒಮ್ಮೆ ಭೇಟಿಕೊಡಬೇಕೆಂಬ ಸಂಕಲ್ಪ ಸೇರಿಕೊಂಡಿದೆ. ಪರಿಣಾಮ ಕಂಠೀರವ ಸ್ಟುಡಿಯೋದಲ್ಲಿನ ಅಪ್ಪು ಸಮಾಧಿ ಪ್ರವಾಸಿ ತಾಣವಾಗಿದೆ. ನಿತ್ಯ ಜನಜಂಗುಳಿಯಿಂದ ಗಿಜಿಗುಡುತ್ತದೆ. ವೀಕೆಂಡ್ ಬಂದರೆ ಸಾಕು ಜಾತ್ರೆಯೇ ಶುರುವಾಗಿಬಿಡುತ್ತೆ.

    ಅಪ್ಪು (Puneeth Rajkumar) ಸಮಾಧಿಗೆ ಭೇಟಿ ಕೊಡುವವರ ಸಂಖ್ಯೆ ಪ್ರತಿನಿತ್ಯ ಎರಡು ದಿಂದ ಐದು ಸಾವಿರದವರೆಗೂ ಇರುತ್ತೆ. ವೀಕೆಂಡ್‌ನಲ್ಲಿ ಇದು 25 ಸಾವಿರಕ್ಕೂ ಹೋಗುತ್ತದೆ. ಇದೇ ಕಾರಣಕ್ಕೆ ಕಂಠೀರವ ಸ್ಟುಡಿಯೋ ಯಾವ ಪ್ರವಾಸಿ ಸ್ಥಳಕ್ಕೂ ಕಮ್ಮಿ ಇಲ್ಲದಂತಾಗಿದೆ. ಎಷ್ಟೋ ಕುಟುಂಬಗಳು ಇದರಿಂದ ಜೀವನ ನಿರ್ವಹಿಸುತ್ತಿವೆ. ಕಾರಣ ಕಂಠೀರವ ಸುತ್ತಮುತ್ತ ವ್ಯಾಪಾರ ವಹಿವಾಟು ಹೆಚ್ಚಾಗುತ್ತಿದೆ. ಫುಡ್ ಸ್ಟ್ರೀಟ್, ಆಟಿಕೆಗಳು, ಹೂವುಹಣ್ಣು, ಜ್ಯೂಸ್, ಗಿಫ್ಟ್ ಐಟಮ್ಸ್ ಹೀಗೆ ದೊಡ್ಡ ಮಟ್ಟಿಗೆ ವ್ಯಾಪಾರ ನಡೆಯುವ ಸ್ಥಳವಾಗಿದೆ ಅಪ್ಪು ಸಮಾಧಿ ಸುತ್ತಲಿನ ಜಾಗ. ಇದನ್ನೂ ಓದಿ:ಕೊನೆಗೂ ಮದುವೆ ಬಗ್ಗೆ ಸುಳಿವು ಕೊಟ್ಟ ‘ಬಿಗ್ ಬಾಸ್’ ಅನುಪಮಾ ಗೌಡ

    ಬದುಕಿ ಬಾಳಬೇಕಾದ ಕಾಲದಲ್ಲಿ ದಿಢೀರ್ ಕಣ್ಮರೆಯಾದವರು ಅಪ್ಪು. ಓರ್ವ ಮನುಷ್ಯ ಮಾಡಲಾಗದಷ್ಟು ಸರಳತೆ, ದಾನ, ಸುಸಂಸ್ಕೃತ ನಡತೆಗೆ ಹೆಸರು ವಾಸಿಯಾದ ಪುನೀತ್ ಈ ಶತಮಾನದ ಹೀರೋ. ಈಗಾಗಲೇ ಇಂತಹ ಪುಣ್ಯಾತ್ಮ ಇದ್ದಾಗಂತೂ ನೋಡಲಾಗಲಿಲ್ಲ, ಸಮಾಧಿಯನ್ನಾದರೂ ದರ್ಶನ ಮಾಡೋಣ. ಪಾದದ ಬಳಿಯೊಂದು ಹೂವಿಟ್ಟು ಕೈಮುಗಿದು ಬರೋಣ ಎಂಬ ಸಂಕಲ್ಪದ ಪರಿಣಾಮ ಕಂಠೀರವ ಸ್ಟುಡಿಯೋ ಎಷ್ಟೋ ಕುಟುಂಬಗಳಿಗೆ ಇಂದು ಅನ್ನ ನೀಡುತ್ತಿದೆ. ಇದೀಗ ಮುಖ್ಯವಾಗಿ ಸರ್ಕಾರದ ಶಕ್ತಿ ಯೋಜನೆ ಜಾರಿ ಮಾಡಿರುವ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಅಭಿಮಾನಿಗಳ ಜನದಟ್ಟಣೆ ಹಿಂದಿನದಕ್ಕಿಂತ ದುಪ್ಪಟ್ಟಾಗಿದೆ.

    ಜೂನ್ ತಿಂಗಳಿಂದ ಶಕ್ತಿ ಯೋಜನೆ (Shakti Yojana) ಜಾರಿಯಾಗಿರುವ ಹಿನ್ನೆಲೆ, ಕೆಲ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿ ಹಲವು ದೇವಸ್ಥಾನಗಳಿಗೆ  ಭಕ್ತರು ಹೆಚ್ಚಾಗಿ ಆಗಮಿಸುತ್ತಿದ್ದಾರೆ. ಬಸ್‌ನಲ್ಲಿ ಉಚಿತ ಪ್ರಯಾಣದ ಹಿನ್ನೆಲೆ ಮಹಿಳೆಯರು (Woman) ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸದಲ್ಲಿ ತೊಡಗಿದ್ದಾರೆ. ಕೆಲ ಬಡ ಕುಟುಂಬಗಳಿಗೆ ದೂರದ ಪ್ರಯಾಣಕ್ಕೆ ಬೇಕಾದಷ್ಟು ಹಣ ಇರೋದಿಲ್ಲ. ಹೀಗಾಗಿ ಇಷ್ಟು ದಿನ ನೋಡುವ ಮನಸ್ಸಿದ್ದ ಜಾಗಕ್ಕೆ ಈಗ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ. ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದ ಮಹಿಳೆಯರು ಗುಂಪುಗುಂಪಾಗಿ ಬಸ್ ಹತ್ತುತ್ತಿದ್ದಾರೆ. ಹೀಗೆ ಅವರು ಬಂದಿಳಿಯೋದು ಗುರುಗುಂಟೆಪಾಳ್ಯ ಸಿಗ್ನಲ್‌ನಲ್ಲಿ. ಅಲ್ಲಿಂದ ಅವರು ಹೊರಡುವುದೇ ಸಮೀಪದಲ್ಲೇ ಇರುವ ಅಪ್ಪು ಸಮಾಧಿಗೆ.

    ವೀಕೆಂಡ್‌ನಲ್ಲಿ ಪುನೀತ್ ಸಮಾಧಿ ಭಾರಿ ಜನಜಾತ್ರೆಯಿಂದ ಕೂಡಿರುತ್ತದೆ. ಉಚಿತ ಬಸ್ ಪ್ರಯಾಣ ಘೋಷಣೆ ಆದ ಬಳಿಕವಂತೂ ಬೆಂಗಳೂರು ಹೊರವಲಯದ ಅಭಿಮಾನಿಗಳು ಹಾಗೂ ರಾಯಚೂರು, ಬಳ್ಳಾರಿ, ಬೀದರ್, ಕೊಪ್ಪಳ, ಗುಲ್ಬರ್ಗಾದಿಂದಲೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕಂಠೀರವಕ್ಕೆ ಕಾಲಿಟ್ಟು ಮೊದಲಿಗೆ ಅಪ್ಪು ಸಮಾಧಿಗೆ ನಮಸ್ಕರಿಸಿ ಅಲ್ಲಿಂದ ಪಾರ್ವತಮ್ಮ, ಕೊನೆಗೆ ಅಣ್ಣಾವ್ರ ಸಮಾಧಿಗೆ ಒಂದು ದೀರ್ಘದಂಡ ನಮಸ್ಕಾರ ಹಾಕಿ ಹೊರನಡೆಯುತ್ತಾರೆ. ಹೀಗೆ ಬಂದವರು ಹೊರಗಡೆ ಹೋಗಿ ನೆನಪಿಗೊಂದು ವ್ಯಾಪಾರ ಮಾಡಿಕೊಂಡು ತಣ್ಣಗೆ ಕುಳಿತು ತಿಂಡಿ-ತಿನಿಸು ತಂಪುಪಾನೀಯ ಕುಡಿದು ಮನೆ ದಾರಿ ಹಿಡಿಯುತ್ತಾರೆ.

    ಕರುನಾಡಿಗೆ ಅಪ್ಪು ಎಂದರೆ ಸಾಕ್ಷಾತ್ ಕಣ್ಣೆದುರಿಗಿನ ದೈವ. ಆ ದೈವಕ್ಕೆ ಕಟ್ಟಿಸಲಾದ ಮಂದಿರವೇ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಎನ್ನುವ ಭಾವ ಜನರದ್ದು. ಇದೇ ಕಾರಣಕ್ಕೆ ಮಕ್ಕಳು, ವೃದ್ಧರು ಅಪ್ಪು ಸಮಾಧಿಗೆ ದರ್ಶನ ಕೊಡ್ತಾರೆ. ಹರಕೆ ಕಟ್ಟಿಕೊಳ್ತಾರೆ. ಹಸುಗೂಸುಗಳನ್ನು ಕರೆತಂದು ನಾಮಕರಣ ಮಾಡ್ತಾರೆ. ಹೊಸತೇನಾದರೂ ಕೆಲಸ ಪ್ರಾರಂಭಿಸಬೇಕಾದರೆ ಅಪ್ಪು ಸಮಾಧಿಗೆ ನಮಿಸಿ ಮುಂದಿನ ಹೆಜ್ಜೆ ಇಡ್ತಾರೆ. ಶಕ್ತಿ ಯೋಜನೆ ಜಾರಿಯಾದ್ಮೇಲೆ ಅಪ್ಪು ಅಭಿಮಾನಿಗಳಿಗೆ ತಮ್ಮ ಆಸೆ ಪೂರೈಸಿಕೊಳ್ಳುವ ದಾರಿ ಇನ್ನಷ್ಟು ಸುಲಭವಾಗಿದೆ.

     

    ಅಪ್ಪು ಅಂತಿಮ ದರ್ಶನದ ವೇಳೆ 25 ಲಕ್ಷ ಜನರು ಸೇರಿ ಇತಿಹಾಸವೇ ನಿರ್ಮಾಣವಾಗಿತ್ತು. ಬಳಿಕ ಸುಮಾರು ಮೂರು ತಿಂಗಳವರೆಗೂ ಅಪ್ಪು ಸಮಾಧಿ ಯಾವ ಧಾರ್ಮಿಕ ಕ್ಷೇತ್ರಕ್ಕೂ ಕಮ್ಮಿ ಇಲ್ಲದಂತೆ ಜನಸ್ತೋಮದಿಂದ ಕೂಡಿತ್ತು. ಸುಮಾರು ಒಂದು ವರ್ಷದವರೆಗೂ ಇದೇ ನಡೆಯುತ್ತಾ ಬಂತು. ಇದೀಗ ಎರಡು ವರ್ಷ ಸಮೀಪಿಸುತ್ತಿದ್ದರೂ ಅಪ್ಪು ಸಮಾಧಿಗೆ ಆಗಮಿಸುವವರ ಸಂಖ್ಯೆ ಇಳಿಮುಖವಾಗಿಲ್ಲ. ಇದಕ್ಕೇ ಅನ್ನೋದು ಅಪ್ಪು ಅಮರ. ನಗುವಿಗೆ ಬರ ಇರದ ರಾಜಕುಮಾರ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎದೆಯ ಮೇಲೆ ಅಪ್ಪು ಹೆಸರು ಟ್ಯಾಟೂ ಹಾಕಿಸಿಕೊಂಡ ರಾಘಣ್ಣ- ಟೊಟೊ, ನುಕ್ಕಿ ಅಂದ್ರೆ ಯಾರು?

    ಎದೆಯ ಮೇಲೆ ಅಪ್ಪು ಹೆಸರು ಟ್ಯಾಟೂ ಹಾಕಿಸಿಕೊಂಡ ರಾಘಣ್ಣ- ಟೊಟೊ, ನುಕ್ಕಿ ಅಂದ್ರೆ ಯಾರು?

    ದಿವಂಗತ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ನಮ್ಮನ್ನ ಅಗಲಿ 2 ವರ್ಷಗಳಾಗಿದೆ. ಆದರೆ ಅಪ್ಪು ನೆನಪು ಮಾತ್ರ ಮಾಸಿಲ್ಲ. ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಇಂದಿಗೂ ಪುನೀತ್ ಕುಟುಂಬಕ್ಕೆ ಅಪ್ಪು ಅಗಲಿಕೆಯನ್ನ ಒಪ್ಪಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಅಪ್ಪು (Appu) ಹೆಸರನ್ನ ಎದೆಯ ಮೇಲೆ ಟ್ಯಾಟೂ (Tatto) ಹಾಕಿಸಿಕೊಂಡಿದ್ದಾರೆ.

    ಪುನೀತ್ (Puneeth) ಅಗಲಿಕೆಯ ನೋವಿನಿಂದ ಅಭಿಮಾನಿಗಳು ಇನ್ನು ಹೊರಬಂದಿಲ್ಲ. ಇನ್ನು ದೊಡ್ಮನೆ ಸದಸ್ಯರಿಗೆ ಆ ನೋವು ನೂರು ಪಟ್ಟು ಹೆಚ್ಚಿದೆ. ಶಿವಣ್ಣ, ರಾಘಣ್ಣ ಸಹೋದರನ ನೆನಪಿನಲ್ಲೇ ದಿನದೂಡುತ್ತಿದ್ದಾರೆ. ಇದೀಗ ಸಹೋದರನ ಹೆಸರನ್ನು ಎದೆಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಪ್ಪು ಜೊತೆಗೆ ಅವರ ಮಕ್ಕಳಾದ ಧೃತಿ, ವಂದಿತಾ (Vanditha) ಮುದ್ದಿನ ಹೆಸರನ್ನು ಕೂಡ ಎದೆ ಮೇಲೆ ಹಚ್ಚೆ ಹಾಕಿಸಿದ್ದಾರೆ. ಈ ಕುರಿತ ಫೋಟೋ ಎಲ್ಲೆಡೆ ಸದ್ದು ಮಾಡುತ್ತಿದೆ.

    ಪುನೀತ್ ಮೇಲೆ ರಾಘಣ್ಣ ಅವರಿಗೆ ಬೆಟ್ಟದಷ್ಟು ಪ್ರೀತಿಯಿತ್ತು. ಅದರಲ್ಲೂ ರಾಘಣ್ಣ- ಅಪ್ಪು ಮಕ್ಕಳು ತುಸು ಹೆಚ್ಚಾಗಿಯೇ ಅಟ್ಯಾಚ್ ಆಗಿದ್ದರು. ರಾಘಣ್ಣ ಅವರಿಗೆ ಇಬ್ಬರು ಗಂಡು ಮಕ್ಕಳು ಇರುವ ಕಾರಣ, ಅಪ್ಪು ಮಕ್ಕಳು ಧೃತಿ- ವಂದಿತಾ ಇಬ್ಬರೂ ಹೆಣ್ಣು ಮಕ್ಕಳನ್ನ ತನ್ನ ಮಕ್ಕಳಂತೆಯೇ ಪ್ರೀತಿಸುತ್ತಾರೆ. ಅದಕ್ಕೆ ತಾಜಾ ಉದಾಹರಣೆ ರಾಘಣ್ಣ ಎದೆ ಮೇಲಿರುವ ಹಚ್ಚೆ. ಇದನ್ನೂ ಓದಿ:ಸರಕಾರದ ಮುಂದೆ ಹಳೆ ಬೇಡಿಕೆ ಇಟ್ಟ ರಿಷಬ್ ಶೆಟ್ಟಿ

    ತಮಗೆ ಹಚ್ಚೆ ಹಾಕಿದ ಯುವ ಟ್ಯಾಟೂ ಆರ್ಟಿಸ್ಟ್ ಜೊತೆಗೂ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಫೊಟೊ ತೆಗೆಸಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ, ಆರೋಗ್ಯ ಸಮಸ್ಯೆಗಳ ನಡುವೆ ಸಹೋದರ, ಅವರ ಮಕ್ಕಳ ಹೆಸರನ್ನು ಹಚ್ಚೆ ಹಾಕಿಸಿಕೊಂಡ ರಾಘವೇಂದ್ರ ಅವರ ಪ್ರೀತಿಯನ್ನು ಅಪ್ಪು ಅಭಿಮಾನಿಗಳು ಕೊಂಡಾಡಿದ್ದಾರೆ. ಅಂದಹಾಗೆ, ಟೊಟೊ ಹಾಗೂ ನುಕ್ಕಿ ಎಂಬುದು ಅಪ್ಪು ಅವರ ಇಬ್ಬರು ಹೆಣ್ಣು ಮಕ್ಕಳ ನಿಕ್ ನೇಮ್ ಆಗಿದೆ. ಇದನ್ನೇ ಅಪ್ಪು ಹೆಸರಿನ ಜೊತೆ ಹಚ್ಚೆ ಹಾಕಿಸಿದ್ದಾರೆ.

  • ‘ಅಭಿ’ ಚಿತ್ರಕ್ಕೆ 20 ವರ್ಷ- ಅಪ್ಪು ಜೊತೆಗಿನ ನೆನಪು ಬಿಚ್ಚಿಟ್ಟ ರಮ್ಯಾ

    ‘ಅಭಿ’ ಚಿತ್ರಕ್ಕೆ 20 ವರ್ಷ- ಅಪ್ಪು ಜೊತೆಗಿನ ನೆನಪು ಬಿಚ್ಚಿಟ್ಟ ರಮ್ಯಾ

    ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar)  ‘ಅಭಿ’ ಸಿನಿಮಾಗೆ ನಾಯಕಿಯಾಗುವ ಮೂಲಕ ರಮ್ಯಾ ಚಂದನವನಕ್ಕೆ ಎಂಟ್ರಿ ಕೊಟ್ಟರು. ಇದೀಗ ‘ಅಭಿ’ (Abhi Film) ಸಿನಿಮಾ ತೆರೆಕಂಡು ಇಂದಿಗೆ 20 ವರ್ಷಗಳಾಗಿದೆ. ಅಪ್ಪು ಜೊತೆಗಿನ ಚಿತ್ರೀಕರಣದ ಸಮಯ ನೆನಪುಗಳನ್ನ ರಮ್ಯಾ (Ramya) ಮೆಲುಕು ಹಾಕಿದ್ದಾರೆ.

    20 ವರ್ಷದ ಹಿಂದಿನ ಫೋಟೋಗಳನ್ನ ಶೇರ್ ಮಾಡುತ್ತಿದ್ದೇನೆ. ನನ್ನ ಮೊದಲ ಸಿನಿಮಾ ಅಭಿ ಚಿತ್ರದ ಫೋಟೋಗಳಿವು. ಮೊದಲ ಫೋಟೋ ಸೈಂಟ್ ಜೋಸೆಫ್ ಕಾಲೇಜ್‌ನಲ್ಲಿ ತೆಗೆದಿದ್ದು. ‘ಸುಮ್ ಸುಮ್ನೆ’ ಸಾಂಗ್ ಶೂಟಿಂಗ್ ಸಮಯದ್ದು ಎಂದಿದ್ದಾರೆ. 2ನೇ ಫೋಟೋ ಚಿಕ್ಕಮಗಳೂರು ಶೂಟಿಂಗ್‌ನ ಕೊನೆಯ ದಿನ ಕ್ಲಿಕ್ ಮಾಡಿದ್ದು. ‘ಈ ನನ್ನ ಕಣ್ಣನೆ’ ಹಾಡಿಗಾಗಿ ನಾವು ಶೂಟಿಂಗ್ ಮಾಡಿದ್ದೆವು ಎಂದು ರಮ್ಯಾ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ:ವಿಜಯ್‌ ವರ್ಮಾ ಜೊತೆ KGF ನಟಿ ತಮನ್ನಾ ಡಿನ್ನರ್‌ ಡೇಟ್‌

     

    View this post on Instagram

     

    A post shared by Ramya|Divya Spandana (@divyaspandana)

    ಮೂರನೇ ಫೋಟೋ ಸಿನಿಮಾದ ಪ್ರೈವೇಟ್ ಸ್ಕ್ರೀನಿಂಗ್ ನಂತರ ನನ್ನ ತಂದೆ ಆಯೋಜಿಸಿದ ಪಾರ್ಟಿಯದ್ದು ಎಂದು ಹೇಳಿದ್ದಾರೆ ರಮ್ಯಾ. ಅವರ ಫೋಟೋಗಳು ಅಭಿಮಾನಿಗಳನ್ನೂ ಹಳೆಯ ದಿನಗಳಿಗೆ ಕರೆದೊಯ್ದಿದೆ.ನಾಲ್ಕನೇ ಫೋಟೋ ಸಿನಿಮಾ 100 ದಿನ ತಲುಪಿದ ಸಂಭ್ರಮದ್ದು. ಅಪ್ಪಾಜಿ ನನಗೆ ಮೊಮೆಂಟೋ ಕೊಟ್ಟರು. ಶೂಟಿಂಗ್‌ನ ಮೊದಲ ದಿನ ನಾನು ನರ್ವಸ್ ಆಗಿ ಜೋರಾಗಿ ಅತ್ತಿದ್ದೆ. ಆದರೆ ಕೊನೆಯ ದಿನ ಆ ತಂಡದೊಂದಿಗೆ ತುಂಬಾ ಅಟ್ಯಾಚ್ಡ್ ಆಗಿ ಅಲ್ಲಿಂದ ಬರುವಾಗ ಅತ್ತಿದ್ದೆ ಎಂದು ರಮ್ಯಾ ನೆನಪಿಸಿಕೊಂಡಿದ್ದಾರೆ.

    ನನಗೆ ಅವಕಾಶ ಕೊಟ್ಟ ಡಾ.ರಾಜ್ (Rajkumar Family) ಕುಟುಂಬಕ್ಕೆ ಸದಾ ಚಿರಋಣಿ ಎಂದು ರಮ್ಯಾ ಎಂದಿದ್ದಾರೆ. ಅಪ್ಪು ಅವರು ನನ್ನ ಮೊದಲ ಸ್ನೇಹಿತ ಮತ್ತು ನನ್ನ ಬೆಸ್ಟ್ ಕೋ ಸ್ಟಾರ್ ಎಂದು ಪುನೀತ್ ಅವರನ್ನ ರಮ್ಯಾ (Ramya) ಸ್ಮರಿಸಿದ್ದಾರೆ. ಈ ಮೂಲಕ ಅಪ್ಪು ಬಗ್ಗೆ ರಮ್ಯಾ ಭಾವುಕರಾಗಿದ್ದಾರೆ.

  • ಅಪ್ಪು ಆಶೀರ್ವಾದದಿಂದಲೇ ಯುವನಿಗೆ ಅಭಿಮಾನಿಗಳ ಪ್ರೀತಿ ಸಿಗುತ್ತಿರೋದು- ರಾಘವೇಂದ್ರ ರಾಜ್‌ಕುಮಾರ್

    ಅಪ್ಪು ಆಶೀರ್ವಾದದಿಂದಲೇ ಯುವನಿಗೆ ಅಭಿಮಾನಿಗಳ ಪ್ರೀತಿ ಸಿಗುತ್ತಿರೋದು- ರಾಘವೇಂದ್ರ ರಾಜ್‌ಕುಮಾರ್

    ದೊಡ್ಮನೆ ಕುಡಿ ಯುವರಾಜ್‌ಕುಮಾರ್ (Yuva Rajkumar)  ಅವರು ಏ.23ರಂದು ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು (Birthday)  ಅಭಿಮಾನಿಗಳ ಜೊತೆ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಆಚರಿಸಿದ್ದಾರೆ. ಈ ವೇಳೆ ಪುನೀತ್ ಅವರನ್ನ ನೆನೆದು ಯುವ- ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಭಾವುಕರಾಗಿದ್ದಾರೆ.

    ರಾಜ್ಯದ ಬೇರೆ ಬೇರೆ ಕಡೆಯಿಂದ ಬಂದು ಯುವ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಅಭಿಮಾನಿಗಳು ಮತ್ತು ಕುಟುಂಬದ ಜೊತೆಯಲ್ಲಿ ಯುವ ಹುಟ್ಟುಹಬ್ಬವನ್ನ  ಆಚರಿಸಿಕೊಂಡಿದ್ದಾರೆ. ಈ ವೇಳೆ ಅಪ್ಪುನ ನೆನೆದು ಮಗ ಯುವನಿಗೆ ರಾಘವೇಂದ್ರ ರಾಜ್‌ಕುಮಾರ್ ಸಲಹೆ ನೀಡಿದ್ದಾರೆ. ಹ್ಯಾಪಿ ಬರ್ತ್‌ಡೇ ಮಗನೆ. ಅಭಿಮಾನಿಗಳ ಆಶೀರ್ವಾದ ನಿನ್ನ ಮೇಲೆ ಸದಾ ಇರಲಿ. ಅವರನ್ನು ಚೆನ್ನಾಗಿ ನೋಡಿಕೋ ಎಂದು ಪುತ್ರನಿಗೆ ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದಾರೆ. ಈ ಪ್ರೀತಿ ಸಿಗುತ್ತಿರುವುದು ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಂದ ಎಂದು ಕೂಡ ರಾಘಣ್ಣ ಹೇಳಿದ್ದಾರೆ. ಇದನ್ನೂ ಓದಿ:ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಯಶ್ ವೀಡಿಯೋ ವೈರಲ್

    ಈ ದಿನ ನಾನು ತಮ್ಮನನ್ನು ನೆನಪಿಸಿಕೊಳ್ಳಲೇಬೇಕು. ಅವನ ಆಶೀರ್ವಾದದಿಂದಲೇ ಇದೆಲ್ಲ ನಡೆಯುತ್ತಿರೋದು. ಅಪ್ಪು ಸಿನಿಮಾ ರಿಲೀಸ್ ಆದ್ಮೇಲೆ ತಮ್ಮನ ಬರ್ತ್‌ಡೇ ಆಗಿತ್ತು. ಆಗ ಕೂಡ ಅಭಿಮಾನಿಗಳು ಇದೇ ರೀತಿ ಸೆಲೆಬ್ರೇಟ್ ಮಾಡಿದ್ದರು. ಅದನ್ನು ನೋಡಿ ಅಪ್ಪಾಜಿ ಖುಷಿಪಟ್ಟಿದ್ದರು. ಆ ದೃಶ್ಯ ಇಂದು ನನಗೆ ನೆನಪಾಗುತ್ತಿದೆ. ಈ ವರ್ಷ ನನ್ನ ಮಗ ಸಿನಿಮಾ ಇಂಡಸ್ಟ್ರಿಯಲ್ಲಿ ಹುಟ್ಟುತ್ತಿದ್ದಾನೆ. ಮಗನ ಹುಟ್ಟುಹಬ್ಬ ಇಷ್ಟು ಜೋರಾಗಿ ಆಚರಣೆ ಮಾಡಿದರೆ ಯಾವ ತಂದೆಗೆ ಖುಷಿ ಆಗಲ್ಲ ಹೇಳಿ. ಅಭಿಮಾನಿ ದೇವರುಗಳು ಎಂದರೆ ನಿಜಕ್ಕೂ ದೇವರುಗಳು ಎಂದು ರಾಘಣ್ಣ ಹೇಳಿದ್ದಾರೆ. ಇದನ್ನೆಲ್ಲ ನೋಡೋಕೆ ನನ್ನ ಜೀವ ಇದೆಯಲ್ಲ ಅಂತ ನನಗೆ ಖುಷಿ ಆಗುತ್ತದೆ. ಜನರ ಆಶೀರ್ವಾದ ಅವನ ಮೇಲೆ ಯಾವಾಗಲೂ ಇರಲಿ. ಅವನ ಸಿನಿಮಾ ಶೂಟಿಂಗ್ ಈಗ ಶುರುವಾಗಿದೆ. ಅವನ ಮೇಲೆ ಭಾರ ಹಾಕಬೇಡಿ. ಚೆನ್ನಾಗಿ ಮಾಡು ಎಂದು ಹಾರೈಸಿ ಎಂದು ಅಭಿಮಾನಿಗಳಲ್ಲಿ ರಾಘವೇಂದ್ರ ರಾಜ್‌ಕುಮಾರ್ ಕೇಳಿಕೊಂಡಿದ್ದಾರೆ.

    ಹುಟ್ಟುಹಬ್ಬದ ಸಂಭ್ರಮದ ನಡುವೆ ಯುವ ರಾಜ್‌ಕುಮಾರ್ ಮಾತನಾಡಿ, ಅಭಿಮಾನಿಗಳ ಪ್ರೀತಿಗೆ ಚಿರಋಣಿ, ಈ ಪ್ರೀತಿಗೆ ಮಾತಿಲ್ಲ. ಯುವ ಸಿನಿಮಾ ನಡೆಯುತ್ತಿದೆ. ಡಿಸೆಂಬರ್‌ಗೆ ಸಿನಿಮಾ ರಿಲೀಸ್ ಆಗುತ್ತದೆ. ಸಿಕ್ಕಾಪಟ್ಟೆ ಖುಷಿಯಾಗುತ್ತಿದೆ. ಎಲ್ಲಾ ಕಡೆಯಿಂದ ಅಭಿಮಾನಿಗಳು ಬರುತ್ತಿದ್ದಾರೆ. ಪುನೀತ್ ಚಿಕ್ಕಪ್ಪನ ಬಗ್ಗೆ ಹೇಳೋಕೆ ಮಾತಿಲ್ಲ. ಕಂಠೀರವ ಸ್ಟುಡಿಯೋಗೆ ಹೋಗುತ್ತೇನೆ. ಅವರನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಮಾತನಾಡಿದ್ದಾರೆ.

    ಈ ವೇಳೆ ಹೊಂಬಾಳೆ ಸಂಸ್ಥೆ (Hombale Films) ಕೂಡ, ‘ಯುವ’ ಸಿನಿಮಾ ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಯುವ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

  • Weekend With Ramesh: ರಕ್ಷಿತಾ ಜೊತೆಗಿನ ಸ್ಪರ್ಧೆ ಬಗ್ಗೆ ರಮ್ಯಾ ಮಾತು

    Weekend With Ramesh: ರಕ್ಷಿತಾ ಜೊತೆಗಿನ ಸ್ಪರ್ಧೆ ಬಗ್ಗೆ ರಮ್ಯಾ ಮಾತು

    ಸ್ಯಾಂಡಲ್‌ವುಡ್ (Sandalwood) ನಟಿ ರಮ್ಯಾ (Ramya) ಚಿತ್ರರಂಗಕ್ಕೆ ಕಂಬ್ಯಾಕ್ ಆದಮೇಲೆ ಅವರದ್ದೇ ಹಾವಳಿ. ಒಂದು ದಶಕಗಳ ಕಾಲ ಚಿತ್ರರಂಗ ಆಳಿದ ಮೋಹಕತಾರೆ ಇದೀಗ `ವೀಕೆಂಡ್ ವಿತ್ ರಮೇಶ್ 5′ ಶೋನಲ್ಲಿ ಭಾಗವಹಿಸಿದ್ದಾರೆ. ಶೋ ಪ್ರಸಾರವಾಗಲು ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ. ಸದ್ಯ ರಮ್ಯಾ ಪ್ರೋಮೋ ಸದ್ದು ಮಾಡ್ತಿದೆ. ರಕ್ಷಿತಾ (Rakshitha)  ಜೊತೆಗಿನ ಸ್ಪರ್ಧೆ ಬಗ್ಗೆ ರಮ್ಯಾ ಮೌನ ಮುರಿದಿದ್ದಾರೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಹಾಲಕ್ಷ್ಮಿಯಂತೆ ಕಂಗೊಳಿಸಿದ ನಟಿ ಅಮೂಲ್ಯ

    ಅಭಿ ಚಿತ್ರದಲ್ಲಿ ಪುನೀತ್‌ಗೆ (Puneeth) ನಾಯಕಿಯಾಗುವ ಮೂಲಕ ರಮ್ಯಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅದೇ ಸಮಯದಲ್ಲಿ ರಕ್ಷಿತಾ ಕೂಡ ಪೀಕ್‌ನಲ್ಲಿದ್ದರು. ಇವರಿಬ್ಬರು ಒಂದೇ ಸಮಯದಲ್ಲಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಇಬ್ಬರ ನಡುವೆ ಸ್ಪರ್ಧೆ ಅನ್ನೋದು ಮೊದಲ ಚಿತ್ರದಿಂದಲೇ ಶುರುವಾಗಿತ್ತು. ಪ್ರತಿ ಸಿನಿಮಾ ಸೆಲೆಕ್ಷನ್ ವೇಳೆ ಇಬ್ಬರ ನಡುವೆ ಪೈಪೋಟಿ ಇರುತ್ತಿತ್ತು. ಪ್ರತಿಯೊಂದು ಚಿತ್ರದ ವಿಚಾರಕ್ಕೂ ಜಿದ್ದಾಜಿದ್ದಿ ಏರ್ಪಟ್ಟಿತ್ತು.

    ರಮ್ಯಾ ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಅವರು ನಟಿಸಿದ ಬಹುತೇಕ ಸಿನಿಮಾಗಳು ಸಿನಿಮಾ ಲಿಸ್ಟ್‌ಗೆ ಸೇರಿದವು. ಚಿತ್ರರಂಗದಲ್ಲಿ ಇದ್ದಷ್ಟು ದಿನ ನಂ 1 ನಟಿಯಾಗಿ ಮೆರೆದ ಅವರಿಗೆ ರಕ್ಷಿತಾ ಜೊತೆ ಸ್ಪರ್ಧೆ ಇತ್ತಂತೆ. `Weekend With Ramesh’ ಪ್ರೋಮೋದಲ್ಲಿ ರಕ್ಷಿತಾ ಜೊತೆ ಇದ್ದಿದ್ದ ಸ್ಪರ್ಧೆಯ ಬಗ್ಗೆಯೂ ರಮ್ಯಾ ಮಾತನಾಡಿದ್ದಾರೆ. 2002ರಲ್ಲಿ ರಕ್ಷಿತಾ ಜೊತೆಗಿನ `ಅಪ್ಪು’ ಸಿನಿಮಾ ರಿಲೀಸ್ ಆಗಿತ್ತು. 2003ರಲ್ಲಿ `ಅಭಿ’ ಸಿನಿಮಾ ರಿಲೀಸ್ ಆಗಿತ್ತು. ಇವರಿಬ್ಬರು ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

    ರಮ್ಯಾ (Ramya) ಅವರ ವೃತ್ತಿ ಜೀವನದಲ್ಲಿ ರಾಜ್‌ಕುಮಾರ್ ಕುಟುಂಬ ವಿಶೇಷವಾಗಿದೆ. ರಮ್ಯಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಪಾರ್ವತಮ್ಮ. ಅವರಿಗೆ ರಮ್ಯಾ ಎಂದು ನಾಮಕರಣ ಮಾಡಿದ್ದೂ ಅವರೇ. ಇದನ್ನು ರಮ್ಯಾ ಉಲ್ಲೇಖ ಮಾಡಿದ್ದಾರೆ. ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಅಭಿನಯದ `ಸಂಜು ಮತ್ತು ಗೀತ’ ಸಿನಿಮಾ ಯಶಸ್ಸು ಕಂಡಿತ್ತು. ಶ್ರೀನಗರ ಕಿಟ್ಟಿ ಕೂಡ ವೇದಿಕೆ ಏರಿದ್ದಾರೆ. ಈ ವೇಳೆ `ಐ ಲವ್ ಯೂ ಸಂಜು’ ಎಂದಿದ್ದಾರೆ ರಮ್ಯಾ. ಪುನೀತ್ ಹಾಗೂ ರಮ್ಯಾ ಅವರದ್ದು ಹಿಟ್ ಕಾಂಬಿನೇಷನ್. ಆ ಬಗ್ಗೆಯೂ ರಮ್ಯಾ ಮಾತನಾಡಿದ್ದಾರೆ. ರಮ್ಯಾ ಪುನೀತ್ ನೆನೆದು ಕಣ್ಣೀರು ಹಾಕಿದ್ದಾರೆ.

  • ವೀಕೆಂಡ್ ವಿತ್ ರಮೇಶ್: ಅಪ್ಪು ನೆನೆದು ಕಣ್ಣೀರಿಟ್ಟ ನಟಿ ರಮ್ಯಾ

    ವೀಕೆಂಡ್ ವಿತ್ ರಮೇಶ್: ಅಪ್ಪು ನೆನೆದು ಕಣ್ಣೀರಿಟ್ಟ ನಟಿ ರಮ್ಯಾ

    ಕಿರುತೆರೆಯ ಜನಪ್ರಿಯ ಶೋ Weekend With Ramesh ಸೀಸನ್ 5ರಲ್ಲಿ ರಮ್ಯಾ ಭಾಗಿಯಾಗಿದ್ದಾರೆ. ಈ ವಾರಾಂತ್ಯದಲ್ಲಿ ಪ್ರೇಕ್ಷಕರಿಗೆ ಹಬ್ಬದ ಎಂದೇ ಹೇಳಬಹುದು. ಸಾಕಷ್ಟು ಸಮಯ ತೆರೆಮರೆಯಲ್ಲಿದ್ದ ರಮ್ಯಾ ಮತ್ತೆ ಸ್ಯಾಂಡಲ್‌ವುಡ್ ಕಂಬ್ಯಾಕ್ ಆಗಿದ್ದಾರೆ. ಜೊತೆ ವೀಕೆಂಡ್‌ನಲ್ಲಿ ರಮೇಶ್ ಜೊತೆ ರಮ್ಯಾ (Ramya) ತಮ್ಮ ಜೀವನದ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಈ ವೇಳೆ ಅಪ್ಪುನ (Appu) ನೆನೆದು ರಮ್ಯಾ ಕಣ್ಣೀರಿಟ್ಟಿದ್ದಾರೆ.

    ರಮ್ಯಾ ಒಂದು ದಶಕಗಳ ಕಾಲ ಸ್ಯಾಂಡಲ್‌ವುಡ್ ಆಳಿದ ನಾಯಕಿ. ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರುತ್ತಾರೆ ಎಂದಾಗ ಎಲ್ಲರ ನಿರೀಕ್ಷೆ ಹೆಚ್ಚಾಗಿತ್ತು. ಶೋ ಸಂಬಂಧಿಸಿದಂತೆ ರಮ್ಯಾ ಅವರ ಮೊದಲ ಪ್ರೋಮೋ ಬಿಟ್ಟಿದ್ದಾರೆ. ಲೈಟ್‌ ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. `ಅಭಿ’ (Abhi) ಸಿನಿಮಾದಿಂದ ಶುರುವಾದ ಸಿನಿ ಜರ್ನಿ ರಾಜಕೀಯ ಕ್ಷೇತ್ರಕ್ಕೂ ಕಾಲಿಡುವ ಹಾಗೇ ಮಾಡಿತ್ತು. ಸಿನಿಮಾ-ರಾಜಕೀಯ ಎರಡಲ್ಲೂ ಗುರುತಿಸಿಕೊಂಡರು. ಈ ಬಗ್ಗೆ ನಟಿ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

    ರಮ್ಯಾ ಅವರ ವೃತ್ತಿ ಜೀವನದಲ್ಲಿ ರಾಜ್‌ಕುಮಾರ್ ಕುಟುಂಬ ವಿಶೇಷವಾಗಿದೆ. ರಮ್ಯಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಪಾರ್ವತಮ್ಮ. ಅವರಿಗೆ ರಮ್ಯಾ ಎಂದು ನಾಮಕರಣ ಮಾಡಿದ್ದೂ ಅವರೇ. ಇದನ್ನು ರಮ್ಯಾ ಉಲ್ಲೇಖ ಮಾಡಿದ್ದಾರೆ. ರಕ್ಷಿತಾ ಜೊತೆಗಿನ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ. ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಅಭಿನಯದ `ಸಂಜು ಮತ್ತು ಗೀತಾ’ ಸಿನಿಮಾ ಯಶಸ್ಸು ಕಂಡಿತ್ತು. ಶ್ರೀನಗರ ಕಿಟ್ಟಿ ಕೂಡ ವೇದಿಕೆ ಏರಿದ್ದಾರೆ. ಈ ವೇಳೆ `ಐ ಲವ್ ಯೂ ಸಂಜು’ ಎಂದಿದ್ದಾರೆ ರಮ್ಯಾ. ಪುನೀತ್ ಹಾಗೂ ರಮ್ಯಾ ಅವರದ್ದು ಹಿಟ್ ಕಾಂಬಿನೇಷನ್. ಆ ಬಗ್ಗೆಯೂ ರಮ್ಯಾ ಮಾತನಾಡಿದ್ದಾರೆ. ರಮ್ಯಾ ಪುನೀತ್ ನೆನೆದು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಮೊದಲ ಪ್ಯಾನ್ ಇಂಡಿಯಾ ಮಕ್ಕಳ ಚಿತ್ರಕ್ಕೆ ರಾಗಿಣಿ ದ್ವಿವೇದಿ ಸಾಥ್

    ʻಅಭಿʼ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ನಾಯಕಿಯಾಗಿ ಪರಿಚಿತರಾದ ರಮ್ಯಾ ಸಾಕಷ್ಟು ಹಿಟ್ ಸಿನಿಮಾ ನೀಡಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲೂ ನಟಿಸಿ ಬಂದಿದ್ದಾರೆ.

  • ಅಪ್ಪುಗಾಗಿ ವಿಶೇಷ ಬೇಡಿಕೆ ಇಟ್ಟ ನಟ ದುನಿಯಾ ವಿಜಯ್

    ಅಪ್ಪುಗಾಗಿ ವಿಶೇಷ ಬೇಡಿಕೆ ಇಟ್ಟ ನಟ ದುನಿಯಾ ವಿಜಯ್

    ನಿನ್ನೆಯಷ್ಟೇ ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಮತ್ತು ಕನ್ನಡ ಚಿತ್ರೋದ್ಯಮ ತಮ್ಮದೇ ಆದ ರೀತಿಯಲ್ಲಿ ಆಚರಿಸಿವೆ. ರಾಜ್ಯಾದ್ಯಂತ ಅಭಿಮಾನಿಗಳು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ನೆಚ್ಚಿನ ನಟನ ಹುಟ್ಟು ಹಬ್ಬ ಆಚರಿಸಿದ್ದಾರೆ. ಅಲ್ಲದೇ, ಅನೇಕ ಕಲಾವಿದರು ಮತ್ತು ತಂತ್ರಜ್ಞರು ತಮ್ಮದೇ ಆದ ರೀತಿಯಲ್ಲಿ ಅಪ್ಪುವನ್ನು (Appu) ಸ್ಮರಿಸಿದ್ದಾರೆ. ಅದರಲ್ಲಿ ವಿಭಿನ್ನವಾಗಿ ಗಮನ ಸೆಳೆದದ್ದು ನಟ ದುನಿಯಾ ವಿಜಯ್ (Duniya Vijay) ಅವರ ಟ್ವೀಟ್.

    ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿರುವ ಅವರು, ಅಪ್ಪುಗಾಗಿ ವಿಶೇಷ ಬೇಡಿಕೆಯನ್ನು ಇಟ್ಟಿದ್ದಾರೆ. ಇನ್ಮುಂದೆ ಪಠ್ಯಪುಸ್ತಕದಲ್ಲಿ ‘ಅ’ ಅಂದರೆ ‘ಅಪ್ಪು’ ಎಂದು ಓದಿಸುವಂತಾಗಲಿ ಎಂದಿದ್ದಾರೆ. ‘ಅ’ ಅಕ್ಷರವನ್ನು ಕಲಿಸುವಾಗ  ‘ಅಪ್ಪು’ ಎಂದು ನಮೂದಿಸುವಂತೆ ಅವರು ಕೇಳಿಕೊಂಡಿದ್ದಾರೆ. ಈ ಮೂಲಕ ಪುನೀತ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ನಟಿ ಸ್ವರಾ ಭಾಸ್ಕರ್ ಆರತಕ್ಷತೆಯಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ

    ದುನಿಯಾ ವಿಜಯ್ ಈ ರೀತಿಯಲ್ಲಿ ಟ್ವೀಟ್ ಮಾಡುತ್ತಿದ್ದಂತೆಯೇ ಅಸಂಖ್ಯಾತ ಅಭಿಮಾನಿಗಳು ಮೆಚ್ಚಿಗೆ ಸೂಚಿಸಿದ್ದಾರೆ. ಕೆಲವರು ಪ್ರಾಥಮಿಕ ಪಠ್ಯದಲ್ಲಿ ಅಪ್ಪು ಅವರ ಜೀವನ ಕುರಿತು ಪ್ರಕಟಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಕೇವಲ ಒಂದು ವಿಶ್ವವಿದ್ಯಾಲಯಕ್ಕೆ ಅವರ ಬದುಕನ್ನು ಸೀಮಿತ ಮಾಡದೇ, ಎಲ್ಲ ಪಠ್ಯದಲ್ಲೂ ಅವರ ಜೀವನ ಸಂದೇಶ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

    ಅಪ್ಪು ಜನ್ಮದಿನದಂದು ನಿನ್ನೆ ದಿನಪೂರ್ತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಅಪ್ಪು ಸ್ಮಾರಕದ ಹತ್ತಿರ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಜಮಾವಣೆಗೊಂಡಿದ್ದರು. ಅಸಂಖ್ಯಾತ ಅಭಿಮಾನಿಗಳು ದೂರದ ಊರಿಂದ ಸ್ಮಾರಕ ಪೂಜೆಗೆ ಆಗಮಿಸಿದ್ದರು.