Tag: ಅಪಹರಣ

  • ಮದುವೆ ಆಗುವಂತೆ ಒತ್ತಾಯಿಸಿ ನಾದಿನಿಯನ್ನು ಕಿಡ್ನಾಪ್ ಮಾಡಿದ ಬಾವ!

    ಮದುವೆ ಆಗುವಂತೆ ಒತ್ತಾಯಿಸಿ ನಾದಿನಿಯನ್ನು ಕಿಡ್ನಾಪ್ ಮಾಡಿದ ಬಾವ!

    ಬೆಂಗಳೂರು: ಮದುವೆ ಆಗುವಂತೆ ಒತ್ತಾಯಿಸಿದ್ದ ಬಾವನಿಂದಲೇ ನಾದಿನಿ ಅಪಹರಣವಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

    ದೇವರಾಜ್, ನವೀನ್, ಕುಮಾರ್ ಬಂಧಿತ ಆರೋಪಿಗಳು. ಬೆಂಗಳೂರಿನ ಕೊಡುಗೆಹಳ್ಳಿಯಲ್ಲಿ ಈ ಘಟನೆ ನಡೆದಿದೆ. ದೇವರಾಜ್ ಅಪಹರಿಸಿದ ಮಹಿಳೆಯ ಅಕ್ಕನನ್ನು ಮದುವೆಯಾಗಿದ್ದ. ನಂತರ ತಂಗಿಯನ್ನು ಪ್ರೀತಿಸಿ ಮದುವೆ ಆಗುವಂತೆ ಒತ್ತಾಯಿಸಿದ್ದ. ಆದರೆ ನಾದಿನಿಯು ಬಾವನ ಪ್ರೀತಿಯನ್ನು ನಿರಾಕರಿಸಿದ್ದಳು.

    POLICE JEEP

    ಇದರಿಂದ ಕುಪಿತಗೊಂಡ ದೇವರಾಜ್ ಯುವತಿಯನ್ನು ಅಪಹರಿಸಿ ಬಲವಂತವಾಗಿ ಮದುವೆಯಾಗಲು ಯತ್ನಿಸಿದ್ದಾನೆ. ಈ ಬಗ್ಗೆ ಕೊಡಿಗೇಹಳ್ಳಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಘಟನೆ ಕುರಿತು ಪ್ರಕರಣವನ್ನು ಕೈಗೆತ್ತುಕೊಂಡ ಪೊಲೀಸರು ಯುವತಿಯನ್ನು ರಕ್ಷಣೆ ಮಾಡಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

  • ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ

    ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ

    ನವದೆಹಲಿ: ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಹುಡುಗನನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‍ಎ) ಅಪಹರಿಸಿದ ಘಟನೆಯ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿ ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಗಣರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಇದಕ್ಕೂ ಮೊದಲೇ ಭಾರತದ ಹುಡುಗನನ್ನು ಚೀನಾ ಅಪಹರಿಸಿದೆ. ನಾವು ಮಿರಾಮ್ ಟ್ಯಾರೋನ್ ಅವರ ಕುಟುಂಬದೊಂದಿಗೆ ನಿಲ್ಲುತ್ತೇವೆ ಹಾಗೂ ಅವರ ಭರವಸೆಯನ್ನು ಹುಸಿಗೊಳಿಸುವುದಿಲ್ಲ. ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದರು.

    ಪ್ರಧಾನಿ ಮೋದಿಯವರ ಮೌನವೇ ಅವರ ಹೇಳಿಕೆಯಾಗಿದೆ. ಇದಕ್ಕೆಲ್ಲಾ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

    ಘಟನೆಯೇನು?: ಅರುಣಾಚಲ ಪ್ರದೇಶದಲ್ಲಿ ತ್ಸಾಂಗ್ಪೋ ನದಿಯು ಭಾರತವನ್ನು ಪ್ರವೇಶಿಸುವ ಸಮೀಪದಲ್ಲಿ ಜೀಡೋ ಗ್ರಾಮದ ಮಿರಾಮ್ ಟ್ಯಾರೋನ್ (17) ಹಾಗೂ ಆತನ ಸ್ನೇಹಿತ ಜಾನಿ ಯಾಯಿಂಗ್ ಬೇಟೆಗಾಗಿ ತೆರಳಿದ್ದರು. ಅಲ್ಲಿ ಮಿರಾಮ್ ಅವರನ್ನು ಪಿಎಲ್‍ಎ ಅಧಿಕಾರಿಗಳನ್ನು ಅಪಹರಿಸಿದ್ದರು. ಅವನ ಜೊತೆಯಿದ್ದ ಸ್ನೇಹಿತ ಜಾನಿ ಯಾಯಿಂಗ್ ಪಿಎಲ್‍ಎ ಅಧಿಕಾರಿಗಳಿಂದ ತಪ್ಪಿಸಿಕೊಂಡು ಬಂದಿದ್ದಾನೆ. ನಂತರ ವಿರಾಮನ್ ಟ್ಯೂರೋನ್‍ನ ಅಪಹರಣದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ.  ಓದಿ: ಲಡಾಖ್‌ನಲ್ಲಿ ಚೀನಾದಿಂದ ಪ್ಯಾಂಗ್ಯಾಂಗ್‌ ಸೇತುವೆ ನಿರ್ಮಾಣ – ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

    ಘಟನೆ ಕುರಿತು ನಿನ್ನೆ ರಾಜ್ಯ ಸಂಸದ ತಪಿರ್ ಗಾವೊ ಟ್ವೀಟ್ ಮಾಡಿ, ಭಾರತ ಸರ್ಕಾರದ ಎಲ್ಲಾ ಏಜೆನ್ಸಿಗಳು ಮಿರಾಮ್ ಟ್ಯಾರೋನ್‍ನನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮ ವಹಿಸುವಂತೆ ಮನವಿ ಮಾಡಿದ್ದರು. ತ್ಸಾಂಗ್ಪೋ ನದಿಯನ್ನು ಅರುಣಾಚಲ ಪ್ರದೇಶದಲ್ಲಿ ಸಿಯಾಂಗ್ ಮತ್ತು ಅಸ್ಸಾಂನಲ್ಲಿ ಬ್ರಹ್ಮಪುತ್ರ ಎಂದು ಕರೆಯುತ್ತಾರೆ. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಚನ್ನಿ ಅಪ್ರಾಮಾಣಿಕ ವ್ಯಕ್ತಿ: ಅರವಿಂದ್ ಕೇಜ್ರಿವಾಲ್

  • 33 ವರ್ಷದ ನಂತರ ಹುಟ್ಟೂರಿನ ನಕ್ಷೆ ಬಿಡಿಸಿ ತಾಯಿ ಮಡಿಲು ಸೇರಿದ ಮಗ!

    33 ವರ್ಷದ ನಂತರ ಹುಟ್ಟೂರಿನ ನಕ್ಷೆ ಬಿಡಿಸಿ ತಾಯಿ ಮಡಿಲು ಸೇರಿದ ಮಗ!

    ಬೀಜಿಂಗ್: 33 ವರ್ಷಗಳ ನಂತರ ತನ್ನ ನೆನಪಿನ ಶಕ್ತಿಯಿಂದ ಹುಟ್ಟೂರಿನ ನಕ್ಷೆಯನ್ನು ಬಿಡಿಸಿ ಮತ್ತೆ ತನ್ನ ತಾಯಿಯ ಮಡಿಲನ್ನು ಮಗ ಸೇರಿದ ಭಾವನಾತ್ಮಕ ಘಟನೆ ಚೀನಾದಲ್ಲಿ ನಡೆದಿದೆ.

    ಚೀನಾದ ಹಳ್ಳಿಯಿಂದ ಅಪಹರಣಕ್ಕೊಳಗಾದ ಲಿ ಜಿಂಗ್‍ವೀ, 33 ವರ್ಷಗಳ ನಂತರ ತನ್ನ ನೆನಪಿನ ಶಕ್ತಿಯಿಂದ ನಕ್ಷೆಯನ್ನು ಬಿಡಿಸಿದ್ದಾರೆ. ಅದು ಅಲ್ಲದೇ ಇವರಿಗೆ ಪೊಲೀಸರು ಸಹಾಯ ಮಾಡಿದ್ದು, ನಕ್ಷೆಯ ಸಹಾಯದಿಂದ 33 ವರ್ಷದ ನಂತರ ತನ್ನ ತಾಯಿಯನ್ನು ಮತ್ತೆ ಸೇರಿದ್ದಾರೆ. ಇದನ್ನೂ ಓದಿ: ಸಣ್ಣ ವಯಸ್ಸಿನಿಂದಲೇ ಸೇವಾ ಮನೋಭಾವವನ್ನು ಬೆಳೆಸಬೇಕು: ಎಂ.ವೆಂಕಯ್ಯ ನಾಯ್ಡು

    ಪ್ರಸ್ತುತ ಲಿ ಜಿಂಗ್‍ವೀ ಬಿಡಿಸಿದ್ದ ತನ್ನ ಹಳ್ಳಿಯ ನಕ್ಷೆ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಈಗ ಅದು ಸಖತ್ ವೈರಲ್ ಆಗುತ್ತಿದೆ.

    ಏನಿದು ಘಟನೆ?
    1989ರಲ್ಲಿ ನೈರುತ್ಯ ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿ ಮಕ್ಕಳನ್ನು ಅಪಹರಿಸಿದಾಗ ಆ ಕಳ್ಳಸಾಗಣೆಯಲ್ಲಿ ಲಿ ಜಿಂಗ್‍ವೀ ಸಹ ಇದ್ದರು. ಆಗ ಅವರಿಗೆ ಕೇವಲ ನಾಲ್ಕು ವರ್ಷ. ಈಗ ಅವರಿಗೆ 37 ವರ್ಷವಾಗಿದೆ. ಆದರೂ, ತನ್ನ ಹಳ್ಳಿಯನ್ನು ಇನ್ನೂ ನೆನಪಿಟ್ಟುಕೊಂಡಿದ್ದಾರೆ. ಅದು ಅಲ್ಲದೇ ತನ್ನ ಹುಟ್ಟೂರಿನ ನಕ್ಷೆಯನ್ನು ಬರೆದು ಅದನ್ನು ಬಳಸಿಕೊಂಡು ತನ್ನ ಸ್ವತ ಕುಟುಂಬವನ್ನು ಸೇರಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಲಿ ಜಿಂಗ್‍ವೀ, ನನ್ನನ್ನು ಆಟಿಕೆ ತೋರಿಸಿ ಕಳ್ಳರು ಅಪಹರಿಸಿದರು. ನಂತರ ಇಲ್ಲಿಂದ 1,000 ಮೈಲುಗಳಷ್ಟು ದೂರದಲ್ಲಿದ್ದ ಇನ್ನೊಂದು ಕುಟುಂಬಕ್ಕೆ ಮಾರಿದರು. ಆದರೆ ಪ್ರತಿದಿನ ನಾನು ನನ್ನ ಮನೆಯನ್ನು ನೆನಪಿಸಿಕೊಳ್ಳುತ್ತಿದ್ದೆ. ನನ್ನ ಊರನ್ನು ನೋಡಬೇಕು ಎಂದು ಪ್ರತಿಬಾರಿಯೂ ಆಲೋಚಿಸುತ್ತಿದೆ. ನಂತರ ತುಂಬಾ ಆಲೋಚಿಸಿ ಈ ನಕ್ಷೆಯನ್ನು ಬಿಡಿಸಿದೆ ಎಂದು ವಿವರಿಸಿದರು.

    ಡಿಸೆಂಬರ್‌ನಲ್ಲಿ, ಲಿ ಜಿಂಗ್‍ವೀ ಅವರು ತಾವು ಬಿಡಿಸಿದ ನಕ್ಷೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದರು. ಲಿ ಜಿಂಗ್‍ವೀ ಅವರು ಆ ವೇಳೆ ಅಪಹರಣಕ್ಕೊಳಗಾದ ಮಕ್ಕಳ ಬಗ್ಗೆ ವಿಚಾರಿಸಿದರು. ಅವರನ್ನು ತನ್ನ ಕುಟುಂಬ ಹುಡುಕುವಂತೆ ಸಹಾಯಕ್ಕಾಗಿ ಮನವಿ ಮಾಡಿದರು.

    ಈ ವೇಳೆ ಲಿ ಜಿಂಗ್‍ವೀ ಅವರ ಸಹಾಯಕ್ಕೆ ಪೊಲೀಸರು ಬಂದಿದ್ದು, ತನಿಖೆಯನ್ನು ಪ್ರಾರಂಭಿಸಿದರು. ಅಂತಿಮ ಫಲವೆಂಬಂತೆ ಅವರಿಗೆ ತನ್ನ ಊರು ಮತ್ತು ತಾಯಿ ಸಿಕ್ಕಿದ್ದಾರೆ. ಈ ಭಾವನಾತ್ಮಕ ದೃಶ್ಯವನ್ನ ಸೆರೆಹಿಡಿಯಲಾಗಿದ್ದು, ಈ ವೀಡಿಯೋದಲ್ಲಿ ತಾಯಿಯನ್ನು ನೋಡಿದ ಲಿ ಜಿಂಗ್‍ವೀ ಅಳುತ್ತ ನೆಲಕ್ಕೆ ಬಿಳುತ್ತಾರೆ. ನಂತರ ಆತನ ತಾಯಿ ಕೊನೆಗೂ ನನ್ನ ಮಗನನ್ನು ನಾನು ನೋಡಿದೆ ಎಂದು ದುಃಖಿತರಾಗಿದ್ದಾರೆ. ಇದನ್ನೂ ಓದಿ: ಗಂಗಾಕಲ್ಯಾಣ ಯೋಜನೆಯಲ್ಲಿ ಸಾವಿರಾರು ಕೋಟಿ ಅಕ್ರಮ

    ಪ್ರಸ್ತುತ ಲಿ ಜಿಂಗ್‍ವೀ ಅವರು ಮದುವೆಯಾಗಿದ್ದು, ಮಕ್ಕಳನ್ನು ಹೊಂದಿದ್ದಾರೆ. ಈಗ ಆ ಮಕ್ಕಳಿಗೆ ಇವರು ನಕ್ಷೆಯಲ್ಲಿ ತನ್ನ ಹುಟ್ಟೂರು ಹಿಂದೆ ಹೇಗಿತ್ತು ಎಂದು ತೋರಿಸಿದರು. ತನ್ನನ್ನು ಖರೀದಿಸಿದ ಕುಟುಂಬದ ವಿರುದ್ಧ ಕ್ರಮ ತೆಗದುಕೊಳ್ಳಲು ಹಿಂದೇಟು ಹಾಕಿದ ಅವರು, ಅವರು ನನಗೆ ಜೀವನ ಮೌಲ್ಯವನ್ನು, ಮನುಷ್ಯತ್ವವನ್ನು ಕಲಿಸಿದ್ದಾರೆ ಎಂದು ಹೇಳಿದ್ದಾರೆ.

    ಚೀನಾದಲ್ಲಿ ಕಳ್ಳಸಾಗಣೆ ಮತ್ತು ಮಕ್ಕಳ ಅಪಹರಣವು ಗಂಭೀರ ಸಮಸ್ಯೆಯಾಗಿದ್ದು, ಹಿಂದೆ ಪ್ರತಿ ಕುಟುಂಬಕ್ಕೆ ಮಕ್ಕಳ ಸಂಖ್ಯೆಯ ಮೇಲೆ ಮಿತಿಯನ್ನು ಹೇರಲಾಗಿತ್ತು. ಅದು ಅಲ್ಲದೇ ಹುಡುಗರಿಗೆ ಸಾಂಪ್ರದಾಯಿಕವಾಗಿ ಆದ್ಯತೆ ಹೆಚ್ಚಿತ್ತು. ಈ ಕಾರಣಕ್ಕೆ ಮಕ್ಕಳ ವ್ಯಾಪಾರ ಹೆಚ್ಚಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

  • 7 ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆಯನ್ನೇ ಕಿಡ್ನಾಪ್‍ಗೈದ್ರು

    7 ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆಯನ್ನೇ ಕಿಡ್ನಾಪ್‍ಗೈದ್ರು

    ಹಾವೇರಿ: ಏಳು ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆಯನ್ನು ಕಿಡ್ನಾಪ್ ಆದ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದಿದೆ.

    ದೇವಕ್ಕ ದುಂಡಣ್ಣನವರ ಅಪಹರಣಗೊಂಡ ವೃದ್ಧೆ. ಈಗ ವೃದ್ಧೆಯ ಸಂಬಂಧಿಕರಾಗಿರುವ ಸಂತೋಷ, ಈರಪ್ಪ, ಆದಪ್ಪ, ಪ್ರಕಾಶ ಮತ್ತು ಮಂಜಪ್ಪ ಎಂಬುವರ ವಿರುದ್ಧ ಕಿಡ್ನಾಪ್ ಮಾಡಿರುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಶ್ರೀನಿವಾಸ್ ಪೂಜಾರಿ ಒಂದು ರೂಪಾಯಿ ಖರ್ಚು ಮಾಡದೇ ಗೆದ್ದಿದ್ದಾರೆ: ಬಿ.ಎಲ್.ಸಂತೋಷ್

    ಸಂತಾನ ಇಲ್ಲದ್ದರಿಂದ ತನ್ನ ಜಮೀನನ್ನು ಮಾಣಿಕಪ್ಪ ದುಂಡಣ್ಣನವರ ಎಂಬುವರಿಗೆ ದೇವಕ್ಕ ಬರೆದು ಕೊಟ್ಟಿದ್ದರು. ದೇವಕ್ಕ ಅವರನ್ನು ಆರೈಕೆ ಮಾಡುತ್ತಿದ್ದ ಮಾಣಿಕಪ್ಪ ಕಳೆದ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಮಾಣಿಕಪ್ಪ ಮೃತಪಟ್ಟಿದ್ದರೂ ಅವರ ಕುಟುಂಬಸ್ಥರು ಹಲವು ವರ್ಷಗಳಿಂದ ದೇವಕ್ಕ ಅವರನ್ನು ನೋಡಿಕೊಳ್ಳುತ್ತಿದ್ದರು. ಇದನ್ನೂ ಓದಿ: ಸಂಡೂರು ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಪಟ್ಟು – ಸದನದ ಬಾವಿಗಿಳಿದು ಧರಣಿ

    ಮಾಣಿಕಪ್ಪನ ಮನೆಯವರು ಜಮೀನಿಗೆ ಹೋಗಿದ್ದ ವೇಳೆ ವೃದ್ಧೆಯನ್ನ ಆರೋಪಿಗಳು ಹುಡುಕಾಡಿ ಹೊತ್ತುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆಡೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ವೃದ್ಧೆಯ ಐವರು ಸಂಬಂಧಿಕರ ವಿರುದ್ಧ ಕೇಸ್ ದಾಖಲಾಗಿದೆ.

  • ಹಿಗ್ಗಾಮುಗ್ಗ ಥಳಿಸಿ ಕಾರೊಳಗೆ ತುಂಬಿಕೊಂಡು ಮಹಿಳೆಯರಿಂದ್ಲೇ ಗೃಹಿಣಿ ಅಪಹರಣ!

    ಹಿಗ್ಗಾಮುಗ್ಗ ಥಳಿಸಿ ಕಾರೊಳಗೆ ತುಂಬಿಕೊಂಡು ಮಹಿಳೆಯರಿಂದ್ಲೇ ಗೃಹಿಣಿ ಅಪಹರಣ!

    ಕೋಲಾರ: ಕುಟುಂಬ ಕಲಹ ಹಿನ್ನೆಲೆಯಲ್ಲಿ ಮಹಿಳೆಯನ್ನು ಹಿಗ್ಗಾಮುಗ್ಗ ಥಳಿಸಿ ಕಾರಿನಲ್ಲಿ ಅಪಹರಣ ಆರೋಪ ಇದೀಗ ಕೇಳಿ ಬಂದಿದೆ. ಕೋಲಾರ ತಾಲೂಕಿನ ಸೋಮಸಂದ್ರ ಗ್ರಾಮದಲ್ಲಿ ಕಳೆದ ರಾತ್ರಿ ಸುಮಾರು 5 ಜನ ಮಹಿಳೆಯರ ತಂಡ ಮಹಿಳೆಯೋರ್ವಳನ್ನ ಹಿಗ್ಗಾಮುಗ್ಗ ಥಳಿಸಿ ಅಪಹರಣ ಮಾಡಿದ್ದಾರೆ ಎನ್ನಲಾಗಿದೆ.

    33 ವರ್ಷದ ಕಮಲಮ್ಮ ಅಪಹರಣಕ್ಕೊಳಗಾದ ಮಹಿಳೆ ಎನ್ನಲಾಗುತ್ತಿದೆ. ಅಪಹರಣಕ್ಕೂ ಮೊದಲು ಹಲ್ಲೆ ಮಾಡಿ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಮಹಿಳೆಯನ್ನು ಎಳೆದಾಡಿ ದೊಣ್ಣೆಗಳಿಂದ ಹೊಡೆದು ಕಾರಿನಲ್ಲಿ ಕರೆದೊಯ್ದ ದುಷ್ರ್ಕಮಿಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗಿದೆ.

    ಮೀನಾಕ್ಷಿ, ಶಾಲಿನಿ ಎಂಬವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೌಟುಂಬಿಕ ಕಲಹ ಹಿನ್ನೆಲೆ ನಡೆದಿರುವ ಕೃತ್ಯ ಎನ್ನಲಾಗಿದೆ. ಅಲ್ಲದೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ಹೀಗೆ ಥಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: 15 ಸಾವಿರ ರೂ., ದಾಖಲಾತಿಗಳಿದ್ದ ಪರ್ಸ್ ಹಿಂದಿರುಗಿಸಿದ ಕಾಲೇಜಿನ ವಿದ್ಯಾರ್ಥಿಗಳು

    ಕೋಲಾರ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದೂರು ದಾಖಲಾಗಿದೆ. ಇದನ್ನೂ ಓದಿ:  5ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ- ಶಿಕ್ಷಕ ಅರೆಸ್ಟ್

  • ಮದುವೆಗೆ ಹಿರಿಯ ಮಗಳು ಒಪ್ಪದ್ದಕ್ಕೆ ಕಿರಿಯ ಮಗಳನ್ನೇ ಕಿಡ್ನಾಪ್‍ಗೈದ್ರು

    ಮದುವೆಗೆ ಹಿರಿಯ ಮಗಳು ಒಪ್ಪದ್ದಕ್ಕೆ ಕಿರಿಯ ಮಗಳನ್ನೇ ಕಿಡ್ನಾಪ್‍ಗೈದ್ರು

    ಮಂಡ್ಯ: ಮದುವೆಗೆ ಹಿರಿಯ ಮಗಳು ಒಪ್ಪಲಿಲ್ಲ ಎಂದು ಕಿರಿಯ ಮಗಳನ್ನು ಅಪಹರಿಸಲಾಗಿದೆ ಎಂದು ಪೊಲೀಸರಿಗೆ ಪೋಷಕರು ದೂರು ನೀಡಿದ್ದಾರೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಆಗಸ್ಟ್ 9ರಂದು ಘಟನೆ ನಡೆದಿದ್ದು, ನಾಪತ್ತೆಯಾಗಿರುವ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿದ್ದ ವಿದ್ಯಾರ್ಥಿನಿ ರಕ್ಷಿತಾಳನ್ನು ನಾಗಮಂಗಲ ಮೂಲದ ಗಿರೀಶ್ ಎನ್ನುವವನು ಅಪಹರಣ ಮಾಡಿದ್ದಾನೆ ಎಂದು ಆಕೆಯ ಪೋಷಕರಾದ ನಂದೀಶ್ ಹಾಗೂ ಸವಿತಾ ಆರೋಪಿಸಿದ್ದಾರೆ. ಇದನ್ನೂ ಓದಿ:ಚಿಂಕೆ ಭೇಟೆಯಾಡಿದ್ದವನ ಮೇಲೆ ಶೂಟೌಟ್

    ಏನಿದು ಘಟನೆ?

    ಗಿರೀಶ್ ಇತ್ತೀಚೆಗೆ ತನ್ನ ಸಂಬಂಧಿಕರಾದ ನಂದೀಶ್ ಹಿರಿಮಗಳು ಚಂದನಾಳನ್ನು ವಿವಾಹವಾಗಲು ಕೇಳಿದ್ದನು. ಆದರೆ ಚಂದನ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದರಿಂದ ಮದುವೆಗೆ ಒಪ್ಪಿರಲಿಲ್ಲ. ಬಳಿಕ ಮೇ 20ರಂದು ಮನೆಯಿಂದಲೇ ರಕ್ಷಿತಾ ನಾಪತ್ತೆಯಾಗಿ ವಾಪಸ್ಸಾಗಿದ್ದಳು. ಆ ಬಳಿಕ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದಳು. ಇದನ್ನೂ ಓದಿ:ಸೆ.5ರಂದು ‘ಗೌರಿ ಲಂಕೇಶ್ ದಿನ’ವನ್ನಾಗಿ ಆಚರಿಸಲಿದೆ ಕೆನಡಾದ ಬರ್ನಾಬಿ ನಗರ

    ಮತ್ತೆ ಆಗಸ್ಟ್ 9ರಿಂದ ಮತ್ತೊಮ್ಮೆ ಕಾಣೆಯಾಗಿದ್ದಾಳೆ. ಹಿರಿಮಗಳು ಚಂದನಾ ಮದುವೆಗೆ ಒಪ್ಪಲಿಲ್ಲವೆಂದು ಕಿರಿಮಗಳನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ರಕ್ಷಿತಾ ನಾಪತ್ತೆಯಾದ ಬಳಿಕ ಆಕೆಯ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ:ಸುಧಾಮೂರ್ತಿ, ನಾರಾಯಣಮೂರ್ತಿಯನ್ನು ಶಾಲೆಯ ಉದ್ಘಾಟಕರಾಗಿ ಕರೆತರಬೇಕು: ಕಾರಜೋಳ

    ಶ್ರೀರಂಗಪಟ್ಟಣ ಕೂಡಲಕುಪ್ಪೆ ಗ್ರಾಮದ ವೆಂಕಟೇಶ್ ಎಸ್.ಎಸ್.ಎಲ್.ಸಿ ಬಳಿಕ ರಕ್ಷಿತಾಳನ್ನು ಮದುವೆಯಾಗಲು ಕೇಳಿದ್ದರು. ಆದರೆ ಮಗಳು ಅಪ್ರಾಪ್ತಳು ಎಂಬ ಕಾರಣಕ್ಕೆ ಮದುವೆಗೆ ಪೋಷಕರು ನಿರಾಕರಿಸಿದ್ದರು.

    ಈ ಪರಿಣಾಮ ಗಿರೀಶ್ ವೆಂಕಟೇಶ್ ಜೊತೆ ಮದುವೆ ಮಾಡಿಸುವುದಾಗಿ ಪುಸಲಾಯಿಸಿ ರಕ್ಷಿತಾಳನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಆಕೆಯ ಪೋಷಕರು ಆರೋಪಿಸಿದ್ದು, ಅವರು ರಕ್ಷಿತಾಳನ್ನು ವೆಂಕಟೇಶ್ ಜೊತೆ ಮದುವೆ ಮಾಡಿಸಿದ್ದಾನೋ ಅಥವಾ ತಾನೇ ಮದುವೆಯಾಗಿದ್ದಾನೋ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ.

    ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

  • ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಆಟಗಾರ ಸ್ಟುವರ್ಟ್ ಮ್ಯಾಕ್‍ಗಿಲ್ ಕಿಡ್ನಾಪ್

    ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಆಟಗಾರ ಸ್ಟುವರ್ಟ್ ಮ್ಯಾಕ್‍ಗಿಲ್ ಕಿಡ್ನಾಪ್

    ಸಿಡ್ನಿ: ಆಸ್ಟ್ರೇಲಿಯಾ ಟೆಸ್ಟ್ ತಂಡದ ಮಾಜಿ ಆಟಗಾರ ಸ್ಟುವರ್ಟ್ ಮ್ಯಾಕ್‍ಗಿಲ್ ಅವರ ಅಪಹರಣ ಪ್ರಕರಣ 21 ದಿನಗಳ ಬಳಿಕ ಬೆಳಕಿಗೆ ಬಂದಿದೆ.

    ಸ್ಟುವರ್ಟ್ ಮ್ಯಾಕ್‍ಗಿಲ್ ಅವರನ್ನು ಏಪ್ರಿಲ್ 14 ರಂದು ಸಿಡ್ನಿಯ ನಿವಾಸದಿಂದ ಅಪಹರಣ ಮಾಡಲಾಗಿತ್ತು. ಬಳಿಕ ಬಿಡುಗಡೆ ಮಾಡಲಾಗಿದೆ. ಈ ಕುರಿತು ಆಸ್ಟ್ರೇಲಿಯಾದ ಪೊಲೀಸರು ಈಗಾಗಲೇ 4 ಜನರನ್ನು ಬಂಧಿಸಿದ್ದಾರೆ.

    ಅಪಹರಣದ ಕುರಿತು ವರದಿಮಾಡಿರುವ ಸ್ಥಳೀಯ ಮಾಧ್ಯಮ ಮ್ಯಾಕ್‍ಗಿಲ್ ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು 3 ಜನ ವ್ಯಕ್ತಿಗಳು ಕರೆದೊಯ್ದ ಹೊಡೆದು, ಗನ್‍ನಿಂದ ಸಾಯಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ತಿಳಿಸಿದೆ.

    2021ರ ಏಪ್ರಿಲ್ 14ರಂದು ರಾತ್ರಿ 8 ಗಂಟೆ ಸುಮಾರಿಗೆ 50 ವರ್ಷ ಪ್ರಾಯದ ವ್ಯಕ್ತಿಯನ್ನು, 46 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಅಪಹರಿಸಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು ಎಂದು ನ್ಯೂ ಸೌತ್ ವೇಲ್ಸ್ ಪೊಲೀಸರು ತಿಳಿಸಿದ್ದಾರೆ.

    50 ವರ್ಷ ಪ್ರಾಯದ ವ್ಯಕ್ತಿಯನ್ನು ಅವರ ಬ್ರಿಂಗೆಲಿಯಲ್ಲಿರುವ ಆಸ್ತಿಗೆ ಕರೆದೊಯ್ದು 3 ಜನ ಅಪಹರಣಕಾರರು ಹೊಡೆದು ಗನ್ ತೋರಿಸಿ ಬೆದರಿಕೆ ಒಡ್ಡಿದ್ದಾರೆ. ಬಳಿಕ ಬೆಲ್ಮೋರ್ ಎಂಬ ಪ್ರದೇಶದಲ್ಲಿ ಅವರನ್ನು ಬಿಡುಗಡೆ ಮಾಡಿದ್ದಾರೆ. ಈ ಕುರಿತು ಏಪ್ರಿಲ್ 20ರಂದು ಪ್ರಕರಣ ದಾಖಲಾಗಿದ್ದು, ದರೋಡೆ ಮತ್ತು ಅಪರಾಧ ಪತ್ತೆ ದಳ ಈ ಪ್ರಕರಣವನ್ನು ತನಿಖೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಸ್ಟುವರ್ಟ್ ಮ್ಯಾಕ್‍ಗಿಲ್, ಆಸ್ಟ್ರೇಲಿಯಾ ಪರ 44 ಟೆಸ್ಟ್ ಪಂದ್ಯಗಳಿಂದ 208 ವಿಕೆಟ್ ಪಡೆದಿದ್ದಾರೆ. 1998 ರಿಂದ 2008ರ ವರೆಗೆ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು.

  • ಹಿಂದೂ ಬಾಲಕಿಯ ಬಲವಂತದ ಮತಾಂತರ – ಮದ್ವೆಯಾದ ಪಾಕ್ ವ್ಯಕ್ತಿ

    ಹಿಂದೂ ಬಾಲಕಿಯ ಬಲವಂತದ ಮತಾಂತರ – ಮದ್ವೆಯಾದ ಪಾಕ್ ವ್ಯಕ್ತಿ

    ಇಸ್ಲಾಮಾಬಾದ್: ಹಿಂದೂ ಬಾಲಕಿಯನ್ನು ಎಳೆದೊಯ್ದು ಮತಾಂತರ ಮಾಡಿ ಮದ್ವೆಯಾಗಿರುವ ಘಟನೆ ಸಿಂಧ್ ಪ್ರಾಂತ್ಯದ ತಂಗ್ವಾನಿಯಲ್ಲಿ ನಡೆದಿದೆ.

    13 ವರ್ಷದ ಬಾಲಕಿಯನ್ನು ಬಹಲ್ಕನಿ ಬುಡಕಟ್ಟಿನ ನಿವಾಸಿಯೊಬ್ಬ ಅಪಹರಿದ್ದು, ಬರೆಲ್ವಿ ಮೌಲ್ವಿ ಮಿಯಾನ್ ಮಿಥೋ ಬಲವಂತವಾಗಿ ಬಾಲಕಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಅಪಹರಣಕಾರನೊಂದಿಗೆ ವಿವಾಹ ಮಾಡಿದ್ದಾನೆ.

    ಮಾರ್ಚ್ 8 ರಂದು ಐವರು ಆಯುಧಗಳೊಂದಿಗೆ ಮನೆಗೆ ನುಗ್ಗಿದ್ದಾರೆ. ಈ ವೇಳೆ ಮನೆಯವರಿಗೆ ಬೆದರಿಸಿ ಬಾಲಕಿಯನ್ನು ಅಪಹರಿಸಿದ್ದಾರೆ. ಇದೀಗ ಮತಾಂತರಮಾಡಿ ಆಕೆಗೆ ಮದುವೆ ಮಾಡಿದ್ದಾರೆ ಎಂದು ಹೆತ್ತವರು ಆರೋಪಿಸಿದ್ದಾರೆ.

    ಹೆತ್ತವರ ಆಸೆಗೆ ವಿರುದ್ಧವಾಗಿ ನಾನು ಮದುವೆಯಾಗಿದ್ದೇನೆ. ಹೀಗಾಗಿ ನನ್ನ ಹೆತ್ತವರಿಗೆ ನನ್ನ ಮೇಲೆ ಕೋಪ ಇದೆ. ನನಗೆ 18 ವರ್ಷವಾಗಿದೆ. ನನಗೆ ರಕ್ಷಣೆ ಬೇಕೆಂದು ಎಂದು ಕೋರ್ಟ್ ಮುಂದೆ ಬಾಲಕಿ ಹೇಳಿಕೊಂಡಿದ್ದಾಳೆ.

    ಪೊಲೀಸರು ಸಿಂಧ್ ಬಾಲ್ಯ ವಿವಾಹ ನಿರ್ಬಂಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.

  • ವಸತಿ ಶಾಲೆಯಿಂದ 300ಕ್ಕೂ ಹೆಚ್ಚು ಬಾಲಕಿಯರ ಅಪಹರಣ

    ವಸತಿ ಶಾಲೆಯಿಂದ 300ಕ್ಕೂ ಹೆಚ್ಚು ಬಾಲಕಿಯರ ಅಪಹರಣ

    – ಭದ್ರತಾ ಸಿಬ್ಬಂದಿಯಂತೆ ಬಟ್ಟೆ ಧರಿಸಿದ ಖದೀಮರು

    ಲಾಗೋಸ್: ವಸತಿ ಶಾಲೆಯೊಂದರಿಂದ 300ಕ್ಕೂ ಹೆಚ್ಚು ಬಾಲಕಿಯರ ಅಪಹರಣ ಮಾಡಿರುವ ಘಟನೆ ನೈಜಿರೀಯಾದಲ್ಲಿ ನಡೆದಿದೆ.

    ಬಾಲಕಿಯರ ಸರ್ಕಾರಿ ಕಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯರ ಸಾಮೂಹಿಕ ಅಪಹರಣ ಮಾಡಲಾಗಿದ್ದು, ಪೊಲೀಸ್ ಮತ್ತು ಮಿಲಿಟರಿ ಪಡೆ ವಿದ್ಯಾರ್ಥಿನಿಯರ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.

    ನನ್ನ 10 ಮತ್ತು 13 ವರ್ಷದ ಮಕ್ಕಳಿಬ್ಬರನ್ನೂ ಅಪಹರಿಸಲಾಗಿದೆ. ಶಾಲೆಯ ಹತ್ತಿರದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇನಾ ಪಡೆಯಿದ್ದರೂ, ಬಾಲಕಿಯರನ್ನು ರಕ್ಷಿಸಲು ಅವರಿಗೆ ಸಾಧ್ಯವಾಗಿಲ್ಲ ಎಂಬುದು ನಿರಾಶಾದಾಯಕವಾಗಿದೆ ಎಂದು ಪೋಷಕರೊಬ್ಬರು ತಮ್ಮ ನೋವನ್ನು ತೊಡಿಕೊಂಡಿದ್ದಾರೆ. ಬಾಲಕಿಯರನ್ನು ಅಪಹರಿಸಿ ಕಾಡಿಗೆ ಕರೆದೊಯ್ದಿದ್ದಾರೆ. ಬಾಲಕಿಯರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಡುವುದೇ ಅವರ ಟಾರ್ಗೆಟ್, ನಮಗೆ ಮಕ್ಕಳನ್ನು ಸುರಕ್ಷಿತವಾಗಿ ವಾಪಸ್ ಕರೆ ತರುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

    ಎಲ್ಲಾ ಮಕ್ಕಳನ್ನು ಸುರಕ್ಷಿತವಾಗಿ ಅವರ ಪೋಷಕರ ಬಳಿ ತಲುಪಿಸುವುದು ನಮ್ಮ ಮೂಲ ಉದ್ದೇಶವಾಗಿದೆ. ಹಣಕ್ಕಾಗಿ ಮುಗ್ಧ ಶಾಲಾ ಮಕ್ಕಳನ್ನು ಅಪಹರಿಸಿ, ಬೆದರಿಕೆಯೊಡ್ಡುವ ಬಂಡಕೋರರಿಗೆ ನಾವು ಹೆದರುವುದಿಲ್ಲ ಎಂದು ನೈಜೀರಿಯಾದ ಅಧ್ಯಕ್ಷ ಮೊಹಮ್ಮದ್ ಬುಹಾರಿ ಹೇಳಿದ್ದಾರೆ.

    ಸರ್ಕಾರಿ ಭದ್ರತಾ ಸಿಬ್ಬಂದಿಯಂತೆ ಬಟ್ಟೆ ಧರಿಸಿ ಖದೀಮರು ವಾಹನದಲ್ಲಿ ಕುಳಿತುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಒತ್ತಡ ಹಾಕಿದ್ದಾರೆ. ಪೋಷಕರಿಗೆ ತಿಳಿದ ಬಳಿಕ ಅವರು ಶಾಲೆಗಳನ್ನು ಸುತ್ತುವರಿದಿದ್ದಾರೆ. ಆದರೆ ಅದಾಗಲೇ ಬಾಲಕಿಯರನ್ನು ಅಪಹರಿಸಿ ಕರೆದೊಯ್ಯಲಾಗಿತ್ತು ಎಂದು ತಿಳಿದುಬಂದಿದೆ.

  • ವೇಶ್ಯಾವಾಟಿಕೆಯಲ್ಲಿ ಸಿಲುಕಿಕೊಂಡಿದ್ದ ಯುವತಿಯ ರಕ್ಷಣೆ

    ವೇಶ್ಯಾವಾಟಿಕೆಯಲ್ಲಿ ಸಿಲುಕಿಕೊಂಡಿದ್ದ ಯುವತಿಯ ರಕ್ಷಣೆ

    -2017ರಲ್ಲಿ ಅಪಹರಣವಾಗಿದ್ದ ಯುವತಿ ವಿಳಾಸ ಪತ್ತೆ

    ಬೆಳಗಾವಿ: ಕಿಡ್ನಾಪ್ ಆಗಿ ವೇಶ್ಯಾವಾಟಿಕೆಯಲ್ಲಿ ಸಿಲುಕಿಕೊಂಡಿದ್ದ, ಉತ್ತರ ಪ್ರದೇಶ ಯುವತಿಯನ್ನು ಬೆಳಗಾವಿಯ ಎಪಿಎಂಸಿ ಠಾಣೆಯ ಪೊಲೀಸರು ರಕ್ಷಣೆ ಮಾಡಿ ಮರಳಿ ಪಾಲಕರ ಮಡಿಲಿಗೆ ಸೇರಿಸಿದ್ದಾರೆ.

    ಫೆ.7ರಂದು ಬೆಳಗಾವಿಯ ಸದಾಶಿವನಗರದ ಮನೆಯೊಂದರರಲ್ಲಿ ನಡೆಯುತ್ತಿರುವ ಹೈಟೆಕ್ ವೇಶ್ಯಾವಾಟಿಕೆ ಜಾಲದ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿದ್ದರು. ಎಪಿಎಂಸಿ ಠಾಣೆ ಸಿಪಿಐ ಜಾವೇದ್ ಮುಷಾಪುರೆ ನೇತೃತ್ವದಲ್ಲಿ ವೇಶ್ಯಾವಾಟಿಕೆ ಮೇಲೆ ದಾಳಿ ನಡೆದಿದೆ. ಈ ವೇಳೆ ಇಬ್ಬರು ಯುವತಿಯರನ್ನು ಎಪಿಎಂಸಿ ಠಾಣೆ ಪೊಲೀಸರು ರಕ್ಷಣೆ ಮಾಡಿದ್ದಾರೆ.

    ವೇಶ್ಯಾವಾಟಿಕೆಯಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಯುವತಿಯರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿತ್ತು. ವಿಚಾರಣೆ ವೇಳೆ ಓರ್ವ ಯುವತಿಯ ವಿಳಾಸವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. 2017ರಲ್ಲಿ ಈ ಯುವತಿ ಅಪಹರಣವಾಗಿದ್ದ ಬಗ್ಗೆ ಕೇಸ್ ದಾಖಲಾಗಿದ್ದ ಮಾಹಿತಿ ದೊರಕಿದೆ. ಉತ್ತರಪ್ರದೇಶದ ಗಾಜಿಯಾಬಾದ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿತ್ತು.

    ಯುವತಿ ತಂದೆ ಉತ್ತರಪ್ರದೇಶ ಪೊಲೀಸರೊಂದಿಗೆ ಬೆಳಗಾವಿಗೆ ಬಂದು ಅವರ ಮಗಳನ್ನು ಕರೆದುಕೊಂಡು ಹೋಗಿದ್ದಾರೆ. ಎಪಿಎಂಸಿ ಪೊಲೀಸರು, ಮಹಿಳಾ ಸಾಂತ್ವನ ಕೇಂದ್ರದ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗುತ್ತಿದೆ.