Tag: ಅಪ್ಪುಗೆ

  • ಅಪ್ಪುಗೆ ಹಾಡಿಗೆ ‘ಯುವ’ ಫ್ಯಾನ್ಸ್ ಫಿದಾ: ಮಾರ್ಚ್ 21 ರಂದು ಚಿತ್ರದ ಟ್ರೈಲರ್

    ಅಪ್ಪುಗೆ ಹಾಡಿಗೆ ‘ಯುವ’ ಫ್ಯಾನ್ಸ್ ಫಿದಾ: ಮಾರ್ಚ್ 21 ರಂದು ಚಿತ್ರದ ಟ್ರೈಲರ್

    ಹೊಂಬಾಳೆ ಫಿಲಂಸ್ ಲಾಂಛನಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಿಸಿರುವ, ಸಂತೋಷ್ ಆನಂದರಾಮ್ ನಿರ್ದೇಶನದ ಹಾಗೂ ಯುವ ರಾಜಕುಮಾರ್ ನಾಯಕನಾಗಿ ನಟಿಸಿರುವ ಯುವ (Yuva)  ಚಿತ್ರದ ‘ಅಪ್ಪುಗೆ’ (Appuge) ಹಾಡು (Song) ಇತ್ತೀಚಿಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಪುನೀತ್ ರಾಜಕುಮಾರ್ ಅವರ ದ್ವಿತೀಯ ಪುತ್ರಿ ವಂದಿತ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

    ಯುವ ಕೌಟುಂಬಿಕ ಹಾಗೂ ಆಕ್ಷನ್ ಕಥಾಹಂದರ ಹೊಂದಿರುವ ಸಿನಿಮಾ. ತಂದೆ – ಮಗನ ಬಾಂಧವ್ಯದ ಚಿತ್ರವೂ ಹೌದು. ಒಂದು ಕುಟುಂಬಕ್ಕಾಗಿ ಅಪ್ಪ ಏನೆಲ್ಲಾ ಮಾಡುತ್ತಾನೆ. ಆದರೆ ಆತ ಯಾರಿಂದಲೂ ಏನನ್ನು ನಿರೀಕ್ಷಿಸುವುದಿಲ್ಲ. ಕುಟುಂಬದಲ್ಲಿ ಅಪ್ಪನ ಪಾತ್ರ ಬಹಳ ದೊಡ್ಡದು. ಅಂತಹ ಅಪ್ಪನ ಗುಣಗಳನ್ನು ವರ್ಣಿಸುವ ನಮ್ಮ ಚಿತ್ರದ “ಅಪ್ಪುಗೆ” ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ನಾನೇ ಬರೆದಿದ್ದೇನೆ. ವಿಜಯ್ ಪ್ರಕಾಶ್ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಅಪ್ಪನ ಕುರಿತಾದ ಹಾಡಾಗಿರುವುದರಿಂದ ಈ ಹಾಡನ್ನು ವಂದಿತ ಅವರಿಂದ ಬಿಡುಗಡೆ ಮಾಡಿಸೋಣ ಅಂದುಕೊಂಡೆವು‌. ಹಾಡು ಬಿಡುಗಡೆ ಮಾಡಿಕೊಟ್ಟ ವಂದಿತ ಅವರಿಗೆ ಧನ್ಯವಾದ. ಇನ್ನು ಮಾರ್ಚ್ 21 ರಂದು ಯುವ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಮಾರ್ಚ್ 23 ರಂದು ಹೊಸಪೇಟೆಯಲ್ಲಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ. ಚಿತ್ರ ಮಾರ್ಚ್ 29ಕ್ಕೆ ತೆರೆಗೆ ಬರಲಿದೆ ಎಂದು ನಿರ್ದೇಶಕ ಸಂತೋಷ್ ಆನಂದರಾಮ್ ತಿಳಿಸಿದರು.

    ಈ ಚಿತ್ರದ ಕಥೆಗೂ ಹಾಗೂ ನನ್ನ ಜೀವನದ ಕಥೆಗೂ ಸುಮಾರು ವಿಷಯಗಳು ಹೋಲುತ್ತದೆ ಎಂದು ಮಾತು ಆರಂಭಿಸಿದ ನಾಯಕ ಯುವ ರಾಜಕುಮಾರ್, ತಂದೆ – ಮಗನ ಸಂಬಂಧ ಬೇರೆ ರೀತಿಯದೆ ಸಂಬಂಧ. ತಂದೆಯ ಜವಾಬ್ದಾರಿ ನಮಗೆ ಅರ್ಥವಾಗುವುದೇ ಇಲ್ಲ.  ನಾವು ದುಡಿಯುವುದಕ್ಕೆ ಶುರು ಮಾಡಿದಾಗ ನಮಗೆ ತಂದೆಯ ಜವಾಬ್ದಾರಿ ತಿಳಿಯುತ್ತಾ ಹೋಗುತ್ತದೆ. ಈ ಚಿತ್ರದಲ್ಲಿ ಅಚ್ಯುತಕುಮಾರ್ ಅವರು ನನ್ನ ತಂದೆ ಪಾತ್ರ ಮಾಡಿದ್ದಾರೆ‌. ಅವರೊಂದಿಗೆ ಕೆಲವು ಸನ್ನಿವೇಶಗಳಲ್ಲಿ ನಟಿಸಬೇಕಾದರೆ ನನಗೆ ನಮ್ಮ ಅಪ್ಪ ಕಣ್ಣ ಮುಂದೆ ಬರುತ್ತಿದ್ದರು. ಅಂತಹ ಅಪ್ಪ – ಮಗನ ನಡುವಿನ ಸಂಬಂಧವನ್ನು ಬಣ್ಣಿಸುವ ಈ “ಅಪ್ಪುಗೆ” ಹಾಡು ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತದೆ ಎಂದರು.

    ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಎರಡು ಹಾಡುಗಳು ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. “ಅಪ್ಪುಗೆ” ಮೂರನೇ ಹಾಡಾಗಿ ಬಿಡುಗಡೆಯಾಗಿದೆ. ಅಪ್ಪ – ಮಗನ ಸಂಬಂಧದ ಈ ಹಾಡು ತುಂಬಾ ಚೆನ್ನಾಗಿದೆ. ಈ ಹಾಡು ಕೇಳಿದಾಗಲ್ಲೆಲ್ಲಾ ನನಗೆ ನಮ್ಮ ತಂದೆ ನೆನಪಾಗುತ್ತಾರೆ ಎಂದು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಭಾವುಕರಾದರು.  ಯುವ ಚಿತ್ರದ ಆಡಿಯೋ ಹಕ್ಕನ್ನು ನಮ್ಮ ಆನಂದ್ ಆಡಿಯೋ ಸಂಸ್ಥೆಗೆ ನೀಡಿರುವುದಕ್ಕೆ ಹೊಂಬಾಳೆ ಫಿಲಂಸ್ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇನೆ. ನಮ್ಮ ಸಂಸ್ಥೆ ಆರಂಭವಾಗಿ 25 ವರ್ಷಗಳಾಗುತ್ತಿದೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಆನಂದ್ ಆಡಿಯೋ ಶ್ಯಾಮ್.

    ಛಾಯಾಗ್ರಾಹಕ ಶ್ರೀಶ ಕುದುವಳ್ಳಿ, ಸಂಕಲನಕಾರ ಆಶಿಕ್ ಕುಸುಗೊಳ್ಳಿ ಹಾಗೂ ಕಾರ್ಯಕಾರಿ ನಿರ್ಮಾಪಕ ಯೋಗಿ ಜಿ ರಾಜ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಹಾಡು ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು

  • ‘ಅಪ್ಪುಗೆ’ ಹಾಡು ರಿಲೀಸ್ ಮಾಡಿದ ಪುನೀತ್ ಪುತ್ರಿ ವಂದಿತಾ

    ‘ಅಪ್ಪುಗೆ’ ಹಾಡು ರಿಲೀಸ್ ಮಾಡಿದ ಪುನೀತ್ ಪುತ್ರಿ ವಂದಿತಾ

    ಯುವರಾಜ್ ಕುಮಾರ್ (Yuvraj Kumar) ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದಿರುವ ಯುವ (Yuva) ಚಿತ್ರದ ಮತ್ತೊಂದು ಹಾಡು ಇಂದು ಬಿಡುಗಡೆ ಆಗಿದೆ. ‘ಅಪ್ಪುಗೆ’ (Appuge) ಹೆಸರಿನಲ್ಲಿ ಮೂಡಿ ಬಂದಿರುವ ಈ ಹಾಡಿನ ಲಿರಿಕಲ್ ವಿಡಿಯೋವನ್ನು ಪುನೀತ್ ರಾಜ್ ಕುಮಾರ್ ಪುತ್ರಿ ವಂದಿತಾ ಇಂದು ಬಿಡುಗಡೆ ಮಾಡಿದರು.

    ಅಪ್ಪುಗೆ ಮೇಲೆ ಚಿತ್ರಿತವಾದ ವಿಶೇಷ ಹಾಡು ಇದಾಗಿದ್ದು, ಸಂತೋಶ್ ಆನಂದ್ ರಾಮ್ (Santhosh Anand Ram) ನಿರ್ದೇಶನದಲ್ಲಿ, ಹೊಂಬಾಳೆ ಫಿಲಂಸ್ ನಲ್ಲಿ ಬ್ಯಾನರ್ ಅಡಿ ವಿಜಯ್ ಕಿರಗಂದೂರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.  ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಈ ಹಾಡು ಬಿಡುಗಡೆ ಆಗಿದೆ.

    ಲಿರಿಕಲ್ ವಿಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಯುವರಾಜ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ಅಪ್ಪು ಮಗಳು ವಂದಿತಾ (Vandita) ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ತಂದೆ ಮಗನ ಬಾಂಧ್ಯವದ ಹಾಡು ಇದಾಗಿದ್ದು, ಯುವ ಸಿನಿಮಾದ ಬಹುಮುಖ್ಯ ಘಟ್ಟದಲ್ಲಿ ಹಾಡು ಇರಲಿದೆ. ಈ ಹಾಡನ್ನು ಬಿಡುಗಡೆ ಮಾಡಿದ ವಂದಿತಾಗೆ ಚಿತ್ರತಂಡದಿಂದ ಅಪ್ಪು ಫೋಟೋ ಉಡುಗೊರೆಯಾಗಿ ನೀಡಲಾಯಿತು. ಅಪ್ಪನ ಫೋಟೋ ನೋಡಿ ವಂದಿತಾ ಭಾವುಕರಾದರು.

     

    ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿ ಬಂದಿತ್ತು, ವಿಜಯ್ ಪ್ರಕಾಶ್ ಗೀತೆಗೆ ಧ್ವನಿಯಾಗಿದ್ದಾರೆ. ಈ ಹಾಡಿನ ಸಾಹಿತ್ಯ ಸಂತೋಷ್ ಆನಂದ್ ರಾವ್ ಅವರ ಬರವಣಿಗೆಯಲ್ಲಿ ಮೂಡಿ ಬಂದಿದೆ.

  • ಪ್ರಶಾಂತ್ ಸಂಬರಗಿಯಿಂದ ದೊಡ್ಮನೆಯಲ್ಲಿ ಬರುತ್ತಾ ಅಪ್ಪಿಕೊಳ್ಳಲು ರೂಲ್ಸ್!

    ಪ್ರಶಾಂತ್ ಸಂಬರಗಿಯಿಂದ ದೊಡ್ಮನೆಯಲ್ಲಿ ಬರುತ್ತಾ ಅಪ್ಪಿಕೊಳ್ಳಲು ರೂಲ್ಸ್!

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಗಲಿಂದಲೂ ಪ್ರತಿ ಸೀಸನ್‍ನಲ್ಲಿ ಕೂಡ ಎಲ್ಲಾ ಸ್ಪರ್ಧಿಗಳು ಒಬ್ಬರಿಗೊಬ್ಬರು ತಬ್ಬಿಕೊಳ್ಳುವುದು ಸಹಜ. ಆದರೆ ಯಾವ ಸೀಸನ್‍ನಲ್ಲಿಯೂ ಸದ್ದು ಮಾಡಿರದ ಅಪ್ಪುಗೆಯ ವಿಚಾರ ಬಿಗ್‍ಬಾಸ್-8 ಆರಂಭಗೊಂಡ ಬಳಿಕ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಪ್ರಶಾಂತ್ ಸಂಬರಗಿಯ ಅಪ್ಪುಗೆ ನಿನ್ನೆ ದೊಡ್ಡ ಸುದ್ದಿಯಾಗಿದೆ.

    ನಿನ್ನೆ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಚ್ಚ ಸುದೀಪ್, ಪ್ರಶಾಂತ್ ಸಂಬರಗಿಯವರೇ ನೀವು ಎಷ್ಟು ಜನ ಹತ್ತಿರ ತಬ್ಬಿಕೊಂಡು ಮಾತನಾಡಿತ್ತೀರಾ? ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಪ್ರಶಾಂತ್ ನಾನು ಆಲ್ ಮೋಸ್ಟ್ ಎಲ್ಲರನ್ನು ತಬ್ಬಿಕೊಂಡೆ ಮಾತನಾಡುತ್ತೇನೆ ಎಂದು ಉತ್ತರಿಸುತ್ತಾರೆ. ಇದಕ್ಕೆ ಕಿಚ್ಚ, ನೀವು ತಬ್ಬಿಕೊಳ್ಳುವಾಗ ಕೆಲವರನ್ನು 3-3 ನಿಮಿಷ ತಬ್ಬಿಕೊಳ್ಳುತ್ತೀರಾ, ಕೆಲವರನ್ನು ಸೈಡಿನಿಂದ ತಬ್ಬಿಕೊಳ್ಳುತ್ತೀರಾ, ಮತ್ತೆ ಕೆಲವರನ್ನು ತಬ್ಬಿಕೊಳ್ಳಬೇಕಲ್ಲ ಎಂದು ತಬ್ಬಿಕೊಳ್ಳುತ್ತೀರಾ, ಇನ್ನೂ ಕೆಲವೊಮ್ಮೆ ಒಬ್ಬರನ್ನು ತಬ್ಬಕೊಂಡೆನಲ್ಲ ಎಂದು ಮತ್ತೊಬ್ಬರನ್ನು ತಬ್ಬಿಕೊಳ್ಳುವ ಪರಿಸ್ಥಿತಿಯಿಂದ ಕೂಡ ತಬ್ಬಿಕೊಂಡಿರುವುದನ್ನು ಕೂಡ ನೋಡಿದ್ದೇವೆ. ಆದರೆ ಕೆಲವರನ್ನು ತಬ್ಬಿಕೊಂಡರೆ ನೀವು ಬಿಡುವುದೇ ಇಲ್ಲ. ತಬ್ಬಿಸಿಕೊಳ್ಳುವವರಿಗೆ ಯಾವುದೇ ರೀತಿಯ ಅಭ್ಯಂತರವಿಲ್ಲ. ಇನ್ನೂ ನಮಗೆ ಏಕೆ ತೊಂದರೆ, ನಮಗೆ ಯಾವುದೇ ರೀತಿಯ ಹೊಟ್ಟೆ ಕಿಚ್ಚಿಲ್ಲ. ತಬ್ಬಿಕೊಳ್ಳಿ ಯಾವುದೇ ಸಮಸ್ಯೆ ಇಲ್ಲ. ಆದರೆ ತಬ್ಬಿಕೊಂಡಾಗ ನೀವು ಮಾತನಾಡುತ್ತಿರಲ್ಲ ಅದೇ ಸಮಸ್ಯೆ. ಕಾರಣ ಒಬ್ಬರಿಗೊಬ್ಬರು ತಬ್ಬಿಕೊಂಡಾಗ ಮೈಕ್ ಒತ್ತಿರುತ್ತದೆ. ಏನು ಮಾತನಾಡಿಕೊಳ್ಳುತ್ತೀರಾ ಎಂದು ಕೇಳಿಸುವುದಿಲ್ಲ. ಆಗ ಸಮಸ್ಯೆ ಪ್ರಾರಂಭವಾಗುತ್ತದೆ ಎಂದು ಹಾಸ್ಯಮಯವಾಗಿ ನುಡಿದರು.

    ಇಲ್ಲಿಯವರೆಗೂ ಬಿಗ್‍ಬಾಸ್ 2 ಸೆಕೆಂಡ್‍ಗೂ ಹೆಚ್ಚು ಕಾಲ ತಬ್ಬಿಕೊಳ್ಳುವ ಹಾಗಿಲ್ಲ ಎಂಬ ನಿಯಮವನ್ನು ಜಾರಿಗೊಳಿಸಿಲ್ಲ. ಬಹುಶಃ ಅಂತಹ ನಿಯಮವನ್ನು ತರುವ ಹಾಗೇ ಮಾಡಬೇಡಿ. ಇಷ್ಟು ಸೀಸನ್‍ಗಳಲ್ಲಿ ಆ ರೀತಿಯ ನಿಯಮಗಳು ಇಲ್ಲಿಯವರೆಗೂ ಬಂದಿಲ್ಲ. ಬಹಳ ಜನ ಒಬ್ಬರಿಗೊಬ್ಬರು ತಬ್ಬಿಕೊಂಡಿದ್ದಾರೆ. ಆದರೆ ಈ ರೇಂಜ್‍ಗೆ ಯಾರು ತಬ್ಬಿಕೊಂಡಿಲ್ಲ. ಹೊಸ ನಿಯಮ ತರುವುದು ನನಗೂ ಸಹ ಇಷ್ಟವಿಲ್ಲ. ನೀವು ತಬ್ಬಿಕೊಳ್ಳಿ, ತಬ್ಬಿಸಿಕೊಳ್ಳುವವರು ತಬ್ಬಿಸಿಕೊಳ್ಳಿ. ಆದರೆ ಇಬ್ಬರೂ ಕೂಡ ಮಾತನಾಡಬೇಡಿ. ಮಾತನಾಡಿದರೆ ಅದು ನಮಗೆ ನೀವು ಏನು ಮಾತನಾಡುತ್ತಿದ್ದೀರಾ ಎಂದು ತಿಳಿಯದೇ ಸಮಸ್ಯೆಯಾಗುತ್ತದೆ ಎಂದರು.

    ನನಗೆ ಕೊನೆಯದಾಗಿ ಯಾರನ್ನು ಅಷ್ಟು ಹೊತ್ತು ತಬ್ಬಿಕೊಂಡೇ ಎಂಬ ಬಗ್ಗೆ ತಿಳಿದಿಲ್ಲ. ಆದರೆ ನಿಮ್ಮಲ್ಲಿ ಆ ಕಲೆ ಇದೆ. ಇರಲಿ, ತಬ್ಬಿಕೊಳ್ಳಿ. ಆದರೆ ತಬ್ಬಿಕೊಂಡು ಬಿಟ್ಟ ನಂತರ ಮಾತನಾಡಿ ಎಂದು ಕಿಚ್ಚ ಪ್ರಶಾಂತ್ ಸಂಬರಗಿಗೆ ವ್ಯಂಗ್ಯ ಮಾಡಿದರು.

    ಒಟ್ಟಾರೆ ಕಿಚ್ಚ ಸುದೀಪ್ ಹಾಗೂ ಪ್ರಶಾಂತ್ ಸಂಬರಗಿ ಜೊತೆಗಿನ ಹಾಸ್ಯಮಯ ಮಾತುಕತೆ ನೋಡಿ ಮನೆ ಮಂದಿಯೆಲ್ಲಾ ಫುಲ್ ಎಂಜಾಯ್ ಮಾಡುತ್ತಾ, ಜೋರಾಗಿ ನಗುತ್ತಾ, ಚಪ್ಪಾಳೆ ತಟ್ಟಿದರು.

  • ಪಬ್ಲಿಕ್ ಪ್ಲೇಸ್‍ನಲ್ಲಿ ಹಗ್ ಮಾಡಿದಕ್ಕೆ ಜೈಲು ಸೇರಿದ್ರು ಪ್ರೇಮಿಗಳು..!

    ಪಬ್ಲಿಕ್ ಪ್ಲೇಸ್‍ನಲ್ಲಿ ಹಗ್ ಮಾಡಿದಕ್ಕೆ ಜೈಲು ಸೇರಿದ್ರು ಪ್ರೇಮಿಗಳು..!

    ಜಕಾರ್ತಾ: ಸಾರ್ವಜನಿಕ ಸ್ಥಳದಲ್ಲಿ ತಬ್ಬಿಕೊಂಡಿದ್ದಕ್ಕೆ ಯುವ ಪ್ರೇಮಿಗಳಿಗೆ 17 ಬಾರಿ ಥಳಿಸಿ ಜೈಲಿಗಟ್ಟಿದ ಘಟನೆ ಇಂಡೋನೇಷ್ಯಾದ ಏಸೆ ಪ್ರಾಂತ್ಯದಲ್ಲಿ ನಡೆದಿದೆ.

    ಏಸೆ ಪ್ರಾಂತ್ಯದ ಮಹಿಳಾ ವಿಶ್ವವಿದ್ಯಾನಿಲಯದ 18 ವರ್ಷದ ವಿದ್ಯಾರ್ಥಿನಿ ಹಾಗೂ ಯುವಕನೊಬ್ಬನು ಸಾರ್ವಜನಿಕ ಸ್ಥಳದಲ್ಲಿ ತಬ್ಬಿಕೊಂಡಿದ್ದರು. ಆದರಿಂದ ಪ್ರೇಮಿಗಳು ಏಸೆ ಪ್ರಾಂತ್ಯದ ಕಾನೂನನ್ನು ಉಲ್ಲಂಘಸಿ ಕಾನೂನಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿ ಇಬ್ಬರಿಗೂ ಶಿಕ್ಷೆ ವಿಧಿಸಲಾಗಿದೆ.

    ಏಸೆ ಪ್ರಾಂತ್ಯದ ರಾಜಧಾನಿಯಾದ ಬಾಂಡಾ ಏಸೆಯಲ್ಲಿ ಪ್ರೇಮಿಗಳಿಬ್ಬರಿಗೂ ಮಸೀದಿಯ ಮುಂದೆ ಕೂರಿಸಿ ಸಾರ್ವಜನಿಕರ ಎದುರೇ ಅಲ್ಲಿನ ಧಾರ್ಮಿಕ ಮುಖಂಡರು 17 ಬಾರಿ ಬಿದಿರಿನ ಕೋಲಿನಿಂದ ಹೊಡೆದಿದ್ದಾರೆ. ಬಳಿಕ ಕಾನೂನನ್ನು ಉಲ್ಲಂಘಿಸಿದಕ್ಕೆ ಇಬ್ಬರಿಗೂ 1 ತಿಂಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲು ಆದೇಶ ಹೊರಡಿಸಿದ್ದಾರೆ.

    ಏಸೆ ಪ್ರಾಂತ್ಯದಲ್ಲಿ ಇಸ್ಲಾಂ ಧರ್ಮವನ್ನು ಪಾಲಿಸುವ ಜನರ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿನ ಸರ್ಕಾರ ಹಾಗೂ ಧಾರ್ಮಿಕ ಮುಖಂಡರು ಮಾಡಿರುವ ಕಾನೂನನ್ನು ಎಲ್ಲರೂ ಚಾಚು ತಪ್ಪದೇ ಪಾಲಿಸುತ್ತಾರೆ. ಅಷ್ಟೇ ಅಲ್ಲದೆ ಇಲ್ಲಿ ಕಾನೂನನ್ನು ಉಲ್ಲಂಘಿಸಿದರೆ ಷರಿಯಾ ಕಾನೂನಿನ ಪ್ರಕಾರ ಕಠಿಣ ಹಾಗೂ ಕ್ರೂರ ಶಿಕ್ಷೆಯನ್ನು ನೀಡಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮೋದಿ ಅಪ್ಪುಗೆಯ ಬಗ್ಗೆ ಕೊನೆಗೂ ಮೌನ ಮುರಿದ ರಾಹುಲ್ ಗಾಂಧಿ

    ಮೋದಿ ಅಪ್ಪುಗೆಯ ಬಗ್ಗೆ ಕೊನೆಗೂ ಮೌನ ಮುರಿದ ರಾಹುಲ್ ಗಾಂಧಿ

    ಬರ್ಲಿನ್: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ಎರಡು ದಿನಗಳ ಜರ್ಮನಿ ಪ್ರವಾಸದಲ್ಲಿದ್ದು, ಈ ವೇಳೆ ಸಂಸತ್ತಿನಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರನ್ನು ಅಪ್ಪಿಕೊಂಡಿದ್ದರ ಬಗ್ಗೆ ಕೊನೆಗೂ ಮಾತನಾಡಿದ್ದಾರೆ.

    ಬುಧವಾರ ಹ್ಯಾಮ್‍ಬರ್ಗ್ ನ ಬುಸೆರೀಯಸ್ ಸಮ್ಮರ್ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬರು ನೀವು ಮೋದಿಯವರನ್ನು ಅಪ್ಪಿಕೊಂಡಿದ್ದೇಕೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ನನ್ನ ಮೇಲೆ ದ್ವೇಷದ ಮಾತುಗಳನ್ನು ಆಡುತ್ತಿದ್ದರು. ಅಂತಹ ಸಂದರ್ಭದಲ್ಲಿ ನಾನು ಪ್ರೀತಿ, ಬಾಂಧವ್ಯವನ್ನು ತೋರಿಸಲು ಅವರ ಬಳಿಗೆ ಹೋಗಿ ಅವರನ್ನು ತಬ್ಬಿಕೊಂಡೆ ಎಂದು ಹೇಳಿದರು.

    ನಾನು ಅವರಿಗೆ ಈ ಜಗತ್ತಿನಲ್ಲಿ ದ್ವೇಷವೊಂದೇ ಇರುವುದಲ್ಲ. ನಾವು ಅಂದುಕೊಳ್ಳುವಷ್ಟು ಪ್ರಪಂಚ ಕೆಟ್ಟದಾಗಿಲ್ಲ. ಎಲ್ಲಾ ಕೆಟ್ಟದಾಗಿದೆ ಎಂದು ಭಾವಿಸುವಂತಿಲ್ಲ ಎಂಬುದನ್ನು ತೋರಿಸಲು ನಾನು ಅವರನ್ನು ಆಲಂಗಿಸಿದೆ. ಅಪ್ಪುಗೆ ವೇಳೆ ಖುದ್ದು ನರೇಂದ್ರ ಮೋದಿಯವರು ಗಲಿಬಿಲಿಗೊಳಗಾಗಿ, ಹಿಂದಕ್ಕೆ ಸರಿಯಲು ಯತ್ನಿಸಿದರೆ ಹೊರತು, ಅವರು ನನ್ನ ಮನಸ್ಥಿತಿಯನ್ನು ಅರಿಯುವ ಯೋಚನೆ ಮಾಡಲಿಲ್ಲ ಎಂದು ತಿಳಿಸಿದರು.

    ಜುಲೈ 20 ರಂದು ನಡೆದ ಸಂಸತ್ತಿನ ಮುಂಗಾರು ಅಧಿವೇಶನದ ಅವಿಶ್ವಾಸ ನಿರ್ಣಯ ಗೊತ್ತುವಳಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸುದೀರ್ಘ ಭಾಷಣಮಾಡಿದ್ದರು. ಭಾಷಣದ ವೇಳೆ ಆಢಳಿತಾರೂಢ ಎನ್‍ಡಿಎ ಸರ್ಕಾರ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಭಾಷಣದ ಬಳಿಕ ನೇರವಾಗಿ ಪ್ರಧಾನಿ ಬಳಿ ತೆರಳಿ ಅವರನ್ನು ಅಪ್ಪಿಕೊಂಡಿದ್ದರು.

    ರಾಹುಲ್ ಗಾಂಧಿಯವರ ನಡೆ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಸ್ವ-ಪಕ್ಷೀಯ ನಾಯಕರು ಸಹ ಪರೋಕ್ಷವಾಗಿ ರಾಹುಲ್ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪ್ಪಿಕೊಂಡು ಕಿಸ್ ಮಾಡ್ತಿದ್ದ ಜೋಡಿ ಅರೆಸ್ಟ್!

    ಅಪ್ಪಿಕೊಂಡು ಕಿಸ್ ಮಾಡ್ತಿದ್ದ ಜೋಡಿ ಅರೆಸ್ಟ್!

    ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‍ನ ಸಾರ್ವಜನಿಕ ಸ್ಥಳದಲ್ಲಿ ಕಾರು ನಿಲ್ಲಿಸಿ, ಅಪ್ಪಿಕೊಂಡು ಕಿಸ್ ಮಾಡುತ್ತಿದ್ದ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ.

    ರವಿವಾರ 18 ರಿಂದ 19 ವರ್ಷದ ಜೊಡಿ, ಇಸ್ಲಾಮಾಬಾದ್ ನಗರದ ಮಧ್ಯದ ಪ್ರದೇಶವೊಂದರಲ್ಲಿ ಕಾರು ನಿಲ್ಲಿಸಿ, ಅದರಲ್ಲಿ ಕುಳಿತು ತಬ್ಬಿಕೊಂಡು ಮುತ್ತು ಕೊಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರೂ, ಗಮನಿಸದ ಜೋಡಿ ತಮ್ಮ ಕಾರ್ಯದಲ್ಲಿಯೇ ನಿರತರಾಗಿದ್ದರು.

    ಸಾರ್ವಜನಿಕರಲ್ಲಿ ಅಶೀಲವಾಗಿ ನಡೆದುಕೊಂಡ ಕಾಯ್ದೆ ಅಡಿ ಜೋಡಿಗಳ ಮೇಲೆ ಪ್ರಕರಣ ದಾಖಲಿಸಿ, ಇಸ್ಲಾಮಾಬಾದ್ ನಲ್ಲಿರುವ ಕರಾಚಿ ಕಂಪೆನಿ ಠಾಣೆ ಪೊಲೀಸರು ಬಂಧಿಸಿದ್ದರು. ಈಗ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆರೋಪ ಸಾಬೀತಾದರೆ ಅವರಿಗೆ 3 ತಿಂಗಳ ಜೈಲು, ಇಲ್ಲವೇ ದಂಡ, ಅಥವಾ ಎರಡನ್ನು ನ್ಯಾಯಾಲಯ ವಿಧಿಸಬಹುದು.

    ಪಾಕಿಸ್ತಾನ ಬಹುಸಂಖ್ಯಾತ ಮುಸ್ಲಿಂ ರಾಷ್ಟ್ರವಾಗಿದ್ದು, ಪಾರ್ಕ್, ಮಳಿಗೆಗಳಿಗೆ ಭೇಟಿ ನೀಡುವ ಯುವ ಜೋಡಿಗಳಿಗೆ ಪೊಲೀಸರು ತೊಂದರೆ ಕೊಡುತ್ತಿದ್ದಾರೆ ಎಂದು ವರದಿಯಾಗಿದೆ. ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವ ಜೋಡಿಗಳ ಮೇಲೆ ದೌರ್ಜನ್ಯ ಎಸಗಿ ಸುಲಿಗೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಹಲವು ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಕೊನೆ ಕ್ಷಣದಲ್ಲಿ ಪ್ರಿಯತಮನಿಗೆ ನೀಡಿದ ಅಪ್ಪುಗೆ ಫೋಟೋ ವೈರಲ್

    ಕೊನೆ ಕ್ಷಣದಲ್ಲಿ ಪ್ರಿಯತಮನಿಗೆ ನೀಡಿದ ಅಪ್ಪುಗೆ ಫೋಟೋ ವೈರಲ್

    ಲಂಡನ್: ಪ್ರೇಮಿಯೊಬ್ಬಳು ತನ್ನ ಪ್ರಿಯತಮ ಸಾಯುವ ಕೊನೆಯ ಕ್ಷಣದಲ್ಲಿ ನೀಡಿದ ಅಪ್ಪುಗೆಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದ್ದು, ಸ್ಟಿಫೇನಿ ರೇ ಅಪ್ಪುಗೆ ನೀಡಿದ ಪ್ರೇಮಿ. ಈಕೆ ತನ್ನ ಪ್ರೇಮಿಯಾದ ಬ್ಲೇಕ್ ವಾರ್ಡ್ ಸಾಯಲು ಇನ್ನು 16 ನಿಮಿಷ ಇರುವಾಗ ಪ್ರೀತಿಯಿಂದ ಒಂದು ಅಪ್ಪುಗೆಯನ್ನು ನೀಡಿದ್ದಾರೆ. ಈ ಫೋಟೋವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಬ್ಲೇಕ್ ವಾರ್ಡ್, ವೇಲ್ಸ್ ನಲ್ಲಿರುವ ತಮ್ಮ ಮನೆಯ ಸಮೀಪದ ತಮ್ಮ ಕುಟುಂಬದ ಜೊತೆ ಪ್ರವಾಸದಲ್ಲಿದ್ದು, ಬೀಚಿನಲ್ಲಿ ಸ್ವಿಮಿಂಗ್ ಮಾಡುತ್ತಿದ್ದರು. ಈ ವೇಳೆ ಸಮುದ್ರದ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಆಗ ಸ್ಥಳದಲ್ಲಿದ್ದ ಕರಾವಳಿ ಸಿಬ್ಬಂದಿ ಗಮನಿಸಿ ತಕ್ಷಣ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾದರೆ ಶನಿವಾರ ಮೃತಪಟ್ಟಿದ್ದಾರೆ.

    ಈ ವೇಳೆ ಸ್ಟಿಫೇನಿ ರೇ ಪ್ರೇಮಿಯನ್ನು ನೋಡಲು ಆಸ್ಪತ್ರೆಗೆ ಹೋಗಿದ್ದು, ಆತನ ಕೊನೆಯ ಕ್ಷಣದಲ್ಲಿ ಪಕ್ಕದಲ್ಲಿ ಮಲಗಿಕೊಂಡು ಗಟ್ಟಿಯಾಗಿ ಅಪ್ಪಿಕೊಂಡಿದ್ದಾಳೆ. ಬಳಿಕ ಆಗಸ್ಟ್ 4 ರಂದು ಅಪ್ಪುಗೆ ಫೋಟೋವನ್ನು ತನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಳೆ.

    ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ ಬಳಿಕ ಅನೇಕರು ಅದನ್ನು ಶೇರ್ ಮಾಡಿ ಸಾಂತ್ವನ ಹೇಳಿದ್ದಾರೆ. ಬ್ಲೇಕ್ ಸಾವಿನ ನಂತರ ಕರಾವಳಿಯ ಸಿಬ್ಬಂದಿ ಒಂದು ನಿಮಿಷ  ಬೀಚ್ ನಲ್ಲಿ ಮೌನಾಚರಣೆ ಮಾಡಿದ್ದಾರೆ. ಸ್ಟಿಫೇನ್ ರೇ ಫೋಟೋ ಜೊತೆ ಒಂದು ಭಾವನಾತ್ಮಕವಾದ ಪತ್ರವೊಂದನ್ನು ಬರೆದಿದ್ದಾಳೆ.

  • ರಾಹುಲ್ ಗಾಂಧಿ ನಡೆಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಅಸಮಾಧಾನ

    ರಾಹುಲ್ ಗಾಂಧಿ ನಡೆಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಅಸಮಾಧಾನ

    ನವದೆಹಲಿ: ಭಾಷಣ ಮುಗಿಯುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವರು ಪ್ರಧಾನಿ ನರೇಂದ್ರ ಮೋದಿ ರವರ ಆಲಂಗಿಸಿದ್ದು, ಸದನದ ಶಿಷ್ಟಾಚಾರದ ಉಲಂಘನೆ ಎಂದು ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಅವಿಶ್ವಾಸ ನಿರ್ಣಯ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ತಮ್ಮ ಭಾಷಣ ಮಾಡಿದ ಬಳಿಕ ಪ್ರಧಾನಿ ಮೋದಿ ಅವರನ್ನು ಆಲಂಗಿಸಿ ಕೊಂಡಿದ್ದರು. ರಾಹುಲ್ ನಡೆಯ ಬಳಿಕ ಮಾತನಾಡಿದ ಸ್ಪೀಕರ್, ನನಗೆ ನಿಮ್ಮ ನಡೆ ಇಷ್ಟವಾಗಲಿಲ್ಲ. ಸದನದಲ್ಲಿ ಇರುವುದು ಬರಿ ನರೇಂದ್ರ ಮೋದಿ ಅಲ್ಲ, ಅವರು ಭಾರತದ ಪ್ರಧಾನಿ. ಈ ಹುದ್ದೆಗೆ ತನ್ನದೇ ಆದ ಗೌರವ ಇದೆ ಎಂದರು.

    ಇದೇ ವೇಳೆ ತಮಗೇ ರಾಹುಲ್‍ಗಾಂಧಿ ಮೇಲೆ ಯಾವುದೇ ದ್ವೇಷವಿಲ್ಲ ಎಂದು ಸ್ಪಷ್ಟಪಡಿಸಿದ ಸ್ಪೀಕರ್, ರಾಹುಲ್ ತಮಗೇ ಮಗನ ಹಾಗೇ. ಸದನದಲ್ಲಿರುವ ಎಲ್ಲಾ ಸದಸ್ಯರು ಸಭೆಯ ಘನತೆ ಗೌರವವನ್ನು ಕಾಪಾಡಬೇಕು ಹಾಗೂ ಶಾಂತಿಯಿಂದ ವರ್ತಿಸಬೇಕು ಸೂಚಿಸಿದರು.

    ಸ್ಪೀಕರ್‍ ರವರ ಹೇಳಿಕೆ ನಂತರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಪ್ರತಿಕ್ರಿಯೆ ನೀಡಿ, ರಾಹುಲ್ ಗಾಂಧಿಯ ಆಲಿಂಗನವನ್ನು ಚಿಪ್ಕೋ ಆಂದೋಲನ ರೀತಿಯಾಗಿತ್ತು ಎಂದು ವ್ಯಂಗ್ಯವಾಡಿದರು.

    ಸದ್ಯ ರಾಹುಲ್ ನಡೆಯನ್ನು ಸಮರ್ಥಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ, ಸಂಸದ ಶಶಿತರೂರ್, ರಾಹುಲ್ ಗಾಂಧಿರವರದ್ದು ಅದ್ಭುತವಾದ ಭಾಷಣವಾಗಿತ್ತು. ಅವರ ಭಾಷಣ ಗೇಮ್ ಚೇಂಜಿಂಗ್ ಆಗಿತ್ತು. ಸರ್ಕಾರದ ಹೇಳಿಕೆಗಳನ್ನು ಹೊರತುಪಡಿಸಿ, ಬಿಜೆಪಿ ಅಕ್ಷರಃ ಸಹ ಉಸಿರಾಡಲು ಸಾಧ್ಯವಿಲ್ಲವಾಗಿತ್ತು ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

    ಈ ರಾಹುಲ್ ರವರ ನಡೆಯನ್ನು ಟೀಕಿಸಿದ ಬಿಜೆಪಿ ಮುಖಂಡ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್, ರಾಹುಲ್ ರವರ ನಡೆ ಚಿಕ್ಕ ಮಕ್ಕಳ (ಚೈಲ್ಡಿಶ್) ವರ್ತನೆಯಂತಿತ್ತು. ರಾಹುಲ್ ಗಾಂಧಿ ಇಷ್ಟು ದೊಡ್ಡವರಾಗಿದ್ದು, ಚಿಕ್ಕ ಮಗುವಿನ ಹಾಗೇ ವರ್ತಿಸಿದರು ಅವರಿಗೆ ತಿಳುವಳಿಕೆ ಇಲ್ಲ ಎಂಬುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಆರೋಪಿಸಿದರು.