Tag: ಅಪ್ಪು

  • ವಾರ ಕಳೆದ್ರೂ ಅಪ್ಪು ಸ್ಮಾರಕಕ್ಕೆ ಜನಸಾಗರ- ಮಳೆ ಲೆಕ್ಕಿಸದೇ ದರ್ಶನ ಪಡೆದ ಅಭಿಮಾನಿಗಳು

    ವಾರ ಕಳೆದ್ರೂ ಅಪ್ಪು ಸ್ಮಾರಕಕ್ಕೆ ಜನಸಾಗರ- ಮಳೆ ಲೆಕ್ಕಿಸದೇ ದರ್ಶನ ಪಡೆದ ಅಭಿಮಾನಿಗಳು

    ಬೆಂಗಳೂರು: ಅಪ್ಪು ನಮ್ಮಗಲಿ ಇಂದಿಗೆ ಎಂಟು ದಿನ. ಇಂದು ಕೂಡ ಪುನೀತ್ ಸಮಾಧಿ ದರ್ಶನ ಮಾಡಲು ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಧಾವಿಸಿದ್ರು. ಮಳೆಯನ್ನು ಲೆಕ್ಕಿಸದೇ ಮಕ್ಕಳು, ಮಹಿಳೆಯರು, ದೊಡ್ಡವರು ಎನ್ನದೇ ಸರತಿ ಸಾಲಲ್ಲಿ ನಿಂತು ಅಪ್ಪು ಸಮಾಧಿ ದರ್ಶಿಸಿ ಕಣ್ಣೀರಾದರು. ಇದನ್ನೂ ಓದಿ: ಅಪ್ಪು ಸದಾ ನಮ್ಮ ಹೃದಯದಲ್ಲಿ ನಗುತ್ತಿರುತ್ತಾರೆ – ಪುನೀತ್ ನೆನೆದು ಬಿಕ್ಕಿ, ಬಿಕ್ಕಿ ಅತ್ತ ಸೂರ್ಯ

    ಮತ್ತೊಂದೆಡೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಅಶೋಕ್, ನಟ ಪುನೀತ್ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರ ಯೋಗಕ್ಷೇಮ ವಿಚಾರಿಸಿದ್ರು. ತೆಲುಗು ಮತ್ತು ತಮಿಳು ನಟರು ಕೂಡ ಅಪ್ಪು ಸಮಾಧಿಗೆ ನಮಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಜೈಭೀಮ್ ಖ್ಯಾತಿಯ ನಟ ಸೂರ್ಯ, ಹಿರಿಯ ನಟ ರಾಜೇಂದ್ರ ಪ್ರಸಾದ್ ಸೇರಿ ಹಲವರು ಅಂತಿಮ ನಮನ ಸಲ್ಲಿಸಿದ್ರು. ಈ ವೇಳೆ ನಟ ಸೂರ್ಯ ಗಳಗಳನೇ ಅತ್ತರು. ಅಪ್ಪು ಜೊತೆಗೆ ಸಾಂಗತ್ಯವನ್ನು ನೆನಪಿಸಿಕೊಂಡು ಭಾವುಕರಾದರು. ಇದನ್ನೂ ಓದಿ: ಪುನೀತ್ ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ: ವಿಜಯ್ ಸೇತುಪತಿ

    ಈ ಮಧ್ಯೆ ಇಂದು ಕೂಡ ಇಬ್ಬರು ಅಪ್ಪು ಅಭಿಮಾನಿಗಳು ಸಾವಿನ ಮನೆ ಸೇರಿದ್ದಾರೆ. ಚಾಮರಾಜನಗರ ಮತ್ತು ತುಮಕೂರಿನ ಒಬ್ಬರು ಅಪ್ಪು ಅಗಲಿಕೆಯ ಆಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಇದರೊಂದಿಗೆ ಈವರೆಗೂ ಸಾವನ್ನಪ್ಪಿದ ಅಪ್ಪು ಅಭಿಮಾನಿಗಳ ಸಂಖ್ಯೆ 15 ದಾಟಿದೆ. ಅಪ್ಪು ಮೇಲಿನ ಅಭಿಮಾನಕ್ಕೆ, ಪ್ರೀತಿಗೆ ಗಡಿಯಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗ್ತಿದೆ. ದಾವಣಗೆರೆಯಲ್ಲೊಬ್ಬರು ಹಿರಿಯರ ಪೂಜೆ ಮಾಡುವಾಗ ಅಪ್ಪು ಫೋಟೋಗೂ ಜಾಗ ನೀಡಿ ಅಭಿಮಾನ ಮೆರೆದಿದ್ದಾರೆ. ತಮಿಳುನಾಡಿನ ವೇಲೂರಿನ ಜಲಕಂಠೇಶ್ವರ ದೇಗುಲದಲ್ಲಿ ಅಗಲಿದ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಇದನ್ನೂ ಓದಿ: ಸ್ವರ್ಗದಲ್ಲಿ ಅಪ್ಪ, ಅಮ್ಮನೊಂದಿಗೆ ಪುನೀತ್ – ಫೋಟೋ ವೈರಲ್

  • ನಟ ದಿ. ಪುನೀತ್ ಮನೆಗೆ ಭೇಟಿ ನೀಡಿ ಸಿಎಂ ಸಾಂತ್ವನ

    ನಟ ದಿ. ಪುನೀತ್ ಮನೆಗೆ ಭೇಟಿ ನೀಡಿ ಸಿಎಂ ಸಾಂತ್ವನ

    – ಕುಟುಂಬಸ್ಥರ ಜೊತೆ ಬೊಮ್ಮಾಯಿ ಮಾತುಕತೆ

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ, ಅಪ್ಪು ಪತ್ನಿ ಅಶ್ವಿನಿ ಅವರಿಗೆ ಸಾಂತ್ವನ ಹೇಳಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪ್ರೀತಿಯ ಪುನೀತ್ ರಾಜ್‍ಕುಮಾರ್ ಕುಟುಂಬಕ್ಕೆ ಸಾಂತ್ವನ ಹೇಳೋಕೆ ಬಂದಿದ್ದೆ. ಪುನೀತ್ ಕನ್ನಡದ ಆಸ್ತಿ. ಇನ್ನು ಮುಂದೆ ಸಾಕಷ್ಟು ಕಾರ್ಯಕ್ರಮಗಳು ನಡೆಯಬೇಕಿದೆ. ಹಾಗಾಗಿ ಆ ಬಗ್ಗೆ ಮಾತಾಡಿದ್ದೇವೆ ಎಂದರು. ಇದನ್ನೂ ಓದಿ: ಪತ್ನಿಯ ಎದೆಹಾಲು ಕದ್ದು ಕುಡಿದ ಆಯುಷ್ಮಾನ್ ಖುರಾನಾ

    ಪುನೀತ್ ಕುಟುಂಬದವರ ಜೊತೆಗೆ ನಾವು ಇದ್ದೀವಿ. ಫಿಲ್ಮ್ ಚೇಂಬರ್ ಅವರು ಒಂದು ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಸರ್ಕಾರದ ಕಡೆಯಿಂದ ಏನು ಸಹಾಯ ಮಾಡಬೇಕೋ ಎಲ್ಲವನ್ನೂ ಮಾಡುವುದಾಗಿ ಸಿಎಂ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಿಎಂಗೆ ಸಚಿವರಾದ ಆರ್ ಅಶೋಕ್, ಡಾ. ಸಿ ಎನ್ ಅಶ್ವಥ್ ನಾರಾಯಣ್, ರಾಘವೇಂದ್ರ ರಾಜಕುಮಾರ್, ಚಿನ್ನೇಗೌಡ, ಎಸ್.ಎ ಗೋವಿಂದರಾಜ್, ಯುವರಾಜ್ ಕುಮಾರ್ ಮತ್ತು ಇತರರು ಸಾಥ್ ನೀಡಿದರು.

  • ಅವನೇ ಇಲ್ಲ, ದೂರು ಕೊಟ್ಟು ಏನು ಮಾಡೋದು: ಶಿವಣ್ಣ ಪ್ರಶ್ನೆ

    ಅವನೇ ಇಲ್ಲ, ದೂರು ಕೊಟ್ಟು ಏನು ಮಾಡೋದು: ಶಿವಣ್ಣ ಪ್ರಶ್ನೆ

    ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಸಾವು ಇಡೀ ಚಿತ್ರರಂಗ, ಕುಟುಂಬ, ಅಭಿಮಾನಿಗಳನ್ನು ಕಂಗಾಲಾಗಿಸಿದೆ. ಈ ಮಧ್ಯೆ ಅಭಿಮಾನಿಯೋರ್ವ ಸದಾಶಿವನಗರದಲ್ಲಿ ವೈದ್ಯರ ವಿರುದ್ಧ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ, ಅವನೇ ಇಲ್ಲ ಅಂದಮೇಲೆ ದೂರು ಕೊಟ್ಟು ಏನು ಪ್ರಯೋಜನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    PUNEET RAJKUMAR

    ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಈವಾಗ ಅವನೇ ಇಲ್ಲ. ಹೀಗಿದ್ದಾಗ ದೂರು ಕೊಟ್ಟು ಏನು ಪ್ರಯೋಜನ. ಮುದೊಂದು ದಿನ ಅವರಿಗೆ ಅರ್ಥವಾಗುತ್ತದೆ. ನಾವೇನು ಮಾಡೋದು ಬೇಕಾಗಿಲ್ಲ. ದೇವರಿದ್ದಾನೆ. ದಯವಿಟ್ಟು ಅದೆಲ್ಲಾ ಬೇಡ. ಈಗ ಅದೆಲ್ಲವನ್ನ ಮಾತನಾಡಿ ಪ್ರಯೋಜನವಿಲ್ಲ. ಅದೆಲ್ಲವನ್ನ ಬಿಟ್ಟು ಮುಂದೆ ಸಾಗೋಣ ಎಂದು ಶಿವಣ್ಣ ಹೇಳಿದರು. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ಗೆ ‘ಬಸವಶ್ರೀ ಪ್ರಶಸ್ತಿ’ ಘೋಷಣೆ

    ದೂರಿನಲ್ಲೇನಿದೆ..?
    ಡಾಕ್ಟರ್ ಸರಿಯಾದ ಸಮಯಕ್ಕೆ ಅಲ್ಲಿಗೆ ಹೋಗಿಲ್ಲ. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುತ್ತಿದ್ದರೆ ಪುನೀತ್ ಅವರಿಗೆ ಹೀಗಾಗುತ್ತಿರಲಿಲ್ಲ ಎಂದು ಅಭಿಮಾನಿಯೊಬ್ಬರು ವೈದ್ಯರ ವಿರುದ್ಧ ಸದಾಶಿವನಗರದಲ್ಲಿ ದೂರು ಕೊಟ್ಟಿದ್ದಾರೆ. ಇದನ್ನೂ ಓದಿ: ಪುನೀತ್ ಸಾವಿಗೂ 46 ಸಂಖ್ಯೆಗೂ ಸಂಬಂಧವೇನು?

  • ಕಂಠೀರವ ಸ್ಟುಡಿಯೋ ಬಳಿ ಬಿಗಿ ಪೊಲೀಸ್ ಭದ್ರತೆ

    ಕಂಠೀರವ ಸ್ಟುಡಿಯೋ ಬಳಿ ಬಿಗಿ ಪೊಲೀಸ್ ಭದ್ರತೆ

    – ಸಮಾಧಿ ದರ್ಶನ ಪಡೆದ ಅಪ್ಪು ಪತ್ನಿ

    ಬೆಂಗಳೂರು: ದಿವಂಗತ ನಟ ಪುನೀತ್ ರಾಜ್ ಕುಮಾರ್ ಸಮಾಧಿ ಕಂಠೀರವ ಸ್ಟುಡಿಯೋ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

    ಪುನೀತ್ ಸಮಾಧಿ ನೋಡಲು ಅಭಿಮಾನಿಗಳಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೆ.ಎಸ್ ಆರ್ ಪಿ ಹಾಗೂ ಆರ್ ಎಎಫ್ ತುಕಡಿ ಸೇರಿದಂತೆ 200ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ.

    ಆಭಿಮಾನಿಗಳು ಸರಥಿ ಸಾಲಿನಲ್ಲಿ ಹೋಗಿ ಸಮಾಧಿ ನೋಡಿಕೊಂಡು ಬರಲು ಬ್ಯಾರಿಕೇಡ್ ಅಳವಡಿಸಿ ವ್ಯವಸ್ಥೆ ಮಾಡಲಾಗಿದೆ. ಏಕಕಾಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ರೆ ಗೊಂದಲಗಳು ಹಾಗೂ ಅಹಿತಕರ ಘಟನೆಗಳಿಗೆ ಕಾರಣವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಇದನ್ನೂ ಓದಿ: ನೇತ್ರದಾನಕ್ಕೆ ಸ್ಫೂರ್ತಿಯಾದ ” ರಾಜರತ್ನ” – ಅಪ್ಪು ಬಳಿಕ ಹೆಚ್ಚಾಗ್ತಿದೆ ನೇತ್ರದಾನಿಗಳ ಸಂಖ್ಯೆ

    ಸಮಾಧಿ ನೋಡಲು ದೂರದ ದಾವಣಗೆರೆ, ಚನ್ನಗಿರಿ, ಕುಣಿಗಲ್, ತುಮಕೂರಿನಿಂದ ಈಗಾಗಲೇ ಅಭಿಮಾನಿಗಳು ಬಂದಿದ್ದು, ಇನ್ನೂ ಬೇರೇ ಬೇರೇ ಜಿಲ್ಲೆಗಳಿಂದ ಬರುತ್ತಲೇ ಇದ್ದಾರೆ. ಇತ್ತ ಇಂದು ಅಪ್ಪು ಪತ್ನಿ ಅಶ್ವಿನಿ ಅವರು ಪುನೀತ್ ಸಮಾಧಿಗೆ ಭೇಟಿ ನೀಡಿ ಕೈ ಮುಗಿದಿದ್ದಾರೆ. ನಂತರ ಸಮಾಧಿಗೆ ಒಂದು ರೌಂಡ್ ಹಾಕಿ ಕೈ ಮುಗಿದು ಅಲ್ಲಿಂದ ತೆರಳಿದ್ದಾರೆ. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು

    ಶುಕ್ರವಾರ ಬೆಳಗ್ಗೆ ಅಪ್ಪು ಆಯಾಸಗೊಂಡಿದ್ದರು. ಕೂಡಲೇ ಅವರು ಸ್ಥಳೀಯ ರಮಣಶ್ರೀ ಕ್ಲಿನಿಕ್ ಗೆ ತೆರಳಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿಕೊಂಡು ಇನ್ನೇನು ಮನೆ ಕಡೆ ತೆರಳುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕಾರಿನಲ್ಲಿಯೇ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಅದು ಫಲಕಾರಿಯಾಗದೇ ನಿಧನರಾಗಿದ್ದರು. ಇದನ್ನೂ ಓದಿ: ನಿಮ್ಮ ಪಾದಕ್ಕೆ ನಮಸ್ಕಾರ ಮಾಡ್ತೀನಿ, ಪುನೀತ್‍ಗೆ ಕೆಟ್ಟ ಹೆಸ್ರು ತರಬೇಡಿ: ರಾಘವೇಂದ್ರ ರಾಜ್ ಕುಮಾರ್

  • ಪುನೀತ್ ರಾಜ್‍ಕುಮಾರ್ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಹೆಚ್ಚಿದ ಬೇಡಿಕೆ!

    ಪುನೀತ್ ರಾಜ್‍ಕುಮಾರ್ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಹೆಚ್ಚಿದ ಬೇಡಿಕೆ!

    ಬೆಂಗಳೂರು: ಕರುನಾಡಿನ ಯುವರತ್ನ ಧ್ರುವತಾರೆಯಾಗಿ ಆಕಾಶದಲ್ಲಿ ಮಿನುಗುತ್ತಿದ್ದಾರೆ. ಅವರು ನಮ್ಮಿಂದ ಅಗಲಿದ್ದಾರೆ ಅನ್ನೋ ಸತ್ಯನ ಒಪ್ಪಿಕೊಳ್ಳೋಕೆ ಮನಸ್ಸಾಗ್ತಿಲ್ಲ. ಹೀಗಿರೋವಾಗ ಅಭಿಮಾನಿಗಳು ಅಪ್ಪುನ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕೆಲವೆಡೆ ರಸ್ತೆಗಳಿಗೂ ಪುನೀತ್ ಹೆಸರು ಇಡಲಾಗಿದೆ.

    ಪುನೀತ್ ರಾಜ್‍ಕುಮಾರ್ ಇನ್ನಿಲ್ಲ ಎಂಬ ಸತ್ಯ ಒಪ್ಪಲು ಯಾರು ಸಿದ್ಧರಿಲ್ಲ. ಅಪ್ಪು ಇದ್ದಷ್ಟು ದಿನ ಜನರ ಜೊತೆಗೇ ಇದ್ರು. ಜನರ ಜೊತೆ ಸಿಂಪಲ್ ಆಗಿಯೇ ಬೆರೆಯುತ್ತಿದ್ದರು. ಅಭಿಮಾನಿಗಳ ಜೊತೆ ಕುಳಿತು ಊಟ ಮಾಡುತ್ತಿದ್ದರು. ಈಗ ವೀರಕನ್ನಡಿಗ ಚಿರನಿದ್ರೆಗೆ ಜಾರಿದ್ದಾರೆ. ಹಾಗಾಗಿ ಈಗ ಅಪ್ಪು ಪ್ರತಿಮೆ ನಿರ್ಮಿಸಲು ತಯಾರಿ ನಡೆಯುತ್ತಿದೆ. ಇದನ್ನೂ ಓದಿ: ಪವರ್ ಸ್ಟಾರ್ ಸಮಾಧಿ ಬಳಿ ಅಭಿಮಾನಿಗಳ ಕಣ್ಣೀರಧಾರೆ

    ಬೆಂಗಳೂರಿನ ಹಲವೆಡೆ ಅಪ್ಪು ಪುತ್ಥಳಿ ಇಡಲು ಆರ್ಡರ್‍ಗಳು ಶಿಲ್ಪಿ ಮನೆ ಬಾಗಿಲು ತಟ್ಟುತ್ತಿದೆ. ಚನ್ನಸಂದ್ರ ಶಿವಕುಮಾರ್ ಎಂಬ ಶಿಲ್ಪಿಗೆ ಈಗಾಗಲೇ 13ಕ್ಕೂ ಹೆಚ್ಚು ಅಪ್ಪು ಕಂಚಿನ ಪ್ರತಿಮೆಗೆ ಅಡ್ವಾನ್ಸ್ ಬುಕ್ ಆಗಿದೆ. ಮುಂದಿನ ಎರಡು ದಿನಗಳಲ್ಲಿ ವರ್ಕ್ ಸಹ ಶುರುವಾಗಲಿದೆ. ಇತ್ತ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲೂ ಅಧಿಕಾರಿ ಹಾಗೂ ನೌಕರರ ಸಂಘದ ವತಿಯಿಂದ ಪುತ್ಥಳಿ ಇಡಲು ಕಮೀಷನರ್ ಅನುಮತಿ ಕೇಳಲಾಗಿದೆ. 3 ಅಡಿಯ ಪುನೀತ್ ಕಂಚಿನ ಪುತ್ಥಳಿ ಸಿದ್ಧವಾಗಲಿದೆ ಎಂದು ಸಂಘದ ಅಧ್ಯಕ್ಷ ಅಮೃತ್ ರಾಜ್ ಹೇಳಿದರು. ಇದನ್ನೂ ಓದಿ: ನ.16ಕ್ಕೆ ಪ್ಯಾಲೇಸ್ ಗ್ರೌಂಡ್‍ನಲ್ಲಿ ಪವರ್ ಸ್ಟಾರ್‌ಗೆ ನುಡಿ ನಮನ

    ರಸ್ತೆಗಳಿಗೆ ‘ಅಪ್ಪು’ ಹೆಸರು..!
    ಅಭಿಮಾನಿಗಳ ಅಭಿಮಾನಕ್ಕೆ, ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪುನೀತ್ ಮೇಲಿನ ಅಭಿಮಾನದಿಂದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶಿರವಾಳ ಗ್ರಾಮಸ್ಥರು ತಮ್ಮ ಗ್ರಾಮದ ವೃತ್ತವೊಂದಕ್ಕೆ ಪುನೀತ್ ರಾಜ್‍ಕುಮಾರ್ ವೃತ್ತ ಎಂದು ನಾಮಕರಣ ಮಾಡಿದ್ದಾರೆ. ಬೆಂಗಳೂರಿನಲ್ಲಿ ರಸ್ತೆಯೊಂದಕ್ಕೆ ಪುನೀತ್ ಹೆಸ್ರು ನಾಮಕರಣ ಮಾಡಬೇಕಂಬ ವಿಚಾರವಾಗಿ ರಾಘಣ್ಣ ಮಾತನಾಡಿದ್ದಾರೆ. ರಸ್ತೆಗೆ ಹೆಸರಿಡಬೇಕಾ ಅಥವಾ ಪುತ್ಥಳಿ ಮಾಡಬೇಕಾ ಗೊತ್ತಿಲ್ಲ. ನಾವು ಬಯೋಸೋದಿಲ್ಲ. ಇದೆಲ್ಲಾ ಜನರ ಪ್ರೀತಿ ಅಂದ್ರು. ಇದನ್ನೂ ಓದಿ: ಪುನೀತ್ ಸಾವಿನ ರಹಸ್ಯ ಒಂದೊಂದೇ ಬಯಲು!

    6ನೇ ದಿನದ ಪುಣ್ಯಸ್ಮರಣೆ ಆಚರಣೆ ಹಿನ್ನೆಲೆ ಮಂಡ್ಯದ ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದಲ್ಲಿ ಪುನೀತ್ ಇಷ್ಟ ಪಡುವ ಮಾಂಸದೂಟ ಹಾಕಿ ಶ್ರದ್ಧಾಂಜಲಿ ಕೋರಲಾಯ್ತು. ಗ್ರಾಮಸ್ಥರು ನೂರಾರು ಮಂದಿಗೆ ಮಾಂಸದೂಟವನ್ನು ಹಾಕಿದರು. ದಾವಣಗೆರೆ ಸಿದ್ದಲಿಂಗೇಶ್ವರ ಶಾಲಾ ಮಕ್ಕಳು ವಿಶೇಷ ನಮನ ಸಲ್ಲಿಸಿದ್ರು. ಮಿಸ್ ಯು ಅಪ್ಪು ಎಂದು ಬ್ಲೈಂಡ್ ಪೋಲ್ಡರ್ ಡ್ರಾಯಿಂಗ್ ಮಾಡಿ ನಮನ ಸಲ್ಲಿಸಿದ್ರು.

    ಅಪ್ಪು ನಮ್ಮಿಂದ ಭೌತಿಕವಾಗಿ ದೂರ ಆಗಿದ್ದಾರೆ ಅಷ್ಟೇ. ಅವರ ಕೆಲಸ, ಸಿನಿಮಾದಿಂದ ಜನರ ಜೊತೆಗೇ ಇದ್ದಾರೆ. ಅಪ್ಪು ಇಲ್ಲ ಎಂಬ ಭಾವನೆ ದೂರ ಮಾಡಲು ಅಭಿಮಾನಿಗಳು ಈಗ ಪುತ್ಥಳಿಯನ್ನು ನಿರ್ಮಿಸೋಕೆ ನಿರ್ಧರಿಸಿದ್ದಾರೆ.

  • ಪವರ್ ಸ್ಟಾರ್ ಸಮಾಧಿ ಬಳಿ ಅಭಿಮಾನಿಗಳ ಕಣ್ಣೀರಧಾರೆ

    ಪವರ್ ಸ್ಟಾರ್ ಸಮಾಧಿ ಬಳಿ ಅಭಿಮಾನಿಗಳ ಕಣ್ಣೀರಧಾರೆ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನರಾಗಿ 6 ದಿನ ಕಳೆಯುತ್ತಾ ಬಂತು. ನೆಚ್ಚಿನ ಸ್ಟಾರ್ ಇಲ್ಲ ಅನ್ನೋದನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳೋಕೇ ಆಗ್ತಿಲ್ಲ. ಕಂಠೀರವ ಕ್ರೀಡಾಂಗಣದಲ್ಲಿ ಸುಮಾರು 25 ಲಕ್ಷದವರೆಗೆ ಅಭಿಮಾನಿಗಳು ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿ ಕಣ್ಣೀರಿಟ್ಟಿದ್ದರು. ಇದೀಗ ಕಂಠೀರವ ಸ್ಟುಡಿಯೋ ಬಳಿ ಅಭಿಮಾನಿ ಸಾಗರ ಹರಿದು ಬರ್ತಿದೆ.

    ಮಂಗಳವಾರ ಸಂಜೆಯೇ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ಸಿಕ್ಕಿದ್ದು, ಇಂದು 9 ಗಂಟೆಯಿಂದ ದರ್ಶನಕ್ಕೆ ಬಿಡಲಾಗಿತ್ತು. ಆದರೆ ಓರ್ವ ಅಜ್ಜಿ ಬೆಳಗ್ಗೆ 5 ಗಂಟೆಗೇ ಬಂದು ಕಾದು ಕುಳಿತಿದ್ದರು. ಮಹಿಳೆಯರು, ಮಕ್ಕಳು, ಯುವಕರು, ಯುವತಿಯರು, ಹಿರಿಯರು ಎಲ್ಲರೂ ಅಪ್ಪು ಸಮಾಧಿಗೆ ನಮಿಸಿ ಕಣ್ಣೀರು ಹಾಕಿದ್ರು. ಅದರಲ್ಲೂ ಮಹಿಳೆಯರಂತೂ ದುಃಖ ತಡೆಯದೆ ಗೋಳಾಡಿದರು.

    ಎರಡು ದಿನ ಊಟ ಬಿಟ್ಟಿದ್ದೆ ಅಂತ ಸಂಕಟ ವ್ಯಕ್ತಪಡಿಸಿದ್ರು. ಮಕ್ಕಳೇ ಇರೋ ನಾಟ್ಯಲೋಕ ತಂಡ ಪುನೀತ್ ಸಮಾಧಿಯ ಎದುರು ಡ್ಯಾನ್ಸ್ ಮಾಡಿ ನಮನ ಸಲ್ಲಿಸಿತು. ಈ ಹಿಂದೆ ಈ ಮಕ್ಕಳ ನೃತ್ಯಕ್ಕೆ ಪುನೀತ್ ಭೇಷ್ ಅಂದಿದ್ದರು. ಧಾರಾವಾಹಿ ಕಲಾವಿದರು ಕೂಡ ಕಂಬನಿ ಮಿಡಿದರು. ಇದನ್ನೂ ಓದಿ: ನ.16ಕ್ಕೆ ಪ್ಯಾಲೇಸ್ ಗ್ರೌಂಡ್‍ನಲ್ಲಿ ಪವರ್ ಸ್ಟಾರ್‌ಗೆ ನುಡಿ ನಮನ

    ಪಾವಗಡದ ಅಪ್ಪು ಅಭಿಮಾನಿ ದಯಾನಂದ್ ಅನ್ನೋರು ಎತ್ತಿನಗಾಡಿಯಲ್ಲೇ ಸಮಾಧಿ ದರ್ಶನಕ್ಕೆ ಬಂದಿದ್ರು. ಬಳಿಕ ಅಪ್ಪು ಮನೆಗೆ ಹೋಗಿ ಶಿವಣ್ಣ ಕಾಲಿಗೆ ಬಿದ್ದು ನಮಸ್ಕರಿಸಿ, ಅಪ್ಪುನಾ ನಿಮ್ಮಲ್ಲಿ ನೋಡ್ತೇವೆ ಅಂದ್ರು. ರಾಘಣ್ಣ ಕೂಡ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ರು. ಈ ಮಧ್ಯೆ ಅಪ್ಪು ಕಂಚಿನ ಪುತ್ಥಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನೂ ಓದಿ: ಪುನೀತ್ ಸಾವಿನ ರಹಸ್ಯ ಒಂದೊಂದೇ ಬಯಲು!

  • ನ.16ಕ್ಕೆ ಪ್ಯಾಲೇಸ್ ಗ್ರೌಂಡ್‍ನಲ್ಲಿ ಪವರ್ ಸ್ಟಾರ್‌ಗೆ ನುಡಿ ನಮನ

    ನ.16ಕ್ಕೆ ಪ್ಯಾಲೇಸ್ ಗ್ರೌಂಡ್‍ನಲ್ಲಿ ಪವರ್ ಸ್ಟಾರ್‌ಗೆ ನುಡಿ ನಮನ

    ಬೆಂಗಳೂರು: ಗಂಧದಗುಡಿಯ ಕುಡಿ ಪುನೀತ್ ರಾಜ್‍ಕುಮಾರ್ ಗೆ ಸ್ಯಾಂಡಲ್‍ವುಡ್ ಬೃಹತ್ ನುಡಿ ನಮನ-ಗೀತ ನಮನ ಸಲ್ಲಿಸಲು ಸಿದ್ಧತೆ ನಡೆಸ್ತಿದೆ.

    ನವೆಂಬರ್ 16ರಂದು ಅರಮನೆ ಮೈದಾನದ ಒಳಾಂಗಣ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ಮಾತಾಡಿ, ಸಿಎಂ ಬಹಳ ಖುಷಿಯಿಂದ ಒಪ್ಪಿಕೊಂಡಿದ್ದಾರೆ ಅಂದ್ರು. ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್ ಪ್ರತಿಕ್ರಿಯಿಸಿ, ಪುನೀತ್ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ಚಿತ್ರರಂಗಕ್ಕೆ ಇಲ್ಲ. ಇದನ್ನೂ ಓದಿ: ಪುನೀತ್ ಸಾವಿನ ರಹಸ್ಯ ಒಂದೊಂದೇ ಬಯಲು!

    ಕಾರ್ಯಕ್ರಮಕ್ಕೆ ಶಿವಣ್ಣ ಒಪ್ಪಿದ್ದಾರೆ. ರಾಜ್ಯದ ಗಣ್ಯರು, ಚಿತ್ರರಂಗದ ಕುಟುಂಬ, ಆಂಧ್ರ, ತಮಿಳುನಾಡು ಸೇರಿದಂತೆ 20 ಲಕ್ಷ ಜನ ಬರುವ ಸಾಧ್ಯತೆ ಇದೆ. ಗುರುಕಿರಣ್ ಸಂಗೀತ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದಾರೆ. ನಾಗೇಂದ್ರ ಪ್ರಸಾದ್ ವಿಶೇಷ ಹಾಡನ್ನು ಬರೆದಿದ್ದಾರೆ. ಸಾರ್ವಜನಿಕರು ಕಾರ್ಯಕ್ರಮವನ್ನು ಟಿವಿ ಮೂಲಕ ನೋಡಿ ಸಹಕರಿಸಬೇಕು ಅಂತ ಮನವಿ ಮಾಡಿದ್ರು.  ಇದನ್ನೂ ಓದಿ: ಎತ್ತುಗಳ ಜೊತೆಗೆ ಬಂದ ಅಭಿಮಾನಿಗಳನ್ನು ಭೇಟಿ ಮಾಡಿದ ಶಿವಣ್ಣ, ರಾಘಣ್ಣ

  • ಪುನೀತ್ ಸಾವಿನ ರಹಸ್ಯ ಒಂದೊಂದೇ ಬಯಲು!

    ಪುನೀತ್ ಸಾವಿನ ರಹಸ್ಯ ಒಂದೊಂದೇ ಬಯಲು!

    ಬೆಂಗಳೂರು: ಅಕಾಲಿಕ ಮರಣಕ್ಕೆ ಒಳಗಾದ ಪುನೀತ್ ರಾಜ್‍ಕುಮಾರ್ ಸಾವಿನ ರಹಸ್ಯ ಒಂದೊಂದಾಗೇ ಬಹಿರಂಗವಾಗುತ್ತಿದೆ. ಸಾವಿನ ಹಿಂದಿನ ದಿನಗಳ ಕರಾಳ ಕತೆಗಳನ್ನು ಒಬ್ಬೊಬ್ಬರೇ ಬಿಚ್ಚಿಡುತ್ತಿದ್ದಾರೆ. ಅಪ್ಪು ಅಗಲಿಕೆಗೆ ಮುನ್ನಾ ದಿನ ಅಂದರೆ ಗುರುವಾರವೇ ಅವರಿಗೆ ಹಾರ್ಟ್ ಅಟ್ಯಾಕ್‍ನ ಲಕ್ಷಣ ಕಾಣಿಸಿತ್ತಾ..? ಅನ್ನೋ ಚರ್ಚೆ ಆಗ್ತಿದೆ.

    ಅಕ್ಟೋಬರ್ 26ರಂದು ಭಜರಂಗಿ 2 ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅಪ್ಪು ಡಲ್ಲಾಗಿ ಕಾಣಿಸಿಕೊಂಡಿದ್ದರು ಅಂತ ಗೀತಾ ಹೇಳಿದ್ರು. ಆದರೆ, ಅಪ್ಪು ವರ್ಕೌಟ್ ಮಾಡಿ ಬಂದಿರಬೇಕು ಅಥವಾ ಸುಸ್ತಾಗಿರಬೇಕು ಅಂತ ಗೀತಾಗೆ ಹೇಳಿದ್ದೆ ಅಂತ ಶಿವಣ್ಣ ಹೇಳಿದ್ದಾರೆ. ಅಲ್ಲದೆ ವಿಧಿ 10 ನಿಮಿಷ ಟೈಮ್ ಕೊಡಬೇಕಿತ್ತು. ಎಲ್ಲರಿಗೂ ಟೈಮ್ ಕೊಡುತ್ತೆ, ನನ್ನ ತಮ್ಮನಿಗೆ ಯಾಕೆ ಕೊಡಲಿಲ್ಲ. ಒಂದು ಚೂರು ಸೂಚನೆ ಸಿಕ್ಕಿದ್ದರೆ ನಾವು ಬಿಡುತ್ತಿರಲಿಲ್ಲ. ಎಲ್ಲವೂ ಸಡನ್ ಸಡನ್ ಆಗಿಹೋಯ್ತು. ಅಂಥ ಒಳ್ಳೇ ವ್ಯಕ್ತಿಗೆ ಯಾಕೆ ಕೊಡ್ಲಿಲ್ಲ. ಇದು ಕಾಡ್ತಲೇ ಇರುತ್ತೆ ಅಂತ ಶಿವಣ್ಣ ಮರುಗಿದ್ದಾರೆ. ಇದನ್ನೂ ಓದಿ: ಎತ್ತುಗಳ ಜೊತೆಗೆ ಬಂದ ಅಭಿಮಾನಿಗಳನ್ನು ಭೇಟಿ ಮಾಡಿದ ಶಿವಣ್ಣ, ರಾಘಣ್ಣ

    ಮತ್ತೊಂದೆಡೆ ನಿರ್ಮಾಪಕ ಜಯಣ್ಣ ಅವರ ಕಚೇರಿಗೆ ಗುರುವಾಗ ಅಪ್ಪು ಭೇಟಿ ನೀಡಿದ್ದರು. ಈ ವೇಳೆ ಕೈಯಲ್ಲಿ ಜೋಮು ಹಿಡಿದಂತೆ ಕಂಡಿತ್ತು. ಅಪ್ಪು ಗೋಡೆಗೆ ಒರಗಿ ಎರಡು ಬಾರಿ ಕೈ ಮೇಲೆತ್ತಿಕೊಂಡು ನಿಂತಿದ್ದರು. ಅದು ಕೈ ಸೆಳೆತವೋ ಅಥವಾ ನೋವೋ ಗೊತ್ತಿಲ್ಲ ಅಂತ ಜಯಣ್ಣ ಹೇಳಿದ್ದಾರೆ. ಈ ಬಗ್ಗೆ ಶಿವಣ್ಣಗೆ ಫೋನ್ ಮಾಡಿ ತಿಳಿಸಿದ್ದೆ. ಅಲ್ಲದೆ ಕೊರೋನಾ ಹೊಡೆತದಿಂದ ಸಿನಿಮಾ ಇಂಡಸ್ಟ್ರಿ ಚೇತರಿಕೆ ಕಾಣಬೇಕು. ಅದಕ್ಕಾಗಿ ವರ್ಷಕ್ಕೆ 2 ಸಿನಿಮಾ ಮಾಡಿಕೊಡಿ ಅಂತ ಕೇಳಿಕೊಂಡಾಗ ಅಪ್ಪು ಒಪ್ಪಿಕೊಂಡಿದ್ರು ಅಂತ ಜಯಣ್ಣ ಹೇಳಿದ್ದಾರೆ. ಇದನ್ನೂ ಓದಿ: ನನಗೆ ಅರ್ಥ ಮಾಡಿಕೊಳ್ಳಲು, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ: ರಾಮ್ ಚರಣ್ ತೇಜಾ

  • ಎತ್ತುಗಳ ಜೊತೆಗೆ ಬಂದ ಅಭಿಮಾನಿಗಳನ್ನು ಭೇಟಿ ಮಾಡಿದ ಶಿವಣ್ಣ, ರಾಘಣ್ಣ

    ಎತ್ತುಗಳ ಜೊತೆಗೆ ಬಂದ ಅಭಿಮಾನಿಗಳನ್ನು ಭೇಟಿ ಮಾಡಿದ ಶಿವಣ್ಣ, ರಾಘಣ್ಣ

    – ಶಿವಣ್ಣನ ಕಾಲು ಮುಟ್ಟಿ ನಮಸ್ಕರಿಸಿದ ಅಭಿಮಾನಿಗಳು
    – ಎತ್ತುಗಳಿಗೆ ಬಾಳೆಹಣ್ಣು ತಿನ್ನಿಸಿದ ರಾಘಣ್ಣ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ ಹೊಂದಿ ಇಂದಿಗೆ 6 ದಿನಗಳೇ ಕಳೆದು ಹೋಗಿವೆ. ಈಗಲೂ ಸ್ಟಾರ್ ನಟರು ಅಪ್ಪು ಕುಟುಂಬಸ್ಥರು ಭೇಟಿ ಮಾಡಿ ಸಾಂತ್ವನ ಹೇಳುತ್ತಿದ್ದರೆ, ಇತ್ತ ಅಭಿಮಾನಿಗಳು ಪುನೀತ್ ಸಮಾಧಿ ಬಳಿ ಜಮಾಯಿಸಿ ದರ್ಶನ ಪಡೆಯುತ್ತಿದ್ದಾರೆ. ಅಂತೆಯೇ ಇದೀಗ ಎತ್ತನ ಗಾಡಿಯಲ್ಲಿ ಬಂದ ಅಭಿಮಾನಿಗಳನ್ನು ಶಿವಣ್ಣ ಹಾಗೂ ರಾಘಣ್ಣ ಭೇಟಿ ಮಾಡಿದ್ದಾರೆ.

    ಪಾವಗಡದಿಂದ ಎತ್ತುಗಳ ಜೊತೆಗೆ ಬಂದ ಅಭಿಮಾನಿಗಳು ಅಪ್ಪು ಸಮಾಧಿ ಬಳಿ ಕುಳಿತಿದ್ದರು. ಇವತ್ತ ನಮ್ಮ ಜೊತೆ ಅಪ್ಪು ಇಲ್ಲ, ಆದರೆ ನಾವು ಅಪ್ಪುವನ್ನು ಶಿವಣ್ಣನಲ್ಲಿ ಕಾಣುತ್ತೇವೆ ಹೀಗಾಗಿ ಶಿವಣ್ಣನನ್ನು ಬೇಟಿಯಾಗದೆ ಇಲ್ಲಿಂದ ತೆರಳಲ್ಲ ಎಂದು ಹಠಕ್ಕೆ ಬಿದ್ದರು. ಈ ವಿಚಾರವನ್ನು ಮಾಧ್ಯಮಮಿತ್ರರು ಶಿವಣ್ಣ ಬಳೆ ಹೇಳಿದ್ದಾರೆ. ಆಗ ಶಿವಣ್ಣ ಭೇಟಿಯಾಗುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ನನಗೆ ಅರ್ಥ ಮಾಡಿಕೊಳ್ಳಲು, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ: ರಾಮ್ ಚರಣ್ ತೇಜಾ

    ಇತ್ತ ಅಭಿಮಾನಿಗಳನ್ನು ಶಿವಣ್ಣ ಹಾಗೂ ರಾಘಣ್ಣ ಭೇಟಿ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳು ಶಿವಣ್ಣ ಕಾಲಿಗೆ ನಮಸ್ಕರಿಸಿದ್ದಾರೆ. ಇತ್ತ ಶಿವಣ್ಣ ಎತ್ತುಗಳನ್ನು ಮುಟ್ಟಿ ನಮಸ್ಕಾರ ಮಾಡಿದರೆ, ರಾಘಣ್ಣ ªಕೂಡ ಮನೆಯಿಂದ ಹೊರಬಂದು ಅಭಿಮಾನಿಗಳನ್ನು ಮಾತನಾಡಿಸಿದ್ದಾರೆ. ಅಲ್ಲದೆ ಎತ್ತುಗಳಿಗೆ ಬಾಳೆಹನ್ನು ತಿನ್ನಿಸಿದ್ದಾರೆ.

    ಒಟ್ಟಿನಲ್ಲಿ ದೂರದಿಂದ ಬಂದಿದ್ದ ಅಭಿಮಾನಿಗಳನ್ನು ಇಬ್ಬರೂ ಪ್ರೀತಿಯಿಂದಲೇ ಮಾತಾನಾಡಿಸಿ ಕಳುಹಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ಅಭಿಮಾನಿಗಳ ಪ್ರೀತಿಗೆ ಏನ್ ಕೊಟ್ರು ಕಮ್ಮಿ. ಅಭಿಮಾನಿಗಳ ಋಣವನ್ನು ತೀರಿಸಲು ಆಗಲ್ಲ. ಎಲ್ಲರಿಗೂ ನೋವಿದ್ದರು ಸಹ ಮನೆ ಬಳಿ ಬರುತ್ತಿದ್ದಾರೆ. ಅದು ನಮಗೆ ಬಂದಿರುವ ವರ ಎಂದಿದ್ದಾರೆ. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್

    ಅಪ್ಪು ಅಷ್ಟು ಪ್ರೀತಿ ಗಳಿಸಿದ್ದಾನೆ. ದೇವರು ಅಪ್ಪುವನ್ನು ನಮ್ಮಿಂದ ಕಿತ್ತುಕೊಂಡಿದ್ದಾನೆ. ಅಭಿಮಾನಿಗಳ ಜೊತೆ ನಾವು ಯಾವಾಗ್ಲೂ ಇರುತ್ತೇವೆ. ಇಷ್ಟು ಬೇಗ ಅವನನ್ನು ಕಳೆದುಕೊಳ್ಳಬಾರದಿತ್ತು ಎಂದು ಶಿವರಾಜ್ ಕುಮಾರ್ ಗದ್ಗದಿತರಾದರು.

  • ಭೂಮಿ ಮೇಲೆ ಕೆಟ್ಟೋಗಿರೋ ನನ್ಮಕ್ಕಳಿಗೆ ಇನ್ನೂ ಸಾವು ಬಂದಿಲ್ಲ- ಅಪ್ಪು ನಿಧನಕ್ಕೆ ಯೋಗಿ ಕಂಬನಿ

    ಭೂಮಿ ಮೇಲೆ ಕೆಟ್ಟೋಗಿರೋ ನನ್ಮಕ್ಕಳಿಗೆ ಇನ್ನೂ ಸಾವು ಬಂದಿಲ್ಲ- ಅಪ್ಪು ನಿಧನಕ್ಕೆ ಯೋಗಿ ಕಂಬನಿ

    – ದೇವರು ಪುನೀತ್ ಅವರನ್ನ ಬೇಗ ಕರೆದುಕೊಂಡು ಬಿಟ್ಟ

    ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ದೇಶಾದ್ಯಂತ ಜನ ಕಂಬನಿ ಮಿಡಿದಿದ್ದಾರೆ. ಅಂತೆಯೇ ಪುನೀತ್ ಜೊತೆ ಒಡನಾಟ ಹೊಂದಿದ್ದ ನಟ ಲೂಸ್ ಮಾದ ಯೋಗಿ ಇಂದು ಕಂಬನಿ ಮಿಡಿಯುತ್ತಲೇ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

    PUNEET RAJKUMAR

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯೋಗಿ, ಪುನೀತ್ ರಾಜ್‍ಕುಮಾರ್ ನನಗೆ ಇನ್ನೊಬ್ಬ ಅಣ್ಣ ಇದ್ದಂತೆ ಇದ್ದರು. ಅವರ ಜೊತೆ ಸಾಕಷ್ಟು ಒಡನಾಟ ಕೂಡ ಇತ್ತು. ಅವರ ಜೊತೆ ಚಿತ್ರೀಕರಣದ ವೇಳೆ 200 ಕ್ಕೂ ಹೆಚ್ಚು ದಿನ ಕಾಲ ಕಳೆದಿದ್ದೆ ಎಂದು ಭಾವುಕರಾದರು. ಇದನ್ನೂ ಓದಿ: ಪುನೀತ್ ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗೆ ಕೊನೆಗೂ ಅವಕಾಶ

    ಮುಂದಿನ ದಿನಗಳಲ್ಲಿ ನನ್ನ ಬ್ಯಾನರ್ ನಲ್ಲೇ ಒಟ್ಟಿಗೆ ಚಿತ್ರ ಮಾಡೋಣ ಅಂತ ಹೇಳಿದ್ದರು. ಆದರೆ ವಿಧಿ ಅದನ್ನ ಕೈಗೂಡುವುದಕ್ಕೆ ಬಿಡಲಿಲ್ಲ. ಭೂಮಿ ಮೇಲೆ ಸಾಕಷ್ಟು ಕೆಟ್ಟ ನನ್ನ ಮಕ್ಕಳಿಗೆ ಇನ್ನೂ ಸಾವು ಬಂದಿಲ್ಲ. ಆದರೆ ಇಂತಹ ವ್ಯಕ್ತಿ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ. ಅವರ ಕುಟುಂಬ, ಅಭಿಮಾನಿಗಳಿಗೆ ನೋವು ತಡೆದುಕೊಳ್ಳೊ ಶಕ್ತಿಯನ್ನ ದೇವರು ಕೊಡಲಿ ಎಂದು ಹೇಳಿದರು. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ

    ಇದೇ ವೇಳೆ ಪುನೀತ್ ಅಭಿಮಾನಿಗಳಲ್ಲಿ ಮನವಿ ಕೂಡ ಮಾಡಿಕೊಂಡರು. ಅಭಿಮಾನಿಗಳು ದುಡುಕಿ ಕೆಟ್ಟ ನಿರ್ಧಾರಗಳನ್ನ ಕೈಗೊಳ್ಳಬೇಡಿ ಎಂದು ತಿಳಿಸಿದರು. ಇದನ್ನೂ ಓದಿ: ಪುನೀತ್ ನೆನೆದು ನಟಿ ರಾಧಿಕಾ ಕುಮಾರಸ್ವಾಮಿ ಕಣ್ಣೀರು

    ಈ ಹಿಂದೆ ನಟ ಸೃಜನ್ ಲೋಕೇಶ್ ಕೂಡ ಆಕ್ರೋಶ ಹೊರಹಾಕಿದ್ದರು. ಎಂಥೆಂತಹ ಕೆಟ್ಟ ಮನಸ್ಸಿರುವ ಕಳ್ಳರು, ಕೊಲೆಗಾರರು ಎಲ್ಲರೂ ಬದುಕಿರುತ್ತಾರೆ. ಆದರೆ ಸಾವಿರಾರು ಜನರಿಗೆ ಸಹಾಯ ಮಾಡುತ್ತಿದ್ದಂತಹ ವ್ಯಕ್ತಿ, 46 ವರ್ಷ ದಷ್ಟಪುಷ್ಟವಾಗಿದ್ದಂತಹ ಉತ್ತಮ ಲೈಫ್ ಸ್ಟೈಲ್ ಇದ್ದಂತಹ ವ್ಯಕ್ತಿ ಹೋಗುತ್ತಾರೆ ಎಂದರೆ ಇದಕ್ಕೆ ಅರ್ಥನೇ ಇಲ್ಲ. ಇದು ಆಗಬಾರದಿತ್ತು. ಇದು ಅನ್ಯಾಯ. ದೇವರು ಮಾಡಿರುವ ಅನ್ಯಾಯ ಎಂದು ಭಾವುಕರಾಗಿದ್ದರು.