ಆಸ್ತಿಗಾಗಿ ಕೊಲೆ: 32 ಎಕರೆ ಆಸ್ತಿ ಅದರಲ್ಲಿ ವಿಭಾಗ ಮಾಡುವ ವಿಚಾರಕ್ಕೆ ಪದೇ ಪದೇ ಕಲಹ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಅಪ್ಪನನ್ನು ಕೊಲೆ ಮಾಡಲು ಮಗ ಪ್ಲಾನ್ ಮಾಡಿದ್ದಾನೆ. ಅಂತೆಯೇ ಚೆನ್ನಬಸಪ್ಪ, ಸೊಸೆ ಶಿವಬಸವ್ವ ಹಾಗೂ ಮಗನ ಆಪ್ತ ರಮೇಶ್ ಮನಗೂಳಿ ಸೇರಿ ಕೊಲೆಗೆ ಪ್ಲಾನ್ ಮಾಡಿದ್ದಾರೆ. ಬಳಿಕ ಮಾಂತೇಶ್ ಮರಡಿಮಠ ಎಂಬಾತನಿಗೆ 3 ಲಕ್ಷ ಹಣ ನೀಡಿದ್ದಾರೆ. ಅಂತೆಯೇ ಚೆನ್ನಪ್ಪನನ್ನು ರಾಂಪುರ ಗ್ರಾಮದ ಬಳಿ ಮಚ್ಚಿನಿಂದ ಕೊಚ್ಚಿ ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಲಾಗಿದೆ.
ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗ ಚನ್ನಬಸಪ್ಪ, ಸೊಸೆ ಶಿವಬಸವ್ವ, ಸುಪಾರಿ ಪಡೆದು ಕೊಲೆ ಮಾಡಿದ ಮಾಂತೇಶ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಂಚಿ: ತಂದೆಯೊಬ್ಬ ತನ್ನ ಮಗಳನ್ನು ಆಕೆಯ ಪತಿ ಮನೆಯಿಂದ ಪಟಾಕಿ ಸಿಡಿಸಿ, ವಾದ್ಯ ಹಾಗೂ ಮೆರವಣಿಗೆಯಲ್ಲಿ ಕರೆತಂದ ವೀಡಿಯೋವೊಂದು ವೈರಲ್ ಆಗಿದೆ.
ಈ ಘಟನೆ ಜಾರ್ಖಂಡ್‍ನಲ್ಲಿ (Jharkhand) ನಡೆದಿದೆ. ತಂದೆ ಪ್ರೇಮ್ ಗುಪ್ತಾ ತನ್ನ ಮಗಳನ್ನು ಸಾಕ್ಷಿ ಗುಪ್ತಾಳನ್ನು ಮೆರವಣಿಗೆ ಮೂಲಕ ತವರು ಮನೆಗೆ ಕರೆತಂದಿದ್ದಾರೆ. ಸದ್ಯ ಇದರ ವಿಡಿಯೋವನ್ನು ಪ್ರೇಮ್ ಗುಪ್ತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಪೋಷಕರು ತಮ್ಮ ಮಗಳನ್ನು ಬಹಳ ಆಡಂಬರದಿಂದ ಮದುವೆ ಮಾಡಿಕೊಡುತ್ತಾರೆ. ಒಮದು ವೇಳೆ ಮದುವೆ ಬಳಿಕ ಸಂಗಾತಿ ಮತ್ತು ಅವರ ಕುಟುಂಬದವರು ಆಕೆಗೆ ಕಷ್ಟ ನೀಡಲು ಪ್ರಾರಂಭಿಸಿದರೆ, ನಿಮ್ಮ ಮಗಳನ್ನು ಅತ್ಯಂತ ಗೌರವದಿಂದ ಮನೆಗೆ ಕರೆದುಕೊಂಡು ಬರಬೇಕು. ಯಾಕೆಂದರೆ ಎಲ್ಲಾ ಹೆಣ್ಣು ಮಕ್ಕಳು ಅಮೂಲ್ಯ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
2020ರ ಏಪ್ರಿಲ್ ತಿಂಗಳಲ್ಲಿ ಸಾಕ್ಷಿಯನ್ನು ಜಾರ್ಖಂಡ್ ವಿದ್ಯುತ್ ವಿತರಣಾ ನಿಗಮದಲ್ಲಿ ಸಹಾಯಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಚಿನ್ ಕುಮಾರ್‍ಗೆ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆದರೆ ಮದುವೆ ಬಳಿಕ ಸಚಿನ್ ಹಾಗೂ ಆತನ ಮನೆಯವರು ಸಾಕ್ಷಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ, ನನ್ನ ನಡುವೆ ಏನೂ ಇಲ್ಲ: ಡಿಕೆಶಿ
ಸಚಿನ್ ಕೂಡ ಸಾಕ್ಷಿ ಜೊತೆ ಜಗಳವಾಡಿ ಮನೆಯಿಂದ ಹೊರಹಾಕಿದ್ದನು. ಆದರೂ ಜಗ್ಗದೆ ಸಾಕ್ಷಿ ಪತಿ ಜೊತೆಯೇ ವಾಸವಾಗಿದ್ದಳು. ಮದುವೆಯಾಗಿ ವರ್ಷದ ಬಳಿಕ ಸಚಿನ್‍ಗೆ ಈ ಮೊದಲೇ ಎರಡು ಮದುವೆಯಾಗಿರುವ ವಿಚಾರ ಸಾಕ್ಷಿ ಗಮನಕ್ಕೆ ಬಂದಿದೆ. ಇದೆಲ್ಲಾ ತಿಳಿದರೂ ಏನೂ ತಿಳಿಯದಂತೆ ಸಾಕ್ಷಿ ಸುಮ್ಮನಿದ್ದಳು.
ಇತ್ತ ಪತಿ ಹಾಗೂ ಆತನ ಪೋಷಕರ ಕಿರುಕುಳ ಹೆಚ್ಚಾದ ಬಳಿಕ ತವರು ಮನೆಗೆ ವಿಷಯ ತಿಳಿಸಿದಳು. ತನಗೆ ಸಂಬಂಧ ಕಡಿದುಕೊಳ್ಳುವ ನಿಧಾರ ಮಾಡಿ ಮನೆಯವರಿಗೆ ಹೇಳಿದಳು. ಅಂತೆಯೇ ಮಗಳ ನಿರ್ದಾರಕ್ಕೆ ಸೈ ಎಂದ ತಂದೆ ಪ್ರೇಮ್. ಗಂಡನ ಮನೆಯಿಂದ ಆಕೆ ಬರುವಾಗ ಮೆರವಣಿಗೆ ಮೂಲಕ ಸಂಗೀತ ವಾದ್ಯ ಮೇಳಗಳೊಂದಿಗೆ ಕರೆತಂದಿದ್ದಾರೆ. ಜೊತೆಗೆ ದಾರಿಯುದ್ದಕ್ಕೂ ಪಟಾಕಿ ಸಿಡಿಸಿದ್ದಾರೆ.
ಮಗಳಿಗೆ ಆಕೆಯ ಗಂಡನ ಮನೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು. ಇದರಿಂದ ಬೇಸರಗೊಂಡ ತಂದೆ ತನ್ನ ಮಗಳನ್ನು ಆಕೆಯ ಅತ್ತೆ ಮನೆಯಿಂದ ಅದ್ಧೂರಿ ಮೆರವಣಿಗೆಯ ಮೂಲಕ ತಾಯಿ ಮನೆಗೆ ಕರೆದುಕೊಂಡು ಬಂದಿದ್ದಾರೆ.
ಬೆಂಗಳೂರು : ಈ ಬಾರಿ ವಿಧಾನಸಭೆ ಚುನಾವಣೆ (Assembly Election 2023) ಹತ್ತು ಹಲವು ವಿಶೇಷಗಳಿಂದ ಕೂಡಿತ್ತು. ಕುಟುಂಬ ರಾಜಕಾರಣದ ಬಗ್ಗೆ ಬಹುತೇಕ ಪಕ್ಷಗಳು ಭಾಷಣ ಮಾಡಿದ್ದರೂ, ಗೆಲ್ಲುವ ಹಿತದೃಷ್ಟಿಯಿಂದ ಒಂದೇ ಕುಟುಂಬಕ್ಕೆ ಟಿಕೆಟ್ ನೀಡಿದ ಉದಾಹರಣೆಗಳು ಇವೆ. ಅದರಲ್ಲೂ ತಂದೆ (Dad) ಮಗ (Sons) ಅಥವಾ ತಂದೆ ಮಗಳಿಗೆ ಟಿಕೆಟ್ ನೀಡುವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದವು ಆಯಾ ಪಕ್ಷಗಳು. ಈ ಬಾರಿ ಯಾವ ಕ್ಷೇತ್ರದಲ್ಲಿ ಯಾರೆಲ್ಲ ಅಪ್ಪ ಮಕ್ಕಳು ಅಭ್ಯರ್ಥಿಯಾಗಿದ್ದರು? ಯಾರು ಸೋತಿದ್ದಾರೆ, ಯಾರು ಗೆದ್ದಿದ್ದಾರೆ ಎನ್ನುವ ಲೆಕ್ಕಾಚಾರ ಇಲ್ಲಿದೆ.
ಅರಕಲಗೂಡಿನಲ್ಲಿ ಜೆಡಿಎಸ್ (JDS) ನಿಂದ ಎ. ಮಂಜು ಜಯಗಳಿಸಿದ್ದರೆ, ಬಿಜೆಪಿಯ ಭದ್ರ ಕೋಟೆ ಎನಿಸಿದ್ದ ಮಡಿಕೇರಿಯಲ್ಲಿ ಅವರ ಮಗ ಕಾಂಗ್ರೆಸ್ (Congress) ನಿಂದ ಡಾ. ಮಂಥರ್ ಗೌಡ ಜಯಗಳಿಸಿದ್ದಾರೆ. ಇಬ್ಬರೂ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವುದು ವಿಶೇಷ. ಜೆಡಿಎಸ್ ರಾಜಾಧ್ಯಕ್ಷ ಮಾಜಿ ಮುಖ್ಯಮಂತಿ ಹೆಚ್.ಡಿ. ಕುಮಾರ ಸ್ವಾಮಿ ಚನ್ನಪಟ್ಟಣದಲ್ಲಿ ಅತ್ಯಲ್ಪ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರೆ, ಮಗ ನಿಖಿಲ್ ಕುಮಾರ ಸ್ವಾಮಿ ಭಾರೀ ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಎದುರು ಸೋಲು ಕಂಡಿದ್ದಾರೆ.
ಈ ಹಿಂದೆ ಜೆಡಿಎಸ್ ರಾಜಾಧ್ಯಕ್ಷರಾಗಿದ್ದ ಹಾಗೂ ಹಾಲಿ ಶಾಸಕ ಜಿ.ಟಿ. ದೇವೇಗೌಡ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಜಯಗಳಿಸಿದರೆ, ಅವರ ಮಗ ಜಿ. ಡಿ. ಹರೀಶ್ ಗೌಡ ಅವರು ಜೆಡಿಎಸ್ ನಿಂದ ಹುಣಸೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಬೆಂಗಳೂರಿನ ವಿಜಯನಗರ ಕ್ಷೇತ್ರದಿಂದ ಎಂ. ಕೃಷ್ಣ ಅವರು ಕಾಂಗ್ರೆಸ್ ನಿಂದ ಮತ್ತು ಅವರ ಮಗ ಪ್ರಿಯಾ ಕೃಷ್ಣ ಅವರು ಗೋವಿಂದರಾಜ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು ಇಬ್ಬರೂ ಜಯ ಸಾಧಿಸಿದ್ದಾರೆ.
ಬೆಂಗಳೂರಿನ ಬಿಟಿಎಂ ಲೇಔಟ್ ನಿಂದ ರಾಮಲಿಂಗ ರೆಡ್ಡಿ ಅವರು ಕಾಂಗ್ರೆಸ್ ನಿಂದ ಜಯಗಳಿಸಿದ್ದರೆ ಅವರ ಮಗಳ ಸೌಮ್ಯ ರೆಡ್ಡಿ ಅವರು ಕಾಂಗ್ರೆಸ್ ನಿಂದ ಅತ್ಯಲ್ಪ 160 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ದೇವನಹಳ್ಳಿ ಕ್ಷೇತ್ರದಿಂದ ಮುನಿಯಪ್ಪ ಗೆಲುವಿನ ನಗೆ ಬೀರಿದಿದ್ದಾರೆ. ಅವರ ಪುತ್ರಿ ರೂಪಾ ಶಶಿಧರ್ ಕೆಜಿಎಫ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.
ಅಪ್ಪಂ ಅಥವಾ ಮುಳ್ಕ ಎನ್ನಲಾಗುವ ತಿಂಡಿಯನ್ನು ಸಿಹಿ ಅಥವಾ ಖಾರವಾಗಿಯೂ ತಯಾರಿಸಬಹುದು. ಸಾಮಾನ್ಯವಾಗಿ ಇದನ್ನು ಗೋಧಿ ಹಿಟ್ಟು ಹಾಗೂ ಆಯಾಯ ಋತುಗಳಲ್ಲಿ ಬೆಳೆಯುವ ಹಣ್ಣುಗಳಿಂದ ಮಾಡಲಾಗುತ್ತದೆ. ಬಾಳೆಹಣ್ಣಿನಿಂದ ಮಾಡಲಾಗುವ ಅಪ್ಪಂ ಯಾವ ಋತುವಿನಲ್ಲೂ ಮಾಡಿ ಸವಿಯಬಹುದು. ಬಾಳೆಹಣ್ಣಿನ ಅಪ್ಪಂ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಬಾಳೆಹಣ್ಣು – 3
ಬೆಲ್ಲ – ಅರ್ಧ ಕಪ್
ಗೋಧಿ ಹಿಟ್ಟು – 1 ಕಪ್
ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
ಉಪ್ಪು – ಚಿಟಿಕೆ
ಎಣ್ಣೆ – ಹುರಿಯಲು ಬೇಕಾಗುವಷ್ಟು ಇದನ್ನೂ ಓದಿ: ದಿಢೀರ್ ಅಂತ ತಯಾರಿಸಿ ಜೋಳದ ದೋಸೆ
ಮಾಡುವ ವಿಧಾನ:
* ಮೊದಲಿಗೆ ಬಾಳೆಹಣ್ಣುಗಳ ಸಿಪ್ಪೆ ತೆಗೆದು ಅವುಗಳನ್ನು ತುಂಡುಗಳಾಗಿ ಕತ್ತರಿಸಿ. ಚೆನ್ನಾಗಿ ಹಣ್ಣಾದ ಬಾಳೆಹಣ್ಣುಗಳನ್ನು ಬಳಸಿದರೆ ಉತ್ತಮ.
* ಅವುಗಳನ್ನು ಚೆನ್ನಾಗಿ ಕಿವುಚಿ(ಮ್ಯಾಶ್ ಮಾಡಿ)
* ಅದಕ್ಕೆ ಬೆಲ್ಲ ಸೇರಿಸಿ, ಬೆಲ್ಲ ಸಂಪೂರ್ಣವಾಗಿ ಕರಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಗೋಧಿ ಹಿಟ್ಟು, ಏಲಕ್ಕಿ ಪುಡಿ ಮತ್ತು ಚಿಟಿಕೆ ಉಪ್ಪು ಸೇರಿಸಿ ಎಲ್ಲವನ್ನೂ ಮಿಕ್ಸ್ ಮಾಡಿ.
* ದಪ್ಪನೆಯ ಬ್ಯಾಟರ್‌ನ ಸ್ಥಿರತೆಯನ್ನು ರೂಪಿಸಲು ಸ್ವಲ್ಪ ನೀರನ್ನು ಬಳಸಬಹುದು.
* ಈಗ ನೀರಿನಲ್ಲಿ ನಿಮ್ಮ ಕೈಯನ್ನು ಅದ್ದಿ, ಬ್ಯಾಟರ್ ಅನ್ನು ಸ್ವಲ್ಪ ಸ್ವಲ್ಪವೇ ಬಿಸಿ ಎಣ್ಣೆಗೆ ಬಿಡಲು ಪ್ರಾರಂಭಿಸಿ.
* ಜ್ವಾಲೆಯನ್ನು ಮಧ್ಯಮದಲ್ಲಿಟ್ಟು, ಹಿಟ್ಟು ಡಾರ್ಕ್ ಗೋಲ್ಡನ್ ಬ್ರೌನ್ ಆಗುವ ತನಕ ಫ್ರೈ ಮಾಡಿ.
* ಈಗ ಅಪ್ಪಂ ಅನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
* ಈಗ ಸಿಹಿಯಾದ ಬಾಳೆಹಣ್ಣಿನ ಅಪ್ಪಂ ತಯಾರಾಗಿದ್ದು, ಇದನ್ನು ಮಕ್ಕಳು ತುಂಬಾನೇ ಇಷ್ಟ ಪಟ್ಟು ಸವಿಯುತ್ತಾರೆ. ಇದನ್ನೂ ಓದಿ: ಫಟಾಫಟ್ ಅಂತ ಮಾಡ್ಬೋದು ಕೇಸರ್ ಪೇಡ
Live Tv
[brid partner=56869869 player=32851 video=960834 autoplay=true]
ಕೇರಳದ ಬೆಳಗ್ಗಿನ ಫೇಮಸ್ ಉಪಹಾರಗಳಲ್ಲಿ ಒಂದು ಈ ಅಪಂ. ತಳವಿರುವ ಪ್ಯಾನ್ ಒಂದಿದ್ದರೆ, ಸಿಂಪಲ್ ಆಗಿ ಹಾಗೂ ಸುಲಭವಾಗಿಯೇ ತಯಾರಿಸಬಹುದು ಅಪ್ಪಂ. ಅತ್ಯಂತ ರುಚಿಕರ ಅಪ್ಪಂ ಅನ್ನು ಒಂದು ಸಲ ಮಾಡಿ ಸವಿದರೆ, ಪದೇ ಪದೇ ಮಾಡಬೇಕೆನಿಸುತ್ತದೆ. ನೀವೂ ಒಮ್ಮೆ ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು:
ಅಕ್ಕಿ – 3 ಕಪ್
ನೀರು – ನೆನೆಸಲು ಮತ್ತು ರುಬ್ಬಲು
ತುರಿದ ತೆಂಗಿನಕಾಯಿ – ಅರ್ಧ ಕಪ್
ಅನ್ನ – ಕಾಲು ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
* ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಅಕ್ಕಿಯನ್ನು 4 ಗಂಟೆಗಳ ಕಾಲ ನೆನೆಸಿ.
* ಬಳಿಕ ಅಕ್ಕಿಯನ್ನು ಬಸಿದು, ಮಿಕ್ಸರ್ ಜಾರ್‌ಗೆ ಹಾಕಿ ಹಿಟ್ಟಿಗೆ ಬೇಕಾಗುವಷ್ಟು ನೀರು ಹಾಕಿ ನಯವಾಗಿ ರುಬ್ಬಿ.
* ಈಗ ಬಾಣಲೆಗೆ ಈ ಅಕ್ಕಿ ಹಿಟ್ಟನ್ನು ಹಾಕಿ, ಮಿಶ್ರಣ ದಪ್ಪವಾಗುವವರೆಗೆ ಬೇಯಿಸಿ.
* ಈಗ ಆ ಹಿಟ್ಟು ಸಂಪೂರ್ಣ ತಣ್ಣಗಾಗಲು ಬಿಟ್ಟು, ಬಳಿಕ ಮತ್ತೆ ಮಿಕ್ಸರ್ ಜಾರ್‌ಗೆ ಹಾಕಿ.
* ಅದಕ್ಕೆ ತೆಂಗಿನ ತುರಿ, ಅನ್ನ ಹಾಗೂ ನೀರನ್ನು ಹಾಕಿ, ನಯವಾಗಿ ರುಬ್ಬಿ.
* ಈಗ ಮಿಶ್ರಣವನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ, 8 ಗಂಟೆಗಳ ಕಾಲ ಚೆನ್ನಾಗಿ ಹುದುಗಲು ಬಿಡಿ.
* 8 ಗಂಟೆ ಬಳಿಕ ಅದಕ್ಕೆ ಉಪ್ಪು ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ.
* ಅಪ್ಪಂ ಮಾಡುವ ಪ್ಯಾನ್ ಅನ್ನು ಬಿಸಿ ಮಾಡಿ, 1 ಸೌಟು ಹಿಟ್ಟು ಸುರಿದು, ಇಡೀ ಪ್ಯಾನ್ ಸುತ್ತುವರಿಯುವಂತೆ ತಿರುಗಿಸಿ.
* ಅಪ್ಪಂ ಚೆನ್ನಾಗಿ ಬೇಯುವವರೆಗೆ ಮುಚ್ಚಿ.
* ಈಗ ಅಪ್ಪಂ ತಯಾರಾಗಿದ್ದು, ತೆಂಗಿನಕಾಯಿ ಚಟ್ನಿಯೊಂದಿಗೆ ಆನಂದಿಸಿ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಬಾಸ್ ಅಂತ ಸ್ಟೇಟಸ್ ಹಾಕೋ ವಿಚಾರಕ್ಕೆ ಮನೆಗೆ ನುಗ್ಗಿ ಲಾಂಗ್ ಬೀಸೋ ಮಟ್ಟಕ್ಕೆ ಹೋಗಿತ್ತು. ಹೊಡೆಯಲು ಬಂದವರ ನಸೀಬ್ ಕೈ ಕೊಟ್ಟು ಲಾಂಗ್ ಕಿತ್ತುಕೊಂಡು ಮಚ್ಚಿನೇಟು ಕೊಟ್ಟ ಭಯಾನಕ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯ ನಾಗರಹೊಳೆನಗರದಲ್ಲಿ ನಡೆದಿದೆ.
ಸ್ವಾತಂತ್ರ್ಯೋತ್ಸವದ ದಿನದಂದು ನಡೆದ ಈ ಘಟನೆ ನೋಡಿ ಇಡೀ ಏರಿಯಾ ಜನರೇ ಬೆಚ್ಚಿ ಬಿದ್ದಿದ್ದಾರೆ. ಘಟನೆಗೆ ಕಾರಣರಾದವರು ಅಕ್ಷಯ್ ಹಾಗೂ ಎದುರಾಳಿ ಗ್ಯಾಂಗ್, ಅಕ್ಷಯ್ ಫೋಟೋಗೆ ಬಾಸ್ ಅಂತ ಟ್ಯಾಗ್ ಮಾಡಿ ಪಡ್ಡೆ ಹುಡುಗರು ಸ್ಟೇಟಸ್ ಹಾಕೊಂಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಗಣಿ, ಸುಮಂತ ನಾವ್ ಬಾಸ್ ನಮ್ಮ ಫೋಟೋ ಹಾಕೋಳ್ರೊ ಅಂತ ವಾರ್ನ್ ಮಾಡಿದ್ರು. ಅಕ್ಷಯ್ ಕ್ರಿಕೆಟ್ ಗ್ರೌಂಡ್‍ನಲ್ಲಿ ಸಿಕ್ಕಾಗ ಬೈಕ್ ಕೀನಲ್ಲೆ ಹಲ್ಲೆ ನಡೆಸಿದ್ರಂತೆ. ಇದನ್ನೂ ಓದಿ: 11 ರಾಜ್ಯಗಳಲ್ಲಿ ಮಹಿಳೆಯರೇ ಹೆಚ್ಚು ಸೆಕ್ಸ್ ಪಾಲುದಾರರನ್ನು ಹೊಂದಿದ್ದಾರೆ: ವರದಿ
ಇಷ್ಟಕ್ಕೆ ಸುಮ್ಮನಾಗದ ಗಣಿ, ಸುಮಂತ್ ಇನ್ನಿಬ್ಬರು ಹುಡುಗರನ್ನ ಹಾಕೊಂಡು ಎರಡು ಲಾಂಗ್ ಹಿಡಿದು ಅಕ್ಷಯ್ ಮುಗಿಸಲು ಆತನ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿ ಅಕ್ಷಯ್ ತಂದೆ ಆನಂದ್ ರಾಮ್ ಮತ್ತು ತಾಯಿ ಇರೋವಾಗ್ಲೆ ಮಚ್ಚು ಬೀಸೋಕೆ ಮುಂದಾಗಿದ್ರು. ಈ ಸಮಯದಲ್ಲಿ ಅಕ್ಷಯ್ ತಂದೆ ಆನಂದ್ ರಾಮ್, ಗಣಿ, ಸುಮಂತ್ ತಂದಿದ್ದ ಕೋಣ ಕಡಿಯುವ ಮಚ್ಚುಗಳಿಗಿಂತ ದೊಡ್ಡದಾಗಿದ್ದ ಲಾಂಗ್ ಕಿತ್ತುಕೊಂಡು ವಾಪಸ್ ಮಚ್ಚು ಬೀಸಿದ್ದಾರೆ.
ಯಾವಾಗ ಮಚ್ಚು ಕಿತ್ಕೊಂಡ್ರೊ ಗಣಿ ಸೇರಿದಂತೆ ಉಳಿದ ಇಬ್ಬರು ಎಸ್ಕೇಪ್ ಆಗಿದ್ದಾರೆ. ಸುಮಂತ್ ಸಿಕ್ಕಿಬಿದ್ದಾಗ ಅಕ್ಷಯ್ ಹಾಗೂ ಅವನಪ್ಪ ಮಚ್ಚಿನ ಹಿಂಬದಿಯಿಂದ ಎರಡೇಟು ಕೊಟ್ಟಿದ್ದಾರೆ. ಘಟನೆಯಲ್ಲಿ ಸುಮಂತ್‍ಗೆ ಗಂಭೀರಗಾಯವಾಗಿದ್ದು, ಆಸ್ಪತ್ರೆ ಸೇರಿದ್ದಾನೆ. ಸದ್ಯ ಎರಡೂ ಗುಂಪುಗಳ ಮೇಲೆ ಕೊಲೆ ಯತ್ನ ಕೇಸ್ ದಾಖಲಾಸಿರೋ ಬ್ಯಾಡರಹಳ್ಳಿ ಪೊಲೀಸರು ಘಟನೆ ನಡೆದ 24 ಗಂಟೆಯಲ್ಲಿ ಎಲ್ಲಾ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕಾರವಾರ: ಕಾರೊಂದು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಅವರ ಪುತ್ರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಟ್ಕಳ ತಾಲೂಕಿನ ಬೆಳಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಗುತ್ತಿಗೆದಾರ ಜೋಸೆಫ್ ಕುಟ್ಟಿ (46) ಎಂದು ಗುರುತಿಸಲಾಗಿದ್ದು, ಅವರ 16 ವರ್ಷದ ಪುತ್ರಿ ಅನು ಮರಿಯಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಅನು ಮರಿಯಾ ಅವರಿಗೆ ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: 15ರ ಹುಡುಗಿ ಮದುವೆ ಆಗಲು ನಿರಾಕರಿಸಿದ್ದಕ್ಕೆ 19ರ ಹುಡುಗ ವಿದ್ಯುತ್ ಟವರ್ ಏರಿ ಕುಳಿತ
ಮೃತ ಜೋಸೆಫ್‍ರ ಮಗಳು ನೀಟ್ ಪರೀಕ್ಷೆಗೋಸ್ಕರ ಮಂಗಳೂರಿಗೆ ಹೋಗಿ ವಾಪಾಸಾಗುತ್ತಿದ್ದರು. ಈ ವೇಳೆ ಭಾರೀ ಮಳೆಯ ನಡುವೆ ಬೆಳಕೆ ಸೇತುವೆಯ ಹತ್ತಿರ ದನವೊಂದು ಕಾರಿಗೆ ಅಡ್ಡಬಂದಿದ್ದು, ದನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ – ವ್ಯಕ್ತಿ ವಿರುದ್ಧ ದೂರು
Live Tv
[brid partner=56869869 player=32851 video=960834 autoplay=true]
ಮುಂಬೈ: ಪುಣೆಯ 43 ವರ್ಷದ ವ್ಯಕ್ತಿ ಮತ್ತು ಅವರ ಮಗ ಇಬ್ಬರೂ ಒಟ್ಟಿಗೆ ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದರು. ಆದರೆ ಪರೀಕ್ಷೆಯಲ್ಲಿ ಅಪ್ಪ ಪಾಸ್ ಆಗಿದ್ದು, ಮಗ ಫೇಲ್ ಆಗಿದ್ದಾನೆ.
ಖಾಸಗಿ ಉದ್ಯೋಗದಲ್ಲಿರುವ ಪುಣೆ ನಗರದ ಬಾಬಾಸಾಹೇಬ್ ಅಂಬೇಡ್ಕರ್ ಡಯಾಸ್ ಪ್ಲಾಟ್ ನಿವಾಸಿ ಭಾಸ್ಕರ್ ವಾಘಮಾರೆ ಅವರು 7ನೇ ತರಗತಿಯ ಬಳಿಕ ವಿದ್ಯಾಭ್ಯಾಸ ತ್ಯಜಿಸಿ ತಮ್ಮ ಕುಟುಂಬಕ್ಕಾಗಿ ಕೆಲಸ ಮಾಡಲು ಆರಂಭಿಸಿದ್ದರು. ಹೀಗಾಗಿ ಅವರಿಗೆ ಓದಲು ಸಾಧ್ಯವಾಗಲಿಲ್ಲ. ಆದರೆ 30 ವರ್ಷಗಳ ನಂತರ ತಮ್ಮ ಮಗನೊಂದಿಗೆ ಈ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗಿದ್ದರು. ಶುಕ್ರವಾರ ಮಹಾರಾಷ್ಟ್ರ ಸ್ಟೇಟ್ ಬೋರ್ಡ್ ಆಫ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ ನಡೆಸಿದ 10ನೇ ತರಗತಿಯ ವಾರ್ಷಿಕ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿದ್ದು, ಭಾಸ್ಕರ್ ವಾಘಮಾರೆ ಪಾಸ್ ಆಗಿದ್ದಾರೆ. ಇದನ್ನೂ ಓದಿ: ಸದ್ಗುರು ಕಾಲು ಮುಟ್ಟಿ ನಮಸ್ಕರಿಸಿದ BSY – ಭಾಷಣದ ವೇಳೆ ಕೆಮ್ಮಿದಾಗ ನೀರು ತಂದುಕೊಟ್ಟ ಜಗ್ಗಿ ವಾಸುದೇವ್
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಓದಬೇಕೆಂಬ ಆಸೆ ಇತ್ತು. ಆದರೆ ಕುಟುಂಬದ ಜವಾಬ್ದಾರಿಗಳಿಂದ ಮತ್ತು ಜೀವನವನ್ನು ಸಾಗಿಸಲು ಓದಲು ಸಾಧ್ಯವಾಗಲಿಲ್ಲ. ಕೆಲ ದಿನಗಳ ಹಿಂದೆ ಮತ್ತೆ ಓದುವುದನ್ನು ಆರಂಭಿಸಬೇಕು ಮತ್ತು ಕೆಲವು ಕೋರ್ಸ್‍ಗಳನ್ನು ಮಾಡಬೇಕೆಂದು ಅಂದುಕೊಂಡಿದ್ದೆ. ಆದ್ದರಿಂದ 10ನೇ ತರಗತಿ ಪರೀಕ್ಷೆ ಬರೆಯಲು ನಿರ್ಧರಿಸಿದೆ. ಇದೇ ವೇಳೆ ನನ್ನ ಮಗ ಕೂಡ 10ನೇ ತರಗತಿ ಪರೀಕ್ಷೆ ಹಾಜರಾಗುತ್ತಿದ್ದನು ಮತ್ತು ಇದು ನನಗೆ ಸಹಾಯಕವಾಗಿತ್ತು. ಕೆಲಸ ಮುಗಿಸಿ ಮನೆಗೆ ಬಂದ ನಂತರ ನಾನು ಪ್ರತಿದಿನ ಓದುತ್ತಿದ್ದೆ. ನನ್ನ ಮಗನಿಗೆ ಪೂರಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಬೆಂಬಲಿಸುತ್ತೇನೆ ಮತ್ತು ಅವನು ಕೂಡ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾನೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ನಂತರ ಮಾತನಾಡಿದ ಭಾಸ್ಕರ್ ವಾಘಮಾರೆ ಅವರ ಮಗ ಸಾಹಿಲ್, ನನ್ನ ತಂದೆ ಅಂದುಕೊಂಡಿದ್ದನ್ನು ಸಾಧಿಸಿರುವುದನ್ನು ಕಂಡು ನನಗೆ ಸಂತಸವಾಗಿದೆ. ಹಾಗೇ ನಾನು ಕೂಡ ಬಿಡುವುದಿಲ್ಲ. ನಾನು ಪೂರಕ ಪರೀಕ್ಷೆಗಳಿಗೆ ತಯಾರಿ ನಡೆಸಿ, ಎಲ್ಲಾ ಪರೀಕ್ಷೆಯಲ್ಲೂ ಉತ್ತೀರ್ಣನಾಗಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾನೆ. ಇದನ್ನೂ ಓದಿ:52ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ಗಾಂಧಿ – ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದೇಕೆ?
ಮೈಸೂರು: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ ಅಪ್ರಾಪ್ತ ಮಗಳನ್ನು ತಂದೆ ಮತ್ತು ತಾಯಿ ಇಬ್ಬರು ಸೇರಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಎರಡನೇ ಪಿಯು ವಿದ್ಯಾರ್ಥಿನಿ ಶಾಲಿನಿ (17) ಕೊಲೆಗೀಡಾದ ಅಪ್ರಾಪ್ತೆ. ಈಗಾಗಲೇ ಮಗಳನ್ನು ಕೊಂದ ಆರೋಪದ ಮೇಲೆ ತಂದೆ ಸುರೇಶ್ ಹಾಗೂ ತಾಯಿ ಬೇಬಿಯನ್ನು ಬಂಧಿಸಿದ್ದಾರೆ.
ಕೊಲೆಗೀಡಾದ ಅಪ್ರಾಪ್ತೆಯು ಪಕ್ಕದ ಗ್ರಾಮದ ಮೆಲ್ಲಹಳ್ಳಿಯ ಯುವಕ ಮಂಜು ಅನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರ ಪ್ರೀತಿಗೆ ಶಾಲಿನಿ ಪೋಷಕರು ವಿರೋಧಿಸಿದ್ದರು. ಇದನ್ನೂ ಓದಿ: ಕಾಂಪೌಂಡ್ ಒಳಗಡೆ ನುಗ್ಗಿತು ಕಾರು
ಪ್ರೇಮಿಗಳು ಮದುವೆಯಾಗಲು ನಿರ್ಧರಿಸಿದ್ದರು. ಪ್ರಿಯಕರನಿಗಾಗಿ ಶಾಲಿನಿ ಮನೆ ಬಿಟ್ಟಿದ್ದಳು. ಇದೇ ವಿಚಾರ ಪೊಲೀಸ್ ಠಾಣೆ ಮೆಟ್ಟಲೇರಿತ್ತು. ಪೊಲೀಸರ ಮುಂದೆ ಶಾಲಿನಿ ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು. ಹೀಗಾಗಿ ಶಾಲಿನಿ ಬಾಲಮಂದಿರಕ್ಕೆ ಸೇರಿಕೊಂಡಿದ್ದಳು. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಟ್ವೀಟ್ – ಬಿಜೆಪಿ ಮುಖಂಡ ಅರೆಸ್ಟ್
ಇತ್ತೀಚೆಗಷ್ಟೆ ಮಗಳನ್ನು ಪೋಷಕರಾದ ಸುರೇಶ್ ಹಾಗೂ ಬೇಬಿ ಮನೆಗೆ ಕರೆ ತಂದು ಮಗಳನ್ನು ಕೊಲೆ ಮಾಡಿದ್ದಾರೆ. ಶಾಲಿನಿ ಮೃತದೇಹ ಜಮೀನೊಂದರಲ್ಲಿ ಪತ್ತೆಯಾಗಿದೆ. ತಮಗೆ ಅವಮಾನ ಮಾಡಿದಕ್ಕೆ ಮಗಳನ್ನು ಕೊಲೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂಡೀಗಢ: ಒಳಚರಂಡಿಯೊಳಗೆ ಬಿದ್ದು ಎಂಟು ವರ್ಷದ ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಹರಿಯಾಣದ ನುಹ್ ಜಿಲ್ಲೆಯಲ್ಲಿ ನಡೆದಿದೆ.
ಮಂಗಳವಾರ ಜಿಲ್ಲೆಯ ಬಿಚೋರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಬಾಲಕ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಒಳಚರಂಡಿಯೊಳಗೆ ಬಿದ್ದಿದ್ದಾನೆ. ನಂತರ ಬಾಲಕನನ್ನು ರಕ್ಷಿಸಲು ಆತನ ತಂದೆ ಮತ್ತು ಮತ್ತೋರ್ವ ವ್ಯಕ್ತಿ ಪ್ರಯತ್ನಿಸಿದ್ದು, ಮೂವರು ಕೂಡ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದ ನಿವಾಸಿ ದಿನು ಅವರ ಮನೆಯ ಹೊರಗೆ 20 ಅಡಿ ಆಳದ ಒಳಚರಂಡಿಯನ್ನು ನಿರ್ಮಿಸಲಾಗಿತ್ತು. ಒಳಚರಂಡಿಯನ್ನು ಕಲ್ಲಿನ ಚಪ್ಪಡಿಯಿಂದ ಮುಚ್ಚಲಾಗಿತ್ತು. ಆದರೆ ದಿನು ಅವರ ಮೊಮ್ಮಗ ಆರಿಜ್ ಆಟವಾಡುತ್ತಿದ್ದ ವೇಳೆ ಒಳಚರಂಡಿ ಮೇಲೆ ಮುಚ್ಚಲಾಗಿದ್ದ ಕಲ್ಲು ಮುರಿದು ಹೋಗಿದ್ದರಿಂದ ಬಾಲಕ ಬಿದ್ದಿದ್ದಾನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಾಸನ ಕಟ್ಟಿನಕೆರೆ ಮಾರುಕಟ್ಟೆ ಬಂದ್ – 500ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್
ಇದೇ ವೇಳೆ ಬಾಲಕನನ್ನು ರಕ್ಷಿಸಲು ಒಳಚರಂಡಿಗೆ ಇಳಿದ ಬಾಲಕನ ತಂದೆ ಸಿರಾಜು (30) ಮತ್ತು ಆತನ ಚಿಕ್ಕಪ್ಪ ಸಲಾಮು (35) ಕೂಡ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ನಂತರ ಒಳಗೆ ಹೋದವರು ಹೊರಗೆ ಬರದೇ ಇದ್ದದ್ದನ್ನು ಕಂಡು ಕುಟುಂಬಸ್ಥರು ಕೂಗಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಿನ್ನಿದಾಂಡು ಆಟದಿಂದ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ