Tag: ಅಪಹರಣ

  • ಅಕ್ರಮ ಗಣಿ ಮಾಫಿಯಾಗೆ ಮಂಡ್ಯ ವ್ಯಕ್ತಿ ಬಲಿ – ಹೊಳೆನರಸೀಪುರ ಅರಣ್ಯದಲ್ಲಿ ಹೂತು ಹಾಕಿದ್ರಾ ಶವ?

    ಅಕ್ರಮ ಗಣಿ ಮಾಫಿಯಾಗೆ ಮಂಡ್ಯ ವ್ಯಕ್ತಿ ಬಲಿ – ಹೊಳೆನರಸೀಪುರ ಅರಣ್ಯದಲ್ಲಿ ಹೂತು ಹಾಕಿದ್ರಾ ಶವ?

    ಮಂಡ್ಯ: ನಾಗಮಂಗಲ ತಾಲೂಕಿನ ನರಗಲು ಗ್ರಾಮದ ಯುವಕನ ನಿಗೂಢ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅಕ್ರಮ ಗಣಿ ಮಾಫಿಯಾವನ್ನು ಬಹಿರಂಗ ಪಡಿಸಿದ್ದಕ್ಕೆ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನರಗಲು ಗ್ರಾಮದ ನಿವಾಸಿ ಮೋಹನ್(31) ಕಳೆದ ಭಾನುವಾರ ಪತ್ನಿಗೆ ಹೊಲಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದರು. ಆದರೆ ಮತ್ತೆ ಮನೆಗೆ ವಾಪಸ್ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡು ಗ್ರಾಮದಲ್ಲಿ ಹುಡುಕಾಡಿದ್ದರು. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಹೋರಾಡುವ ಸಂಕಲ್ಪ ಮಾಡಿದ್ದೇವೆ: ಪಾಕಿಸ್ತಾನ 

    ಕೊನೆಗೆ ಎಲ್ಲೂ ಪತ್ತೆಯಾಗದ ಕಾರಣ ಮೋಹನ್‍ನನ್ನು ಅಪಹರಣ ಮಾಡಲಾಗಿದೆ ಎಂದು ಕುಟುಂಬಸ್ಥರು ದೂರು ನೀಡಿದ್ದರು. ಮೋಹನ್ ಕಿಡ್ನಾಪ್‍ಗೆ ಅಕ್ರಮ ಕಲ್ಲು ಕ್ರಷರ್ ನಡೆಸುತ್ತಿರುವ ಕುಮಾರ್ ಕಾರಣವಾಗಿರಬಹುದು ಎಂಬ ಅನುಮಾನ ಈಗ ವ್ಯಕ್ತವಾಗಿದೆ.

    ಕುಟುಂಬಸ್ಥರು ಹೇಳೋದು ಏನು?
    ಕುಮಾರ್ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋತಿದ್ದ. ಈ ಸೋಲಿಗೆ ಮೋಹನ್ ಕಾರಣ ಎಂದು ತಿಳಿದ ಕುಮಾರ್ ಹಗೆ ಸಾಗಿಸುತ್ತಿದ್ದ. ಅಲ್ಲದೇ ತಮಿಳುನಾಡು ಮೂಲದ ರಾಜು ಎಂಬವರು ಕುಮಾರ್ ಜಮೀನಿನಲ್ಲಿ ಕ್ರಷರ್ ನಡೆಸುತ್ತಿದ್ದರು. ಇತ್ತೀಚೆಗೆ ಈ ಕ್ರಷರ್ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಸಿಬ್ಬಂದಿ ದಾಳಿ ನಡೆಸಿದ್ದರು. ಈ ದಾಳಿಗೆ ಮೋಹನ್ ಕಾರಣವೆಂದು ರಾಜು ತಿಳಿದುಕೊಂಡಿದ್ದಾನೆ. ಈ ಹಿನ್ನೆಲೆ ಮೋಹನ್‍ನನ್ನ ರಾಜು ಮತು ಕುಮಾರ್ ಅಪಹರಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

    ನಾಪತ್ತೆಯಾದ ಮೋಹನ್ ಬಳಸುತ್ತಿದ್ದ ಮೊಬೈಲ್ ಟವರ್ ಮೂಲಕ ಈಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗ ಗಣಿ ಮಾಲೀಕನ ಜೊತೆ ಸೇರಿ ಸಂಬಂಧಿಕರಿಂದಲೇ ಮೋಹನ್ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹತ್ಯೆ ಮಾಡಿದ ಬಳಿಕ ಹೊಳೆನರಸೀಪುರ ತಾಲ್ಲೂಕಿನ ಭಂಟರ ತಳಾಲು ಗ್ರಾಮದ ಅರಣ್ಯ ಪ್ರದೇಶದಲ್ಲಿ ಶವವನ್ನು ಹೂತಿಟ್ಟಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಈಶ್ವರಪ್ಪಗೆ ಒಂದು ನ್ಯಾಯ, ಶ್ರೀರಾಮುಲುಗೆ ಒಂದು ನ್ಯಾಯನಾ: ತಿಪ್ಪೇಸ್ವಾಮಿ 

    ಇದೀಗ ಮೋಹನ್ ಹೂತಿಟ್ಟಿರುವ ಸ್ಥಳಕ್ಕೆ ಬಿಂಡಿಗನವಿಲೆ ಪೊಲೀಸರು ಆಗಮಿಸಿದ್ದು ಸ್ಥಳದಲ್ಲಿ ಹಾಸನ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಕೊಲೆ ವಿಷಯ ತಿಳಿದು ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದಾರೆ.

  • ಮದುವೆ ಆಮಂತ್ರಣ ಪತ್ರಿಕೆಗಳನ್ನು ಹಂಚಲು ಹೋಗಿದ್ದ ಯುವತಿಯ ಮೇಲೆ ಗ್ಯಾಂಗ್‍ರೇಪ್

    ಮದುವೆ ಆಮಂತ್ರಣ ಪತ್ರಿಕೆಗಳನ್ನು ಹಂಚಲು ಹೋಗಿದ್ದ ಯುವತಿಯ ಮೇಲೆ ಗ್ಯಾಂಗ್‍ರೇಪ್

    ಭೋಪಾಲ್: ಉತ್ತರ ಪ್ರದೇಶದ ಯುವತಿಯೊಬ್ಬಳು ತನ್ನ ಮದುವೆ ಆಮಂತ್ರಣ ಪತ್ರಿಕೆಗಳನ್ನು ಹಂಚಲು ಹೋಗುತ್ತಿದ್ದಾಗ ಆಕೆಯನ್ನು ಅಪಹರಿಸಿ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರಗೈದು ಅವಳನ್ನು ಮಾರಾಟ ಮಾಡಿದ ಘಟನೆ ಮಧ್ಯಪ್ರದೇಶದ ಪಕ್ಕದ ದಾತಿಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಏಪ್ರಿಲ್ 21 ರಂದು ನಡೆಯಲಿರುವ ಆಕೆಯ ಮದುವೆಯ ಕಾರ್ಡ್‍ಗಳನ್ನು ವಿತರಿಸಲು ಹೋದಾಗ ಗ್ರಾಮದ ಮೂವರು ಯುವಕರು ಏಪ್ರಿಲ್ 18 ರಂದು ಅವಳನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರಗೈದಿದ್ದಾರೆ. ಅಲ್ಲದೇ ರಾಜಕೀಯ ಪಕ್ಷದ ನಾಯಕರೊಬ್ಬರ ಬಳಿಗೆ ಕರೆದೊಯ್ದು ಅವರೊಂದಿಗೆ ಇರಿಸಿದಲ್ಲದೇ ಬಳಿಕ ಆಕೆಯನ್ನು ಮತ್ತೊಬ್ಬ ವ್ಯಕ್ತಿಯೊಂದಿಗೆ ಇರಲು ಒತ್ತಾಯಿಸಿದ್ದರು ಎಂದು ಯುವತಿಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ. ಇದನ್ನೂ ಓದಿ: ಕುಣಿಗಲ್‍ನಲ್ಲಿ ಭೀಕರ ಅಪಘಾತ- ಬೆಂಗಳೂರಿಗೆ ಹೋಗುತ್ತಿದ್ದ ಇಬ್ಬರು ಸಾವು

    KIDNAP

    ಕೆಲವು ದಿನಗಳ ಕಾಲ ಸಂತ್ರಸ್ತೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ಇಟ್ಟುಕೊಂಡಿದ್ದರು. ನಂತರದಲ್ಲಿ ಆಕೆಯನ್ನು ರಾಜಕೀಯ ಪಕ್ಷದ ನಾಯಕನಿಗೆ ಒಪ್ಪಿಸಿದ್ದಾರೆ. ನಾಯಕನೊಂದಿಗೆ 5 ದಿನಗಳ ಕಾಲ ಝಾನ್ಸಿ ಜಿಲ್ಲೆಯಲ್ಲಿ ಇರಿಸಿದ್ದಲ್ಲದೇ, ಬಳಿಕ ಯುವತಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಇರಲು ಒತ್ತಾಯಿಸಿ ಮಧ್ಯಪ್ರದೇಶದ ಪಕ್ಕದ ದಾತಿಯಾ ಜಿಲ್ಲೆಯ ಹಳ್ಳಿಗೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ವೇಳೆ ಯುವತಿಯು ಹೇಗೋ ತನ್ನ ತಂದೆಯನ್ನು ದಾತಿಯಾದಿಂದ ಕರೆಸುವಲ್ಲಿ ಯಶಸ್ವಿಯಾದರು. ನಂತರ ಆಕೆಯನ್ನು ಪೊಲೀಸರ ಸಹಾಯದಿಂದ ಪಠಾರಿ ಗ್ರಾಮದಿಂದ ರಕ್ಷಿಸಲಾಯಿತು. ಇದನ್ನೂ ಓದಿ: ಕಾರಿನ ಗಾಜು ಪುಡಿ ಮಾಡಿದ ಕಿಡಿಗೇಡಿಗಳು- ಸಿಸಿ ಕ್ಯಾಮರಾದಲ್ಲಿ ದುಷ್ಕೃತ್ಯ ಸೆರೆ

    ಸಂತ್ರಸ್ತೆಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಮಾರಾಟ ಮಾಡಿದ ಆರೋಪದ ಮೇಲೆ ಕೆಲವರ ವಿರುದ್ಧ ಯುವತಿ ನೀಡಿದ ದೂರಿನ ಮೇರೆಗೆ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಮ್ಯಾಜಿಸ್ಟ್ರೇಟ್ ಮುಂದೆ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಈ ವಿಷಯವನ್ನು ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತೆಹ್ರಾಲಿ ಸರ್ಕಲ್ ಆಫೀಸರ್ (ಸಿಒ) ಅನುಜ್ ಸಿಂಗ್ ತಿಳಿಸಿದ್ದಾರೆ.

  • ಕಳ್ಳತನ ಮಾಡಲು ಹೋಗಿ ಬಾಲಕಿಯನ್ನ ಅಪಹರಿಸಿದ ಖತರ್ನಾಕ್ ಕಳ್ಳ

    ಕಳ್ಳತನ ಮಾಡಲು ಹೋಗಿ ಬಾಲಕಿಯನ್ನ ಅಪಹರಿಸಿದ ಖತರ್ನಾಕ್ ಕಳ್ಳ

    ಚಿಕ್ಕೋಡಿ: ಕಳ್ಳತನ ಮಾಡಲು ಹೋಗಿ ಪುಟ್ಟ ಬಾಲಕಿಯನ್ನೇ ಅಪಹರಣ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಗ್ರಾಮದಲ್ಲಿ ನಡೆದಿದೆ.

    ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಅನಿಲ್ ಲಂಬುಗೋಳ ಬಂಧಿತ ಆರೋಪಿ. ಪ್ರಕರಣವನ್ನು 8 ಗಂಟೆಗಳಲ್ಲಿ ಪೊಲೀಸರು ಸರು ಭೇದಿಸಿದ್ದಾರೆ. ಅನಿಲ್ ಲಂಬುಗೋಳ ಕಳೆದ ರಾತ್ರಿ ಕಳ್ಳತನ ಮಾಡಲು ಸುರೇಶ್ ಕಾಂಬಳೆ ಮನೆಗೆ ನುಗ್ಗಿದ್ದ. ಟ್ರೆಸರಿ ಬಾಗಿಲನ್ನು ಮುರಿಯುವ ಸಂದರ್ಭದಲ್ಲಿ ಮನೆಯವರು ಎಚ್ಚೆತ್ತುಕೊಂಡಿದ್ದಾರೆ.

    ಈ ವೇಳೆ ಮನೆಯವರು ಜೋರಾಗಿ ಕಿರಿಚಾಡಿದ್ದಾರೆ. ಇದರಿಂದ ಭಯಗೊಂಡ ಅನಿಲ್, ಮನೆಯವರಿಗೆ ಮಗಳನ್ನು ಅಪಹರಿಸುವುದಾಗಿ ಬೆದರಿಕೆಯೊಡ್ಡಿದ್ದಾನೆ. ಆದರೆ ಅಷ್ಟೋತ್ತಿಗಾಗಲೇ ಅಕ್ಕಪಕ್ಕದ ಮನೆಯವರು ಸೇರತೊಡಗಿದ್ದರು. ಇದರಿಂದಾಗಿ ಆರೋಪಿ ಅನಿಲ್ ಮನೆಯಲ್ಲಿ ಮಲಗಿದ್ದ 11 ವರ್ಷದ ಬಾಲಕಿಯನ್ನ ತನ್ನೊಡನೆ ಎತ್ತಿಕೊಂಡು ಅಪಹರಣ ಮಾಡಿಕೊಂಡು ಅಲ್ಲಿಂದ ಪರಾರಿಯಾಗಿದ್ದ. ಇದನ್ನೂ ಓದಿ: ಬಿಜೆಪಿ, ಅವರ ದೊಡ್ಡ ಪರಿವಾರದವರು ಅನೇಕ ಭಾವನಾತ್ಮಕ ವಿಚಾರಗಳನ್ನು ಎತ್ತುತ್ತಿದ್ದಾರೆ: ರಾಮಲಿಂಗಾ ರೆಡ್ಡಿ

    ಕೂಡಲೇ ಗ್ರಾಮಸ್ಥರು ಈಡಿ ಗ್ರಾಮವನ್ನು ಹುಡುಕಿದ್ದಾರೆ. ಆದರೆ ಅನಿಲ್ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾತ್ರಿಯೇ ಅಂಕಲಿ ಪೊಲೀಸ್ ಠಾಣೆಗೆ ತೆರಳಿ, ಸುರೇಶ್ ಕುಟುಂಬ ಅನಿಲ್ ವಿರುದ್ಧ ದೂರು ದಾಖಲಿಸಿದ್ದರು. ಇನ್ನು ದೂರು ದಾಖಲಿಸಿಕೊಂಡು ರಾತ್ರಿಯೇ ಕಾರ್ಯಾಚರಣೆ ಇಳಿದಿದ್ದ ಅಂಕಲಿ ಪೊಲೀಸರು ಎರಡು ತಂಡಗಳನ್ನು ರಚಿಸಿಕೊಂಡು ಆರೋಪಿ ಅನಿಲ್‍ಗಾಗಿ ಹುಡುಕಾಟ ನಡೆಸಿದ್ದಾರೆ. ಪ್ರಕರಣ ನಡೆದ ಎಂಟು ತಾಸಿನಲ್ಲಿಯೆ ಅನೀಲ್‍ನನ್ನು ಬಂಧಿಸಿದ್ದಾರೆ.

    ರಾತ್ರಿ ಅಪಹರಣ ಮಾಡಿದ್ದ ಬಾಲಕಿಯೊಡನೆ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮಕ್ಕೆ ತಮ್ಮ ಪರಿಚಯಸ್ಥರ ಮನೆಯಲ್ಲಿ ಅನಿಲ್ ಅವಿತು ಕುತಿದ್ದ. ಕಾರದಗಾ ಗ್ರಾಮಕ್ಕೆ ತೆರಳಿದ್ದ ಪೊಲೀಸರ 11 ವರ್ಷದ ಬಾಲಕಿಯನ್ನು ರಕ್ಷಿಸಿ ಹಾಗೂ ಅನಿಲ್ ಲಂಬುಗೋಳನನ್ನು ಬಂಧಿಸಿದ್ದಾರೆ. ಸದ್ಯ ಬಾಲಕಿಯನ್ನು ಚಿಕ್ಕೋಡಿ ಆಸ್ಪತ್ರೆ ದಾಖಲು ಮಾಡಿ ಮೆಡಿಕಲ್ ಟೆಸ್ಟ್ ಮಾಡಿಸಿದ್ದಾರೆ. ಇದನ್ನೂ ಓದಿ: ಜನರ ಗಮನ ಬೇರೆ ಕಡೆ ಸೆಳೆಯಲು ಬಿಜೆಪಿ ಪಿತೂರಿ ನಡೆಸಿದೆ: ಶ್ರೀನಿವಾಸ್ ಮಾನೆ

    crime

    ಆರೋಪಿ ಅನಿಲ್ ಈ ಹಿಂದೆಯೂ ಅನೇಕ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಜೈಲಿನಲ್ಲಿದ್ದಾಗ ಎರಡು ಬಾರಿ ಜೈಲಿನಿಂದಲೆ ಪರಾರಿಯಾಗಿ ಮತ್ತೆ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದ. ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಅನಿಲ್ ಮತ್ತೆ ತನ್ನ ಹಳೆ ಚಾಳಿಯನ್ನೆ ಮುಂದುವರಿಸಿದ್ದು, ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಸದ್ಯ ಅಂಕಲಿ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡು ಆರೋಪಿ ಅನೀಲ್‍ನನ್ನು ಬಂಧಿಸಿ ತನಿಖೆಯನ್ನ ಕೈಗೊಂಡಿದ್ದಾರೆ.

  • ರಷ್ಯಾದ ಪಡೆಯಿಂದ ಕಿಡ್ನಾಪ್ ಆಗಿದ್ದ ಉಕ್ರೇನ್‍ ಮೇಯರ್ ಬಿಡುಗಡೆ

    ರಷ್ಯಾದ ಪಡೆಯಿಂದ ಕಿಡ್ನಾಪ್ ಆಗಿದ್ದ ಉಕ್ರೇನ್‍ ಮೇಯರ್ ಬಿಡುಗಡೆ

    ಕೀವ್: ಕಳೆದ ವಾರ ರಷ್ಯಾ ಪಡೆಯಿಂದ ಕಿಡ್ನಾಪ್ ಆಗಿದ್ದ ಉಕ್ರೇನ್‍ನ ಮೆಲಿಟೊಪೋಲ್‌ನ ಮೇಯರ್ ಇವಾನ್ ಫೆಡೋರೊವ್ ಅವರು ಬಿಡುಗಡೆಗೊಂಡಿದ್ದಾರೆ.

    ಈ ಬಗ್ಗೆ ಉಕ್ರೇನ್‍ನ ರಕ್ಷಣಾ ಸಚಿವಾಲಯ ಅಧಿಕೃತವಾದ ಮಾಹಿತಿ ಹಂಚಿಕೊಂಡಿದ್ದು, ಅಧ್ಯಕ್ಷ ವೊಲೊಡಿಮಿರ್ ಝೆಲೇನ್ಸ್ಕಿ ಅವರು ಮೆಲಿಟೊಪೋಲ್‍ನ ಮೇಯರ್‍ನೊಂದಿಗೆ ಮಾತನಾಡುತ್ತಿರುವ ತುಣುಕನ್ನು ಬಿಡುಗಡೆ ಮಾಡಿದೆ.

    ಈ ವೀಡಿಯೋದಲ್ಲಿ ಮೇಯರ್ ಅವರು ಝೆಲೆನ್ಸ್ಕಿಗೆ ಧನ್ಯವಾದ ತಿಳಿಸುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ಝೆಲೆನ್ಸ್ಕಿ ನಾವು ನಮ್ಮವರನ್ನು ಬಿಟ್ಟುಕೊಡುವುದಿಲ್ಲ ಎಂದು ಉತ್ತರಿಸಿದ್ದಾರೆ. ಮೇಯರ್‌ನ್ನು ಬಿಡುಗಡೆಗೊಳಿಸಲು ಉಕ್ರೇನ್ ರಷ್ಯಾದ 9 ಸೈನಿಕರನ್ನು ಹಸ್ತಾಂತರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

    ಫೆಡೋರೊವ್‍ನ್ನು ಕಳೆದ ವಾರ ರಷ್ಯಾ ಪಡೆಗಳು ಕಿಡ್ನಾಪ್ ಮಾಡಿದ್ದರು. ಫೆಡೋರೊವ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಝೆಲೆನ್ಸ್ಕಿಯ ಕಚೇರಿ ಈ ಹಿಂದೆ ಹೇಳಿತ್ತು ಆದರೆ ಯಾವುದೇ ವಿವರಗಳನ್ನು ನೀಡಿಲ್ಲ. ಫೆಡೋರೊವ್ ಅವರನ್ನು ಮಾರ್ಚ್ 11 ರಂದು ರಷ್ಯಾದ ಪಡೆಗಳು ಅಪಹರಿಸಿದ್ದವು. 10 ಆಕ್ರಮಿತರ ಗುಂಪು ಮೆಲಿಟೊಪೋಲ್‌ನ ಮೇಯರ್ ಇವಾನ್ ಫೆಡೋರೊವ್ ಅವರನ್ನು ಅಪಹರಿಸಿದೆ ಎಂದು ಉಕ್ರೇನ್ ಸಂಸತ್ ಟ್ವಿಟ್ಟರ್‌ನಲ್ಲಿ ತಿಳಿಸಿತ್ತು. ಇದನ್ನೂ ಓದಿ: ಸದಾ ಹೃದಯಲ್ಲಿ ಪುನೀತ್ ಸವಿ ನೆನಪುಗಳನ್ನು ನೆನೆಯೋಣ: ಸುಮಲತಾ

    ಮೇಯರ್ ಅವರು ನಗರದ ಬಿಕ್ಕಟ್ಟಿನ ಕೇಂದ್ರದಲ್ಲಿ ಮೂಲಸೌಕರ್ಯ ಪೂರೈಕೆಯಲ್ಲಿನ ಸಮಸ್ಯೆಗಳ ಬಗ್ಗೆ ವ್ಯವಹರಿಸುತ್ತಿದ್ದಾಗ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ. ಶುಕ್ರವಾರ ತಡರಾತ್ರಿ ವೀಡಿಯೋ ಸಂದೇಶವೊಂದರಲ್ಲಿ ಝೆಲೆನ್‍ಸ್ಕಿ ಅಪಹರಣವನ್ನು ದೃಢಪಡಿಸಿದ್ದಾರೆ.

  • ಉಕ್ರೇನ್‍ನ ಮತ್ತೊಬ್ಬ ಮೇಯರ್ ಕಿಡ್ನಾಪ್ ಮಾಡಿದ ರಷ್ಯಾ

    ಉಕ್ರೇನ್‍ನ ಮತ್ತೊಬ್ಬ ಮೇಯರ್ ಕಿಡ್ನಾಪ್ ಮಾಡಿದ ರಷ್ಯಾ

    ಕೀವ್: ರಷ್ಯಾ ಸೈನಿಕರು ಝಪೊರಿಝಿಯಾ ಪ್ರದೇಶದ ಡ್ನಿಪ್ರೊರುಡ್ನೆ ನಗರದ ಮೇಯರ್‌ನನ್ನು ಅಪಹರಿಸಿದ್ದಾರೆ ಎಂದು ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ತಿಳಿಸಿದ್ದಾರೆ.

    ಯೆವ್ಹೆನ್ ಮ್ಯಾಟ್ವೀವ್ ಅಪಹರಣರಾದ ಮೇಯರ್. ಇವರನ್ನು ರಷ್ಯಾ ಸೈನಿಕರು ಅಪಹರಿಸಿದ್ದಾರೆ ಎಂದು ಜಪೋರಿಝಿಯಾ ಪ್ರದೇಶದ ರಾಜ್ಯ ಆಡಳಿತದ ಮುಖ್ಯಸ್ಥ ಒಲೆಕ್ಸಾಂಡರ್ ಸ್ಟಾರುಖ್ ಭಾನುವಾರ ಬೆಳಿಗ್ಗೆ ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ.

    ಉಕ್ರೇನ್ ಮೇಲೆ ರಷ್ಯಾ ದಾಳಿ ಅಧಿಕವಾಗುತ್ತಿದೆ. ದ್ನಿಪ್ರೊರುಡ್ನೆಯ ಮೇಯರ್ ಅವರನ್ನು ಅಪಹರಿಸಲಾಗಿದೆ. ರಷ್ಯಾದ ವಿರುದ್ಧ ಸ್ಥಳೀಯ ನಾಗರಿಕರು ತಿರುಗಿಬಿದ್ದರುವುದಕ್ಕೆ ರಷ್ಯಾ ಸೈನಿಕರು ಈ ರೀತಿ ಮಾಡುತ್ತಿದ್ದಾರೆ. ಉಕ್ರೇನ್ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿ, ರಷ್ಯಾ ಹನಡೆಸುತ್ತಿರುವ ಇಂತಹ ಕೃತ್ಯವನ್ನುಉ ನಿಲ್ಲಿಸಲು ಎಲ್ಲರೂ ಒಗ್ಗೂಡಬೇಕು ಎಂದು ಸ್ಟಾರುಖ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

    ಶನಿವಾರ ಉಕ್ರೇನಿಯನ್ ಅಧಿಕಾರಿಗಳು ರಷ್ಯಾದ ಮಿಲಿಟರಿಯೊಂದಿಗೆ ಸಹಕರಿಸಲು ನಿರಾಕರಿಸಿದ ನಂತರ ದಕ್ಷಿಣ ಉಕ್ರೇನ್‌ನ ಮೆಲಿಟೊಪೋಲ್‌ನ ಮೇಯರ್ ಅವರನ್ನು ರಷ್ಯಾದ ಸೈನಿಕರು ಅಪಹರಿಸಿತ್ತು. ಈ ಬಗ್ಗೆ ಉಕ್ರೇನ್ ಸಂಸತ್ ಟ್ವೀಟ್‌ ಮಾಡಿ, ೧೦ ಆಕ್ರಮಿತರ ಗುಂಪು ಮೆಲಿಟೊಪೋಲ್‌ನ ಮೇಯರ್ ಇವಾನ್ ಫೆಡೋರೊವ್ ಅವರನ್ನು ಅಪಹರಿಸಿದೆ. ಇದರಿಂದಾಗಿ ರಷ್ಯಾ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಆರೋಪಿಸಿತ್ತು. ಇದನ್ನೂ ಓದಿ: ರಾಹುಲ್ ಗಾಂಧಿ ಕಾಂಗ್ರೆಸ್ ಮುಖ್ಯಸ್ಥರಾಗಬೇಕು: ಅಶೋಕ್ ಗೆಹ್ಲೋಟ್

  • ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

    ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

    ಕೀವ್‌: ದಕ್ಷಿಣ ಉಕ್ರೇನ್‌ನ ಮೆಲಿಟೊಪೋಲ್‌ನ ಮೇಯರ್‌ ಅವರನ್ನು ರಷ್ಯಾದ ಸೈನಿಕರು ಅಪಹರಿಸಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ತಿಳಿಸಿದ್ದಾರೆ.

    10 ಆಕ್ರಮಿತರ ಗುಂಪು ಮೆಲಿಟೊಪೋಲ್‌ನ ಮೇಯರ್‌ ಇವಾನ್‌ ಫೆಡೋರೊವ್‌ ಅವರನ್ನು ಅಪಹರಿಸಿದೆ ಎಂದು ಉಕ್ರೇನ್‌ ಸಂಸತ್‌ ಟ್ವಿಟ್ಟರ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ: ಉಕ್ರೇನ್ ಅಧ್ಯಕ್ಷ

    ಮೇಯರ್‌ ಅವರು ನಗರದ ಬಿಕ್ಕಟ್ಟಿನ ಕೇಂದ್ರದಲ್ಲಿ ಮೂಲಸೌಕರ್ಯ ಪೂರೈಕೆಯಲ್ಲಿನ ಸಮಸ್ಯೆಗಳ ಬಗ್ಗೆ ವ್ಯವಹರಿಸುತ್ತಿದ್ದಾಗ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ. ಶುಕ್ರವಾರ ತಡರಾತ್ರಿ ವೀಡಿಯೋ ಸಂದೇಶವೊಂದರಲ್ಲಿ ಝೆಲೆನ್‌ಸ್ಕಿ ಅಪಹರಣವನ್ನು ದೃಢಪಡಿಸಿದ್ದಾರೆ.

    ಇದು ನಿಸ್ಸಂಶಯವಾಗಿ ಆಕ್ರಮಣಕಾರರ ದೌರ್ಬಲ್ಯದ ಸಂಕೇತವಾಗಿದೆ. ಅವರು ಕಾನೂನುಬದ್ಧ ಸ್ಥಳೀಯ ಉಕ್ರೇನಿಯನ್‌ ಅಧಿಕಾರಿಗಳ ಪ್ರತಿನಿಧಿಗಳನ್ನು ಹಿಂಸಿಸುವ ಪ್ರಯತ್ನಿಸುತ್ತಿರುವ ಭಯೋತ್ಪಾದನೆಯ ಹೊಸ ಹಂತಕ್ಕೆ ತಲುಪಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ರಷ್ಯಾ ಉಕ್ರೇನ್ ಮೇಲೆ ವ್ಯಾಕ್ಯೂಮ್ ಬಾಂಬ್ ಹಾಕುವುದು ಖಚಿತ ಎಂದ ಬ್ರಿಟನ್

    ಮೇಯರ್‌ ಅಪಹರಣವು ನಿರ್ದಿಷ್ಟ ವ್ಯಕ್ತಿ, ಸಮುದಾಯ, ಉಕ್ರೇನ್‌ ವಿರುದ್ಧ ಮಾತ್ರವಲ್ಲ. ಪ್ರಜಾಪ್ರಭುತ್ವದ ವಿರುದ್ಧ ಎಸಗಿದ ಅಪರಾಧವಾಗಿದೆ. ರಷ್ಯಾದ ಆಕ್ರಮಣಕಾರಕ ಕೃತ್ಯಗಳು ಇಸ್ಲಾಮಿಕ್‌ ಸ್ಟೇಟ್‌ ಭಯೋತ್ಪಾದಕರಂತಿದೆ ಎಂದು ಟೀಕಿಸಿದ್ದಾರೆ.

  • ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳು ಪೊಲೀಸರ ಬಲೆಗೆ

    ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳು ಪೊಲೀಸರ ಬಲೆಗೆ

    ಹೊಸಕೋಟೆ(ಬೆಂಗಳೂರು): ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪಿಗಳನ್ನು ಬೆಂಗಳೂರು ಪೂರ್ವ ತಾಲೂಕಿನ ಅವಲಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ನಿಶಾಂತ್(25), ಸಂತೋಷ್ (24) ,ಮತ್ತು ನವೀನ್(23) ಬಂಧಿತರಾಗಿದ್ದಾರೆ. ಪೊಲೀಸರು ಅಪರಣವಾಗಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಗಂಡನ ವೀರ್ಯವನ್ನು ಕೇಕ್‍ನಲ್ಲಿ ಮಿಕ್ಸ್ ಮಾಡಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಶಿಕ್ಷಕಿಗೆ 40 ವರ್ಷ ಜೈಲು

    ಮಂಗಳವಾರ ಕುರುಡು ಸೊಣ್ಣೇನಹಳ್ಳಿ ಗ್ರಾಮದ ಅಲೆಕ್ಸಾಂಡರ್ (50)ನನ್ನು, ಆರೋಪಿಗಳು ಅಪರಣ ಮಾಡಿ ಹೆಂಡತಿ ರತ್ನಮ್ಮಗೆ ದೂರವಾಣಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ರತ್ನಮ್ಮ ಕೂಡಲೇ ಸ್ಥಳೀಯ ಅವಲಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಬೆಂಗಳೂರಿನ ಕೋರಮಂಗಲದ ಖಾಸಗಿ ಲಾಡ್ಜಿನಲ್ಲಿ ಆರೋಪಿಗಳು ಇರುವ ಖಚಿತ ಮಾಹಿತಿ ಪಡೆದುಕೊಂಡು ವೃತ್ತ ನಿರೀಕ್ಷಕ ಡಿಆರ್ ಪ್ರಕಾಶ್ ನೇತ್ರತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಇದನ್ನೂ ಓದಿ:  ಹಾರ್ಟ್ ಇಮೋಜಿ ಕಳುಹಿಸಿದ್ರೆ 20 ಲಕ್ಷ ದಂಡ

    MONEY

    ಬೆಂಗಳೂರು ಪೂರ್ವ ತಾಲೂಕಿನ ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ.

  • 2019ರಲ್ಲಿ ಕಾಣೆಯಾದ ಬಾಲಕಿ, ಮೆಟ್ಟಿಲುಗಳ ರಹಸ್ಯ ಕೋಣೆಯಲ್ಲಿ ಪತ್ತೆ!

    2019ರಲ್ಲಿ ಕಾಣೆಯಾದ ಬಾಲಕಿ, ಮೆಟ್ಟಿಲುಗಳ ರಹಸ್ಯ ಕೋಣೆಯಲ್ಲಿ ಪತ್ತೆ!

    ನ್ಯೂಯಾರ್ಕ್: ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಆರು ವರ್ಷದ ಬಾಲಕಿ ಮೆಟ್ಟಿಲುಗಳ ಕೆಳಗಿರುವ ಕತ್ತಲೆ ಕೋಣೆಯಲ್ಲಿ ಪತ್ತೆಯಾಗಿರುವ ಅಚ್ಚರಿ ಸುದ್ದಿ ನ್ಯೂಯಾರ್ಕ್‍ನಲ್ಲಿ ಪತ್ತೆಯಾಗಿದೆ.

    6 ವರ್ಷದ ಬಾಲಕಿಯನ್ನು ಕಿಂಬರ್ಲಿ ಮತ್ತು ಕಿರ್ಕ್ ನೋಡಿಕೊಳ್ಳುತ್ತಿದ್ದರು. ಆದರೆ ಅವರನ್ನು ಕಳೆದುಕೊಂಡ ನಂತರ ಬಾಲಕಿ ತಮ್ಮ ಪೋಷಕರ ಜೊತೆ ಇದ್ದಳು. ಆದರೆ 2019ರಲ್ಲಿ ಬಾಲಕಿ ಕಾಣೆಯಾಗಿದ್ದು, ಪೋಷಕರೇ ದೂರು ಕೊಟ್ಟಿದ್ದರು.

    ದೂರಿನ ಆಧಾರದ ಮೇಲೆ ಪೊಲೀಸರು ಬಾಲಕಿ ಮೊದಲು ಕಣ್ಮರೆಯಾದ ಸ್ಥಳದಿಂದ 150 ಮೈಲುಗಳಷ್ಟು(240 ಕಿಮೀ) ಹುಡುಕಾಡಿದ್ದರು. ನ್ಯೂಯಾಕ್ ನ ಸ್ಪೆನ್ಸರ್ ಪಟ್ಟಣದಲ್ಲಿರುವ ಬಾಲಕಿ ಮನೆಯಲ್ಲಿಯೂ ಹುಡುಕಾಟ ನಡೆಸಿದ್ದರು. ಆದರೆ ಬಾಲಕಿ ಬಗ್ಗೆ ಸಣ್ಣ ಸುಳಿವು ಸಹ ಪೊಲೀಸರಿಗೆ ತಿಳಿಯಲಿಲ್ಲ. ಇದನ್ನೂ ಓದಿ:  KSRTC ಬಸ್-ಬೈಕ್ ಮುಖಾಮುಖಿ ಡಿಕ್ಕಿ – ಇಬ್ಬರು ಕಾರ್ಮಿಕರ ಸಾವು!

    ಪೊಲೀಸರಿಗೆ ಅನುಮಾನ ಹೆಚ್ಚಾಗಿದ್ದು, ಮನೆಯಲ್ಲಿದ್ದ ಸ್ಟೆಪ್ ಬೋರ್ಡ್‍ಗಳನ್ನು ತೆಗೆದು ನೋಡಿದಾಗ ಅಲ್ಲಿ ನೆಲಮಾಳಿಗೆ ಇರುವುದು ತಿಳಿದುಬಂದಿದೆ. ನಂತರ ಅವರು ಕೆಳಗೆ ಹೋಗಿ ನೋಡಿದಾಗ ಅಪಹರಣಕೊಳ್ಳಗಾದ ಬಾಲಕಿ ಕತ್ತಲೆಯಿಂದ ಇದ್ದ, ನೀರು ತುಂಬಿಕೊಂಡಿದ್ದ ಕೋಣೆಯಲ್ಲಿ ಅವಳನ್ನು ಬಂಧಿಸಲಾಗಿತ್ತು ಎಂಬುದು ತಿಳಿದುಬಂದಿದೆ.

    ಪೆÇಲೀಸ್ ಮುಖ್ಯಸ್ಥ ಜೋಸೆಫ್ ಈ ಕುರಿತು ಮಾತನಾಡಿದ್ದು, ಬಾಲಕಿಯ ಅಪಹರಣಕಾರರು ಆಕೆಯನ್ನು ಇಷ್ಟು ದಿನ ಹೇಗೆ ಅಡಗಿಸಿಟ್ಟಿದ್ದರು ಎಂಬುದೇ ದಿಗ್ಭ್ರಮೆಯಾಗಿದೆ. ನಾವು ಮನೆಯನ್ನು ಹಲವು ಬಾರಿ ತನಿಖೆ ಮಾಡಿದ್ದೆವು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ

    ತಂದೆ ಸೇರಿದಂತೆ ಅವರ ಮನೆಯವರು ಎರಡು ವರ್ಷಗಳ ಕಾಲ ಬಾಲಕಿ ಎಲ್ಲಿದ್ದಾಳೆ ಎಂಬ ಸುಳಿವನ್ನು ಯಾರಿಗೂ ನೀಡಿರಲಿಲ್ಲ. ಯಾವಾಗಲೂ ಅವರು ನಮಗೆ ತಮ್ಮ ಮಗಳು ಎಲ್ಲಿದ್ದಾಳೆಂದು ತಿಳಿದಿಲ್ಲ ಎಂದು ಸುಳ್ಳು ಹೇಳಿದರು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಮದುವೆಗೂ ಮುನ್ನ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ ವಧು – ವೀಡಿಯೋ ವೈರಲ್

    US Girl, 6, Missing Since 2019 Found Alive In Secret Room Under Stairs

    ಬಾಲಕಿ ಆರೋಗ್ಯವಾಗಿದ್ದಾಳೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಪ್ರಸ್ತುತ ಬಾಲಕಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಬಾಲಕಿಯ ಪೋಷಕರ ಮೇಲೆಯೇ ಆರೋಪ ಕೇಳಿಬರುತ್ತಿದ್ದು, ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

  • ನಾಪತ್ತೆಯಾಗಿದ್ದ ಅರುಣಾಚಲ ಯುವಕನಿಗೆ ಚೀನಾ ಕಸ್ಟಡಿಯಲ್ಲಿ ಕರೆಂಟ್ ಶಾಕ್

    ನಾಪತ್ತೆಯಾಗಿದ್ದ ಅರುಣಾಚಲ ಯುವಕನಿಗೆ ಚೀನಾ ಕಸ್ಟಡಿಯಲ್ಲಿ ಕರೆಂಟ್ ಶಾಕ್

    ಇಟಾನಗರ: ಅಪಹರಣಕ್ಕೊಳಗಾಗಿದ್ದ ಅರುಣಾಚಲ ಮೂಲದ ಯುವಕನನ್ನು ಚೀನಾ ಬಿಡುಗಡೆ ಮಾಡಿದೆ. ಸೋಮವಾರ ತನ್ನ ಕುಟುಂಬ ಸೇರಿದ ಯುವಕನಿಗೆ ಅಪಹರಣಕ್ಕೊಳಗಾಗಿದ್ದಾಗ ಚೀನಾ ತನ್ನ ಕಸ್ಟಡಿಯಲ್ಲಿ ಒದ್ದು, ವಿದ್ಯುತ್ ಶಾಕ್ ನೀಡಿದೆ ಎಂದು ಆತನ ತಂದೆ ಆರೋಪಿಸಿದ್ದಾರೆ.

    ಸೋಮವಾರ ಸಂಜೆ ಅಪ್ಪರ್ ಸಿಯಾಂಗ್ ಜಿಲ್ಲೆಯ ಟ್ಯೂಟಿಂಗ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಸೇನೆ ಅಪಹರಣವಾಗಿದ್ದ ಯುವಕ ಮಿರಾಮ್ ಟ್ಯಾರೋನ್‌ನನ್ನು ತನ್ನ ಪೋಷಕರೊಂದಿಗೆ ಮತ್ತೆ ಸೇರಿಸಿದೆ ಎಂದು ಜಿಲ್ಲಾ ಉಪ ಆಯುಕ್ತ ಶಾಶ್ವತ್ ಸೌರಭ್ ತಿಳಿಸಿದ್ದರು.

    ಭಾರತಕ್ಕೆ ಮರಳಿದ ಮಿರಾಮ್‌ನನ್ನು ಸ್ಥಳೀಯ ಆಡಳಿತ ಮತ್ತು ಪಂಚಾಯಿತಿ ಮುಖಂಡರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಆದರೆ ಆತನ ತಂದೆ ಒಪಾಂಗ್ ಟ್ಯಾರೋನ್ ಇಡೀ ಘಟನೆಯಿಂದಾಗಿ ನನ್ನ ಮಗ ಹೆದರಿದ್ದಾನೆ ಹಾಗೂ ಮಾನಸಿಕವಾಗಿ ಕುಗ್ಗಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಯುವಕನನ್ನು ಬಿಡುಗಡೆ ಮಾಡಿದ ಚೀನಾ

    ಒಂದು ವಾರಕ್ಕೂ ಹೆಚ್ಚು ಕಾಲ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ) ಆತನನ್ನು ವಶದಲ್ಲಿಟ್ಟುಕೊಂಡಿತ್ತು. ಈ ಸಂದರ್ಭದಲ್ಲಿ ಅವರನ್ನು ಕಟ್ಟಿಹಾಕಿ ಕಣ್ಣು ಮುಚ್ಚಲಾಗಿತ್ತು ಎಂದು ತಂದೆ ಆರೋಪಿಸಿದ್ದಾರೆ.

    ಅವನು ಇನ್ನೂ ಆಘಾತದಲ್ಲಿಯೇ ಇದ್ದಾನೆ. ಅವನಿಗೆ ಬೆನ್ನಿಗೆ ಒದೆಯಲಾಗಿತ್ತು ಹಾಗೂ ಆರಂಭದಲ್ಲಿ ವಿದ್ಯುತ್ ಶಾಕ್ ನೀಡಲಾಗಿತ್ತು. ಅವನ ಕಣ್ಣುಗಳನ್ನು ಹೆಚ್ಚಿನ ಸಮಯ ಮುಚ್ಚಿಯೇ ಇರಿಸಿದ್ದರು ಹಾಗೂ ಅವನ ಕೈಗಳನ್ನು ಬಿಗಿಯಾಗಿ ಕಟ್ಟಿದ್ದರು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಡವರ ಕಲ್ಯಾಣವೇ ನಮ್ಮ ಆದ್ಯತೆ: ನರೇಂದ್ರ ಮೋದಿ

    ಊಟ ಹಾಗೂ ವಿಶ್ರಾಂತಿಯ ಸಮಯದಲ್ಲಿ ಮಾತ್ರ ಆತನ ಕೈಯನ್ನು ಬಿಡಿಸಲಾಗುತ್ತಿತ್ತು. ಊಟದಲ್ಲಿ ಯಾವುದೇ ತೊಂದರೆ ನೀಡಿಲ್ಲ ಎಂಬುದಾಗಿ ಒಪಾಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಮಿರಾಮ್ ಜನವರಿ 12ರಂದು ತನ್ನ ಸ್ನೇಹಿತನ್ನು ಭೇಟಿ ಮಾಡಲು ಚೀನಾ ಗಡಿ ಲುಂಗ್ಟಾ ಜೋರ್ ಪ್ರದೇಶದ ಬಳಿ ಹೋಗಿದ್ದಾಗ ಆತನನ್ನು ಚೀನಾ ಸೇನೆ ಅಪಹರಿಸಿತ್ತು. ಭಾರತ ಆತನನ್ನು ಹುಡುಕಿ, ಮರಳಿ ದೇಶಕ್ಕೆ ಬಿಡುಗಡೆ ಮಾಡಬೇಕೆಂದು ಕೋರಿದಾಗ ಚೀನಾ ಸೇನೆ ಜನವರಿ 27 ರಂದು ಮಿರಾಮ್‌ನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿತ್ತು.

  • ಸೇಡಿಗಾಗಿ ಆಸ್ಪತ್ರೆ ಸಿಬ್ಬಂದಿ ವೈದ್ಯರ ಮಗನನ್ನೇ ಅಪಹರಿಸಿ ಕೊಂದ್ರು

    ಸೇಡಿಗಾಗಿ ಆಸ್ಪತ್ರೆ ಸಿಬ್ಬಂದಿ ವೈದ್ಯರ ಮಗನನ್ನೇ ಅಪಹರಿಸಿ ಕೊಂದ್ರು

    ಲಕ್ನೋ: ದ್ವೇಷಕ್ಕಾಗಿ ವಜಾಗೊಂಡಿದ್ದ ಸಿಬ್ಬಂದಿ ವೈದ್ಯರೊಬ್ಬರ 8 ವರ್ಷದ ಮಗನನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ನಿಜಾಮ್ ಮತ್ತು ಶಾಹಿದ್ ಬಂಧಿತ ಆರೋಪಿಗಳು. ಉತ್ತರಪ್ರದೇಶದ ಬುಲಂದ್‍ಶಹರ್‍ನಲ್ಲಿ ವೈದ್ಯರೊಬ್ಬರು ನೋಂದಣಿಯಾಗದ ಕ್ಲಿನಿಕ್‍ನ್ನು ನಡೆಸುತ್ತಿದ್ದರು. ನಿಜಾಮ್ ಹಾಗೂ ಶಾಹಿದ್ ಇದೇ ಕ್ಲಿನಿಕ್‍ನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಅವರ ತಪ್ಪಿನಿಂದಾಗಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.

    ಇದರಿಂದ ಈ ಸಿಬ್ಬಂದಿ ವೈದ್ಯರ ಮೇಲೆ ದ್ವೇಷ ತೀರಿಸಿಕೊಳ್ಳಲು ಕಾಯುತ್ತಿದ್ದರು. ಅದರಲ್ಲೂ ಕ್ಲಿನಿಕ್ ಚೆನ್ನಾಗಿ ನಡೆಯುತ್ತಿರುವುದನ್ನು ನೋಡಿ ನಿಜಾಮ್ ಮತ್ತು ಶಾಹಿದ್ ಅವರ ಕೋಪ ಇನ್ನೂ ಹೆಚ್ಚಿತ್ತು. ಇದರಿಂದಾಗಿ ವೈದ್ಯನ ಮಗನನ್ನು ಅಪಹರಿಸಿದ್ದಾರೆ.

    ಇತ್ತ ಎಂಟು ವರ್ಷದ ಮಗ ಮನೆಗೆ ಬಾರದಿದ್ದರಿಂದ ಶುಕ್ರವಾರ ಅಪಹರಣದ ಬಗ್ಗೆ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಐದು ತಂಡಗಳು ಬಾಲಕನಿಗಾಗಿ ಹುಡುಕಾಟ ಆರಂಭಿಸಿವೆ.  ಇದನ್ನೂ ಓದಿ: ಬೀದಿ ನಾಯಿ ಮೇಲೆ ಕಾರು ಹತ್ತಿಸಿದ FIR ಏನಾಯ್ತು: ಸಿಎಂ, ತೇಜಸ್ವಿ ಸೂರ್ಯಗೆ ರಮ್ಯಾ ಪ್ರಶ್ನೆ

    ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಸುಮಾರು 60 ಗಂಟೆಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳನ್ನು ವಿಚಾರಣೆ ನಡೆಸಿದ ಪೊಲೀಸರು ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕತ್ತು ಹಿಸುಕಿ ಮಗುವಿನ ಬಾಯಿ ಬಿಗಿದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ: ಎಚ್. ವಿಶ್ವನಾಥ್