Tag: ಅಪ್ಪು ಫೋಟೋ

  • ಅಪ್ಪು ಮಾಡಿದ ಕೆಲಸಗಳನ್ನು ಮುಂದುವರಿಸಬೇಕು ಅಂದ್ಕೊಂಡಿದ್ದೇನೆ: ರಾಘವೇಂದ್ರ ರಾಜ್‍ಕುಮಾರ್

    ಅಪ್ಪು ಮಾಡಿದ ಕೆಲಸಗಳನ್ನು ಮುಂದುವರಿಸಬೇಕು ಅಂದ್ಕೊಂಡಿದ್ದೇನೆ: ರಾಘವೇಂದ್ರ ರಾಜ್‍ಕುಮಾರ್

    ಬೆಂಗಳೂರು: ಅಪ್ಪು ನನ್ನ ಮಗನ ಹಾಗೆ. ಪುನೀತ್ ಮಾಡಿದ ಕೆಲಸಗಳನ್ನು ಮುಂದುವರಿಸಬೇಕು ಅಂದುಕೊಂಡಿದ್ದೇನೆ ನಟ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.

    ಅಪ್ಪು ಅಗಲಿಕೆಯನ್ನು ಅಭಿಮಾನಿಗಳಿಗೆ ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದರಲ್ಲಿಯೂ ಕುಟುಂಬಸ್ಥರ ನೋವು ಇನ್ನೂ ಅಗಾಧ. ಪ್ರೀತಿಯ ಸಹೋದರನನ್ನು ಕಳೆದುಕೊಂಡು ರಾಘಣ್ಣ ಅಪ್ಪು ನೋಡಲು ಪ್ರತಿದಿನ ಕಂಠೀರವ ಸ್ಟುಡಿಯೋಗೆ ಭೇಟಿ ನೀಡುತ್ತಿದ್ದಾರೆ.

    ಇದೇ ವೇಳೆ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಂಠೀರವ ಸ್ಟುಡಿಯೋಕ್ಕೆ ಬಂದ್ರೆ ಅಪ್ಪ, ಅಮ್ಮ, ಅಪ್ಪು ನಾ ನೋಡಬಹುದು. ಅಪ್ಪು ನನ್ನ ಮಗನ ಹಾಗೆ. ಪುನೀತ್ ಮಾಡಿದ ಕೆಲಸಗಳನ್ನು ಮುಂದುವರಿಸಬೇಕು ಅಂದುಕೊಂಡಿದ್ದೇನೆ. ಅಪ್ಪು ಮಾಡಿದ ಕೆಲಸಗಳನ್ನು ಕಣ್ಣು, ಕಿವಿ ಮುಚ್ಚಿಕೊಂಡು ಮಾಡ್ತೇವೆ. ಅಪ್ಪು ಸಿನಿಮಾಗಳು 10% ಸೆಳೆದರೆ, 90% ಅಪ್ಪುವಿನ ಸಮಾಜಮುಖಿ ಕೆಲಸಗಳು ಜನರನ್ನು ಮುಟ್ಟಿವೆ. ತುಂಬಾ ಕಣ್ಣುಗಳು ಬ್ಯಾಂಕ್ ಗೆ ಬಂದಿವೆ. ಅಪ್ಪು ನೆಮ್ಮದಿಯಾಗಿ ಹೋದ. ನಾವು ಅವ್ರ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಸಣ್ಣ ವಯಸ್ಸಿನ ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ: ರಮೇಶ್ ಜಾರಕಿಹೊಳಿ

    ಈ ನಡುವೆ ಇಂದು ಮಕ್ಕಳ ದಿನಾಚರಣೆಯ ಪ್ರಯುಕ್ತ ಅಪ್ಪು ಬಾಲ್ಯದ ಫೋಟೋಗಳನ್ನು ಕೊಲಾಜ್ ಮಾಡಿರುವ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ ಈ ವೀಡಿಯೋಗೆ ಅಪ್ಪು ಬಾಲ್ಯದಲ್ಲಿ ಆಡಿರುವ ಬಾನದಾರಿಯಲ್ಲಿ ಹಾಡನ್ನು ಸೆಟ್ ಮಾಡಿದ್ದಾರೆ. ವೀಡಿಯೋ ಜೊತೆಗೆ ನೀನಾಡೋ ಮಾತೆಲ್ಲಾ ಚೆಂದ.. ನಿನ್ನಿಂದ ಈ ಬಾಳೆ ಅಂದ.. ಅಪ್ಪು ಮಗನೆ ಎಂದು ಹಾರ್ಟ್ ಸಿಂಬಲ್ ಹಾಕಿ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ಕಾರ್‌ನಲ್ಲೇ ಕುಳಿತು ಸಿನಿಮಾ ನೋಡುವ ಓಪನ್ ಥಿಯೇಟರ್‌ಗೆ ಚಾಲನೆ

    ಪುನೀತ್ ರಾಜ್‍ಕುಮಾರ್ ಅವರು ಸಹೋದರನೇ ಆಗಿದ್ದರೂ, ಮೊದಲಿನಿಂದಲೂ ರಾಘವೇಂದ್ರ ರಾಜ್‍ಕುಮಾರ್ ಅವರು ಅಪ್ಪು ಅವರನ್ನು ಮಗನಂತೆಯೇ ನೋಡುತ್ತಿದ್ದರು. ಅಲ್ಲದೇ ಪ್ರೀತಿಯಿಂದ ಮಗನೆ ಎಂದು ಕರೆಯುತ್ತಿದ್ದರು.