Tag: ಅಪೋಲೋ

  • ರಕ್ತ ಪರೀಕ್ಷೆ ಮೂಲಕ ಸ್ತನ ಕ್ಯಾನ್ಸರ್‌ ಪತ್ತೆ – ತಂತ್ರಜ್ಞಾನ ಭಾರತದಲ್ಲೂ ಲಭ್ಯ

    ರಕ್ತ ಪರೀಕ್ಷೆ ಮೂಲಕ ಸ್ತನ ಕ್ಯಾನ್ಸರ್‌ ಪತ್ತೆ – ತಂತ್ರಜ್ಞಾನ ಭಾರತದಲ್ಲೂ ಲಭ್ಯ

    ನವದೆಹಲಿ: ರಕ್ತ ಪರೀಕ್ಷೆಯ ಮೂಲಕ ಸ್ತನ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವ ತಂತ್ರಜ್ಞಾನ ಈಗ ಭಾರತದಲ್ಲೂ ಲಭ್ಯವಿದೆ.

    ಅಪೋಲೋ ಗ್ರೂಪ್‌ ಆಫ್‌ ಹಾಸ್ಪಿಟಲ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿರುವ ಖಾಸಗಿ ಕಂಪನಿ ಡಾಟರ್‌ ಕ್ಯಾನ್ಸರ್‌ ಜೆನಿಟಿಕ್ಸ್‌ ವತಿಯಿಂದ ಈ ತಂತ್ರಜ್ಞಾನವನ್ನು ಭಾರತದಲ್ಲಿ ಜೂ.22ರಂದು ಆರಂಭಿಸಲಾಯಿತು. ಇದನ್ನೂ ಓದಿ: ಮಹಿಳಾ ಉದ್ಯೋಗಿಗಳಿಗೆ ತಾರತಮ್ಯ – 921 ಕೋಟಿ ನೀಡಲು ಮುಂದಾದ ಗೂಗಲ್‌

    ಹೊಸ ತಂತ್ರಜ್ಞಾನದ ಮೂಲಕ ನಡೆಸುವ ರಕ್ತ ಪರೀಕ್ಷೆಯು 40 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸ್ತನ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಯೂರೋಪ್‌ನ ಹಲವು ದೇಶಗಳು ಸೇರಿದಂತೆ 15 ರಾಷ್ಟ್ರಗಳು ಅಳವಡಿಸಿಕೊಂಡ ಹೊಸ ಮಾದರಿಯ ರೋಗನಿರ್ಣಯ ತಂತ್ರಜ್ಞಾನ ಇದಾಗಿದೆ. ಈ ರಕ್ತ ಪರೀಕ್ಷೆಯ ಫಲಿತಾಂಶವು ಶೇ.99 ರಷ್ಟು ನಿಖರತೆಯನ್ನು ಹೊಂದಿದೆ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

    ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಲೇ ಇದೆ. ರೋಗಿಗಳ ಆರೈಕೆ, ಚಿಕಿತ್ಸೆಯ ವೆಚ್ಚವು ದುಬಾರಿಯಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಮಾತ್ರ ಇಂತಹ ಪ್ರಕರಣಗಳನ್ನು ತ್ವರಿತವಾಗಿ ನಿರ್ವಹಿಸಲು ಸಾಧ್ಯ. ಮಹಿಳೆಯರಲ್ಲಿನ ಸ್ತನ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಪತ್ತೆ ಹೆಚ್ಚಿದರೆ, ಅವರಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಇದು ಜೀವಿತಾವಧಿಯ ಹೆಚ್ಚಳಕ್ಕೆ ಸಹಾಯವಾಗಲಿದೆ. ಚಿಕಿತ್ಸೆ ಪಡೆದುಕೊಳ್ಳಲು ರೋಗಿಗಳು ಎದಿರುವ ತೊಂದರೆಗಳನ್ನು ಕಡಿಮೆ ಮಾಡಬಹುದು ಎಂಬುದು ವೈದ್ಯರ ಅಭಿಪ್ರಾಯ.

    ಕಳೆದ ವರ್ಷ ನವೆಂಬರ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್‌ನಿಂದ ಹೊಸ ತಂತ್ರಜ್ಞಾನದ ರಕ್ತ ಪರೀಕ್ಷೆಯನ್ನು ಅನುಮೋದಿಸಲಾಗಿದೆ. ಈ ರಕ್ತ ಪರೀಕ್ಷೆ ಮೂಲಕ 0 ಹಾಗೂ 1ನೇ ಹಂತದ ಸ್ತನ ಕ್ಯಾನ್ಸರ್ ಪ್ರಕರಣಗಳನ್ನು ಶೇ.99 ರಷ್ಟು ನಿಖರತೆಯೊಂದಿಗೆ ಪತ್ತೆಹಚ್ಚಲಾಗಿದೆ ಎಂಬುದನ್ನು ಅಧ್ಯಯನವು ಸಾಬೀತುಪಡಿಸಿದೆ. ಇದನ್ನೂ ಓದಿ: 5ಜಿ ತರಂಗಾಂತರ ಹರಾಜಿಗೆ ಕ್ಯಾಬಿನೆಟ್ ಅನುಮೋದನೆ

    ʻಈಸಿಚೆಕ್ ಬ್ರೆಸ್ಟ್ʼ ಎಂದೇ ಹೆಸರಾಗಿರುವ ಈ ಪರೀಕ್ಷೆಗೆ 6,000 ರೂ. ವೆಚ್ಚ ತಗುಲುತ್ತದೆ. ಕಳೆದ ವರ್ಷ ನವೆಂಬರ್‌ನಲ್ಲಿ US ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಇದನ್ನು ಅನುಮೋದಿಸಿದೆ. ಯಾವುದೇ ರೋಗಲಕ್ಷಣ ಹೊಂದಿರದ 40 ವರ್ಷಕ್ಕಿಂತ ಮೇಲ್ಪಟ್ಟ ಆರೋಗ್ಯವಂತ ಮಹಿಳೆಯರಿಗೆ ವಾರ್ಷಿಕ ಪರೀಕ್ಷೆ ನಡೆಸುವಂತೆ ಸೂಚಿಸಿದೆ.

    ಮ್ಯಾಮೊಗ್ರಾಫಿಗೆ (ಸ್ತನ ಪರೀಕ್ಷೆಗೆ ಚಾಲ್ತಿಯಲ್ಲಿರುವ ವಿಧಾನ) ಬದಲಿ ಪರೀಕ್ಷೆ ವಿಧಾನ ಇದಲ್ಲ. ಈ ಹೊಸ ತಂತ್ರಜ್ಞಾನ ಬಳಸಿಕೊಂಡು ಸ್ತನ ಕ್ಯಾನ್ಸರ್‌ ಪಾಸಿಟಿವ್‌ ಬರುವ ಮಹಿಳೆಯರು ಸಾಂಪ್ರದಾಯಿಕ ಸ್ಕ್ರೀನಿಂಗ್ ಪರೀಕ್ಷೆಗಳಿಗೆ ಹೋಗಬಹುದು ಎನ್ನುತ್ತಾರೆ ದೆಹಲಿಯ ಅಪೋಲೋ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಾ ಆಂಕೊಲಾಜಿಸ್ಟ್ ಡಾ. ರಮೇಶ್ ಸರಿನ್.

    ಒಂದು ವೇಳೆ ಈ ಪರೀಕ್ಷೆಯಲ್ಲಿ ನೆಗೆಟಿವ್‌ ಫಲಿತಾಂಶ ಬಂದರೆ ಮಹಿಳೆಯರು ಕ್ಯಾನ್ಸರ್‌ನ್ನು ಸಂಪೂರ್ಣವಾಗಿ ತಳ್ಳಿಹಾಕಬಾರದು. ಇತರ ಸ್ಕ್ರೀನಿಂಗ್ ಪರೀಕ್ಷೆಗಳಿಗೆ ಹೋಗಬಹುದು ಎಂದು ವೈದ್ಯರು ಸೂಚಿಸುತ್ತಾರೆ.

    Live Tv

  • ನಟ ಸಾಯಿಧರ್ಮ ತೇಜ್ ಆರೋಗ್ಯ ಸ್ಥಿರ

    ನಟ ಸಾಯಿಧರ್ಮ ತೇಜ್ ಆರೋಗ್ಯ ಸ್ಥಿರ

    ಹೈದರಾಬಾದ್: ಬೈಕ್ ಅಪಘಾತಕ್ಕೀಡಾಗಿ ಗಂಭೀರ ಸ್ಥಿತಿಯಲ್ಲಿದ್ದ ಟಾಲಿವುಡ್ ನಟ ಸಾಯಿಧರ್ಮ ತೇಜ್ ಆರೋಗ್ಯ ಸ್ಥಿರವಾಗಿದೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ.

    ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಸಾಯಿಧರ್ಮ ತೇಜ್ ಹೈದರಾಬಾದ್‍ನ ಮಾದಾಪುರ್ ಕೇಬಲ್ ಬ್ರಿಡ್ಜ್ ಬಳಿ ಸ್ಪೋಟ್ರ್ಸ್ ಬೈಕಿನಲ್ಲಿ ಬರುವಾಗ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಪಿಡ್ಸ್ ಬಂದು ಕೋಮಾ ಸ್ಥಿತಿಗೆ ತಲುಪಿದ್ದರು. ಇದೀಗ ವಂಟಿಲೇಟರ್‍ನಲ್ಲಿರುವ ಸಾಯಿಧರ್ಮ ತೇಜ್ ಅವರ ಆರೋಗ್ಯ ಸ್ಥಿರವಾಗಿದೆ. ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ. 24 ಗಂಟೆಗಳ ಕಾಲ ಆರೋಗ್ಯದ ಮೇಲೆ ನಿಗಾವಹಿಸಬೇಕಾಗಿದೆ. ಎಲ್ಲಾ ಅಂಗಾಂಗಗಳು ಕಾರ್ಯನಿರ್ವಹಿಸುತ್ತಿವೆ. ಐಸಿಯುನಲ್ಲಿ ಹೆಚ್ಚಿನ ಚಿಕಿತ್ಸೆ ಮುಂದುವರಿಯುವುದಾಗಿ ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಘಟನೆಯಿಂದ ಸಾಯಿಧರ್ಮ ತೇಜ್ ಬಲಗಣ್ಣು ಹಾಗೂ ಎದೆ ಭಾಗ, ಭುಜ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿತ್ತು. ಸದ್ಯ ಹೈದರಾಬಾದ್‍ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್, ಅಲ್ಲು ಅರವಿಂದ್ ಸೇರಿದಂತೆ ಇಡೀ ಕುಟುಂಬವೇ ಆಸ್ಪತ್ರೆಯಲ್ಲಿದೆ. ಇದನ್ನೂ ಓದಿ: ಬೈಕ್ ಆಕ್ಸಿಡೆಂಟ್ – ಟಾಲಿವುಡ್ ನಟ ಸಾಯಿಧರ್ಮ ತೇಜ್ ಸ್ಥಿತಿ ಗಂಭೀರ

    ಈ ಬಗ್ಗೆ ಟ್ವೀಟ್ ಮಾಡಿರುವ ನಟ ಚಿರಂಜೀವಿ, ವೈದ್ಯರು ತಿಳಿಸಿರುವಂತೆ ಆತಂಕ ಪಡುವ ಅಗತ್ಯವಿಲ್ಲ. ಚಿಕಿತ್ಸೆ ಮುಂದುವರಿದಿದೆ. ಮುಂದಿನ ಕೆಲ ದಿನಗಳಲ್ಲಿ ಆತ ಸಹಜ ಸ್ಥಿತಿಗೆ ಮರಳುತ್ತಾನೆ ಎಂದು ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಚಿತ್ರರಂಗವಷ್ಟೇ ಅಲ್ಲ ಕನ್ನಡ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿರುವುದಕ್ಕೆ ಹೆಮ್ಮೆಯಾಗ್ತಿದೆ: ಬೊಮ್ಮಾಯಿ