Tag: ಅಪ್ಪು ಅಂತಿಮ ಯಾತ್ರೆ

  • ಇಂದು ಅಪ್ಪು ಅಂತ್ಯಕ್ರಿಯೆ – ಅಂತಿಮ ಯಾತ್ರೆಯ ರೂಟ್‌ ಮ್ಯಾಪ್‌

    ಇಂದು ಅಪ್ಪು ಅಂತ್ಯಕ್ರಿಯೆ – ಅಂತಿಮ ಯಾತ್ರೆಯ ರೂಟ್‌ ಮ್ಯಾಪ್‌

    ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಅಂತ್ಯಕ್ರಿಯೆ ಇಂದು ನಗರದ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಕಂಠೀರವ ಕ್ರೀಡಾಂಗಣದಿಂದ ಅಪ್ಪು ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋಗೆ ಕೊಂಡೊಯ್ಯಲಾಗುವುದು. ಇದಕ್ಕಾಗಿ ಪುಷ್ಪಾಲಂಕೃತ ವಿಶೇಷ ವಾಹನವನ್ನು ಸಜ್ಜುಗೊಳಿಸಲಾಗಿದೆ.

    ಅಪ್ಪು ಅಂತಿಮಯಾತ್ರೆ ಸಾಗುವ ದಾರಿಯನ್ನು ಈಗಾಗಲೇ ಬೆಂಗಳೂರು ಪೊಲೀಸರು ಸಿದ್ಧಪಡಿಸಿದ್ದು, ನಿಗದಿಗೊಳಿಸಿದ ರಸ್ತೆಗಳಲ್ಲೇ ಬಿಗಿ ಪೊಲೀಸ್‌ ಭದ್ರತೆಯಲ್ಲಿ ಅಂತಿಮ ಯಾತ್ರೆಯ ವಾಹನ ಸಾಗಲಿದೆ. ಇದನ್ನೂ ಓದಿ: ಉಪ್ಪಿನಲ್ಲಿ ಚಿತ್ರ ಬಿಡಿಸಿ ಅಪ್ಪುಗೆ ವಿಶೇಷ ವಿದಾಯ ಹೇಳಿದ ತೆಲುಗು ಅಭಿಮಾನಿ

    ಮಾರ್ಗ ಯಾವುದು?: ಕಂಠೀರವ ಕ್ರೀಡಾಂಗಣದಿಂದ ಆರ್‌ಆರ್‌ಎಂಆರ್‌ ರೋಡ್, ಹಡ್ಸನ್ ಸರ್ಕಲ್, ಕೆಜಿ ರೋಡ್, ಮೈಸೂರು ಬ್ಯಾಂಕ್ ಸರ್ಕಲ್, ಪೋಸ್ಟ್ ಆಫೀಸ್ ರಸ್ತೆ, ಕೆಆರ್ ಸರ್ಕಲ್ ಎಡ ತಿರುವು, ಶೇಷಾದ್ರಿ ರಸ್ತೆ, ಮಹಾರಾಣಿ ಮೇಲ್ಸೇತುವೆ, ಸಿಐಡಿ ಜಂಕ್ಷನ್, ಚಾಲುಕ್ಯ ವೃತ್ತ, ಹಳೆ ಹೈಗ್ರೌಂಡ್ಸ್ ಜಂಕ್ಷನ್, ಟಿ ಚೌಡಯ್ಯ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಪಿಜಿ ಹಳ್ಳಿ ಕ್ರಾಸ್, ಕಾವೇರಿ ಜಂಕ್ಷನ್, ಭಾಷ್ಯಂ ಸರ್ಕಲ್, ಸ್ಯಾಂಕಿ ರೋಡ್, ಮಲ್ಲೇಶ್ವರಂ 18ನೇ ಕ್ರಾಸ್, ಮಾರಮ್ಮ ಸರ್ಕಲ್, ಬಿಹೆಚ್‍ಇಎಲ್ ಸರ್ಕಲ್, ಯಶವಂತಪುರ ಸರ್ಕಲ್, ಗೋವರ್ಧನ್ ಥಿಯೇಟರ್, ಗೊರಗುಂಟೆ ಪಾಳ್ಯ ಮಾರ್ಗವಾಗಿ ಕಂಠೀರವ ಸ್ಟುಡಿಯೋ ತಲುಪಲಿದೆ.

    ಅಂತ್ಯಕ್ರಿಯೆ ಬಗ್ಗೆ ನಿನ್ನೆ ಮಾಹಿತಿ ನೀಡಿದ್ದ ಪುನೀತ್ ಮಾವ, ನಿರ್ಮಾಪಕ ಚಿನ್ನೇಗೌಡ ಅವರು, ವಿಶೇಷ ಪೂಜೆಗಳು ಇರುವುದಿಲ್ಲ. ಈಡಿಗ ಸಂಪ್ರದಾಯದಂತೆ ನಾವೇ ಎಲ್ಲಾ ವಿಧಿವಿಧಾನ ಪೂರೈಸುತ್ತೇವೆ ಎಂದು ಹೇಳಿದ್ದರು.