Tag: ಅಪ್ಪು

  • 13 ದಿನದಲ್ಲಿ 2 ಲಕ್ಷದ 26 ಸಾವಿರ ಮಂದಿಯಿಂದ ಅಪ್ಪು ಸಮಾಧಿ ದರ್ಶನ!

    13 ದಿನದಲ್ಲಿ 2 ಲಕ್ಷದ 26 ಸಾವಿರ ಮಂದಿಯಿಂದ ಅಪ್ಪು ಸಮಾಧಿ ದರ್ಶನ!

    ಬೆಂಗಳೂರು: ನಮ್ಮ ಪ್ರೀತಿಯ ಅಪ್ಪು ಪುನೀತ್ ರಾಜ್‍ಕುಮಾರ್ ನಿಧನರಾಗಿ 2 ವಾರಗಳೇ ಕಳೆದ್ರೂ ಕಂಠೀರವ ಸ್ಟುಡಿಯೋದಲ್ಲಿರುವ ರಾಜಕುಮಾರನ ಸಮಾಧಿ ದರ್ಶನಕ್ಕೆ ಜನಸಾಗರವೇ ಹರಿದು ಬರ್ತಿದೆ. ಮಳೆ ಇರಲಿ, ಚಳಿ ಇರಲಿ ಯಾವುದನ್ನು ಲೆಕ್ಕಿಸದೇ ಹಿರಿಯರು, ಕಿರಿಯರು, ಅಂಗವಿಕಲರು ಸೇರಿದಂತೆ ಜನ ಗುಂಪು ಗುಂಪಾಗಿ ಆಗಮಿಸ್ತಿದ್ದಾರೆ.

    ರಾಜ್ಯ ಅಂತಾರಾಜ್ಯ ಸೇರಿದಂತೆ ಪ್ರತಿನಿತ್ಯ ನಾನಾ ಭಾಗಗಳಿಂದ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಕಳೆದ 13 ದಿನದಲ್ಲಿ 2 ಲಕ್ಷದ 26 ಸಾವಿರ ಜನರಿಂದ ಅಪ್ಪು ಸಮಾಧಿ ದರ್ಶನ ಪಡೆದ್ರು. ಒಟ್ಟಿನಲ್ಲಿ ಅಪ್ಪು ನಿಧನವಾಗಿ ವಾರಗಳು ಉರುಳಿದರೂ ಸಮಾಧಿ ದರ್ಶನ ಪಡೆಯುವವರ ಸಂಖ್ಯೆ ಇನ್ನೂ ತಗ್ಗಿಲ್ಲ. ಲಕ್ಷಾಂತರ ಜನರಿಂದ ಅಂತಿಮ ದರ್ಶನದ ಬಳಿಕವೂ ಜನ ಸಾಗರ ತಗ್ಗಿಲ್ಲ. ಇದನ್ನೂ ಓದಿ: ನಾಳೆ 3 ಗಂಟೆಗೆ ಅರಮನೆ ಮೈದಾನದಲ್ಲಿ ಪುನೀತ ನಮನ- 1,500 ಮಂದಿಗೆ ಮಾತ್ರ ಅವಕಾಶ

    ಯಾವ್ಯಾವ ದಿನ ಎಷ್ಟೆಷ್ಟು ಅಭಿಮಾನಿಗಳಿಂದ ದರ್ಶನ..?
    ನವೆಂಬರ್ 2 ರಂದು 1 ಸಾವಿರ, ನವೆಂಬರ್ 3 ರಂದು 25 ಸಾವಿರ, ನವೆಂಬರ್ 4 ರಂದು 25 ಸಾವಿರ, ನವೆಂಬರ್ 5 ರಂದು 35 ಸಾವಿರ, ನವೆಂಬರ್ 6 ರಂದು 22 ಸಾವಿರ, ನವೆಂಬರ್ 7 ರಂದು 36 ಸಾವಿರ, ನವೆಂಬರ್ 8 ರಂದು 14 ಸಾವಿರ, ನವೆಂಬರ್ 9 ರಂದು 14 ಸಾವಿರ, ನವೆಂಬರ್ 10 ರಂದು 8 ಸಾವಿರ, ನವೆಂಬರ್ 11 ರಂದು 5 ಸಾವಿರ, ನವೆಂಬರ್ 12 ರಂದು 8 ಸಾವಿರ, ನವೆಂಬರ್ 13 ರಂದು 10 ಸಾವಿರ, ನವೆಂಬರ್ 14 ರಂದು 23 ಸಾವಿರ ಮಂದಿ ದರ್ಶನ ಪಡೆದಿದ್ದಾರೆ.

    ಅಕ್ಟೋಬರ್ 29ರ ಶುಕ್ರವಾರದಮದು ಬೆಳಗ್ಗೆ ಅಪ್ಪು ಆಯಾಸಗೊಂಡಿದ್ದರು. ಕೂಡಲೇ ಅವರು ಸ್ಥಳೀಯ ರಮಣಶ್ರೀ ಕ್ಲಿನಿಕ್ ಗೆ ತೆರಳಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿಕೊಂಡು ಇನ್ನೇನು ಮನೆ ಕಡೆ ತೆರಳುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕಾರಿನಲ್ಲಿಯೇ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಅದು ಫಲಕಾರಿಯಾಗದೇ ನಿಧನರಾಗಿದ್ದರು.

  • ನಾಳೆ 3 ಗಂಟೆಗೆ ಅರಮನೆ ಮೈದಾನದಲ್ಲಿ ಪುನೀತ ನಮನ- 1,500 ಮಂದಿಗೆ ಮಾತ್ರ ಅವಕಾಶ

    ನಾಳೆ 3 ಗಂಟೆಗೆ ಅರಮನೆ ಮೈದಾನದಲ್ಲಿ ಪುನೀತ ನಮನ- 1,500 ಮಂದಿಗೆ ಮಾತ್ರ ಅವಕಾಶ

    ಬೆಂಗಳೂರು: ಅಕ್ಷರಶಃ ರಾಜಕುಮಾರನಂತೆ ಬದುಕಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಾಳ ದಾರಿಯಲ್ಲಿ ಜಾರಿ ಹೋಗಿ ಇಂದಿಗೆ 18ನೇ ದಿನ. ಫಿಟ್ ಅಂಡ್ ಫೈನ್, ಯೂತ್ ಐಕಾನ್ ಆಗಿದ್ದ ಅಪ್ಪು ಹಠಾತ್ತಾಗಿ ಉಸಿರು ನಿಲ್ಲಿಸಿ ನಾಳೆಗೆ 19ನೇ ದಿನ. ಅಪ್ಪು ಉಸಿರು ನಿಂತರೂ ಅವರ ಹೆಸರು ಮಾತ್ರ ಅಜರಾಮರ. ಯುವರತ್ನನೆಂಬ ಬೆಳಕು ಇಲ್ಲದನ್ನು ಇನ್ನೂ ಕೂಡ ಅಭಿಮಾನಿಗಳಿಗೆ, ಕನ್ನಡಿಗರಿಗೆ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಈ ಹಿನ್ನೆಲೆ ಫಿಲ್ಮ್ ಚೇಂಬರ್ ನಾಳೆ ‘ಪುನೀತ ನಮನ’ ಕಾರ್ಯಕ್ರಮ ಹಮ್ಮಿಕೊಂಡಿದೆ.

    ಪ್ಯಾಲೇಸ್‍ಗ್ರೌಂಡ್‍ನ ಗಾಯತ್ರಿ ವಿಹಾರ್ ನಲ್ಲಿ ನಡೆಯೋ ನುಡಿನಮನ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿದೆ. ಮಧ್ಯಾಹ್ನ 3 ಗಂಟೆಗೆ ನುಡಿನಮನ ಆರಂಭವಾಗಿ ಸಂಜೆ 6 ಗಂಟೆಯ ತನಕ ನಡೆಯಲಿದೆ. ಕಾರ್ಯಕ್ರಮಕ್ಕೆ 1500 ಸಾವಿರ ಜನರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ. ಕಾರ್ಯಕ್ರಮಕ್ಕೆ ಸಿಎಂ, ಸಚಿವರು ಹಾಗೂ ವಿರೋಧ ಪಕ್ಷದ ನಾಯಕರಿಗೆ ಹಾಗೂ ನಾಲ್ಕು ರಾಜ್ಯದ ನಟರಿಗೆ, ಮೈಸೂರು ಒಡೆಯರಿಗೆ ಆಹ್ವಾನಿಸಲಾಗಿದೆ. ಇನ್ನು ನುಡಿನಮನ ಕಾರ್ಯಕ್ರಮದ ದಿನ ಚಿತ್ರೀಕರಣ ಸಂಪೂರ್ಣ ಸ್ಥಬ್ಧವಾಗಿರಲಿದೆ. ಇದನ್ನೂ ಓದಿ: ಶೂಟಿಂಗ್, ತಿಂಡಿ ಬಿಟ್ಟು ಪುನೀತ್‍ಗೆ ಪ್ರಪಂಚವೇ ಗೊತ್ತಿರಲಿಲ್ಲ – ಅಪ್ಪು ನೆನೆದು ಸಹೋದರಿ ಲಕ್ಷ್ಮೀ ಕಣ್ಣೀರು

    ಕಾರ್ಯಕ್ರಮದಲ್ಲಿ ಏನೆಲ್ಲಾ ಇರುತ್ತೆ..?
    ಸ್ಯಾಕ್ಸೋಫೋನ್ ವಾದನ, ಪುನೀತ್ ನಡೆದು ಬಂದ ಹಾದಿಯ ಮೆಲುಕು, ಪುನೀತ ನಮನ ಕಾರ್ಯಕ್ರಮಕ್ಕೆ ನಾಗೇಂದ್ರ ಪ್ರಸಾದ್ ಹಾಡು, ಪುನೀತ್ ರಾಜ್‍ಕುಮಾರ್ ಟ್ರಿಬ್ಯೂಟ್ ಮಾಡಲಾಗುತ್ತೆ. ಕಾರ್ಯಕ್ರಮದ ನಡುನಡುವೆ ಅಪ್ಪು ನಟನೆಯ ಹಾಡುಗಳು ಪ್ಲೇ ಆಗುತ್ತೆ. ಹಾಗೂ ಸಂಗೀತ ಕಾರ್ಯಕ್ರಮಕ್ಕೆ ಅವಕಾಶ ಇರೋದಿಲ್ಲ. ನುಡಿನಮನ ಕಾರ್ಯಕ್ರಮಕ್ಕೆ ದಕ್ಷಿಣಭಾರತದ ಖ್ಯಾತನಟರಿಗೆ ಆಹ್ವಾನ ನೀಡಲಾಗಿದೆ. ಇದನ್ನೂ ಓದಿ: ಅಪ್ಪು ಮಾಡಿದ ಕೆಲಸಗಳನ್ನು ಮುಂದುವರಿಸಬೇಕು ಅಂದ್ಕೊಂಡಿದ್ದೇನೆ: ರಾಘವೇಂದ್ರ ರಾಜ್‍ಕುಮಾರ್

    ಕಮಲ್ ಹಾಸನ್, ವಿಶಾಲ್, ಪ್ರಕಾಶ್ ರಾಜ್, ಜಗಪತಿ ಬಾಬು, ಅಲಿ, ತಮಿಳುನಟ ವಿಜಯ್, ಸುದೀಪ್, ದರ್ಶನ್, ವಿಜಯ್, ಬಿ.ಸರೋಜಾದೇವಿ, ಭಾರತಿ, ಸುಮಲತಾ, ರಕ್ಷಿತಾ, ರಮ್ಯಾ ಭಾಗವಹಿಸಲಿದ್ದಾರೆ. ಸಾಹಿತ್ಯ ವಲಯದಿಂದ ಸುಧಾ ಮೂರ್ತಿ, ಬರಗೂರು ರಾಮಚಂದ್ರಪ್ಪ ಸೇರಿದಂತೆ ಸಾಹಿತಿಗಳು, ಮಹಾರಾಜ ಯದುವೀರ್ ಒಡೆಯರ್ ಹಾಗೂ ಯದುವೀರ್ ಅವ್ರ ತಂದೆ ಅವರಿಗೂ ಆಹ್ವಾನ ಕೊಡಲಾಗಿದೆ. ಇದನ್ನೂ ಓದಿ: ಸಣ್ಣ ವಯಸ್ಸಿನ ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ: ರಮೇಶ್ ಜಾರಕಿಹೊಳಿ

    ಸಿನಿರಂಗದವರಲ್ಲದೇ ರಾಜಕೀಯ, ಕ್ರೀಡಾ, ಸಾಹಿತ್ಯ ಕ್ಷೇತ್ರದ ಗಣ್ಯರಿಗೆ ಆಹ್ವಾನ ಕೊಡಲಾಗಿದೆ. ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿಕೆಶಿ ಅವರಿಗೆ ಆಹ್ವಾನ ಕೊಡಲಾಗಿದ್ದು, ದೊಡ್ಮನೆ ಕುಟುಂಬಸ್ಥರು ‘ಪುನೀತ ನಮನ’ದಲ್ಲಿ ಭಾಗಿಯಾಗಲಿದ್ದಾರೆ. ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ, ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಹಾಗೂ ರಾಜ್ ಕುಟುಂಬಸ್ಥರು ಉಪಸ್ಥಿತರಿರಲಿದ್ದಾರೆ. ಇದನ್ನೂ ಓದಿ: ಅಪ್ಪು ಇಷ್ಟೆಲ್ಲ ಸಮಾಜಕ್ಕೆ ದಾನ ಮಾಡಿದ್ದಾನೆ ಎಂದುಕೊಂಡಿರಲಿಲ್ಲ: ಗೋವಿಂದರಾಜು

  • ಅಪ್ಪು ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರ ಪ್ರಯತ್ನ!

    ಅಪ್ಪು ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರ ಪ್ರಯತ್ನ!

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದಿ. ಪುನೀತ್ ರಾಜ್ ಕುಮಾರ್ (Puneeth Raj Kumar) ಅವರ ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ.

    ಹೌದು. ಈಗಾಗಲೇ ನಾಲ್ಕು ಜನರ ಬಾಳಿಗೆ ಬೆಳಕಾಗಿರೋ ಪುನೀತ್ ರಾಜ್ ಕುಮಾರ್ ಅವರ ಕಣ್ಣಿನಿಂದ ಇನ್ನೂ 10 ಜನಕ್ಕೆ ದೃಷ್ಟಿ ನೀಡಲು ವೈದ್ಯರು ತಯಾರಿ ನಡೆಸುತ್ತಿದ್ದಾರೆ. ಈ ವಿನೂತನ ಪ್ರಯತ್ನಕ್ಕೆ ನಾರಾಯಣ ನೇತ್ರಾಲಯ ಮುಂದಾಗಿದೆ. ಇದೇ ಮೊದಲ ಬಾರಿಗೆ ಒಬ್ಬ ವ್ಯಕ್ತಿಯ ಕಾರ್ನಿಯಾ (Cornea) ಮತ್ತು ಸ್ಟೆಮ್ ಸೆಲ್ (Stem Cell) ಎರಡನ್ನು ಬಳಕೆ ಮಾಡಿಕೊಂಡು ದೃಷ್ಟಿ ನೀಡಲಾಗುತ್ತಿದೆ. ಇದನ್ನೂ ಓದಿ: ಇತಿಹಾಸ ಬರೆದ ಪವರ್ ಸ್ಟಾರ್ ಪುಣ್ಯಸ್ಮರಣೆ- ದಾಖಲೆ ಪ್ರಮಾಣದಲ್ಲಿ ನೇತ್ರದಾನಕ್ಕೆ ಅರ್ಜಿ

    ಪುನೀತ್ ರಾಜ್ ಕುಮಾರ್ ಸ್ಟೆಮ್ ಸೆಲ್ ಗಳ ಬಳಕೆಯಿಂದ ಅಂಧರಿಗೆ ದೃಷ್ಟಿ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಸ್ಟೆಮ್ ಸೆಲ್ ಥೆರಪಿ ನಡೆಸಿ 10 ಮಂದಿಗೆ ದೃಷ್ಟಿ ನೀಡಲು ಮುಂದಾಗಿದೆ. ಅಪ್ಪು ಕಾರ್ನಿಯಾವನ್ನು ಬೇರೆಯವರಿಗೆ ಬಳಸಿ ದೃಷ್ಟಿ ನೀಡಲಾಗಿದೆ. ಈಗ ಪುನೀತ್ ಅವರ ಕಣ್ಣಿನ ರಿಮ್ ಭಾಗದಿಂದ ವೈದ್ಯರು ಸ್ಟೆಮ್ ಸೆಲ್ ಸಂಗ್ರಹಿಸಿದ್ದಾರೆ. ಈಗಾಗಲೇ ಸ್ಟೆಮ್ ಸೆಲ್ ಗಳು ಮಲ್ಟಿಪಲ್ ಆಗುತ್ತಿವೆ. ಮಲ್ಟಿಪಲ್ ಆಗಲು ಕಾಲಾವಧಿ ಬೇಕಾಗುತ್ತಿದೆ. ಮಲ್ಟಿಪಲ್ ಆದ ಮೇಲೆ ಸ್ಟೆಮ್ ಸೆಲ್ ಸಮಸ್ಯೆಯಿಂದ ಬಳಲುತ್ತಾ ಇರುವವರಿಗೆ ಕಸಿ ಮಾಡಬಹುದು. ಈಗ ಕಸಿ ಮಾಡಲು ನಾರಾಯಣ ನೇತ್ರಾಲಯ ವೈದ್ಯರು ಮುಂದಾಗಿದ್ದಾರೆ. ಇದನ್ನೂ ಓದಿ: ನೇತ್ರದಾನಕ್ಕೆ ಸ್ಫೂರ್ತಿಯಾದ ” ರಾಜರತ್ನ” – ಅಪ್ಪು ಬಳಿಕ ಹೆಚ್ಚಾಗ್ತಿದೆ ನೇತ್ರದಾನಿಗಳ ಸಂಖ್ಯೆ

    ಸ್ಟೆಮ್ ಸೆಲ್ ಥೆರಪಿ ಎಂದರೇನು ?
    ರೆಟಿನಾ (ಅಕ್ಷಿಪಟಲ) ಸಂಬಂಧಿ ಸಮಸ್ಯೆಗಳು ಹಾಗೂ ವಂಶವಾಹಿ ಗುಣಗಳಿಂದ ಬರುವ ಅನುವಂಶೀಯ ಖಾಯಿಲೆ ಬಳಲುತ್ತಿರುವರಿಗೆ ಅಂಧತ್ವ ನಿವಾರಿಸಬಹುದು. ಪಟಾಕಿ ಸಿಡಿತದಿಂದ ದೃಷ್ಟಿ ಹಾನಿಯಾಗಿದ್ದರೆ ನಿವಾರಿಸಲು ಸ್ಟೆಮ್ ಥೆರಪಿ ಮಾಡಿ ದೃಷ್ಟಿ ನೀಡುವುದೇ ಸ್ಟೆಮ್ ಥೆರಪಿ. ಸ್ಟೆಮ್ ಸೆಲ್ ಸಮಸ್ಯೆಯಿಂದಾಗಿ ಮ್ಯಾಕ್ಯೂಲರ್ ಡಿಜನರೇಶನ್ (Macular Degeneration), ರಿಟನೈಟಿಸ್ ಪಿಂಗಮೆಂಟೋಸ್ (Retinitis Pigmentosa) ನಂತಹ ಖಾಯಿಲೆಗಳಿಗೆ ಲಕ್ಷಾಂತರ ಮಂದಿ ಕುರುಡುರಾಗುತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಪ್ರೇರಣೆ – ಒಂದೇ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮಂದಿ ನೇತ್ರದಾನ

  • ಪುನೀತ್ ಸಮಾಧಿ ಬಳಿ 3 ಅಡಿ ಪುತ್ಥಳಿ ನಿರ್ಮಾಣ – ಪಾರಿವಾಳ ಸಮೇತ ಅಂತಿಮ ಸ್ಪರ್ಶ

    ಪುನೀತ್ ಸಮಾಧಿ ಬಳಿ 3 ಅಡಿ ಪುತ್ಥಳಿ ನಿರ್ಮಾಣ – ಪಾರಿವಾಳ ಸಮೇತ ಅಂತಿಮ ಸ್ಪರ್ಶ

    – ರಾಜಕುಮಾರನ ಸ್ಮರಣಿಕೆಗಳಿಗೆ ಸಿಕ್ಕಾಪಟ್ಟೆ ಬೇಡಿಕೆ

    ಬೆಂಗಳೂರು: ದಿವಂಗತ ನಟ ಪುನೀತ್ ರಾಜ್ ಕುಮಾರ್ ಹಠಾತ್ ನಿಧನದ ನೋವು ಇನ್ನೂ ಮಾಸಿಲ್ಲ. ಇದೀಗ ಕಂಠೀರವ ಸ್ಟುಡಿಯೋದ ಪುನೀತ್ ಸಮಾಧಿ ಬಳಿ ಇಡಲು ಅಪ್ಪು 3 ಅಡಿ ಎತ್ತರದ ಪುತ್ಥಳಿ ನಿರ್ಮಾಣವಾಗ್ತಿದೆ.

    ಡಾ.ರಾಜ್ ಪುತ್ಥಳ ತಯಾರಿಸಿದ್ದ ಶಿಲ್ಪಿ ಶಿವದತ್ತ ಅವರೇ ಪುನೀತ್ ಪುತ್ಥಳಿ ತಯಾರು ಮಾಡ್ತಿದ್ದಾರೆ. ‘ನಾನೇ ರಾಜಕುಮಾರ’ ಹಾಡಿನಲ್ಲಿ ಬಂದು ಕೂರುವ ಪಾರಿವಾಳ ಸಮೇತ ಈ ಪುತ್ಥಳಿ ತಯಾರಾಗ್ತಿರೋದು ವಿಶೇಷವಾಗಿದೆ. ಮನೆಯಲ್ಲಿಡಲು ಅಭಿಮಾನಿಗಳಿಂದ ಅಪ್ಪು ಪುಟ್ಟ ಶಿಲ್ಪ ಸ್ಮರಣಿಕೆಗಳಿಗೂ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ 400 ಶಿಲ್ಪ ಸ್ಮರಣಿಕೆಗೆ ಬೇಡಿಕೆ ಬಂದಿದ್ದು, ಅದರ ತಯಾರಿಕಾ ಕೆಲಸವೂ ನಡೆಯುತ್ತಿದೆ ಅಂತ ಶಿವದತ್ತ ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಅತ್ತೆ ನಾಗಮ್ಮಗೆ ಸುದ್ದಿ ಇನ್ನೂ ಗೊತ್ತೇ ಇಲ್ಲ- ಗಾಜನೂರಿನ ಪ್ರತಿ ಮನೆಯಲ್ಲೂ ನೀರವ ಮೌನ!

    ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನದ ಬಳಿಕ ಅನೇಕ ಮಾನವೀಯ ಕಾರ್ಯಗಳು ನಡೆಯುತ್ತಾ ಬರುತ್ತಿದೆ. ಹಲವರು ನೇತ್ರದಾನ, ದೇಹದಾನಕ್ಕೆ ಸಹಿ ಮಾಡಿದ್ದರೆ, ಇನ್ನೂ ಕೆಲವರು ಅವರ ಫೋಟೋಗಳನ್ನು ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡುತ್ತಿದ್ದಾರೆ. ಅಪ್ಪು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಅವರ ಕುಟುಂಬಸ್ಥರಿಗೂ ತಿಳಿದಿರಲಿಲ್ಲ. ಇದೀಗ ಅವರ ಈ ಕೆಲಸಗಳನ್ನು ಕುಟುಂಬಸ್ಥರು ಹಾಗೂ ಅಭಿಮಾನಿಗಳು ಮುಂದುವರಿಸುತ್ತಿದ್ದಾರೆ.

  • ಅಪ್ಪು ಅತ್ತೆ ನಾಗಮ್ಮಗೆ ಸುದ್ದಿ ಇನ್ನೂ ಗೊತ್ತೇ ಇಲ್ಲ- ಗಾಜನೂರಿನ ಪ್ರತಿ ಮನೆಯಲ್ಲೂ ನೀರವ ಮೌನ!

    ಅಪ್ಪು ಅತ್ತೆ ನಾಗಮ್ಮಗೆ ಸುದ್ದಿ ಇನ್ನೂ ಗೊತ್ತೇ ಇಲ್ಲ- ಗಾಜನೂರಿನ ಪ್ರತಿ ಮನೆಯಲ್ಲೂ ನೀರವ ಮೌನ!

    ಚಾಮರಾಜನಗರ: ಅಪ್ಪು ಬಾಲ್ಯ ಕಳೆದ ಊರಲ್ಲಿ ಸೂತಕದ ಕಾರ್ಮೋಡ ಇನ್ನೂ ಮುಗಿದಿಲ್ಲ. ಗಾಜನೂರಿನ ಪ್ರತಿಯೊಂದು ಮನೆಯಲ್ಲೂ ನೀರವ ಮೌನ ಆವರಿಸಿದೆ. ಅತ್ತೆ ನಾಗಮ್ಮಗೆ ಅಪ್ಪು ಅಗಲಿಕೆ ಸುದ್ದಿ ಇನ್ನೂ ಗೊತ್ತೇ ಇಲ್ಲ. ಈ ಮೂಲಕ ಕುಟುಂಬಸ್ಥರು ಕೂಡ ಅಪ್ಪು ಸಾವಿನ ಆಘಾತದಿಂದ ಇನ್ನೂ ಹೊರಬಂದಿಲ್ಲ.

    ಡಾ.ರಾಜ್ ಗಾಜನೂರಿನ ಸಂಬಂಧಿಗಳು ಅಪ್ಪು ಅಗಲಿಕೆ ನೋವಿನಿಂದ ಹೊರ ಬಂದಿಲ್ಲ. ಗಾಜನೂರಿನಲ್ಲಿ ಅಪ್ಪು ಬೆಳೆದಿದ್ದು, ತುಂಟಾಟಗಳು, ಅಚ್ಚು ಮೆಚ್ಚಿನ ಊಟವನ್ನೆಲ್ಲಾ ನೆನೆದು ಕಣ್ಣೀರಾಗುತ್ತಿದ್ದಾರೆ. ಅದರಲ್ಲೂ ಡಾ. ರಾಜ್ ಸಹೋದರಿ, ಅಪ್ಪು ಅತ್ತೆ ನಾಗಮ್ಮಗೆ ಅಪ್ಪು ಅಗಲಿರೋ ಸುದ್ದಿಯನ್ನು ತಿಳಿಸಿಯೇ ಇಲ್ಲ. ನಾಗಮ್ಮ ಅವರ ಆರೋಗ್ಯ ಹದಗೆಟ್ಟಿರೋದ್ರಿಂದ ವಿಷಯ ಮುಚ್ಚಿಟ್ಟಿದ್ದಾರೆ. ಇನ್ನೂ ಬೆಳೆದು ಬಾಳಬೇಕಾದ ಮನೆ ಮಗ ಇನ್ನಿಲ್ಲ ಅನ್ನೋದೇ ನೋವು ಅಂತ ಅಪ್ಪು ಸೋದರ ಮಾವ ಗೋಪಾಲ್ ಕಣ್ಣೀರಿಟ್ಟಿದ್ದಾರೆ.

    ಗಾಜನೂರಿನ ಆಡಿ ಬೆಳೆದ ಮನೆಯನ್ನು ಅಪ್ಪು ಎಂದೂ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಊರಿಗೆ ಹೋದಾಗ ಪ್ರತಿಬಾರಿ ಹಳೇ ಮನೆಗೆ ಭೇಟಿ ಕೊಡ್ತಿದ್ರು. ಪುನೀತ್ ನೋಡಲು ಮುಗಿಬೀಳ್ತಿದ್ದ ಅಭಿಮಾನಿಗಳನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಆದರೆ ಅದೆಲ್ಲ ಇನ್ಮುಂದೆ ಆಗಲ್ಲ ಅಂತ ಗಾಜನೂರಿನ ಸ್ಥಳೀಯರು ಅಪ್ಪು ನೆನೆದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಸಕ್ಕರೆಬೈಲು ಆನೆ ಬಿಡಾರದ ಮರಿ ಆನೆಗೆ ಅಪ್ಪು ಹೆಸರು ನಾಮಕರಣ

    ಅಪ್ಪು ಗಾಜನೂರಿಗೆ ಬಂದಾಗಲೆಲ್ಲ ತಾವೊಬ್ಬ ದೊಡ್ಡ ಸ್ಟಾರ್ ಅನ್ನೋದನ್ನ ಮರೆತು ಎಲ್ಲರಲ್ಲಿ ಒಬ್ಬರಾಗಿ ಬಿಡುತ್ತಿದ್ದರು. ಊರಿನಲ್ಲಿರುವ ಗೆಳೆಯರನ್ನು ಕೂಡ ಭೇಟಿಯಾಗಿ ಸಮಯ ಕಳೆಯುತ್ತಿದ್ದರು. ಕುಟುಂಬಸ್ಥರೊಂದಿಗೆ ಪುನೀತ್ ಜೊತೆ ಫೋಟೋಯೆಲ್ಲ ತೆಗೆಸಿಕೊಂಡಿದ್ವಿ ಅಂತ ಗ್ರಾಮಸ್ಥರು ಗದ್ಗದಿತರಾಗುತ್ತಾರೆ. ಇದನ್ನೂ ಓದಿ: ಪತ್ನಿಗಾಗಿ ಅಪ್ಪು ಹೇಳುತ್ತಿದ್ದ ಹಾಡು ಯಾವುದು ಗೊತ್ತಾ?

    ವರನಟ ಡಾ.ರಾಜ್‍ಕುಮಾರ್ ತಂದೆಯ ಊರು ಕೊಳ್ಳೇಗಾಲ ತಾಲೂಕಿನ ಸಿಂಗನಲ್ಲೂರು. ಇಲ್ಲಿಗೆ ಕುಟುಂಬ ಸಮೇತ ಬಂದಾಗ ಉಳಿದುಕೊಳ್ಳಲು ಮನೆಯನ್ನೂ ಕಟ್ಟಿಸಿದ್ರು. ಆದರೆ ಗೃಹಪ್ರವೇಶಕ್ಕೂ ಮೊದಲೇ ಕೊನೆಯುಸಿರೆಳೆದ್ರು ಅಂತ ಸ್ಥಳೀಯರು ಭಾವುಕರಾಗಿದ್ದಾರೆ. ತಂದೆಯ ನಿಧನದ ನಂತರ ಮಕ್ಕಳು ಗೃಹ ಪ್ರವೇಶ ಮಾಡಿದರು. ಊರಿನ ಜನರು ನೀರಿಗೆ ಕಂದಾಯ ಕಟ್ಟದಂತೆ 50 ಸಾವಿರ ಹಣವನ್ನು ಕೂಡ ಅಂದೇ ಡೆಪಾಸಿಟ್ ಇಟ್ಟಿದ್ದರು. ಇನ್ನು ಅಪ್ಪು ಊರಿಗೆ ಬಂದಾಗೆಲ್ಲ ಪ್ರೀತಿಯಿಂದ ಮಾತನಾಡಿಸ್ತಿದ್ರು ಅಂತ ನೆನಪಿಸಿಕೊಂಡು ಗ್ರಾಮಸ್ಥರು ಭಾವುಕರಾಗಿದ್ದಾರೆ.

    ಗಾಜನೂರು ಪಕ್ಕದ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ಅಪ್ಪುಗೆ ನಮನ ಸಲ್ಲಿಸಿದ್ದಾರೆ. ಈ ಗ್ರಾಮದಲ್ಲಿ ಪ್ರತಿ ವರ್ಷ ಸಗಣಿಯಲ್ಲಿ ಹೊರಳಾಡುವ ಗೊರೆಹಬ್ಬ ಆಚರಿಸಲಾಗುತ್ತೆ. ಆದರೆ ಈ ಬಾರಿ ಅಕಾಲಿಕ ನಿಧನ ಹೊಂದಿದ ಪುನೀತ್ ಭಾವಚಿತ್ರ ಹಿಡಿದು ಗ್ರಾಮಸ್ಥರು ಜೈಕಾರ ಕೂಗಿ ನಮನ ಸಲ್ಲಿಸಿದ್ದಾರೆ.

  • ಅಪ್ಪು ಫೋಟೋಗಳಿಗೆ ಭಾರೀ ಬೇಡಿಕೆ – ನಮ್ಮ ಮನೆ ದೇವರೆಂದ ಅಭಿಮಾನಿಗಳು!

    ಅಪ್ಪು ಫೋಟೋಗಳಿಗೆ ಭಾರೀ ಬೇಡಿಕೆ – ನಮ್ಮ ಮನೆ ದೇವರೆಂದ ಅಭಿಮಾನಿಗಳು!

    ಚಾಮರಾಜನಗರ: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ 15 ದಿನಗಳೇ ಕಳೆದಿವೆ. ಆದರೆ ಅವರ ನೆನಪು ಕೋಟ್ಯಂತರ ಹೃದಯಗಳನ್ನು ಕಾಡುತ್ತಿದೆ. ಹೀಗಿರುವಾಗ ಪುನೀತ್ ತವರು ಜಿಲ್ಲೆ ಚಾಮರಾಜನಗರದಲ್ಲಿ ಕಾಲವಾದ ತರುವಾಯ ಇದೀಗ ಪುನೀತ್ ಫೋಟೋಗೆ ಬೇಡಿಕೆ ಹೆಚ್ಚಾಗಿದೆ.

    ದೇವರ ಫೋಟೋಗಿಂತ ಹೆಚ್ಚಾಗಿ ಪುನೀತ್ ಫೋಟೋವನ್ನು ಕೊಂಡೊಯ್ದು ಜನ ಪೂಜಿಸಲು ಶುರು ಮಾಡಿದ್ದಾರೆ. ಪುನೀತ್ ಬದುಕಿದ್ದಾಗ ಸಾವಿರಾರು ಜನರಿಗೆ ನೆರವಾಗಿದ್ದಾರೆ. ಅವರೊಬ್ಬ ಆದರ್ಶ ವ್ಯಕ್ತಿಯಾಗಿ ಬದುಕಿದ್ದರು. ಇದೀಗ ಅವರಿಲ್ಲ ಆದರೂ ಅಭಿಮಾನಿಗಳ ಮನೆ, ಮನಗಳಲ್ಲಿ ಪುನೀತ್ ಆರಾಧನೆ ಜೋರಾಗಿದೆ. ಕಳೆದ 15 ದಿನಗಳಲ್ಲಿ 300ಕ್ಕೂ ಹೆಚ್ಚು ಫೋಟೋಗಳನ್ನು ಜನ ಕೊಂಡೊಯ್ದಿದ್ದಾರೆ. ಇದೀಗ ಮತ್ತೇ ಪುನೀತ್ ಫೋಟೋ ಮನೆಗೆ ಕೊಂಡೊಯ್ಯಲು ಆರ್ಡರ್ ಬರ್ತಿದೆ ಅಂತಾ ಫೋಟೋ ಅಂಗಡಿ ಮಾಲೀಕರು ಹೇಳ್ತಿದ್ದಾರೆ.

    ಜೊತೆಗೆ ನಾವು ಮನೆಗೆ ಫೋಟೋ ಕೊಂಡೊಯ್ದು ದೇವರ ಮನೆಯಲ್ಲಿ ಇಟ್ಟು ಆರಾಧನೆ ಮಾಡ್ತಿದ್ದೀವಿ ಅಂತಾ ಅಭಿಮಾನಿಗಳು ಹೇಳ್ತಿದ್ದಾರೆ. ಒಟ್ಟಿನಲ್ಲಿ ಪುನೀತ್ ನಿಧನವಾಗಿರಬಹುದು ಆದರೆ ಅವರನ್ನು ದೇವರಂತೆ ಆರಾಧಿಸುವ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಇದನ್ನೂ ಓದಿ: ಪುನೀತ್‍ಗೆ ಚಾಮರಾಜನಗರ ಜಿಲ್ಲೆಯ ಅಪೂರ್ವ ಗೌರವ – 46 ಸಾವಿರ ನೇತ್ರದಾನಕ್ಕೆ ಮಹಾಭಿಯಾನ

  • ಪುನೀತ್‍ಗೆ ಚಾಮರಾಜನಗರ ಜಿಲ್ಲೆಯ ಅಪೂರ್ವ ಗೌರವ – 46 ಸಾವಿರ ನೇತ್ರದಾನಕ್ಕೆ ಮಹಾಭಿಯಾನ

    ಪುನೀತ್‍ಗೆ ಚಾಮರಾಜನಗರ ಜಿಲ್ಲೆಯ ಅಪೂರ್ವ ಗೌರವ – 46 ಸಾವಿರ ನೇತ್ರದಾನಕ್ಕೆ ಮಹಾಭಿಯಾನ

    – ಕಣ್ಣಿನ ಆಸ್ಪತ್ರೆ ಸ್ಥಾಪನೆಗೂ ನಿರ್ಧಾರ

    ಚಾಮರಾಜನಗರ: ಕರುನಾಡಿನ ರಾಜರತ್ನ ಪುನೀತ್, ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅಪ್ಪು ಪ್ರೇರಣೆಯಿಂದ ಅನೇಕ ಜನರು ನಮ್ಮ ನೇತ್ರಗಳನ್ನು ದಾನ ಮಾಡುತ್ತಿದ್ದಾರೆ. ಅಪ್ಪು ಆದರ್ಶಗಳನ್ನು ಇನ್ನಷ್ಟು ಸಾರ್ಥಕತೆಗೊಳಿಸಲು ಚಾಮರಾಜನಗರ ಜಿಲ್ಲಾಡಳಿತ ಮಹತ್ತರ ಅಭಿಯಾನವನ್ನು ಕೈಗೊಂಡಿದೆ.

    ಪವರ್‍ಸ್ಟಾರ್ ಪುನೀತ್ ರಾಜ್ ಕುಮಾರ್ ಆದರ್ಶಗಳು ಇಡೀ ಸಮಾಜಕ್ಕೆ ಮಾದರಿಯಾಗಿವೆ. ತವರು ಜಿಲ್ಲೆ ಚಾಮರಾಜನಗರದ ಪ್ರವಾಸೋದ್ಯಮ ಅಭಿವೃದ್ಧಿಗೆ ಅಪ್ಪು ರಾಯಭಾರಿಯಾಗಿದ್ರು. ಹೀಗಾಗಿ ಅಪ್ಪು ಆದರ್ಶಗಳನ್ನು ಮತ್ತಷ್ಟು ಸಾರ್ಥಕಗೊಳಿಸಲು ಚಾಮರಾಜನಗರ ಜಿಲ್ಲಾಡಳಿತ ಮಹತ್ವದ ಹೆಜ್ಜೆ ಇಟ್ಟಿದೆ. ಇದನ್ನೂ ಓದಿ: ಅಪ್ಪು ನಟನೆಯ ಚಿತ್ರದ ಶೀರ್ಷಿಕೆಗಳಲ್ಲೇ ಗೀತೆ ರಚನೆ ಮಾಡಿದ ತಂದೆ, ಜೀವ ತುಂಬಿದ ಮಗಳು

    ಈ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲಾಡಳಿತ ಅಪ್ಪುರವರ ನೇತ್ರದಾನದ ಆದರ್ಶ ಇಟ್ಟುಕೊಂಡು, ಮಹತ್ವದ ಅಭಿಯಾನಕ್ಕೆ ಅಡಿ ಇಟ್ಟಿದೆ. ಪುನೀತ್ 46ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಹೀಗಾಗಿ, ನವೆಂಬರ್ ಮಾಸಾಂತ್ಯದೊಳಗೆ 46 ಸಾವಿರ ಜನರನ್ನು ನೇತ್ರದಾನಕ್ಕೆ ನೋಂದಾಯಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ರೆಡ್‍ಕ್ರಾಸ್ ಸಂಸ್ಥೆ ಹಾಗೂ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ, ನೇತ್ರದಾನ ಶಿಬಿರಗಳನ್ನು ಆಯೋಜಿಸಲು ನಿರ್ಧರಿಸಿದೆ.

    ನೇತ್ರದಾನ ಅಭಿಯಾನವಷ್ಟೇ ಅಲ್ಲ, ಜಿಲ್ಲೆಯಲ್ಲಿ ನಿರ್ಮಿಸಲಾಗುವ ಕಣ್ಣಿನ ಅಸ್ಪತ್ರೆಗೆ ಪುನೀತ್ ರಾಜ್‍ಕುಮಾರ್ ಹೆಸರನ್ನೇ ಇಡುವ ಮೂಲಕ ಗೌರವ ಸಲ್ಲಿಸಲು ಜಿಲ್ಲಾಡಳಿತ ತೀಮಾನಿಸಿದೆ.

  • ಅಪ್ಪು ಸಮಾಧಿ ಭೇಟಿಗೆ ಸೈಕಲ್‍ನಲ್ಲಿ ಹೊರಟ ಅಭಿಮಾನಿ

    ಅಪ್ಪು ಸಮಾಧಿ ಭೇಟಿಗೆ ಸೈಕಲ್‍ನಲ್ಲಿ ಹೊರಟ ಅಭಿಮಾನಿ

    ಬಾಗಲಕೋಟೆ: ಇತ್ತೀಚೆಗೆ ನಮ್ಮನ್ನೆಲ್ಲ ಅಗಲಿದ ಪುನೀತ್ ರಾಜ್ ಕುಮಾರ್ ಅವರು ಸಮಾಧಿಗೆ ಭೇಟಿ ನೀಡಲು ಬಾಗಲಕೋಟೆ ಅಭಿಮಾನಿಯೊಬ್ಬ ಸೈಕಲ್ ಮೇಲೆ ಸವಾರಿ ಬೆಳೆಸಿದ್ದಾನೆ. ಅಪ್ಪು ಸಮಾಧಿ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಲು ಮುಂದಾಗಿರುವ ಅಭಿಮಾನಿ, ಸೈಕಲ್ ಯಾತ್ರೆ ಹಮ್ಮಿಕೊಂಡಿದ್ದಾನೆ.

    ಮೂಲತಃ ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮದ ರಾಘವೇಂದ್ರ ಗಾಣಿಗೇರ್ ಎಂಬ ವ್ಯಕ್ತಿಯೇ, ಯುವರತ್ನನ ಅಭಿಮಾನಿಯಾಗಿದ್ದು, ನಿನ್ನೆ ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮದಿಂದ ಆರಂಭಿಸಿದ್ದ ಸೈಕಲ್ ಯಾತ್ರೆ ಆರಂಭಿಸಿದ್ದಾನೆ. ನಿನ್ನೆ ರಾತ್ರಿ ಹುನಗುಂದ ತಲುಪಿ ಅಲ್ಲಿ ವಾಸ್ತವ್ಯ ಹೂಡಿದ್ದ ರಾಘವೇಂದ್ರ, ಇಂದು ಬೆಳಗ್ಗೆ ಹುನಗುಂದ ಪಟ್ಟಣದಿಂದ ಸೈಕಲ್ ಯಾತ್ರೆ ಶುರುವಿಟ್ಟುಕೊಂಡಿದ್ದಾನೆ. ಇದನ್ನೂ ಓದಿ: ಪವರ್ ಸ್ಟಾರ್ ಮನೆಗೆ ಮುರುಘಾ ಶ್ರೀ ಭೇಟಿ – ಬಸವ ಶ್ರೀ ಪ್ರಶಸ್ತಿ ಪ್ರದಾನಕ್ಕೆ ಅಶ್ವಿನಿಗೆ ಆಹ್ವಾನ

    ರಾಘವೇಂದ್ರ ಹುನಗುಂದ ತಲುಪುತ್ತಿದ್ದಂತೆ ಪಟ್ಡಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಅಪ್ಪು ಅಭಿಮಾನಿಗಳು ರಾಘವೇಂದ್ರಗೆ ಸನ್ಮಾನ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಬಾದರದಿನ್ನಿ ಗ್ರಾಮದಿಂದ ಬೆಂಗಳೂರುವರೆಗೆ 600 ಕಿಮೀ ಸೈಕಲ್ ಯಾತ್ರೆ ಮಾಡಲು ನಿರ್ಧರಿಸಿರುವ ರಾಘವೇಂದ್ರ, ಕನ್ನಡಧ್ವಜ, ಸೈಕಲ್ ಹಿಂದೆ ಮುಂದೆ ಅಪ್ಪು ಭಾವಚಿತ್ರ ಕಟ್ಟಿಕೊಂಡು ಸೈಕಲ್ ಯಾತ್ರೆ ಹೊರಟಿದ್ದಾನೆ.

    ಅಪ್ಪು ಸಮಾದಿಗೆ ತೆರಳಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ವಾಪಸ್ ಆಗಲಿದ್ದಾನೆ. ಅಪ್ಪು ಮೃತಪಟ್ಟ ದಿನವೇ ಹೋಗಬೇಕೆಂದುಕೊಂಡಿದ್ದ ಅಭಿಮಾನಿ, ಆರೋಗ್ಯ ಸರಿ ಇಲ್ಲದ ಕಾರಣ ಈಗ ಸೈಕಲ್ ಯಾತ್ರೆ ಹೊರಟಿರುವುದಾಗಿ ತಿಳಿಸಿದ್ದಾನೆ. ಹುನಗುಂದ, ಇಳಕಲ್, ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿನ ಅಪ್ಪು ಸಮಾಧಿವರೆಗೆ ರಾಘವೇಂದ್ರ ಸೈಕಲ್ ಯಾತ್ರೆ ಚಲಿಸಲಿದೆ. ಇದನ್ನೂ ಓದಿ: ಅಪ್ಪು ನಟನೆಯ ಚಿತ್ರದ ಶೀರ್ಷಿಕೆಗಳಲ್ಲೇ ಗೀತೆ ರಚನೆ ಮಾಡಿದ ತಂದೆ, ಜೀವ ತುಂಬಿದ ಮಗಳು

  • ಪುನೀತ್ ಸರ್ ನನ್ನ ಜೀವನದಲ್ಲಿ 3 ಪ್ರಮುಖ ಪಾತ್ರ ವಹಿಸಿದ್ದಾರೆ- ಶೈನ್ ಶೆಟ್ಟಿ ಭಾವುಕ ಬರಹ

    ಪುನೀತ್ ಸರ್ ನನ್ನ ಜೀವನದಲ್ಲಿ 3 ಪ್ರಮುಖ ಪಾತ್ರ ವಹಿಸಿದ್ದಾರೆ- ಶೈನ್ ಶೆಟ್ಟಿ ಭಾವುಕ ಬರಹ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನಕ್ಕೆ ಇಡೀ ಚಿತ್ರರಂಗವೇ ಕಣ್ಣೀರು ಹಾಕುತ್ತಿದೆ. ನಟ ನಿಧನ ಹೊಂದಿ ಇಂದಿಗೆ 13 ದಿನ ಕಳೆದಿದೆ. ಇದೀಗ ನಟ ಶೈನ್ ಶೆಟ್ಟಿ ಅವರು ತನ್ನ ಜೀವನದಲ್ಲಿ ಅಪ್ಪು ಪ್ರಮುಖ ಪಾತ್ರ ವಹಿಸಿರುವುದನ್ನು ಮೆಲುಕು ಹಾಕುತ್ತಾ ಭಾವುಕರಾಗಿ ಬರೆದುಕೊಂಡಿದ್ದಾರೆ.

    ಹೌದು. ತಮಗೆ ಹೇಗೆ ಪುನೀತ್ ರಾಜ್ ಕುಮಾರ್ ಅವರು ಪರಿಚಯವಾದರು, ಆ ಬಳಿಕ ಅವರು ನನಗೆ ಹೇಗೆ ಬೆಂಬಲ ನೀಡಿದರು ಎಂಬುದರ ಕುರಿತು ಶೈನ್ ಶೆಟ್ಟಿ ಇನ್ ಸ್ಟಾದಲ್ಲಿ ಭಾರವಾದ ಮನಸ್ಸಿನಿಂದಲೇ ಬರೆದುಕೊಂಡಿದ್ದಾರೆ.

    ಶೈನ್ ಶೆಟ್ಟಿ ಬರೆದುಕೊಂಡಿದ್ದೇನು..?
    ಬದುಕು ಒಂದು ಸಿನಿಮಾ ಅನ್ನುವುದು ಎಷ್ಟು ನಿಜ. ಆ ಸಿನಿಮಾದ ಚಿತ್ರಕಥೆಯಲ್ಲಿ 3 ಭಾಗವಿದೆಯೋ ಹಾಗೆಯೆ ಪುನೀತ್ ರಾಜ್ ಕುಮಾರ್ ಸರ್ ನನ್ನ ಜೀವನದಲ್ಲಿ ಕೂಡ 3 ಪ್ರಮುಖ ಪಾತ್ರ ವಹಿಸಿದ್ದಾರೆ. ಇದನ್ನೂ ಓದಿ: ಅಪ್ಪು ಸರ್ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇವೆ: ರಾಧಿಕಾ ಪಂಡಿತ್

     

    View this post on Instagram

     

    A post shared by SHINE SHETTY (@shineshettyofficial)

    ಮೊದಮೊದಲು ನನ್ನ ಈ ಕಲಾ ಪ್ರವಾಸ ಶುರುವಾದಾಗ, ಪುನೀತ್ ಸರ್ ಅವರನ್ನು ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಆಗಿ ಎದುರು ನೋಡುತ್ತಿದ್ದೆ, ಬೆಳ್ಳಿ ಪರದೆಯ ಮೇಲೆ ಅವರು ಮೂಡಿಸಿದ ಜಾದೂಗೆ ಬೆರಗಾಗಿದ್ದೆ. ಅವರ ಜೊತೆ ನಟಿಸಲು ಹಾಗೂ ಹಲವಾರು ಬಾರಿ ರಂಗಮಂಚಿಕೆ ಹಂಚಿಕೊಳ್ಳಲು ಅವಕಾಶ ದೊರೆತಾಗ ಒಂದು ಪುಟ್ಟ ಗೆಳೆತನ ಚಿಗುರೊಡೆಯಿತು. ಆಗ ಅವರು ನನ್ನ ಆಸೆ, ಪ್ರತಿಭೆಗಳನ್ನು ಹೊಗಳಿದಲ್ಲದ್ದೆ, ಅವರ ಅತ್ಯಮೂಲ್ಯವಾದ ಮಾರ್ಗದರ್ಶನ ನೀಡಿ ನನ್ನ ಗುರಿಯನ್ನು ತಲುಪಲು ಪ್ರೇರಿಸಿದರು. ಈ ಸಿನಿಮಾ ಫೀಲ್ಡ್ ನಲ್ಲಿ ಉಳಿಯೋದಕ್ಕೆ ಅಥವಾ ಬೆಳೆಯೋದಕ್ಕೆ ಅಪ್ಪು ಸರ್ ರವರ ಪ್ರೋತ್ಸಾಹ ಒಂದು ಕಾರಣ ಎಂದು ಹೇಳಿದರೆ ತಪ್ಪಾಗಲಾರದು. ಇದನ್ನೂ ಓದಿ: ಈಡೇರಿತು ಕನ್ನಡಿಗರ ಕಣ್ಮಣಿಯ ಮಹದಾಸೆ – 40 ಸಾವಿರ ಅಭಿಮಾನಿಗಳಿಗೆ ಒಟ್ಟಿಗೇ ಊಟ!

    ಆ ಸ್ನೇಹ ಭ್ರಾತೃತ್ವದ ರೂಪ ಪಡೆಯಲು ಬಹಳ ಸಮಯ ಬೇಕಾಗಿರಲಿಲ್ಲ. ಪುನೀತ್ ಸರ್ ಅವರನ್ನು ಅಷ್ಟು ಕೊಂಡಾಡಲು ಅವರ ಸುತ್ತಮುತ್ತ ಇದ್ದ ಜನರನ್ನು ವೃತ್ತಿಯಲ್ಲಷ್ಟೇ ಅಲ್ಲ ವೈಯಕ್ತಿಕ ವಿಚಾರದಲ್ಲಿಯೂ ಹುರಿದುಂಬಿಸುತ್ತಿದ್ದರೆಂಬುದೇ ಸಾಕ್ಷಿ. ಗಲ್ಲಿ ಕಿಚನ್ ಶುರುವಾದಾಗ ತಮ್ಮ ಬೆಂಬಲದ ಜೊತೆಗೆ ಉತ್ತಮ ಉದ್ಯಮಿಯಾಗುವ ಹಲವಾರು ಆಲೋಚನೆಗಳನ್ನೂ ವ್ಯಕ್ತಪಡಿಸಿದರು. ಇದನ್ನೂ ಓದಿ:  ಅಪ್ಪುವಿನಂತೆ ಆದರ್ಶರಾದ ಅಭಿಮಾನಿ ದೇವರುಗಳು- 12 ದಿನಗಳ ಕಾರ್ಯ ನಿರ್ವಿಘ್ನ, ಎಲ್ಲವೂ ಶಾಂತ

    ಬೆಳಿತಾ ಬೆಳಿತಾ ಆ ಮಿನುಗು ತಾರೆ, ಕಷ್ಟ ಪಡ್ತಾ ಆ ಸಲಹೆಗಾರ, ಕಾಲ ಕ್ರಮೇಣ ಪ್ರೀತಿಯ ಸಹೋದರನಾಗಿ ಬದಲಾಗಿ ನನ್ನ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿದ್ದಾರೆ. ನೀವು ಕಲಿಸಿದ ಪಾಠ, ಮೌಲ್ಯಗಳನ್ನು ಎಂದಿಗೂ ಜೀವಂತವಾಗಿ ಇರಿಸಿಕೊಳ್ಳುತ್ತಾ.. ಹೋಗ್ಬನ್ನಿ ಪುನೀತ್ ಸರ್ ಎಂದು ಬರೆದುಕೊಂಡು ಶೈನ್ ಭಾವುಕರಾಗಿದ್ದಾರೆ.

    ಅಕ್ಟೋಬರ್ 29ರಂದು ಶುಕ್ರವಾರ ಬೆಳಗ್ಗೆ ಮನೆಯಲ್ಲಿ ವರ್ಕೌಟ್ ಮಾಡಿದ ಸಂದರ್ಭದಲ್ಲಿ ಅಪ್ಪುಗೆ ಆಯಾಸ ಕಾಣಿಸಿಕೊಂಡಿತು. ಹಾಗೆಯೇ ಸ್ಟೀಮ್ ಬಾತ್ ಮಾಡಿಕೊಂಡು ಪತ್ನಿ ಜೊತೆ ಸ್ಥಳೀಯ ರಮಣಶ್ರೀ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿಕೊಂಡು ಇನ್ನೇನು ಹೊರಡುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕಾರಿನಲ್ಲಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಾದರೂ, ಅದು ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು.

    ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ವಿಧಿ ವಿಧಾನಗಳ ಮೂಲಕವಾಗಿ ಅಪ್ಪು ಅಂತ್ಯಕ್ರಿಯೆ ಮಾಡಲಾಯಿತ್ತು. ಅದೇ ದಿನ ರಾತ್ರಿಯಿಂದಲೇ ಅಪ್ಪು ಸಮಾಧಿ ದರ್ಶನ ಪಡೆಯಲು ಜನಸಾಗರವೇ ಹರಿದುಬರುತ್ತಿದೆ. ಸೋಮವಾರ 11 ದಿನದ ಕಾರ್ಯಕ್ರಮವನ್ನು ಕುಟುಂಬಸ್ಥರು ನೆರವೇರಿಸಿ 12ನೇ ದಿನವಾದ ನಿನ್ನೆ ಪುನೀತ್ ಮಹದಾಸೆ, ಮನದಾಸೆಯಂತೆ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡಲಾಗಿತ್ತು.

  • ಅಪ್ಪುವಿನಂತೆ ಆದರ್ಶರಾದ ಅಭಿಮಾನಿ ದೇವರುಗಳು- 12 ದಿನಗಳ ಕಾರ್ಯ ನಿರ್ವಿಘ್ನ, ಎಲ್ಲವೂ ಶಾಂತ

    ಅಪ್ಪುವಿನಂತೆ ಆದರ್ಶರಾದ ಅಭಿಮಾನಿ ದೇವರುಗಳು- 12 ದಿನಗಳ ಕಾರ್ಯ ನಿರ್ವಿಘ್ನ, ಎಲ್ಲವೂ ಶಾಂತ

    ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಂತೆ ಅವರ ಅಭಿಮಾನಿ ದೇವರುಗಳು ಕೂಡ ಆದರ್ಶರಾಗಿದ್ದಾರೆ. ಅಪ್ಪು 12 ದಿನಗಳ ಕಾರ್ಯ ನಿರ್ವಿಘ್ನ. ಈ ಮೂಲಕ ಎಲ್ಲವೂ ಶಾಂತಿಯುತವಾಗಿ ನಡೆದಿದೆ. ಅಪ್ಪು ಸಾವಿನ ಸುದ್ದಿ, ಅಂತಿಮ ದರ್ಶನ, ಅಂತ್ಯಕ್ರಿಯೆ, ಪುಣ್ಯಾರಾಧನೆ, ಅನ್ನ ಸಂತರ್ಪಣೆವರೆಗೂ ಅಭಿಮಾನಿಗಳು ಶಾಂತಚಿತ್ತದಿಂದ ವರ್ತಿಸಿದ್ದಾರೆ. ಈ ಮೂಲಕ ‘ಅಭಿ’ಮಾನಿ ಸಾಗರ ಅಪ್ಪುವನ್ನು ಶಾಂತಿಯುತವಾಗಿ ಬೀಳ್ಕೊಟ್ಟಿದೆ.

    * ಅ.29 – ಅಪ್ಪುಗೆ ಹೃದಯಾಘಾತ, ನಿಧನ:
    ಅಕ್ಟೋಬರ್ 29ರಂದು ಮಧ್ಯಾಹ್ನ 12 ಗಂಟೆಗೆ ಅಪ್ಪುಗೆ ಗಂಟೆ ದೊಡ್ಮನೆ ಭಕ್ತರ ಹೃದಯ ಘಾಸಿಯಾದ ದಿನ. ಹೃದಯ ಚುಚ್ಚುತ್ತಿದ್ದರೂ ಹೊರತು ಅಭಿಮಾನಿಗಳು ಸಂಯಮ, ತಾಳ್ಮೆ ಬಿಟ್ಟುಕೊಡ್ತಿಲ್ಲ. ವಿಕ್ರಂ ಆಸ್ಪತ್ರೆ ಬಳಿ ಕಣ್ಣೀರು ಹಾಕಿ,ಬಿದ್ದು ಒದ್ದಾಡಿದರು. ಆದರೆ ಕಾನೂನು ಕಟ್ಟಳೆ ಮೀರಲಿಲ್ಲ. ಮಧ್ಯಾಹ್ನ 3 ಗಂಟೆ ಸದಾಶಿವನಗರದ ನಿವಾಸದಲ್ಲಿ ಪುನೀತ್ ಪಾರ್ಥೀವ ಶರೀರ ಇದ್ದಾಗಲೂ ವಿನಯತೆ – ತಾಳ್ಮೆಯಲ್ಲೂ ಅಭಿಮಾನಿಗಳು ‘ರಾಜಕುಮಾರ’ನ ಹಿಂಬಾಲಿಸಿದರು.

    * ಅ.29 – ಅಂತಿಮ ದರ್ಶನ:
    ಅಕ್ಟೋಬರ್ 7ರ ಸಂಜೆ 7 ಗಂಟೆಗೆ ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ. ಭರ್ತಿ 35 ಗಂಟೆಗಳು ಅಪ್ಪು ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. 25 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಮಳೆ, ಚಳಿ, ಹಗಲು ರಾತ್ರಿ ನಿಂತರೂ ದೊಡ್ಮನೆ ಅಭಿಮಾನಿ ದೇವರುಗಳು ವಿಚಲಿತರಾಗಿರಲಿಲ್ಲ.

    * ಅ. 31. – ಅಪ್ಪು ಅಂತ್ಯಕ್ರಿಯೆ:
    ಅಕ್ಟೋಬರ್ 31 ರ ಬೆಳಗ್ಗೆ 5 ಗಂಟೆ ಅಪ್ಪು ಅಂತಿಮ ಯಾತ್ರೆಯ ವೇಳೆ ತಮ್ಮ ಆರಾಧ್ಯ ದೈವದ ಧ್ಯೇಯಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡರು. ರಸ್ತೆಗಳ ಇಕ್ಕೆಲಗಳಲ್ಲಿ ನಿಂತು ದರ್ಶನ ಪಡೆದರು. ಬೆಳಗ್ಗೆ 8.30ಕ್ಕೆ ಪ್ರೀತಿಯ ಅಪ್ಪು ಅಂತ್ಯಕ್ರಿಯೆ ನಡೆದಿದ್ದು, ಅಂತಿಮ ವಿದಾಯ ಹೇಳುವಾಗಲೂ ದೊಡ್ಮನೆ ಫ್ಯಾನ್ಸ್ ದೊಡ್ಡತನ ಮೆರೆದಿದ್ದಾರೆ. ಇದನ್ನೂ ಓದಿ: ಸೌದೆ ಹಿಡಿದು ದೇವಿರಮ್ಮನ ದರ್ಶನ – ಅಪ್ಪು ಅಭಿಮಾನಿಯ ವಿಶೇಷ ಹರಕೆ!

    * ನ.2 – ಹಾಲು-ತುಪ್ಪ:
    ನವೆಂಬರ್ 2 ಬೆಳಗ್ಗೆ 11.30 ಅಪ್ಪು ಹಾಲು- ತುಪ್ಪ ಈ ವೇಳೆಯೂ ಅಭಿಮಾನಿ ದೇವರುಗಳ ದೊಡ್ಡತನ ಕರುನಾಡಲ್ಲಿ ಆದರ್ಶವಾಯಿತು.

    * ನ.3 – ಸಮಾಧಿ ದರ್ಶನ:
    ನವೆಂಬರ್ 3ರ ಬೆಳಗ್ಗೆ 9 ಗಂಟೆಯಿಂದ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಯಿತು. ಅತ್ತು ಅತ್ತು ಗೋಳಾಡಿದರು ಹೊರತು ಅಭಿಮಾನಿಗಳೂ ಕಾನೂನು ವ್ಯಾಪ್ತಿಯ ಗಡಿ ದಾಟಲಿಲ್ಲ.

    * ನ.8 – ಪುಣ್ಯತಿಥಿ
    ನವೆಂಬರ್ 8 ಅಪ್ಪು ಪುಣ್ಯತಿಥಿ ಕಾರ್ಯಕ್ರಮವಿತ್ತು. ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅಭಿಮಾನಿಗಳು ಜಗತ್ತಿಗೇ ಆದರ್ಶಪ್ರಾಯವಾದರು. ಈ ಮೂಲಕ ರಾಜಮಾರ್ಗಕ್ಕೆ ಚ್ಯುತಿ ತರಲಿಲ್ಲ. ಇದನ್ನೂ ಓದಿ: ಈಡೇರಿತು ಕನ್ನಡಿಗರ ಕಣ್ಮಣಿಯ ಮಹದಾಸೆ – 40 ಸಾವಿರ ಅಭಿಮಾನಿಗಳಿಗೆ ಒಟ್ಟಿಗೇ ಊಟ!

    *ನ. 9 – ಅನ್ನಸಂತರ್ಪಣೆ
    ನವೆಂಬರ್ 9 ಅಪ್ಪು ಹೆಸರಲ್ಲಿ ಅನ್ನಸಂತರ್ಪಣೆಯಲ್ಲಿ ದಾಖಲೆ ಸೃಷ್ಟಿಯಾಯ್ತು. 40 ಸಾವಿರ ಅಭಿಮಾನಿಗಳಿಗೆ ಬಾಳೆ ಎಲೆಊಟ. ಕಣ್ಣೀರ ಲೇಪನ ಮಾಡಿ ಅಭಿಮಾನಿಗಳು ಊಟ ಸೇವಿಸಿದರು. ಹೀಗೆ 12 ದಿನವೂ ಅಪ್ಪು ಅಭಿಮಾನಿ ದೇವರುಗಳ ತಾಳ್ಮೆ ಕೈಮೀರಲಿಲ್ಲ. ಅಭಿಮಾನಿಗಳನೇ ನಮ್ಮನೆ ದೇವರು ಅಂತ ಹಾಡಿದ್ದ ಅಪ್ಪುಗೆ ಅಪ್ಪುಗೆಯ ವಿದಾಯ ತಿಳಿಸಲಾಯಿತು.