Tag: ಅಪ್ಪು

  • ಸೌದೆ ಹಿಡಿದು ದೇವಿರಮ್ಮನ ದರ್ಶನ – ಅಪ್ಪು ಅಭಿಮಾನಿಯ ವಿಶೇಷ ಹರಕೆ!

    ಸೌದೆ ಹಿಡಿದು ದೇವಿರಮ್ಮನ ದರ್ಶನ – ಅಪ್ಪು ಅಭಿಮಾನಿಯ ವಿಶೇಷ ಹರಕೆ!

    ಚಿಕ್ಕಮಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಾಘಾತದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು, ದೇವೀರಮ್ಮನಿಗೆ ಪೂಜೆ ಮಾಡಿಸಿ ನಮ್ಮಣ್ಣಂಗೆ ಏನೂ ಆಗೋದು ಬೇಡ, ಹೆಗಲ ಮೇಲೆ ಸೌದೆ ಹೊತ್ಕೊಂಡು ನಿನ್ನ ಬೆಟ್ಟ ಹತ್ತಿ ಪೂಜೆ ಮಾಡಿಸ್ತೀನಿ ಅಂತ ಹರಕೆ ಕಟ್ಟಿಕೊಂಡಿದ್ರು. ಆದರೆ ವಿಧಿಲಿಖಿತ ಬೇರೆಯೇ ಇತ್ತು. ಕೋಟ್ಯಂತರ ಮನಸುಗಳ ಪ್ರಾರ್ಥನೆ ಆ ಭಗವಂತನಿಗೆ ಕೇಳಿಸ್ತೋ-ಇಲ್ವೊ ಪುನೀತ್ ನಮ್ಮನ್ನ ಅಗಲಿಯೇ ಬಿಟ್ಟರು. ಆದರೆ ಹರಕೆ ಕಟ್ಟಿಕೊಂಡಿದ್ದ ಆ ಯುವಕರು ಅಪ್ಪು ಕುಟುಂಬಕ್ಕಾಗಿ ಹರಕೆ ಸಲ್ಲಿಸಿದ್ದಾರೆ. ಇದು ಕಾಫಿನಾಡಿನ ಅಪ್ಪು ಅಭಿಮಾನಿಗಳ ಅಭಿಮಾನದ ಕಥೆ.

    ಪುನೀತ್ ಅಪ್ಪಟ ಅಭಿಮಾನಿ ಚಿಕ್ಕಮಗಳೂರಿನ ರವಿ ಅವರು ಸೌದೆ ಹೊತ್ತು ದೇವೀರಮ್ಮನ ದರ್ಶನ ಮಾಡಿದ್ದಾರೆ. ಅಪ್ಪುಗೆ ಹೃದಯಾಘಾತವಾದ ಸುದ್ದಿ ತಿಳಿಯುತ್ತಿದ್ದಂತೆ ಬೇಗ ಗುಣಮುಖರಾಗಲಿ. ಬೆಟ್ಟ ಹತ್ತಿ ಪೂಜೆ ಮಾಡಿಸ್ತೀನಿ ಅಂತ ದೇವೀರಮ್ಮನಿಗೆ ಹರಕೆ ಕಟ್ಟಿಕೊಂಡಿದ್ದರಂತೆ. ಆದರೀಗ ಅಪ್ಪು ಇಲ್ಲದ ಕಾರಣ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ಒಳ್ಳೆದಾಗಲಿ ಅಂತ 3,800 ಅಡಿ ಎತ್ತರದ ಬೆಟ್ಟವನ್ನ ಹತ್ತಿ ದೇವೀರಮ್ಮನಿಗೆ ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಈಡೇರಿತು ಕನ್ನಡಿಗರ ಕಣ್ಮಣಿಯ ಮಹದಾಸೆ – 40 ಸಾವಿರ ಅಭಿಮಾನಿಗಳಿಗೆ ಒಟ್ಟಿಗೇ ಊಟ!

    ಅಪ್ಪು ರವಿ ಅಂತಲೇ ಫೇಮಸ್ ಆಗಿರೋ ರವಿ, ನಾನು ನನ್ನ ತಮ್ಮ ಇಬ್ಬರೂ ಅಪ್ಪು ರೀತಿ ನೇತ್ರದಾನ ಮಾಡೋಕೆ ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಮಗಳ ಹೆಸರಿದ್ದ ಕ್ಯಾಂಟೀನ್‍ಗೆ ಅಪ್ಪು ಹೆಸರನ್ನು ಮರುನಾಮಕರಣ ಮಾಡಿದ್ದಾರೆ. ಕ್ಯಾಂಟಿನ್‍ಗೆ ಬರುವ 60 ವರ್ಷ ಮೇಲ್ಪಟ್ಟವರಿಗೆ ಉಚಿತ ಊಟ-ತಿಂಡಿ, ಕಾಫಿ-ಟೀ ಕೊಡ್ತಿದ್ದಾರೆ. ಇನ್ನು ಕ್ಯಾಂಟಿನ್‍ಗೂ ಮೊದಲು ಆರ್ಕೇಸ್ಟ್ರಾದಲ್ಲಿ ಕೆಲಸ ಮಾಡುತ್ತಿದ್ದ ರವಿ, ಅಪ್ಪು ರೀತಿ ಡ್ಯಾನ್ಸ್ ಮಾಡ್ತಿದ್ರಂತೆ, ಕೊನೆಯಲ್ಲಿ ಪುನೀತ್ ಹಾಡು ಇಲ್ಲದೆ ವಾಪಸ್ ಬರುತ್ತಿರಲಿಲ್ವಂತೆ.

  • ಈಡೇರಿತು ಕನ್ನಡಿಗರ ಕಣ್ಮಣಿಯ ಮಹದಾಸೆ – 40 ಸಾವಿರ ಅಭಿಮಾನಿಗಳಿಗೆ ಒಟ್ಟಿಗೇ ಊಟ!

    ಈಡೇರಿತು ಕನ್ನಡಿಗರ ಕಣ್ಮಣಿಯ ಮಹದಾಸೆ – 40 ಸಾವಿರ ಅಭಿಮಾನಿಗಳಿಗೆ ಒಟ್ಟಿಗೇ ಊಟ!

    ಬೆಂಗಳೂರು: ‘ಕನ್ನಡಿಗರ ಕಣ್ಮಣಿ’ ಪುನೀತ್ ರಾಜ್ ಕುಮಾರ್ ಅವರ ಮಹದಾಸೆ ಈಡೇರಿದೆ. ಯುವರತ್ನ ಪ್ರಚಾರದ ವೇಳೆ ಅಭಿಮಾನಿಗಳ ಅಭಿಮಾನ ಕಂಡು ಅಪ್ಪು ಪುಳಕಿತಗೊಂಡಿದ್ದರು. ಅಲ್ಲದೆ ‘ಅಭಿಮಾನಿ ದೇವರಿಗೆ’ ಒಟ್ಟಿಗೆ ಊಟ ಹಾಕಿಸುವ ಮನದಾಸೆಯೊಂದನ್ನು ಇಟ್ಟುಕೊಂಡಿದ್ದು, ಪತ್ನಿ ಅಶ್ವಿನಿ ಬಳಿ ಹೇಳಿಕೊಂಡಿದ್ದರು.

    ಹೌದು. ದೊಡ್ಮನೆಯ ದೊಡ್ಡ ಗುಣ ಇದು. ಅನ್ನಸಂತರ್ಪಣೆ ಸ್ವತಃ ಪುನೀತ್ ಬಯಕೆ ಅಂತೆ. ಮಂಗಳವಾರ ಬೆಂಗಳೂರಿನಲ್ಲಿ ಪ್ಯಾಲೇಸ್ ಗ್ರೌಂಡ್‍ನಲ್ಲಿ 40 ಸಾವಿರಕ್ಕೂ ಹೆಚ್ಚು ಜನ ದೇವರ ಪ್ರಸಾದ ಎಂಬಂತೆ ಸ್ವೀಕರಿಸಿದ್ದಾರೆ. ಇದು ಅಪ್ಪು ಮಹದಾಸೆಯಾಗಿತ್ತು.  ಇದನ್ನೂ ಓದಿ: 46 ವರ್ಷಕ್ಕೆ ನನ್ನ ತಮ್ಮ ದೇವರಿಗೆ ತುಂಬಾ ಇಷ್ಟ ಆಗ್ಬಿಟ್ಟ: ಶಿವಣ್ಣ

    ಯುವರತ್ನ ಪ್ರಚಾರದ ವೇಳೆ ದೂರದೂರುಗಳಿಗೆ ಪ್ರಚಾರಕ್ಕಾಗಿ ಸುತ್ತಿದ್ದ ಅಪ್ಪುಗೆ ಜನರು ತೋರಿಸಿದ ಪ್ರೀತಿ ನೋಡಿ ಇವರಿಗೆಲ್ಲ ಒಂದೇ ಒಂದು ಬಾರಿ ಊಟ ಹಾಕಿಸಬೇಕಲ್ಲ ಎಂದು ಪತ್ನಿಯತ್ತ ಹೇಳಿಕೊಂಡಿದ್ದರಂತೆ. ಅಪ್ಪು ಆ ಮನದಾಸೆ, ಮಹದಾಸೆಯನ್ನು ಅಣ್ಣಾವ್ರ ಕುಟುಂಬ ಈಡೇರಿಸಿದೆ. ಇದನ್ನೂ ಓದಿ: ಇತಿಹಾಸ ಬರೆದ ಪವರ್ ಸ್ಟಾರ್ ಪುಣ್ಯಸ್ಮರಣೆ- ದಾಖಲೆ ಪ್ರಮಾಣದಲ್ಲಿ ನೇತ್ರದಾನಕ್ಕೆ ಅರ್ಜಿ

    ದೊಡ್ಮನೆ ಧನ್ಯವಾದ:
    12 ದಿನಗಳ ಕಾಲ ಶಾಂತಿ ಸುವ್ಯವಸ್ಥೆ ಕಾಪಾಡಿದ ಅಭಿಮಾನಿಗಳು, ಪೊಲೀಸರಿಗೆ ದೊಡ್ಮನೆ ಕುಟುಂಬ ಪ್ರೀತಿಯಿಂದ ಕೃತಜ್ಞತೆ, ಧನ್ಯವಾದ ಅರ್ಪಿಸಿದೆ. ಅಭಿಮಾನಿ ಸಾಗರ ನೋಡಿದ ಅಪ್ಪು ಪತ್ನಿ ಅಶ್ವಿನಿ ಕಣ್ಣೀರಾಗಿದ್ರು. ಶಿವಣ್ಣ ಮಾತಾಡಿ, ಅಪ್ಪು ಅಗಲಿದ ನೋವಿದೆ. ಅಭಿಮಾನಿಗಳು ಪ್ರಸಾದ ಅಂತಿದ್ದಾರೆ. ಇದೇ ವೇಳೆ ಅಭಿಮಾನಿಗಳನ್ನು ದೇವರು ಅಂತ ಅಪ್ಪಾಜಿ ಹೇಳ್ತಿದ್ದನ್ನು ಸ್ಮರಿಸಿಕೊಂಡ್ರು. ರಾಘಣ್ಣ ಅವರಂತೂ ಅಭಿಮಾನಿಗಳಿಗೆ ಸಾಷ್ಟಾಂಗ ನಮಸ್ಕಾರ ಹೇಳಿದ್ರು. ಅಲ್ಲದೆ ಅಪ್ಪಾಜಿ, ಅಪ್ಪು ಅವರ ಒಳ್ಳೆಯ ಕೆಲಸಗಳನ್ನು ಮುಂದುವರಿಸೋಣ ಅಂತ ಕರೆ ನೀಡಿದ್ರು.

  • ಅಪ್ಪು ಆತ್ಮದ ಜೊತೆ ಮಾತಾಡಿದ್ದಾಗಿ ವೀಡಿಯೋ ಅಪ್ಲೋಡ್- ಚಾರ್ಲಿಗೆ ಅಭಿಮಾನಿಗಳು ಕ್ಲಾಸ್

    ಅಪ್ಪು ಆತ್ಮದ ಜೊತೆ ಮಾತಾಡಿದ್ದಾಗಿ ವೀಡಿಯೋ ಅಪ್ಲೋಡ್- ಚಾರ್ಲಿಗೆ ಅಭಿಮಾನಿಗಳು ಕ್ಲಾಸ್

    ಬೆಂಗಳೂರು: ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದ ದುಃಖದಿಂದ ಅವರ ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಗಣ್ಯರು ಕೂಡ ಹೊರಬಂದಿಲ್ಲ. ಈ ಮಧ್ಯೆ ಅಪ್ಪು ನಿಧನರಾದ ಮರುದಿನವೇ ವಿದೇಶಿಗನೊಬ್ಬ ತನ್ನ ಯೂಟ್ಯೂಬ್ ನಲ್ಲಿ ವೀಡಿಯೋವೊಂದನ್ನು ಅಪ್ಲೋಡ್ ಮಾಡಿಕೊಂಡಿದ್ದು, ಇದೀಗ ನಟನ ಅಭಿಮಾನಿಗಳ ಪಿತ್ತ ನೆತ್ತಿಗೇರುವಂತೆ ಮಾಡಿದೆ.

    ಹೌದು. ಚಾರ್ಲಿ ಚಿಟ್ವೆಂಡೆನ್ ಪ್ಯಾರಾನಾರ್ಮಲ್ ಎಂಬಾತ ಪುನೀತ್ ಆತ್ಮದ ಜೊತೆ ಮಾತನಾಡಿದ್ದಾಗಿ ವೀಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾನೆ. ಈ ವೀಡಿಯೋದಲ್ಲಿ ಚಾರ್ಲಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಕ್ಕೆ ಅಪ್ಪು ಉತ್ತರ ನೀಡಿದ್ದಾರೆ ಎಂದು ತಿಳಿಸಿದ್ದಾನೆ. ಅಲ್ಲದೆ ತಮ್ಮ ಹೆಣ್ಣು ಮಕ್ಕಳ ಬಗ್ಗೆ ಕೇಳಿದಾಗ ಐ ಲವ್ ದೆಮ್ ಎಂದು ಆತ್ಮ ಹೇಳಿರುವುದಾಗಿ ಚಾರ್ಲಿ ವೀಡಿಯೋದಲ್ಲಿ ಬರೆದುಕೊಂಡಿದ್ದಾನೆ. ಹಾರ್ಟ್ ಫೇಲ್, ಡಾಕ್ಟರ್.. ಡಾಕ್ಟರ್ ಎಂದೆಲ್ಲ ಅಪ್ಪು ಹೇಳಿರುವುದಾಗಿ ಬಿಂಬಿಸಿದ್ದಾನೆ. ಈ ವೀಡಿಯೋ ನೀಡುತ್ತಿದ್ದಂತೆಯೇ ಅಪ್ಪು ಅಭಿಮಾನಿಗಳು ಚಾರ್ಲಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಇದನ್ನೂ ಓದಿ: ಅಪ್ಪು ಸಾವಿನಿಂದ ಲೋಕ ಕಾಣುವ ಕನಸು ಮರೆತ ಅಂಧ ಸಹೋದರಿಯರು

    ಜನರ ಭಾವನೆಗಳ ಜೊತೆ ಆಟವಾಡಬೇಡ. ಅಪ್ಪು ಸರ್ ಅವರನ್ನು ಗೌರವಿಸಿ. ಅವರೊಬ್ಬ ಲೆಜೆಂಡ್ ಎಂದು ಒಬ್ಬರು ಕಾಮೆಂಟ್ ಮಾಡಿದ್ರೆ ಇನ್ನೊಬ್ಬರು, ಇಂತಹ ವೀಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ವೀಕ್ಷಕರನ್ನು ಮೂರ್ಖರನ್ನಾಗಿ ಮಾಡಬೇಡಿ ಎಂದಿದ್ದಾರೆ. ಮತ್ತೊಬ್ಬರು ನೀನು ಚೆನ್ನಾಗಿ ನಟನೆ ಮಾಡುತ್ತಿ. ಹೀಗೆ ಹಲವಾರು ಕಾಮೆಂಟ್ ಗಳನ್ನು ಮಾಡುವ ಮೂಲಕ ಚಾರ್ಲಿಯನ್ನು ಪುನೀತ್ ಅಭಿಮಾನಿಗಳು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಇದನ್ನೂ ಓದಿ: ವನ್ಯಜೀವಿ ಸಾಕ್ಷ್ಯಚಿತ್ರಕ್ಕಾಗಿ ಅಂಜನಾದ್ರಿ ಸುತ್ತ ಓಡಾಡಿದ್ದ ಅಪ್ಪು

    ಅಕ್ಟೋಬರ್ 29ರಂದು ಶುಕ್ರವಾರ ಬೆಳಗ್ಗೆ ಮನೆಯಲ್ಲಿ ವರ್ಕೌಟ್ ಮಾಡಿದ ಸಂದರ್ಭದಲ್ಲಿ ಅಪ್ಪುಗೆ ಆಯಾಸ ಕಾಣಿಸಿಕೊಂಡಿತು. ಹಾಗೆಯೇ ಸ್ಟೀಮ್ ಬಾತ್ ಮಾಡಿಕೊಂಡು ಪತ್ನಿ ಜೊತೆ ಸ್ಥಳೀಯ ರಮಣಶ್ರೀ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿಕೊಂಡು ಇನ್ನೇನು ಹೊರಡುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕಾರಿನಲ್ಲಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಾದರೂ, ಅದು ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು. ಇದನ್ನೂ ಓದಿ: ನಿನ್ನಂತೆ ಸಮಾಜ ಸೇವೆ ಮಾಡೋ ಶಕ್ತಿ ನನಗೆ ನೀಡು ಮಗನೇ: ರಾಘಣ್ಣ

    ಅಪ್ಪು ಅಂತ್ಯಕ್ರಿಯೆಯ ಬಳಿಕ ಅವರ ಸಮಾಧಿ ವೀಕ್ಷಿಸಲು ಜನಸಾಗರವೇ ಹರಿಬರುತ್ತಿದೆ. ಪ್ರತಿನಿತ್ಯ ಬೇರೆ ಬೇರೆ ಜಿಲ್ಲೆ, ರಾಜ್ಯ ಹಾಗೂ ಗಣ್ಯರು ಕೂಡ ಸಮಾಧಿ ಸ್ಥಳಕ್ಕೆ ಆಗಮಿಸಿ ಕಣ್ಣೀರಿಡುತ್ತಾ ತೆರಳುತ್ತಿದ್ದಾರೆ. ಅಪ್ಪು ನಮ್ಮನ್ನಗಲಿ ನಿನ್ನೆಗೆ 11 ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು. ಅಂತೆಯೇ 12ನೇ ದಿನವಾದ ಇಂದು ಅಭಿಮಾನಿಗಳಿಗೆ ಹಾಗೂ ಗಣ್ಯರು ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಅಪ್ಪು ಕುಟುಂಬಸ್ಥರು ಇಟ್ಟುಕೊಂಡಿದ್ದಾರೆ. ಇಂದು ಬೆಳಗ್ಗೆ 11.30ರಿಂದ ನಗರದ ಅರಮನೆ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.

  • ನಿನ್ನಂತೆ ಸಮಾಜ ಸೇವೆ ಮಾಡೋ ಶಕ್ತಿ ನನಗೆ ನೀಡು ಮಗನೇ: ರಾಘಣ್ಣ

    ನಿನ್ನಂತೆ ಸಮಾಜ ಸೇವೆ ಮಾಡೋ ಶಕ್ತಿ ನನಗೆ ನೀಡು ಮಗನೇ: ರಾಘಣ್ಣ

    ಬೆಂಗಳೂರು: ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ 12ನೇ ದಿನ. ಆದರೆ ಇಂದಿಗೂ ಅಭಿಮಾನಿಗಳು ಅವರ ಸಮಾಧಿ ದರ್ಶನ ಮಾಡುತ್ತಲೇ ಇದ್ದಾರೆ. ಇತ್ತ ತಮ್ಮನ ಅಗಲಿಕೆ ನೋವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ಸಹೋದರರು ಪ್ರತಿನಿತ್ಯ ಕಣ್ಣೀರಿಡುತ್ತಿದ್ದಾರೆ. ಸಹೋದರ ರಾಘವೇಂದ್ರ ರಾಜ್ ಕುಮಾರ್ ಅವರು ಪ್ರತಿದಿನ ಮುದ್ದಿನ ತಮ್ಮನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದಾರೆ.

    ಹೌದು. ಸದಾ ಮಗನೇ ಮಗನೇ ಎಂದು ಪುನೀತ್ ಅವರನ್ನು ಸಂಬೋಧಿಸುತ್ತಿರುವ ರಾಘಣ್ಣ ಇದೀಗ ಫೇಸ್‍ಬುಕ್ ನಲ್ಲಿ ತಮ್ಮನ ಬಗ್ಗೆ ಬರೆದುಕೊಂಡು ಭಾವುಕರಾಗಿದ್ದಾರೆ. ನಾನು ಒಬ್ಬ ನಿರುದ್ಯೋಗಿ ಆಗಿದ್ದೆ. ನೀನು ನನಗೆ ಸಮಾಜ ಸೇವೆ ಮಾಡುವ ಕೆಲಸ ಕೊಟ್ಟಿದ್ದಿ. ಯಾರಿಗೂ ತಿಳಿಯದಂತೆ ನೀನು ಸಮಾಜ ಸೇವೆ ಮಾಡುತ್ತಿದ್ದೆ. ಹೀಗಾಗಿ ನಿನ್ನಂತೆ ಸಮಾಜ ಸೇವೆ ಮಾಡಲು ನನಗೆ ಶಕ್ತಿ ನೀಡು ಮಗನೇ. ನಿನ್ನ ಚಿಂತನೆಗಳಿಂದಲೇ ನೀನು ಎಂದಿಗೂ ನಮ್ಮ ಜೊತೆಯಲ್ಲಿಯೇ ಇರುತ್ತಿ ಎಂದು ಬರೆದುಕೊಂಡಿದ್ದಾರೆ.

    ಅಕ್ಟೋಬರ್ 29ರಂದು ಶುಕ್ರವಾರ ಬೆಳಗ್ಗೆ ಮನೆಯಲ್ಲಿ ವರ್ಕೌಟ್ ಮಾಡಿದ ಸಂದರ್ಭದಲ್ಲಿ ಅಪ್ಪುಗೆ ಆಯಾಸ ಕಾಣಿಸಿಕೊಂಡಿತು. ಹಾಗೆಯೇ ಸ್ಟೀಮ್ ಬಾತ್ ಮಾಡಿಕೊಂಡು ಪತ್ನಿ ಜೊತೆ ಸ್ಥಳೀಯ ರಮಣಶ್ರೀ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿಕೊಂಡು ಇನ್ನೇನು ಹೊರಡುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕಾರಿನಲ್ಲಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಾದರೂ, ಅದು ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು.

  • ರಾಜರತ್ನ ಅಪ್ಪು ಅಗಲಿ 12ನೇ ದಿನ – ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ

    ರಾಜರತ್ನ ಅಪ್ಪು ಅಗಲಿ 12ನೇ ದಿನ – ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ

    – ಬೆಳಗ್ಗೆ 11.30ಕ್ಕೆ ಊಟದ ವ್ಯವಸ್ಥೆ..!

    ಬೆಂಗಳೂರು: ರಾಜರತ್ನ ಪುನೀತ್ ರಾಜ್ ಕುಮಾರ್ ಅವರು ಅಗಲಿ ಇಂದಿಗೆ 12ನೇ ದಿನ. ನಿನ್ನೆ ಕುಟುಂಬಸ್ಥರಿಂದ 11ನೇ ದಿನದ ಕಾರ್ಯ ನಡೆದಿತ್ತು. ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಪ್ಪು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.

    ಇಂದು ಬೆಳಗ್ಗೆ ಬೆಳಗ್ಗೆ 11.30ಕ್ಕೆ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10 ಗಂಟೆ ಒಳಗೆ ಊಟ ರೆಡಿ ಇರಿಸುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಸುಮಾರು 25-30 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

    ಅಪ್ಪು ಅಭಿಮಾನಿಗಳಿಗೆ ವೆಜ್-ನಾನ್‍ವೆಜ್ ವ್ಯವಸ್ಥೆ ಕೂಡ ಇದ್ದು, ಸುಮಾರು 5 ಸಾವಿರ ಜನರಿಗೆ ವೆಜ್, ಉಳಿದವರಿಗೆ ನಾನ್‍ವೆಜ್ ರೆಡಿ ಮಾಡಲಾಗಿದೆ. ಮುಂಜಾನೆ 4 ಗಂಟೆಗೆ ಚಿಕ್ಕಮಗಳೂರಿನಿಂದ ಬಂದ 2 ಟನ್ ಚಿಕನ್ ಬಂದಿದೆ. ಒಂದೂವರೆ ಸಾವಿರ ಜನರಿಂದ ಊಟಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. 700 ಬಾಣಸಿಗರು, ಸಹಾಯದವರು, ಕ್ಲೀನಿಂಗ್ ಕೆಲಸದವರು ಸೇರಿ 1,500 ಮಂದಿ ಸಿದ್ಧತೆ ನಡೆಸುತ್ತಿದ್ದಾರೆ. ಗ್ಯಾಸ್, ಸೌಧೆ ಬಳಿ ರಾತ್ರಿಯೆಲ್ಲಾ ಸಿದ್ಧತೆಯಲ್ಲಿ ತಲ್ಲೀಣರಾಗಿದ್ದಾರೆ.

    2 ವಿಭಾಗಗಳಲ್ಲಿ ಊಟದ ವ್ಯವಸ್ಥೆ:
    ಅಪ್ಪು ಅಭಿಮಾನಿಗಳಿಗೆ 2 ವಿಭಾಗಗಳಲ್ಲಿ ಊಟ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. 20 ಸಾವಿರ ನಾನ್ ವೆಜ್, 5 ಸಾವಿರ ಜನಕ್ಕೆ ವೆಜ್ ಊಟ ಇದೆ. ಬೆಳಗ್ಗೆ 11.30ರ ನಂತರ ಅನ್ನ ಸಂತರ್ಪಣೆ ಪ್ರಾರಂಭವಾಗಲಿದೆ.

    ಅನ್ನ ಸಂತರ್ಪಣೆಯಲ್ಲಿ ಏನೆಲ್ಲಾ ಇರಲಿದೆ?
    ವೆಜ್ ಮೆನು
    * ಮಸಾಲ ವಡೆ
    * ಘೀ ರೈಸ್-ಕುರ್ಮಾ
    * ಆಲೂ ಕಬಾಬ್
    * ಅಕ್ಕಿ ಪಾಯಸ
    * ಅನ್ನ- ತರಕಾರಿ ಸಾಂಬಾರ್
    * ರಸಂ
    * ಮಜ್ಜಿಗೆ

    ನಾನ್ ವೆಜ್ ಮೆನು
    * ಘೀ ರೈಸ್
    * ಚಿಕನ್ ಚಾಪ್ಸ್/ ಚಿಕನ್ ಸಾರ್
    * ಕಬಾಬ್
    * ಅನ್ನ-ಸಾಂಬಾರ್
    * ರಸಂ

    ಪೊಲೀಸ್ ಕಟ್ಟೆಚ್ಚರ:
    ಅನ್ನ ಸಂತರ್ಪಣೆ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗುತ್ತಿದೆ. ಎಲ್ಲೂ ಅಹಿತಕರ ಘಟನೆ ಆಗದಂತೆ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಪ್ಯಾಲೆಸ್ ಗ್ರೌಂಡ್ ಸುತ್ತ ಓರ್ವ ಡಿಸಿಪಿ, 3 ಎಸಿಪಿ, 32 ಇನ್ಸ್ ಪೆಕ್ಟರ್, 70 ಸಬ್ ಇನ್ಸ್‍ಪೆಕ್ಟರ್ ಸೇರಿ ಒಟ್ಟು 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿದೆ.

  • ಆತ್ಮಹತ್ಯೆ ಮಾಡ್ಕೊಂಡ ಅಪ್ಪು ಅಭಿಮಾನಿ ಮನೆಗೆ ರಾಘಣ್ಣ ಭೇಟಿ, ಸಾಂತ್ವನ

    ಆತ್ಮಹತ್ಯೆ ಮಾಡ್ಕೊಂಡ ಅಪ್ಪು ಅಭಿಮಾನಿ ಮನೆಗೆ ರಾಘಣ್ಣ ಭೇಟಿ, ಸಾಂತ್ವನ

    – ಕುಟುಂಬಸ್ಥರಿಗೆ ರಾಘವೇಂದ್ರ ರಾಜ್ ಕುಮಾರ್ ಭರವಸೆ

    ರಾಮನಗರ: ನಟ ಪುನೀತ್ ರಾಜಕುಮಾರ್ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಇಂದು ಯುವಕನ ಮನೆಗೆ ನಟ ರಾಘವೇಂದ್ರ ರಾಜ್ ಕುಮಾರ್ ಭೇಟಿ ನೀಡಿದ್ದಾರೆ.

    ನಾಳೆ ಪುನೀತ್ ಕಾರ್ಯಕ್ಕೆ ಬನ್ನಿ ಎಂದು ಆಹ್ವಾನ ನೀಡಿದ ರಾಘವೇಂದ್ರ ರಾಜ್‍ಕುಮಾರ್, ಅರ್ಧಗಂಟೆಗೂ ಹೆಚ್ಚು ಕಾಲ ಕುಟುಂಬಸ್ಥರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ನಿಮ್ಮ ಜೊತೆಗೆ ನಾವಿದ್ದೇವೆ ಧೈರ್ಯವಾಗಿರಿ ಎಂದು ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲ ಥಿಯೇಟರ್‌‌ಗಳಲ್ಲಿ ಏಕಕಾಲಕ್ಕೆ ಅಪ್ಪುಗೆ ಶ್ರದ್ಧಾಂಜಲಿ

    ನಮ್ಮ ಕುಟುಂಬದಲ್ಲಿ ನೀವು ಒಬ್ಬರು. ಈ ಭಾಗಕ್ಕೆ ಬಂದಾಗಲೆಲ್ಲ ನಾನು ನಿಮ್ಮ ಮನೆಗೆ ಬರುವುದಾಗಿ ಭರವಸೆ ನೀಡಿದರು. ಇದೇ ವೇಳೆ ಯುವಕನ ಕುಟುಂಬಸ್ಥರು ಕೂಡ, ಪುನೀತ್ ರಾಜ್‍ಕುಮಾರ್ ಕಾರ್ಯ ಮುಗಿದ ಮೇಲೆ ಸಮಾಧಿ ಬಳಿಗೆ ಹೋಗಿ ಸಂತಾಪ ಸೂಚಿಸಿ ಅವರ ಮನೆಗೆ ಭೇಟಿ ನೀಡುವುದಾಗಿ ತಿಳಿಸಿದರು.  ಇದನ್ನೂ ಓದಿ: ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳನ್ನು 6.5 ನಿಮಿಷದಲ್ಲಿ ಏರಿದ್ದ ಅಪ್ಪು

    ಚನ್ನಪಟ್ಟಣದ ಎಲೆಕೇರೆಯಲ್ಲಿ ವೆಂಕಟೇಶ್ (25) ಆತ್ಮಹತ್ಯೆ ಮಾಡಿಕೊಂಡಿದ್ದ. ಈತ ಪುನೀತ್ ನಿಧನದ ಬಳಿಕ ಸಂಪೂರ್ಣ ಖಿನ್ನತೆಗೆ ಒಳಗಾಗಿದ್ದು, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು. ಸದ್ಯ ದುಃಖದ ಸಮಯದಲ್ಲೂ ಯುವರತ್ನ ಅಭಿಮಾನಿ ಮನೆಗೆ ಧಾವಿಸಿ ರಾಘಣ್ಣ ಸಾಂತ್ವನ ಹೇಳಿದ್ದು ವಿಶೇಷವಾಗಿದೆ.

  • ರಾಜ್ಯದ ಎಲ್ಲ ಥಿಯೇಟರ್‌‌ಗಳಲ್ಲಿ ಏಕಕಾಲಕ್ಕೆ ಅಪ್ಪುಗೆ ಶ್ರದ್ಧಾಂಜಲಿ

    ರಾಜ್ಯದ ಎಲ್ಲ ಥಿಯೇಟರ್‌‌ಗಳಲ್ಲಿ ಏಕಕಾಲಕ್ಕೆ ಅಪ್ಪುಗೆ ಶ್ರದ್ಧಾಂಜಲಿ

    ಬೆಂಗಳೂರು: ನಮ್ಮನ್ನಗಲಿರುವ ರಾಜಕುಮಾರ ಸ್ಯಾಂಡಲ್‍ವುಡ್‍ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಇಂದು ರಾಜ್ಯದ 650 ಥಿಯೇಟರ್‌‌ಗಳಲ್ಲಿ ಏಕಕಾಲಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ನಟ ಸೌರ್ವಭಾಮನಿಗೆ ದೀಪಾಂಜಲಿ, ಭಾಷ್ಪಾಂಜಲಿ, ಪುಷ್ಪಾಂಜಲಿ, ಗೀತಾಂಜಲಿ ಸಲ್ಲಿಸಲಾಯಿತು. ಥಿಯೇಟರ್ ಅಂಗಳದಲ್ಲಿ ದೀಪ ಹಚ್ಚುವ ಮೂಲಕ ನಾಗೇಂದ್ರ ಪ್ರಸಾದ್ ಅವರು ರಚಿಸಿ, ಸಂಗೀತ ನೀಡಿರುವ ಅಪ್ಪುವಿಗೆ ನಮನಾಂಜಲಿ ಹೆಸರಿನ ವಿಶೇಷ ಹಾಡಿನ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    ನಾಗೇಂದ್ರ ಪ್ರಸಾದ್ ಅವರು ರಚಿಸಿ, ಸಂಗೀತ ನೀಡಿರುವ ಈ ವಿಶೇಷ ಹಾಡಿಗೆ ವಿಷ್ಣು ಸುರೇಶ್ ಧ್ವನಿಯಾಗಿದ್ದಾರೆ. ಅಪ್ಪು ನಮನಾಂಜಲಿ ಹಾಡುವ ಮೂಲಕ ರಾಜ್ಯದ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಗೀತಾಂಜಲಿ ಅಪ್ಪು ನಮನಾಂಜಲಿ ಗೀತೆ ಹಾಡಲಾಯಿತು.  ಇದನ್ನೂ ಓದಿ: ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು’

    ನಾಳೆ ಪುನೀತ್ ರಾಜ್‍ಕುಮಾರ್ ನಿಧನರಾಗಿ 11ನೇ ದಿನವಾಗಿದ್ದು, ನಾಳೆ ಪುಣ್ಯತಿಥಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9 ಕ್ಕೆ ಸದಾಶಿವನಗರದಲ್ಲಿರುವ ಅಪ್ಪು ನಿವಾಸದಲ್ಲಿ ಅಪ್ಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಬೆಳಗ್ಗೆ 9.45ಕ್ಕೆ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ. ನಾಳೆ ಪುನೀತ್ ರಾಜ್‍ಕುಮಾರ್ ಅವರ ಪುಣ್ಯತಿಥಿ. ರಾಘವೇಂದ್ರ ರಾಜ್‍ಕುಮಾರ್ ಅವರ ಹಿರಿ ಮಗ ವಿನಯ್ ರಾಜ್‍ಕುಮಾರ್ ಚಿಕ್ಕಪ್ಪಣ ಪುಣ್ಯ ಕಾರ್ಯ ನೆರವೇರಿಸಲಿದ್ದಾರೆ.

  • ಕಲಾವಿದರ ಬದುಕು ಹೇಗೆ ಅಂತ ಹೇಳೋಕಾಗಲ್ಲ ದುಡಿಯುವಾಗ ಸೇವಿಂಗ್ಸ್ ಮಾಡು ಅಂತಿದ್ರು: ಚಿಕ್ಕಣ್ಣ

    ಕಲಾವಿದರ ಬದುಕು ಹೇಗೆ ಅಂತ ಹೇಳೋಕಾಗಲ್ಲ ದುಡಿಯುವಾಗ ಸೇವಿಂಗ್ಸ್ ಮಾಡು ಅಂತಿದ್ರು: ಚಿಕ್ಕಣ್ಣ

    ಬೆಂಗಳೂರು: ಕಲಾವಿದರ ಬದುಕು ಹೇಗೆ ಅಂತ ಹೇಳೋಕೆ ಆಗಲ್ಲ. ಹೀಗಾಗಿ ದುಡಿಯುವಾಗ ಸೇವಿಂಗ್ಸ್ ಮಾಡು ಅಂತ ಪುನೀತ್ ರಾಜ್ ಕುಮಾರ್ ಅವರು ಹೇಳುತ್ತಿದ್ದರು ಎಂದು ನಟ ಚಿಕ್ಕಣ್ಣ ಗದ್ಗದಿತರಾದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಪ್ಪು ನೆನೆದು ಭಾವುಕರಾದರು. 5 ಸಿನಿಮಾಗಳಲ್ಲಿ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದೆ ಎಂದು ಹೇಳುತ್ತಾ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭೇಟಿಯಾದ ಮೊದಲ ಪರಿಚಯದ ದಿನಗಳನ್ನ ನೆನಪಿಸಿಕೊಳ್ಳುತ್ತಾ ಕಣ್ಣೀರು ಹಾಕಿದರು.

    ಜೇಮ್ಸ್ ಸಿನಿಮಾದ ಶೂಟಿಂಗ್ ನಲ್ಲಿ ಹಲವು ದಿನಗಳು ಜೊತೆಯಾಗಿ ಕೆಲಸ ಮಾಡಿದ್ದೆವು. ಸದಾಶಿವನಗರದ ಸುತ್ತಮುತ್ತ ಶೂಟಿಂಗ್ ಮಾಡಿದ ಮನೆಗೆ ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದರು. ವರ್ಷ 4 ಸಿನಿಮಾ ನಿರ್ಮಾಣ ಮಾಡಬೇಕು ಅಂತ ಪ್ಲಾನ್ ಮಾಡಿದ್ದರು ಎಂದು ಚಿಕ್ಕಣ್ಣ ಹೇಳಿದರು. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    ನನಗೆ ಒಂದು ಸಿನಿಮಾ ಮಾಡ್ತೀನಿ ಅಂತ ಹೇಳಿದ್ದರು. ಮೂರು ದಿನ ಕಥೆ ಬಗ್ಗೆ ಕೂಡ ಮಾತಾಡಿದ್ದೆವು. ಕಲಾವಿದರ ಬದುಕು ಹೇಗೆ ಅಂತ ಹೇಳಕ್ಕೆ ಆಗಲ್ಲ ದುಡಿಯುವಾಗ ಸೇವಿಂಗ್ಸ್ ಮಾಡು ಅಂತ ಪ್ರತಿ ಬಾರಿಯೂ ಹೇಳುತ್ತಿದ್ದರು ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡು ಬೇಸರ ವ್ಯಕ್ತಪಡಿಸಿದರು.

    ಫಿಟ್ ನೆಸ್ ಬಗ್ಗೆ ಅಪ್ಪು ಬಹಳ ಚರ್ಚೆ ಮಾಡುತ್ತಿದ್ದರು. ಈಗ ಅವರಿಲ್ಲ ಅನ್ನೋದನ್ನ ಊಹೆ ಕೂಡ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಚಿಕ್ಕಣ್ಣ ಅತ್ತುಬಿಟ್ಟರು. ಇದನ್ನೂ ಓದಿ: ನವೆಂಬರ್ 16ರಂದು ಪವರ್ ಸ್ಟಾರ್‌ಗೆ ಸ್ಯಾಂಡಲ್‍ವುಡ್ ನುಡಿನಮನ

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ 10 ದಿನಗಳೇ ಕಳೆದಿವೆ. ಆದರೂ ಇಂದಿಗೂ ಅವರ ಸಮಾಧಿ ದರ್ಶನ ಪಡೆಯಲು ಅಭಿಮಾನಿಗಳ ಸಾಗರವೇ ಹರಿದಬರುತ್ತಿದೆ. ಈ ಮಧ್ಯೆ ಇಂದು ರಾಜ್ಯದ ಎಲ್ಲಾ ಥಿಯೇಟರ್ ಗಳಲ್ಲಿಯೂ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಾಳೆ 11 ದಿನದ ಕಾರ್ಯಕ್ರಮವನ್ನು ಕುಟುಂಬಸ್ಥರು ನೆರವೇರಿಸಲಿದ್ದಾರೆ.

  • ಅಪ್ಪು ಪ್ರೇರಣೆ – ಅಭಿಮಾನಿಗಳಿಂದ ನೇತ್ರದಾನದ ಜೊತೆಗೆ ದೇಹದಾನಕ್ಕೆ ನೋಂದಣಿ

    ಅಪ್ಪು ಪ್ರೇರಣೆ – ಅಭಿಮಾನಿಗಳಿಂದ ನೇತ್ರದಾನದ ಜೊತೆಗೆ ದೇಹದಾನಕ್ಕೆ ನೋಂದಣಿ

    ಯಾದಗಿರಿ: ನಟ ಪುನೀತ್ ರಾಜಕುಮಾರ್ ತಮ್ಮ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದರು. ನೇತ್ರದಾನ ಮಾಡಿದ ಅಪ್ಪು ತಮ್ಮ ಅಭಿಮಾನಿಗಳಿಗೆ ಮಾದರಿಯಾಗಿದ್ದು, ಈಗ ಅವರ ಅಭಿಮಾನಿ ದೇವರುಗಳು ಸಹ ಅಪ್ಪು ಮಾರ್ಗವನ್ನು ಅನುಸರಿಸಿದ್ದಾರೆ.

    ಯಾದಗಿರಿ ನಗರದ ಗಂಜ್ ಬಳಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಅಪಾರ ಅಭಿಮಾನಿಗಳು ಕೇವಲ ನೇತ್ರದಾನ ಮಾಡುವುದು ಮಾತ್ರವಲ್ಲದೆ, ದೇಹ ದಾನ ಮಾಡುವುದಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಯಾದಗಿರಿ ನಗರದ ನಿವಾಸಿಗಳಾದ ಹನುಮಯ್ಯ ಹಾಗೂ ಮಲ್ಲಿಕಾರ್ಜುನ ದಂಪತಿ ದೇಹದಾನಕ್ಕೆ ನೊಂದಣಿ ಮಾಡಿಕೊಂಡಿದ್ದಾರೆ. 52 ಮಂದಿ ಅಪ್ಪು ಅಭಿಮಾನಿಗಳು ನೇತ್ರದಾನಕ್ಕೂ ಸಹ ನೋಂದಣಿ ಮಾಡಿಕೊಂಡಿದ್ದಾರೆ.

    ಅಪ್ಪು ಅಭಿಮಾನಿಗಳಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ರಾಯಚೂರಿನ ರಿಮ್ಸ್ ಆಸ್ಪತ್ರೆ ಸಹಯೋಗದಲ್ಲಿ ಅವರ ಅಭಿಮಾನಿಗಳು ಈ ಕಾರ್ಯ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪು ಪ್ರೇರಣೆ – ಒಂದೇ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮಂದಿ ನೇತ್ರದಾನ

  • ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು’

    ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು’

    ಬೆಂಗಳೂರು: ಪ್ರತಿ ಬಾರಿಯೂ ಅಪ್ಪು ಜೊತೆ ದಿ. ಡಾ. ರಾಜ್ ಕುಮಾರ್ ಸಮಾಧಿ ನೋಡಲು ಬರುತ್ತಿದ್ದೆವು. ಆದರೆ ಈಗ ಅವರದ್ದೇ ಸಮಾಧಿ ನೋಡಲು ಬರವಂತೆ ಆಗಿದೆ ಎಂದು ನಟ ತಬಲಾ ನಾಣಿ ಕಣ್ಣೀರು ಹಾಕಿದ್ದಾರೆ.

    ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪು ಅವರನ್ನು ಮರೆಯೋಕೆ ಆಗುತ್ತಿಲ್ಲ. ಅವರು ವಾಪಾಸ್ ಬರಲ್ಲ ಅನ್ನೋದು ಗೊತ್ತು. ಆದರೂ ಮನಸ್ಸು ಕೇಳುತ್ತಿಲ್ಲ. ಪುನೀತ್ ನಮ್ಮ ನಾಡಿನ ಹೆಮ್ಮೆ, ಎಷ್ಟು ಜನರನ್ನ ಸಂಪಾದನೆ ಮಾಡಿದ್ದಾರೆ. ಎಷ್ಟೋ ಸಮಾಜಮುಖಿ ಕೆಲಸ ಮಾಡಿದ್ದಾರೆ. ಅವರು ಇದ್ದಾಗ ಇವೆಲ್ಲ ಗೊತ್ತೇ ಆಗಿಲ್ಲ ಎಂದರು. ಇದನ್ನೂ ಓದಿ: ಅಪ್ಪು ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋದ್ರು: ಜಯಪ್ರದಾ

    ಈಗ ಅವರು ಏನೇಲ್ಲ ಮಾಡಿದ್ರು ಅನ್ನೋದು ನೋಡಿದ್ರೇ ಹೆಮ್ಮೆ ಅನಿಸುತ್ತಿದೆ. ಅಪ್ಪು ತರ ನಿಮ್ಮ ಮಕ್ಕಳನ್ನ ಬೆಳೆಸಿ. ಅಪ್ಪು ರೀತಿ ಡ್ಯಾನ್ಸ್, ಆಕ್ಟಿಂಗ್ ಕಲಿಸಿ, ಅಪ್ಪುಗೆ ಸಾವಿಲ್ಲ. ಅವರು ನಮ್ಮ ಜೊತೆಯೇ ಇರುತ್ತಾರೆ, ಅಪ್ಪುಗೆ ಮರಣವಿಲ್ಲ. ಅಪ್ಪು ಅಮರ ನಟ ಎಂದು ನಾಣಿ ಬಣ್ಣಿಸಿದರು. ಇದನ್ನೂ ಓದಿ: ಅಪ್ಪು ಸಮಾಧಿ ಬಳಿಯೇ ಮದುವೆಯಾಗಲು ಆಗಮಿಸಿದ ಪ್ರೇಮಿಗಳು