Tag: ಅಪಹರಣ

  • ರೇವಣ್ಣ ಅರೆಸ್ಟ್‌ ಬೆನ್ನಲ್ಲೇ ಭವಾನಿಗೂ ಸಂಕಷ್ಟ?

    ರೇವಣ್ಣ ಅರೆಸ್ಟ್‌ ಬೆನ್ನಲ್ಲೇ ಭವಾನಿಗೂ ಸಂಕಷ್ಟ?

    ಬೆಂಗಳೂರು: ಪತಿ ರೇವಣ್ಣ (HD Revanna) ಅರೆಸ್ಟ್‌ ಆದ ಬೆನ್ನಲ್ಲೇ ಪತ್ನಿ ಭವಾನಿಗೂ (Bhavani Revanna) ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

    ಮಹಿಳೆಯೊಬ್ಬರ ಅಪಹರಣ (Kidnap) ಪ್ರಕರಣದಲ್ಲಿ ಹೆಚ್‌ಡಿ ರೇವಣ್ಣ ಬಂಧನಕ್ಕೆ ಒಳಗಾಗಿದ್ದಾರೆ. ಭವಾನಿ ರೇವಣ್ಣ ಕರೆಯುತ್ತಿದ್ದಾರೆ ಎಂದು ಹೇಳಿ ತನ್ನ ತಾಯಿಯನ್ನು ಸತೀಶ್‌ ಬಾಬು ಕರೆದೊಯ್ದಿದ್ದಾನೆ ಎಂದು ಆಕೆಯ ಪುತ್ರ ದೂರು ನೀಡಿದ್ದ.  ಇದನ್ನೂ ಓದಿ: ಮಂಗಳೂರಿನಲ್ಲಿ ಇಂದು ಪ್ರಜ್ವಲ್‌ ರೇವಣ್ಣ ಶರಣಾಗ್ತಾರಾ?

    ಈ ಪ್ರಕರಣದಲ್ಲಿ ಈಗಾಗಲೇ ಸತೀಶ್‌ ಬಾಬು ಮತ್ತು ಹೆಚ್‌ಡಿ ರೇವಣ್ಣ ಬಂಧನಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭವಾನಿ ಅವರಿಗೆ ನೋಟಿಸ್‌ ಜಾರಿ ಮಾಡಿ ವಿಶೇಷ ತನಿಖಾ ತಂಡ (SIT) ವಿಚಾರಣೆ ನಡೆಸುವ ಸಾಧ್ಯತೆಯಿದೆ. ಇದನ್ನೂ ಓದಿ: ನಾವು ಇದರಲ್ಲಿ ಮಧ್ಯಪ್ರವೇಶ ಮಾಡಲ್ಲ- ರೇವಣ್ಣ ಬಂಧನಕ್ಕೆ ಸಿಎಂ ಫಸ್ಟ್‌ ರಿಯಾಕ್ಷನ್‌

    ಸಂತ್ರಸ್ತೆಯ ಹೇಳಿಕೆ ದಾಖಲು ಮಾಡಿದ ಕೂಡಲೇ ತುರ್ತು ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಭವಾನಿಗೆ ರೇವಣ್ಣಗೆ ನೋಟಿಸ್‌ ನೀಡಲಿದೆ. ಸಂತ್ರಸ್ತೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿದರೆ ಭವಾನಿಯೂ ಆರೋಪಿಯಾಗುವ ಸಾಧ್ಯತೆಯಿದೆ. ವಿಚಾರಣೆ ಸಂದರ್ಭದಲ್ಲಿ ಸಂತ್ರಸ್ತೆಯ ಹೇಳಿಕೆಯ ಮೇಲೆ ಭವಾನಿ ರೇವಣ್ಣ ಭವಿಷ್ಯ ನಿಂತಿದೆ.

     

  • ಚಿಕ್ಕೋಡಿಯಲ್ಲಿ ಮಕ್ಕಳ ಕಳ್ಳರ ಆತಂಕ – 2ನೇ ತರಗತಿ ವಿದ್ಯಾರ್ಥಿನಿಯ ಅಪಹರಣಕ್ಕೆ ವಿಫಲ ಯತ್ನ

    ಚಿಕ್ಕೋಡಿಯಲ್ಲಿ ಮಕ್ಕಳ ಕಳ್ಳರ ಆತಂಕ – 2ನೇ ತರಗತಿ ವಿದ್ಯಾರ್ಥಿನಿಯ ಅಪಹರಣಕ್ಕೆ ವಿಫಲ ಯತ್ನ

    ಬೆಳಗಾವಿ: ಶಾಲೆ ಬಳಿ ಎರಡನೇ ತರಗತಿ ವಿದ್ಯಾರ್ಥಿನಿಯ (Student) ಅಪಹರಣಕ್ಕೆ (Kidnap) ಪ್ರಯತ್ನಿಸಿದ್ದು, ಅದು ವಿಫಲವಾಗಿರುವ ಘಟನೆ ಚಿಕ್ಕೋಡಿ (Chikodi) ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದೆ.

    ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಲಾಗಿದ್ದು, ಬೈಕ್ ಮೇಲೆ ಬಂದು ಅಪಹರಿಸಲು ವಿಫಲ ಯತ್ನ ನಡೆಸಿ ಕಳ್ಳರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಸಿಕ್ಕ ಶಿವಲಿಂಗ, ವಿಷ್ಣುವಿನ ವಿಗ್ರಹಕ್ಕೆ ಅಂತಾರಾಜ್ಯ ಪೈಪೋಟಿ

    ಶಾಲೆ ಕಾಂಪೌಂಡ್ ಬಳಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕುಳಿತ ಕಿಡ್ನಾಪರ್ಸ್ ವಿದ್ಯಾರ್ಥಿನಿ ಬರುವುದನ್ನೇ ಕಾಯುತ್ತಿದ್ದ. ಶಾಲೆಯಿಂದ ವಿದ್ಯಾರ್ಥಿನಿ ಹೊರ ಬರುತ್ತಿದ್ದಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಾಲಕಿಯನ್ನು ಅಪಹರಿಸಿ 200 ಮೀಟರ್ ಓಡಿದ್ದಾನೆ. ಬಳಿಕ ವಿದ್ಯಾರ್ಥಿ ವ್ಯಕ್ತಿಯ ಕೈಗೆ ಕಚ್ಚಿ ಆತನಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಇದನ್ನೂ ಓದಿ: ಪೋರ್ನ್‌ ವೀಡಿಯೋ ನೋಡಿ ಉದ್ರೇಕ – ಸ್ವಂತ ತಂಗಿಯ ಮೇಲೆ ಅತ್ಯಾಚಾರಗೈದ ಕಾಮುಕ ಅಣ್ಣ

    ನಂತರ ವಿದ್ಯಾರ್ಥಿನಿ ಕಿರುಚಾಟದಿಂದ ವ್ಯಕ್ತಿ ಸ್ಥಳದಿಂದ ಓಡಿ ಹೋಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಲಾ ಆವರಣದ ಸಿಸಿಟಿವಿ ಪರಿಶೀಲನೆ ನಡೆಸಿ ಮಕ್ಕಳ ಕಳ್ಳರ ಕುರಿತು ಪೊಲೀಸ್ ಪ್ರಕಟಣೆ ಜಾರಿ ಮಾಡಿದ್ದಾರೆ. ಇದನ್ನೂ ಓದಿ: ಮಾಜಿ ಗ್ರಾಪಂ ಸದಸ್ಯನಿಂದ 120 ಎಕರೆ ಕೆರೆ ಭೂಮಿ ಕಬಳಿಕೆ!

  • ಹೆಲಿಕಾಪ್ಟರ್‌ನಿಂದ ಇಳಿದು ಗುಂಡು ಹಾರಿಸಿ ಫಿಲ್ಮಿ ಸ್ಟೈಲ್‌ ಹೈಜಾಕ್‌ – ಭಾರತಕ್ಕೆ ಬರುತ್ತಿದ್ದ ಹಡಗು ಅಪಹರಣದ ವಿಡಿಯೋ ರಿಲೀಸ್‌

    ಹೆಲಿಕಾಪ್ಟರ್‌ನಿಂದ ಇಳಿದು ಗುಂಡು ಹಾರಿಸಿ ಫಿಲ್ಮಿ ಸ್ಟೈಲ್‌ ಹೈಜಾಕ್‌ – ಭಾರತಕ್ಕೆ ಬರುತ್ತಿದ್ದ ಹಡಗು ಅಪಹರಣದ ವಿಡಿಯೋ ರಿಲೀಸ್‌

    – ಯೆಮೆನ್‌ ಬಂಡುಕೋರರಿಂದ ಸರಕು ಸಾಗಾಣೆ ಹಡಗು ಅಪಹರಣ
    – ಇಸ್ರೇಲ್‌ ದಾಳಿಗೆ ಪ್ರತೀಕಾರವಾಗಿ ಹೈಜಾಕ್‌

    ಸನಾ: ಹಡಗಿನ ಮೇಲೆ ಇಳಿದ ಹೆಲಿಕಾಪ್ಟರ್‌. ರೈಫಲ್‌ ಹಿಡಿದು ಘೋಷಣೆ ಕೂಗುತ್ತಾ ಇಳಿದ ಬಂಡುಕೋರರು. ಹಡಗಿನ ಕ್ಯಾಬಿನ್‌ ನುಗ್ಗಿ ಬೆದರಿಕೆ. ಶರಣಾದ ಹಡಗಿನ ಸಿಬ್ಬಂದಿ. ಇದು ಯಾವುದೋ ಸಿನಿಮಾದ ಕಥೆಯಲ್ಲ. ಯೆಮೆನ್‌ (Yemen) ಬಂಡುಕೋರರು ಹಡಗನ್ನುಅಪಹರಿಸಿ ಪರಿ ಇದು.

    ಭಾರತಕ್ಕೆ (India) ಬರುತ್ತಿದ್ದ ಸರಕು ಹಡಗು ಗ್ಯಾಲಕ್ಸಿ ಲೀಡರ್‌ (Galaxy Leader) ಅಪಹರಣ ಕೊನೆಯ ಕ್ಷಣಗಳ ವಿಡಿಯೋವನ್ನು ಯೆಮೆನ್ ಮೂಲದ ಹೌತಿ ಬಂಡುಕೋರರು (Houthi Rebels) ಬಿಡುಗಡೆ ಮಾಡಿದ್ದಾರೆ. ಟರ್ಕಿಯಿಂದ (Turkey) ಭಾರತಕ್ಕೆ ಬರುತ್ತಿದ್ದ ಹಡಗನ್ನು ಭಾನುವಾರ ಅಪಹರಣ ಮಾಡಲಾಗಿತ್ತು. ಈಗ ಹೌತಿ ಬಂಡುಕೋರರು ಎರಡು ನಿಮಿಷಗಳ ಹಡಗನ್ನು ಹೈಜಾಕ್ (Hijack) ಮಾಡುವ ಭಯಾನಕ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

    ಹೆಲಿಕಾಪ್ಟರ್‌ನಲ್ಲಿ ಬಂದ ಬಂಡುಕೋರರು ಹಡಗಿನ ಮೇಲೆ ದಾಳಿ ಮಾಡಿ ಹೈಜಾಕ್‌ ಮಾಡಿದ್ದಾರೆ. ಹಡಗಿನ ಡೆಕ್‌ನಲ್ಲಿ ಲ್ಯಾಂಡ್‌ ಆದ ಹೆಲಿಕಾಪ್ಟರ್‌ನಿಂದ 10ಕ್ಕೂ ಹೆಚ್ಚು ಬಂಡುಕೋರರು ಘೋಷಣೆಗಳನ್ನು ಕೂಗುತ್ತಾ ಗುಂಡು ಹಾರಿಸುತ್ತಾ ನಿಯಂತ್ರಣ ಕೇಂದ್ರಕ್ಕೆ ಬಂದಿದ್ದಾರೆ. ಬಂಡುಕೋರರನ್ನು ನೋಡಿದ ಸಿಬ್ಬಂದಿ ಶಾಕ್‌ ಆಗಿ ಕೈಯನ್ನು ಮೇಲಕ್ಕೆ ಎತ್ತಿ ಶರಣಾಗಿದ್ದಾರೆ.  ಇದನ್ನೂ ಓದಿ: ಗಾಜಾದ ಆಸ್ಪತ್ರೆಯನ್ನೇ ಉಗ್ರ ಚಟುವಟಿಕೆಗಳ ತಾಣವಾಗಿಸಿದ ಹಮಾಸ್- ಇಸ್ರೇಲ್ ವೀಡಿಯೋ ಸಾಕ್ಷಿ

    ಹಮಾಸ್ ವಿರುದ್ಧದ ಯುದ್ಧದ ಪ್ರತೀಕಾರವಾಗಿ ಇಸ್ರೇಲಿ ಹಡಗುಗಳನ್ನು ಗುರಿಯಾಗಿಸಿಕೊಂಡು ನಾವು ದಾಳಿ ಮಾಡುತ್ತೇವೆ ಎಂದು ಹೌತಿ ಬಂಡುಕೋರರು ಎಚ್ಚರಿಕೆ ನೀಡಿದ್ದಾರೆ.

    ಹಡಗಿನ ಹೈಜಾಕ್ ಬಳಿಕ ಇದು ಆರಂಭ ಮಾತ್ರ ಎಂದು ಎಂದು ಹೌತಿ ತಿಳಿಸಿದ್ದು, ಕೆಂಪು ಸಮುದ್ರ ಮಾರ್ಗದಲ್ಲಿ ಬರುವ ಎಲ್ಲಾ ಇಸ್ರೇಲಿ ಹಡಗುಗಳನ್ನೂ ಅಪಹರಿಸುವುದಾಗಿ ಬೆದರಿಕೆ ಹಾಕಿದೆ. ಗಾಜಾ ಮೇಲಿನ ದಾಳಿ ನಿಲ್ಲಿಸುವವರೆಗೂ ಮತ್ತಷ್ಟು ಕಡಲ ದಾಳಿಗಳನ್ನು ನಡೆಸುವುದಾಗಿ ಹೌತಿ ಬಂಡುಕೋರರು ಘೋಷಣೆ ಮಾಡಿದ್ದಾರೆ.

    ಹಡಗು ಇಸ್ರೇಲಿಗೆ ಸೇರಿದ್ದು ಎಂದು ಹೌತಿ ಹೇಳಿದೆ. ಆದರೆ ಈ ಹೇಳಿಕೆಯನ್ನು ಇಸ್ರೇಲ್‌ ನಿರಾಕರಿಸಿದೆ. ಇದರಲ್ಲಿ ಇಸ್ರೇಲ್‌ ಪ್ರಜೆಗಳು ಯಾರು ಇರಲಿಲ್ಲ. ಅಪಹರಣಕ್ಕೊಳಗಾದ ಹಡಗು ತನ್ನದ್ದಲ್ಲ ಎಂದು ಇಸ್ರೇಲ್‌  ತಿಳಿಸಿದೆ.

    ಅಪಹರಣಕ್ಕೊಳಗಾದ ಹಡಗಿನ ಮೇಲೆ ಬಹಾಮಾಸ್ ಧ್ವಜವಿತ್ತು. ಹಡಗಿನಲ್ಲಿ ವಿವಿಧ ರಾಷ್ಟ್ರಗಳಿಗೆ ಸೇರಿದ ಸುಮಾರು 25 ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ಖಲಿಸ್ತಾನಿಗಳಿಂದ ಹಿಂದೂ ದೇವಾಲಯಗಳ ಟಾರ್ಗೆಟ್: ಕ್ರಮಕ್ಕೆ ಕೆನಡಾ ಸಂಸದ ಒತ್ತಾಯ

    ಇದು ಬ್ರಿಟಿಷ್ ಕಂಪನಿಯ ಒಡೆತನದಲ್ಲಿದ್ದು, ಇಸ್ರೇಲಿ ಉದ್ಯಮಿ ಅಬ್ರಹಾಂ “ರಾಮಿ” ಉಂಗಾರ್ ಅವರೂ ಕೂಡ ಈ ಹಡಗಿನ ಸಹ ಮಾಲೀಕರು ಎಂದು ಹೇಳಲಾಗಿದೆ. ಅಪಹರಣದ ಸಮಯದಲ್ಲಿ ಹಡಗನ್ನು ಜಪಾನಿನ ನಿಪ್ಪನ್‌ ಯೂಸೆನ್‌ ಕಂಪನಿಗೆ ಗುತ್ತಿಗೆಗೆ ನೀಡಲಾಗಿತ್ತು. ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋ ಮೇಲೆ ಹೌತಿ ಬಂಡುಕೋರರದಿಂದ ಡ್ರೋನ್ ದಾಳಿ – ಹೊತ್ತಿ ಉರಿದ ಘಟಕಗಳು

    ಸದ್ಯ ಹಡಗು ಎಲ್ಲಿದೆ?
    ಹಡಗಿನ ಜೊತೆ ಸಂವಹನ ಸಂಪೂರ್ಣ ಕಡಿತಗೊಂಡಿದೆ. ಸದ್ಯ ಇದು ಯೆಮೆನ್‌ನಲ್ಲಿರುವ ಹುದೈದಾ ಬಂದರಿನಲ್ಲಿದೆ ಎಂದು ಗ್ಯಾಲಕ್ಸಿ ಲೀಡರ್‌ ನಿರ್ವಹಣೆ ಮಾಡುತ್ತಿರುವ ಕಂಪನಿಯ ವಕ್ತಾರರು ತಿಳಿಸಿದ್ದಾರೆ.

     

  • ಬೆಂಗಳೂರು ವಿದ್ಯಾರ್ಥಿಯನ್ನು ಅಪಹರಿಸಿ ಹಾಸನದಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್

    ಬೆಂಗಳೂರು ವಿದ್ಯಾರ್ಥಿಯನ್ನು ಅಪಹರಿಸಿ ಹಾಸನದಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್

    ಹಾಸನ: ಬೆಂಗಳೂರಿನ ಕಾಲೇಜು ವಿದ್ಯಾರ್ಥಿಯನ್ನು (Student) ಅಪರಿಚಿತರು ಕಿಡ್ನ್ಯಾಪ್ (Kidnap) ಮಾಡಿ ಹಾಸನದಲ್ಲಿ (Hassan) ಬಿಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

    ಬೆಂಗಳೂರಿನ (Bengaluru) ಅನಂತಪುರದ ಕೃಷ್ಣೇಗೌಡ ಎಂಬವರ ಪುತ್ರ ಚಿರಾಗ್ (17) ಖಾಸಗಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಆತನನ್ನು ಅಪಹರಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ನಿನ್ನೆ (ಮಂಗಳವಾರ) ಬೆಳಗ್ಗೆ ಯುವಕ ಕಾಲೇಜಿಗೆ ಹೋಗುತ್ತಿದ್ದ ವೇಳೆ ಏಕಾಏಕಿ ಎದುರಾದ ಕೆಲ ಅಪರಿಚಿತರು ವಿಳಾಸ ಕೇಳುವ ನೆಪದಲ್ಲಿ ವಿದ್ಯಾರ್ಥಿಯ ಪ್ರಜ್ಞೆ ತಪ್ಪಿಸಿ ನಂತರ ಅಪಹರಿಸಿದ್ದಾರೆ ಎಂದು ಚಿರಾಗ್ ತಿಳಿಸಿದ್ದಾನೆ.

    ಚಿರಾಗ್ ಎಂದಿನಂತೆ ಬೆಳಗ್ಗೆ ಕಾಲೇಜಿಗೆ ಹೋಗುತ್ತಿದ್ದಾಗ ಈ ಕೃತ್ಯ ನಡೆದಿದೆ. ಪ್ರಜ್ಞಾಹೀನ ಸ್ಥಿತಿಯಲ್ಲೇ ಕಾರು ಹತ್ತಿದ್ದ ಹುಡುಗ ಎಚ್ಚರಗೊಂಡಾಗ ಅರಕಲಗೂಡು ಸಮೀಪ ಇರುವುದು ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಕಿಡ್ನ್ಯಾಪ್ ಮಾಡಿ ಕಾರಿನಲ್ಲಿ ಹಾಸನಕ್ಕೆ ಬಂದ ದುಷ್ಕರ್ಮಿಗಳು, ವಿದ್ಯಾರ್ಥಿಯನ್ನು ಅರಕಲಗೂಡು ಸಮೀಪ ಬಿಟ್ಟು ಹೋಗಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ-ಬೆಂಗಳೂರು ವಿಮಾನದಲ್ಲಿ ತಾಂತ್ರಿಕ ದೋಷ; ವಿಮಾನ ಹಾರಾಟ ರದ್ದು

    ಚಿರಾಗ್ ಎಚ್ಚರಗೊಂಡ ನಂತರ ಸಮೀಪದ ಮನೆಯೊಂದರ ಬಳಿ ತೆರಳಿ ತನ್ನ ಪೋಷಕರಿಗೆ ಫೋನ್ ಮಾಡಿದ್ದಾನೆ. ಕೂಡಲೇ ಹಾಸನಕ್ಕೆ ಬಂದ ಪೋಷಕರು, ಮಗನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಅಸ್ವಸ್ಥಗೊಂಡಿರುವ ವಿದ್ಯಾರ್ಥಿಗೆ ಹಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಅಪಹರಣ ಮಾಡಿದ್ದು ಯಾರು? ಯಾವ ಕಾರಣಕ್ಕೆ ಮಾಡಿದರು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ಪೋಷಕರು ಒತ್ತಾಯಿಸಿದ್ದಾರೆ. ಈ ಸಂಬಂಧ ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಯಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಹೆಸರಾಂತ ಯುವ ಸಂಗೀತ ಸಂಯೋಜಕ ಮನೋಜ್ ವಸಿಷ್ಠ ನಿಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಗಳ ಅಪಹರಣ ಕೇಸನ್ನು ಹಿಂಪಡೆಯುವಂತೆ ಹಲ್ಲೆಗೈದು ಮಹಿಳೆಗೆ ಒತ್ತಡ ಹೇರಿದ ಪೊಲೀಸ್

    ಮಗಳ ಅಪಹರಣ ಕೇಸನ್ನು ಹಿಂಪಡೆಯುವಂತೆ ಹಲ್ಲೆಗೈದು ಮಹಿಳೆಗೆ ಒತ್ತಡ ಹೇರಿದ ಪೊಲೀಸ್

    ಲಕ್ನೋ: ಮಗಳನ್ನು ಅಪಹರಿಸಿ ಕಿರುಕುಳ ನೀಡಿದ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಡ ಹೇರಿದ್ದಾರೆ. ಅಲ್ಲದೆ ಬಾಲಕಿ ತಾಯಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಅಧಿಕಾರಿ ವಿರುದ್ಧ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ ಘಟನೆ ಉತ್ರಪ್ರದೇಶದ (Uttarpradesh) ರಾಂಪುರದಲ್ಲಿ ನಡೆದಿದೆ.

    ಘಟನೆಯನ್ನು ಗಮನಿಸಿ, ಜಿಲ್ಲಾಡಳಿತವು ಮಿಲಕ್ ಪೊಲೀಸ್ ಠಾಣೆಯ ಸರ್ಕಲ್ ಅಧಿಕಾರಿ, ಸ್ಟೇಷನ್ ಹೌಸ್ ಅಧಿಕಾರಿ ಮತ್ತು ಇಬ್ಬರು ಕಾನ್‍ಸ್ಟೆಬಲ್‍ಗಳನ್ನು ಕೆಲಸದಿಂದ ತೆಗೆದು ಹಾಕಿದೆ. ಆರೋಪಿ ಔಟ್‍ ಪೋಸ್ಟ್ ಉಸ್ತುವಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪೊರಕೆಯಿಂದ ಹೊಡೆದು ಜಾತಿನಿಂದನೆ ಆರೋಪ- ವ್ಯಕ್ತಿ ಆತ್ಮಹತ್ಯೆ

    ಮಂಗಳವಾರ ಔಟ್‍ಪೋಸ್ಟ್ ಇನ್‍ಚಾರ್ಜ್ ಅಶೋಕ್ ಕುಮಾರ್ ಸೇರಿದಂತೆ ಕೆಲವು ಪೊಲೀಸರು ತನ್ನ ಮನೆಗೆ ಬಂದು ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ತನ್ನ ಮತ್ತು ಮಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಪೊಲೀಸರು ನನಗೆ ಎರಡು-ಮೂರು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ನನ್ನ ಬಟ್ಟೆ ಹರಿದಿದ್ದಾರೆ ಎಂದು 12 ವರ್ಷದ ಬಾಲಕಿಯ ತಾಯಿ ಆರೋಪಿಸಿದ್ದಾರೆ.

    ಆರೋಪಿಯು ತನ್ನ ಮಗಳನ್ನು ಬಲವಂತವಾಗಿ ಬೈಕ್‍ನಲ್ಲಿ ಕರೆದೊಯ್ದ ನಂತರ ಮಹಿಳೆಯು ಮಂಗಳವಾರ ಇಬ್ಬರು ಹದಿಹರೆಯದವರ ವಿರುದ್ಧ ಐಪಿಸಿ ಸೆಕ್ಷನ್ 354 (ತನ್ನ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ) ಮತ್ತು 363 (ಅಪಹರಣ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಸಾರ್ ಸಿಂಗ್ ಹೇಳಿದ್ದಾರೆ.

    ಆರೋಪಿಗಳಿಬ್ಬರನ್ನೂ ವಶಕ್ಕೆ ಪಡೆಯಲಾಗಿದ್ದು, ಈ ಬಗ್ಗೆ ವಿವರವಾದ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ನಾವು ಎಸ್‍ಎಚ್‍ಒ, ಸರ್ಕಲ್ ಅಧಿಕಾರಿ ಮತ್ತು ಇಬ್ಬರು ಕಾನ್‍ಸ್ಟೆಬಲ್‍ಗಳನ್ನು ತೆಗೆದುಹಾಕಿದ್ದೇವೆ ಮತ್ತು ಪೊಲೀಸ್ ಔಟ್‍ ಪೋಸ್ಟ್ ಉಸ್ತುವಾರಿ ಅಶೋಕ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿನಿಮೀಯ ರೀತಿಯಲ್ಲಿ ಹಿಂದೂ ಅಪ್ರಾಪ್ತೆಯರಿಬ್ಬರ ಕಿಡ್ನಾಪ್- ನಾಲ್ವರು ಅರೆಸ್ಟ್

    ಸಿನಿಮೀಯ ರೀತಿಯಲ್ಲಿ ಹಿಂದೂ ಅಪ್ರಾಪ್ತೆಯರಿಬ್ಬರ ಕಿಡ್ನಾಪ್- ನಾಲ್ವರು ಅರೆಸ್ಟ್

    ಮಡಿಕೇರಿ: ನಾಲ್ವರು ಮುಸ್ಲಿಂ ಯುವಕರು ಇಬ್ಬರು ಅಪ್ರಾಪ್ತ ಹಿಂದೂ ಹುಡುಗಿಯರನ್ನು ಕಾರಿನಲ್ಲಿ ಅಪಹರಿಸಿದ (Kidnap) ಘಟನೆಯೊಂದು ಕೊಡಗಿನಲ್ಲಿ (Kodagu) ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಹುಡುಗಿಯರನ್ನು ರಕ್ಷಿಸಲಾಗಿದ್ದು, ನಾಲ್ವರು ಯುವಕರನ್ನು ಬಂಧಿಸಲಾಗಿದೆ. ಈ ನಡುವೆ ರಕ್ಷಿಸಲ್ಪಟ್ಟವರಲ್ಲಿ ಒಬ್ಬ ಹುಡುಗಿ ಆತ್ಮಹತ್ಯೆಗೆ (Suicide) ಪ್ರಯತ್ನಿಸಿದ್ದು, ಆಕೆಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಪಹರಣಕ್ಕೆ ಒಳಗಾದ ಹುಡುಗಿಯರು ಮಡಿಕೇರಿಯ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾರೆ. ಅಪಹರಣ ಮಾಡಿದ ಯುವಕರನ್ನು ನಿಜಾಮಿಲ್, ಸಮದ್, ತಪ್ಸಿರ್ ಹಾಗೂ ಇರ್ಫಾನ್ ಎಂದು ಗುರುತಿಸಲಾಗಿದೆ. ಇವರು ಮಡಿಕೇರಿಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ಆರೋಪಿಗಳನ್ನು ಪೊಲೀಸರು ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಬಂಧಿಸಿದ್ದಾರೆ.

    ಅಪಹರಣ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ಈ ಅಪಹರಣ ಶುಕ್ರವಾರ ಬೆಳಗ್ಗೆ ನಡೆದು ಮಧ್ಯಾಹ್ನದ ಹೊತ್ತಿಗೆ ಹುಡುಗಿಯರು ಮನೆ ಸೇರಿಯೂ ಆಗಿದೆ. ಆರೋಪಿಗಳನ್ನು ಬಂಧಿಸಿಯೂ ಆಗಿದೆ. ಅಂದರೆ ಈ ಪ್ರಕರಣದಲ್ಲಿ ಕ್ಷಣಕ್ಷಣವೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಂಭವಿಸಿದೆ. ಮಡಿಕೇರಿ ಹೊರವಲಯದ ಇಬ್ಬರು ಪಿಯು ವಿದ್ಯಾರ್ಥಿನಿಯರು ಎಂದಿನಂತೆ ಮಡಿಕೇರಿಯ ಸರ್ಕಾರಿ ಕಾಲೇಜಿಗೆ ಬರುತ್ತಿದ್ದರು. ಆಗ ಕಾರಿನಲ್ಲಿ ಬಂದ ನಾಲ್ವರು ಯುವಕರು ಅವರನ್ನು ಬಲವಂತವಾಗಿ ಕಾರಿಗೆ ಹಾಕಿಕೊಂಡು ಹೋಗಿದ್ದಾರೆ ಎಂಬ ಸುದ್ದಿ ಒಮ್ಮಿಂದೊಮ್ಮೆಗೆ ಹರಡಿತ್ತು. ಇದನ್ನೂ ಓದಿ: ತಿರುಪತಿ ದರ್ಶನ ಮುಗಿಸಿ ವಾಪಸಾಗುತ್ತಿದ್ದಾಗ ಭೀಕರ ಅಪಘಾತ – ಒಂದೇ ಕುಟುಂಬದ ಐವರು ಕನ್ನಡಿಗರು ಸಾವು

    ಕಾಲೇಜಿಗೆ ಹೋಗುವ ದಾರಿಯಲ್ಲೇ ಘಟನೆ ನಡೆದಿದ್ದರಿಂದ ಹಲವು ಜನರು ಹುಡುಗಿಯರು ಕಾರಿನೊಳಗೆ ಹೋಗುವುದನ್ನು ನೋಡಿದ್ದಾರೆ. ಮತ್ತು ಹುಡುಗಿಯರೂ ಪರಿಚಯದವರೇ ಆಗಿದ್ದರಿಂದ ತಕ್ಷಣವೇ ಅದರ ವಿಚಾರ ಗ್ರಾಮದೆಲ್ಲೆಡೆ ಹಬ್ಬಿತು. ಇತರ ವಿದ್ಯಾರ್ಥಿಗಳು ಕೂಡಲೆ ಕಾಲೇಜಿನ ಶಿಕ್ಷಕರಿಗೆ ತಿಳಿಸಿದ್ದಾರೆ.

    ತಕ್ಷಣ ಕಾಲೇಜಿನ ಶಿಕ್ಷಕರು ಪೋಲಿಸರಿಗೆ ಹಾಗೂ ಪೋಷಕರಿಗೆ ಮಾಹಿತಿ ನೀಡಿದ್ದು ಕಾಣೆಯಾದ ಹುಡುಗಿಯರ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಎಲ್ಲಾ ಕಡೆ ಹುಡುಕಾಟಕ್ಕೆ ಸೂತ್ರ ಹೆಣೆದರು. ಎಲ್ಲಾ ಕಡೆ ತಪಾಸಣೆಗೆ ಸೂಚಿಸಿದರು. ಮಡಿಕೇರಿಯಲ್ಲಿ ಈ ರೀತಿ ಅಲ್ಲೋಲಕಲ್ಲೋಲ ಸಂಭವಿಸುತ್ತಿರುವ ಸಂಗತಿ ಕಾರಿನಲ್ಲಿ ಹೋಗುತ್ತಿದ್ದ ಯುವಕರಿಗೆ ವಾಟ್ಸಪ್ ಮೂಲಕ ತಿಳಿದಿದೆ. ಅಷ್ಟು ಹೊತ್ತಿಗೆ ಅವರ ಕಾರು ಕುಶಾಲನಗರ ದಾಟಿ ಮೈಸೂರು ಕಡೆಗೆ ವೇಗವಾಗಿ ಸಾಗುತ್ತಿತ್ತು. ಈ ಅಲ್ಲೋಕಕಲ್ಲೋಲಕ್ಕೆ ಬೆದರಿದ ಯುವಕರು ಇಬ್ಬರೂ ಹುಡುಗಿಯರನ್ನು ಕಾರಿನಿಂದ ಇಳಿಸಿದ್ದಾರೆ. ಯುವತಿಯರು ಕುಶಾಲನಗರದಿಂದ ಬಸ್ ಹತ್ತಿ ಮಡಿಕೇರಿಗೆ ಬಂದು ತಮ್ಮ ತಮ್ಮ ಮನೆಗಳಿಗೆ ಹೋಗಿದ್ದಾರೆ.

    ಈ ನಡುವೆ ಪೊಲೀಸರು ತಮ್ಮ ಹುಡುಕಾಟದ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಮೈಸೂರು ಪೊಲೀಸರು ಮಂಡಿ ಮೊಹಲ್ಲಾಕ್ಕೆ ದಾಳಿ ಮಾಡಿ 4 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಯುವಕರ ಮೊಬೈಲ್ ಟ್ರ‍್ಯಾಕ್ ಮಾಡಿ ಅವರನ್ನು ಅಲ್ಲೇ ಹಿಡಿದಿದ್ದಾರೆ. ಇದೀಗ ನಾಲ್ವರು ಆರೋಪಿಗಳನ್ನು ಮಡಿಕೇರಿಗೆ ಕರೆತಂದು ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ಅವರ ಆರೋಗ್ಯ ತಪಾಸಣೆ ನಡೆಯುತ್ತಿದೆ. ಈ ನಡುವೆ ಯುವತಿಯರಿಗೂ ಯುವಕರಿಗೂ ಮೊದಲೇ ಪರಿಚಯ ಇತ್ತು ಎಂಬ ವಿಚಾರವೂ ಕೇಳಿಬರುತ್ತಿದೆ. ಇದನ್ನೂ ಓದಿ: ಸದ್ಯಕ್ಕೆ ಆಸ್ಪತ್ರೆಯಿಂದ ಚೈತ್ರಾ ಕುಂದಾಪುರ ಡಿಸ್ಚಾರ್ಜ್‌ ಇಲ್ಲ: ಬಾಲಾಜಿ ಪೈ

    ಆತ್ಮಹತ್ಯೆಗೆ ಯತ್ನಿಸಿದ ಹುಡುಗಿ: ಈ ನಡುವೆ ಕುಶಾಲನಗರದಲ್ಲಿ ಕಾರಿನಿಂದ ಇಳಿದು ಬಸ್ ಮೂಲಕ ಮಡಿಕೇರಿಗೆ ಬಂದು ಅಲ್ಲಿಂದ ತಮ್ಮ ಮನೆಗೆ ಹೋಗಿದ್ದ ಇಬ್ಬರು ಹುಡುಗಿಯರ ಪೈಕಿ ಒಬ್ಬಾಕೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಈ ಘಟನೆಯಿಂದ ತನಗೆ ಅಪಮಾನವಾಗಿದೆ ಎಂದು ಬೇಸರ ಮಾಡಿಕೊಂಡ ಆಕೆ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದಾಳೆ. ಕೂಡಲೆ ವಿಷಯ ತಿಳಿದ ಮನೆಯವರು ಆಕೆಯನ್ನು ಮಂಗಳೂರು ಆಸ್ಪತ್ರೆ ಸೇರಿಸಿದ್ದಾರೆ. ಆಕೆಯ ಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಕಿಯನ್ನು ಅಪಹರಿಸಿ, ಒಂದೂವರೆ ತಿಂಗಳು ನಿರಂತರವಾಗಿ ರೇಪ್-‌ ವ್ಯಕ್ತಿ ಅರೆಸ್ಟ್

    ಬಾಲಕಿಯನ್ನು ಅಪಹರಿಸಿ, ಒಂದೂವರೆ ತಿಂಗಳು ನಿರಂತರವಾಗಿ ರೇಪ್-‌ ವ್ಯಕ್ತಿ ಅರೆಸ್ಟ್

    ಲಕ್ನೋ: 15 ವರ್ಷದ ಬಾಲಕಿಯನ್ನು ಅಪಹರಿಸಿದ್ದಲ್ಲದೇ ಒಂದೂವರೆ ತಿಂಗಳ ಕಾಲ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಉತ್ತರಪ್ರದೇಶದ (Uttarpradesh) ಬಲ್ಲಿಯಾ ಪೊಲೀಸರ ಪ್ರಕಾರ, ಜುಲೈ 9 ರಿಂದ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತನ್ನ ಮನೆಯಿಂದ ಬಾಲಕಿ ಕಾಣೆಯಾಗಿದ್ದಳು. ಬಾಲಕಿ ಕಾಣೆಯಾದ ಮರುದಿನ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು.

    ಅಂತೆಯೇ ಬಾಲಕಿಯ ಹುಡುಕಾಟದಲ್ಲಿದ್ದ ಪೊಲೀಸರು ಆಗಸ್ಟ್ 26ರಂದು ದಿಯೋರಿಯಾ ಎಂಬ ಪ್ರದೇಶದಿಂದ ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಮ್ಯಾಜಿಸ್ಟ್ರೇಟ್ ಮುಂದೆ ಆಕೆಯ ಹೇಳಿಕೆ ದಾಖಲಿಸಿದ್ದಾರೆ. ಇದನ್ನೂ ಓದಿ: ಚಾಲಕನಿಗೆ ತಲೆ ಸುತ್ತು ಬಂದು ಡಿವೈಡರ್‌ಗೆ ಡಿಕ್ಕಿಯಾಗಿ BMTC ವೋಲ್ವೋ ಬಸ್ ಪಲ್ಟಿ

    ಬಿಹಾರದ ಸಿವಾನ್ ಜಿಲ್ಲೆಯ ನಿವಾಸಿ ರಾಹುಲ್ ಕುಮಾರ್ ಸಿಂಗ್ (19) ತನ್ನನ್ನು ಅಪಹರಿಸಿದ ನಂತರ ಡಿಯೋರಿಯಾಕ್ಕೆ ಕರೆದೊಯ್ದಿದ್ದಾನೆ. ನಂತರ ಅಲ್ಲಿ ಸೆರೆಯಾಗಿರಿಸಿಕೊಂಡು ಸುಮಾರು ಒಂದೂವರೆ ತಿಂಗಳ ಕಾಲ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ಆರೋಪಿಸಿರುವುದಾಗಿ ಎಸ್‍ಎಚ್‍ಒ ರಾಜೀವ್ ಸಿಂಗ್ ತಿಳಿಸಿದ್ದಾರೆ.

    ಸೋಮವಾರ ಠಾಣೆ ಕ್ರಾಸಿಂಗ್ ಬಳಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್‍ಎಚ್‍ಒ ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಖಿ ಕಟ್ಟಲು ಅಣ್ಣ ಬೇಕೆಂದ ಮಗಳು- ಗಂಡು ಮಗು ಕದ್ದು ಸಿಕ್ಕಿಬಿದ್ದ ದಂಪತಿ

    ರಾಖಿ ಕಟ್ಟಲು ಅಣ್ಣ ಬೇಕೆಂದ ಮಗಳು- ಗಂಡು ಮಗು ಕದ್ದು ಸಿಕ್ಕಿಬಿದ್ದ ದಂಪತಿ

    ನವದೆಹಲಿ: ಒಂದು ತಿಂಗಳ ಗಂಡು ಮಗುವನ್ನು ಅಪಹರಿಸಿದ (Boy Baby Kidnap) ಆರೋಪದ ಮೇಲೆ ದಂಪತಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

    ಬಂಧಿತರನ್ನು ಟ್ಯಾಗೋರ್ ಗಾರ್ಡನ್‍ನ ರಘುಬೀರ್ ನಗರದ ನಿವಾಸಿಗಳಾದ ಸಂಜಯ್ ಗುಪ್ತಾ (41) ಮತ್ತು ಅನಿತಾ ಗುಪ್ತಾ (36) ಎಂದು ಗುರುತಿಸಲಾಗಿದೆ. ಈ ದಂಪತಿಯ 17 ವರ್ಷದ ಮಗ ಕಳೆದ ವರ್ಷ ಸಾವನ್ನಪ್ಪಿದ್ದಾನೆ. ಇತ್ತ ಮುಂಬರುವ ರಕ್ಷಾ ಬಂಧನ (Rakshabhandhan) ಹಬ್ಬದಂದು ರಾಖಿ ಕಟ್ಟಲು ಅಣ್ಣ ಬೇಕು ಎಂದು ಮಗಳು ಕೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಮಗಳ ಸೆಯನ್ನು ಈಡೇರಿಸುವ ಸಲುವಾಗಿ ದಂಪತಿ ಗಂದು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ.

    ಗುರುವಾರ ಮುಂಜಾನೆ 4.34ರ ಸುಮಾರಿಗೆ ವಿಕಲಚೇತನ ಮಹಿಳೆಯೊಬ್ಬರ ಶಿಶುವನ್ನು ಅಪಹರಿಸಿದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಛಟ್ಟಾ ರೈಲ್ ಚೌಕ್‍ನ ಫುಟ್‍ಪಾತ್‍ನಲ್ಲಿ ವಾಸಿಸುವ ದೂರುದಾರ ದಂಪತಿ, ಮುಂಜಾನೆ 3 ಗಂಟೆಯ ಸುಮಾರಿಗೆ ಎಚ್ಚರಗೊಂಡಾಗ ತಮ್ಮ ಮಗು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಮಗುವನ್ನು ಯಾರೋ ಅಪಹರಿಸಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಘಟನೆ ಸಂಬಂಧ ಪೊಲೀಸರು ಸಮೀಪದ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು (CCTV Camera) ಪರಿಶೀಲಿಸಿದಾಗ, ಇಬ್ಬರು ಬೈಕ್‍ನಲ್ಲಿ ಆ ಪ್ರದೇಶದಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದೆ. ಬೈಕ್ ಸಂಜಯ್ ಹೆಸರಿನಲ್ಲಿ ನೋಂದಾಯಿಸುರುವುದು ಬೆಳಕಿಗೆ ಬಂದಿದೆ. ಅಂತೆಯೇ ಟ್ಯಾಗೋರ್ ಗಾರ್ಡನ್‍ನ ರಘುಬೀರ್ ನಗರದಲ್ಲಿರುವ ಸಿ-ಬ್ಲಾಕ್‍ನಲ್ಲಿ ಆರೋಪಿ ದಂಪತಿ ಮತ್ತು ಅಪಹರಣಕ್ಕೊಳಗಾದ ಮಗುವನ್ನುಪೊಲೀಸರು ಪತ್ತೆ ಹಚ್ಚಿರುವುದಾಗಿ ಉಪ ಪೊಲೀಸ್ ಆಯುಕ್ತ ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ.

    ಕಳೆದ ವರ್ಷ ಆಗಸ್ಟ್ 17 ರಂದು ತಮ್ಮ ಹದಿಹರೆಯದ ಮಗ ಟೆರೇಸ್‍ನಿಂದ ಬಿದ್ದು ಸಾವನ್ನಪ್ಪಿದ್ದಾನೆ ಮತ್ತು ಅವರ 15 ವರ್ಷದ ಮಗಳು ಮುಂಬರುವ ರಕ್ಷಾ ಬಂಧನದಂದು ರಾಖಿ ಕಟ್ಟಲು ಸಹೋದರನನ್ನು ಕೇಳುತ್ತಿದ್ದಳು ಎಂದು ಸಂಜಯ್ ಮತ್ತು ಅನಿತಾ ಬಹಿರಂಗಪಡಿಸಿದರು. ಆದ್ದರಿಂದ ಅವರು ಗಂಡುಮಗುವನ್ನು ಅಪಹರಿಸಲು ನಿರ್ಧರಿಸಿದರು. ಛಟ್ಟಾ ರೈಲ್ ಚೌಕ್ ಬಳಿ ತನ್ನ ತಾಯಿಯಿಂದ ಸ್ವಲ್ಪ ದೂರದಲ್ಲಿ ಮಲಗಿದ್ದ ಈ ಶಿಶುವನ್ನು ದಂಪತಿ ಕಂಡುಕೊಂಡು ಅಪಹರಿಸಿದ್ದಾರೆ.

    ವೃತ್ತಿಯಲ್ಲಿ ಟ್ಯಾಟೂ ಆರ್ಟಿಸ್ಟ್ ಆಗಿರುವ ಸಂಜಯ್ ಈ ಹಿಂದೆ ಮೂರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅನಿತಾ ಮೆಹಂದಿ ಕಲಾವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತ ಮಗುವಿನ ತಾಯಿ ಎರಡೂ ಕೈ ಮತ್ತು ಕಾಲುಗಳಿಗೆ ಅಂಗವಿಕಲರಾಗಿದ್ದಾರೆ ಮತ್ತು ಅವರ ತಂದೆ ಚಿಂದಿ ಆಯುವವರಾಗಿದ್ದಾರೆ. ಅವರು ನಿರಾಶ್ರಿತರಾಗಿದ್ದು, ಫುಟ್‍ಪಾತ್‍ನಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ನೇಹಿತನ ಮಗನನ್ನು ಅಪಹರಿಸಿ ಕೊಲೆ- ಅಪರಾಧಿಗೆ ಜೀವಾವಧಿ ಶಿಕ್ಷೆ, 3.25 ಲಕ್ಷ ರೂ. ದಂಡ

    ಸ್ನೇಹಿತನ ಮಗನನ್ನು ಅಪಹರಿಸಿ ಕೊಲೆ- ಅಪರಾಧಿಗೆ ಜೀವಾವಧಿ ಶಿಕ್ಷೆ, 3.25 ಲಕ್ಷ ರೂ. ದಂಡ

    ಶಿವಮೊಗ್ಗ: ಸ್ನೇಹಿತನ ಮೇಲಿನ ದ್ವೇಷಕ್ಕೆ ಆತನ ಮಗನನ್ನು ಅಪಹರಿಸಿ, ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದ ವ್ಯಕ್ತಿಗೆ ಶಿವಮೊಗ್ಗ (Shivamogga) ನ್ಯಾಯಾಲಯ (Court) ಜೀವಾವಧಿ ಶಿಕ್ಷೆ (Life Imprisonment) ಮತ್ತು 3.25 ಲಕ್ಷ ರೂ. ದಂಡ (Penalty) ವಿಧಿಸಿದೆ.

    ಜಿಲ್ಲೆಯ ಶಿಕಾರಿಪುರ (Shikaripura) ತಾಲೂಕಿನ ಚುರ್ಚಿಗುಂಡಿ ಗ್ರಾಮದ ಎನ್‌ಎಂ ಬಸವರಾಜಪ್ಪ (40) ಶಿಕ್ಷೆಗೆ ಒಳಗಾದ ಅಪರಾಧಿ. ಶಿವಮೊಗ್ಗದ ಆಲ್ಕೊಳ ನಿವಾಸಿ ನಿಂಗರಾಜು ಮತ್ತು ಬಸವರಾಜಪ್ಪ ಮೊದಲಿನಿಂದ ಪರಿಚಿತರು. ನಿಂಗರಾಜು ಮೇಲಿನ ಹಳೇ ದ್ವೇಷಕ್ಕೆ (Feud) ಆತನ ಮಗ ಪ್ರೇಮ್ ಕುಮಾರ್‌ನನ್ನು (8) ಬಸವರಾಜಪ್ಪ ಅಪಹರಣ (Kidnap) ಮಾಡಿದ್ದ. 2017ರ ಮಾರ್ಚ್ 2 ರಂದು ಆಳ್ಕೊಳ ಸರ್ಕಲ್‌ನಿಂದ ಅಪಹರಣ ಮಾಡಿ, ಚುರ್ಚಿಗುಂಡಿ ಹತ್ತಿರ ಕುಮದ್ವತಿ ನದಿ ಬಳಿ ಕರೆದೊಯ್ದು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ – ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಗೆ ನ್ಯಾಯಾಂಗ ಬಂಧನ

    ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿತ್ತು. ದೊಡ್ಡಪೇಟೆ ಠಾಣೆ ಇನ್ಸ್ಪೆಕ್ಟರ್ ಕೆಟಿ ಗುರುರಾಜ್ ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಲ್ಲದೇ ಆತನ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದನ್ನೂ ಓದಿ: ವಿಪಕ್ಷಗಳ ಮೈತ್ರಿಯಲ್ಲಿರುವ INDIA ಹೆಸರನ್ನು ನಿರ್ಬಂಧಿಸಿ – ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

    ಸರ್ಕಾರದ ಪರವಾಗಿ ವಕೀಲೆ ಪುಷ್ಪಾ ವಾದ ಮಂಡಿಸಿದ್ದು, ವಿಚಾರಣೆ ನಡೆಸಿದ ಬಳಿಕ ನ್ಯಾಯಾಧೀಶೆ ಬಿಆರ್ ಪಲ್ಲವಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಇದನ್ನೂ ಓದಿ: ಭಾಷಣದಲ್ಲಿ ಮತದಾರರಿಗೆ ಆಮಿಷ – ಜೆಪಿ ನಡ್ಡಾ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಕಿಯ ಅಪಹರಣಕ್ಕೆ ಯತ್ನಿಸಿದ್ದ ಆರೋಪಿ ಅರೆಸ್ಟ್ – ಕೃತ್ಯದ ಉದ್ದೇಶ ಕೇಳಿ ಪೊಲೀಸರೇ ಶಾಕ್

    ಬಾಲಕಿಯ ಅಪಹರಣಕ್ಕೆ ಯತ್ನಿಸಿದ್ದ ಆರೋಪಿ ಅರೆಸ್ಟ್ – ಕೃತ್ಯದ ಉದ್ದೇಶ ಕೇಳಿ ಪೊಲೀಸರೇ ಶಾಕ್

    ಬೆಳಗಾವಿ: ಟ್ಯೂಷನ್‌ಗೆ ಹೊರಟಿದ್ದ 9 ವರ್ಷದ ಬಾಲಕಿಯ ಅಪಹರಣ (Kidnap) ಪ್ರಕರಣದ ಆರೋಪಿಯನ್ನು ದೂರು ದಾಖಲಾದ 12 ಗಂಟೆಯೊಳಗೆ ಖಡೇಬಜಾರ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಬೆಳಗಾವಿಯ (Belagavi) ಮಾರುತಿ ನಗರದ ಗಜಾನನ ಪಾಟೀಲ್ (35) ಬಂಧಿತ ಆರೋಪಿ. ಗಜಾನನ ಪಾಟೀಲ್ ವಿಕೃತ ಮನಸ್ಥಿತಿ ಹೊಂದಿದವ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ. ತನಗೆ ಮದುವೆ ಆಗಿಲ್ಲ. ಹೀಗಾಗಿ ಬಾಲಕಿಯನ್ನು ಅಪಹರಣ ಮಾಡಲು ಯತ್ನಿಸಿದ್ದೇನೆ ಎಂದು ಆತ ತಿಳಿಸಿದ್ದಾನೆ.

    ನಗರದ ಎಲ್ಲ ಬಡಾವಣೆ ಸುತ್ತಾಡುತ್ತ ಮಹಿಳೆಯರು, ಯುವತಿಯರನ್ನು ಕೆಟ್ಟ ದೃಷ್ಟಿಯಿಂದ ಆರೋಪಿ ನೋಡುತ್ತಿದ್ದ. ಗಜಾನನ ವರ್ತನೆಗೆ ಬೇಸತ್ತು ಓರ್ವ ಸಹೋದರ ಬೇರೆ ಮನೆಯಲ್ಲಿ ವಾಸವಾಗಿದ್ದರು. ಮೈಸೂರಿನಲ್ಲಿರುವ ಮತ್ತೋರ್ವ ಸಹೋದರನ ಮನೆಯಲ್ಲಿ ಗಜಾನನ ತಾಯಿ ವಾಸವಾಗಿದ್ದರು. ಇದನ್ನೂ ಓದಿ: ದೇಶವ್ಯಾಪಿ ಮುಂಗಾರು ಕುಂಠಿತ – ರಾಜ್ಯದ 25 ಜಿಲ್ಲೆಗಳಲ್ಲಿ ಮಳೆ ಕೊರತೆ

    ಕುಟುಂಬಸ್ಥರು ಮನೆ ಬಿಟ್ಟು ಹೋದರೂ ತಾನು ಮಾತ್ರ ವರ್ತನೆ ಬದಲಿಸಿಕೊಳ್ಳದೇ ಇಡೀ ದಿನ ಗಲ್ಲಿ ಗಲ್ಲಿ ಸುತ್ತಾಡಿ ಮಹಿಳೆಯರನ್ನು ನೋಡುವುದೇ ಗಜಾನನನ ನಿತ್ಯ ಕಾಯಕವಾಗಿತ್ತು. ಹೀಗೆಂದು ಸ್ವತಃ ತಾನೇ ಪೊಲೀಸರ ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹಿಂಡಲಗಾ ಜೈಲಿಗೆ ಅಟ್ಟಿದ್ದಾರೆ. ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜೆಜೆಎಂ ಪೈಪ್‌ಗೆ ಚರಂಡಿ ನೀರು ಸೇರ್ಪಡೆ; ನೀರು ಸೇವಿಸಿದ 30ಕ್ಕೂ ಹೆಚ್ಚು ಜನರು ಅಸ್ವಸ್ಥ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]