Tag: ಅಪ್ಪು

  • ಪುನೀತ್ ಪುಣ್ಯಸ್ಮರಣೆ – ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬ

    ಪುನೀತ್ ಪುಣ್ಯಸ್ಮರಣೆ – ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬ

    ರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರ 4ನೇ ಪುಣ್ಯಸ್ಮರಣೆ ಹಿನ್ನೆಲೆ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ದೊಡ್ಮನೆ ಕುಟುಂಬದವರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

    ಕಂಠೀರವ ಸ್ಟುಡಿಯೋಕ್ಕೆ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್, ಶಿವರಾಜಕುಮಾರ್‌ ರಾಘಣ್ಣ ದಂಪತಿ, ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಸೇರಿದಂತೆ ಕುಟುಂಬಸ್ಥರು ಆಗಮಿಸಿ, ಪೂಜೆಗೆ ಸಿದ್ಧತೆ ಮಾಡಿಕೊಂಡು ಬಳಿಕ ಅಪ್ಪುಗೆ ಇಷ್ಟವಾದ ತಿನಿಸುಗಳನ್ನಿಟ್ಟು ಪೂಜೆ ನೆರವೇರಿಸಿದ್ದಾರೆ. ಇದನ್ನೂ ಓದಿ: ನಗುಮೊಗದ ಅರಸ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 4 ವರ್ಷ

    ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸಿದ್ದು, ಅಪ್ಪು ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಪೂಜೆ ವೇಳೆ ಅಭಿಮಾನಿಗಳು ಅಪ್ಪು ಅಪ್ಪು ಅಂತಾ ಜೈಕಾರ ಹಾಕುತ್ತಿದ್ದು, ಕೈಯಲ್ಲಿ ರೋಸ್ ಹಿಡಿದು ಆಗಮಿಸುತ್ತಿದ್ದಾರೆ. ಇನ್ನೂ ಯುವ ರಾಜ್‌ಕುಮಾರ್‌ನ್ನು ನೋಡಿ ಜೂ.ಪವರ್ ಸ್ಟಾರ್‌ಗೆ ಎಂದು ಜೈ ಎಂದು ಜೈಕಾರ ಹಾಕುತ್ತಿದ್ದಾರೆ. ಈ ವರ್ಷ ವಿಶೇಷ ಅಂದ್ರೆ ಅಪ್ಪು ಅವರ ಫ್ಯಾನ್ ಡಮ್ ಆ್ಯಪ್ ಲಾಂಚ್ ಆಗಿದೆ.

    ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಕುಟುಂಬಸ್ಥರು ಪಾರ್ವತಮ್ಮ ಹಾಗೂ ಡಾ. ರಾಜ್‌ಕುಮಾರ್ ಸಮಾಧಿಗೆ ಪೂಜೆ ಮಾಡಿದ್ದಾರೆ.

    ಪುನೀತ್ ಸಮಾಧಿಗೆ ಬಿಳಿ ಗುಲಾಬಿ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು, ಇಂದು ಇಡೀ ದಿನ ಕಂಠೀರವ ಸ್ಟುಡಿಯೋದಲ್ಲಿ ಅನ್ನಸಂತರ್ಪಣೆ ಹಾಗೂ ರಕ್ತದಾನ, ನೇತ್ರದಾನ ಶಿಬಿರವನ್ನು ಅಭಿಮಾನಿಗಳು ಅಯೋಜಿಸಿದ್ದಾರೆ. ಬೆಟ್ಟದ ಹೂವು ಅಪ್ಪು ಎಂದಿಗೂ ಬಾಡದ ಹೂವಾಗಿ ಅಭಿಮಾನಿಗಳ ಹೃದಯಮಂದಿರದಲ್ಲಿ ನೆಲೆಸಿದ್ದಾರೆ. ದೈಹಿಕವಾಗಿ ನಮ್ಮ ಜೊತೆಗೆ ಅಪ್ಪು ಇಲ್ಲದಿದ್ದರೂ, ತಾವು ಮಾಡಿದ ಸಮಾಜಮುಖಿ ಕಾರ್ಯಗಳು, ಸಿನಿಮಾಗಳ ಮೂಲಕ ನಮ್ಮೊಂದಿಗೆ ಅಜರಾಮರವಾಗಿ ಉಳಿದಿದ್ದಾರೆ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎನ್ನುವುದನ್ನ ಮತ್ತೆ ಪ್ರೂವ್ ಮಾಡಿದ್ದಾರೆ ಫ್ಯಾನ್ಸ್. ಅವರ ಈ ಪುಣ್ಯಸ್ಮರಣೆಯ ದಿನವನ್ನ ಅವರ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.ಇದನ್ನೂ ಓದಿ:ನಾಲ್ಕೇ ವಾರದಲ್ಲಿ ಒಟಿಟಿಯಲ್ಲಿ ಕಾಂತಾರ ರಿಲೀಸ್ ಯಾಕೆ? – ಒಪ್ಪಂದದ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಪ್ರತಿಕ್ರಿಯೆ

  • ನಗುಮೊಗದ ಅರಸ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 4 ವರ್ಷ

    ನಗುಮೊಗದ ಅರಸ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 4 ವರ್ಷ

    ಗುಮೊಗದ ಅರಸ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಮ್ಮನ್ನಗಲಿ ಇಂದಿಗೆ 4 ವರ್ಷ.

    ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 4ನೇ ಪುಣ್ಯಸ್ಮರಣೆ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪುನೀತ್ ಸಮಾಧಿಗೆ ಬಣ್ಣ ಬಣ್ಣದ ಗುಲಾಬಿ ಹೂವಿನ ಅಲಂಕಾರ ಮಾಡಲಾಗಿದೆ. ದೊಡ್ಮನೆ ಕುಟುಂಬ ಬೆಳಗ್ಗೆ 9:30ರ ಸುಮಾರಿಗೆ ಪುನೀತ್ ಸಮಾಧಿಗೆ ಪೂಜೆ ನೆರವೇರಿಸಲಿದ್ದು, ಇಷ್ಟದ ಖಾದ್ಯಗಳನ್ನಿಟ್ಟು ಪೂಜೆ ಮಾಡಲಿದ್ದಾರೆ.ಇದನ್ನೂ ಓದಿ:ಆಂಧ್ರ ಕರಾವಳಿಗೆ ಅಪ್ಪಳಿಸಿದ ಮೊಂಥಾ ಚಂಡಮಾರುತ

    ಅಪ್ಪು ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬಳಿ ಇಂದು ಇಡೀ ದಿನ ಅನ್ನಸಂತರ್ಪಣೆ ಜೊತೆಗೆ ನೇತ್ರದಾನ, ರಕ್ತದಾನ ಶಿಬಿರಗಳ ಆಯೋಜನೆ ಮಾಡಿಕೊಂಡಿದ್ದಾರೆ. ರಾಜ್ಯದ ಮೂಲೆ ಮೂಲಗಳಿಂದ ಅಭಿಮಾನಿಗಳು ಆಗಮಿಸಿ, ಅಪ್ಪುಗೆ ನಮನ ಸಲ್ಲಿಸಲಿದ್ದಾರೆ. ಅಲ್ಲದೇ, ರಾಜ್ಯಾದ್ಯಂತ ಅವರ ಅಭಿಮಾನಿಗಳು ತಾವಿರುವ ಸ್ಥಳದಿಂದಲೇ ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ.

  • ದಿ.ಪುನೀತ್ ರಾಜ್‌ಕುಮಾರ್ ಕನಸಿನ ‘ಅಪ್ಪು ಫ್ಯಾನ್‌ ಡಮ್’ ಆ್ಯಪ್ ಅನಾವರಣ

    ದಿ.ಪುನೀತ್ ರಾಜ್‌ಕುಮಾರ್ ಕನಸಿನ ‘ಅಪ್ಪು ಫ್ಯಾನ್‌ ಡಮ್’ ಆ್ಯಪ್ ಅನಾವರಣ

    ದಿ.ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಕನಸುಗಳನ್ನು ಸಾಕಾರಗೊಳಿಸಲು ನೂತನ ಆ್ಯಪ್ `ಅಪ್ಪು ಫ್ಯಾನ್ ಡಮ್’ (Appu Fandom App) ಅನಾವರಣಗೊಂಡಿದೆ.

    ಆ್ಯಪ್, ಎಐ ತಂತ್ರಜ್ಞಾನದ ಮೂಲಕ ಅಭಿಮಾನಿಗಳನ್ನು ತಲುಪುವ ಸದುದ್ದೇಶದೊಂದಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ನೇತೃತ್ವದಲ್ಲಿ ಸಿದ್ಧವಾಗಿರುವ ಆ್ಯಪ್‌ನ್ನು ಶನಿವಾರ (ಅ.25) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಲೋಕಾರ್ಪಣೆ ಮಾಡಿದರು.ಇದನ್ನೂ ಓದಿ: ಕಾಂತಾರ ಗೆದ್ದ ಖುಷಿಯಿಂದ ರಿಷಬ್ ಮನೆಯಲ್ಲಿ ಭರ್ಜರಿ ಹಬ್ಬ

    ಆ್ಯಪ್ ಲೋಕಾರ್ಪಣೆ ವೇಳೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿ, ನಿಮಗೆ ಗೊತ್ತಿರುವಂತೆ ಅಪ್ಪು ಯಾವಾಗಲೂ ಹೊಸತನದ ಕಡೆಗೆ ಹುಡುಕಾಟ ನಡೆಸುತ್ತಿದ್ದರು. ಹೊಸತನದ ಹುಡುಕಾಟದಿಂದಲೇ ಹೊಸಬರಿಗೆ ಅವಕಾಶ ಕೊಡಲೆಂದೇ ಪಿಆರ್‌ಕೆ ಕೂಡ ಶುರುವಾಗಿದ್ದು, ಇಂಡಸ್ಟ್ರಿಗೆ ಏನಾದ್ರೂ ಕೊಡುಗೆ ಕೊಡ್ಬೇಕು ಎಂದು ಹೇಳುತ್ತಿದ್ದರು. ಸಮರ್ಥ್ ಅವರ ಟೀಂ ಒಂದು ಐಡಿಯಾ ತೆಗೆದುಕೊಂಡು ಬಂದಿದ್ದರು. ಅದನ್ನು ಸಾಕಷ್ಟು ಡೆವೆಲೆಪ್ ಮಾಡಿ, ಸಿನಿಮಾ, ಫಿಟ್ನೆಸ್, ಮಕ್ಕಳಿಗಾಗಿ ವಿಶೇಷ ಕಂಟೆಟ್‌ಗಳು ಬರಲಿವೆ. ಇದು ಕೇವಲ ನಮ್ಮ ಆ್ಯಪ್ ಅಲ್ಲ, ನಿಮ್ಮ ಆ್ಯಪ್ ಎಂದು ಹೇಳಿದರು.

     

  • ಅಪ್ಪು ಕಂದ ಒಂದ್ಸಲ ಬಂದು ನನ್ನ ನೋಡ್ಕೊಂದು ಹೋಗು: ಪುನೀತ್ ಬಗ್ಗೆ ಸೋದರತ್ತೆ ಮಾತು

    ಅಪ್ಪು ಕಂದ ಒಂದ್ಸಲ ಬಂದು ನನ್ನ ನೋಡ್ಕೊಂದು ಹೋಗು: ಪುನೀತ್ ಬಗ್ಗೆ ಸೋದರತ್ತೆ ಮಾತು

    ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ಹುಟ್ಟುಹಬ್ಬದ ಹಿನ್ನೆಲೆ ಅವರ ಸೋದರ ಅತ್ತೆ ನಾಗಮ್ಮ ವಿಶೇಷವಾಗಿ ಬರ್ತ್‌ಡೇಗೆ ವಿಶ್ ಮಾಡಿದ್ದಾರೆ. ಅಪ್ಪು ನಿನಗೆ 50 ವರ್ಷ ಆಯಿತೇ? ಅಂತಲೂ ಆಶ್ಚರ್ಯಪಟ್ಟಿದ್ದಾರೆ. ಆದರೆ, ನಾಗಮ್ಮಗೆ ಅಪ್ಪು ಇಲ್ಲದೇ ಇರೋದು ಗೊತ್ತೇ ಇಲ್ಲ. ಅಸಲಿ ವಿಚಾರ ತಿಳಿಯದೇ ಅಪ್ಪುಗೆ ವಿಶ್ ಮಾಡಿರುವ ಹಿರಿಯ ಜೀವ ನಾಗಮ್ಮ ವಿಡಿಯೋ ಫ್ಯಾನ್ಸ್ ಪೇಜ್‌ಗಳಲ್ಲಿ ಇದೀಗ ವೈರಲ್ ಆಗುತ್ತಿದೆ.

    ನಿನಗೆ 50 ವರ್ಷ ಆಯ್ತಾ..ಅಬ್ಬಾ ಚೆನ್ನಾಗಿದಿಯಾ ಮಗನೇ? ಎಂದಿದ್ದಾರೆ. ನಿನ್ನ ಇನ್ನೂ ಮಗು ಅಂದುಕೊಂಡಿದ್ದೇನೆ ನಾನು. ನನ್ನನ್ನ ಒಂದ್ ಸಾರಿ ಬಂದು ನೋಡ್ಕೊಂಡ್ ಹೋಗು ಕಂದಾ. ನಿನಗೆ 50 ವರ್ಷ ಆಯ್ತಲ್ಲೋ ಎಂದು ಅವರು ಮಾತನಾಡಿದ್ದಾರೆ. ಅಪ್ಪುಗೆ 50 ವರ್ಷ ತುಂಬಿತು ಎಂದು ತಿಳಿದಾಗ ಖುಷಿಯಿಂದ ಸೋದರ ಅತ್ತೆ ನಾಗಮ್ಮ ಶುಭಹಾರೈಸಿದ್ದಾರೆ. ಇನ್ನೂ ಓದಿ:ಪುನೀತ್‌ ರಾಜ್‌ಕುಮಾರ್‌ ನೆನೆದ RCB ತರಬೇತುದಾರ ದಿನೇಶ್‌ ಕಾರ್ತಿಕ್‌

    ಅದಷ್ಟೇ ಅಲ್ಲ, ವಿಡಿಯೋದಲ್ಲಿ ಅಪ್ಪು ಬಗೆಗಿನ ಒಂದು ಘಟನೆಯನ್ನ ನಾಗಮ್ಮ ನೆನಪಿಸಿಕೊಂಡಿದ್ದಾರೆ. ಅಪ್ಪು ಬಂದಾಗ ಫ್ಯಾನ್ಸ್ ಮನೆ ಬಳಿ ಬಂದರು. ಎಲ್ಲರೂ ಬಂದವರೇ ಫೋಟೋಗಳನ್ನೆ ತೆಗೆಸಿಕೊಂಡ್ರು. ಆ ದಿನ ಶೂಟಿಂಗ್ ಮಾಡೋಕೂ ಬಿಡಲೇ ಇಲ್ಲ. ಬರೀ ಫೋಟೋ ತೆಗೆಸಿಕೊಳ್ಳುವುದೇ ಆಯಿತು ನೋಡಿ ಅಂತಲೇ ನಾಗಮ್ಮ ಹೇಳಿಕೊಂಡಿದ್ದಾರೆ. ಇನ್ನೂ ಅಪ್ಪು ಮೇಲಿನ ಅವರ ಪ್ರೀತಿ ನೋಡಿದ್ರೆ ಎಂತಹವರಿಗೂ ಹೃದಯಕ್ಕೆ ಟಚ್ ಆಗುತ್ತದೆ.

    ಅಂದಹಾಗೆ, ಪುನೀತ್ ಅವರು 46ನೇ ವಯಸ್ಸಿಯಲ್ಲಿ ನಿಧನರಾದರು. 2021ರ ಅಕ್ಟೋಬರ್ 2ರಂದು ಅಪ್ಪು ಇಹಲೋಕ ತ್ಯಜಿಸಿದರು.

  • ‘ಅಪ್ಪು’ ಸಿನಿಮಾ ನೋಡೋಕೆ ನನಗೆ ಧೈರ್ಯ ಇಲ್ಲ: ಶಿವಣ್ಣ

    ‘ಅಪ್ಪು’ ಸಿನಿಮಾ ನೋಡೋಕೆ ನನಗೆ ಧೈರ್ಯ ಇಲ್ಲ: ಶಿವಣ್ಣ

    ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕಕ್ಕೆ ಕುಟುಂಬಸ್ಥರೊಂದಿಗೆ ಶಿವಣ್ಣ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ‘ಅಪ್ಪು’ ಸಿನಿಮಾ ನೋಡೋಕೆ ನನಗೆ ಧೈರ್ಯ ಇಲ್ಲ ಅಂತ ಶಿವಣ್ಣ (Shivarajkumar) ಮಾತನಾಡಿದ್ದಾರೆ.

    ಅಪ್ಪು ಸ್ಮಾರಕಕ್ಕೆ ಶಿವಣ್ಣ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಕ್ಕೆ ಮಾತನಾಡಿ, 50ನೇ ವರ್ಷ ಹುಟ್ಟುಹಬ್ಬಕ್ಕೆ ಅಪ್ಪು ಇರಬೇಕಿತ್ತು. ಆದರೆ ಅವನಿಲ್ಲ ಅಂತ ನೆನಪು ಮಾಡಿಕೊಂಡ್ರೆ ದುಃಖ ಆಗ್ತಿದೆ. ಆದರೆ ಅಭಿಮಾನಿಗಳ ಮನಸ್ಸಿನಲ್ಲಿ ಅಪ್ಪು ಉಳಿದಿದ್ದಾನೆ. ಅವನ ಕೆಲಸಗಳಿಂದ, ವ್ಯಕ್ತಿತ್ವದಿಂದ ಇನ್ನೂ ಅಜರಾಮರ ಆಗಿದ್ದಾನೆ. ಅಪ್ಪು ಇಲ್ಲೇ ನಮ್ಮ ಜೊತೆ ಎಲ್ಲೋ ಇದ್ದಾನೆ ಅನಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ:ಒಳ್ಳೆತನದಲ್ಲಿ ಅಪ್ಪು ಸರ್ ಯಾವಾಗಲೂ ಜೀವಂತವಾಗಿರುತ್ತಾರೆ: ಅನುಶ್ರೀ

    ‘ಅಪ್ಪು’ ರೀ-ರಿಲೀಸ್ ವೇಳೆ, ಯಾಕೆ ನೀವು ಅಪ್ಪು ಚಿತ್ರ ನೋಡಿಲ್ಲ ಅಂತ ಕೇಳಿದ್ದರು. ಅಪ್ಪು ಸಿನಿಮಾ ನೋಡೋಕೆ ನನಗೆ ಧೈರ್ಯ ಇಲ್ಲ. ಸಿನಿಮಾಗೆ ‘ಅಪ್ಪು’ ಅಂತ ಟೈಟಲ್ ಕೊಟ್ಟಿದ್ದೆ ನಾನು, ಈಗ ಆ ಹಳೆಯ ನೆನಪುಗಳೆಲ್ಲ ಕಾಡುತ್ತದೆ. ಪುರಿ ಜಗನ್ನಾಥ್ ಜೊತೆ ಸೇರಿ ಮಾಡಿದ ಸಿನಿಮಾವಿದು. ಈಗಲೂ ‘ಅಪ್ಪು’ ಸಿನಿಮಾನ ಜನ ಹೊಗಳುತ್ತಿದ್ದಾರೆ. 100% ಅಪ್ಪು ಇದ್ದಾನೆ, ಎಲ್ಲೂ ಹೋಗಿಲ್ಲ ಎಂದಿದ್ದಾರೆ.

    ಅಪ್ಪು ಬರ್ತ್‌ಡೇ ನೆನಪು ಅಂದರೆ ಸಾಕಷ್ಟಿದೆ. ಚಿಕ್ಕ ವಯಸ್ಸಿನಿಂದ ಸಾಕಷ್ಟು ಸೆಲೆಬ್ರೇಷನ್ ಮಾಡಿದ್ದೀವಿ. ಚಿಕ್ಕವಯಸ್ಸಿನಲ್ಲೇ ಅಪ್ಪು ಸ್ಟಾರ್ ಡಮ್ ತಗೊಂಡು ಬಂದವನು. ಬಾಲನಟನಾಗಿ, ಹೀರೋ ಆಗಿ ದೊಡ್ಡ ಯಶಸ್ಸು ಗಳಿಸಿದ್ದಾನೆ. ಚಿಕ್ಕವನಿಂದ ಜನರ ಮನಸ್ಸಿನಲ್ಲಿ ಅಪ್ಪು ಇದ್ದು ಇದ್ದು ಈಗ ಅವನಿಲ್ಲ ಅಂತ ಊಹಿಸಿಕೊಳ್ಳೋಕೆ ಭಾರೀ ಕಷ್ಟ ಆಗ್ತಿದೆ ಎಂದರು ಶಿವಣ್ಣ.

  • ಅಭಿಮಾನಿಗಳ ಪ್ರೀತಿ ನೋಡಿದ್ರೆ ಅಪ್ಪು ಚಿಕ್ಕಪ್ಪ ಇಲ್ಲೇ ಇದ್ದಾರೆ ಅನಿಸುತ್ತೆ: ಯುವ

    ಅಭಿಮಾನಿಗಳ ಪ್ರೀತಿ ನೋಡಿದ್ರೆ ಅಪ್ಪು ಚಿಕ್ಕಪ್ಪ ಇಲ್ಲೇ ಇದ್ದಾರೆ ಅನಿಸುತ್ತೆ: ಯುವ

    ಗುಮುಖದ ರಾಜಕುಮಾರ ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ಇಂದು (ಮಾ.17) 50ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆ ಚಿಕ್ಕಪ್ಪನ ಸ್ಮಾರಕಕ್ಕೆ ಯುವ ರಾಜ್‌ಕುಮಾರ್ ಪೂಜೆ ಸಲ್ಲಿಸಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯಿ ಅಭಿಮಾನಿಗಳ ಪ್ರೀತಿ ನೋಡಿದ್ರೆ ಅಪ್ಪು ಚಿಕ್ಕಪ್ಪ ಇಲ್ಲೇ ಇದ್ದಾರೆ ಅನಿಸುತ್ತದೆ ಎಂದು ಯುವ (Yuva Rajkumar) ಮಾತನಾಡಿದ್ದಾರೆ. ಇದನ್ನೂ ಓದಿ:‘ಅಪ್ಪು’ ಸಿನಿಮಾ ವೀಕ್ಷಿಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

    ಮಾಧ್ಯಮಕ್ಕೆ ಮಾತನಾಡಿದ ಯುವ, ಮೊದಲಿಗೆ ನಮ್ಮ ಚಿಕ್ಕಪ್ಪನಿಗೆ 50ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು. ಬೆಳಗ್ಗೆ 6 ಗಂಟೆಯಿಂದಲೇ ಕಂಠೀರವ ಸ್ಟುಡಿಯೋದಲ್ಲಿನ ಸ್ಮಾರಕದ ಬಳಿ ಜನ ಬಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೆಲ್ಲ ನೋಡಿದ್ರೆ ಚಿಕ್ಕಪ್ಪ ಇಲ್ಲೇ ನಮ್ಮ ಜೊತೆನೇ ಇದ್ದಾರೆ ಅನಿಸುತ್ತದೆ. ‘ಅಪ್ಪು’ ಸಿನಿಮಾ ರೀ-ರಿಲೀಸ್ ಆದಾಗಲೂ ಅಭಿಮಾನಿಗಳು ಹೊಸ ಸಿನಿಮಾ ರಿಲೀಸ್ ಆದಂತೆ ಬಂದು ನೋಡಿದ್ರು. ಅಪ್ಪು ರೀ-ರಿಲೀಸ್‌ನಲ್ಲೂ ಅಷ್ಟೇ ಪವರ್, ಎನರ್ಜಿ, ಸೆಲೆಬ್ರೇಷನ್ ಇತ್ತು ಎಂದಿದ್ದಾರೆ.

    ಅವರ ಹೆಸರಲ್ಲಿ ಪ್ರತಿ ವರ್ಷ ಅಭಿಮಾನಿಗಳು ಅನ್ನದಾನ, ರಕ್ತದಾನ, ಶಿಬಿರಗಳನ್ನ ಮಾಡ್ತಿದ್ದಾರೆ. ಇದನ್ನೆಲ್ಲಾ ನೋಡಿದಾಗ ಖುಷಿಯಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ:ಹನಿಮೂನ್ ಮೂಡ್‌ನಲ್ಲಿ ಲವ್ ಬರ್ಡ್ಸ್- ನಾಗಚೈತನ್ಯ ಜೊತೆ ಶೋಭಿತಾ ಜಾಲಿ ರೈಡ್

    ಇನ್ನೂ ಅಭಿಮಾನಿಗಳ ಆರಾಧ್ಯ ಪುನೀತ್ 50ನೇ ಹುಟ್ಟುಹಬ್ಬದ ಹಿನ್ನೆಲೆ ಅಪ್ಪು ಸ್ಮಾರಕಕ್ಕೆ ಜನಸಾಗರದಂತೆ ಫ್ಯಾನ್ಸ್ ಬರುತ್ತಿದ್ದಾರೆ. ನಮ್ಮೊಡನೆ ಇಲ್ಲ ಎಂಬ ಕಹಿ ಸತ್ಯ ಗೊತ್ತಿದ್ದರೂ ಅಪ್ಪು ಮೇಲಿನ ಪ್ರೀತಿ ಫ್ಯಾನ್ಸ್‌ಗೆ ಕಿಂಚಿತ್ತೂ ಕಮ್ಮಿಯಾಗಿಲ್ಲ.

  • ‘ಅಪ್ಪು’ ಸಿನಿಮಾ ವೀಕ್ಷಿಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

    ‘ಅಪ್ಪು’ ಸಿನಿಮಾ ವೀಕ್ಷಿಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

    ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ‘ಅಪ್ಪು’ (Appu) ಸಿನಿಮಾ ರೀ-ರಿಲೀಸ್ ಆಗಿದೆ. ಈ ಹಿನ್ನೆಲೆ ಬೆಂಗಳೂರಿನ ನರ್ತಕಿ ಥಿಯೇಟರ್‌ನಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್ (Ashwini Rajkumar) ‘ಅಪ್ಪು’ ಸಿನಿಮಾ ವೀಕ್ಷಿಸಿದ್ದಾರೆ. ಇದನ್ನೂ ಓದಿ:ಅಂಬಿ ಮೊಮ್ಮಗನ ನಾಮಕರಣ ಸಂಭ್ರಮ: ಕಿಚ್ಚ ಸುದೀಪ್‌ ಭಾಗಿ

    ಮಕ್ಕಳಾದ ಧೃತಿ ಮತ್ತು ವಂದಿತಾ ಜೊತೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ‘ಅಪ್ಪು’ ಸಿನಿಮಾ ನೋಡಲು ಬಂದಿದ್ದಾರೆ. ಈ ವೇಳೆ, ಅವರನ್ನು ‌ ಅಪ್ಪು ಫ್ಯಾನ್ಸ್ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇದನ್ನೂ ಓದಿ:ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿದ ಪ್ರೇಮ್‌, ಶರಣ್ಯ ಶೆಟ್ಟಿ

    23 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ‘ಅಪ್ಪು’ ಸಿನಿಮಾಗೆ ಮತ್ತೆ ಅದೇ ಕ್ರೇಜ್ ಇರೋದು ನೋಡಿ ಅಶ್ವಿನಿ ಖುಷಿಪಟ್ಟಿದ್ದಾರೆ. ಬೆಳ್ಳಿಪರದೆಯ ಮೇಲೆ ಪುನೀತ್‌ ಅವರನ್ನು ನೋಡ್ತಿದ್ದಂತೆ ಅಶ್ವಿನಿ ಮತ್ತು ಮಕ್ಕಳಾದ ಧೃತಿ, ವಂದಿತಾ ಭಾವುಕರಾಗಿದ್ದಾರೆ. ಬಳಿಕ 10 ನಿಮಿಷಗಳ ಕಾಲ ಸಿನಿಮಾ ನೋಡಿ ತೆರಳಿದ್ದಾರೆ.

    ಇನ್ನೂ ಇಂದು ವೀರೇಶ್‌ ಚಿತ್ರಮಂದಿರದಲ್ಲಿ ವಿನಯ್‌ ರಾಜ್‌ಕುಮಾರ್‌, ಶರ್ಮಿಳಾ ಮಾಂಡ್ರೆ ಜೊತೆ ರಮ್ಯಾ ಅವರು ‘ಅಪ್ಪು’ ಸಿನಿಮಾ ವೀಕ್ಷಿಸಿದ್ದಾರೆ.

    ಇನ್ನೂ ಪುರಿ ಜಗನ್ನಾಥ್ ನಿರ್ದೇಶನದ ‘ಅಪ್ಪು’ ಸಿನಿಮಾದಲ್ಲಿ ಪುನೀತ್‌ಗೆ ನಾಯಕಿಯಾಗಿ ರಕ್ಷಿತಾ ನಟಿಸಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು. 2002ರಲ್ಲಿ ಈ ಸಿನಿಮಾದ ಮೂಲಕ ಪುನೀತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

  • ಸಿನಿಮಾ ಮೂಲಕ ಪುನೀತ್ ಜೀವಂತವಾಗಿದ್ದಾರೆ: ‘ಅಪ್ಪು’ ಸಿನಿಮಾ ಬಗ್ಗೆ ರಮ್ಯಾ ಮಾತು

    ಸಿನಿಮಾ ಮೂಲಕ ಪುನೀತ್ ಜೀವಂತವಾಗಿದ್ದಾರೆ: ‘ಅಪ್ಪು’ ಸಿನಿಮಾ ಬಗ್ಗೆ ರಮ್ಯಾ ಮಾತು

    ಟ ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ಜನ್ಮದಿನದ ಪ್ರಯುಕ್ತ ‘ಅಪ್ಪು’ (Appu) ಸಿನಿಮಾ ಮಾ.14ರಂದು ರೀ-ರಿಲೀಸ್ ಆಗಿದೆ. ಈ ಹಿನ್ನೆಲೆ ವೀರೇಶ್ ಥಿಯೇಟರ್‌ಗೆ ಆಗಮಿಸಿ ವಿನಯ್ ರಾಜ್‌ಕುಮಾರ್, ಶರ್ಮಿಳಾ ಮಾಂಡ್ರೆ ಜೊತೆ ರಮ್ಯಾ (Ramya) ‘ಅಪ್ಪು’ ಚಿತ್ರ ವೀಕ್ಷಿಸಿದ್ದಾರೆ. ಬಳಿಕ ‘ಪಬ್ಲಿಕ್ ಟಿವಿ’ಗೆ ಮಾತನಾಡಿದ ರಮ್ಯಾ, ಸಿನಿಮಾ ಮೂಲಕ ಅಪ್ಪು ಜೀವಂತವಾಗಿದ್ದಾರೆ ಎಂದು ಹೇಳಿದ್ದಾರೆ.

    ‘ಅಪ್ಪು’ ಸಿನಿಮಾ ರಿಲೀಸ್ ಆದಾಗ ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ದೆ, ಹಾಗಾಗಿ ಹಳೆಯ ನೆನಪುಗಳೆಲ್ಲಾ ಬರುತ್ತಿದೆ. ಆಗ ನಾನು ‘ಅಪ್ಪು’ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದು, ನೆನಪಾಯ್ತು. ಈಗ ಮತ್ತೆ ಅದೇ ಸಿನಿಮಾ ನೋಡಿದಾಗ ಅಪ್ಪು ಇಲ್ಲ ಅಂತ ನಂಬೋಕೆ ಆಗಲ್ಲ. ಆದರೆ ಸಿನಿಮಾ ಮೂಲಕ ಅಪ್ಪು ಜೀವಂತವಾಗಿದ್ದಾರೆ ಎಂದು ಪುನೀತ್‌ರನ್ನು ನಟಿ ಸ್ಮರಿಸಿದ್ದಾರೆ. ಈ ವೇಳೆ, ಹಾಗಾಗಿ ಅಭಿಮಾನಿಗಳೊಂದಿಗೆ ಅಪ್ಪು ಚಿತ್ರ ನೋಡಿದ್ದು ಖುಷಿಯಾಗಿದೆ ಎಂದಿದ್ದಾರೆ. ಇದನ್ನೂ ಓದಿ:‘ರಾಣಾ ಅಮರ್‌ ಅಂಬರೀಶ್‌’ ಎಂದು ಅಂಬಿ ಮೊಮ್ಮಗನಿಗೆ ನಾಮಕರಣ

    ‘ಅಪ್ಪು’ ಸಿನಿಮಾ ಬಂದು 23 ವರ್ಷಗಳಾಯ್ತು. ಈಗ ಮತ್ತೆ ಈ ಚಿತ್ರವನ್ನು ನೋಡೋಕೆ ಬಂದಿದ್ದೀನಿ, ನಂಬೋಕೆ ಆಗ್ತಿಲ್ಲ. ಇದೇ ಜೀವನ. ಮೊದಲ ಬಾರಿ ‘ಅಪ್ಪು’ ಸಿನಿಮಾ ನೋಡಿದಾಗ ನಾನು ಕೂಡ ಅಭಿಮಾನಿಯಾಗಿ ಹೋಗಿ ಚಿತ್ರ ನೋಡಿದ್ದೆ, ಆ ನಂತರ ಪುನೀತ್ ಜೊತೆ ನಾನು ಕೂಡ ಸಿನಿಮಾ ಮಾಡಿದ್ದೀನಿ. ಜನ ನನ್ನನ್ನು ಗುರುತಿಸುತ್ತಾರೆ. ಈಗ ಚಿತ್ರ ನೋಡಿದಾಗ ಎಲ್ಲವೂ ನೆನಪಾಗುತ್ತದೆ ಎಂದಿದ್ದಾರೆ ಮೋಹಕ ತಾರೆ ರಮ್ಯಾ.

    ಇನ್ನೂ ಪುರಿ ಜಗನ್ನಾಥ್ ನಿರ್ದೇಶನದ ‘ಅಪ್ಪು’ ಸಿನಿಮಾದಲ್ಲಿ ಪುನೀತ್‌ಗೆ ನಾಯಕಿಯಾಗಿ ರಕ್ಷಿತಾ (Rakshita) ನಟಿಸಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು. 2002ರಲ್ಲಿ ಈ ಸಿನಿಮಾದ ಮೂಲಕ ಪುನೀತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

  • ಪುನೀತ್‌ ಸರ್ ಫ್ಯಾನ್ಸ್‌ಗೆ ಇವತ್ತು ಹಬ್ಬ – ಅಪ್ಪು ರೀ-ರಿಲೀಸ್‌  ಬಗ್ಗೆ ಅನುಶ್ರೀ ಮಾತು

    ಪುನೀತ್‌ ಸರ್ ಫ್ಯಾನ್ಸ್‌ಗೆ ಇವತ್ತು ಹಬ್ಬ – ಅಪ್ಪು ರೀ-ರಿಲೀಸ್‌ ಬಗ್ಗೆ ಅನುಶ್ರೀ ಮಾತು

    ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಇಂದು (ಮಾ.14) ‘ಅಪ್ಪು’ ಚಿತ್ರ ರೀ- ರಿಲೀಸ್ ಆಗಿದೆ. ವೀರೇಶ್ ಥಿಯೇಟರ್‌ಗೆ ಆಗಮಿಸಿ ಅಭಿಮಾನಿಗಳೊಂದಿಗೆ ‘ಅಪ್ಪು’ ಚಿತ್ರವನ್ನು ನಿರೂಪಕಿ ಅನುಶ್ರೀ (Anushree) ವೀಕ್ಷಿಸಿ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅಪ್ಪು ಸರ್ ಫ್ಯಾನ್ಸ್‌ಗೆ ಇವತ್ತು ಹಬ್ಬ ಎಂದು ಅನುಶ್ರೀ ಮಾತನಾಡಿದ್ದಾರೆ.

    ಅನುಶ್ರೀ ಮಾತನಾಡಿ, ‘ಅಪ್ಪು’ ಸಿನಿಮಾ ಇವತ್ತು ರೀ-ರಿಲೀಸ್ ಆಗಿದೆ. ಆದರೆ ಅಪ್ಪು ಸರ್ ಫ್ಯಾನ್ಸ್‌ಗೆ ಇವತ್ತು ಹಬ್ಬ. ಅವರ ಸಿನಿಮಾ ನೋಡೋಕೆ, ಶಿಳ್ಳೆ ಹೊಡೆಯೋಕೆ ಮತ್ತೆ ಒಂದು ವರ್ಷ ಕಾಯಬೇಕು. ಅವರ ಚಿತ್ರದ ಲಾಂಚ್ ಟೈಮ್‌ನಲ್ಲಿ ನಾವು ಹೇಗೆ ಸಂಭ್ರಮಿಸುತ್ತಿದ್ದೆವೋ ಈಗಲೂ ಹಾಗೇ ಸಂಭ್ರಮಿಸುತ್ತಿದ್ದೇವೆ ಎಂದಿದ್ದಾರೆ.

    ಮತ್ತೊಂದು ವಿಶೇಷ ಅಂದ್ರೆ, ಇವತ್ತು ಅಶ್ವಿನಿ ಮೇಡಂ ಅವರ ಹುಟ್ಟುಹಬ್ಬ. ಹಾಗಾಗಿ ಎಲ್ಲಾ ಅಪ್ಪು ಅಭಿಮಾನಿಗಳ ಪರವಾಗಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು, ಲವ್ ಯೂ ಅಪ್ಪು ಸರ್ ಎಂದಿದ್ದಾರೆ.

    ಇನ್ನೂ ಪುರಿ ಜಗನ್ನಾಥ್ ನಿರ್ದೇಶನದ ‘ಅಪ್ಪು’ ಸಿನಿಮಾದಲ್ಲಿ ಪುನೀತ್‌ಗೆ ನಾಯಕಿಯಾಗಿ ರಕ್ಷಿತಾ ನಟಿಸಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು.

  • ನಮಗೆ ಪುನೀತ್‌ ಬೇರೆಯಲ್ಲ, ದರ್ಶನ್‌ ಬೇರೆ ಅಲ್ಲ: ‘ಅಪ್ಪು’ ಸಿನಿಮಾ ವೀಕ್ಷಿಸಿದ ಡಿ ಬಾಸ್‌ ಫ್ಯಾನ್‌

    ನಮಗೆ ಪುನೀತ್‌ ಬೇರೆಯಲ್ಲ, ದರ್ಶನ್‌ ಬೇರೆ ಅಲ್ಲ: ‘ಅಪ್ಪು’ ಸಿನಿಮಾ ವೀಕ್ಷಿಸಿದ ಡಿ ಬಾಸ್‌ ಫ್ಯಾನ್‌

    – ಪುನೀತ್‌, ದರ್ಶನ್‌ ಪರಸ್ಪರ ತಬ್ಬಿಕೊಂಡಿರೋ ಚಿತ್ರ ಬಿಡಿಸಿದ ಅಭಿಮಾನಿ
    – ಸ್ಟಾರ್‌ ವಾರ್‌ ಬೇಡ.. ಕನ್ನಡ ಸಿನಿಮಾ ನೋಡೋಣ ಎಂದು ಸಂದೇಶ

    ಪುನೀತ್‌ ರಾಜ್‌ಕುಮಾರ್‌ ಜನ್ಮದಿನದ ಹಿನ್ನೆಲೆಯಲ್ಲಿ ಇಂದು ಅಪ್ಪು ಸಿನಿಮಾ ರೀ-ರಿಲೀಸ್‌ ಆಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಈ ನಡುವೆ ದರ್ಶನ್‌ ಅಭಿಮಾನಿಯೊಬ್ಬ ‘ಅಪ್ಪು’ ಸಿನಿಮಾ ವೀಕ್ಷಿಸಿ ಗಮನ ಸೆಳೆದಿದ್ದಾರೆ.

    ಸ್ಟಾರ್ ವಾರ್‌ಗೆ ಬ್ರೇಕ್ ಹಾಕಲು ದರ್ಶನ್ ಅಭಿಮಾನಿ ವಿಭಿನ್ನ ಪ್ರಯತ್ನವೊಂದನ್ನು ಮಾಡಿದ್ದಾರೆ. ರೀ-ರಿಲೀಸ್ ಆಗಿರುವ ಅಪ್ಪು ಸಿನಿಮಾವನ್ನು ಥಿಯೇಟರ್‌ಗೆ ಬಂದು ವೀಕ್ಷಿಸಿ ಎಂಜಾಯ್‌ ಮಾಡಿದ್ದಾರೆ.

    ಈ ವೇಳೆ, ದರ್ಶನ್‌ ಅಭಿಮಾನಿ ಫೋಟೊವೊಂದನ್ನು ತಂದಿದ್ದರು. ಅದರಲ್ಲಿ, ನಟ ದರ್ಶನ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಪರಸ್ಪರರು ಅಪ್ಪಿಕೊಂಡಿರುವ ಚಿತ್ರ ಬಿಡಿಸಲಾಗಿತ್ತು. ಈ ಫೋಟೊವನ್ನು ಪ್ರದರ್ಶಿಸುವ ಮೂಲಕ ದರ್ಶನ್‌ ಅಭಿಮಾನಿ, ಸ್ಟಾರ್‌ ವಾರ್‌ ಬಿಟ್ಟು ಕನ್ನಡ ಸಿನಿಮಾ ನೋಡೋಣ ಎಂಬ ಸಂದೇಶ ರವಾನಿಸಿದ್ದಾರೆ.

    ಈ ಕುರಿತು ‘ಪಬ್ಲಿಕ್‌ ಟಿವಿ’ ಜೊತೆ ಮಾತನಾಡಿದ ದರ್ಶನ್‌ ಅಭಿಮಾನಿ ರಕ್ಷಿತ್‌, ಸ್ಟಾರ್‌ ವಾರ್‌ ಮಾಡಬಾರದು ಎಂಬ ಸಂದೇಶ ನೀಡುವ ಉದ್ದೇಶದಿಂದ ಈ ಚಿತ್ರಕಲೆ ಬಿಡಿಸಿದ್ದೇನೆ. ನಮಗೆ ಪುನೀತ್‌ ರಾಜ್‌ಕುಮಾರ್‌ ಬೇರೆಯಲ್ಲ, ಡಿ ಬಾಸ್‌ ಬೇರೆಯಲ್ಲ. ಎಲ್ಲಾರೂ ಒಂದೆ. ಆದರೆ, ನಾನು ಡಿ ಬಾಸ್‌ನ ಜಾಸ್ತಿ ನಂಬುತ್ತೇನೆ ಎಂದು ತಿಳಿಸಿದ್ದಾರೆ.

    ಕನ್ನಡ ಇಂಡಸ್ಟ್ರಿಯಲ್ಲಿ ಪುನೀತ್‌ ರಾಜ್‌ಕುಮಾರ್‌, ಸುದೀಪ್‌, ಉಪೇಂದ್ರ ಅವರನ್ನು ಬಿಟ್ಟು ಕೊಡ್ತೀವಿ ಅಂತಲ್ಲ. ಎಲ್ಲಾ ಮೂವಿಗಳನ್ನೂ ನೋಡ್ತೀವಿ. ಆದರೆ, ಡಿ ಬಾಸ್‌ ಒಂದು ಕೈ ಮೇಲೆ. ನಾನು ಡಿ ಬಾಸ್‌ ಫ್ಯಾನ್‌ ಆಗಿರುವುದರಿಂದ ಅವರು ಒಂದು ಕೈ ಮೇಲೆ ಎಂದರು.

    ಡಿ ಬಾಸ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಫ್ಯಾನ್ಸ್‌ ನಡುವೆ ಯಾವುದೇ ರೀತಿಯ ಗಲಾಟೆ ಇಲ್ಲ. ಆದರೆ, ಬೇರೆ ಬೇರೆ ವಿಚಾರಗಳಲ್ಲಿ ಫ್ಯಾನ್‌ ವಾರ್‌ ಮಾಡುವುದಕ್ಕೆ ಹೋಗಬೇಡಿ ಎಂದು ಹೇಳುವುದಕ್ಕೆ ಇಷ್ಟ ಪಡ್ತೀನಿ. ಡಿ ಬಾಸ್‌ ಫ್ಯಾನ್ಸ್‌ ಯಾವುದೇ ರೀತಿಯ ಫ್ಯಾನ್‌ ವಾರ್‌ ಮಾಡಲ್ಲ ಎಂಬುದು ಎಲ್ಲರಿಗೂ ಗೊತ್ತಾಗಬೇಕು ಅನ್ನೋದು ನಮ್ಮ ಉದ್ದೇಶ. ಈಗ ಸ್ಟಾರ್‌ ಸ್ಟಾರ್‌ಗಳೇ ಚೆನ್ನಾಗಿದ್ದಾರೆ. ನಾವು ಫ್ಯಾನ್‌ ವಾರ್‌ ಯಾಕೆ ಮಾಡಬೇಕು? ನಾವೆಲ್ಲ ಒಟ್ಟಿಗೆ ಚೆನ್ನಾಗಿರೋಣ. ಕನ್ನಡ ಸಿನಿಮಾಗಳನ್ನು ಬೆಳೆಸೋಣ ಎಂದು ತಿಳಿಸಿದರು.