ನವದೆಹಲಿ: ಭಾರತೀಯ ಸೇನೆಗೆ ಅಮೆರಿಕದಿಂದ (America) ಮೂರು ಅಪಾಚೆ ಹೆಲಿಕಾಪ್ಟರ್‌ಗಳ (Apache Attack Choppers) ಮೊದಲ ಬ್ಯಾಚ್ ಆಗಮಿಸಿದೆ. ಅಪಾಚೆ ಹೆಲಿಕಾಪ್ಟರ್‌ಗಳು ಸೇನೆಯ ಆಕ್ರಮಣ ಮತ್ತು ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸುತ್ತದೆ.
ಡೆಸರ್ಟ್ ಕ್ಯಾಮೊ ಬಣ್ಣದಲ್ಲಿರುವ ಅತ್ಯಾಧುನಿಕ ಚಾಪರ್‌ಗಳು ಅಮೆರಿಕದಿಂದ ಆಂಟೋನೋವ್ ಸಾರಿಗೆ ವಿಮಾನದಲ್ಲಿ ಆಗಮಿಸಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಭಾರತೀಯ ಸೇನೆ ಅಪಾಚೆ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುವುದು ಇದೇ ಮೊದಲಾಗಿದೆ. ಇದು ವಿಶ್ವದ ಅತ್ಯುತ್ತಮ ಫೈಟರ್ ಚಾಪರ್‌ಗಳಲ್ಲಿ ಒಂದಾಗಿದೆ. ಭಾರತೀಯ ವಾಯುಪಡೆ ಈಗಾಗಲೇ 22 ಬಾರಿ ದಾಳಿ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುತ್ತಿದೆ. ಇದನ್ನೂ ಓದಿ: ಶೀಘ್ರವೇ ಧರ್ಮಸ್ಥಳ ಪ್ರಕರಣಗಳ ತನಿಖೆ ಆರಂಭ; ಎಸ್‌ಐಟಿ ತಂಡದಿಂದ ಯಾರೂ ಹೊರಗುಳಿಯಲ್ಲ: ಪರಮೇಶ್ವರ್
ಸೇನಾ ವಾಯುಯಾನಕ್ಕಾಗಿ ಮೊದಲ ಬ್ಯಾಚ್ ಅಪಾಚೆ ಹೆಲಿಕಾಪ್ಟರ್‌ಗಳು ಭಾರತಕ್ಕೆ ಆಗಮಿಸುತ್ತಿರುವುದರಿಂದ ಭಾರತೀಯ ಸೇನೆಗೆ ಇದು ಮೈಲಿಗಲ್ಲು ದಾಖಲಿಸಿದ ಕ್ಷಣವಾಗಿದೆ. ಈ ಅತ್ಯಾಧುನಿಕ ಹೆಲಿಕಾಪ್ಟರ್‌ಗಳು ಭಾರತೀಯ ಸೇನೆಯ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ ಎಂದು ಭಾರತೀಯ ಸೇನೆಯು ಭಾರತದಲ್ಲಿನ ಹೆಲಿಕಾಪ್ಟರ್‌ಗಳ ಮೊದಲ ಫೋಟೋಗಳನ್ನು ಹಂಚಿಕೊಂಡಿದೆ. ಈ ಹೊಸ ಚಾಪರ್‌ಗಳನ್ನು ಪಾಕಿಸ್ತಾನದ ಪಶ್ಚಿಮ ಗಡಿಯ ಬಳಿಯ ಜೋಧ್‌ಪುರದಲ್ಲಿ ನಿಯೋಜಿಸಲಾಗುತ್ತದೆ ಮತ್ತು ಲೇಹ್-ಲಡಾಖ್ ಪ್ರದೇಶಕ್ಕೂ ಹೋಗುವ ಸಾಧ್ಯತೆ ಇದೆ. ಇದನ್ನೂ ಓದಿ: GST ನೋಟಿಸ್ ಕೊಟ್ಟ ಕೋತಿ ಕೆಲಸ ರಾಜ್ಯ ಸರ್ಕಾರದ್ದು- ನೋಟಿಸ್ ವಾಪಸ್ ಪಡೆಯಬೇಕು: ಸಿ.ಟಿ.ರವಿ
ನವದೆಹಲಿ: ಭಾರತದ ವಾಯುಪಡೆಗೆ ಅಮೆರಿಕದ 3 ಅಪಾಚೆ ಹೆಲಿಕಾಪ್ಟರ್‌ಗಳು (Apache helicopters) ಸೇರ್ಪಡೆಗೊಂಡಿವೆ. ಜುಲೈ 21ರಂದು ಈ ಮೂರು ಹೆಲಿಕಾಪ್ಟರ್‌ಗಳು ಭಾರತ-ಪಾಕ್ ಗಡಿಯಲ್ಲಿ ನಿಯೋಜನೆ ಮಾಡಲು ನಿರ್ಧರಿಸಲಾಗಿದೆ.
First batch of the Indian Air Force’s @Boeing_In AH-64E Apache helicopters inbound! Four airframes arrive in India in the next few days, with total of 9 to be delivered this year + remaining 13 next year. They’ll operate out of Pathankot & Jorhat. pic.twitter.com/Z4LG66J0PE
ರಕ್ಷಣಾ ಮತ್ತು ಭದ್ರತಾ ಸಂಸ್ಥೆಗಳಿಗೆ (Defence Sector) ಸಂಬಂಧಿಸಿದ ಮೂಲಗಳ ಪ್ರಕಾರ, ಭಾರತ ಸ್ವೀಕರಿಸಲಿರುವ ಮೂರು ಹೆಲಿಕಾಪ್ಟರ್‌ಗಳನ್ನು ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಲಾಗುತ್ತದೆ. ‘ಗಾಳಿಯಲ್ಲಿರುವ ಯುದ್ಧ ಟ್ಯಾಂಕ್‌ಗಳು’ ಎಂದೂ ಕರೆಯಲ್ಪಡುವ ಸುಧಾರಿತ AH-64E ಮೂರು ಅಪಾಚೆ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಪಡೆಯ (IAF) ಹಿಂಡನ್ ವಾಯುಪಡೆ ನಿಲ್ದಾಣದಲ್ಲಿ ಇಳಿಯಲಿವೆ. ರಾಜಸ್ಥಾನದ ಜೋಧ್‌ಪುರದಲ್ಲಿ ವಾಯುಸೇನೆಯು ತನ್ನ ಮೊದಲ ಅಪಾಚೆ ಸ್ಕ್ವಾಡ್ರನ್ ರಚಿಸಿದ 15 ತಿಂಗಳ ನಂತರ, ಅಮರಿಕದಿಂದ ಮೊದಲ ಕಂತಿನ ಮೂರು ಅಪಾಚೆ ಹೆಲಿಕಾಪ್ಟರ್‌ಗಳು ಭಾರತಕ್ಕೆ ಬರುತ್ತಿವೆ.
ಈ ಹಿಂದೆ 2015ರಲ್ಲಿ 22 ಅಪಾಚೆ ಹೆಲಿಕಾಪ್ಟರ್ ಖರೀದಿಸಲಾಗಿತ್ತು. ಜುಲೈ 2020ರಲ್ಲಿ ಮತ್ತೆ 600 ಮಿಲಿಯನ್ ಡಾಲರ್ ವೆಚ್ಚದ 6 ಹೆಲಿಕಾಪ್ಟರ್‌ಗಳಿಗಾಗಿ ಸಹಿ ಆಗಿತ್ತು. ಇದಾಗಿ ಒಂದು ವರ್ಷದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದಾಗ, ಮತ್ತೆ ಆರು ಹೊಸ ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸಲು 600 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಒಪ್ಪಂದದ ಕರಾರಿನಂತೆ ಮೊದಲ ಕಂತಿನ ಮೂರು ಅಪಾಚೆ ಹೆಲಿಕಾಪ್ಟರ್‌ನ್ನು 2024ರ ಮೇ ಮತ್ತು ಜೂನ್ ನಡುವೆ ಭಾರತಕ್ಕೆ ತಲುಪಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಇದನ್ನು ಮುಂದೂಡಲಾಯಿತು. 15 ತಿಂಗಳು ತಡವಾಗಿ 3 ಹೆಲಿಕಾಪ್ಟರ್ ಭಾರತಕ್ಕೆ ಬರ್ತಿವೆ. ಗಾಳಿಯಲ್ಲಿರುವ ಯುದ್ಧ ಟ್ಯಾಂಕರ್ ಎಂದು ಕರೆಯಲ್ಪಡುವ ಸುಧಾರಿತ ಎಎಚ್-64ಇ ಹೆಲಿಕಾಫ್ಟರ್‌ಗಳು ಸೇನೆಯ ಆಕ್ರಮಣಾಕಾರಿ ಹಾಗೂ ವಿಚಕ್ಷಣಾ ಕಾರ್ಯಾಚರಣೆಗೆ ನೆರವಾಗಲಿವೆ.
ನವದೆಹಲಿ: ಭಾರತೀಯ ವಾಯುಪಡೆಗೆ (IAF) ಸೇರಿದ ಅಪಾಚೆ ಹೆಲಿಕಾಪ್ಟರ್ (Apache Attack Helicopter) ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯ ನಂಗಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಲೆದ್ ಗ್ರಾಮದಲ್ಲಿ ತುರ್ತು ಭೂಸ್ಪರ್ಶ (Emergency Landing) ಮಾಡಿದೆ.
ವರದಿಗಳ ಪ್ರಕಾರ ಯಾವುದೇ ಗಾಯ ಅಥವಾ ಹಾನಿಯಾಗಿಲ್ಲ. ಪಠಾಣ್‌ಕೋಟ್ ವಾಯುನೆಲೆಯಿಂದ ಟೇಕಾಫ್ ಆದ ಹೆಲಿಕಾಪ್ಟರ್ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದ ನಂತರ ಮುನ್ನೆಚ್ಚರಿಕೆಯಾಗಿ ತೆರೆದ ಮೈದಾನದಲ್ಲಿ ಇಳಿದಿದೆ.
ಜೂನ್ 6 ರಂದು ಉತ್ತರ ಪ್ರದೇಶದ ಸಹರಾನ್‌ಪುರ ಬಳಿ ತರಬೇತಿ ಸಮಯದಲ್ಲಿ ಭಾರತೀಯ ವಾಯುಪಡೆಯ ಮತ್ತೊಂದು ಅಪಾಚೆ ಹೆಲಿಕಾಪ್ಟರ್ ಮುನ್ನೆಚ್ಚರಿಕೆಯಾಗಿ ಇಳಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ಇದಕ್ಕೂ ಮೊದಲು ಏಪ್ರಿಲ್ 3 ರಂದು ಲಡಾಖ್‌ನಲ್ಲಿ ಹಾರಾಟ ನಡೆಸುತ್ತಿದ್ದ ಅಪಾಚೆ ಹೆಲಿಕಾಪ್ಟರ್ ಕೂಡ ಖಾರ್ದುಂಗ್ಲಾ ಪಾಸ್ ಬಳಿ ಸುಮಾರು 12,000 ಅಡಿ ಎತ್ತರದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.
VIDEO | Pathankot, Punjab: An Apache helicopter of the Indian Air Force (IAF) made emergency landing in Nangalpur area. More details are awaited.
ಬೋಯಿಂಗ್ (Boeing) ತಯಾರಿಸಿದ ಹಲವಾರು ಅಪಾಚೆ ದಾಳಿ ಹೆಲಿಕಾಪ್ಟರ್‌ಗಳು ಸುರಕ್ಷತಾ ಕಳವಳಗಳನ್ನು ಹುಟ್ಟುಹಾಕಿದೆ. ಅಷ್ಟೇ ಅಲ್ಲದೇ ಸರಣಿ ಅಪಘಾತಗಳು ನಡೆದಿವೆ. ಕಳೆದ ವರ್ಷ ಅಮೆರಿಕ ಸೇನೆಯ 4 ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಪೈಲಟ್ ಮೃತಪಟ್ಟಿದ್ದರು. ಇದನ್ನೂ ಓದಿ: ವಿಮಾನ ದುರಂತ ಬೆನ್ನಲ್ಲೇ ಥೈಲ್ಯಾಂಡಲ್ಲಿ ಏರ್ ಇಂಡಿಯಾ ತುರ್ತು ಭೂಸ್ಪರ್ಶ
ಭಾರತದಲ್ಲಿ ವಾಯುಪಡೆಯು ಪ್ರಸ್ತುತ 22 ಅಪಾಚೆ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುತ್ತಿದೆ ಮತ್ತು ಸೇನೆಯು ಬೋಯಿಂಗ್‌ನಿಂದ ಹೆಚ್ಚುವರಿ 6 ಹೆಲಿಕಾಪ್ಟರ್ ಖರೀದಿಗೆ ಆದೇಶ ನೀಡಿದೆ.
2015ರಲ್ಲಿ ಭಾರತ ಸರ್ಕಾರ 13,952 ಕೋಟಿ ರೂ. ವೆಚ್ಚದಲ್ಲಿ ಅಪಾಚೆ ಹೆಲಿಕಾಪ್ಟರ್‌ಗಳ ಖರೀದಿಗೆ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. 2017ರಲ್ಲಿ ರಕ್ಷಣಾ ಇಲಾಖೆ 6 ಅಪಾಚೆ ಹೆಲಿಕಾಪ್ಟರ್‌ಗಳನ್ನು ಶಸ್ತ್ರಾಸ್ತ್ರ ಸಮೇತ ಖರೀದಿ ಮಾಡಲು 4,168 ಕೋಟಿಗೆ ಒಪ್ಪಂದವನ್ನು ಮಾಡಿಕೊಂಡಿತ್ತು. 2020ರ ಮಾರ್ಚ್ ವೇಳೆಗೆ ವಾಯುಪಡೆಗೆ 22 ಅಪಾಚೆ ಹೆಲಿಕಾಪ್ಟರ್‌ಗಳು ಸೇರ್ಪಡೆ ಆಗಿದ್ದವು.
ಭಾರತದ ವಾಯುಸೇನೆಯಲ್ಲಿ ದಾಳಿ ನಡೆಸಬಲ್ಲ ಹೆಲಿಕಾಪ್ಟರ್‌ಗಳಿವೆ. ಆದರೆ ಅವುಗಳು ಯಾವುದು ಅಪಾಚೆಯಷ್ಟು ಬಲಶಾಲಿಯಾಗಿಲ್ಲ. ರಾತ್ರಿ ಸೇರಿದಂತೆ ಪ್ರತಿಕೂಲ ಹವಾಮಾನದಲ್ಲಿಯೂ ಕೂಡ ಅಪಾಚೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಹೆಲಿಕಾಪ್ಟರ್‌ಗಳು ಸೇನೆಯಲ್ಲಿ ಭೂ ದಾಳಿಗಳನ್ನು ಎದುರಿಸುವ, ಭೂ ಸೇನೆಯ ಜೊತೆ ಹೊಂದಿಕೊಂಡು ಕೆಲಸ ಮಾಡಲು ಸಮರ್ಥವಾಗಿದೆ.
ಆಧುನಿಕ ಕ್ಯಾಮೆರಾ, ಡಾಟಾ ಉಪಕರಣಗಳು ವೈರಿಗಳ ಶಸ್ತ್ರಾಸ್ತ್ರಗಳ ಗುರುತು ಪತ್ತೆ, ವೈರಿಗಳ ಚಲನವಲನಗಳನ್ನು ಪತ್ತೆ ಹಚ್ಚೆ ಶೀಘ್ರವಾಗಿ ರವಾನಿಸುತ್ತವೆ. ಅಲ್ಲದೇ ಯುದ್ಧರಂಗದ ಚಿತ್ರಣವನ್ನು ಪ್ರಸಾರ ಮಾಡುವ ಮತ್ತು ಸ್ವೀಕರಿಸುವ ತಾಂತ್ರಿಕತೆ ಹೊಂದಿವೆ. ಅಲ್ಲದೇ ಸ್ಟಿಂಗರ್ ಏರ್ ಟು ಏರ್ ಕ್ಷಿಪಣಿಗಳು, ಗನ್‍ಗಳು ಮತ್ತು ರಾಕೆಟ್‍ಗಳನ್ನು ಹೊಂದಿವೆ. ವಿಶೇಷವಾಗಿ ಪರ್ವತ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಸಹಕಾರಿಯಾಗಿವೆ. ಇದನ್ನೂ ಓದಿ: ಕನಸಿನ ಮನೆಗೆ ಕಾಲಿಡುವ ಮೊದಲೇ ಸಾವಿನ ಮನೆ ಸೇರಿದ ನರ್ಸ್ ರಂಜಿತಾ
ಭಾರತ ಪೈಲಟ್‍ಗಳಿಗೆ ಅಮೆರಿಕದ ಸೇನಾ ನೆಲೆಯಲ್ಲಿ ತರಬೇತಿ ಸಿಕ್ಕಿತ್ತು. ವಿಶ್ವದ ಅತ್ಯಂತ ಸುಧಾರಿತ ಬಹುಕಾರ್ಯದ ಯುದ್ಧ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಯನ್ನ ಇದು ಪಡೆದಿರುವುದು ವಿಶೇಷ.
ಎಎಚ್-64ಇ ಅಪಾಚೆ ಹೆಲಿಕಾಪ್ಟರ್ ಗಳು ವಿಶ್ವದ ಅತ್ಯಾಧುನಿಕ ಬಹು ಪಾತ್ರದಲ್ಲಿ ಕಾರ್ಯನಿರ್ವಹಿಸುವ ಹೆಲಿಕಾಪ್ಟರ್ ಗಳಲ್ಲಿ ಒಂದಾಗಿದ್ದು, ಭಾರತೀಯ ವಾಯು ಸೇನೆ ಈ ಬಹು ಶತಕೋಟಿ ಡಾಲರ್ ಗುತ್ತಿಗೆಗೆ ಅಮೆರಿಕ ಸರ್ಕಾರ ಹಾಗೂ ಬೋಯಿಂಗ್ ಲಿ. ಜೊತೆಗೆ ಸೆಪ್ಟೆಂಬರ್ 2015ರಲ್ಲಿ 22 ಹೆಲಿಕಾಪ್ಟರ್ ಗಳಿಗೆ ಸಹಿ ಹಾಕಲಾಗಿತ್ತು.
– ಭಾರತ, ಅಮೆರಿಕ ಮಧ್ಯೆ 3 ಶತಕೋಟಿ ಡಾಲರ್ ಒಪ್ಪಂದ
– ಗ್ಯಾಸ್, ಔಷಧ, 5ಜಿ ಸ್ಪೆಕ್ಟ್ರಂ ಬಗ್ಗೆ ಚರ್ಚೆ
– ಔಷಧ, ವೈದ್ಯಕೀಯ ಉಪಕರಣಗಳ ಅಕ್ರಮ ಸರಬರಾಜಿಗೆ ತಡೆ
ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 2 ದಿನಗಳ ಭಾರತ ಪ್ರವಾಸವನ್ನು ಇಡೀ ಜಗತ್ತೇ ಕುತೂಹಲದಿಂದ ಕಾಯುತ್ತಿತ್ತು. ಟ್ರಂಪ್ ಪ್ರವಾಸದ ಭಾಗವಾಗಿ ಇಂದು ಮಹಾ ಮಾತುಕತೆಯೂ ನಡೆದಿದೆ. ಅಮೆರಿಕ ಹಾಗೂ ಭಾರತದ ಮಧ್ಯೆ ಭಾರೀ ಒಪ್ಪಂದ ನಡೆದಿದ್ದು, 21,625 ಕೋಟಿ ರೂ. ಒಪ್ಪಂದಕ್ಕೆ ಎರಡು ದೇಶಗಳು ಸಹಿ ಹಾಕಿವೆ.
ದೆಹಲಿಯ ಹೈದ್ರಾಬಾದ್ ಹೌಸ್‍ನಲ್ಲಿ ಇಂದು ಬೆಳಗ್ಗೆ ಒಂದೂವರೆ ತಾಸು ನಡೆದ ಮಾತುಕತೆಯಲ್ಲಿ ರಕ್ಷಣೆ, ಇಂಧನ ಹಾಗೂ ಔಷಧ ಕ್ಷೇತ್ರಕ್ಕೆ ಸಂಬಂಧಿಸಿದಂತೆ 3 ಪ್ರಮುಖ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಉಭಯ ದೇಶಗಳ ನಡುವಿನ ರಕ್ಷಣಾ ಒಪ್ಪಂದ ಬಲಪಡಿಸುವಿಕೆಯೇ ಇವತ್ತಿನ ಮಾತುಕತೆ ಪ್ರಮುಖ ಅಂಶವಾಗಿದೆ.
Yet another excellent meeting and talks with my friend @realDonaldTrump.
Relations between India and USA are not merely ties between two governments. Ours is a friendship that is people-driven and people centric.
ವಿಶ್ವದ ಅತ್ಯಾಧುನಿಕ ಎಂಹೆಚ್ 60 ಸೀಹಾಕ್ ರೋಮಿಯೋ ಹೆಲಿಕಾಪ್ಟರ್‌ನಿಂದ ನೌಕಾಪಡೆಗೆ ಆನೆಬಲ ಬಂದಂತಾಗಿದೆ. ಮಾತುಕತೆ ವೇಳೆ ಸಿಎಎ ಬಗ್ಗೆ ನೇರವಾಗಿ ಪ್ರಸ್ತಾಪವಾಗದಿದ್ದರೂ, ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆ ನಡೆದಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಭಾರತ ಕೈಗೊಂಡಿರುವ ಕ್ರಮಗಳನ್ನು ಟ್ರಂಪ್ ಪ್ರಶಂಸಿದ್ದಾರೆ. ಪಾಕಿಸ್ತಾನ ನೆಲದಿಂದ ಉಂಟಾಗುತ್ತಿರುವ ಇಸ್ಲಾಮಿಕ್ ಭಯೋತ್ಪಾದನೆಯನ್ನು ನಿಯಂತ್ರಿಸಲು ಉಭಯ ದೇಶಗಳು ಸಂಕಲ್ಪ ಮಾಡಿವೆ.
ಮೂರು ಒಪ್ಪಂದಗಳು:
ನೌಕಾಪಡೆಗೆ ಆನೆಬಲ ನೀಡಲಿರುವ ‘ಅಮೆರಿಕದ ರೋಮಿಯೋ’ ಭಾರತದ ಬತ್ತಳಿಕೆ ಸೇರಿದೆ. ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿರುವ ಸಬ್ ಮೆರೀನ್ ನಿರೋಧಕ ಹಾಗೂ ಬಹುವಿಧ ಕಾರ್ಯವೈಖರಿಯ ಎಂಹೆಚ್ 60 ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್‌ಗಳ ಸೇರ್ಪಡೆ ಭಾರತ ಇನ್ನಷ್ಟು ಬಲಿಷ್ಠವಾಗಿದೆ.
ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್
‘ರೋಮಿಯೋ’ ವೈಶಿಷ್ಟತೆ:
24 ಎಂಹೆಚ್ 60 ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್ ಖರೀದಿಸಲು ಒಪ್ಪಂದ ನಡೆದಿದೆ. ಈಗ ಲಭ್ಯವಿರುವ ನೌಕಾ ಹೆಲಿಕಾಪ್ಟರ್‌ಗಳಲ್ಲೇ ಇದು ಅತ್ಯಂತ ಆಧುನಿಕವಾಗಿರುವುದು ವಿಶೇಷ. ಭಾರತೀಯ ನೌಕಾಪಡೆಯಲ್ಲಿ ಈಗ ಇಂಗ್ಲೆಂಡಿನ ಹಳೆಯ ಮಾದರಿ ಹೆಲಿಕಾಪ್ಟರ್‌ಗಳಿವೆ. ಸೀಹಾಕ್ ಖರೀದಿ ಸಂಬಂಧ 2.6 ಬಿಲಿಯನ್ ಡಾಲರ್ (18,683 ಕೋಟಿ ರೂ.) ಮೊತ್ತದ ವ್ಯವಹಾರ ನಡೆದಿದ್ದು, ಸಾಗರದಾಳದ ಸಬ್ ಮೆರೀನ್‍ಗಳನ್ನು ಗುರುತಿಸಿ ಹೊಡೆದುರುಳಿಸುವ ಸಾಮರ್ಥ್ಯ ಈ ಹೆಲಿಕಾಪ್ಟರ್ ಗಳಿಗಿವೆ. ಸಮುದ್ರದಲ್ಲಿ ಶೋಧ, ರಕ್ಷಣಾ ಕಾರ್ಯಾಚರಣೆ ನಡೆಸಲಿರುವುದರಿಂದ ಭಾರತದ ಜಲ ಪ್ರದೇಶ ಇನ್ನಷ್ಟು ಬಲಿಷ್ಠವಾಗಲಿದೆ. ವಿಶೇಷವಾಗಿ ಚೀನಾ ಯುದ್ಧನೌಕೆಗಳ ಮೇಲೆ ಕಣ್ಗಾವಲು ಇಡಲಿದೆ. ಅಮೆರಿಕದ ಪ್ರತಿಷ್ಠಿತ ಶಸ್ತ್ರಾಸ್ತ್ರ ತಯಾರಿ ಮತ್ತು ಮಾರಾಟ ಸಂಸ್ಥೆ ಲಾಕ್ ಹೀಡ್ ಮಾರ್ಟಿನ್ ಈ ಹೆಲಿಕಾಪ್ಟರ್ ನಿರ್ಮಾಣ ಮಾಡುತ್ತಿದೆ.
ಅಪಾಚೆ ಹೆಲಿಕಾಪ್ಟರ್:
ನೌಕಾಪಡೆಯಂತೆ ಭಾರತೀಯ ವಾಯುಪಡೆಗೂ ಆನೆಬಲ ಬಂದಿದೆ. `ಹಾರುವ ಯುದ್ಧ ಟ್ಯಾಂಕ್‍ಗಳೆಂದೇ’ ಪ್ರಸಿದ್ಧಿ ಪಡೆದಿರುವ ಅಪಾಚೆ ಹೆಲಿಕಾಪ್ಟರ್‌ಗಳು ಖರೀದಿಗೆ ಒಪ್ಪಂದ ನಡೆಯಿತು. ಶತ್ರು ರಾಷ್ಟ್ರಗಳನ್ನು ನಡುಗಿಸುವ ಅಪಾಚೆ ಹೆಲಿಕಾಪ್ಟರ್ ಅನ್ನು ಅಮೆರಿಕದ ಖ್ಯಾತ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ನಿರ್ಮಾಣ ಮಾಡಿದೆ.
ಅಪಾಚೆ ಹೆಲಿಕಾಪ್ಟರ್
ಅಪಾಚೆ ವಿಶೇಷತೆಗಳು:
ಭಾರತದ ಮೊದಲ ಪೂರ್ಣ ಪ್ರಮಾಣದ ಅಟ್ಯಾಕ್ ಹೆಲಿಕಾಪ್ಟರ್ ಇದಾಗಿದ್ದು, 2015ರಲ್ಲಿ 1.4 ಶತಕೋಟಿ ಡಾಲರ್ ಮೊತ್ತದ 22 ಅಪಾಚೆ ಹೆಲಿಕಾಪ್ಟರ್‌ಗಳಿಗಾಗಿ ಒಪ್ಪಂದ ನಡೆದಿದೆ. ಈಗಾಗಲೇ ಭಾರತೀಯ ವಾಯುಸೇನೆಯಲ್ಲಿ 17 ಅಪಾಚೆ ಹೆಲಿಕಾಪ್ಟರ್‌ಗಳ ಬಳಕೆ ಆಗುತ್ತಿದ್ದು, ಇದೇ ಮಾರ್ಚ್ ನಲ್ಲಿ ಉಳಿದ 5 ಹೆಲಿಕಾಪ್ಟರ್‌ಗಳು ಭಾರತಕ್ಕೆ ರವಾನೆ ಆಗಲಿದೆ.
ಭೂ ಸೇನೆಗಾಗಿ 6 ಹೆಲಿಕಾಪ್ಟರ್‌ಗಳ ಖರೀದಿಗೆ 6,680 ಕೋಟಿ ರೂ. ಒಪ್ಪಂದ ನಡೆದಿದೆ. 30 ಎಂಎಂ ಚೈನ್‍ಗನ್, ಎಐಎಂ- 92 ಕ್ಷಿಪಣಿ, ಹೈಡ್ರಾ 70 ಎಂಎಂ ರಾಕೆಟ್, ಸ್ಟೈಕ್ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಈ ಹೆಲಿಕಾಪ್ಟರಿಗೆ ಇದೆ. ನಿಖರ, ನಿರ್ದಿಷ್ಟ ಸ್ಥಳದ ಮೇಲೆ ಕ್ಷಿಪಣಿ ದಾಳಿ ಮಾಡಬಹುದಾಗಿದೆ. ಬಿರುಗಾಳಿ, ಮಳೆ ಸೇರಿದಂತೆ ಯಾವುದೇ ಪರಿಸ್ಥಿತಿಗಳಲ್ಲಿ ಕಾರ್ಯಾಚರಣೆ ಮಾಡಬಲ್ಲದು. ಗುಡ್ಡಗಾಡು, ಕಿರಿದಾದ ಪ್ರದೇಶಗಳಲ್ಲೂ ಸುಲಭವಾಗಿ ಇಳಿಯಬಲ್ಲದು. ಯುದ್ಧಭೂಮಿಯಿಂದ ನಿಯಂತ್ರಣ ಭೂಮಿಗೆ ನೇರವಾಗಿ ಚಿತ್ರಗಳನ್ನು ಕಳುಹಿಸುವ ಸಾಮಥ್ರ್ಯ ಈ ಹೆಲಿಕಾಪ್ಟರ್‌ಗೆ ಇದೆ.
ದ್ರವೀಕೃತ ನೈಸರ್ಗಿಕ ಅನಿಲ ಖರೀದಿ
ಮೂರನೇ ಒಪ್ಪಂದ ಇದಾಗಿದ್ದು, ಅಮೆರಿಕದ ಎಕ್ಸಾನ್ ಮೊಬಿಲ್-ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಡುವೆ ಈ ಒಪ್ಪಂದ ನಡೆದಿದೆ. ಪೈಪ್‍ಲೈನ್, ರಸ್ತೆ, ರೈಲು ಮಾರ್ಗ, ಸಮುದ್ರ ಮಾರ್ಗಗಳಲ್ಲಿ ಕಂಟೈನರ್‍ಗಳ ಮೂಲಕ ದ್ರವೀಕೃತ ನೈಸರ್ಗಿಕ ಅನಿಲ(ಎಲ್‍ಎನ್‍ಜಿ) ಸರಬರಾಜು ಆಗಲಿದೆ. ಅಮೆರಿಕದಿಂದ ಅತೀ ಹೆಚ್ಚು ಇಂಧನ ಖರೀದಿ ಮಾಡುತ್ತಿರುವ 6ನೇ ದೇಶ ಭಾರತವಾಗಿದ್ದು 2018ರಲ್ಲಿ 609 ದಶಲಕ್ಷ ಡಾಲರ್ ಮೌಲ್ಯದ ಕಚ್ಚಾತೈಲವನ್ನು ಭಾರತ ಖರೀದಿಸಿದೆ. ಜಗತ್ತಿನಲ್ಲಿ ದ್ರವೀಕೃತ ನೈಸರ್ಗಿಕ ಅನಿಲ ಖರೀದಿಸುತ್ತಿರುವ ನಾಲ್ಕನೇ ಅತೀ ದೊಡ್ಡ ರಾಷ್ಟ್ರ ಭಾರತವಾಗಿದ್ದು, ಸುವರ್ಣ ಚತುಷ್ಪತ ರಸ್ತೆಯಲ್ಲಿ ಎಲ್‍ಎನ್‍ಜಿ ಕೇಂದ್ರ ಸ್ಥಾಪಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಡೀಸೆಲ್ ಬದಲು ಭವಿಷ್ಯದಲ್ಲಿ ಟ್ರಕ್ ವಾಹನಗಳು ಎಲ್‍ಎನ್‍ಜಿ ಬಳಸಲು ಸರ್ಕಾರ ಉತ್ತೇಜಿಸಲಿದ್ದು, ಇಂಧನ ಬಳಕೆಯಲ್ಲಿ ಎಲ್‍ಎನ್‍ಜಿ ಪಾಲು 10 ವರ್ಷಗಳಲ್ಲಿ ಈಗಿರುವ ಶೇ.6.2ರಿಂದ ಶೇ 15 ಹೆಚ್ಚಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. -168 ಡಿಗ್ರಿ ಸೆಲ್ಸಿಯಸ್‍ನಲ್ಲಿ ದ್ರವೀಕೃತ ನೈಸರ್ಗಿಕ ಅನಿಲವನ್ನ ಪೂರೈಸಲಾಗುತ್ತದೆ.
On trade, our Commerce Ministers had constructive interactions. @POTUS and I agreed to give a legal shape to the understanding between our Ministers so far.
It is the view of both nations to begin negotiations for a trade deal that will be mutually beneficial. pic.twitter.com/MV25IxHNrN
ಬೇರೆ ಏನು ಒಪ್ಪಂದ ನಡೆದಿದೆ?
ಮೇಲೆ ತಿಳಿಸಿದ ಮೂರು ಒಪ್ಪಂದಗಳ ಜೊತೆಗೆ ಹಲವು ವಿಷಯಗಳೂ ಚರ್ಚೆ ಆಗಿವೆ. ಭಾರತ-ಅಮೆರಿಕ ನಡುವೆ ಔಷಧ ಸಹಕಾರ ಒಪ್ಪಂದ ನಡೆದಿದೆ. ಈ ಮೂಲಕ ಭಾರತದಿಂದ ಅಕ್ರಮವಾಗಿ ಔಷಧ, ವೈದ್ಯಕೀಯ ಉಪಕರಣಗಳ ಸರಬರಾಜು ತಡೆಗೆ ಉಭಯ ದೇಶಗಳು ಸಹಿ ಹಾಕಿವೆ. ಅಮೆರಿಕ ಆಹಾರ ಮತ್ತು ಔಷಧ ಆಡಳಿತ ಹಾಗೂ ಭಾರತದ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಜೊತೆ ಒಡಂಬಡಿಕೆ ನಡೆದಿದೆ.
ಬೇರೊಂದು ರಾಷ್ಟ್ರದ ಮೂಲಕ ಅಕ್ರಮವಾಗಿ ಭಾರತದಿಂದ ಅಮೆರಿಕಕ್ಕೆ ಔಷಧ, ವೈದ್ಯಕೀಯ ಉಪಕರಣಗಳ ಪೂರೈಕೆ ಆಗುತ್ತಿದೆ. 2019ರಲ್ಲಿ ಈ ರೀತಿಯ 50 ಬಗೆಯ ಔಷಧಗಳು, ಉಪಕರಣಗಳ ಅಕ್ರಮ ಸಾಗಾಟ ನಡೆದಿದೆ. ಹೆಚ್‍ಐವಿ, ಕ್ಯಾನ್ಸರ್ ಮುಂತಾದ ರೋಗಗಳಿಗೆ ಅಮೆರಿಕ ನಿಗದಿಪಡಿಸಿದ ಗುಣಮಟ್ಟಕ್ಕಿಂತ ಕಡಿಮೆ ಗುಣಮಟ್ಟದ ಔಷಧ, ವೈದ್ಯಕೀಯ ಉಪಕರಣಗಳ ಮಾರಾಟ ನಡೆದಿದೆ.
5ಜಿ ಚರ್ಚೆ:
5ಜಿ ತರಂಗಾಂತರದ ಬಗ್ಗೆಯೂ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ ಚರ್ಚೆ ನಡೆಸಿದ್ದಾರೆ. ಭಾರತದಲ್ಲಿ 5ಜಿ ತರಂಗಾಂತರ ಹರಾಜು ಪ್ರಕ್ರಿಯೆ ಬಾಕಿ ಇದ್ದು ಚೀನಾ ಮೂಲದ ಹುವಾವೇ ಕಂಪನಿಗೆ ಉಪಕರಣಗಳ ಬಳಕೆ ಅನುಮತಿ ನೀಡಲಾಗಿದೆ. ವಿಶ್ವದಲ್ಲಿ ಅತೀ ಹೆಚ್ಚು 5ಜಿ ಉಪಕರಣಗಳನ್ನು ಉತ್ಪಾದಿಸುತ್ತಿರುವ ಹುವವೇ ಒಟ್ಟು 60 ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ಸುರಕ್ಷತೆಯ ದೃಷ್ಟಿಯಿಂದ ಅಮೆರಿಕದಲ್ಲಿ ಹುವಾವೇ ಕಂಪನಿಗೆ ಟ್ರಂಪ್ ಸರ್ಕಾರ ನಿಷೇಧ ಹೇರಿದೆ. ಹೀಗಾಗಿ ಭಾರತ ಸರ್ಕಾರ ಹುವಾವೇ ಕಂಪನಿಯನ್ನು 5ಜಿ ವ್ಯವಹಾರ ನಿಷೇಧಿಸಬೇಕೆಂದು ಟ್ರಂಪ್ ಪ್ರಸ್ತಾಪ ಮಾಡಿದ್ದಾರೆ ಎಂದು ವರದಿಯಾಗಿದೆ.
ಪಠಾಣ್ಕೋಟ್: ಅಮೆರಿಕದ ಬೋಯಿಂಗ್ ಕಂಪನಿ ನಿರ್ಮಿಸಿದ ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಸೇನೆಗೆ ಸೇರ್ಪಡೆಯಾಗಿವೆ.
ಪಂಜಾಬಿನ ಪಠಾಣ್‍ಕೋಟ್ ವಾಯುನೆಲೆಯಲ್ಲಿ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಉಪಸ್ಥಿತಿಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ 8 ಅಪಾಚೆ ಎಚ್-64ಇ ಹೆಲಿಕಾಪ್ಟರ್‌ಗಳು ವಾಯುಸೇನೆಗೆ ಸೇರ್ಪಡೆಗೊಂಡಿತು.
ವಾಯು ಸೇನೆ ಮುಖ್ಯಸ್ಥ ಧನೋವಾ ಮಾತನಾಡಿ, ಭಾರತದ ಬೇಡಿಕೆಗೆ ಅನುಗುಣವಾಗಿ ಅಪಾಚೆ ಹೆಲಿಕಾಪ್ಟರ್ ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ನಿಗದಿತ ಸಮಯದ ಒಳಗಡೆಯೇ ಅಪಾಚೆ ಹೆಲಿಕಾಪ್ಟರ್‌ಗಳು ಸೇರ್ಪಡೆಯಾಗಿರುವುದು ನಮಗೆ ಸಂತೋಷ ತಂದಿದೆ ಎಂದು ತಿಳಿಸಿದರು.
2015ರಲ್ಲಿ ಭಾರತ ಸರ್ಕಾರ 13,952 ಕೋಟಿ ರೂ. ವೆಚ್ಚದಲ್ಲಿ ಅಪಾಚೆ ಹೆಲಿಕಾಪ್ಟರ್‌ಗಳ ಖರೀದಿಗೆ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. 2017ರಲ್ಲಿ ರಕ್ಷಣಾ ಇಲಾಖೆ 6 ಅಪಾಚೆ ಹೆಲಿಕಾಪ್ಟರ್‌ಗಳನ್ನು ಶಸ್ತ್ರಾಸ್ತ್ರ ಸಮೇತ ಖರೀದಿ ಮಾಡಲು 4,168 ಕೋಟಿಗೆ ಒಪ್ಪಂದವನ್ನು ಮಾಡಿಕೊಂಡಿತ್ತು. 2020ರ ಮಾರ್ಚ್ ವೇಳೆಗೆ ವಾಯುಪಡೆಗೆ 22 ಅಪಾಚೆ ಹೆಲಿಕಾಪ್ಟರ್‌ಗಳು ಸೇರ್ಪಡೆ ಆಗಲಿದೆ.
22ರ ಪೈಕಿ ಮೊದಲ 4 ಹೆಲಿಕಾಪ್ಟರ್‌ಗಳು ಜುಲೈನಲ್ಲಿ ಉತ್ತರ ಪ್ರದೇಶದಲ್ಲಿರುವ ಹಿಂಡನ್ ವಾಯುನೆಲೆಗೆ ಸೇರ್ಪಡೆಯಾಗಿತ್ತು. ಈ ಮೂಲಕ ಅಪಾಚೆ ಹೆಲಿಕಾಪ್ಟರ್ ಖರೀದಿಸಿದ 14ನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.
ಭಾರತದ ವಾಯುಸೇನೆಯಲ್ಲಿ ದಾಳಿ ನಡೆಸಬಲ್ಲ ಹೆಲಿಕಾಪ್ಟರ್‌ಗಳಿವೆ. ಆದರೆ ಅವುಗಳು ಯಾವುದು ಎಚ್- 64ರಷ್ಟು ಬಲಶಾಲಿಯಾಗಿಲ್ಲ. ರಾತ್ರಿ ಸೇರಿದಂತೆ ಪ್ರತಿಕೂಲ ಹವಾಮಾನದಲ್ಲಿಯೂ ಕೂಡ ಅಪಾಚೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಹೆಲಿಕಾಪ್ಟರ್‌ಗಳು ಸೇನೆಯಲ್ಲಿ ಭೂ ದಾಳಿಗಳನ್ನು ಎದುರಿಸುವ, ಭೂ ಸೇನೆಯ ಜೊತೆ ಹೊಂದಿಕೊಂಡು ಕೆಲಸ ಮಾಡಲು ಸಮರ್ಥವಾಗಿದೆ.
ಆಧುನಿಕ ಕ್ಯಾಮೆರಾ, ಡಾಟಾ ಉಪಕರಣಗಳು ವೈರಿಗಳ ಶಸ್ತ್ರಾಸ್ತ್ರಗಳ ಗುರುತು ಪತ್ತೆ, ವೈರಿಗಳ ಚಲನವಲನಗಳನ್ನು ಪತ್ತೆ ಹಚ್ಚೆ ಶೀಘ್ರವಾಗಿ ರವಾನಿಸುತ್ತವೆ. ಅಲ್ಲದೇ ಯುದ್ಧರಂಗದ ಚಿತ್ರಣವನ್ನು ಪ್ರಸಾರ ಮಾಡುವ ಮತ್ತು ಸ್ವೀಕರಿಸುವ ತಾಂತ್ರಿಕತೆ ಹೊಂದಿವೆ. ಅಲ್ಲದೇ ಸ್ಟಿಂಗರ್ ಏರ್ ಟು ಏರ್ ಕ್ಷಿಪಣಿಗಳು, ಗನ್‍ಗಳು ಮತ್ತು ರಾಕೆಟ್‍ಗಳನ್ನು ಹೊಂದಿವೆ. ವಿಶೇಷವಾಗಿ ಪರ್ವತ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಸಹಕಾರಿಯಾಗಿವೆ.
ಅಮೆರಿಕ ಈಗಾಗಲೇ ಈ ಹೆಲಿಕಾಪ್ಟರ್‌ಗಳನ್ನು ತನ್ನ ಸೇನೆಗೆ ಸೇರ್ಪಡೆ ಮಾಡಿಕೊಂಡಿದ್ದು, ಭಾರತ ಪೈಲಟ್‍ಗಳಿಗೂ ಅಮೆರಿಕದ ಸೇನಾ ನೆಲೆಯಲ್ಲಿ ತರಬೇತಿ ಸಿಕ್ಕಿದೆ. ವಿಶ್ವದ ಅತ್ಯಂತ ಸುಧಾರಿತ ಬಹುಕಾರ್ಯದ ಯುದ್ಧ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಯನ್ನ ಇದು ಪಡೆದಿರುವುದು ವಿಶೇಷ.
ಎಎಚ್-64ಇ ಅಪಾಚೆ ಹೆಲಿಕಾಪ್ಟರ್ ಗಳು ವಿಶ್ವದ ಅತ್ಯಾಧುನಿಕ ಬಹು ಪಾತ್ರದಲ್ಲಿ ಕಾರ್ಯನಿರ್ವಹಿಸುವ ಹೆಲಿಕಾಪ್ಟರ್ ಗಳಲ್ಲಿ ಒಂದಾಗಿದ್ದು, ಭಾರತೀಯ ವಾಯು ಸೇನೆ ಈ ಬಹು ಶತಕೋಟಿ ಡಾಲರ್ ಗುತ್ತಿಗೆಗೆ ಅಮೆರಿಕ ಸರ್ಕಾರ ಹಾಗೂ ಬೋಯಿಂಗ್ ಲಿ. ಜೊತೆಗೆ ಸೆಪ್ಟೆಂಬರ್ 2015ರಲ್ಲಿ 22 ಹೆಲಿಕಾಪ್ಟರ್ ಗಳಿಗೆ ಸಹಿ ಹಾಕಲಾಗಿತ್ತು.
ಬೋಯಿಂಗ್ ಸಂಸ್ಥೆಯು ಈವರೆಗೆ 2,200 ಅಪಾಚೆ ಹೆಲಿಕಾಪ್ಟರ್ ಗಳನ್ನು ವಿವಿಧ ದೇಶಗಳಿಗೆ ಹಸ್ತಾಂತರಿಸಿದೆ. ಜುಲೈ 2018ರಂದು ಭಾರತೀಯ ವಾಯು ಸೇನೆಗಾಗಿ ಮೊದಲ ಅಪಾಚೆ ಹೆಲಿಕಾಪ್ಟರ್ ನ್ನು ಪೂರ್ಣಗೊಳಿಸಿತ್ತು. 2018ರಲ್ಲಿ ಅಮೆರಿಕದಲ್ಲಿ ಅಪಾಚೆ ಹಾರಾಟ ಸಂಬಂಧ ಭಾರತೀಯ ವಾಯುಪಡೆಯ ಮೊದಲ ಬ್ಯಾಚಿನ ತರಬೇತಿ ಆರಂಭಗೊಂಡಿತ್ತು.