Tag: ಅಪ್ಪಚ್ಚು ರಂಜನ್

  • ಹೈಕೋರ್ಟ್‌ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂ ಮೊರೆ ಹೋದವರಿಗೆ ತಲೆಕೆಟ್ಟಿದೆ: ಅಪ್ಪಚ್ಚು ರಂಜನ್‌

    ಹೈಕೋರ್ಟ್‌ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂ ಮೊರೆ ಹೋದವರಿಗೆ ತಲೆಕೆಟ್ಟಿದೆ: ಅಪ್ಪಚ್ಚು ರಂಜನ್‌

    ಮಡಿಕೇರಿ: ಹಿಜಬ್‌-ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ಸೂಚನೆ ಮತ್ತು ಮೇಲ್ವಿಚಾರಣೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಹೋಗಿರುವವರಿಗೆ ತಲೆ ಕೆಟ್ಟಿದೆ ಎಂದು ಶಾಸಕ ಅಪ್ಪಚ್ಚು ರಂಜನ್‌ ವಾಗ್ದಾಳಿ ನಡೆಸಿದರು.

    ಹಿಜಬ್, ಕೇಸರಿ ಶಾಲು ಕುರಿತು ಹೈಕೋರ್ಟ್ ಸೂಚನೆ ನೀಡಿರುವುದು ಸ್ವಾಗತಾರ್ಹ. ಆದರೆ ಹೈಕೋರ್ಟ್‌ನಲ್ಲಿ ನೀಡಿರುವ ಸೂಚನೆ ಮತ್ತು ಮೇಲ್ವಿಚಾರಣೆ ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಹೋಗಿರುವವರಿಗೆ ತಲೆಕೆಟ್ಟಿರಬಹುದು. ಸುಪ್ರೀಂ ಕೋರ್ಟಿಗೆ ಹೋಗಿರುವವರಿಗೆ ತಮ್ಮ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ಬೇಕಾಗಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ಐ ಫೋನ್, ಸ್ಮಾರ್ಟ್‍ವಾಚ್ ಗಿಫ್ಟ್ ಕೊಟ್ಟ ಕಾಂಗ್ರೆಸ್ ಶಾಸಕ

    ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ರಿಟ್ ಸಲ್ಲಿಸಿರಬಹುದು. ಹಿಜಬ್ ಅಥವಾ ಕೇಸರಿ ಶಾಲು ಎರಡನ್ನೂ ಧರಿಸಿ ಶಾಲಾ-ಕಾಲೇಜಿಗೆ ಬರೋದು ತಪ್ಪು. ನಾವು ಶಾಲಾ-ಕಾಲೇಜಿಗೆ ಹೋಗುವಾಗ ಯಾವ ಧರ್ಮ, ಜಾತಿಯವರೆಂದೇ ಗೊತ್ತಾಗುತ್ತಿರಲಿಲ್ಲ. ಅವರ ಹೆಸರನ್ನು ಕೇಳುವಾಗ ಅವರು ಮುಸ್ಲಿಂ ಎಂದು ಗೊತ್ತಾಗುತಿತ್ತು ಎಂದು ತಿಳಿಸಿದರು.

    SUPREME COURT

    ಶಾಲಾ-ಕಾಲೇಜಿಗೆ ಬರೋದು ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕಾಗಿಯೇ ಹೊರತು ಬೇರೆ ಯಾವುದಕ್ಕೂ ಅಲ್ಲ. ಬೇಕಾದರೆ ಹಿಜಬ್ ಧರಿಸಿ ಮಸೀದಿ, ಮದರಸಾಗಳಿಗೆ ಹೋಗಲಿ. ಕೇಸರಿ ಶಾಲು ಧರಿಸಿ ದೇವಾಲಯಗಳಿಗೆ ಹೋಗಲಿ. ಅದಕ್ಕೆ ನಮ್ಮ ಯಾವ ತಕರಾರು ಇಲ್ಲ. ಭಾರತ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ. ಯಾವ ಧರ್ಮ ಆಚರಣೆ ಬೇಕಾದರೂ ಅವರ ಮನೆಗಳಲ್ಲಿ ಆಚರಿಸಿಕೊಳ್ಳಲಿ. ಆದರೆ ಶಾಲಾ-ಕಾಲೇಜಿಗೆ ಸಮವಸ್ತ್ರಗಳಲ್ಲೇ ವಿದ್ಯಾರ್ಥಿಗಳು ಬರಲಿ ಎಂದು ಹೇಳಿದರು. ಇದನ್ನೂ ಓದಿ: ತಲೆ ಮೇಲೆ ಸೆರಗು ಹಾಕಿಕೊಳ್ಳೋದನ್ನ ಬೇಡ ಅನ್ನೋದು ಎಷ್ಟು ಸರಿ: ಸಿಎಂ ಇಬ್ರಾಹಿಂ

  • ಕೊಡಗಿನಲ್ಲಿ ಸದ್ಯಕ್ಕೆ ಶಾಲೆಗಳನ್ನು ಮುಚ್ಚುವ ಅವಶ್ಯಕತೆ ಇಲ್ಲ: ಅಪ್ಪಚ್ಚು ರಂಜನ್

    ಕೊಡಗಿನಲ್ಲಿ ಸದ್ಯಕ್ಕೆ ಶಾಲೆಗಳನ್ನು ಮುಚ್ಚುವ ಅವಶ್ಯಕತೆ ಇಲ್ಲ: ಅಪ್ಪಚ್ಚು ರಂಜನ್

    ಮಡಿಕೇರಿ: ರಾಜ್ಯದಲ್ಲಿ ಈಗಾಗಲೇ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಕೆಲವೊಂದು ಜಿಲ್ಲೆಯಲ್ಲಿ ಶಾಲೆಗಳನ್ನು ಮುಚ್ಚಿ ಕಳೆದ ಬಾರಿಯಂತೆ ಅನ್‍ಲೈನ್ ಶಿಕ್ಷಣಕ್ಕೆ ಮೋರೆ ಹೋಗುತ್ತಿರುವುದು ಕಂಡು ಬರುತ್ತಿದೆ. ಇತ್ತ ಕೊಡಗು ಜಿಲ್ಲೆಯಲ್ಲಿಯೂ ನಿಧಾನವಾಗಿ ಪಾಸಿಟಿವ್ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದ್ದು ಆದರೂ ಕೂಡ ಸದ್ಯಕ್ಕೆ ಶಾಲೆಗಳನ್ನು ಮುಚ್ಚುವ ಅವಶ್ಯಕತೆ ಇಲ್ಲ ಎಂದು ಶಾಸಕ ಅಪ್ಪಚ್ಚು ರಂಜನ್ ಸ್ಪಷ್ಟಪಡಿಸಿದ್ದಾರೆ.

    20 ದಿನಗಳಿಂದ ಪಾಸಿಟಿವ್ ಪ್ರಮಾಣ ಶೇಕಡ 2 ಹಂತಕ್ಕೆ ತಲುಪುತ್ತಿದೆ. ಅದರಲ್ಲೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಪೋಷಕರಲ್ಲಿ ಒಂದು ರೀತಿಯ ಅತಂಕ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅಪ್ಪಚ್ಚು ರಂಜನ್, ಕೊಡಗಿನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದ್ರೆ ನಮ್ಮ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಕಡಿಮೆ ಇರುವುದರಿಂದ ಸದ್ಯಕ್ಕೆ ಶಾಲೆಗಳನ್ನು ಮುಚ್ಚುವ ಅವಶ್ಯಕತೆ ಇಲ್ಲ ಎಂದರು. ಇದನ್ನೂ ಓದಿ: ಕಾಫಿನಾಡಿನ ಎರಡು ವಸತಿ ಶಾಲೆಯ 55 ಮಕ್ಕಳಿಗೆ ಕೊರೊನಾ

    ಪಕ್ಕದ ಜಿಲ್ಲೆ ದಕ್ಷಿಣಕನ್ನಡ, ಬೆಂಗಳೂರು, ಮೈಸೂರಿನಲ್ಲಿ ಪ್ರಕರಣಗಳು ಹೆಚ್ಚು ಇರುವುದರಿಂದ ಈಗಾಗಲೇ ಜಿಲ್ಲೆಯ ಜನರಿಗೆ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ. ಜಿಲ್ಲೆಯ ಜನರು ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕು ಉಲ್ಬಣಗೊಂಡರೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಶಾಲೆ ಬಂದ್ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಜನವರಿ ಅಂತ್ಯಕ್ಕೆ ನಿತ್ಯ 60 ಸಾವಿರ ಪ್ರಕರಣಗಳು ಪತ್ತೆ ಸಾಧ್ಯತೆ – ದೆಹಲಿಯಲ್ಲಿ ಖಾಸಗಿ ಕಚೇರಿಗಳು ಬಂದ್

  • ನಗರಸಭೆಗೆ ಚುನಾವಣೆ ನಡೆದು ನಾಲ್ಕು ತಿಂಗಳಾದರೂ ಅಧಿಕಾರವಿಲ್ಲ..!

    ನಗರಸಭೆಗೆ ಚುನಾವಣೆ ನಡೆದು ನಾಲ್ಕು ತಿಂಗಳಾದರೂ ಅಧಿಕಾರವಿಲ್ಲ..!

    ಮಡಿಕೇರಿ: ನಗರದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ನಾಲ್ಕು ತಿಂಗಳುಗಳೇ ಕಳೆದರೂ ಅಧ್ಯಕ್ಷ ಹಾಗೂ ಉಪಧ್ಯಾಕ್ಷರ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿಲ್ಲ. ಇದರ ಪರಿಣಾಮ ಗೆದ್ದು ನಾಲ್ಕು ತಿಂಗಳಾದರೂ ಜನಪ್ರತಿನಿಧಿಗಳು ಅಧಿಕಾರವಿಲ್ಲದೆ ಪರಾದಾಡುವಂತಾಗಿದೆ.

    ಮಡಿಕೇರಿಯ ನಗರಸಭೆ ಚುನಾವಣೆ, ಏಪ್ರಿಲ್ 3ನೇ ವಾರದಲ್ಲಿ ನಡೆದು ಫಲಿತಾಂಶವೂ ಹೊರಬಿದ್ದಿತ್ತು. ಚುನಾವಣೆ ನಡೆಯುತ್ತಿದ್ದಂತೆ ಕೋವಿಡ್ ಜಾಸ್ತಿಯಾಗಿದ್ದರಿಂದ ಲಾಕ್ ಡೌನ್ ಜಾರಿಯಾಗಿತ್ತು. ಆದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆ ಆದರೂ ಕೊಡಗಿನಲ್ಲಿ ಮಾತ್ರ ಕಡಿಮೆ ಆಗಿರಲಿಲ್ಲ. ಬಳಿಕ ಕೋವಿಡ್ ಪಾಸಿಟಿವಿಟಿ ರೇಟ್ ಶೇ.2 ಪಸೆರ್ಂಟ್ ಗಿಂತಲೂ ಕಡಿಮೆಯಾಗಿ ಈಗ 15 ದಿನಗಳು ಕಳೆದಿವೆ.

    ಕೊಡಗಿನಲ್ಲಿ ಹೇರಿದ್ದ ವೀಕೆಂಡ್ ಲಾಕ್ ಡೌನ್ ಕೂಡ ತೆರವು ಮಾಡಲಾಗಿದೆ. ಆದರೂ ಮಡಿಕೇರಿ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ದಿನಾಂಕ ಮಾತ್ರ ನಿಗದಿಯಾಗಿಲ್ಲ. ಚುನಾವಣೆ ನಡೆದು ಮೂರು ತಿಂಗಳು ಪೂರ್ಣಗೊಂಡಿದ್ದರೂ ಇಂದಿಗೂ ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಾಗದೆ ನಗರದ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಕಡೆಗಣಿಸಲ್ಪಟ್ಟಿವೆ. ಮಳೆಗಾಲದಲ್ಲಿ ಸುರಿದ ಮಳೆಗೆ ಗುಂಡಿಬಿದ್ದಿರುವ ನಗರದ ರಸ್ತೆಗಳನ್ನು ಮುಚ್ಚೋದಕ್ಕೂ ಸಹ ಸಾಧ್ಯವಾಗಿಲ್ಲ. ಇದನ್ನೂ ಓದಿ: ಕುಮಾರಸ್ವಾಮಿ ಎಲ್ಲಾ ಕ್ಷೇತ್ರದಲ್ಲೂ ಇಬ್ಬಿಬ್ಬರನ್ನು ಇಟ್ಟಿರ್ತಾರೆ: ಎಸ್.ಆರ್ ಶ್ರೀನಿವಾಸ್

    ಹೀಗಾಗಿ ವಾಹನ ಸವಾರರು ನರಕಯಾತನೆ ಅನುಭವಿಸಬೇಕಾಗಿದೆ. ನಗರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಮೈಸೂರು ಬಿಟ್ಟರೆ ಮಡಿಕೇರಿಯಲ್ಲಿ ನಡೆಯುತ್ತಿದ್ದ ದಸರಾ ಜನೋತ್ಸವಕ್ಕೆ ಇನ್ನು ಕೆಲವು ದಿನಗಳು ಮಾತ್ರವೇ ಬಾಕಿ ಇವೆ. ನಗರಸಭೆ ಆಡಳಿತ ಮಂಡಳಿ ರಚನೆಯಾಗದೆ ಹಿನ್ನೆಲೆ ಎಲ್ಲವೂ ಕಾರ್ಯಕ್ರಮಗಳು ನೆನೆಗುದಿಗೆ ಬಿದ್ದಿವೆ.

    ಚುನಾವಣೆ ನಡೆದು ಮೂರು ತಿಂಗಳು ಕಳೆದರೂ, ಆಡಳಿತದ ಚುಕ್ಕಾಣಿ ಹಿಡಿಯದಿರುವುದರಿಂದ ಆಯಾ ವಾರ್ಡ್ ಗಳ ಕೌನ್ಸಿಲರ್ ಗಳು ತಮ್ಮ ವಾರ್ಡ್ ಗಳ ಮತದಾರರಿಗೆ ಮೂಖತೋರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರೆ. ಹೀಗಾಗಿ ಆದಷ್ಟು ಬೇಗ ಅಧ್ಯಕ್ಷರು ಮತ್ತು ಉಪಾಧ್ಯರ ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ಕೌನ್ಸಿಲರ್ ಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅವರನ್ನು ನಾನೇ ಬಿಜೆಪಿಗೆ ಕರೆ ತರುತ್ತೇನೆ: ರಾಜೂ ಗೌಡ

    ಈ ಬಗ್ಗೆ ಪ್ರತಿಕ್ರಿಯಿಸಿರುವ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ನಾವು ಕೂಡ ಆದಷ್ಟು ಬೇಗ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದೇವೆ. ಸಿಎಂ ಕೂಡ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸದ್ಯದಲ್ಲೇ ಚುನಾವಣೆ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

     

  • ಮೂರು ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಗೆ ಮೋದಿ ಚಿಂತನೆ ನಡೆಸಿದ್ದಾರೆ: ಅಪ್ಪಚ್ಚು ರಂಜನ್

    ಮೂರು ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಗೆ ಮೋದಿ ಚಿಂತನೆ ನಡೆಸಿದ್ದಾರೆ: ಅಪ್ಪಚ್ಚು ರಂಜನ್

    ಮಡಿಕೇರಿ: ಮೂರು ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಇಳಿಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಚಿಂತನೆ ನಡೆಸಿದ್ದಾರೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಪೆಟ್ರೋಲ್, ಡೀಸೆಲ್‍ನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದರೆ ಪ್ರತಿ ಲೀಟರ್ ಗೆ 20 ರೂಪಾಯಿ ಕಡಿಮೆ ಆಗುತ್ತೆ. ಆದರೆ ಇದರಿಂದ ರಾಜ್ಯಗಳ ಆದಾಯಕ್ಕೆ ಪೆಟ್ಟು ಬೀಳುತ್ತದೆ. ಹೀಗಾಗಿ ಜಿಎಸ್‍ಟಿ ವ್ಯಾಪ್ತಿಗೆ ತರುವುದನ್ನು ರಾಜ್ಯಗಳು ವಿರೋಧಿಸುತ್ತಿವೆ. ಆದರೆ ಮೂರು ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಇಳಿಕೆ ಮಾಡಲು ಪ್ರಾದಾನಿ ನರೇಂದ್ರ ಮೋದಿ ಚಿಂತಿಸಿದ್ದಾರೆ ಎಂದರು. ಇದನ್ನೂ ಓದಿ: ಭಾರತ ದೇಶ ಪಾತಾಳಕ್ಕೆ ಕುಸಿಯಲು ಕಾಂಗ್ರೆಸ್ ಕಾರಣ: ಶ್ರೀ ರಾಮುಲು

    ದೇಶದಲ್ಲಿ ತೈಲ ಬೆಲೆ ಏರಿಕೆ ಅಗುತ್ತಿರುವ ಕಾರಣ ಕೋವಿಡ್ ಬಂದ ಬಳಿಕ ಈಗಾಗಲೇ ವ್ಯಾಕ್ಸಿನ್ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಹಲವು ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಅದಕ್ಕೆಲ್ಲಾ ಹಣ ಬೇಕಾಗಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ ತಿಳಿಸಿದರು.

    ಈ ಹಿಂದೆ ದೇಶವನ್ನಾಳಿದ ಸರ್ಕಾರಗಳು ಅರಬ್ ದೇಶಗಳಲ್ಲಿ ಆಯಿಲ್ ಬಾವಿಗಳನ್ನು ಖರೀದಿಸಬೇಕಾಗಿತ್ತು. ಅಂದು ಖರೀದಿಸಿದ್ದರೆ ಇಂದು ಅನುಕೂಲವಾಗುತಿತ್ತು. ಕಚ್ಚಾತೈಲ ಬೆಲೆ ಜಾಸ್ತಿಯಾದಾಗ ನಮ್ಮ ಬಾವಿಗಳಿಂದಲೇ ತೈಲ ಪೂರೈಸಬಹುದಾಗಿತ್ತು. ಇನ್ನಾದರೂ ಅರಬ್ ದೇಶಗಳಲ್ಲಿ ತೈಲ ಬಾವಿಗಳ ಖರೀದಿಸುವ ಕೆಲಸವಾಗಬೇಕಿದೆ. ಅಷ್ಟೇ ಅಲ್ಲದೆ ಗ್ಯಾಸ್ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಮಾಡುವ ಚಿಂತನೆ ಮೋದಿ ಅವರು ಮಾಡಿದ್ದಾರೆ ಎಂದು ಹೇಳಿದರು.

  • ನಾಗರಹೊಳೆ ಅಭಯಾರಣ್ಯಕ್ಕೆ ರಾಜೀವ್ ಗಾಂಧಿ ಹೆಸರು ತೆಗೆದು, ಜನರಲ್ ಕಾರ್ಯಪ್ಪ ಹೆಸರಿಡಲಿ: ಅಪ್ಪಚ್ಚು ರಂಜನ್

    ನಾಗರಹೊಳೆ ಅಭಯಾರಣ್ಯಕ್ಕೆ ರಾಜೀವ್ ಗಾಂಧಿ ಹೆಸರು ತೆಗೆದು, ಜನರಲ್ ಕಾರ್ಯಪ್ಪ ಹೆಸರಿಡಲಿ: ಅಪ್ಪಚ್ಚು ರಂಜನ್

    ಮಡಿಕೇರಿ: ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಕ್ಕೆ ಜನರಲ್ ಕಾರ್ಯಪ್ಪ ಹೆಸರಿಡುವುದು ಸೂಕ್ತ. ರಾಜೀವ್ ಗಾಂಧಿ ಹೆಸರು ತೆಗೆದು ಕಾರ್ಯಪ್ಪ ಅವರ ನಾಮಕರಣ ಮಾಡಲಿ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಮತ್ತು ನೆಹರು ಹೆಸರಲ್ಲಿ ಹಲವು ಸಂಸ್ಥೆಗಳಿವೆ. ಆದರೆ ದೇಶದ ಸೇನೆಯ ಮೊದಲ ಜನರಲ್ ಆಗಿದ್ದ ಕೊಡಗಿನ ಕಾರ್ಯಪ್ಪ ಅವರು ಮೂರು ಸೇನಾ ಪಡೆಗಳ ಮುಖ್ಯಸ್ಥರಾಗಿದ್ದವರು. ಅವರಿಗೆ ಗೌರವ ಕೊಡಲು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಕ್ಕೆ ಕಾರ್ಯಪ್ಪ ಅವರ ಹೆಸರಿಡುವುದು ಸೂಕ್ತ. ಈ ಬಗ್ಗೆ ಸರ್ಕಾರಕ್ಕೂ ನಾನು ಆಗ್ರಹಿಸುತ್ತೇನೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೂ ಈ ಕುರಿತು ಪತ್ರ ಬರೆಯುತ್ತೇನೆ ಎಂದಿದ್ದಾರೆ.

    ಇಂದಿರಾ ಕ್ಯಾಂಟೀನ್‍ಗೆ ಕಾವೇರಿ ಹೆಸರು
    ಕೊಡಗಿನಲ್ಲಿ ಹುಟ್ಟಿ ನಾಡಿನುದ್ದಕ್ಕೂ ಹರಿಯುವ ಕಾವೇರಿಯ ಹೆಸರನ್ನು ಇಂದಿರಾ ಕ್ಯಾಂಟೀನ್ ಗೆ ಇಡಬೇಕು. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರು ಇಂದಿರಾ ಕ್ಯಾಂಟೀನ್ ಗೆ ಅನ್ನಪೂರ್ಣೇಶ್ವರಿ ಹೆಸರು ಸೂಚಿಸಿರುವುದನ್ನು ಅಲ್ಲಗಳೆದಿರುವ ಶಾಸಕ ಅಪ್ಪಚ್ಚು ರಂಜನ್, ಸಿ.ಟಿ.ರವಿ ಅವರು ಅನ್ನಪೂರ್ಣೇಶ್ವರಿ ಹೆಸರು ಸೂಚಿಸಿರಬಹುದು. ಆದರೆ ಕಾವೇರಿ ಹೆಸರಿಡುವುದು ಒಳ್ಳೆಯದು ಎಂದು ಹೊಸ ಬೇಡಿಕೆ ಮುಂದಿಟ್ಟಿದ್ದಾರೆ.

    ಕಾವೇರಿ ನದಿಯಿಂದ ಕರ್ನಾಟಕ ತಮಿಳುನಾಡು ಮತ್ತು ಪಾಂಡಿಚೇರಿ ಸೇರಿ ಮೂರು ರಾಜ್ಯಗಳಿಗೆ ನೀರು ಸಿಗುತ್ತೆ. ಕರ್ನಾಟಕ, ತಮಿಳುನಾಡಿಗೆ ಕಾವೇರಿ ಮಾತೆ ಕೊಡುಗೆ ದೊಡ್ಡದಿದೆ. ಸಾಕಷ್ಟು ರೈತರು ಕಾವೇರಿ ನೀರು ಬಳಸಿ ಕೃಷಿ ಮಾಡುತ್ತಾರೆ. ಅದರಿಂದ ಬೆಳೆದ ಅನ್ನವನ್ನು ಇಂದಿರಾ ಕ್ಯಾಂಟಿನಗಳಲ್ಲಿ ಊಟ ಮಾಡುತಿದ್ದೇವೆ. ಹೀಗಾಗಿ ಕಾವೇರಿ ಹೆಸರಿಡುವುದು ಸೂಕ್ತ ಎಂದಿದ್ದಾರೆ. ಇಂದಿರಾ ಹೆಸರನ್ನು ತೆಗೆದು ಕಾವೇರಿ ಕ್ಯಾಂಟೀನ್ ಹೆಸರಿಡಲು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.

    ಮೇಕೆದಾಟು ಆಗಲೇಬೇಕು
    ಮೇಕೆದಾಟು ನಮ್ಮ ರಾಜ್ಯದ ಸಂಪತ್ತು, ನಾವು ಅಲ್ಲಿ ಅಣೆಕಟ್ಟೆ ಮಾಡಲು ತಮಿಳುನಾಡಿನವರನ್ನು ಕೇಳಿ ಮಾಡಬೇಕಾದ ಅಗತ್ಯವಿಲ್ಲ. ಹೀಗಾಗಿ ಸರ್ಕಾರ ಮೇಕೆದಾಟು ಕಾಮಗಾರಿಯನ್ನು ಮಾಡಲೇಬೇಕು ಎಂದು ಶಾಸಕ ಅಪ್ಪಚ್ಚು ರಂಜನ್ ಒತ್ತಾಯಿಸಿದ್ದಾರೆ. ಮೇಕೆದಾಟು ಯೋಜನೆ ಮಾಡುವುದರಿಂದ ರಾಜ್ಯದ ಸಾವಿರಾರು ರೈತರಿಗೆ ಅನುಕೂಲವಾಗಲಿದೆ. ಬರೋಬ್ಬರಿ 60 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸಬಹುದು. ಆದ್ದರಿಂದ ಸರ್ಕಾರ ಕೂಡಲೇ ಯೋಜನೆ ಕಾಮಗಾರಿಗೆ ಮುಂದಾಗಲಿ ಎಂದು ಆಗ್ರಹಿಸಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರು ರಾಷ್ಟ್ರೀಯ ಸಂಪತ್ತು ಎಂದು ಹೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಪ್ಪಚ್ಚು ರಂಜನ್, ಕಾವೇರಿ ಕೂಡ ರಾಷ್ಟ್ರೀಯ ಸಂಪತ್ತು. ಆದರೆ ಕಾವೇರಿ ನೀರನ್ನು ನಾವು ಎಷ್ಟನ್ನು ಬಳಸಿಕೊಂಡು ಎಷ್ಟನ್ನು ತಮಿಳುನಾಡಿಗೆ ಕೊಡಬೇಕೆಂದು ನಿರ್ಧಾರವಾಗಿಲ್ಲವೆ. ಕೇಂದ್ರವೇ ಅದನ್ನು ನಿರ್ಧರಿಸಿರುವಾಗ ಮೇಕೆದಾಟು ವಿಚಾರದಲ್ಲೂ ಅದೇ ರೀತಿ ಆಗುತ್ತದೆ. ಕೇಂದ್ರ ನೀರಾವರಿ ಸಲಹಾ ಸಮಿತಿಯ ನಿರ್ದೇಶನದಂತೆ ಮೇಕೆದಾಟು ಯೋಜನೆ ಕಾಮಗಾರಿ ಆರಂಭ ಆಗಲಿ ಎಂದು ಮಡಿಕೇರಿಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.

  • ಅಪ್ಪಚ್ಚು ರಂಜನ್‍ಗೆ ಸಚಿವ ಸ್ಥಾನ ನೀಡಿ – ಬಿಜೆಪಿ ಕಾರ್ಯಕರ್ತರಿಂದ ಬೆಂಗಳೂರು ಚಲೋ

    ಅಪ್ಪಚ್ಚು ರಂಜನ್‍ಗೆ ಸಚಿವ ಸ್ಥಾನ ನೀಡಿ – ಬಿಜೆಪಿ ಕಾರ್ಯಕರ್ತರಿಂದ ಬೆಂಗಳೂರು ಚಲೋ

    ಮಡಿಕೇರಿ: ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‍ಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಕೊಡಗಿನ ಬಿಜೆಪಿ ಕಾರ್ಯಕರ್ತರು 100ಕ್ಕೂ ಹೆಚ್ಚು ವಾಹನಗಳಲ್ಲಿ ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ.

    ಕೊಡಗಿನ ಕುಶಾಲನಗರದಿಂದ ನೂರಕ್ಕೂ ಹೆಚ್ಚು ಜನರು ಬೆಂಗಳೂರಿನತ್ತ ಪ್ರಯಾಣ ಮಾಡುತ್ತಿದ್ದಾರೆ. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಪ್ಪಚ್ಚು ರಂಜನ್ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಕಾರ್ಯಕರ್ತರು ಹಾಗೂ ಕೊಡಗಿನ ಜನರಲ್ಲಿ ನಿರೀಕ್ಷೆ ಇತ್ತು. ಆದರೆ ಹೈಕಮಾಂಡ್ ನಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರ ಹೆಸರನ್ನುಪಟ್ಟಿಯಿಂದ ಕೊನೆ ಕ್ಷಣದಲ್ಲಿ ಕೈಬಿಟ್ಟಿದೆ. ಹೀಗಾಗಿ ಇರುವ ನಾಲ್ಕು ಸಚಿವ ಸ್ಥಾನದಲ್ಲಿ ಇರುವುದರಲ್ಲಿ ಒಂದು ಸಚಿವ ಸ್ಥಾನ ಅಪ್ಪಚ್ಚು ರಂಜನ್ ಅವರಿಗೆ ನೀಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

    ಇಂದು ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕರ್ತರಿಗೆ ಭೇಟಿಯಾಗಲು ಸಿಎಂ ಬೊಮ್ಮಯಿ ಅವರು ಸಮಯ ನೀಡಿದ್ದು, ಅಪ್ಪಚ್ಚು ರಂಜನ್ ರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೊಡಗಿನ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಲ್ಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಪ್ಪಚ್ಚು ರಂಜನ್ ಐದು ಬಾರಿ ಶಾಸಕನಾದರೂ ಸಚಿವ ಸ್ಥಾನ ನೀಡದೇ ಇರುವುದು ಕಾರ್ಯಕರ್ತರಿಗೆ ಬೇಸರವಾಗಿದೆ. ಹಾಗಾಗಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಎಲ್ಲಾ ತೀರ್ಮಾನ ಮಾಡಿ ಬೆಂಗಳೂರಿನತ್ತ ಹೊರಟಿದ್ದಾರೆ. ಇದರಲ್ಲಿ ನನ್ನ ಪಾತ್ರ ಯಾವುದು ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಮಕ್ಕಳ ಮೊದಲ ಲಸಿಕೆಗೆ ಕೇಂದ್ರ ಗ್ರೀನ್ ಸಿಗ್ನಲ್?

  • ಜಿಲ್ಲೆಯ ಬೇತಾಳದಿಂದ ನನಗೆ ಸಚಿವ ಸ್ಥಾನ ಸಿಗಲಿಲ್ಲ: ಅಪ್ಪಚ್ಚು ರಂಜನ್

    ಜಿಲ್ಲೆಯ ಬೇತಾಳದಿಂದ ನನಗೆ ಸಚಿವ ಸ್ಥಾನ ಸಿಗಲಿಲ್ಲ: ಅಪ್ಪಚ್ಚು ರಂಜನ್

    ಮಡಿಕೇರಿ: ಸಚಿವ ಸಂಪುಟ ವಿಸ್ತರಣೆ ವೇಳೆಯಲ್ಲಿ ಕೊಡಗು ಜಿಲ್ಲೆಗೂ ಒಂದು ಮಂತ್ರಿಸ್ಥಾನ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಇದ್ದ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಕೊನೆಗಳಿಗೆಯಲ್ಲಿ ಸಚಿವ ಸ್ಥಾನ ಕೈಯಿತಪ್ಪಿ ಹೋಗಿದೆ. ಈ ಕುರಿತಾಗಿ ಮಾಧ್ಯಮದವರೊಂದಿಗೆ ಅಪ್ಪಚ್ಚು ರಂಜನ್ ಮಾತಣಾಡಿದ್ದಾರೆ.

    ನನ್ನ ಬೆನ್ನಿಗೆ ಬಿದ್ದ ಬೇತಾಳದಿಂದ ನನಗೆ ಸಚಿವಸ್ಥಾನ ಸಿಗಲಿಲ್ಲ. ನಾನೇ ಬೆಳೆಸಿದ ಬೇತಾಳ ನನ್ನ ತಲೆಗೆ ಹೊಡೆಯುತ್ತಿದೆ. ಆ ಬೇತಾಳವನ್ನು ಬೆಳೆಸಬಾರದೆಂದು ನನಗೆ ಗೊತ್ತಿರಲಿಲ್ಲ, ಈಗ ಬೇತಾಳ ಎತ್ತರಕ್ಕೆ ಬೆಳೆದು ನನಗೆ ಸಮಸ್ಯೆ ಆಗಿದೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅಕ್ರೋಶ ಹೋರ ಹಾಕಿದ್ದಾರೆ. ಇದನ್ನೂ ಓದಿ: ಯಾಕ್ರೀ ಇಂತಹವರಿಗೆಲ್ಲ ಕೆಲಸ ಕೊಡ್ತೀರಾ, ನಿಮ್ಮನ್ನೆಲ್ಲ ಬಲಿ ಹಾಕ್ತೀವಿ- ರೇವಣ್ಣ ಆಕ್ರೋಶ

    ಜಿಲ್ಲೆಯ ಜನ ಪ್ರತಿನಿಧಿಯೊಬ್ಬರು ಹಸ್ತಕ್ಷೇಪ ಮಾಡಿದ ಪರಿಣಾಮದಿಂದಾಗಿ ಈ ಬಾರೀ ಸಚಿವಸ್ಥಾನ ಸಿಕ್ಕಿಲ್ಲ. ಹೈಕಮಾಂಡ್‍ನ ಮೂವರಿಂದ ನನಗೆ ಕರೆ ಬಂದಿತ್ತು. ಸಚಿವಸ್ಥಾನ ಸಿಗೋದು ಖಚಿತ ಅಂತ ಹೈಕಮಾಂಡ್ ಹೇಳಿದ್ದರು. ಆದರೆ ಪಟ್ಟಿ ಬೆಂಗಳೂರಿಗೆ ಬಂದಾಗ ಎಲ್ಲವೂ ಕೈತಪ್ಪಿಹೋಯಿತು. ಅದಕ್ಕೆ ಈ ಬೇತಾಳವೇ ಕಾರಣ. ಸಚಿವ ಸಂಪುಟದಲ್ಲಿ ಜಿಲ್ಲಾವಾರು ಜಾತಿವಾರು ಸಾಮಾಜಿಕ ನ್ಯಾಯ ಇರುವುದಾಗಿ ಹೇಳಿದ್ರು. ಆದರೆ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯವನ್ನೇ ಕೊಟ್ಟಿಲ್ಲ. ಕೊಡಗನ್ನು ಟೇಕ್ ಈಸ್ ಇಟ್ ಗ್ರ್ಯಾಂಟೆಡ್ ಎಂದು ಮಾಡಿಕೊಳ್ಳಲಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

    ರಾಜ್ಯದಲ್ಲಿ ಎಂಟು ಚುನಾವಣೆ ನಡೆದಿವೆ. ಅದರಲ್ಲಿ ಬಿಜೆಪಿ ಏಳು ಬಾರಿ ಸೋತಿದೆ ಮಡಿಕೇರಿಯಲ್ಲಿ ಮಾತ್ರ ಭರ್ಜರಿಯಾಗಿ ಗೆದ್ದಿದ್ದೇವೆ. ಹೀಗೆ ಗೆಲ್ಲಿಸಿದ್ದೇ ತಪ್ಪಾಯಿತಾ? ಜಿಲ್ಲಾವಾರು ಪ್ರಾತಿನಿಧ್ಯ ಕೊಡುತ್ತೇವೆ ಎಂದಿದ್ದರು. ಆದರೆ ಬೆಂಗಳೂರಿಗೆ ಎಂಟು ಸ್ಥಾನ ಮಂಗಳೂರಿಗೆ 3 ಸ್ಥಾನ, ಶಿವಮೊಗ್ಗಕ್ಕೆ ಮೂರುಸ್ಥಾನ ಬೆಳಗಾವಿಗೆ ಐದು ಸ್ಥಾನ ಕೊಡಲಾಗಿದೆ. ಕೊಡಗನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಬೇಸರ ಹೊರಹಾಕಿದರು.

    ಸಂಸದರು ಕೂಡ ಇದರ ಬಗ್ಗೆ ಮೌನ ವಹಿಸಿದ್ಯಾಕೆ ?ಅವರಿಗೆ ಜಿಲ್ಲೆಯಿಂದ 80 ಸಾವಿರ ಮತಗಳ ಮುನ್ನಡೆಯನ್ನು ನೀಡಿದ್ದೆವು. ಅವರಾದರೂ ಹೈಕಮಾಂಡ್ ಜೊತೆಗೆ ಮಾತನಾಡಬಹುದಿತ್ತು. ಜಿಲ್ಲೆಯಲ್ಲಿ ನಾಲ್ಕೈದು ಬಾರಿ ಗೆದ್ದವರಿದ್ದಾರೆ ಎಂದು ಹೇಳಬಹುದಿತ್ತು. ಕೊಡಗು ಜಿಲ್ಲೆಯನ್ನು ಇಷ್ಟೊಂದು ಕಡೆಗಣಿಸಿದ್ದು, ಸರಿಯಲ್ಲ. ಇದರಿಂದ ನನಗೆ ಮತ್ತು ಜಿಲ್ಲೆಯ ಜನರಿಗೆ ತೀವ್ರ ಬೇಸರವಾಗಿದೆ ಮುಂದಿನ ಚುನಾವಣೆಗಳಲ್ಲಿ ಖಂಡಿತಾ ಇದರಿಂದ ಪಕ್ಷಕ್ಕೆ ನಷ್ಟವಾಗಲಿದೆ ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ.

    ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಇದೀಗ ಬಿಜೆಪಿಯಲ್ಲಿ ಒಳ ಜಗಳ ಕಂಡುಬರುತ್ತಿದ್ದು, ಕೊಡಗಿನಲ್ಲೂ ಇಬ್ಬರ ಶಾಸಕರ ನಡುವೆ ಆಂತರಿಕ ಒಳಜಗಳಕ್ಕೆ ಕಾರಣವಾಗುತ್ತಿದೆ.

  • ಹಸಿಕಸ ಸಂಸ್ಕರಣಾ ಯೋಜನೆಗೆ ಅಪ್ಪಚ್ಚು ರಂಜನ್ ಚಾಲನೆ

    ಹಸಿಕಸ ಸಂಸ್ಕರಣಾ ಯೋಜನೆಗೆ ಅಪ್ಪಚ್ಚು ರಂಜನ್ ಚಾಲನೆ

    ಕೊಡಗು: ಮಡಿಕೇರಿ ನಗರಸಭಾ ವ್ಯಾಪ್ತಿಯ ಸ್ಟೋನ್ ಹಿಲ್ ಬಳಿ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಸಿಕಸ ಸಂಸ್ಕರಣಾ ಯೋಜನೆಗೆ (ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ವಿಧಾನ) ಶಾಸಕರಾದ ಎಂ.ಪಿ ಅಪ್ಪಚ್ಚುರಂಜನ್ ಅವರು ಇಂದು ಚಾಲನೆ ನೀಡಿದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಪ್ಪಚ್ಚುರಂಜನ್ ಅವರು, 30.50 ಲಕ್ಷ ರೂ. ವೆಚ್ಚದಲ್ಲಿ ಹಸಿಕಸ ಸಂಸ್ಕರಣಾ ಘಟಕ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಯೋಜನೆ ಯಶಸ್ವಿಯಾದಲ್ಲಿ ಹೆಚ್ಚಿನ ಘಟಕ ನಿರ್ಮಿಸಲಾಗುವುದು, ಮಡಿಕೇರಿ ನಗರದಲ್ಲಿ ತ್ಯಾಜ್ಯ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ. ಸ್ವಚ್ಛ ಪರಿಸರವನ್ನು ನಿರ್ಮಿಸಲು ಶ್ರಮಿಸಬೇಕು. ಹಸಿ ಕಸವನ್ನು ಗೊಬ್ಬರವನ್ನಾಗಿ ಮಾಡುವ ನಿಟ್ಟಿನಲ್ಲಿ ಪೈಲೆಟ್ ಮಾದರಿಯಲ್ಲಿ ಯೋಜನೆ ರೂಪಿಸಲಾಗುವುದು ಎಂದು ಶಾಸಕರು ಹೇಳಿದರು. ಇದನ್ನೂ ಓದಿ: ಕೊಡಗಿನಲ್ಲಿ ಭಾರೀ ಮಳೆ- ಮುಕ್ಕೋಡ್ಲು ತಂತಿಪಾಲದಲ್ಲಿ ಭೂಕುಸಿತ, ಅಪ್ಪಚು ರಂಜನ್ ಭೇಟಿ

    2020-21 ನೇ ಸಾಲಿನ 15ನೇ ಹಣಕಾಸು ಆಯೋಗದಲ್ಲಿ 30.50 ಲಕ್ಷ ರೂ. ವೆಚ್ಚದಲ್ಲಿ 3 ಘಟಕ ಒಳಗೊಂಡಿರುವ ಯೋಜನೆಯಲ್ಲಿ ಪ್ರತೀ ದಿನ ಒಂದು ಘಟಕದಲ್ಲಿ 400 ರಿಂದ 450ಕೆ.ಜಿ ಹಸಿಕಸವನ್ನು ಸಂಸ್ಕರಿಸಬಹುದಾಗಿದೆ ಎಂದು ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಅವರು ಮಾಹಿತಿ ನೀಡಿದರು.

    ಗ್ರೀನ್ ರಿಚ್ ಗ್ರೊ ಇಂಡಿಯಾ ಸಂಸ್ಥೆಯ ಸುರೇಶ್ ನಾಯರ್ ಅವರು ಹಸಿಕಸದಿಂದ ಗೊಬ್ಬರ ಮಾಡುವಲ್ಲಿ ಗ್ರೀನ್ ಗ್ರೊ ಸಂಸ್ಥೆಯು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. 30 ದಿನದ ನಂತರ ಗೊಬ್ಬರವನ್ನು ನೈಸರ್ಗಿಕ ಕೃಷಿಗೆ ಬಳಸಬಹುದಾಗಿದೆ ಎಂದರು.

  • ಕೊಡಗಿನಲ್ಲಿ ಭಾರೀ ಮಳೆ- ಮುಕ್ಕೋಡ್ಲು ತಂತಿಪಾಲದಲ್ಲಿ ಭೂಕುಸಿತ, ಅಪ್ಪಚು ರಂಜನ್ ಭೇಟಿ

    ಕೊಡಗಿನಲ್ಲಿ ಭಾರೀ ಮಳೆ- ಮುಕ್ಕೋಡ್ಲು ತಂತಿಪಾಲದಲ್ಲಿ ಭೂಕುಸಿತ, ಅಪ್ಪಚು ರಂಜನ್ ಭೇಟಿ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಮತ್ತು ತಂತಿಪಾಲ ನಡುವೆ ರಸ್ತೆಯ ಪಕ್ಕದಲ್ಲಿ ಭಾರೀ ಭೂಕುಸಿತವಾಗಿದೆ. ಇದರಿಂದಾಗಿ ಮುಕ್ಕೋಡ್ಲು ಮತ್ತು ತಂತಿಪಾಲ ನಡುವಿನ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಪ್ಪಚ್ಚು ರಂಜನ್ ಕೂಡಲೇ ಜೆಸಿಬಿ ಯಂತ್ರ ತರಿಸಿ ಕುಸಿದಿದ್ದ ಮಣ್ಣನ್ನು ಸ್ವಲ್ಪ ಪ್ರಮಾಣದಲ್ಲಿ ತೆರವುಗೊಳಿಸಿಸಿದ್ದಾರೆ.

    ಕಾರು, ಜೀಪ್ ಸೇರಿದಂತೆ ಲಘು ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಜೊತೆಗೆ ಹಟ್ಟಿಹೊಳೆ ತುಂಬಿ ಹರಿಯುತ್ತಿರುವ ಪರಿಣಾಮ ಮುಕ್ಕೋಡ್ಲು ಸೇತುವೆ ಮೇಲೆ ಪ್ರವಾಹದಂತೆ ನೀರು ಹರಿಯುತ್ತಿದೆ. ವಿಷಯ ತಿಳಿದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸ್ಥಳಕ್ಕೆ ಭೇಟಿ ಅಲ್ಲಿಯೂ ಪರಿಶೀಲನೆ ನಡೆಸಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಿ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.

    ಹಾರಂಗಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ 20 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡುವಂತೆ ಅಪ್ಪಚ್ಚು ರಂಜನ್ ಹಾರಂಗಿ ಜಲಾಶಯದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

  • ಕೊಡಗು ಜಿಲ್ಲೆಯಾದ್ಯಂತ ವ್ಯಾಪಕ ಮಳೆ – ಪ್ರವಾಹ ಪೀಡಿತ ಸ್ಥಳಗಳಿಗೆ ಅಪ್ಪಚ್ಚು ರಂಜನ್ ಭೇಟಿ

    ಕೊಡಗು ಜಿಲ್ಲೆಯಾದ್ಯಂತ ವ್ಯಾಪಕ ಮಳೆ – ಪ್ರವಾಹ ಪೀಡಿತ ಸ್ಥಳಗಳಿಗೆ ಅಪ್ಪಚ್ಚು ರಂಜನ್ ಭೇಟಿ

    ಮಡಿಕೇರಿ: ಪ್ರವಾಹದ ಸಾಧ್ಯತೆ ಇರುವ ಸ್ಥಳಗಳಿಗೆ ಇಂದು ಮಡಿಕೇರಿ ಶಾಸಕ ಅಪ್ಪಚು ರಂಜನ್ ಭೇಟಿ ನೀಡಿದ್ರು. ಬಲುಮುರಿ ಗ್ರಾಮದ ಕಾವೇರಿ ನದಿಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿದ ಶಾಸಕ ಅಪ್ಪಚ್ಚು ರಂಜನ್ ನದಿಪಾತ್ರದ ಜನರ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ರು. ಬಳಿಕ ಮಾತಾನಾಡಿದ ಅವರು ತಲಕಾವೇರಿ ಬಾಗಮಂಡಲ ಸುತ್ತಮುತ್ತ ಭಾರೀ ಮಳೆ ಕಳೆದ 24 ಗಂಟೆಯಲ್ಲಿ ಭಾಗಮಂಡಲದಲ್ಲಿ 45.2 ಮಿ.ಮೀಟರ್ ಮಳೆಯಾಗಿದೆ. ಕಾವೇರಿ ನದಿ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ.

    ಕೊಡಗು ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಮಳೆ ಬಿರುಸು ಪಡೆದುಕೊಂಡಿದು. ಎಡಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ. ಅಷ್ಟೇ ಅಲ್ಲದೇ ಇದೇ ರೀತಿ ಮಳೆ ಮುಂದುವರಿದರೆ ಕಾವೇರಿ ಉಕ್ಕಿ ಹರಿವ ಸಾಧ್ಯತೆಯು ಹೆಚ್ಚಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿಯೂ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಮಡಿಕೇರಿ ತಾಲೂಕಿನ ಬಲುಮುರಿಯ ಕಾವೇರಿ ನದಿಯ ನೀರಿನ ಒಳಹರಿವು ಹೆಚ್ಚಾಗಿದೆ. ಬಲುಮುರಿ ಸೇತುವೆ ಮುಳುಗಡೆಯಾಗಲೂ ಕೇವಲ ಎರಡು ಅಡಿ ಮಾತ್ರ ಬಾಕಿಯಿದೆ.

    ಈಗಾಗಲೇ ಜಿಲ್ಲಾಡಳಿತದಿಂದ ಮಳೆಗಾಲವನ್ನು ಎದುರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಕಾಳಜಿ ಕೇಂದ್ರಗಳ ವ್ಯವಸ್ಥೆ ಅಹಾರ ಪೂರೈಕೆ ಬಗ್ಗೆ ಸಕಲ ರೀತಿಯಲ್ಲಿ ಸಿದ್ಧತೆಗಳು ನಡೆಸಿದೆ. ಜಿಲ್ಲೆಯಲ್ಲಿ ಎನ್‍ಡಿಅರ್ ಎಫ್ ತಂಡ ಬೀಡು ಬಿಟ್ಟಿದೆ. ಯಾವುದರೂ ಅನಾಹುತಗಳು ಸಂಭವಿಸಿದ್ರು. ತಕ್ಷಣವೇ ಕಾರ್ಯಪ್ರವೃತರಾಗುತ್ತಾರೆ. ಇದನ್ನೂ ಓದಿ: ಹಿಂದೂ ಯುವತಿ-ಮುಸ್ಲಿಂ ಯುವಕನ ಮದುವೆ – ಆಹ್ವಾನ ಪತ್ರಿಕೆ ಪ್ರಿಂಟ್ ಬಳಿಕ ವಿವಾಹ ಕ್ಯಾನ್ಸಲ್