Tag: ಅಪ್ಪಾಜಿ

  • ‘ಅಪ್ಪಾಜಿ’ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ ಪ್ರಥಮ್

    ‘ಅಪ್ಪಾಜಿ’ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ ಪ್ರಥಮ್

    ಮೂರು ದಶಕಗಳ ಹಿಂದೆ ವಿಷ್ಣುವರ್ಧನ್ ಅಭಿನಯದ ’ಅಪ್ಪಾಜಿ’ (Appaji) ಸಿನಿಮಾ ಬಿಡುಗಡೆಗೊಂಡು ಯಶಸ್ವಿಯಾಗಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರಿದೆ. ರಾಮನವಮಿ ಶುಭದಿನದಂದು ಸಿದ್ದಗಂಗಾ ಮಠದಲ್ಲಿರುವ ಶಿವಕುಮಾರ ಸ್ವಾಮಿಗಳ ಗದ್ದಿಗೆ ಸನ್ನಿಧಿಯಲ್ಲಿ ಮುಹೂರ್ತ ಸಮಾರಂಭ ನಡೆಯಿತು. ಬಿಗ್ ಬಾಸ್  ವಿನ್ನರ್ ಪ್ರಥಮ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಹಿರಿಯ ನಟ ಸ್ವಸ್ತಿಕ್ ಶಂಕರ್  ಕ್ಯಾಮಾರ ಆನ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ’ಪ್ರೀತಿಗೆ ಕಡಲು ಕೋಪಕ್ಕೆ ಸಿಡಿಲು’ ಎಂಬ ಅಡಿಬರಹವಿದೆ.

    ಚಿತ್ರರಂಗದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರುವ ಓಂ ಪ್ರತಾಪ್. ಹೆಚ್. ಶಿವಮೊಗ್ಗ (Om Pratap. H. Shimoga) ಸಿನಿಮಾಕ್ಕೆ ಬರವಣಿಗೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ತುಮಕೂರಿನ ಬಿ.ಚಂದಿರಧರ,ಪಿನ್ನೇನಹಳ್ಳಿ-ಹೊನ್ನೇನಹಳ್ಳಿ, ತಂದೆಯ ಪಾತ್ರಕ್ಕೆ ಬಣ್ಣ ಹಚ್ಚುವ ಜತೆಗೆ ಸುಚಂದು ನೂಶಿತ ಕ್ರಿಯೇಶನ್ಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿರುವುದು ಹೊಸ ಅನುಭವ.

    ನಿರ್ದೇಶಕರು ಹೇಳುವಂತೆ ಮೊದಲು ’ಜನಕ’ ಹೆಸರನ್ನು ಇಡಲಾಗಿತ್ತು. ಬೇರೆಯವರು ನೊಂದಣಿ ಮಾಡಿಸಿದ್ದರಿಂದ, ಅನಿವಾರ್ಯವಾಗಿ ಇದೇ ಟೈಟಲ್ ಇಡಲಾಗಿದೆ. ನಾನು ಮತ್ತು ನಿರ್ಮಾಪಕರು ಸಾಹಸಸಿಂಹನ ಅಭಿಮಾನಿಗಳು. ಶೀರ್ಷಿಕೆ ಹಳೆಯದಾಗಿದ್ದರೂ ಕಥೆ ಹೊಸತನದಿಂದ ಇರಲಿದೆ. ಅಪ್ಪನಾದವನು ಮಕ್ಕಳ ಮೇಲೆ ತೋರಿಸುವ ಪ್ರೀತಿ, ಆತನ ಜವಬ್ದಾರಿ ಏನಿರುತ್ತದೆ. ಒಂದು ಹಂತದಲ್ಲಿ ತನಗಾದ ನೋವು, ಅನ್ಯಾಯಗಳನ್ನು ಹೇಗೆ ತೀರಿಸಿಕೊಳ್ಳುತ್ತಾನೆ ಎಂಬುದನ್ನು ಭಾವನಾತ್ಮಕವಾಗಿ ತೋರಿಸಲಾಗುತ್ತಿದೆ. ತುಮಕೂರು, ಡಾಬಸಪೇಟೆ ಉಳಿದುದನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗುವುದು ಎಂದರು.

    ಸಹಾಯಕ ಕೋರಿಯೋಗ್ರಾಫರ್ ಆಗಿರುವ ಶ್ರೀವೆಂಕಿ ಆಟೋ ಚಾಲಕನಾಗಿ ನಾಯಕ. ಪೂಜಾರಾಮ್ ನಾಯಕಿ. ತಾಯಿಯಾಗಿ ಭವ್ಯ. ಇವರೊಂದಿಗೆ ನಾಗೇಂದ್ರಅರಸ್, ಮಹೇಶ್‌ಸಿದ್ದು, ಜಗದೀಶ್‌ಕೊಪ್ಪ, ಅಭಿಷೇಕ್, ಸುನಿಲ್, ಕರ್ಣ, ಯಶಸ್, ಪಲ್ಟಿಗೋವಿಂದ, ಸುರೇಶ್‌ಸ್ವಾಮಿ, ಸುಶೀಲ, ಶಿವಮೊಗ್ಗರಾಮಣ್ಣ, ಗೋಪಾಲ್.ಕೆ.ಆರ್, ಬೇಬಿ ಚೈತ್ರಾ, ಮಾಸ್ಟರ್ ದುಶ್ಯಂತಚಂದ್ರ,  ಕೆಂಚಪ್ಪ, ಲಿಖಿತಾಲಿವ್ಯ ಮುಂತಾದವರು ನಟಿಸುತ್ತಿದ್ದಾರೆ. ಆರು ಹಾಡುಗಳಿಗೆ ಕುಶಾಲ್‌ರಾಜ್ ಸಂಗೀತವಿದೆ. ಈ ಪೈಕಿ ತಂದೆ ಮಗ, ತಂದೆ ಮಗಳ ಮೇಲೆ ಗೀತೆ ಇರುವುದು ವಿಶೇಷ. ಜಿ.ವಿ.ರಮೇಶ್-ಕೇಶವ್ ಛಾಯಾಗ್ರಹಣ, ಸಾಹಸ ಕೌರವ ವೆಂಕಟೇಶ್, ಸಾಹಿತ್ಯ ತ್ರಿಲೋಕ್‌ತ್ರಿವಿಕ್ರಮ್, ಸಂಕಲನ ಮಹೇಶ್, ಕಾರ್ಯಕಾರಿ ನಿರ್ಮಾಪಕ ಜಗದೀಶ್‌ಗಂಗಪ್ಪ ಅವರದಾಗಿದೆ.

  • ಒಬ್ಬಳನ್ನೇ ರೆಸಾರ್ಟ್ ಗೆ ಕರೆದರೆ ಉದ್ದೇಶ ಏನಿರತ್ತೆ? : ಕನ್ನಡದ ನಟಿ ಹೇಳಿಕೊಂಡ ಕಹಿ ಸತ್ಯ

    ಒಬ್ಬಳನ್ನೇ ರೆಸಾರ್ಟ್ ಗೆ ಕರೆದರೆ ಉದ್ದೇಶ ಏನಿರತ್ತೆ? : ಕನ್ನಡದ ನಟಿ ಹೇಳಿಕೊಂಡ ಕಹಿ ಸತ್ಯ

    ವಿಷ್ಣುವರ್ಧನ್ ನಟನೆಯ ಅಪ್ಪಾಜಿ (Appaji) ಸಿನಿಮಾ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಮನಿ (Amani) ಇದೇ ಮೊದಲ ಬಾರಿಗೆ ತಮ್ಮ ವೃತ್ತಿ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಸಿನಿಮಾ ರಂಗದ ಕಾಸ್ಟಿಂಗ್ ಕೌಚ್ (Casting Couch) ಕರಾಳಮುಖವನ್ನು ಸಮಾಜದ ಮುಂದೆ ಬಿಚ್ಚಿಟ್ಟಿದ್ದಾರೆ. ಅಡ್ಡದಾರಿಯಲ್ಲಿ ಸಿನಿಮಾ ರಂಗಕ್ಕೆ ಹೋಗುವುದಕ್ಕೆ ನನಗೆ ಇಷ್ಟವಿರಲಿಲ್ಲ. ಹಾಗಾಗಿ ತಡವಾಗಿ ನಾನು ಎಂಟ್ರಿ ಕೊಟ್ಟೆ ಎಂದು ಅವರು ಹೇಳಿಕೊಂಡಿದ್ದಾರೆ.

    ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಾಗ ಅನೇಕ ಆಡಿಷನ್ ಗಳಿಗೆ ಅವರು ಹೋಗಿ ಬಂದಿದ್ದಾರಂತೆ. ಕೆಲವರು ಸೆಲಕ್ಟ್ ಆಗಿದ್ದೀಯಾ ಅಂತ ಹೇಳಿ ಕಳುಹಿಸಿ ಆನಂತರ ರಿಜೆಕ್ಟ್ ಆಗಿದ್ದೀಯಾ ಎಂದು ಹೇಳುತ್ತಿದ್ದರಂತೆ. ಇನ್ನೂ ಕೆಲವರು ನೀವು ಮನೆಗೆ ಹೋಗಿ ನಾವು ಫೋನ್ ಮಾಡುತ್ತೇವೆ ಎಂದು ಹೇಳಿ ಕಳುಹಿಸುತ್ತಿದ್ದರಂತೆ. ಒಬ್ಬರು ಕರೆ ಮಾಡಿ, ‘ಮೇಡಂ, ನಿರ್ದೇಶಕರು ಐಡಿಯಲ್ ಬೀಚ್ ರೆಸಾರ್ಟ್ ಗೆ ಬರೋಕೆ ಹೇಳಿದ್ದಾರೆ. ನೀವೊಬ್ಬರೇ ಬನ್ನಿ. ನಿಮ್ಮ ತಾಯಿ ಕರೆದುಕೊಂಡು ಬರಬೇಡಿ’ ಎಂದರಂತೆ. ಮೊದಲ ಮೊದಲು ಆಮನಿಗೆ ಅರ್ಥವೇ ಆಗಲಿಲ್ಲವಂತೆ.

    ನಂತರದ ದಿನಗಳಲ್ಲಿ ಅಮ್ಮನನ್ನು ಕರೆದುಕೊಂಡು ಬರಬೇಡಿ ಅಂತ ಹೇಳುತ್ತಿದ್ದ ಕಾರಣವನ್ನು ಅರಿತರಂತೆ. ಹಾಗಾಗಿ ಅವರು ಯಾವತ್ತೂ ಅಮ್ಮನನ್ನು ಬಿಟ್ಟು ಹೋಗುತ್ತಿರಲಿಲ್ಲವಂತೆ. ಹಾಗಾಗಿಯೇ ಎರಡು ವರ್ಷಗಳಾದರೂ ಅವರಿಗೆ ಯಾವುದೇ ಪಾತ್ರವನ್ನೂ ಕೊಡಲಿಲ್ಲವಂತೆ. ರೆಸಾರ್ಟ್ ಗೆ ಹೋಗುವಂತಹ ಸಂಸ್ಕೃತಿ ನನ್ನದಲ್ಲ. ಹಾಗಾಗಿ ನಾನು ಒಪ್ಪಲಿಲ್ಲ. ತಡವಾಗಿಯೇ ನನಗೆ ಅವಕಾಶ ಸಿಕ್ಕಿದ್ದು ಎಂದು ಅವರು ಹೇಳಿಕೊಂಡಿದ್ದಾರೆ.

    ನಟಿ ಆಮನಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಕನ್ನಡವೂ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದವರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದರೂ, ಕನ್ನಡಕ್ಕಿಂತ ಇತರ ಭಾಷೆಗಳಲ್ಲೇ ಅವರು ಹೆಚ್ಚು ತೊಡಗಿಸಿಕೊಂಡಿದ್ದಾರೆ. ಸದ್ಯ ಆಮನಿ ಎನ್ನುತ್ತಿದ್ದಂತೆಯೇ ನೆನಪಾಗುವ ಹಾಡೆಂದರೆ ಅಪ್ಪಾಜಿ ಸಿನಿಮಾದ ‘ಏನೆ ಕನ್ನಡತಿ ನೀ ಯಾಕೆ ಹಿಂಗಾಡುತೀ’ ಗೀತೆ. ಅಪ್ಪಾಜಿ ಸಿನಿಮಾದಲ್ಲಿ ಅವರು ವಿಷ್ಣುವರ್ಧನ್ ಜೋಡಿಯಾಗಿ ಕಾಣಿಸಿಕೊಂಡಿದ್ದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k