Tag: ಅಪ್ಪು

  • ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್

    ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್

    ಪ್ರತಿ ಬಾರಿಯೂ ಅಭಿಮಾನಿಗಳ ಜತೆ ಅಥವಾ ಮಂತ್ರಾಲಯದಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಜಗ್ಗೇಶ್, ಈ ಬಾರಿ ಬರ್ತಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಪುನೀತ್ ನಿಧನದ ನೋವಿನಲ್ಲಿರುವ ಅವರು ‘ಯಾವ ಸಡಗರಕ್ಕೆ ಹುಟ್ಟು ಹಬ್ಬ ಆಚರಿಸಿಕೊಳ್ಳಬೇಕು’ ಎನ್ನುವ ಅರ್ಥದಲ್ಲಿ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ : ಟ್ರೋಲಿಗರ ಚಳಿ ಬಿಡಿಸಿದ ಸನ್ನಿ ಲಿಯೋನ್

    “ಈ ಬಾರಿ ನನ್ನ 59ನೇ ಹುಟ್ಟು ಹಬ್ಬವನ್ನು ಆಚರಿಸುವುದಿಲ್ಲ ಹಾಗೂ ಮನಸ್ಸೂ ಇಲ್ಲ. ಕಾರಣ ಪ್ರತಿ ಮಾರ್ಚ್ 17ಕ್ಕೆ ತಪ್ಪದೇ ಬರುತ್ತಿದ್ದ ಪುನೀತ್ ಕರೆ ಮತ್ತೆಂದೂ ಬರದಂತಾಗಿದೆ” ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಜಗ್ಗೇಶ್, ಪುನೀತ್ ಜತೆ ತೆಗೆಸಿಕೊಂಡಿದ್ದ ಕೊನೆಯ ಚಿತ್ರವನ್ನೂ ಅವರು ಹಾಕಿದ್ದಾರೆ. ಇದನ್ನೂ ಓದಿ : ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ

    ಪುನೀತ್ ಮತ್ತು ಜಗ್ಗೇಶ್ ಮಾ.17ರಂದು ಹುಟ್ಟಿದವರು. ಹಾಗಾಗಿ ಎಷ್ಟೋ ಸಲ ಒಟ್ಟಿಗೆ ಮಂತ್ರಾಲಯದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡದ್ದು ಇದೆ. ಒಟ್ಟಿಗೆ ಅಲ್ಲಿಗೆ ಪ್ರಯಾಣ ಮಾಡಿದ್ದೂ ಇದೆ. ಜಗ್ಗೇಶ್ ಇರುವ ಮನೆ ಹತ್ತಿರ ಪುನೀತ್ ಅವರು ಬಂದರೆ, ತಪ್ಪದೇ ಜಗ್ಗೇಶ್ ಅವರಿಗೆ ಕರೆ ಮಾಡುತ್ತಿದ್ದರು. ಪುನೀತ್ ನಿಧನದ ಒಂದು ವಾರದ ಮುಂಚೆಯೇ ಒಟ್ಟಿಗೆ ಇದ್ದರು. ಇಬ್ಬರ ಮಧ್ಯೆ ಒಂದೊಳ್ಳೆ ಬಾಂಧವ್ಯ ಕೂಡ ಇತ್ತು. ಹೀಗಾಗಿ ಪುನೀತ್ ನಿಧನದ ನೋವಿನಲ್ಲಿರುವ ಜಗ್ಗೇಶ್ ಈ ಬಾರಿ ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ : ಆ ಏರಿಯಾದಲ್ಲಿ ಪುನೀತ್ ನಟನೆಯ ಜೇಮ್ಸ್ ರಿಲೀಸ್ ಗೆ 12 ಕೋಟಿ ಕೇಳಿದ್ರಾ ವಿತರಕರು?

    ಸದ್ಯ ಜಗ್ಗೇಶ್, ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಪುನೀತ್ ಅವರ ಸಿನಿಮಾದ ಮೂಲಕ ಈ ಸಂಸ್ಥೆ ಹುಟ್ಟಿಕೊಂಡಿದ್ದು ಎನ್ನುವುದು ವಿಶೇಷ.

  • ಆ ಏರಿಯಾದಲ್ಲಿ ಪುನೀತ್ ನಟನೆಯ ಜೇಮ್ಸ್ ರಿಲೀಸ್ ಗೆ 12 ಕೋಟಿ ಕೇಳಿದ್ರಾ ವಿತರಕರು?

    ಆ ಏರಿಯಾದಲ್ಲಿ ಪುನೀತ್ ನಟನೆಯ ಜೇಮ್ಸ್ ರಿಲೀಸ್ ಗೆ 12 ಕೋಟಿ ಕೇಳಿದ್ರಾ ವಿತರಕರು?

    ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ಕುರಿತಾದ ಸುದ್ದಿಗಳು ಕ್ಷಣಕ್ಕೊಂದು ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿವೆ. ಮಾ.17 ರಂದು ಅಪ್ಪು ಹುಟ್ಟಿದ ದಿನ. ಅಂದೇ ಈ ಸಿನಿಮಾ ರಿಲೀಸ್ ಆಗುತ್ತಿದೆ. ಜತೆಗೆ ಪುನೀತ್ ನಾಯಕನಾಗಿ ನಟಿಸಿರುವ ಕೊನೆಯ ಚಿತ್ರವಿದು. ಅಲ್ಲದೇ, ಮೂವರು ಸಹೋದರರು ಇದೇ ಮೊದಲ ಬಾರಿಗೆ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಚಿತ್ರಕ್ಕೆ ಸಾಕಷ್ಟು ಬೇಡಿಕೆ ಬರುತ್ತಿದೆ. ಇದನ್ನೂ ಓದಿ : ಸೋನಾಕ್ಷಿ ಸಿನ್ಹಾ ಮೋಸ ಮಾಡಿದ್ರಾ? ಅಸಲಿ ಕಥೆ ಏನು?

    ಸಿನಿಮಾ ಬಿಡುಗಡೆ ದಿನ ಅಭಿಮಾನಿಯೊಬ್ಬ ಹತ್ತು ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಪುನೀತ್ ಹಬ್ಬವನ್ನೇ ಆಚರಿಸುತ್ತಿದ್ದಾನೆ. ರಾಜ್ಯಾದ್ಯಂತ ಅವತ್ತು ಪುನೀತ್ ಕಟೌಟ್ ಗೆ ಹಾರ ಮತ್ತು ಹಾಲಿನ ಅಭಿಷೇಕ ಮಾಡಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಅಲ್ಲದೇ, ಬೃಹತ್ ಕಟೌಟ್ ಗಳು ಕೂಡ ಚಿತ್ರಮಂದಿರದ ಮುಂದೆ ಎದ್ದು ನಿಲ್ಲಲಿವೆ. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ: ಐದು ಕಾಂಟ್ರವರ್ಸಿಗಳು

    ಇಷ್ಟೆಲ್ಲದರ ಮಧ್ಯ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ವಿತರಕರು ಮುಗಿಬಿದ್ದು ಸಿನಿಮಾ ಖರೀದಿಸುತ್ತಿದ್ದಾರೆ. ಈಗಾಗಲೇ ಆಯಾ ಭಾಗ ಮತ್ತು ಏರಿಯಾಗಳಲ್ಲಿ ವಿತರಿಸಲು ಹಲವರು ಮುಂದೆ ಬಂದಿದ್ದಾರೆ. ಆದರೆ, ಆ ಏರಿಯಾ ಮಾತ್ರ ಭಾರೀ ಡಿಮಾಂಡ್ ಕ್ರಿಯೇಟ್ ಮಾಡಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಅಂತಾರಾಷ್ಟ್ರೀಯ ಮಹಿಳಾ ದಿನ: ನಟಿಯ ವರ್ಕೌಟ್ ವಿಡಿಯೋ ಗಿಫ್ಟ್ ಕೊಡ್ತಾರಂತೆ ರಾಮ್ ಗೋಪಾಲ್ ವರ್ಮಾ

    ಸಿನಿಮಾ ರಂಗದವರಿಗೆ ಬಿಕೆಟಿ ಏರಿಯಾ ಅಂದರೆ ಚಿನ್ನದ ಮೊಟ್ಟೆ ಇಡುವ ಕೋಳಿ ಇದ್ದಂತೆ. ವಿತರಕರ ಭಾಷೆಯಲ್ಲಿ ಬಿಕೆಟಿ ಅಂದರೆ ಬೆಂಗಳೂರು-ಕೋಲಾರ ಹಾಗೂ ತುಮಕೂರು ಎಂದರ್ಥ. ಈ ಮೂರು ಏರಿಯಾಗಳಲ್ಲಿ ಚಿತ್ರ ಬಿಡುಗಡೆ ವಿತರಕರೊಬ್ಬರು ನಿರ್ಮಾಪಕರಿಗೆ ಬರೋಬ್ಬರಿ 12 ಕೋಟಿ ಆಫರ್ ಕೊಟ್ಟರಂತೆ. ಆದರೆ, ನಿರ್ಮಾಪಕರು ಈ ಆಫರ್ ಒಪ್ಪಿಕೊಂಡಿಲ್ಲ ಎನ್ನಲಾಗುತ್ತಿದೆ. ಈ ಪ್ರಮಾಣದಲ್ಲಿ ಇದೊಂದೆ ಏರಿಯಾಗೆ ಇಷ್ಟು ಮೊತ್ತದ ಹಣಕ್ಕೆ ಎಂದೂ ವಿತರಣಾ ಹಕ್ಕು ಹೋಗಿಲ್ಲ. ಆದರೂ, ದಾಖಲೆಯ ಮೊತ್ತಕ್ಕೆ ಕೇಳಿದ್ದರೂ, ನಿರ್ಮಾಪಕರು ಕೊಟ್ಟಿಲ್ಲವಂತೆ. ಇದನ್ನೂ ಓದಿ : ಜೈಲಿನಲ್ಲಿರೋದು ವಾಸಿ ಅಂತಿದ್ದಾಳೆ ಪೂನಂ ಪಾಂಡೆ

    ಜೇಮ್ಸ್ ಬಿಡುಗಡೆ ಆಗುತ್ತಿರುವ ವಾರ ಯಾವುದೇ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಅಲ್ಲದೇ, ಈಗಾಗಲೇ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಒಂದು ರೀತಿಯಲ್ಲಿ ಕ್ರೇಜ್ ಕೂಡ ಕ್ರಿಯೇಟ್ ಆಗಿದೆ. ಹಾಗಾಗಿ ಬಿಕೆಟಿಯಲ್ಲೇ ನಿರ್ಮಾಪಕರಿಗೆ ಅಂದಾಜು 20 ಕೋಟಿ ಬರುವ ಅಂದಾಜಿದೆಯಂತೆ.

  • ವಾರದೊಳಗೆ 100 ಕೋಟಿ ಕ್ಲಬ್ ಸೇರಲಿದೆ ಪುನೀತ್ ನಟನೆಯ ಜೇಮ್ಸ್:  ಪಕ್ಕಾ ಲೆಕ್ಕಾಚಾರ

    ವಾರದೊಳಗೆ 100 ಕೋಟಿ ಕ್ಲಬ್ ಸೇರಲಿದೆ ಪುನೀತ್ ನಟನೆಯ ಜೇಮ್ಸ್: ಪಕ್ಕಾ ಲೆಕ್ಕಾಚಾರ

    ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ಅವರ ಹುಟ್ಟು ಹಬ್ಬದ ದಿನದಂದು ಬಿಡುಗಡೆ ಆಗುತ್ತಿದೆ. ಈಗಿನಿಂದಲೂ ಚಿತ್ರತಂಡ ಸರ್ವ ಸಿದ್ಧತೆ ಮಾಡಿಕೊಂಡಿದೆ. ಬೆಂಗಳೂರಿನ ಮಜೆಸ್ಟಿಕ್ ಚಿತ್ರಮಂದಿರದಲ್ಲಿ 81 ಅಡಿ ಪುನೀತ್ ಅವರ ಕಟೌಟ್ ನಿಲ್ಲಿಸಲು ಚಿತ್ರತಂಡ ಹೊರಟಿದೆ. ಅಲ್ಲದೇ ನಾಡಿನ ಮೂಲೆ ಮೂಲೆಯಲ್ಲಿರುವ ಚಿತ್ರತಂದಿರಗಳಿಗೂ ಪುನೀತ್ ಅವರ ಕಟೌಟ್ ಕಳುಹಿಸಲಾಗುತ್ತಿದೆ. ಒಂದು ಲೆಕ್ಕದಲ್ಲೇ ಪುನೀತ್ ಹುಟ್ಟು ಹಬ್ಬವನ್ನು ಉತ್ಸವದ ರೀತಿಯಲ್ಲಿ ಮಾಡಲು ಹೊರಟಿದೆ ಜೇಮ್ಸ್ ಚಿತ್ರತಂಡ. ಇದನ್ನೂ ಓದಿ : ಕಬ್ಜ ಸಿನಿಮಾದಲ್ಲಿ ಮಧುಮತಿಯಾದ ಶ್ರೀಯಾ ಶರಣ್: ಫಸ್ಟ್ ಲುಕ್ ರಿಲೀಸ್

    ಪುನೀತ್ ನಟನೆಯ ಕೊನೆ ಸಿನಿಮಾ ಇದಾಗಿದ್ದರಿಂದ ಈ ಸಿನಿಮಾವನ್ನು ದಾಖಲೆಯ ರೀತಿಯಲ್ಲಿ ಪ್ರದರ್ಶಿಸಬೇಕು ಎನ್ನುವುದು ನಿರ್ದೇಶಕ ಚೇತನ್ ಕನಸು. ಹಾಗಾಗಿಯೇ ಜಗತ್ತಿನಾದ್ಯಂತ ನಾಲ್ಕು ಸಾವಿರ ಚಿತ್ರಮಂದಿರಗಳಲ್ಲಿ ಜೇಮ್ಸ್ ಪ್ರದರ್ಶನವಾಗಲಿದೆಯಂತೆ. ಅಂದಾಜಿನ ಪ್ರಕಾರ ವಾರದೊಳಗೇ ಜೇಮ್ಸ್ ‘ನೂರು ಕೋಟಿ ಕ್ಲಬ್’ ಸೇರಲಿದೆ. ಇದನ್ನೂ ಓದಿ :  ಕೇರಳದಲ್ಲಿ ಸಿಕ್ತು ನಿರ್ದೇಶಕ ರಿಷಬ್ ಶೆಟ್ಟಿಗೆ ನ್ಯಾಯ

    ನಾಲ್ಕು ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದು ಹುಡುಗಾಟಿಕೆ ಅಲ್ಲ. ಆದರೂ, ಪುನೀತ್ ಅವರ ಅಭಿಮಾನಿಗಳ ಮೇಲಿನ ನಂಬಿಕೆಯಿಂದ ಅಷ್ಟು ಚಿತ್ರಮಂದಿರಗಳನ್ನು ಬುಕ್ ಮಾಡುತ್ತಿದ್ದಾರಂತೆ ನಿರ್ಮಾಪಕರು. ಅಂದು ಕನ್ನಡದಲ್ಲಿ ಬೇರೆ ಯಾವುದೇ ಸಿನಿಮಾ ರಿಲೀಸ್ ಆಗುವಂತೆ ಕಾಣುತ್ತಿಲ್ಲ. ಬೇರೆ ಭಾಷೆಯ ಚಿತ್ರಗಳು ಕೂಡ ಆದಷ್ಟು ಅವೈಡ್ ಮಾಡಲಾಗುತ್ತಿದೆ. ಇದನ್ನೂ ಓದಿ : ಜೇಮ್ಸ್ ಅಪ್ಪು ನಟನೆಯ ಕೊನೆ ಸಿನಿಮಾವಲ್ಲ: ಜೇಮ್ಸ್ ನಂತರವೂ ಮತ್ತೊಂದು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್

    ಬಹಾದೂರ್ ಚೇತನ್ ಕುಮಾರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಇದೊಂದು ಸಾಹಜ ಪ್ರಧಾನ ಸಿನಿಮಾ ಎನ್ನಲಾಗುತ್ತೆದೆ.

  • ಅಪ್ಪು ಸರ್ ಧ್ವನಿಯನ್ನ ಉಳಿಸಿಕೊಳ್ಳೋಕೆ ಆಗಲಿಲ್ಲ- ನಿರ್ದೇಶಕ ಚೇತನ್ ಭಾವುಕ

    ಅಪ್ಪು ಸರ್ ಧ್ವನಿಯನ್ನ ಉಳಿಸಿಕೊಳ್ಳೋಕೆ ಆಗಲಿಲ್ಲ- ನಿರ್ದೇಶಕ ಚೇತನ್ ಭಾವುಕ

    ಬೆಂಗಳೂರು: ಅಪ್ಪು ಸರ್ ಧ್ವನಿಯನ್ನು ಉಳಿಸಿಕೊಳ್ಳೋಕೆ ಆಗಲಿಲ್ಲ ಎಂದು ಜೇಮ್ಸ್ ನಿರ್ದೇಶಕ ಭರ್ಜರಿ ಚೇತನ್ ಭಾವುಕರಾದರು.

    ನಗರದಲ್ಲಿ ಜೇಮ್ಸ್ ಚಿತ್ರದ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ವೇದಿಕೆಯ ಮೇಲೆಯೇ ಭಾವುಕರಾದರು. ಅಪ್ಪು ಸರ್ ಬಾಯಿಂದ ಬಂದ ದಿನಾಂಕಕ್ಕೆ ಚಿತ್ರ ರಿಲೀಸ್ ಆಗ್ತಿದೆ. ದೊಡ್ಮನೆ ಋಣ ನಮ್ಮ ಮೇಲಿದೆ. ಅಪ್ಪು ಸರ್ ಧ್ವನಿಯನ್ನ ಉಳಿಸಿಕೊಳ್ಳೋಕೆ ಆಗಲಿಲ್ಲ. ಶಿವಣ್ಣ ಡಬ್ ಮಾಡಿದ್ದನ್ನ ನೆನಪಿಸಿಕೊಳ್ತೀನಿ ಎಂದರು.

    ರಾಘಣ್ಣ ಸಪೋರ್ಟ್ ಕೂಡ ತುಂಬಾ ಇದೆ. ‘ಜೇಮ್ಸ್’ ನನ್ನ 4ನೇ ಸಿನಿಮಾ, 5 ಭಾಷೆಗಳಲ್ಲಿ ಜೇಮ್ಸ್ ರಿಲೀಸ್ ಆಗುತ್ತೆ. ಸಿನಿಮಾದಲ್ಲಿ ಒಟ್ಟು 5 ಹಾಡುಗಳಿವೆ. ಸಿನಿಮಾ ನಾನು ಅಂದುಕೊಂಡಿದ್ದಕ್ಕಿಂತ ಬೇರೆ ರೀತಿಯಲ್ಲಿ ಬಂದಿದೆ ಎಂದು ಹೇಳಿದರು. ಇದನ್ನೂಓದಿ: ಕೊಪ್ಪಳಕ್ಕೆ ಏಕ್ ಲವ್ ಯಾ ತಂಡ ಭೇಟಿ- ಪ್ರೇಮ್, ರಕ್ಷಿತಾ ನೋಡಲು ಮುಗಿಬಿದ್ದ ಅಭಿಮಾನಿಗಳು

    ಜೇಮ್ಸ್ ಪವರ್ ಸ್ಟಾರ್ ಪುನೀತ್ ಕೊನೆಯ ಸಿನಿಮಾ. ಅಪ್ಪು ಹುಟ್ಟುಹಬ್ಬ (ಮಾರ್ಚ್ -17) ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಸುದ್ದಿಗೋಷ್ಠಿ ವೇಳೆ ಶಿವರಾಜ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನಿರ್ದೇಶಕ ಚೇತನ್, ನಿರ್ಮಾಪಕ ಕಿಶೋರ್ ಪತ್ತಿಕೊಂಡ ಭಾಗಿಯಾಗಲಿದ್ದಾರೆ. ಇದನ್ನೂಓದಿ: ಸೋನಾಕ್ಷಿ ಸಿನ್ಹಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

  • ಜೇಮ್ಸ್ ಹಾಡಿಗೆ ಕೌಂಟ್ ಡೌನ್ – ಇದು ಟ್ರೇಡ್ ಮಾರ್ಕ್ ಸಾಂಗ್ ದುನಿಯಾ

    ಜೇಮ್ಸ್ ಹಾಡಿಗೆ ಕೌಂಟ್ ಡೌನ್ – ಇದು ಟ್ರೇಡ್ ಮಾರ್ಕ್ ಸಾಂಗ್ ದುನಿಯಾ

    ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾದ ಹಾಡೊಂದು ಶಿವರಾತ್ರಿಯ ದಿನದಂದು ಬಿಡುಗಡೆ ಆಗುತ್ತಿದೆ. ಹಾಡು ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದ್ದು, ನೆಚ್ಚಿನ ನಟನ ಗೀತೆಯನ್ನು ಬರಮಾಡಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಅದ್ಧೂರಿಯಾಗಿಯೇ ಹಾಡನ್ನು ಬರಮಾಡಿಕೊಳ್ಳಲು ವೇದಿಕೆಯನ್ನೂ ಸಜ್ಜುಗೊಳಿಸಿದ್ದಾರೆ.

    ಜೇಮ್ಸ್ ಸಿನಿಮಾದ ಮೊದಲ ಹಾಡಾಗಿ ಟ್ರೇಡ್ ಮಾರ್ಕ್ ಗೀತೆ ರಿಲೀಸ್ ಆಗುತ್ತಿದ್ದು, ಈವರೆಗಿನ ಎಲ್ಲ ದಾಖಲೆಗಳನ್ನೂ ಬ್ರೇಕ್ ಮಾಡುವ ಸೂಚನೆ ಸಿಕ್ಕಿದೆ. ಈಗಾಗಲೇ ರಿಲೀಸ್ ಆಗಿದ್ದ ಜೇಮ್ಸ್ ಚಿತ್ರದ ಟೀಸರ್ ಎಲ್ಲ ರೂಲ್ಸ್ ಬ್ರೇಕ್ ಮಾಡಿ, ದಾಖಲೆ ಸೃಷ್ಟಿಸಿತ್ತು. ಹಾಡು ಕೂಡ ಹಾಗೆಯೇ ಆಗಲಿದೆ ಎನ್ನುತ್ತಿದೆ ಚಿತ್ರತಂಡ.

    ಪವರ್ ಸ್ಟಾರ್ ಟ್ರೇಡ್ ಸಾಂಗ್ ರಿಲೀಸ್ ಗೆ ಬೆಂಗಳೂರಿನ ವಿಜಯನಗರದ ಬಿಜಿಎಸ್ ಮೈದಾನ ಸಿದ್ಧವಾಗಿದ್ದು, ಅಲ್ಲಿ ಅದ್ಧೂರಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಬೆಳಗ್ಗೆ 11.11 ನಿಮಿಷಕ್ಕೆ ಜೇಮ್ಸ್ ಗ್ಲಿಂಪ್ಸ್ ಜೊತೆ ಲಿರಿಕಲ್ ಸಾಂಗ್ ಬಿಡುಗಡೆ ಆಗುತ್ತಿದೆ. ಸಿನಿಮಾದ ಪ್ರಮೋಷನಲ್ ಗೀತೆಗೆ ರಚಿತಾ ರಾಮ್, ಆಶಿಕಾ ರಂಗನಾಥ್, ಶ್ರೀ ಲೀಲಾ ಹೆಜ್ಜೆ ಹಾಕುತ್ತಿರುವುದು ಮತ್ತೊಂದು ವಿಶೇಷ. ಅಲ್ಲದೇ, ಯುವರಾಜ್ ಕುಮಾರ್ ಕಂಠದಲ್ಲಿ ಕೆಲವು ಸಾಲು ಕೇಳುವ ಅವಕಾಶವನ್ನು ಅಭಿಮಾನಿಗಳಿಗಾಗಿ ಕಲ್ಪಿಸಲಾಗಿದೆ.

     

  • ಪುನೀತ್ ರಾಜ್ ಕುಮಾರ್ ಕೊನೆಯ ಚಿತ್ರ ಜೇಮ್ಸ್ ಹೊಸ ಫೋಟೋಸ್ ನೋಡ್ಬೇಕಾ?

    ಪುನೀತ್ ರಾಜ್ ಕುಮಾರ್ ಕೊನೆಯ ಚಿತ್ರ ಜೇಮ್ಸ್ ಹೊಸ ಫೋಟೋಸ್ ನೋಡ್ಬೇಕಾ?

    ಕನ್ನಡ ರತ್ನ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ‘ಜೇಮ್ಸ್’ ಸಿನಿಮಾ ತಂಡದಿಂದ ಎರಡು ಹೊಸ ಸುದ್ದಿಗಳು ಹೊರ ಬಂದಿವೆ. ಅಪ್ಪು ಹುಟ್ಟಿದ ದಿನದಂದೇ ಈ ಸಿನಿಮಾ ರಿಲೀಸ್ ಪಕ್ಕಾ ಎಂದು ಘೋಷಣೆ ಮಾಡಿದೆ. ಅದಕ್ಕೂ ಮುನ್ನ ಟ್ರೇಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಇದನ್ನೂ ಓದಿ : ವಿದ್ಯಾರ್ಥಿಗಳ ರಕ್ಷಣೆ ಯಾವಾಗ?: ಸಿಎಂ ಬಸವರಾಜ ಬೊಮ್ಮಾಯಿಗೆ ನಟಿ ರಮ್ಯಾ ಪ್ರಶ್ನೆ

    ಜೇಮ್ಸ್ ಸಿನಿಮಾದ ಕುರಿತಾಗಿ ಒಂದೆರಡು ಫೋಟೋಗಳ ಹೊರತಾಗಿ ಹೆಚ್ಚಿನ ಮಾಹಿತಿಯನ್ನು ಸಿನಿಮಾ ತಂಡ ಹಂಚಿಕೊಂಡಿರಲಿಲ್ಲ. ಇದೀಗ ಪುನೀತ್ ರಾಜ್ ಕುಮಾರ್ ಅವರ ವಿವಿಧ ಗೆಟಪ್ ಗಳ ಫೋಟೋಗಳನ್ನು ರಿಲೀಸ್ ಮಾಡಿದೆ. ಆ ಫೋಟೋದಲ್ಲಿ ಪುನೀತ್ ರಾಜ್ ಕುಮಾರ್ ಸೈನಿಕ ಉಡುಪಿನಲ್ಲಿ ಮತ್ತು ಹಾಡುಗಳ ಚಿತ್ರೀಕರಣದ ಫೋಟೋ ಮತ್ತು ಇತರ ಸನ್ನಿವೇಶದ ಭಾವಚಿತ್ರಗಳು ಸದ್ಯ ಅಭಿಮಾನಿಗಳಿಗೆ ಲಭ್ಯವಾಗಿವೆ. ಇದನ್ನೂ ಓದಿ : ತಾಯಿಯ ಸಾವಿನ ನೋವಲ್ಲೂ ವೃತ್ತಿ ಪರತೆ ಮೆರೆದ ರಘು ದೀಕ್ಷಿತ್

    ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಜತೆ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ನಟಿಸಿದ್ದರಿಂದ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಮೂವರು ಸಹೋದರರನ್ನು ನೋಡುವ ಭಾಗ್ಯ ನೋಡುಗರಿಗೆ ಸಿಕ್ಕಿದೆ. ಇದು ಪುನೀತ್ ಅವರ ಡ್ರೀಮ್ ಕೂಡ ಆಗಿತ್ತು. ಈ ಸಿನಿಮಾದ ಮೂಲಕ ಈಡೇರಿದ್ದರಿಂದ ಸಿನಿಮಾ ಮತ್ತಷ್ಟು ಕುತೂಹಲ ಮೂಡಿಸಿದೆ. ಇದನ್ನೂ ಓದಿ : ಪುನೀತ್ ನಿರ್ಮಾಣದ ಫ್ಯಾಮಿಲಿ ಪ್ಯಾಕ್ ಚಿತ್ರ ನಿರ್ದೇಶಕನಿಗೆ ಟಾಲಿವುಡ್ ನಿಂದ ಮೆಗಾ ಆಫರ್

    ನಿರ್ದೇಶ ಚೇತನ್ ಕುಮಾರ್ ಜೇಮ್ಸ್ ಸಿನಿಮಾವನ್ನು ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರಂತೆ. ಇದೇ ಮೊದಲ ಬಾರಿಗೆ ಪುನೀತ್ ಅವರು ಅಂಥದ್ದೊಂದು ಪಾತ್ರ ಮಾಡಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.

  • ಹೊಸ ಮೆಟ್ರೋ ನಿಲ್ದಾಣಕ್ಕೆ ಅಪ್ಪು ಹೆಸರಿಡುವಂತೆ ಒತ್ತಾಯ

    ಹೊಸ ಮೆಟ್ರೋ ನಿಲ್ದಾಣಕ್ಕೆ ಅಪ್ಪು ಹೆಸರಿಡುವಂತೆ ಒತ್ತಾಯ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ 3 ತಿಂಗಳು ಕಳೆದ್ರೂ ಇಂದಿಗೂ ಕೋಟ್ಯಂತರ ಮನಗಳು ಪುನೀತ್‍ಗಾಗಿ ಮಿಡಿಯುತ್ತಿವೆ.

    ಪುನೀತ್ ಅಗಲಿದ ಬಳಿಕ ಪ್ರತಿಮೆ ಸ್ಥಾಪನೆ ಮಾಡಿದ್ದು ಆಯ್ತು, ನೂರಾರು ಸಮಾಜ ಸೇವೆ ಮಾಡಿದ್ದೂ ಆಯ್ತು. ಇದೀಗ ಬೆಂಗಳೂರಿನ ಪುಲಕೇಶಿ ನಗರದ ಪಾಟರಿ ರಸ್ತೆಯಲ್ಲಿರೋ ಫೆದರ್ ಲೈಟ್ ಶಾಲೆ ಬಳಿ ಹೊಸ ಮೆಟ್ರೋ ನಿಲ್ದಾಣ ನಿರ್ಮಾಣವಾಗ್ತಿದ್ದು, ಇದಕ್ಕೆ ಅಪ್ಪು ಹೆಸರಿಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಹೀಗಾಗಿ ಕರ್ನಾಟಕ ಬಹುಜನ ಫೆಡರೇಷನ್ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜೊತೆಗೆ ಬಿಎಂಆರ್ ಸಿಎಲ್ ಗೂ ಪತ್ರ ಬರೆದಿದೆ. ಇದನ್ನೂ ಓದಿ: ಇತಿಹಾಸದ ಪುಟಕ್ಕೆ ಮೊದಲ ಮಹಿಳಾ ಕನ್ನಡ ಶಾಲೆ – ವಿವೇಕನಾಂದರ ಸ್ಮಾರಕ ನಿರ್ಮಾಣಕ್ಕೆ ನೆಲಸಮ

    ಮನವಿ ಪುರಸ್ಕರಿಸಿ ವಿಚಾರ ಮಾಡೋದಾಗಿ ಪ್ರಧಾನಿ ಕಚೇರಿ ಉತ್ತರ ಕೊಟ್ರೆ, ಇತ್ತ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಛೋಪ್ರಾ ಕೂಡ ಅಪ್ಪು ಹೆಸರಿಡೋದಾಗಿ ಭರವಸೆ ನೀಡಿದ್ದಾರೆ. ಆದರೆ ಬಿಬಿಎಂಪಿ, ಬಿಡಿಎಜೊತೆ ಚರ್ಚಿಸಿ ಬಿಎಂಆರ್ ಸಿಎಲ್ ಒಪ್ಪಿಗೆ ಪಡೆಯಬೇಕಿದೆ. ಇದಾದ ಬಳಿಕ ಕಮಿಟಿ ಓಕೆ ಅಂದ್ರೆ ಮೆಟ್ರೋ ನಿಲ್ದಾಣಕ್ಕೆ ಪುನೀತ್ ಹೆಸರು ನಾಮಕರಣ ಮಾಡಲಾಗುತ್ತೆ.

  • ಪುನೀತ್ ಫೋಟೋಗಳಿಗೆ ಫುಲ್ ಡಿಮಾಂಡ್ – ಅಂಗಡಿ, ದೇವರ ಮನೆಯಲ್ಲಿಟ್ಟು ಪೂಜೆ

    ಪುನೀತ್ ಫೋಟೋಗಳಿಗೆ ಫುಲ್ ಡಿಮಾಂಡ್ – ಅಂಗಡಿ, ದೇವರ ಮನೆಯಲ್ಲಿಟ್ಟು ಪೂಜೆ

    – ಕೆನಡಾಗೂ ಸೇಲ್ ಆಗ್ತಿವೆ ಅಮರಶ್ರೀ ಫೋಟೋ

    ಬೆಂಗಳೂರು: ಪವರ್ ಸ್ಟಾರ್, ಕನ್ನಡಿಗರ ಪ್ರೀತಿಯ ಅಪ್ಪು, ರಾಜಕುಮಾರ ನಮ್ಮನ್ನೆಲ್ಲ ಅಗಲಿ 3 ತಿಂಗಳು ಕಳೆದಿದೆ. ಆದರೆ ಅಪ್ಪು ನೆನಪಿಂದ ಸ್ನೇಹಿತರು, ಚಿತ್ರರಂಗ, ಕುಟುಂಬಸ್ಥರು ಹಾಗೂ ಅವರ ಅಭಿಮಾನಿಗಳು ಇನ್ನೂ ಹೊರ ಬಂದಿಲ್ಲ. ಕರುನಾಡಿಗಂತೂ ಅಪ್ಪು ಅಗಲಿಕೆ ತಮ್ಮ ಕುಟುಂಬದ ಮನೆ ಸದಸ್ಯರನ್ನೇ ಕಳೆದುಕೊಂಡಂತೆ ಆಗಿದೆ.

    ದೊಡ್ಮನೆ ತಮ್ಮ ಅಭಿಮಾನಿಗಳನ್ನ ದೇವರು ಅಂತ ಕರೆಯುತ್ತೆ. ಆದರೆ ದೊಡ್ಮನೆ ಮಗನೇ ನಮ್ ದೇವರು ಅಂತ ಅಭಿಮಾನಿಗಳು ಪೂಜಿಸ್ತಿದ್ದಾರೆ. ಅಂಗಡಿ, ಹೋಟೆಲ್, ಮಾಲ್ ಅಷ್ಟೇ ಏಕೆ ತಮ್ಮ ಮನೆಯ ದೇವರ ಕೋಣೆಯಲ್ಲೂ ಅಪ್ಪು ಫೋಟೋ ಇಟ್ಟು ನಿತ್ಯ ಪೂಜೆ ಸಲ್ಲಿಸ್ತಿದ್ದಾರೆ.  

    ಜಮ್ಮು ಕಾಶ್ಮೀರ, ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರ, ಕೆನಡಾ ಸೇರಿದಂತೆ ಹಲವು ಭಾಗಗಳಿಗೆ ಪುನೀತ್ ಫೋಟೋ ಅತೀ ಹೆಚ್ಚು ಮಾರಾಟವಾಗ್ತಿದೆ. ವಿಶೇಷ ಅಂದ್ರೆ ಜಮ್ಮು ಕಾಶ್ಮೀರದ ಇಂಡಿಯನ್ ಆರ್ಮಿ ಸೇನಾನಿಗಳಿಗೂ ಪುನೀತ್ ಫೋಟೋ ಬೆಂಗಳೂರಿನಿಂದ ಪಾರ್ಸೆಲ್ ಆಗಿದೆಯಂತೆ.

    ಇತ್ತ ಅಪ್ಪು ಸಮಾಧಿಗೆ ಬಂದವರೆಲ್ಲರೂ ಪುನೀತ್ ಫೋಟೋ ಖರೀದಿಸಲು ಮಿಗಿಬೀಳ್ತಿದ್ದಾರೆ. ಲೋಕೇಶ್ ಎಂಬವರು ಪುನೀತ್ ಸಮಾಧಿ ಬಳಿ ಅಪ್ಪು ಫೋಟೋಗಳನ್ನು ಸೇಲ್ ಮಾಡ್ತಿದ್ದು ನಿತ್ಯ 300ಕ್ಕೂ ಹೆಚ್ಚು ಫೋಟೋಗಳು ಸೇಲ್ ಆಗ್ತಿವೆ. ಅಪ್ಪು ಫೋಟೋ ಖರೀದಿ ಮಾಡ್ತಿರೋ ಅಭಿಮಾನಿಗಳು ಅಪ್ಪು ನೆನೆದು ಕಣ್ಣೀರು ಹಾಕ್ತಿದ್ದಾರೆ.

    ಒಟ್ಟಿನಲ್ಲಿ ಅಪ್ಪು ಇಲ್ಲದ ಕೊರಗು ಇನ್ನಿಲ್ಲದಂತೆ ಕಾಡುತ್ತಿದೆ. ಅಪ್ಪು ನೆನಪಲ್ಲೇ ಅವ್ರ ಅಭಿಮಾನಿಗಳು ದಿನದೂಡುತ್ತಿದ್ದಾರೆ. ಇದನ್ನೂ ಓದಿ: ಬೆಳಗಾವಿ ಮಾತ್ರವಲ್ಲ, ಬೆಂಗ್ಳೂರಲ್ಲೂ ಅನ್ಯಭಾಷಿಕರ ದರ್ಬಾರ್ – ಪಬ್‍ನಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ಹಲ್ಲೆ ಯತ್ನ

  • ನಾನು ಲಾರ್ಡ್ ಶಿವ ಅಲ್ಲ, ನಾನು ನಿಮ್ಮ ಶಿವಣ್ಣ ಮಾತ್ರ: ಹ್ಯಾಟ್ರಿಕ್ ಹೀರೋ ಹೀಗಂದಿದ್ಯಾಕೆ..?

    ನಾನು ಲಾರ್ಡ್ ಶಿವ ಅಲ್ಲ, ನಾನು ನಿಮ್ಮ ಶಿವಣ್ಣ ಮಾತ್ರ: ಹ್ಯಾಟ್ರಿಕ್ ಹೀರೋ ಹೀಗಂದಿದ್ಯಾಕೆ..?

    – ನಾವು ಕೊರೊನಾದ ಜೊತೆಗೆ ಬದುಕಬೇಕಿದೆ

    ಮೈಸೂರು: ನಾನು ಲಾರ್ಡ್ ಶಿವ ಅಲ್ಲ. ನಾನು ನಿಮ್ಮ ಶಿವಣ್ಣ ಮಾತ್ರ ಎಂದು ಚಂದನವನದ ನಟ ಶಿವರಾಜ್‍ಕುಮಾರ್ ಅಭಿಮಾನಿಗಳಿಗೆ ಹೇಳಿದರು.

    ಮೈಸೂರಿನಲ್ಲಿ ನಯನ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಭಾಷಣ ಮಾಡಿದ ಅವರು, ಕೋವಿಡ್-19 ಸಂದರ್ಭದಲ್ಲಿ ಇಂತಹ ಆಸ್ಪತ್ರೆ ಬಹಳ ಅಗತ್ಯ. ಅಪ್ಪು ಹೆಸರಿನಲ್ಲಿ ಚಿಕಿತ್ಸೆಗೆ ರಿಯಾಯಿತಿ ಕೊಡಲಾಗುತ್ತಿದೆ. ಅಪ್ಪುಗೆ ಯೋಗ, ಯೋಗ್ಯತೆ ಎರಡೂ ಇದೆ. ಹೀಗಾಗಿ ಈ ರೀತಿಯ ಸ್ಮರಣೆ ಆಗುತ್ತಿದೆ. ದೊಡ್ಡವರು, ಚಿಕ್ಕವರು ಎಂಬ ಬೇಧ ಇರದೆ ಎಲ್ಲರಿಗೂ ಸಮನಾಗಿ ಚಿಕಿತ್ಸೆ ನೀಡಿ ಎಂದು ಆಶಿಸಿದರು. ಇದನ್ನೂ ಓದಿ: ಸಂಪೂರ್ಣವಾಗಿ ನೋವು ಹೇಳಿಕೊಳ್ಳೋ ಸ್ಥಿತಿಯಲ್ಲಿಲ್ಲ, ಅದರೊಂದಿಗೆ ಬದುಕ್ತಿದ್ದೇವೆ: ಅಪ್ಪು ನೆನೆದ ಶಿವಣ್ಣ

    ಗೀತಾ ತನ್ನ ತಾಯಿಯ ಸ್ಥಾನದಲ್ಲಿ ನಿಂತು ಶಕ್ತಿಧಾಮ ನೋಡಿಕೊಳ್ಳುತ್ತಿದ್ದಾರೆ. ನಾನು ಲಾರ್ಡ್ ಶಿವ ಅಲ್ಲ. ನಾನು ನಿಮ್ಮ ಶಿವಣ್ಣ ಮಾತ್ರ. ನಾನು ಶಿವಣ್ಣ ಆಗಿರೋಕೆ ಮಾತ್ರ ಇಷ್ಟ ಪಡುತ್ತೇನೆ ಎಂದು ಹೇಳಿ ಅಭಿಮಾನಿಗಳನ್ನು ರಂಜಿಸಲು ‘ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು’ ಎಂದು ಹಾಡನ್ನು ಹಾಡಿದರು. ನಂತರ ಆಸ್ಪತ್ರೆಗೆ ಅಪ್ಪು ಹೆಸರಿನಲ್ಲಿ ಎರಡು ಗಂಧದ ಗಿಡ ಕೊಟ್ಟಿದ್ದಾರೆ.

    ಉದ್ಯಮಿ ಕೆ.ಬಿ.ಕುಮಾರ್ ಕುಟುಂಬದ ಒಡೆತನದ ಆಸ್ಪತ್ರೆ ಇದಾಗಿದೆ. ಈ ಆಸ್ಪತ್ರೆಯಲ್ಲಿ 150 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಲೋಕಾರ್ಪಣೆ ಮಾಡಲಾಗಿದ್ದು, ಯೋಗಾನರಸಿಂಹಸ್ವಾಮಿ ದೇಗುಲದ ಶ್ರೀ ಭಾಷ್ಯಂ ಸ್ವಾಮಿಜೀ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಈ ಆಸ್ಪತ್ರೆಯ ಸಿಇಓ ಆಗಿ ಪುತ್ರಿ ಹಾಗೂ ಕೈಂಡ್ ಆರ್ಟ್ ಟ್ರಸ್ಟ್ ನಯನ ಮುನ್ನೆಡಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಜಿಟಿ ದೇವೇಗೌಡ, ಪುತ್ರ ಜಿಡಿ ಹರೀಶ್ ಗೌಡ ಸೇರಿ ಸ್ಥಳೀಯ ಜನಪ್ರತಿನಿಧಿಗಳು ಭಾಗಿಯಾಗಿದ್ದರು. ಇದನ್ನೂ ಓದಿ: ಕರಿಷ್ಮಾ ಫಿಟ್ನೆಸ್ ಹೊಗಳಿದ ಮಲೈಕಾ ಅರೋರಾ

    ಇದೇ ವೇಳೆ ಸಿನಿಮಾ ಮಂದಿರಗಳಿಗೆ ಕೋವಿಡ್ 50:50 ರೂಲ್ಸ್ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆಯಷ್ಟೇ ನಾನು ಈ ಬಗ್ಗೆ ಮಾಹಿತಿ ತೆಗೆದುಕೊಂಡಿದ್ದೇನೆ. ನಾವು ಕೊರೊನಾದ ಜೊತೆ ಜೊತೆಗೆ ಬದುಕಬೇಕಿದೆ. ಅದರ ಜೊತೆಗೆ ಬದುಕಬೇಕಾದ ಅನಿವಾರ್ಯತೆ ಇದೆ. ಎಲ್ಲ ಕ್ಷೇತ್ರಗಳಿಗೂ 50:50 ರೂಲ್ಸ್ ನಿಂದ ರಿಲ್ಯಾಕ್ಸ್ ಕೊಡಲಾಗಿದೆ. ಆದರೆ ಸಿನಿಮಾ ಮಂದಿರಗಳಿಗೆ ಯಾಕೆ ರಿಲ್ಯಾಕ್ಸ್ ಕೊಟ್ಟಿಲ್ಲ ಎಂದು ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ. ಮುಖ್ಯಮಂತ್ರಿಗಳು ನಮಗೆ ಸಾಕಷ್ಟು ಬಾರಿ ಅನುಕೂಲ ಮಾಡಿಕೊಟ್ಟಿದ್ದಾರೆ. ಈಗಲೂ ನಮಗೆ ಅನುಕೂಲ ಮಾಡಿಕೊಡುವ ಭರವಸೆ ಇದೆ ಎಂದು ವಿವರಿಸಿದರು.

  • ಕರುನಾಡ ರತ್ನ ಅಪ್ಪು ದನಿಯಾಗಿದ್ದ ‘ಹರೀಶ ವಯಸ್ಸು 36’ ಚಿತ್ರದ ಹಾಡಿಗೆ ಸಿನಿರಸಿಕರ ಮೆಚ್ಚುಗೆ..!

    ಕರುನಾಡ ರತ್ನ ಅಪ್ಪು ದನಿಯಾಗಿದ್ದ ‘ಹರೀಶ ವಯಸ್ಸು 36’ ಚಿತ್ರದ ಹಾಡಿಗೆ ಸಿನಿರಸಿಕರ ಮೆಚ್ಚುಗೆ..!

    ‘ಹರೀಶ ವಯಸ್ಸು 36′ ಹೀಗೊಂದು ಸಿನಿಮಾ ತನ್ನ ವಿಭಿನ್ನ ಟೈಟಲ್ ಮೂಲಕವೇ ಸಖತ್ ಸುದ್ದಿಯಲ್ಲಿದೆ. ಬಿಡುಗಡೆಯಾಗಿರುವ ಫಸ್ಟ್ ಲುಕ್ ಪೋಸ್ಟರ್ ಟೈಟಲ್ ಹೆಚ್ಚಿಸಿದ್ದ ಕುತೂಹಲವನ್ನು ಇನ್ನಷ್ಟು ದುಪ್ಪಟ್ಟಾಗಿಸಿದೆ. ವಿಭಿನ್ನ ಕಥಾಹಂದರ ಒಳಗೊಂಡ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಪದ್ಮವಿಭೂಷಣ ಪುರಸ್ಕೃತ ಡಾ. ವಿರೇಂದ್ರ ಹೆಗ್ಗಡೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಿದ್ರು. ಇದೀಗ ಚಿತ್ರತಂಡ ಕರುನಾಡ ರತ್ನ ಪುನೀತ್ ರಾಜ್ ಕುಮಾರ್ ಹಾಡಿರುವ ಚಿತ್ರದ ಹಾಡಿನ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಿ ಸುದ್ದಿಯಲ್ಲಿದೆ.

    ನಟನೆ ಜೊತೆಗೆ ಹಲವಾರು ಸಿನಿಮಾಗಳ ಹಾಡಿಗೆ ಅಪ್ಪು ದನಿಯಾಗುತ್ತಿದ್ರು. ಅಪ್ಪು ಕೈಯಲ್ಲಿ ಒಂದು ಹಾಡು ಹಾಡಿಸಬೇಕು ಎಂದು ಬಂದವರಿಗೆ ಅವರ ಆಸೆ ನೆರವೇರಿಸಿ ಕಳುಹಿಸುತ್ತಿದ್ರು ಯುವರತ್ನ. ಇಂದು ಪ್ರೀತಿಯ ಪವರ್ ಸ್ಟಾರ್ ನಮ್ಮೊಂದಿಗಿಲ್ಲ. ಆದರೆ ಅವರು ಹಲವಾರು ಸಿನಿಮಾಗಳ ಹಾಡಿಗೆ ದನಿಯಾಗಿದ್ದಾರೆ. ಆ ಹಾಡುಗಳೆಲ್ಲ ಈಗ ಒಂದೊಂದಾಗಿ ಬಿಡುಗಡೆಯಾಗುತ್ತಿವೆ. ಇದೀಗ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿರುವ ಹರೀಶ ವಯಸ್ಸು 36 ಚಿತ್ರತಂಡ ಅಪ್ಪು ದನಿಯಾಗಿರುವ ‘ಹರಿಶಣ್ಣಂಗೆ ವಯಸ್ಸು ಮೂವತ್ತಾರು’ ಹಾಡಿನ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಿದೆ. ಅಪ್ಪು ದನಿಯಲ್ಲಿ ಮೂಡಿ ಬಂದ ಈ ಹಾಡಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಹುಟ್ಟೂರಿಗೆ ನೆರವಾದ ಸೋನು ಸೂದ್-1,000 ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ

    ಗುರುರಾಜ್ ಜೇಷ್ಠ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಹರೀಶ ವಯಸ್ಸು 36 ಚಿತ್ರ ಸದ್ಯ ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಯೋಗೀಶ್ ಶೆಟ್ಟಿ ನಾಯಕ ನಟನಾಗಿ ನಟಿಸುತ್ತಿದ್ದು, ರಿಷಭ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿ ಜೋಸೆಫ್ ಪಾತ್ರಧಾರಿಯಾಗಿ ನಟಿಸಿದ್ದ ಮಂಜೇಶ್ವರದ ಯೋಗೀಶ್ ಶೆಟ್ಟಿ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಇನ್ನು ಚಿತ್ರದ ನಿರ್ದೇಶಕರಾದ ಗುರುರಾಜ್ ಜೇಷ್ಠ ಕೂಡ ಮೂಲತಃ ಮಂಗಳೂರಿನವರೇ ಆದ್ರಿಂದ ಇದೊಂದು ಕರಾವಳಿ ಪ್ರತಿಭೆಗಳೆಲ್ಲ ಸೇರಿ ಮಾಡುತ್ತಿರುವ ಅಚ್ಚ ದೇಸಿ ಸೊಗಡಿನ ಸಿನಿಮಾ ಎಂದರೂ ತಪ್ಪಾಗೋದಿಲ್ಲ. ಯುವಕನೋರ್ವ ಹುಡುಗಿ ಹುಡುಕಲು ಪರದಾಡುವ ಅಂಶವನ್ನು ಕಾಮಿಡಿ ಎಳೆಯಲ್ಲಿ ಕಟ್ಟಿಕೊಡುವ ಕಥಾಹಂದರವನ್ನು ಈ ಸಿನಿಮಾ ಒಳಗೊಂಡಿದೆ. ಶ್ವೇತಾ ಅರೆಹೊಳೆ ನಾಯಕಿಯಾಗಿ ನಟಿಸಿದ್ದು, ಹಿರಿಯ ನಟ ಉಮೇಶ್, ಪ್ರಕಾಶ್ ತುಮಿನಾಡು ಒಳಗೊಂಡಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.

    ಚಿತ್ರಕ್ಕೆ ಮೋಹನ್ ಪಡ್ರೆ ಛಾಯಾಗ್ರಹಣವಿದೆ. ನಿರ್ದೇಶಕ ಗುರುರಾಜ್ ಜೇಷ್ಠ ಅವರೇ ಚಿತ್ರಕ್ಕೆ ಸಂಗೀತ ನೀಡಿದ್ದು, ಸಂಪೂರ್ಣ ಸಿನಿಮಾವನ್ನು ಕರಾವಳಿ ಭಾಗದಲ್ಲಿಯೇ ಚಿತ್ರೀಕರಿಸಲಾಗಿದೆ. ಶಿರಡಿ ಸಾಯಿ ಬಾಲಾಜಿ ಫಿಲ್ಮ್ಸ್ ಬ್ಯಾನರ್ ನಡಿ ಲಕ್ಷ್ಮೀಕಾಂತ್ ರಾವ್, ತ್ರಿಲೋಕ್ ಕುಮಾರ್, ಆರ್ ದೀಪಾ, ಶ್ರೀದೇವಿ ಹಾಗೂ ರಜಿನಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ: ಕತ್ರಿನಾ ಕೈಫ್ ವಜ್ರ ಖಚಿತ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ?