Tag: ಅಪ್ಪಾಜಿ ಗೌಡ

  • ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಸಿಕ್ಕಿ ಬಿದ್ದ ಜೆಡಿಎಸ್ ಮುಖಂಡನ ಪುತ್ರ

    ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಸಿಕ್ಕಿ ಬಿದ್ದ ಜೆಡಿಎಸ್ ಮುಖಂಡನ ಪುತ್ರ

    – 1.39 ಲಕ್ಷ ರೂ. ನಗದು ಜಪ್ತಿ ಮಾಡಿದ ಐಟಿ ಅಧಿಕಾರಿಗಳು

    ಶಿವಮೊಗ್ಗ: ಮಾಜಿ ಶಾಸಕ, ಜೆಡಿಎಸ್ ಮುಖಂಡ ಅಪ್ಪಾಜಿ ಗೌಡ ಅವರ ಪುತ್ರ ಅಜಿತ್ ಕುಮಾರ್ ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಭದ್ರಾವತಿಯ ಎಂಪಿಎಂ – ಸುರಗಿ ತೋಪಿನಲ್ಲಿ ಅಜಿತ್ ಕುಮಾರ್ ಹಣ ಹಂಚುತ್ತಿದ್ದರು. ಈ ಕುರಿತು ಐಟಿ ಅಧಿಕಾರಿಗಳಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಹೀಗಾಗಿ ಎಂಪಿಎಂ ಠಾಣೆಯ ಪೊಲೀಸರ ಸಹಕಾರದಿಂದ ದಾಳಿ ಮಾಡಿದ ಅಧಿಕಾರಿಗಳು 1.39 ಲಕ್ಷ ರೂ. ನಗದು ಹಣವನ್ನು ಜಪ್ತಿ ಮಾಡಿದ್ದಾರೆ. ಇದನ್ನು ಓದಿ: ಶಿವಮೊಗ್ಗಕ್ಕೆ ಹೊರಟಿದ್ದ ಕಾರಿನ ಸ್ಟೆಪ್ನಿಯಲ್ಲಿತ್ತು 2.30 ಕೋಟಿ ರೂ.!

    ಅಜಿತ್ ಕುಮಾರ್ ಬೆಳಗ್ಗೆಯಿಂದಲೇ ಭದ್ರಾವತಿಯ ವಿವಿಧ ಗ್ರಾಮಗಳಿಗೆ ತೆರಳಿ ಮತದಾರರಿಗೆ ಹಣ ಹಂಚುತ್ತಿದ್ದರು. ಮಧ್ಯಾಹ್ನ ಎಂಪಿಎಂ- ಸುರಗಿ ತೋಪಿಗೆ ಬಂದಾಗ ಐಟಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

    ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮತದಾನ ಮಂಗಳವಾರ ನಡೆಯಲಿದ್ದು, ಕುರುಡು ಕಾಂಚಣ ಭಾರೀ ಸದ್ದು ಮಾಡುತ್ತಿದೆ. ಬೆಂಗಳೂರಿನಿಂದ ಶಿವಮೊಗ್ಗ ಹಾಗೂ ಭದ್ರಾವತಿಗೆ ಕಾರಿನ ಸ್ಟೆಪ್ನಿ ಟೈರ್ ಒಳಗಡೆ ಸಾಗಿಸುತ್ತಿದ್ದ 2.30 ಕೋಟಿ ರೂ.ವನ್ನು ಶನಿವಾರ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡ ಅವರಿಗೆ ಐಟಿಯಿಂದ ನೋಟಿಸ್ ಜಾರಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಾಜಿ ಶಾಸಕರ ಓರ್ವ ಆಪ್ತನನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.

  • ವೋಟ್ ಹಾಕದಿದ್ರೆ ಭದ್ರಾವತಿ ಸ್ಟೈಲ್ ತೋರಿಸ್ಬೇಕಾಗುತ್ತೆ: ಶಾಸಕ ಅಪ್ಪಾಜಿ ಗೌಡ ಧಮ್ಕಿ

    ವೋಟ್ ಹಾಕದಿದ್ರೆ ಭದ್ರಾವತಿ ಸ್ಟೈಲ್ ತೋರಿಸ್ಬೇಕಾಗುತ್ತೆ: ಶಾಸಕ ಅಪ್ಪಾಜಿ ಗೌಡ ಧಮ್ಕಿ

    ಶಿವಮೊಗ್ಗ: ಭದ್ರಾವತಿ ಶಾಸಕ ಅಪ್ಪಾಜಿಗೌಡ ಫೋನಿನಲ್ಲಿ ಧಮ್ಕಿ ಹಾಕಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಸಂಘಟನೆಯೊಂದರ ಮುಖಂಡನಿಗೆ ಕರೆ ಮಾಡಿ ಮಾತನಾಡಿರೋ ಅಪ್ಪಾಜಿಗೌಡ, ನನಗೆ ಓಟ್ ಹಾಕದೇ ಹೋದ್ರೆ ಎಲ್ಲಿ ನೋಡ್ಕೋಬೇಕೋ ಅಲ್ಲಿ ನೋಡ್ಕೋತಿನಿ. ಎಲ್ಲರನ್ನು ಇರಲಿ ಅಂತ ಫ್ರೀ ಬಿಟ್ಟಿದ್ದೀನಿ. ಎಲೆಕ್ಷನ್ ಆಗಲಿ ಗೊತ್ತಲ ಭದ್ರವಾತಿ ಸ್ಟೈಲ್ ತೋರಿಸದಿದ್ರೆ ಅಂತ ಹಳೇ ಸ್ಟೈಲ್‍ನಲ್ಲಿ ಧಮ್ಕಿ ಹಾಕಿರೋ ಆಡಿಯೋ ಈಗ ವೈರಲ್ ಆಗಿದೆ. ಈ ಆಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಆಡಿಯೋದಲ್ಲೇನಿದೆ?:
    * ಮೋಹನ್- ಹಲೋ ಮಂಜು ಅವರೇ.. ಅಣ್ಣನ ಕೈನಲ್ಲಿ ಕೊಡ್ತೀನಿ ಮಾತಾಡು
    * ಅಪ್ಪಾಜಿಗೌಡ- ಹಲೋ
    * ಮೋಹನ- ಹಲೋ ನಮಸ್ಕಾರ ಅಣ್ಣ
    * ಅಪ್ಪಾಜಿಗೌಡ- ಏನಪ್ಪ
    * ಮೋಹನ- ನಾನು ಮೋಹನ ಅಣ್ಣ
    * ಅಪ್ಪಾಜಿ ಗೌಡ- ಹಾ ಹೇಳೋ ಮೋಹನ
    * ಮೋಹನ- ಅದೇ ಈ ಸಲ ನಾವೆಲ್ಲ ನಿಮಗೆ ಓಟ್ ಮಾಡ್ತೀವಿ ಅಣ್ಣ
    * ಅಪ್ಪಾಜಿಗೌಡ- ಏಲ್ಲೋ ತಾಸಿಗೆ ಒಂದೊದು ಮಾತಾಡ್ತಿಯಲ್ಲೋ ಮೋಹನ
    * ಮೋಹನ- ಅಣ್ಣ ಅಮ್ಮ ಬೈದ್ರು ಅಣ್ಣ ಬಾಯಿಗೆ ಬಂದಂಗೆ
    * ಅಪ್ಪಾಜಿಗೌಡ- ಅಮ್ಮ ಬೈದ್ರು ನಿನಗೆ ಬುದ್ಧಿ ಬಂದಿಲ್ಲ. ನನ್ಮಗಂದು ಅವನನ್ನ.. ಪೋಲೀಸ್ ನವನಿಗೆ ನೀನು ಹೋಗಿ ಕೇಳು ನಮ್ಮ ಬಾಸ್ ಅವನು ನನಗೆ ಅವನು ಕೇಳಲಿ ನಾನು ಹೇಳ್ತೀನಿ ಅಂತೀಯ
    * ಮೋಹನ- ತಪ್ಪಾಯ್ತು ಬಿಡಣ್ಣ ನಮ್ಮ ಕಡೆಯಿಂದ ತಪ್ಪಾಯ್ತು
    * ಅಪ್ಪಾಜಿಗೌಡ- ಮಾತಾಡಸಬೇಡ ಅಂತ ಹೇಳು ಸುಮ್ಮನೆ ಇದ್ದುಬಿಡ್ತೀವಿ
    * ಮೋಹನ- ಅಲ್ಲ ಅಣ್ಣ ನಂದು ತಪ್ಪಾಯ್ತು ಅಣ್ಣ
    * ಅಪ್ಪಾಜಿಗೌಡ- ತಪ್ಪಾಯ್ತು ಅನ್ನೋ ಪ್ರಶ್ನೆಯಲ್ಲ. ನಾವೇ ನೇರವಾಗಿ ಮಾತಾಡಿದ್ರು ನೀನು ಹಾಗೆ ಅವತ್ತು ಹಂಗೆ ಮಾತಾಡ್ತೀಯ ಅನ್ನೋದಾದ್ರೆ ನಾನು ರಾಜಕಾರಣ ಇಲ್ದೆ ಹೋದ್ರು ಅವನು ಪೋಲೀಸ್ನೋರನ್ನ ನಾನ್ ಕೇಳ್ತೀನಾ. ಓಟ್ ಮಾಡು ಕೆಲಸ ಮಾಡು ಅಂತ ಹೇಳಿ ಅವರಿಗೆಲ್ಲ ಇನ್ನ ಸ್ವಲ್ಪ ದಿನ ಕಳೀಲಿ. ಅವರಿಗೆ ಎಲ್ಲೆಲ್ಲಿ ಹೇಳಬೇಕೋ ಅಲ್ಲಲ್ಲಿ ಹೇಳ್ತೀನಿ. ನಾವು ಪ್ರೀ ಬಿಟ್ಟುಬಿಟ್ಟಿದ್ದೀವಿ ಅಷ್ಟೆ. ನಾವು ಹಳೆ ಸ್ಟೈಲ್ ಎತ್ತಿದ್ರೆ ಉಮೇಶ ಭದ್ರಾವತಿನಲ್ಲಿ ಇರ್ತಾ ಇರಲಿಲ್ಲ ಗೊತ್ತಾ?
    * ಮೋಹನ-ಆಯ್ತ ಅಣ್ಣ ಅಣ್ಣ