Tag: ಅಪೂರ್ವ ಶುಕ್ಲಾ

  • ಜೈಲಿನಲ್ಲಿ ಭವಿಷ್ಯ ಹೇಳೋ ಕಲೆಯನ್ನು ಕಲಿಯುತ್ತಿದ್ದಾಳೆ ಹಂತಕಿ ಅಪೂರ್ವ ಶುಕ್ಲಾ

    ಜೈಲಿನಲ್ಲಿ ಭವಿಷ್ಯ ಹೇಳೋ ಕಲೆಯನ್ನು ಕಲಿಯುತ್ತಿದ್ದಾಳೆ ಹಂತಕಿ ಅಪೂರ್ವ ಶುಕ್ಲಾ

    ನವದೆಹಲಿ: ಮಾಜಿ ಗವರ್ನರ್ ಎನ್.ಡಿ.ತಿವಾರಿ ಪುತ್ರ ರೋಹಿತ್ ತಿವಾರಿಯನ್ನು ಕೊಲೆಗೈದು ಜೈಲುಪಾಲಾಗಿರುವ ಪತ್ನಿ ಅಪೂರ್ವ ಶುಕ್ಲಾ ಜೈಲಿನಲ್ಲಿ ಕಾರ್ಡ್ ಮೂಲಕ ಭವಿಷ್ಯ ಹೇಳುವ ಕಲೆಯನ್ನು ಕಲಿಯುತ್ತಿದ್ದಾಳೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಆಸ್ತಿಗಾಗಿ ಪತಿಯನ್ನೇ ಕೊಲೆ ಮಾಡಿದ್ದ ಅಪೂರ್ವ ಸದ್ಯ ತಿಹಾರ್ ಜೈಲಿನಲ್ಲಿದ್ದಾಳೆ. ಈ ಸಂದರ್ಭದಲ್ಲಿ ಪತಿಯನ್ನ ಕೊಲೆ ಮಾಡಿದ್ದಕ್ಕೆ ಪಶ್ಚತ್ತಾಪ ಪಡುವಂತೆ ಅಪೂರ್ವ ಕಾಣುತ್ತಿಲ್ಲ. ಜೈಲಿನಲ್ಲಿ ಪ್ರತಿ ಮಂಗಳವಾರ ಹಾಗೂ ಗುರುವಾರ ನಡೆಯುವ ಕಾರ್ಡ್ ಮೂಲಕ ಭವಿಷ್ಯ ಹೇಳುವ ತರಗತಿಗೆ ತಪ್ಪದೇ ಭಾಗವಹಿಸುತ್ತಿದ್ದಾಳೆ. ಅಲ್ಲದೇ ಇದನ್ನು ಕಲಿಯಲು ಸಾಕಷ್ಟು ಆಸಕ್ತಿ ತೋರಿಸುತ್ತಿದ್ದಾಳೆ ಎಂದು ಜೈಲಿನ ಮೂಲಗಳು ಮಾಧ್ಯಮಕ್ಕೆ ಸ್ಪಷ್ಟಪಡಿಸಿವೆ.

    ನ್ಯಾಯಾಲಯದ ವಿಚಾರಣೆ ಕಾರಣದಿಂದ ಕೆಲ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಮೊದಲ ಸಾಲಿನಲ್ಲೇ ಕುಳಿತು ಓದುವುದರಲ್ಲಿ ಆಸಕ್ತಿ ವಹಿಸಿದ್ದಾಳೆ. ಆಕೆ ಇದನ್ನು ಕಲಿಯಲು ಆಸಕ್ತಿ ತೋರಿರುವುದು ತಮಗೆ ಅಚ್ಚರಿಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಏನಿದು ಪ್ರಕರಣ?
    ಏಪ್ರಿಲ್ 16 ರಂದು ಮಾಜಿ ಮುಖ್ಯಮಂತ್ರಿ ಎನ್.ಡಿ.ತಿವಾರಿ ಪುತ್ರ ರೋಹಿತ್ ತಿವಾರಿ ಅವರನ್ನು ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣವನ್ನು ಭೇದಿಸಿದ್ದ ದೆಹಲಿ ಪೊಲೀಸರು ಅವರ ಪತ್ನಿ ಅಪೂರ್ವ ಶುಕ್ಲಾಳನ್ನು ಬಂಧಿಸಿದ್ದರು. ಮೊದಲು ಪ್ರಕರಣದಲ್ಲಿ ರೋಹಿತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ ಮರಣೋತ್ತರ ವರದಿಯಲ್ಲಿ ಅವರ ಕೊಲೆ ನಡೆದಿದೆ ಎಂಬುವುದು ಸ್ಪಷ್ಟವಾಗಿತ್ತು.

    ಆರಂಭದಲ್ಲಿ ಪೊಲೀಸರ ದಿಕ್ಕು ತಪ್ಪಿಸಲು ಅಪೂರ್ವ ಯತ್ನಿಸಿದ್ದಳು. ಪ್ರಕರಣ ಪ್ರಾಥಮಿಕ ವಿಚಾರಣೆ ವೇಳೆ ಅಂದು ಮನೆಗೆ ಬಂದಿರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅಂದು ರೋಹಿತ್ ಅವರ ತಾಯಿ ತಪಾಸಣೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅಂದು ಸಂಜೆ ರೋಹಿತ್ ಕೊಠಡಿಗೆ ತೆರಳಿದ್ದ ಅಪೂರ್ವ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ಕೇವಲ ಒಂದೂವರೆ ಗಂಟೆಯಲ್ಲಿ ಅವಧಿಯಲ್ಲಿ ಸಾಕ್ಷಿ ನಾಶಕ್ಕೆ ಯತ್ನಿಸಿದ್ದಳು. ವಿಚಾರಣೆಯಲ್ಲಿ ಅಪೂರ್ವ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಳು. ವೈವಾಹಿಕ ಜೀವನದಲ್ಲಿ ಇಬ್ಬರ ಜೀವನದಲ್ಲಿ ಉಂಟಾದ ಅಸಮಾಧಾನ ಹಾಗೂ ಆಸ್ತಿ ಮೇಲಿನ ಆಸೆಯಿಂದ ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಳು.