Tag: ಅಪಹರಣ

  • 8ನೇ ಕ್ಲಾಸ್ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ – ಆರೋಪಿ ಅರೆಸ್ಟ್

    8ನೇ ಕ್ಲಾಸ್ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ – ಆರೋಪಿ ಅರೆಸ್ಟ್

    ಬೆಂಗಳೂರು: 15 ವರ್ಷದ 8ನೇ ಕ್ಲಾಸ್ ಒದುತ್ತಿದ್ದ ಅಪ್ರಾಪ್ತ ಬಾಲಕಿಯನ್ನ ಅಪಹರಿಸಿ ಆಕೆಯ ಮೇಲೆ ಅತ್ಯಚಾರವೆಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ 21 ವರ್ಷದ ವಿಕ್ಕಿ ಅಲಿಯಾಸ್ ನರಸಿಂಹಮೂರ್ತಿ ಬಂಧಿತ ಆರೋಪಿ. ಈತ ವಿದ್ಯಾರ್ಥಿನಿಯನ್ನ ಕಿಡ್ನಾಪ್ ಮಾಡಿ ಆಂಧ್ರಪ್ರದೇಶದ ಮಡಕಶಿರಕ್ಕೆ ಕರೆದೊಯ್ದಿದ್ದ. ಬಾಲಕಿ ಕಾಣೆಯಾಗಿರುವ ಬಗ್ಗೆ ಫೆಬ್ರವರಿ 9ರಂದು ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಹರಣ ಕೇಸ್ ದಾಖಲಾಗಿತ್ತು. ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನರಸಿಂಹ ಮೂರ್ತಿಯ ಬಾಲಕಿಯನ್ನು 3 ದಿನಗಳ ಹಿಂದೆ ವಾಪಸ್ ತಂದು ಬಿಟ್ಟು ಹೋಗಿದ್ದಾನೆ.

    ಬಾಲಕಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಅತ್ಯಾಚಾರವಾಗಿರವುದು ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಇಂದು ಬೆಳಿಗ್ಗೆ ಪೊಲೀಸರು ಆರೋಪಿ ನರಸಿಂಹಮೂರ್ತಿಯನ್ನು ಬಂಧಿಸಿದ್ದಾರೆ.