Tag: ಅಪಹರಣ

  • ಇಟ್ಟಿಗೆ ಕೊಳ್ಳೋ ನೆಪದಲ್ಲಿ ಕರೆಸಿ ಕಾರ್ಖಾನೆ ಮಾಲೀಕನ ಅಪಹರಣ – 5 ಕೋಟಿಗೆ ಬೇಡಿಕೆಯಿಟ್ಟ ದುಷ್ಕರ್ಮಿಗಳು

    ಇಟ್ಟಿಗೆ ಕೊಳ್ಳೋ ನೆಪದಲ್ಲಿ ಕರೆಸಿ ಕಾರ್ಖಾನೆ ಮಾಲೀಕನ ಅಪಹರಣ – 5 ಕೋಟಿಗೆ ಬೇಡಿಕೆಯಿಟ್ಟ ದುಷ್ಕರ್ಮಿಗಳು

    – ಅತ್ತ ಪತ್ನಿಗೆ ಕಾಲು ಆಪರೇಷನ್, ಮಗನಿಗೆ ಅನಾರೋಗ್ಯ; ಇತ್ತ ಉದ್ಯಮಿ ಕಿಡ್ನಾಪ್

    ಕೋಲಾರ: ಇಟ್ಟಿಗೆ ಕೊಳ್ಳುವ ನೆಪದಲ್ಲಿ ಉದ್ಯಮಿಯೊಬ್ಬರನ್ನು ಕಿಡ್ನಾಪ್ (Kidnap) ಮಾಡಿ ಬಿಡುಗಡೆಗೆ 5 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ (Kolar) ಜಿಲ್ಲೆಯ ಮಾಲೂರು ಪಟ್ಟಣದ ಮಾಲೂರು ಮಾರುತಿನಗರ ನಿವಾಸಿ ಬಾಬು ಕಿಡ್ನಾಪ್ ಆಗಿರುವ ಉದ್ಯಮಿ.

    ಮಾಲೂರು ತಾಲೂಕಿನ ಹೆಡಗಿನಬೆಲೆ ಬಳಿ ಇರುವ ಇಟ್ಟಿಗೆ ಕಾರ್ಖಾನೆ ಬಳಿ ಇಟ್ಟಿಗೆ ಬೇಕು ಎಂದು ಕರೆಯಿಸಿಕೊಂಡಿರುವ ದುಷ್ಕರ್ಮಿಗಳು ಬುಧವಾರ ಕಿಡ್ನಾಪ್ ಮಾಡಿದ್ದಾರೆ. ಬಾಬು ಅವರಿಗೆ ಸೇರಿದ ವಾಸವಿ ಇಟ್ಟಿಗೆ ಕಾರ್ಖಾನೆ ಬಳಿ ಬರುವಂತೆ ತಿಳಿಸಿರುವ ಆರೋಪಿಗಳು ಬಳಿಕ ಅವರನ್ನು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಬಾಬು ಕುಟುಂಬಸ್ಥರಿಗೆ ಕರೆ ಮಾಡಿ 5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಮಾಲೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ದುಷ್ಕರ್ಮಿಗಳ ಬೆನ್ನತ್ತಿದ್ದಾರೆ. ಪೊಲೀಸರು 3 ತಂಡಗಳ ರಚನೆ ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಪಹರಣಕಾರರ ಜಾಡು ಹಿಡಿಯಲು ಪೊಲೀಸರು ತೀವ್ರ ಶೋಧಕಾರ್ಯ ಮುಂದುವರಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ನಾಲ್ವರು ಅಪ್ರಾಪ್ತರಿಂದಲೇ 9ರ ಬಾಲಕಿ ಮೇಲೆ ಅತ್ಯಾಚಾರ

    ಕಿಡ್ನಾಪ್ ಆಗಿರುವ ಬಾಬು ಮನೆಯಲ್ಲಿ ಸಂಕಷ್ಟಗಳ ಸರಮಾಲೆ ಎದುರಾಗಿದ್ದು, ಬಾಬು ಪತ್ನಿಗೆ ಕಾಲು ಆಪರೇಷನ್ ಆಗಿ ನಡೆಯಲಾರದ ಪರಿಸ್ಥಿತಿ ಇದೆ. ಇತ್ತ ಮಗ ಮಂಜುನಾಥ್ ಅವರಿಗೆ ಪೆರಾಲಿಸಿಸ್ ಆಗಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ನಡುವೆ ದುಷ್ಕರ್ಮಿಗಳು ಪೋನ್ ಕರೆ ಮಾಡಿ ಹಣದ ಬೇಡಿಕೆ ಬಂದಿರುವುದು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.

    ಬಾಬು ಮನೆಯಲ್ಲಿ ಆತಂಕದ ಛಾಯೆ ಎದುರಾಗಿದ್ದು, ಪತ್ನಿ ವರಲಕ್ಷ್ಮಿ ಕುಟುಂಬದ ಸಂಕಷ್ಟ ನೆನೆದು ಕಣ್ಣೀರು ಹಾಕಿದ್ದಾರೆ. ಪತಿಯನ್ನು ಸುರಕ್ಷಿತವಾಗಿ ಕರೆತರುವಂತೆ ಮಾಲೂರು ಪೊಲೀಸರಿಗೆ ವರಲಕ್ಷ್ಮಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಇಟ್ಟಿಗೆಯಿಂದ ಜಜ್ಜಿ ಗರ್ಭಿಣಿ ಹತ್ಯೆ – ಆರೋಪಿಗಳು ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖ್ಯಾತ ಗಾಯಕ ಹನಿ ಸಿಂಗ್ ವಿರುದ್ಧ ಹಲ್ಲೆ, ಅಪಹರಣ ಕೇಸ್ ದಾಖಲು

    ಖ್ಯಾತ ಗಾಯಕ ಹನಿ ಸಿಂಗ್ ವಿರುದ್ಧ ಹಲ್ಲೆ, ಅಪಹರಣ ಕೇಸ್ ದಾಖಲು

    ಬಾಲಿವುಡ್ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಯೋ ಯೋ ಹನಿ ಸಿಂಗ್ (Yo Yo Honey Singh) ವಿರುದ್ಧ ಪ್ರತಿಷ್ಠಿತ ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಯ ಮಾಲೀಕರು ಹಲ್ಲೆ (Assault) ಹಾಗೂ ಅಪಹರಣ (Kidnapping) ಪ್ರಕರಣಗಳನ್ನು (Case) ದಾಖಲಿಸಿದ್ದಾರೆ. ತಮ್ಮನ್ನು ಹನಿ ಸಿಂಗ್ ಅಪಹರಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಹನಿ ಸಿಂಗ್ ಇದೇ ತಿಂಗಳು ಒಂದನೇ ತಾರೀಖಿನಂದು ಹೊಸ ಆಲ್ಬಂನ ಸಿಂಗಲ್ ಹಾಡೊಂದು ರಿಲೀಸ್ ಮಾಡಿದ್ದರು. ಎರಡನೇ ಹಾಡು ಏಪ್ರಿಲ್ 15ರಂದು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದಕ್ಕಾಗಿ ಪ್ರಚಾರ ಕೂಡ ಮಾಡಿದ್ದರು. ಹಣಕಾಸು ವ್ಯವಹಾರದಲ್ಲಿ ಗೊಂದಲವಾದ ಕಾರಣದಿಂದಾಗಿ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿ ಮಾಲೀಕ ವಿವೇಕ್ ರಾಮನ್ (Vivek Raman) ಮತ್ತು ಹನಿಸಿಂಗ್ ನಡುವೆ ಗಲಾಟೆ ಆಗಿತ್ತು. ಇದೇ ವಿಚಾರವಾಗಿ ವಿವೇಕ್ ಅವರನ್ನು ಅಪಹರಣ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ವಿವೇಕ್ ರಾಮನ್ ಕೊಟ್ಟಿರುವ ದೂರಿನ ಅನ್ವಯ ಮುಂಬೈನ ಬಿಕೆಸಿ ಪೊಲೀಸ್ ಠಾಣೆಯ ಅಧಿಕಾರಿಗಳು ಹನಿ ಸಿಂಗ್ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ದೂರು ದಾಖಲಾದ ಬೆನ್ನಲ್ಲೇ ಹನಿ ಸಿಂಗ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿವೇಕ್ ರಾಮನ್ ಬಗ್ಗೆ ಸಲ್ಲದ ಆರೋಪಗಳನ್ನು ಮಾಡಿದ್ದಾರಂತೆ. ಅದೆಲ್ಲವೂ ಸುಳ್ಳು ಎಂದಿದ್ದಾರೆ ವಿವೇಕ್. ಇದನ್ನೂ ಓದಿ:ಐಟಂ ಸಾಂಗ್‌ಗೆ ಸೊಂಟ ಬಳುಕಿಸಲು ದುಬಾರಿ ಸಂಭಾವನೆ ಬೇಡಿಕೆಯಿಟ್ಟ ‘ಕಬ್ಜ’ ಸುಂದರಿ

    ತಮ್ಮ ಮೇಲೆ ಆರೋಪ ಮಾಡಿರುವ ಹನಿ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ವಿವೇಕ್ ತಯಾರಿ ನಡೆಸುತ್ತಿದ್ದಾರೆ. ಅದಕ್ಕಾಗಿ ಅವರು ಕಾನೂನು ಸಲಹೆಯನ್ನೂ ಪಡೆಯುತ್ತಿದ್ದಾರಂತೆ. ಬಾಲಿವುಡ್ ನಲ್ಲಿ ವಿಶೇಷ ಗಾಯಕ ಎಂದೇ ಪ್ರಸಿದ್ಧಿಯಾಗಿರುವ ಯೋ ಯೋ ಹನಿ ಸಿಂಗ್, ಸಲ್ಲದ ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ.

  • ಹುಡುಗಿಯರನ್ನು ಚುಡಾಯಿಸಿಬೇಡ ಎಂದಿದ್ದಕ್ಕೆ ಅಪಹರಿಸಿ ಹತ್ಯೆ

    ಹುಡುಗಿಯರನ್ನು ಚುಡಾಯಿಸಿಬೇಡ ಎಂದಿದ್ದಕ್ಕೆ ಅಪಹರಿಸಿ ಹತ್ಯೆ

    ಮೈಸೂರು: ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು. ವ್ಯಕ್ತಿಯನ್ನು ಅಪಹರಿಸಿ (Kidnap) ಕೊಲೆ ಮಾಡಿದ ವಿಲಕ್ಷಣ ಘಟನೆಯೊಂದು ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ.

    ಮೃತನನ್ನು ಸಯ್ಯದ್ ಮನ್ಸೂರ್ (32) ಎಂದು ಗುರುತಿಸಲಾಗಿದೆ. ಇವರು ಮೈಸೂರಿ (Mysuru) ನ ಕಲ್ಯಾಣಗಿರಿ ನಿವಾಸಿ. ಭಾನುವಾರದಿಂದ ಮನ್ಸೂರ್ ನಾಪತ್ತೆಯಾಗಿದ್ದು, ಎನ್ ಆರ್ ಮೊಹಲ್ಲಾದ ಜಬೀ ಸೈಯದ್ ಝೈನುಲ್ಲಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಮನ್ಸೂರ್ ಕೊಲೆಯಾಗಿ ಮೃತದೇಹ ಪತ್ತೆಯಾಗಿದೆ.

    ಕೊಲೆಯಾಗಿದ್ದು ಯಾಕೆ..?: ಜಬೀ ಎಂಬಾತ ಹುಡುಗಿಯರನ್ನು ಚುಡಾಯಿಸುತ್ತಿದ್ದನು. ಇದನ್ನು ಗಮನಿಸಿದ್ದ ಮನ್ಸೂರ್, ಜಬೀಗೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಜಬೀ, ಮನ್ಸೂರ್‍ನನ್ನು ಕಿಡ್ನಾಪ್ ಮಾಡಿದ್ದಾನೆ. ನಂತರ ಜಬೀ ಹಾಗೂ ಝೈನುಲ್ಲಾ ಮತ್ತೆ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ. ಇದೀಗ ಪಾಂಡವಪುರ ನಾಲೆಯಲ್ಲಿ ಮನ್ಸೂರ್ ಶವ ಪತ್ತೆಯಾಗಿದೆ.

    ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಎನ್ ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕರ್ತವ್ಯಕ್ಕೆ ರಜೆ ಹಾಕಿ ಊರಿಗೆ ಬಂದಿದ್ದ ಯೋಧ ಆತ್ಮಹತ್ಯೆ!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಂಡ್ಯದಲ್ಲಿ ಮಗು ಅಪಹರಣಕ್ಕೆ ಮುಸುಕುದಾರಿಗಳು ಯತ್ನ

    ಮಂಡ್ಯದಲ್ಲಿ ಮಗು ಅಪಹರಣಕ್ಕೆ ಮುಸುಕುದಾರಿಗಳು ಯತ್ನ

    ಮಂಡ್ಯ: ಸಕ್ಕರೆ ನಾಡಿನಲ್ಲಿ ಮತ್ತೆ ಮಕ್ಕಳ ಕಳ್ಳರ ಆತಂಕ ಶುರುವಾಗಿದ್ದು, ಮನೆಯ ಮುಂದೆ ಇದ್ದ ಐದು ವರ್ಷದ ಮಗುವನ್ನು ಇಬ್ಬರು ಮುಸುಕುದಾರಿಗಳು ಅಪಹರಣ (Baby Kidnap) ಮಾಡಲು ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಜರುಗಿದೆ.

    ಕಿರುಗಾವಲು ಗ್ರಾಮದ 5 ವರ್ಷದ ಮಗು ಕಳ್ಳತನಕ್ಕೆ ಇಬ್ಬರು ಮುಸುಕುದಾರಿಗಳು ಬಂದಿದ್ದು, ಕಳ್ಳರನ್ನು ಕಂಡು ಮಗು ಕಿರುಚಿದ್ದು, ಮಗುವಿನ ಶಬ್ದ ಕೇಳಿ ಮುಸುಕುದಾರಿಗಳು ಪರಾರಿಯಾಗಿದ್ದಾರೆ. ಸೋಮವಾರ ಮಧ್ಯಾಹ್ನ ಪೌಡರ್ ಮಾರಾಟಕ್ಕೆ ಇಬ್ಬರು ಕಿರುಗಾವಲು ಗ್ರಾಮಕ್ಕೆ ಬಂದಿದ್ದು, ಈ ವೇಳೆ ಮಹಿಳೆಯರನ್ನು ಪೌಡರ್ ತೆಗೆದುಕೊಳ್ಳುತ್ತೀರಾ ಎಂದು ಕೇಳಿದ್ದಾರೆ. ಮಹಿಳೆಯರು ನಮಗೆ ಯಾವ ಪೌಡರ್ ಬೇಡಾ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹರತಾಳು ಹಾಲಪ್ಪ ಬೀಗರ ಕಾರಿಗೆ ಇಬ್ಬರು ಬಲಿ- ನಾಲ್ವರಿಗೆ ಗಾಯ, ಚಾಲಕ ವಶಕ್ಕೆ

    ಮತ್ತೆ ಸಂಜೆಯ ವೇಳೆ ಅದೇ ಬೀದಿಯಲ್ಲಿ ಬೈಕ್‍ನಲ್ಲಿ ಇಬ್ಬರು ಓಡಾಡಿದ್ದಾರೆ. ಬಳಿಕ ರಾತ್ರಿ 8 ಗಂಟೆಯ ಸುಮಾರಿಗೆ ಸ್ಪ್ಲೆಂಡರ್ ಬೈಕ್‍ನಲ್ಲಿ ಬಂದ ಇಬ್ಬರು ಮುಸುಕುದಾರಿಗಳು ಮನೆಯ ಮುಂದೆ ಇದ್ದ ಮಗು ಅಪಹರಣಕ್ಕೆ ಯತ್ನಿಸಿದ್ದಾರೆ. ಈ ವೇಳೆ ಮಗು ಮುಸುಕುದಾರಿಗಳನ್ನು ಕಂಡು ಕಿರುಚಿದ್ದು ಮಗುವಿನ ಶಬ್ದ ಕೇಳಿ ಮುಸುಕುದಾರಿಗಳು ಪರಾರಿಯಾಗಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಮಗುವಿನ ಪೋಷಕರು ಮಗುವನ್ನು ಸಮಾಧಾನ ಪಡಿಸಿದ್ದಾರೆ. ಮಗು ಅಪಹರಣಕ್ಕೆ ಯತ್ನಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಪೋಷಕರು ಕಿರುಗಾವಲು ಪೊಲೀಸ್ ಠಾಣೆ (Kirugavalu Police Station) ಗೆ ದೂರನ್ನು ಸಹ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಲಕನ ಕಿಡ್ನಾಪ್ – ಸಿಂಗಂ ಸ್ಟೈಲ್‌ನಲ್ಲಿ ಬಾಲಕನನ್ನು ರಕ್ಷಿಸಿದ ಸಿಪಿಐ

    ಬಾಲಕನ ಕಿಡ್ನಾಪ್ – ಸಿಂಗಂ ಸ್ಟೈಲ್‌ನಲ್ಲಿ ಬಾಲಕನನ್ನು ರಕ್ಷಿಸಿದ ಸಿಪಿಐ

    ಕಲಬುರಗಿ: ಹೆತ್ತವರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು. ಶಾಲೆಗೆ ಹೋಗುತ್ತಿದ್ದ ಮಗನನ್ನು ಅಪಹರಣ (Kidnapping) ಮಾಡಿದ್ದ ದುರುಳರು, 10 ಲಕ್ಷ ರೂ. ಹಣಕ್ಕೆ ಡಿಮಾಂಡ್ ಮಾಡಿದ್ದರು. ಪೊಲೀಸರಿಗೆ (Police) ಮಾಹಿತಿ ನೀಡಿದರೆ ನಿಮ್ಮ ಮಗ ಜೀವಂತ ಸಿಗೋದಿಲ್ಲ ಅನ್ನೋ ಬೆದರಿಕೆಯನ್ನೂ ಹಾಕಿದ್ದರು. ಆದರೆ ಪೊಲೀಸರ ಮೇಲೆ ವಿಶ್ವಾಸ ಹೊಂದಿದ್ದ ಸರ್ಕಾರಿ ಶಾಲಾ ಶಿಕ್ಷಕ, ಕಲಬುರಗಿ ನಗರದ ವಿಶ್ವವಿದ್ಯಾಲಯ ಠಾಣೆಯ ಸಿಪಿಐ ಅರುಣ್ ಮುರಗುಡಿ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು, ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕಲಬುರಗಿ (Kalaburagi) ನಗರದ ಸಿದ್ದೇಶ್ವರ ಕಾಲೋನಿಯ ನಿವಾಸಿಯಾಗಿರುವ ಗುರುನಾಥ್ ರಾಠೋಡ್ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನಾಗೂರು ಗ್ರಾಮದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮೂವರು ಮಕ್ಕಳಿದ್ದು, ಹಿರಿಯ ಮಗ, ಕಲಬುರಗಿ ನಗರದ ಖಾಸಗಿ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದಾನೆ. ಬುಧವಾರ ಬೆಳಗ್ಗೆ 9 ಗಂಟೆ ವೇಳೆಗೆ ಗುರುನಾಥ್ ಅವರ ಪುತ್ರ ಸುದರ್ಶನ್, ಶಾಲೆಗೆ ಹೋಗಲು ಮನೆಯಿಂದ ಹೊರಬಂದಿದ್ದ. ಬಾಲಕ (Boy) ಶಾಲಾ ಬಸ್‌ಗಾಗಿ ಕಾಯುತ್ತಿದ್ದಾಗ, ಆಟೋದಲ್ಲಿ ಬಂದಿದ್ದ ದುರುಳರು ಇಎಸ್‌ಐ ಆಸ್ಪತ್ರೆಯ ವಿಳಾಸ ಕೇಳೋ ನೆಪದಲ್ಲಿ ಬಾಲಕನನ್ನು ಮಾತನಾಡಿಸಿ, ಆಟೋದಲ್ಲಿ ಅಪಹರಿಸಿಕೊಂಡು ಹೋಗಿದ್ದರು.

    ಆಟೋದಲ್ಲಿ ಬಾಲಕನನ್ನು ಕರೆದುಕೊಂಡು ಹೋದ ದುಷ್ಕರ್ಮಿಗಳು ಸ್ವಲ್ಪ ಹೊತ್ತಿನ ನಂತರ ಶಿಕ್ಷಕ ಗುರುನಾಥ್ ಅವರ ಮೊಬೈಲ್‌ಗೆ ಕರೆ ಮಾಡಿ, 10 ಲಕ್ಷ ಹಣವನ್ನು ನೀಡಬೇಕು, ಪೊಲೀಸರಿಗೆ ಮಾಹಿತಿ ನೀಡಿದರೆ ನಿಮ್ಮ ಮಗ ಜೀವಂತ ಉಳಿಯಲ್ಲ ಅಂತ ಬೆದರಿಕೆ ಹಾಕಿದ್ದರು. ಇತ್ತ ಮಗ ಶಾಲೆಯ ಬಸ್ ಹತ್ತಿಲ್ಲ. ಆತನನ್ನು ಯಾರೋ ಕರೆದುಕೊಂಡು ಹೋಗಿದ್ದಾರೆ ಅನ್ನೋದು ಶಿಕ್ಷಕ ಗುರುನಾಥ್‌ಗೆ ಮನದಟ್ಟಾಗಿತ್ತು.

    ಅಪಹರಣಕಾರರು ಹೇಳಿದ ಹಾಗೆ ಹಣ ನೀಡಬೇಕಾ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕಾ ಅನ್ನೋ ಬಗ್ಗೆ ಗೊಂದಲದಲ್ಲಿದ್ದ ಶಿಕ್ಷಕ ಗುರುನಾಥ್, ಕೊನೆಗೆ ಪೊಲೀಸರಿಗೆ ಮಾಹಿತಿ ನೀಡುವುದೇ ಉತ್ತಮ ಅಂತ ತಿಳಿದು ಕಲಬುರಗಿ ನಗರದಲ್ಲಿರುವ ವಿಶ್ವವಿದ್ಯಾಲಯ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಿಪಿಐ ಅರುಣ್ ಮುರಗುಡಿ ಅವರಿಗೆ ಕರೆ ಮಾಡಿ, ಮಗನ ಅಪಹರಣದ ಬಗ್ಗೆ ತಿಳಿಸಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಮಾಡಿದ ಮೊದಲ ಕೆಲಸ, ದೂರು ದಾಖಲಾಗಬೇಕು ಅಥವಾ ತಂದೆ ಠಾಣೆಗೆ ಬರಬೇಕು ಅಂತ ಅಲ್ಲ. ಬದಲಾಗಿ ಮೊದಲು ಬಾಲಕನನ್ನು ರಕ್ಷಣೆ ಮಾಡಬೇಕು ಅಂತ ಫೀಲ್ಡಿಗಿಳಿದಿದ್ದು.

    ವೃದ್ಧನಿಗೆ ಯಾಮಾರಿಸಿದ ಆರೋಪಿಗಳು: 10 ವರ್ಷದ ಬಾಲಕನನ್ನು ಅಪಹರಣ ಮಾಡಿದ್ದ ದುಷ್ಕರ್ಮಿಗಳು, ಶಿಕ್ಷಕ ಗುರುನಾಥ್‌ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪೊಲೀಸರು ಕರೆ ಮಾಡಿದ ನಂಬರ್ ಪರಿಶೀಲಿಸಿದಾಗ ಗೊತ್ತಾಗಿದ್ದು, ಅದು ಯಾರದೋ ವೃದ್ಧರೊಬ್ಬರದ್ದು ಅಂತ. ಹೌದು, ಕೆಲ ದಿನಗಳ ಹಿಂದೆ ಕಲಬುರಗಿ ನಗರಕ್ಕೆ ಬಂದಾಗ ವೃದ್ಧರೊಬ್ಬರು ವ್ಯಕ್ತಿಯೊಬ್ಬನ ಕೈಗೆ ತನ್ನ ಬಳಿಯಿದ್ದ ಫೋನ್ ನೀಡಿ, ನಂಬರ್ ವೊಂದಕ್ಕೆ ಕರೆ ಮಾಡುವಂತೆ ಹೇಳಿದ್ದರು. ಆದರೆ ಆರೋಪಿ ವೃದ್ಧನ ಮೊಬೈಲ್‌ನಲ್ಲಿದ್ದ ಸಿಮ್ ತೆಗೆದುಕೊಂಡು ಮೊಬೈಲ್ ಮಾತ್ರ ನೀಡಿದ್ದ. ಅದೇ ಸಿಮ್ ಬಳಸಿ, ಶಿಕ್ಷಕ ಗುರುನಾಥ್‌ಗೆ ಕರೆ ಮಾಡಿ 10 ಲಕ್ಷಕ್ಕೆ ಡಿಮಾಂಡ್ ಮಾಡಿದ್ದ.

    ಕೆಲವೇ ಗಂಟೆಯಲ್ಲಿ ಬಾಲಕನ ರಕ್ಷಣೆ: ಸಿನಿಮಾ ಶೈಲಿಯಲ್ಲಿ ಬಾಲಕನ ಅಪಹರಣ ನಡೆದಾಗ, ಪೊಲೀಸರು ಕೂಡಾ ಸಿನಿಮೀಯ ರೀತಿಯಲ್ಲಿಯೇ ಬಾಲಕನ ರಕ್ಷಣೆಗೆ ಮುಂದಾಗಿದ್ದರು. ಅದರಂತೆ ಸಿವಿಲ್ ಡ್ರೆಸ್‌ನಲ್ಲಿ ಖಾಸಗಿ ವಾಹನಗಳಲ್ಲಿ ಇಡೀ ಕಲಬುರಗಿ ನಗರದ ಸುತ್ತಮುತ್ತ ಗಸ್ತು ಆರಂಭಿಸಿದ್ದರು. ಮತ್ತೊಂದೆಡೆ ಬಾಲಕನ ತಂದೆಯ ಜೊತೆ ಸಂಪರ್ಕದಲ್ಲಿದ್ದರು. ಹಣ ತರುತ್ತಿದ್ದೇವೆ, ಎಲ್ಲಿಗೆ ಬರಬೇಕು ಅಂತ ಕೇಳಿದ್ದಾಗ ದುಷ್ಕರ್ಮಿಗಳು ಕಲಬುರಗಿ ತಾಲೂಕಿನ ಪಾಳಾ ಬಳಿಯಿರುವ ಶಾಲೆಯೊಂದರಲ್ಲಿ ಹಣ ಇಡಿ ಎಂದು ಹೇಳಿದ್ದರು. ಆದರೆ ಅಷ್ಟರೊಳಗಾಗಿ ಪೊಲೀಸರು ತಮ್ಮನ್ನು ಫಾಲೋ ಮಾಡುತ್ತಿದ್ದಾರೆ ಅನ್ನೋ ಸುದ್ದಿ ತಿಳಿದ ಅಪಹರಣಕಾರರು ಬಾಲಕನನ್ನು ಬಿಟ್ಟು ಪರಾರಿಯಾಗಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿ ಅನಧಿಕೃತ ಹಣ ಸಾಗಾಟ – 10.50 ಲಕ್ಷ ಪೊಲೀಸರ ವಶಕ್ಕೆ

    ಪಾಳಾ ಗ್ರಾಮದ ಹೊರವಲಯದಲ್ಲಿ ನಿರ್ಜನ ಪ್ರದೇಶದಲ್ಲಿ ಬಾಲಕನನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಇತ್ತ ಬಾಲಕ ಓಡೋಡಿ ಬರ್ತಾಯಿರೋದನ್ನು ನೋಡಿದ್ದ ಕೃಷಿಕರೊಬ್ಬರು ಶಿಕ್ಷಕ ಗುರುನಾಥ್‌ಗೆ ಕರೆ ಮಾಡಿ, ತಮ್ಮ ಮಗ ಇರೋ ಬಗ್ಗೆ ಹೇಳಿದ್ದಾರೆ. ಕೂಡಲೇ ಸ್ಥಳಕ್ಕೆ ಹೋದ ಪೊಲೀಸರು, ಬಾಲಕನನ್ನು ರಕ್ಷಿಸಿ, ಹೆತ್ತವರ ಕೈಗೊಪ್ಪಿಸಿದ್ದಾರೆ. ಸಂಜೆ 4 ಗಂಟೆಯಷ್ಟೊತ್ತಿಗೆ ಬಾಲಕ, ಹೆತ್ತವರ ಮಡಿಲು ಸೇರಿದ್ದಾನೆ.

    ನಾನು ನಿಜವಾಗಿಯೂ ಪೊಲೀಸರ ಬಗ್ಗೆ ಮೊದಲು ಉತ್ತಮ ಅಭಿಪ್ರಾಯ ಹೊಂದಿರಲಿಲ್ಲ. ಆದರೆ ತನ್ನ ಮಗನನ್ನು ಅಪಹಪರಣ ಮಾಡಿದಾಗ ವಿಶ್ವವಿದ್ಯಾಲಯ ಠಾಣೆಯ ಸಿಪಿಐ ಅರುಣ್ ಮುರಗುಡಿ ಮತ್ತು ಇಡೀ ನಗರ ಪೊಲೀಸರ ಕಾರ್ಯ ನೋಡಿ, ನನ್ನ ಅಭಿಪ್ರಾಯವೇ ಬದಲಾಗಿದೆ. ಅವರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ಅಂತ, ಸರ್ಕಾರಿ ಶಾಲೆಯ ಶಿಕ್ಷಕ ಗುರುನಾಥ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ, ಧನ್ಯವಾದಗಳನ್ನು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ಜಾತಿ ಸಮೀಕರಣದ ಬಹುದೊಡ್ಡ ಚಕ್ರವ್ಯೂಹ – ನಡ್ಡಾ ಯಾತ್ರೆಯಲ್ಲಿ 2 ದಿನ 5 ಸಮುದಾಯಗಳೇ ಟಾರ್ಗೆಟ್!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫಿಲ್ಮಿ ಸ್ಟೈಲ್‌ನಲ್ಲಿ ಯುವತಿ ಅಪಹರಣ – ಕಿಡ್ನಾಪರ್‌ನನ್ನೇ ಮದುವೆಯಾದ್ಲು

    ಫಿಲ್ಮಿ ಸ್ಟೈಲ್‌ನಲ್ಲಿ ಯುವತಿ ಅಪಹರಣ – ಕಿಡ್ನಾಪರ್‌ನನ್ನೇ ಮದುವೆಯಾದ್ಲು

    ಹೈದರಾಬಾದ್: 18 ವರ್ಷದ ಯುವತಿಯೊಬ್ಬಳನ್ನು (Woman) ಆಕೆಯ ತಂದೆಯ ಸಮ್ಮುಖದಲ್ಲೇ ನಾಲ್ವರು ಯುವಕರು ಮಂಗಳವಾರ ಫಿಲ್ಮಿ ಸ್ಟೈಲ್‌ನಲ್ಲಿ ಬಂದು ಅಪಹರಣ (Abduction) ಮಾಡಿದ್ದರು. ಆದರೆ ಘಟನೆ ಇದೀಗ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಯುವತಿ ಕಿಡ್ನಾಪರ್‌ನನ್ನೇ (Kidnapper) ಮದುವೆಯಾಗಿದ್ದಾಳೆ.

    ತೆಲಂಗಾಣದಲ್ಲಿ (Telangana) ನಡೆದ ಅಪಹರಣ ಪ್ರಕರಣ ನಿಜವಾಗಿಯೂ ಕಿಡ್ನಾಪ್ (Kidnap) ಆಗಿರಲಿಲ್ಲ. ತನ್ನ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಯುವತಿ ತನ್ನ ಪ್ರೇಮಿಯನ್ನು ಮದುವೆಯಾಗಲು ತಾನೇ ಕಿಡ್ನಾಪ್ ಮಾಡಿಸಿದ ವಿಚಾರ ಬೆಳಕಿಗೆ ಬಂದಿದೆ. ಯುವತಿ ತನ್ನನ್ನು ಕಿಡ್ನಾಪ್ ಮಾಡಿದ ಯುವಕನನ್ನೇ ಮದುವೆಯಾಗಿದ್ದಾಳೆ (Marriage).

    ಚಂದೂರ್ತಿ ಮಂಡಲದ ಮೂಡೆಪಲ್ಲಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಸುಮಾರು 5:30ರ ವೇಳೆಗೆ ಯುವತಿ ತನ್ನ ತಂದೆಯೊಂದಿಗೆ ದೇವಾಲಯಕ್ಕೆ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ನಾಲ್ವರು ಯುವಕರು ಯುವತಿಯನ್ನು ಅಪಹರಣ ಮಾಡಿದ್ದರು. ಯುವಕರು ಬಲವಂತವಾಗಿ ಯುವತಿಯನ್ನು ಎಳೆದೊಯ್ದು, ಕಾರಿನಲ್ಲಿ ಕುಳ್ಳಿರಿಸಿ ಪರಾರಿಯಾಗಿರುವುದು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

    ಇದಾದ ಬಳಿಕ ಯುವತಿ ತನ್ನನ್ನು ಕಿಡ್ನಾಪ್ ಮಾಡಿದ ಯುವಕರಲ್ಲಿ ಒಬ್ಬನಾದ ತನ್ನ ಪ್ರೇಮಿಯನ್ನು ಮದುವೆಯಾಗಿದ್ದಾಳೆ. ಮದುವೆಯ ಬಳಿಕ ಯುವತಿ ವೀಡಿಯೋವೊಂದನ್ನು ಮಾಡಿದ್ದು, ನಾನು ಈ ವ್ಯಕ್ತಿಯನ್ನು ಕಳೆದ 4 ವರ್ಷದಳಿಂದ ಪ್ರೀತಿಸುತ್ತಿದ್ದೇನೆ. 1 ವರ್ಷದ ಹಿಂದೆಯೇ ನಮ್ಮ ಮದುವೆಯೂ ಆಗಿತ್ತು. ಆದರೆ ನಾನು ಅಪ್ರಾಪ್ತೆಯಾಗಿದ್ದರಿಂದ ನಾವು ಒಟ್ಟಿಗೆ ಇರಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದ್ದಾಳೆ. ಇದನ್ನೂ ಓದಿ: ಕಾರಿನಲ್ಲೇ ನೈಟ್ರೋಜನ್‌ ಸಿಲಿಂಡರ್‌ ಲೀಕ್‌ ಮಾಡ್ಕೊಂಡು ಸೀನಿಯರ್‌ ಟೆಕ್ಕಿ ಆತ್ಮಹತ್ಯೆ

    ನನ್ನ ಪೋಷಕರು ಆತನ ವಿರುದ್ಧ ಪ್ರಕರಣ ದಾಖಲಿಸಿ, ನನ್ನನ್ನು ಮನೆಗೆ ಕರೆದೊಯ್ದಿದ್ದರು. ಆತ ದಲಿತ ಕುಟುಂಬದವನಾಗಿದ್ದರಿಂದ ನಮ್ಮ ಮದುವೆಯನ್ನು ಮನೆಯಲ್ಲಿ ಒಪ್ಪಿಕೊಂಡಿರಲಿಲ್ಲ. ನನಗೆ ಮನೆಯಲ್ಲಿ ಬೇರೆ ಮದುವೆಯನ್ನೂ ಏರ್ಪಡಿಸಲಾಗಿತ್ತು. ಈ ವೇಳೆ ನಾನು ಆತನನ್ನು ಓಡಿಹೋಗಲು ಕೇಳಿಕೊಂಡೆ. ಇದಕ್ಕೆ ಆತ ಒಪ್ಪಿದ. ನಮ್ಮ ಕುಟುಂಬದಿಂದ ನಮಗೆ ಬೆದರಿಕೆ ಇರುವುದರಿಂದ ನಮಗೆ ರಕ್ಷಣೆಯ ಅಗತ್ಯವಿದೆ ಎಂದು ಯುವತಿ ವೀಡಿಯೋದಲ್ಲಿ ಹೇಳಿದ್ದಾಳೆ.

    MARRIAGE

    ಅಪಹರಣವಾದ ಬಳಿಕ ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಇದನ್ನು ವರದಿ ಮಾಡಲಾಗಿತ್ತು. ಅಪಹರಣದ ವೇಳೆ ಯುವತಿಯ ತಂದೆ ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದು ವೀಡಿಯೋದಲ್ಲಿ ಕಂಡುಬಂದಿದೆ. ನನ್ನ ಮಗಳನ್ನು ಕಿಡ್ನಾಪ್ ಮಾಡುವುದಕ್ಕೂ ಮೊದಲು ಆರೋಪಿಗಳು ನನಗೆ ಥಳಿಸಿದ್ದಾರೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ. ಇದನ್ನೂ ಓದಿ: ಸ್ನೇಹಿತರನ್ನು ಮೆಚ್ಚಿಸಲು ಪಾರ್ಟಿಗೆ ಗನ್ ತೆಗೆದುಕೊಂಡು ಹೋದ ವ್ಯಕ್ತಿ ಪೊಲೀಸರಿಗೆ ಅತಿಥಿಯಾದ

    ಯುವತಿ ತಂದೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ತನಿಖೆ ವೇಳೆ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತ ಮೂಲದ ಬಾಲಕಿಯ ಅಪಹರಣ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಪ್ರತಿಭಟನೆ

    ಭಾರತ ಮೂಲದ ಬಾಲಕಿಯ ಅಪಹರಣ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಪ್ರತಿಭಟನೆ

    ಕೇಪ್ ಟೌನ್: ದಕ್ಷಿಣ ಆಫ್ರಿಕಾದ (South Africa) ಕೇಪ್ ಟೌನ್‌ನಲ್ಲಿ (Cape Town) 8 ವರ್ಷದ ಭಾರತೀಯ ಮೂಲದ ಬಾಲಕಿಯ (Girl) ಅಪಹರಣ (Abduction) ಪ್ರಕರಣದ ತನಿಖೆಯಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿರುವುದಕ್ಕೆ ನಗರದ ನಿವಾಸಿಗಳು ಭಾರೀ ಪ್ರತಿಭಟನೆ ನಡೆಸಿದ್ದಾರೆ.

    ನಗರದ ರೈಲ್ಯಾಂಡ್ಸ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅಬಿರಾ ದೇಖ್ತಾ (8) ನವೆಂಬರ್ 4 ರಂದು ಬೆಳಗ್ಗೆ ಇನ್ನೊಬ್ಬ ವಿದ್ಯಾರ್ಥಿನಿಗಾಗಿ ಕಾಯುತ್ತಿದ್ದಾಗ ಕೆಲವು ಅಪರಿಚಿತ ವ್ಯಕ್ತಿಗಳು ಅಲ್ಲಿಗೆ ಬಂದು, ಆಕೆಯ ಶಾಲಾ ವಾಹನದಿಂದ ಅಪಹರಿಸಿದ್ದರು.

    ಬಾಲಕಿಯ ಪೋಷಕರು ಕೆಲವು ವರ್ಷಗಳ ಹಿಂದೆ ಭಾರತದಿಂದ ಕೇಪ್ ಟೌನ್‌ನಲ್ಲಿ ನೆಲೆಸಿದ್ದರು. ಆಕೆಯ ತಂದೆ ನಗರದಲ್ಲಿ ಮೊಬೈಲ್ ಫೋನ್ ಅಂಗಡಿ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸದ್ಯಕ್ಕಿಲ್ಲ ಹಾಲು, ಮೊಸರು ದರ ಏರಿಕೆ- KMF ದರ ಏರಿಕೆಗೆ ಸಿಎಂ ತಡೆ

    ಬಾಲಕಿಯ ಅಪಹರಣ ನಡೆದು 10 ದಿನ ಕಳೆದಿದ್ದರೂ ಅಲ್ಲಿ ಅಧಿಕಾರಿಗಳು ಪ್ರಕರಣದ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳದ ಕಾರಣ ಕೇಪ್ ಟೌನ್‌ನ ಭಾರತೀಯ ಮೂಲದ ಜನರೇ ಹೆಚ್ಚಿರುವ ನಗರವಾದ ಗೇಟ್ಸ್‌ವಿಲ್ಲೆ ನಿವಾಸಿಗಳು ಸರಿಯಾದ ರೀತಿಯಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

    ಗೇಟ್ಸ್‌ವಿಲ್ಲೆ ನಿವಾಸಿಗಳು ತನಿಖೆಯ ನಿರ್ಲಕ್ಷ್ಯದ ಹಿನ್ನೆಲೆ ಅಂಥ್ಲೋನ್‌ನಲ್ಲಿರುವ ಪೊಲೀಸ್ ಠಾಣೆಯ ಬಳಿ ಪ್ರತಿಭಟನೆ ನಡೆಸಿದ್ದಾರೆ. ಬಾಲಕಿ ಅಬಿರಾಳನ್ನು ಹುಡುಕಿ, ಪೋಷಕರಿಗೆ ಮರಳಿಸುವಂತೆ ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ರೈಲ್ಯಾಂಡ್ಸ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೂಡಾ ಶಾಲಾ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. ಫಲಕಗಳನ್ನು ಹಿಡಿದು, ‘ಅಬಿರಾಳನ್ನು ಮರಳಿ ತನ್ನಿ’ ಮತ್ತು ‘ನಮ್ಮ ಸ್ನೇಹಿತೆಯನ್ನು ಹಿಂದಿರುಗಿಸಿ’ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಇದನ್ನೂ ಓದಿ: ಕಲ್ಲು ಕ್ವಾರಿ ಕುಸಿತ – 8ಕ್ಕೇರಿದ ಸಾವಿನ ಸಂಖ್ಯೆ, ನಾಲ್ವರಿಗಾಗಿ ಹುಡುಕಾಟ

    Live Tv
    [brid partner=56869869 player=32851 video=960834 autoplay=true]

  • ಪಾಕಿಸ್ತಾನದಲ್ಲಿ ಹಿಂದೂ ಹುಡುಗಿ ಕಿಡ್ನ್ಯಾಪ್- 15 ದಿನದಲ್ಲಿ 4ನೇ ಪ್ರಕರಣ ದಾಖಲು

    ಪಾಕಿಸ್ತಾನದಲ್ಲಿ ಹಿಂದೂ ಹುಡುಗಿ ಕಿಡ್ನ್ಯಾಪ್- 15 ದಿನದಲ್ಲಿ 4ನೇ ಪ್ರಕರಣ ದಾಖಲು

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಸಿಂದ್ ಪ್ರಾಂತ್ಯದ ಹೈದರಾಬಾದ್‍ನಲ್ಲಿ ಹಿಂದೂ ಹುಡುಗಿಯೊಬ್ಬಳನ್ನು (Girl) ಅಪಹರಿಸಿದ ಘಟನೆ ನಡೆದಿದೆ.

    ಘಟನೆಗೆ ಸಂಬಂಧಿಸಿ ಹುಡುಗಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಚಂದ್ರ ಮೆಹರಾಜ್ ಎಂಬಾಕೆ ಹೈದರಾಬಾದ್‍ನ ಫತೇ ಚೌಕ್‍ನಿಂದ ಮನೆಗೆ ಮರಳುತ್ತಿದ್ದಾಗ ಅವಳನ್ನು ಕಿಡ್ನ್ಯಾಪ್ (Kidnap) ಮಾಡಿದ್ದಾರೆ ಎಂದು ದೂರಿನಲ್ಲಿ ಆಕೆಯ ಪೋಷಕರು ತಿಳಿಸಿದ್ದಾರೆ. ಆದರೆ ಈವರೆಗೆ ಆಕೆ ಪತ್ತೆಯಾಗಿಲ್ಲ.

    ಕೇವಲ 2 ವಾರದಲ್ಲಿ ಬೆಳಕಿಗೆ ಬಂದ 4ನೇ ಪ್ರಕರಣ ಇದಾಗಿದೆ. ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೂವರು ಮಹಿಳೆಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿದ ಘಟನೆಗಳು ಪಾಕಿಸ್ತಾನದಲ್ಲಿ ಇತ್ತೀಚೆಗೆ ಹೆಚ್ಚು ಬೆಳಕಿಗೆ ಬರುತ್ತಿವೆ. ಸೆ.24ರಂದು ಮೀನಾ ಮೇಘವಾರ್ ಎಂಬ 14 ವರ್ಷದ ಬಾಲಕಿಯನ್ನು ನಾಸರ್‌ಪುರ ಪ್ರದೇಶದಿಂದ ಅಪಹರಿಸಲಾಯಿತು. ಹಾಗೂ ಮಿರ್ಪುರ್ಖಾಸ್ ಪಟ್ಟಣದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಮತ್ತೊಬ್ಬ ಹಿಂದೂ ಹುಡುಗಿಯನ್ನು ಅಪಹರಿಸಲಾಗಿತ್ತು. ಇದನ್ನೂ ಓದಿ: ಭಾರತ್‌ ಜೋಡೋ ಪಾದಯಾತ್ರೆ ನಡುವೆ ಸಿಲುಕಿದ್ದ ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ರಾಹುಲ್‌ ಗಾಂಧಿ

    ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ಹೆಚ್ಚು ದೌರ್ಜನ್ಯಗಳು ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಜೂನ್‍ನಲ್ಲಿ ಹದಿಹರೆಯದ ಹಿಂದೂ ಹುಡುಗಿ ಕರೀನಾ ಕುಮಾರಿಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ್ದರು. ನಂತರ ಮುಸ್ಲಿಂ ವ್ಯಕ್ತಿಯನ್ನು ಮದುವೆ ಮಾಡಿಸಿರುವುದಾಗಿ ನ್ಯಾಯಾಲಯದಲ್ಲಿ ಹೇಳಿದ್ದಳು. ಮಾರ್ಚ್‍ನಲ್ಲಿ ಪಾಕಿಸ್ತಾನಿ ವ್ಯಕ್ತಿಯ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ ಕಾರಣಕ್ಕೆ ಹಿಂದೂ ಹುಡುಗಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಇದನ್ನೂ ಓದಿ: ರಾಹುಲ್ ಗಾಂಧಿ ಪಾದಕ್ಕೂ ಬಿಎಸ್‍ವೈ ಸಮ ಇಲ್ಲ ಎಂದು ನಾನು ಹೇಳಲ್ಲ: ಸಿದ್ದರಾಮಯ್ಯ

    ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಯ ಫ್ಯಾಕ್ಟ್‌ಬುಕ್ ಪ್ರಕಾರ, 2020ರ ಮಾಹಿತಿಯ ಪ್ರಕಾರ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಇತರ ಅಲ್ಪಸಂಖ್ಯಾತರು ಪಾಕಿಸ್ತಾನದ ಜನಸಂಖ್ಯೆಯಲ್ಲಿ ಕೇವಲ 3.5 ಪ್ರತಿಶತದಷ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರಾಣಿ ಪರೀಕ್ಷೆಗೆಂದು ಕರೆಸಿ ಪಶುವೈದ್ಯನನ್ನೆ ಅಪಹರಿಸಿ ಬಲವಂತದ ಮದುವೆ ಮಾಡಿದ್ರು

    ಪ್ರಾಣಿ ಪರೀಕ್ಷೆಗೆಂದು ಕರೆಸಿ ಪಶುವೈದ್ಯನನ್ನೆ ಅಪಹರಿಸಿ ಬಲವಂತದ ಮದುವೆ ಮಾಡಿದ್ರು

    ಪಾಟ್ನಾ: ಪ್ರಾಣಿ ಪರೀಕ್ಷಿಸಲು ಕರೆಸಿದ್ದ ಪಶುವೈದ್ಯನನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸಿದ ಘಟನೆ ಬಿಹಾರದ ಬೇಗುಸರಾಯ್‍ನಲ್ಲಿ ನಡೆದಿದೆ.

    ಸಂತ್ರಸ್ತನ ತಂದೆ ಈ ಕುರಿತು ಮಾತನಾಡಿದ್ದು, ನನ್ನ ಮಗನನ್ನು 12 ಗಂಟೆ ರಾತ್ರಿಗೆ ಪ್ರಾಣಿಯೊಂದಕ್ಕೆ ಆರೋಗ್ಯ ಸರಿಯಿಲ್ಲ ಎಂದು ಕರೆಸಿಕೊಂಡಿದ್ದರು. ಈ ವೇಳೆ ಮೂವರು ಬಂದು ನನ್ನ ಮಗನನ್ನು ಅಪಹರಿಸಿಕೊಂಡು ಹೋಗಿದ್ದಾರೆ. ವಿಷಯ ತಿಳಿದು ನಮಗೆ ಗಾಬರಿಯಾಯಿತು. ಅದಕ್ಕೆ ನಾನು ಪೊಲೀಸರಿಗೆ ದೂರು ಕೊಟ್ಟಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಕಾಂಗ್ರೆಸ್ ಪಾದಯಾತ್ರೆ 

    ಬೇಗುಸರಾಯ್ ಎಸ್‍ಪಿ ಯೋಗೇಂದ್ರ ಕುಮಾರ್ ಈ ಕುರಿತು ಮಾತನಾಡಿದ್ದು, ಸಂತ್ರಸ್ತನ ತಂದೆ ಅವರೇ ದೂರನ್ನು ಬರೆದು ಪೊಲೀಸ್ ಠಾಣೆಗೆ ಕೊಟ್ಟಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ನಾವು ಎಸ್‍ಎಚ್‍ಒ ಮತ್ತು ಇತರ ಅಧಿಕಾರಿಗಳನ್ನು ಕೇಳಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    MARRIAGE

    ಇದೊಂದು ಪದ್ಧತಿ
    ವರನ ಅಪಹರಣ ಅಥವಾ ‘ಪಕದ್ವಾ ವಿವಾಹ’ ಎಂಬುದು ಬಿಹಾರದಲ್ಲಿ ನಡೆಯುವ ಪದ್ಧತಿಯಾಗಿದೆ. ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ಭಾಗಗಳಲ್ಲಿ ಇದು ಸಾಮಾನ್ಯವಾಗಿದೆ. ಈ ಪದ್ಧತಿಯಲ್ಲಿ ಬ್ರಹ್ಮಚಾರಿಗಳನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸುತ್ತಾರೆ. ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಹೊಂದಿರುವವರನ್ನು ವಧುವಿನ ಕುಟುಂಬ ಅಪಹರಿಸಿ ಮದುವೆ ಮಾಡಿಸುತ್ತಾರೆ. ಇದನ್ನೂ ಓದಿ:  ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ: ಆರೋಪಿ ಭದ್ರತೆಗೆ ಬುಲೆಟ್ ಪ್ರೂಫ್ ವಾಹನ, 100 ಪೊಲೀಸರು 

  • ಜೈಲಿಗಟ್ಟಿದ್ದ ಮಹಿಳೆಗೆ ಚಾಕು ಇರಿದು, ಅಪ್ರಾಪ್ತ ಮಗಳೊಂದಿಗೆ ಆರೋಪಿ ಪರಾರಿ

    ಜೈಲಿಗಟ್ಟಿದ್ದ ಮಹಿಳೆಗೆ ಚಾಕು ಇರಿದು, ಅಪ್ರಾಪ್ತ ಮಗಳೊಂದಿಗೆ ಆರೋಪಿ ಪರಾರಿ

    ಧಾರವಾಡ: ಪೋಕ್ಸೋ ಕೇಸ್‌ನಲ್ಲಿ ಕಳೆದ ವರ್ಷ ಜೈಲು ಸೇರಿದ್ದ ಆರೋಪಿ ಜಾಮೀನಿನ ಮೇಲೆ ಹೊರ ಬಂದು, ಕೇಸ್ ದಾಖಲಿಸಿದ್ದ ಮಹಿಳೆಗೆ ಚಾಕು ಇರಿದಿದ್ದಾನೆ. ಮಾತ್ರವಲ್ಲದೇ ಮಹಿಳೆಯ ಅಪ್ರಾಪ್ತ ಮಗಳನ್ನೂ ಆತ ಹೊತ್ತೊಯ್ದಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಪರಶುರಾಮ್ ಲಮಾಣಿ ಕಳೆದ ವರ್ಷ ಪೋಕ್ಸೋ ಕೇಸ್‌ನಲ್ಲಿ ಜೈಲು ಸೇರಿದ್ದ. ಈ ವರ್ಷ ಏಪ್ರಿಲ್‌ನಲ್ಲಿ ಜಾಮೀನಿನ ಮೇಲೆ ಆತ ಹೊರ ಬಂದಿದ್ದ. ಶುಕ್ರವಾರ ರಾತ್ರಿ ಪರಶುರಾಮ್ ತನ್ನ ಮೇಲೆ ಪೋಕ್ಸೋ ಕೇಸ್ ದಾಖಲಿಸಿದ್ದ ಮಹಿಳೆ ಜೀಜಾಬಾಯಿಗೆ ಚಾಕು ಇರಿದಿದ್ದಾನೆ.

    ಕಳೆದ ವರ್ಷ ಪರಶುರಾಮ್ ಜೀಜಾಬಾಯಿಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. ಹೀಗಾಗಿ ಜೀಜಾಬಾಯಿ ಪರಶುರಾಮ್ ಮೇಲೆ ಪೋಕ್ಸೋ ಕೇಸ್ ದಾಖಲಿಸಿದ್ದರು. ಈ ಸೇಡನ್ನು ತೀರಿಸಿಕೊಳ್ಳಲು ಪರಶುರಾಮ್ ಮಹಿಳೆ ಮನೆಗೆ ಹೋಗಿದ್ದು, ಕೃತ್ಯ ಎಸಗಿ ಮಗಳನ್ನೂ ಕರೆದುಕೊಂಡು ಪರಾರಿಯಾಗಿದ್ದಾನೆ. ಇದನ್ನೂ ಓದಿ: ಉತ್ತರ ಪ್ರದೇಶದ ಜೈಲು ನಿಯಮಗಳಲ್ಲಿ ಬದಲಾವಣೆ – ಏನಿದೆ ಹೊಸ ರೂಲ್ಸ್?

    ಪರಶುರಾಮ್ ಹಾಗೂ ಜೀಜಾಬಾಯಿ ಮಗಳ ನಡುವೆ ಪ್ರೇಮವಿತ್ತು. ಮಗಳು ಅಪ್ರಾಪ್ತೆ ಇದ್ದ ಕಾರಣ ಆಕೆಯ ರಕ್ಷಣೆಗೆ ಜೀಜಾಬಾಯಿ ನಿಂತಿದ್ದರು. ಆದರೆ ಜೀಜಾಬಾಯಿಗೆ ಚಾಕು ಇರಿಯಲು ಪರಶುರಾಮ್‌ಗೆ ಮಗಳೂ ಸಾತ್ ನೀಡಿದ್ದಳು ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಎಲ್ಲ ಶಾಸಕರಿಗೆ 50 ಲಕ್ಷ, ಅಡ್ಡ ಮತಕ್ಕೆ ಕಾರಣವೇನು? – ಹಳೇ ಕಥೆ ಬಿಚ್ಚಿಟ್ಟ ಶ್ರೀನಿವಾಸ್ ಗೌಡ

    ಈ ಸಂಬಂಧ ಜೀಜಾಬಾಯಿ ಧಾರವಾಡ ಉಪನಗರ ಠಾಣೆಯಲ್ಲಿ ಪರಶುರಾಮ್ ಮೇಲೆ ದೂರನ್ನು ನೀಡಿದ್ದಾರೆ. ಕೊಲೆ ಪ್ರಯತ್ನ ಹಾಗೂ ಮಗಳನ್ನು ಅಪಹರಣ ಮಾಡಿರುವುದಾಗಿ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2 ತಂಡಗಳನ್ನು ರಚಿಸಿ, ಆರೋಪಿಯನ್ನು ಶೀಘ್ರವೇ ಪತ್ತೆ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ಲಾಬುರಾಮ್ ತಿಳಿಸಿದ್ದಾರೆ.