Tag: ಅಪ್ಪು

  • ಮಾ.17ಕ್ಕೆ ಪುನೀತ್ ಹುಟ್ಟುಹಬ್ಬ – ‘ಅಪ್ಪು’ ಸಿನಿಮಾ ರೀ-ರಿಲೀಸ್

    ಮಾ.17ಕ್ಕೆ ಪುನೀತ್ ಹುಟ್ಟುಹಬ್ಬ – ‘ಅಪ್ಪು’ ಸಿನಿಮಾ ರೀ-ರಿಲೀಸ್

    – ಸ್ಕ್ರೀನ್ ಮೇಲೆ ಅಪ್ಪುನ ನೋಡ್ತಿದ್ದಂತೆ ಕುಣಿದು ಕುಪ್ಪಳಿಸಿದ ಫ್ಯಾನ್ಸ್

    ವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಇಂದು `ಅಪ್ಪು’ (Appu) ಸಿನಿಮಾ ರಿ-ರಿಲೀಸ್ ಆಗಿದೆ.

    23 ವರ್ಷದ ಬಳಿಕ ಮರು ಬಿಡುಗಡೆ ಆಗಿರುವ `ಅಪ್ಪು’ ಸಿನಿಮಾಕ್ಕೆ ಹಿಂದಿನ ಕ್ರೇಜ್ ಮರುಕಳಿಸಿರುವುದು ವಿಶೇಷ. ಬೆಂಗಳೂರಿನ ಹಲವೆಡೆ ಫ್ಯಾನ್ಸ್ ಶೋ ಭರ್ಜರಿಯಾಗಿ ನಡೆಯುತ್ತಿದ್ದು, ಮೊದಲ ದಿನದ ಟಿಕೆಟ್ ಆಲ್‌ಮೋಸ್ಟ್ ಸೋಲ್ಡ್ಔಟ್ ಆಗಿದೆ. ಇದನ್ನೂ ಓದಿ: ಫ್ಯಾನ್ಸ್‌ಗೆ ಸಿಹಿಸುದ್ದಿ- ‘ಬ್ರಹ್ಮಾಸ್ತ್ರ 2’ ಬಗ್ಗೆ ಅಪ್‌ಡೇಟ್ ಕೊಟ್ಟ ರಣಬೀರ್ ಕಪೂರ್

    ಬೆಂಗಳೂರಿನ ನರ್ತಕಿ, ವಿರೇಶ್ ಹಾಗೂ ಶ್ರೀನಿವಾಸ, ಸಿದ್ದೇಶ್ವರ ಚಿತ್ರಮಂದಿರಗಳಲ್ಲಿ ಫ್ಯಾನ್ಸ್ ಕಡೆಯಿಂದ ಭರ್ಜರಿ ಸೆಲೆಬ್ರೇಷನ್ ಇದೆ. ಅಪ್ಪು ಕುಟುಂಬಸ್ಥರೂ ಹಾಗೂ ಸಿನಿಮಾ ಟೀಮ್ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಲಿದ್ದಾರೆ. ಈಗಾಗಲೇ ಥಿಯೇಟರ್‌ಗಳಲ್ಲಿ ಬೆಳಗ್ಗೆ 6:30 ರಿಂದ ಶೋ ಆರಂಭವಾಗಿದೆ.

    ಇದೇ ಮಾರ್ಚ್ 17ಕ್ಕೆ ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಹುಟ್ಟಿದ ಹಬ್ಬ. ಇದರ ವಿಶೇಷವಾಗಿ ಪವರ್‌ಸ್ಟಾರ್ ಅಭಿಮಾನಿಗಳು ಅಪ್ಪು ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರವನ್ನ ರಿ-ರಿಲೀಸ್ ಮಾಡಿ ಖುಷಿ ಪಟ್ಟಿದ್ದಾರೆ. ಶೋ ಆರಂಭವಾಗಿ ಸ್ಕ್ರೀನ್ ಮೇಲೆ ಅಪ್ಪುನ ನೋಡುತ್ತಿದ್ದಂತೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಬೆಡಗಿ ಜೊತೆ ಡೇಟಿಂಗ್ ಮಾಡ್ತಿದ್ದೀನಿ: ಪಾರ್ಟಿಯಲ್ಲಿ ಗೆಳತಿ ಬಗ್ಗೆ ಆಮೀರ್ ಮಾತು

  • ನಾಳೆ ರೀ ರಿಲೀಸ್‌ ಆಗ್ತಿದೆ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಅಪ್ಪು’ ಸಿನಿಮಾ

    ನಾಳೆ ರೀ ರಿಲೀಸ್‌ ಆಗ್ತಿದೆ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಅಪ್ಪು’ ಸಿನಿಮಾ

    ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ‘ಅಪ್ಪು’ ಸಿನಿಮಾ ಮಾ.14ರಂದು ರೀ ರಿಲೀಸ್‌ಗೆ ಸಿದ್ಧವಾಗಿದೆ. ಮಾ.17ರಂದು ಪುನೀತ್ ಹುಟ್ಟುಹಬ್ಬದ ಹಿನ್ನೆಲೆ ಮತ್ತೆ ‘ಅಪ್ಪು’ ಸಿನಿಮಾ ರೀ ರಿಲೀಸ್ ಮಾಡಲಾಗುತ್ತಿದೆ. ಹಾಗಾಗಿ ‘ಅಪ್ಪು’ ಸಿನಿಮಾ ಸಕ್ಸಸ್‌ನ ವಿಶೇಷ ವಿಡಿಯೋವೊಂದನ್ನು ಪುನೀತ್ ಪತ್ನಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಟಾಕ್ಸಿಕ್’ ಅದ್ಭುತವಾಗಿದೆ: ಯಶ್ ಕುರಿತು ಹಾಲಿವುಡ್ ಸ್ಟಂಟ್ ಮಾಸ್ಟರ್ ಗುಣಗಾನ

    ‘ಅಪ್ಪು’ 100ನೇ ದಿನದ ಸಂಭ್ರಮದ ವಿಡಿಯೋವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಶೇರ್ ಮಾಡಿ, ‘ಅಪ್ಪು’ ಚಿತ್ರದ ಐತಿಹಾಸಿಕ ಶತದಿನೋತ್ಸವ ಸಮಾರಂಭದ ಯಶಸ್ಸನ್ನು ಹರ್ಷದಿಂದ ಹಾರೈಸಲು ಕನ್ನಡ ಚಿತ್ರರಂಗದ ಗಣ್ಯರು ಒಂದುಗೂಡುವ ಹಬ್ಬದ ಅಪರೂಪದ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮಾ.14ರಂದು ರೀ ರಿಲೀಸ್ ಆಗುತ್ತಿರುವ ‘ಅಪ್ಪು’ ಚಿತ್ರದ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದಾರೆ.

    ಇನ್ನೂ ‘ಅಪ್ಪು’ ಚಿತ್ರದ ಸಕ್ಸಸ್ ಕಾರ್ಯಕ್ರಮವು ಅಣ್ಣಾವ್ರು, ರಜನಿಕಾಂತ್ ಸಮ್ಮುಖದಲ್ಲಿ ನಡೆದಿತ್ತು. ಸಿನಿಮಾ ಗೆದ್ದ ಖುಷಿಯಲ್ಲಿ ಶಿವಣ್ಣ, ರಾಘಣ್ಣ ಮತ್ತು ಅಪ್ಪು ಜೊತೆಯಾಗಿ ಹೆಜ್ಜೆ ಹಾಕಿದ್ದರು.

    ಇನ್ನೂ ಪೂರಿ ಜಗನ್ನಾಥ್ ನಿರ್ದೇಶನದ ‘ಅಪ್ಪು’ ಸಿನಿಮಾದಲ್ಲಿ ಪುನೀತ್‌ಗೆ ನಾಯಕಿಯಾಗಿ ರಕ್ಷಿತಾ ನಟಿಸಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು.

  • ಅಪ್ಪು ಅಗಲಿಕೆಗೆ 3 ವರ್ಷ, ರಾಜ್ಯಾದ್ಯಂತ ಪುಣ್ಯಸ್ಮರಣೆ –  ಕುಟುಂಬಸ್ಥರಿಂದ ಸಮಾಧಿಗೆ ಪೂಜೆ

    ಅಪ್ಪು ಅಗಲಿಕೆಗೆ 3 ವರ್ಷ, ರಾಜ್ಯಾದ್ಯಂತ ಪುಣ್ಯಸ್ಮರಣೆ – ಕುಟುಂಬಸ್ಥರಿಂದ ಸಮಾಧಿಗೆ ಪೂಜೆ

    ಬೆಂಗಳೂರು: ನಗುವಿನ ಅರಸ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿಕೆಗೆ ಭರ್ತಿ ಮೂರು ವರ್ಷ. 3 ವರ್ಷವಲ್ಲ, ಇನ್ನೂ ನೂರು ವರ್ಷ ಕಳೆದರೂ ಅಪ್ಪು (Appu) ಮರೆಯಲಾಗದ ಮಾಣಿಕ್ಯ. 3ನೇ ವರ್ಷದ ಅಪ್ಪು ಪುಣ್ಯ ಸ್ಮರಣೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಭಾಗಿಯಾಗಿದ್ದಾರೆ.

    ನಗುಮೊಗದ ಒಡೆಯ ಪುನೀತ್‌ ಸ್ಟಾರ್ ಬ್ಯಾಕ್‌ಗ್ರೌಂಡ್‌ನಿಂದ ಬಂದಿದ್ದರೂ ಹಮ್ಮು ಬಿಮ್ಮಿಲ್ಲದೇ ಎಲ್ಲರನ್ನೂ ತನ್ನವರೆಂದು ಬಾಚಿ ತಬ್ಬಿಕೊಳ್ಳುತ್ತಿದ್ದರು. ಹೀಗಾಗಿಯೇ ಅವರನ್ನು ಎಲ್ಲರೂ ಪ್ರೀತಿಯಿಂದ ಅಪ್ಪು ಎಂದೇ ಕರೆಯುತ್ತಿದ್ದರು. ಅಪ್ಪು ಕಳೆದುಕೊಂಡು ಇಂದಿಗೆ ಭರ್ತಿ ಮೂರು ವರ್ಷಗಳು. ಇಂದಿಗೂ ಕೂಡಾ ಅವರನ್ನು ಕಳೆದುಕೊಂಡ ದುಃಖ ಮಾತ್ರ ಅವರ ಭಕ್ತಗಣದ ಎದೆಯಿಂದ ಮಾಸಿಲ್ಲ. ಇದನ್ನೂ ಓದಿ: ಸುದೀಪ್ ತಾಯಿ ಅಗಲಿಕೆಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ- ಪ್ರತಿಕ್ರಿಯಿಸಿದ ಕಿಚ್ಚ

    ಅಪ್ಪು 3ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಪತ್ನಿ ಅಶ್ವಿನಿ, ರಾಘವೇಂದ್ರ ರಾಜ್‌ಕುಮಾರ್, ವಿನಯ್  ರಾಜ್‌ಕುಮಾರ್, ಯುವರಾಜ್ ಕುಮಾರ್, ಅಪ್ಪು ಪುತ್ರಿಯರು ಭಾಗಿಯಾಗಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಇಷ್ಟದ ತಿನಿಸುಗಳನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ. ಸಮಾಧಿಯನ್ನ ವಿಶೇಷವಾಗಿ ಹೂವುಗಳಿಂದ, ದೀಪಗಳಿಂದ ಅಲಂಕಾರ ಮಾಡಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳ ದಂಡು ಅಪ್ಪು ಸಮಾಧಿ ಬಳಿ ಜಮಾಯಿಸಿ ನೆಚ್ಚಿನ ನಟನಿಗೆ ನಮನ ಸಲ್ಲಿಸುತ್ತಿದ್ದಾರೆ.

     

    ಅಪ್ಪು ಇಲ್ಲ ಎಂದು ಅವರ ಅಭಿಮಾನಿಗಳು ಸುಮ್ಮನೆ ಕುಳಿತಿಲ್ಲ. ಅವರ ಹೆಸರಿನಲ್ಲಿ ಸಾಕಷ್ಟು ಪುಣ್ಯದ ಕೆಲಸಗಳನ್ನು ವರ್ಷಪೂರ್ತಿ ಮಾಡುತ್ತಿದ್ದಾರೆ. ಇಂದು ಪುಣ್ಯ ಸ್ಮರಣೆ ವಿಶೇಷವಾಗಿ ಕಂಠೀರವ ಸ್ಟುಡಿಯೋದಲ್ಲಿ ಹಾಗೂ ರಾಜ್ಯದ ಮೂಲೆ ಮೂಲೆಗಳಲ್ಲೂ ಅನ್ನದಾನ, ರಕ್ತದಾನ ಶಿಬಿರಗಳು ನಡೆಯುತ್ತಿವೆ. ಅಷ್ಟೇ ಅಲ್ಲದೇ ಇತ್ತೀಚೆಗೆ ಅಪ್ಪು ಅಭಿಮಾನಿ ಯಲಗಚ್ಚಿನಲ್ಲಿ ಗುಡಿಯೊಂದನ್ನ ಕಟ್ಟಿ ಅಭಿಮಾನ ಮೆರೆದಿದ್ದಾನೆ. ಅಲ್ಲೂ ಕೂಡಾ ಇಂದು ವಿಶೇಷ ಪೂಜೆ ನಡೆಯಲಿದೆ.

  • ಮಂಡ್ಯದಲ್ಲಿ ಅಪ್ಪು ಹೆಸರಲ್ಲಿ ವಂಚನೆ ಆರೋಪ – ಕ್ರೀಡಾಕೂಟದ ನಕಲಿ ಪೋಸ್ಟ್ ಬಿಟ್ಟು ದೋಖಾ

    ಮಂಡ್ಯದಲ್ಲಿ ಅಪ್ಪು ಹೆಸರಲ್ಲಿ ವಂಚನೆ ಆರೋಪ – ಕ್ರೀಡಾಕೂಟದ ನಕಲಿ ಪೋಸ್ಟ್ ಬಿಟ್ಟು ದೋಖಾ

    ಮಂಡ್ಯ: ದಿವಂಗತ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಹೆಸರಿನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ಆಯೋಜಿಸಿ ವಂಚಿಸಿರುವ ಆರೋಪ ಕೇಳಿಬಂದಿದೆ. ಜಿಲ್ಲೆಯ ಮಳವಳ್ಳಿ (Malavalli) ತಾಲೂಕಿನಲ್ಲಿ ವ್ಯಕ್ತಿಯೊಬ್ಬ ವಂಚನೆ ಎಸಗಿರುವ ಆರೋಪವಿದೆ.

    ಅಪರಿಚಿತ ವ್ಯಕ್ತಿಯೊಬ್ಬ ಮೋಸ ಮಾಡಿದ್ದಾನೆ ಎನ್ನಲಾಗಿದ್ದು, ಆತನ ಕುರಿತು ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

    ಮಳವಳ್ಳಿಯ ಡಾ.ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಹೆಸರಿನಲ್ಲಿ ರಾಷ್ಟ್ರಮಟ್ಟದ ಪುರುಷ ಮತ್ತು ಮಹಿಳೆಯರ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ವಿಜೇತರಿಗೆ ದೊಡ್ಡ ಮೊತ್ತದ ಬಹುಮಾನ ನೀಡುವುದಾಗಿ ಪೋಸ್ಟರ್ ವೈರಲಾಗಿತ್ತು. ಪೋಸ್ಟರ್‌ನಲ್ಲಿ ಪ್ರಥಮ ಬಹುಮಾನ 5 ಲಕ್ಷ ರೂ., ದ್ವಿತೀಯ 4 ಲಕ್ಷ ರೂ., ತೃತೀಯ 3 ಲಕ್ಷ ರೂ., ನಾಲ್ಕನೇ ಬಹುಮಾನ 2 ಲಕ್ಷ ರೂ. ಹಾಗೂ ಐದನೇ ಬಹುಮಾನ 1 ಲಕ್ಷ ರೂ. ಎಂದು ನಮೂದಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ 10 ಸಾವಿರ ರೂ. ಪ್ರವೇಶ ಶುಲ್ಕ, ಮುಂಗಡ 3500 ರೂ. ನೀಡಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿತ್ತು. ನ.20 ರಂದು ಬೆಳಗ್ಗೆ 8 ಗಂಟೆಗೆ ಮಳವಳ್ಳಿಯಲ್ಲಿ ಸ್ಪರ್ಧೆ ನಡೆಯುವುದಾಗಿ ಉಲ್ಲೇಖಿಸಲಾಗಿತ್ತು. ಇದನ್ನೂ ಓದಿ: ಇಂದು ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣೆ ಘೋಷಣೆ

    ಪೋಸ್ಟರ್‌ನಲ್ಲಿ ನಂಬರ್ ಹಾಕಿ ವಂಚಿಸಿದ್ದು, ಈಗಾಗಲೇ ಹಲವರಿಂದ ಹಣ ವಸೂಲಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಪ್ಪು ಹೆಸರಲ್ಲಿ ಕೋಟ್ಯಂತರ ಜನರಿಗೆ ಅಪರಿಚಿತ ವ್ಯಕ್ತಿ ಮೋಸ ಮಾಡುತ್ತಿದ್ದಾನೆ. ಡಾ.ರಾಜ್ ಕುಟುಂಬಕ್ಕೆ ಹಾಗೂ ಮಳವಳ್ಳಿಗೂ ಅವಿನಾಭಾವ ಸಂಬಂಧವಿದ್ದು, ಸ್ಪರ್ಧಾಳುಗಳಿಗೆ ಹಣದ ಆಮಿಷವೊಡ್ಡಿ ವಂಚನೆ ಮಾಡುತ್ತಿದ್ದಾನೆ.

    ಮುಂಗಡ ಹಣ ನೀಡಿ ಯಾರೂ ಮೋಸ ಹೋಗಬಾರದು ಎಂದು ಜನರಿಗೆ ಎಚ್ಚರಿಕೆ ನೀಡಿದ್ದು, ಅಪರಿಚಿತ ವ್ಯಕ್ತಿ ವಿರುದ್ಧ ರಾಶಿರಾಪು ಸೇನಾ ಸಮಿತಿಯಿಂದ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಸ್ಪರ್ಧೆ ಆಯೋಜಿಸಿರುವುದಾಗಿ ಪೋಸ್ಟರ್ ಬಿಡುಗಡೆ ಮಾಡಿರುವ ವ್ಯಕ್ತಿ ಬಗ್ಗೆ ಮಾಹಿತಿಯೇ ಇಲ್ಲ.

    ಅಪ್ಪು ಹೆಸರಿಗೆ ಕಳಂಕ ತರುವ ಇಂತಹ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ರಾಶಿರಾಪು ಸೇನಾ ಸಮಿತಿ ಅಧ್ಯಕ್ಷ ಚಿಕ್ಕಣ್ಣ ಆಗ್ರಹಿಸಿದ್ದಾರೆ.ಇದನ್ನೂ ಓದಿ: ಹುಬ್ಬಳ್ಳಿ ಬೈಪಾಸ್ ಬಳಿ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು – ಛಿದ್ರ ಛಿದ್ರವಾದ ದೇಹಗಳು

  • ಹಾವೇರಿ | ಮನೆ ಮುಂದೆ ಅಭಿಮಾನಿ ಕಟ್ಟಿಸಿದ್ದ ಅಪ್ಪು ದೇವಸ್ಥಾನ ಉದ್ಘಾಟಿಸಿದ ದೊಡ್ಮನೆ ಸೊಸೆ

    ಹಾವೇರಿ | ಮನೆ ಮುಂದೆ ಅಭಿಮಾನಿ ಕಟ್ಟಿಸಿದ್ದ ಅಪ್ಪು ದೇವಸ್ಥಾನ ಉದ್ಘಾಟಿಸಿದ ದೊಡ್ಮನೆ ಸೊಸೆ

    ಹಾವೇರಿ: ಜಿಲ್ಲೆಯ ಯಲಗಚ್ಚ (Yalagach) ಗ್ರಾಮದಲ್ಲಿ ದಿವಂಗತ ಪುನೀತ್ ರಾಜಕುಮಾರ್ (Puneeth Rajkumar) ಹೆಸರಿನಲ್ಲಿ ನಿರ್ಮಾಣವಾಗಿರುವ ದೇವಸ್ಥಾನವನ್ನು ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಇಂದು (ಸೆ.26) ಉದ್ಘಾಟಸಿದರು.

    ಯಲಗಚ್ಚ ಗ್ರಾಮದ ಉಡಚ್ಚಮ್ಮ ದೇವಿಯ ದರ್ಶನ ಪಡೆದ ಅಶ್ವಿನಿಯವರನ್ನು ಗ್ರಾಮದ ಪ್ರಮುಖ ರಸ್ತೆಯಲ್ಲಿ ಕುಂಬಮೇಳದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ದೊಡ್ಮನೆ ಸೊಸೆ, ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು 6 ಅಡಿ ಎತ್ತರದ ಅಪ್ಪು ಮೂರ್ತಿಯನ್ನು ಲೋಕಾರ್ಪಣೆ ಮಾಡಿದರು.ಇದನ್ನೂ ಓದಿ: ರಾಜ್ಯದಲ್ಲಿ ಸಿಬಿಐ ಮುಕ್ತ ತನಿಖೆ ಅಧಿಕಾರಕ್ಕೆ ಬ್ರೇಕ್‌

    ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ ಯಲಗಚ್ಚ ಗ್ರಾಮದ ಪ್ರಕಾಶ ಮೊರಬದ ತಮ್ಮ ಮನೆಯ ಸ್ವಂತ ಜಾಗದಲ್ಲಿ ತಮ್ಮ ನೆಚ್ಚಿನ ನಟ ಪುನೀತ್ ರಾಜಕುಮಾರ್ ಅವರ ದೇವಸ್ಥಾನ ನಿರ್ಮಿಸಿದ್ದಾರೆ. ದೇವಸ್ಥಾನದಲ್ಲಿ ಪುನೀತ್ ರಾಜಕುಮಾರ್ ಮೂರ್ತಿ ಅನಾವರಣ ಮಾಡಿ, ಪ್ರಕಾಶ ಪುತ್ರಿಗೆ ಅಪೇಕ್ಷಾ ಎಂದು ನಾಮಕರಣ ಮಾಡಿದರು. ಅಪ್ಪು ಮೂರ್ತಿಯನ್ನು ನೋಡಿದ ಅಶ್ವಿನಿ ಭಾವುಕರಾದರು.

    ಅಭಿಮಾನಿ ಮನೆಯಲ್ಲಿ ಮಾತನಾಡಿದ ಅವರು, ಅದಕ್ಕೆ ಅಭಿಮಾನಿಗಳೇ ದೇವರು ಅನ್ನೋದು, ಇಂತಹ ಅಭಿಮಾನಿ ಸಿಕ್ಕಿರುವುದು ನಮ್ಮ ಪುಣ್ಯ. ಸ್ವಂತ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದು ನಮ್ಮ ಪುಣ್ಯ ಎಂದರು.

    ಎಂಟು ತಿಂಗಳ ಹಿಂದೆ ಪ್ರಕಾಶ ಪಾದರಕ್ಷೆ ಧರಿಸದೇ ಕೆಲಸ ಮಾಡಿದ್ದ, ಇವತ್ತು ಪಾದರಕ್ಷೆಯನ್ನು ಹಾಕಿದ್ದಾನೆ. ಅಭಿಮಾನಿಗಳು ಪ್ರೀತಿಯಿಂದ ಕರೆದಿದ್ದಕ್ಕೆ ಬಂದು ದೇವಸ್ಥಾನ ಉದ್ಘಾಟನೆ ಮಾಡಿದ್ದೇನೆ. ನಮ್ಮ ಪಾಲಿನ ದೇವರು ನೀವು ಎಂದು ಅಭಿಮಾನಿ ಪ್ರಕಾಶ ಮತ್ತು ಕುಟುಂಬದ ಸದಸ್ಯರು ತಿಳಿಸಿದ್ದಾರೆ.ಇದನ್ನೂ ಓದಿ: WWCL : ಯಾವ ತಂಡಕ್ಕೆ ಯಾವ ನಟಿ ಕ್ಯಾಪ್ಟನ್?

  • ರಾಜ್ಯಾದ್ಯಂತ ‘ಯುವ’ ಚಿತ್ರ ರಿಲೀಸ್: ಸ್ವಾಗತಿಸಿದ ಅಪ್ಪು ಫ್ಯಾನ್ಸ್

    ರಾಜ್ಯಾದ್ಯಂತ ‘ಯುವ’ ಚಿತ್ರ ರಿಲೀಸ್: ಸ್ವಾಗತಿಸಿದ ಅಪ್ಪು ಫ್ಯಾನ್ಸ್

    ಇಂದಿನಿಂದ ರಾಜ್ಯಾದ್ಯಂತ ಯುವ (Yuva) ಸಿನಿಮಾ ರಿಲೀಸ್ (Released) ಆಗಿದೆ. ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯುವ ಬಿಡುಗಡೆಯಾಗಿದ್ದು, ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಚಿತ್ರವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ ಯುವ ರಾಜ್ ಕುಮಾರ್ (Yuvaraj Kumar) ಜೊತೆಗೆ ಅಪ್ಪು (Appu) ಕಟೌಟ್ ಕೂಡ ಚಿತ್ರಮಂದಿರದ ಮುಂದೆ ನಿಲ್ಲಿಸಿದ್ದಾರೆ.

    ಅದರಲ್ಲೂ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಅರಮನೆ ರೀತಿಯ ಸೆಟ್, ಡಾ.ರಾಜ್ ಕುಟುಂಬದ ಕಟೌಟ್, ಯುವ ಕಟೌಟ್, ಪುನೀತ್ ರಾಜ್ ಕುಮಾರ್ ಕಟೌಟ್ ಹೀಗೆ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಅಭಿಮಾನ ತೋರಿಸಿದ್ದಾರೆ. ಮುಖ್ಯ ಚಿತ್ರಮಂದಿರ ಮೆಜೆಸ್ಟಿಕ್ ನ ಸಂತೋಷ್ ಥಿಯೇಟರ್ ನಲ್ಲಿ ಕಳೆಗಟ್ಟಿದೆ ಸಂಭ್ರಮ.

     

    ಪಟಾಕಿ ಸಿಡಿಸಿ, ಟಪ್ಪಾಂಗುಚ್ಚಿ ಹೆಜ್ಜೆಹಾಕಿ ದೊಡ್ಮನೆ ನಯಾ‌ ಕುಡಿ ಬರಮಾಡಿಕೊಳ್ಳುತ್ತಿದ್ದಾರೆ ಅಭಿಮಾನಿಗಳು. ಬೆಳ್ಳಂಬೆಳಗ್ಗೆ ಅನೇಕ ಸ್ಕ್ರೀನ್‌ಗಳಲ್ಲಿ ತೆರೆಕಂಡಿರುವ ಯುವ ಸಿನಿಮಾವನ್ನು ನೋಡುತ್ತಾ, ಅಪ್ಪುವನ್ನು ಕಳೆದುಕೊಂಡು ಮಿಸ್ ಮಾಡಿಕೊಳ್ತಿರುವ ಅಭಿಮಾನಿಗಳಿಗೆ ಯುವರಾಜ್ ಕುಮಾರ್ ರನ್ನು ಬರಮಾಡಿಕೊಳ್ಳುವ  ಸಂಭ್ರಮ ಎಲ್ಲೆಲ್ಲೂ ಕಾಣುತ್ತಿದೆ.

  • ‘ಜಾಕಿ’ಯನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಫ್ಯಾನ್ಸ್

    ‘ಜಾಕಿ’ಯನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಫ್ಯಾನ್ಸ್

    ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರ ಜಾಕಿ (Jackie) ಸಿನಿಮಾವನ್ನು ಅವರ ಅಭಿಮಾನಿಗಳು ರಾಜ್ಯಾದ್ಯಂತ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಥಿಯೇಟರ್ ಮುಂದೆ ಆಳೆತ್ತರದ ಕಟೌಟ್ ಹಾಕಿ ಸಂಭ್ರಮಿಸಿದ್ದಾರೆ. ಅಪ್ಪು (Puneeth Rajkumar) ಹುಟ್ಟು ಹಬ್ಬಕ್ಕೆ (Birthday) ಈಗಿನಿಂದಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ.

    ದುನಿಯಾ ಸೂರಿ (Duniya Vijay)  ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಬಾಕ್ಸ್ ಆಫೀಸಿನಲ್ಲಿ ಸೂಪರ್ ಹಿಟ್ ಚಿತ್ರ ಎಂದು ದಾಖಲಾಗಿದೆ. ಅಲ್ಲದೇ, ಈ ಸಿನಿಮಾದ ಹಾಡುಗಳು ಕೂಡ ಹೊಸ ರೀತಿಯಲ್ಲಿ ಕೇಳಿಸಿದ್ದವು. ಹಾಗಾಗಿ ಅಪ್ಪು ಡಾನ್ಸ್ ಕೂಡ ಅಭಿಮಾನಿಗಳಿಗೆ ಇಷ್ಟವಾಗಿತ್ತು.

    ಚಿತ್ರದ ಕಥೆ, ಅಪ್ಪು ಡಾನ್ಸ್, ಹಾಡು ಹಾಗೂ ಸಾಹಸ ಸನ್ನಿವೇಶಗಳಿಂದ ಜಾಕಿ ಸಿನಿಮಾ ಗಮನ ಸೆಳೆದಿತ್ತು. ವಿಚಿತ್ರ ವೇಷಗಳನ್ನೂ ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಹಾಕಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅಪ್ಪು ಜೊತೆ ಭಾವನಾ ನಾಯಕಿಯಾಗಿ ನಟಿಸಿದ್ದರು.

    ಜಾಕಿ ಚಿತ್ರವನ್ನು ಮತ್ತಷ್ಟು ಅಪ್ ಗ್ರೇಡ್ ಮಾಡಿ ಈ ಬಾರಿ ಥಿಯೇಟರ್ ಗೆ ತರಲಾಗುತ್ತಿದೆ. ಸೌಂಡ್, ರೆಸ್ಯುಲೇಷನ್ ಮತ್ತಷ್ಟು ಹೆಚ್ಚಿಸಲಾಗಿದೆಯಂತೆ. ಇನ್ನಷ್ಟು ಕಲರ್ ಫುಲ್ ನೊಂದಿಗೆ ಜಾಕಿ ಸಿನಿಮಾವನ್ನು ನೋಡಬಹುದಾಗಿದೆಯಂತೆ.

     

    ಬರೀ ಸಿನಿಮಾ ಮಾತ್ರವಲ್ಲ ಎಂದಿನಂತೆ ಅವರ ಅಭಿಮಾನಿಗಳು ಅನ್ನ ಸಂತರ್ಪಣೆ, ಕಣ್ಣುದಾನ, ರಕ್ತದಾನದಂತಹ ಶಿಬಿರಗಳನ್ನು ಅಪ್ಪು ಸಮಾಧಿ ಬಳಿ ಮಾಡಲು ರೆಡಿ ಆಗುತ್ತಿದ್ದಾರೆ. ಅಂದು ಯುವ ಸಿನಿಮಾದ ಇವೆಂಟ್ ಕೂಡ ಇರಲಿದೆ.

  • ನಾಳೆ ಅಪ್ಪು ನಟನೆಯ ‘ಜಾಕಿ’ ಸಿನಿಮಾ ರಿಲೀಸ್

    ನಾಳೆ ಅಪ್ಪು ನಟನೆಯ ‘ಜಾಕಿ’ ಸಿನಿಮಾ ರಿಲೀಸ್

    ಪುನೀತ್ ರಾಜ್ ಕುಮಾರ್ (Puneeth Rajkumar) ಹುಟ್ಟು ಹಬ್ಬಕ್ಕೆ (Birthday) ಈಗಿನಿಂದಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಮಾರ್ಚ್ 17ಕ್ಕೆ ಅಪ್ಪು ಹುಟ್ಟು ಹಬ್ಬ. ಹಾಗಾಗಿ ನಾಳೆ ಅಪ್ಪು ನಟನೆಯ ಜಾಕಿ (Jackie) ಸಿನಿಮಾ ರಿರೀಲಿಸ್ ಆಗುತ್ತಿದೆ. ಅದಕ್ಕಾಗಿ ಅನೇಕ ಚಿತ್ರಮಂದಿರಗಳು ಇಂದಿನಿಂದಲೇ ಸಿದ್ಧತೆ ಮಾಡಿಕೊಂಡಿವೆ.

    ದುನಿಯಾ ಸೂರಿ (Duniya Vijay)  ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಬಾಕ್ಸ್ ಆಫೀಸಿನಲ್ಲಿ ಸೂಪರ್ ಹಿಟ್ ಚಿತ್ರ ಎಂದು ದಾಖಲಾಗಿದೆ. ಅಲ್ಲದೇ, ಈ ಸಿನಿಮಾದ ಹಾಡುಗಳು ಕೂಡ ಹೊಸ ರೀತಿಯಲ್ಲಿ ಕೇಳಿಸಿದ್ದವು. ಹಾಗಾಗಿ ಅಪ್ಪು ಡಾನ್ಸ್ ಕೂಡ ಅಭಿಮಾನಿಗಳಿಗೆ ಇಷ್ಟವಾಗಿತ್ತು.

    ಚಿತ್ರದ ಕಥೆ, ಅಪ್ಪು ಡಾನ್ಸ್, ಹಾಡು ಹಾಗೂ ಸಾಹಸ ಸನ್ನಿವೇಶಗಳಿಂದ ಜಾಕಿ ಸಿನಿಮಾ ಗಮನ ಸೆಳೆದಿತ್ತು. ವಿಚಿತ್ರ ವೇಷಗಳನ್ನೂ ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಹಾಕಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅಪ್ಪು ಜೊತೆ ಭಾವನಾ ನಾಯಕಿಯಾಗಿ ನಟಿಸಿದ್ದರು.

    ಜಾಕಿ ಚಿತ್ರವನ್ನು ಮತ್ತಷ್ಟು ಅಪ್ ಗ್ರೇಡ್ ಮಾಡಿ ಈ ಬಾರಿ ಥಿಯೇಟರ್ ಗೆ ತರಲಾಗುತ್ತಿದೆ. ಸೌಂಡ್, ರೆಸ್ಯುಲೇಷನ್ ಮತ್ತಷ್ಟು ಹೆಚ್ಚಿಸಲಾಗಿದೆಯಂತೆ. ಇನ್ನಷ್ಟು ಕಲರ್ ಫುಲ್ ನೊಂದಿಗೆ ಜಾಕಿ ಸಿನಿಮಾವನ್ನು ನೋಡಬಹುದಾಗಿದೆಯಂತೆ.

     

    ಬರೀ ಸಿನಿಮಾ ಮಾತ್ರವಲ್ಲ ಎಂದಿನಂತೆ ಅವರ ಅಭಿಮಾನಿಗಳು ಅನ್ನ ಸಂತರ್ಪಣೆ, ಕಣ್ಣುದಾನ, ರಕ್ತದಾನದಂತಹ ಶಿಬಿರಗಳನ್ನು ಅಪ್ಪು ಸಮಾಧಿ ಬಳಿ ಮಾಡಲು ರೆಡಿ ಆಗುತ್ತಿದ್ದಾರೆ. ಅಂದು ಯುವ ಸಿನಿಮಾದ ಇವೆಂಟ್ ಕೂಡ ಇರಲಿದೆ.

  • ಅಪ್ಪು ಅಗಲಿ ಇಂದಿಗೆ 2 ವರ್ಷ- ಪುನೀತ್ ಸಮಾಧಿಗೆ ದೊಡ್ಮನೆ ಕುಟುಂಬಸ್ಥರಿಂದ ಪೂಜೆ

    ಅಪ್ಪು ಅಗಲಿ ಇಂದಿಗೆ 2 ವರ್ಷ- ಪುನೀತ್ ಸಮಾಧಿಗೆ ದೊಡ್ಮನೆ ಕುಟುಂಬಸ್ಥರಿಂದ ಪೂಜೆ

    – ಕಂಠೀರವ ಸ್ಟುಡಿಯೋಗೆ ಅಭಿಮಾನಿಗಳ ದಂಡು

    ಬೆಂಗಳೂರು: ಅಕ್ಟೋಬರ್ 29 ಕನ್ನಡಿಗರಿಗೆ ಭರಿಸಲಾಗದ ನೋವು ಕೊಟ್ಟ ದಿನ. ಚಿತ್ರರಂಗಕ್ಕೆ ತುಂಬಲಾರದ ನಷ್ಟವಾದ ದಿನ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Powerstar PunnethRajKumar) ದೈಹಿಕವಾಗಿ ದೂರವಾಗಿ ಎರಡು ವರ್ಷ ಆಗ್ತಿದೆ. ಕಂಠೀರವ ಸ್ಟೂಡಿಯೋದಲ್ಲಿ ಏನೇನು ನಡೆಯಲಿದೆ.

    ಪವರ್ ಸ್ಟಾರ್ ಪುಣ್ಯ ಸ್ಮರಣೆಗೆ ಅಭಿಮಾನಿ ಬಳಗ ಸಜ್ಜಾಗಿದೆ. ನಮ್ಮ ಪವರ್ ಸ್ಟಾರ್ ನಮ್ಮ ಜೊತೆಯಲ್ಲಿದ್ದಾರೆ ಅಂತ ಅವರು ಇಷ್ಟಪಡುತ್ತಿದ್ದ ಕೆಲಸಗಳನ್ನ ಮಾಡುತ್ತಿದ್ದಾರೆ. ಎರಡನೇ ವರ್ಷದ ಪುಣ್ಯಸ್ಮರಣೆಗೆ ಅಪ್ಪು ಸ್ಮಾರಕ ರೆಡಿಯಾಗಿದೆ. ಅನ್ನದಾನ, ರಕ್ತದಾನ, ನೇತ್ರದಾನದ ಕ್ಯಾಂಪ್ ಮಾಡುತ್ತಿದ್ದಾರೆ ಅಭಿಮಾನಿಗಳು. ದೂರದ ಊರುಗಳಿಂದ ಅಭಿಮಾನಿ ದೇವರುಗಳು ಅಪ್ಪುನ ನೋಡಲು ಈಗಾಗ್ಲೇ ಹೊರಟಿದ್ದಾರೆ. ಅಪ್ಪು ನಮನ ಮತ್ತು ಪ್ರೀತಿಯ ಧ್ಯಾನ ಮಾಡಲು ಮಧ್ಯರಾತ್ರಿಯಿಂದ ಶುರುವಾಗಿದೆ. ಇದನ್ನೂ ಓದಿ: ನವೆಂಬರ್ 1ಕ್ಕೆ ಗುಡ್ ನ್ಯೂಸ್ ಕೊಡ್ತಾರಾ ಯಶ್?: ಟೈಟಲ್-ಟೀಸರ್ ರಿಲೀಸ್

    ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ದೊಡ್ಮನೆ ಸದಸ್ಯರು ಅಪ್ಪು ಸ್ಮಾರಕಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಲಿದ್ದಾರೆ. ಕುಟುಂಬದವರ ಪೂಜೆ ಬಳಿಕ ಅಭಿಮಾನಿ ದೇವರುಗಳು ಅಪ್ಪುಗೆ ನಮಿಸಲಿದ್ದಾರೆ. ಕೈ ಮುಗಿದು ಸ್ಮರಿಸಲಿದ್ದಾರೆ. ಹಬ್ಬದಂತೆ ಜನ ಆ ಜಾಗದಲ್ಲಿ ಸೇರುತ್ತಾರೆ. ಹೂವು ಹಾಕಿ ಅಲಂಕಾರ ಮಾಡಿ ಕಣ್ಣುತುಂಬಿಕೊಳ್ತಾರೆ. ಅಪ್ಪು ನೀನು ನಮ್ಮನ್ನ ಬಿಟ್ಟು ಹೋಗಿದ್ದು ಮೋಸ ಮೋಸ ಮೋಸ ಅಂತ ಜನ ಇಂದಿಗೂ ಕೊರಗ್ತಾರೆ. ಅಪ್ಪು ಅಮರ ಅವರ ನೆನಪು ಅಜರಾಮರ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಳೆ ಅಪ್ಪು 2ನೇ ಪುಣ್ಯಸ್ಮರಣೆ : ಕುಟುಂಬದಿಂದ ಸಮಾಧಿ ನಿರ್ಮಾಣ

    ನಾಳೆ ಅಪ್ಪು 2ನೇ ಪುಣ್ಯಸ್ಮರಣೆ : ಕುಟುಂಬದಿಂದ ಸಮಾಧಿ ನಿರ್ಮಾಣ

    ವರ್ ಸ್ಟಾರ್ ಪುನೀತ್ ರಾಜ ಕುಮಾರ್ (Puneeth Rajkumar) ಅಗಲಿ ನಾಳೆಗೆ ಎರಡು ವರ್ಷ. ಪುಣ್ಯ ಸ್ಮರಣೆಯನ್ನು (Punyasmarane) ಆಚರಿಸಲು ಅಭಿಮಾನಿಗಳು ಮತ್ತು ಕುಟುಂಬ ಸರ್ವಸಿದ್ಧತೆ ಮಾಡಿಕೊಂಡಿದೆ. ನಾಳೆ ಬೆಳಗ್ಗೆಯಿಂದಲೇ ಅಭಿಮಾನಿಗಳು ಹಲವಾರು ಕಾರ್ಯಕ್ರಮಗಳನ್ನು ಹಂಚಿಕೊಂಡಿದ್ದಾರೆ. ಮೈಸೂರು ಮಾದರಿಯಲ್ಲೇ ಲೈಟಿಂಗ್ ಸೇರಿದಂತೆ ನೇತ್ರದಾನ, ಅನ್ನದಾನ ಶಿಬಿರಗಳನ್ನೂ ಏರ್ಪಡಿಸಿದ್ದಾರೆ.

    ಕುಟುಂಬವು ಡಾ.ರಾಜಕುಮಾರ್ ಸಮಾಧಿ ಮಾದರಿಯಲ್ಲೇ ಅಪ್ಪು (Appu) ಸಮಾಧಿಯನ್ನು ನಿರ್ಮಾಣ ಮಾಡಿದೆ. ಬಿಳಿ ಮಾರ್ಬಲ್ಸ್ ಬಳಸಿಕೊಂಡು ಅಪ್ಪು ಸಮಾಧಿಯನ್ನು ನಿರ್ಮಾಣ ಮಾಡಲಾಗಿದೆ. ಸ್ಮಾರಕದ ಸುತ್ತಲೂ ಸಾದೇನಹಳ್ಳಿ ಕಲ್ಲಿನ ಚಪ್ಪಡಿ ಹೊದಿಸಲಾಗಿದೆ. ಸಮಾಧಿ ಮೇಲೆ ಅಪ್ಪುವಿನ ನಗುಮೊಗದ ಫೋಟೋ ಇಡಲಾಗಿದೆ.

    ಮಾಹಿತಿಯಂತೆ ನಾಳೆ ಬೆಳಗ್ಗೆ 9 ಗಂಟೆಗೆ ಡಾ.ರಾಜ್ ಕುಟುಂಬ ಸಮಾಧಿಗೆ ಬಂದು ಪೂಜೆ ಸಲ್ಲಿಸಲಿದೆ. ಅಶ್ವಿನಿ (Ashwini) ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಡಾ.ರಾಜಕುಮಾರ್ ಅವರ ಇಡೀ ಕುಟುಂಬ ಪೂಜೆಯಲ್ಲಿ ಭಾಗಿಯಾಗಲಿದೆ.

     

    ಅಕ್ಟೋಬರ್ 29ರಂದು ಪುನೀತ್ ಅವರನ್ನು ಈ ನಾಡು ಕಳೆದುಕೊಂಡಿತು. ಅಲ್ಲಿಂದ ಈವರೆಗೂ ಅಪ್ಪು ಸಮಾಧಿಗೆ ಸಾವಿರಾರು ಅಭಿಮಾನಿಗಳು ಭೇಟಿ ನೀಡುತ್ತಲೇ ಇದ್ದಾರೆ. ರಾಜ್ಯಾದ್ಯಂತ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸರಕಾರ ಕೂಡ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]