Tag: ಅಪಹರಣ

  • ಪೊಲೀಸ್ ವಾಹನದಲ್ಲೇ ಮನೆಗೆ ತೆರಳಿ ಐವರಿಂದ ಯುವತಿಯ ಕಿಡ್ನಾಪ್!

    ಪೊಲೀಸ್ ವಾಹನದಲ್ಲೇ ಮನೆಗೆ ತೆರಳಿ ಐವರಿಂದ ಯುವತಿಯ ಕಿಡ್ನಾಪ್!

    ಭೋಪಾಲ್: ಐದು ಜನರ ಗುಂಪೊಂದು ಪೊಲೀಸರನ್ನು ಬಂಧಿಸಿ ಅವರ ವಾಹದಲ್ಲಿಯೇ 18 ವರ್ಷದ ಯುವತಿಯನ್ನು ಅಪಹರಿಸಿಕೊಂಡು ಹೋಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶ ಪನ್ನಾ ಜಿಲ್ಲೆಯ ಬಮುರ್ಹಾ ಗ್ರಾಮದಲ್ಲಿ ನಡೆದಿದೆ.

    ಭಾನುವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ರಸ್ತೆಯಲ್ಲಿ ಕುಡಿದು ಬಿದ್ದಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಮಾಹಿತಿ ತಿಳಿದು ವಾಹನದಲ್ಲಿ ಚಾಲಕನ ಜೊತೆ ಇಬ್ಬರು ಪೊಲೀಸರು ಸ್ಥಳಕ್ಕೆ ಹೋಗಿದ್ದಾರೆ.

    ಲಭಿಸಿದ ಮಾಹಿತಿಯಂತೆ ವ್ಯಕ್ತಿ ರಸ್ತೆಯಲ್ಲಿ ಬಿದ್ದಿದ್ದ. ಈ ವೇಳೆ ವಾಹನದಿಂದ ಕೆಳಗಿಳಿದ ಇಬ್ಬರು ಪೊಲೀಸರು ಅವನ ಸಮೀಪಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಬಿದ್ದಂತೆ ನಟಿಸುತ್ತಿದ್ದ ಕುಡುಕ ತಕ್ಷಣ ಪೊಲೀಸರಿಗೆ ಗನ್ ತೋರಿಸಿ ಅಲ್ಲೇ ಸಮೀಪದಲ್ಲಿ ಅಡಗಿಕೊಂಡು ಕುಳಿತ್ತಿದ್ದ ನಾಲ್ವರನ್ನು ಕರೆದಿದ್ದಾನೆ.

    ಅಡಗಿಕೊಂಡಿದ್ದ ನಾಲ್ವರು ಬಂದು ಎಲ್ಲರು ಸೇರಿಕೊಂಡು ಪೊಲೀಸರನ್ನು ಬಂಧಿಸಿ ಅವರ ಬಟ್ಟೆಯನ್ನು ಕಳಚಿ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದಾರೆ. ಬಳಿಕ ಪೊಲೀಸರನ್ನು ಕೂರಿಸಿಕೊಂಡು ವಾಹನದಲ್ಲೇ ಪೊಲೀಸರಂತೆ ಪೋಸ್ ಕೊಟ್ಟು, 18 ವರ್ಷದ ಯುವತಿಯ ಮನೆಗೆ ಹೋಗಿದ್ದಾರೆ. ಬಳಿಕ ಯುವತಿಯನ್ನು ಕಿಡ್ನಾಪ್ ಮಾಡಿದ್ದಾರೆ.

    ಈ ಪ್ರಕರಣದ ಬಗ್ಗೆ ಯುವತಿಯ ತಂದೆ ರಾಜ್‍ಕುಮಾರ್ ಪಟೇಲ್ ಪ್ರತಿಕ್ರಿಯಿಸಿ, ಪೊಲೀಸರು ಬಂದು ನನ್ನ ಮತ್ತು ನನ್ನ ಮಗಳನ್ನು ಠಾಣೆಗೆ ಕರೆದರು. ನಂತರ ನಾನು ನನ್ನ ಸಹೋದರನನ್ನ ಕರೆದೆ. ಕೊನೆಗೆ ಮೂವರು ಜೊತೆಯಲ್ಲಿ ಪೊಲೀಸ್ ವಾಹನದಲ್ಲಿ ಹೊರಟೆವು. ಸ್ವಲ್ಪ ದೂರ ಹೋಗುತ್ತಿದ್ದಂತೆ ಅವರು ಗನ್ ತೋರಿಸಿ ಬೆದರಿಸಿ ನನ್ನನ್ನು ಮತ್ತು ಸಹೋದರನ್ನು ಕೆಳಗಿಸಿ ಮಗಳನ್ನು ಅಪಹರಿಸಿಕೊಂಡು ಹೋದರು ಎಂದು ತಿಳಿಸಿದ್ದಾರೆ.

    ಸ್ವಲ್ಪ ಸಮಯದ ನಂತರ ಈ ಐದು ಮಂದಿ ಬಂಧಿತ ಪೊಲೀಸರನ್ನು ಬಿಟ್ಟು ಅಪಹರಿಸಿದ ಯುವತಿಯೊಂದಿಗೆ ಬೇರೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸ್‍ಪಿ ರಿಯಾಜ್ ಇಕ್ಬಾಲ್ ತಿಳಿಸಿದ್ದಾರೆ.

     

  • ತಮಾಷೆಗಾಗಿ ಅಪ್ರಾಪ್ತೆಯನ್ನು ಕಿಡ್ನ್ಯಾಪ್ ಮಾಡಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದ್ರು!

    ತಮಾಷೆಗಾಗಿ ಅಪ್ರಾಪ್ತೆಯನ್ನು ಕಿಡ್ನ್ಯಾಪ್ ಮಾಡಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದ್ರು!

    ಲಕ್ನೋ: ಉತ್ತರಪ್ರದೇಶದ ಬುಲಂದರ್ ಶಹರ್ ನಲ್ಲಿ ಜ. 2ರಂದು ನಡೆದ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

    ಬಂಧಿತರನ್ನು ಜುಲ್ಫೀಕರ್ ಅಬ್ಬಸಿ ಹಾಗೂ ದಿಲ್ ಶದ್ ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಬುಲಂದರ್ ಶಹರ್ ನ ಸಿಕಂದ್ರಾಬಾದ್ ನಿವಾಸಿಗಳು ಎನ್ನಲಾಗಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿ ಇಸ್ರೈಲಿ ತಲೆ ಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ.

    ಆರೋಪಿಗಳು ಮೊದಲು ಸಿನಿಮಾ ನೋಡಿದ್ದಾರೆ. ನಂತರ ಮದ್ಯಪಾನ ಸೇವಿಸಿ, ಬಳಿಕ ಬುಲಂದರ್ ಶಹರ್ ರಾಷ್ಟ್ರೀಯ ಹೆದ್ದಾರಿ 91ರಲ್ಲಿ 16 ವರ್ಷದ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ. ಆರೋಪಿಗಳು ತಮಾಷೆಗಾಗಿ ಈ ಕೃತ್ಯ ಎಸಗಿದ್ದಾರೆಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    ಬಾಲಕಿ ಟ್ಯೂಷನ್ ನಿಂದ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಆಕೆಯನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಕಾರಿನೊಳಗೆ ಬಲವಂತವಾಗಿ ಎಳೆದುಕೊಂಡಿದ್ದಾರೆ. ಬಳಿಕೆ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಕತ್ತು ಹಿಸುಕಿ ಕೊಲೆಗೈದಿದ್ದಾರೆ. ನಂತ್ರ ಶವವನನ್ನು ಗ್ರೇಟರ್ ನೋಯ್ಡಾದಲ್ಲಿರೋ ಬಿಲ್ ಅಕ್ಬರ್ ಪುರ್ ಗ್ರಾಮದಲ್ಲಿನ ಕಾಲುವೆಗೆ ಎಸೆದಿದ್ದಾರೆ ಎಂದು ಅವರು ವಿವರಿಸಿದ್ದಾರೆ.

    ಸದ್ಯ ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಬಾಲಕಿಯನ್ನು ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಹೇಳಿದಾಗ ಪೊಲೀಸರು ಇದೊಂದು ಲವ್ ಕೇಸ್ ಎಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ನಿರಾಕರಿಸಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.

  • ಡ್ರಾಪ್ ಕೊಡುವ ನೆಪದಲ್ಲಿ 6 ವರ್ಷದ ಬಾಲಕಿ ಕಿಡ್ನಾಪ್

    ಡ್ರಾಪ್ ಕೊಡುವ ನೆಪದಲ್ಲಿ 6 ವರ್ಷದ ಬಾಲಕಿ ಕಿಡ್ನಾಪ್

    ಬಳ್ಳಾರಿ: ಡ್ರಾಪ್ ಕೊಡುವ ನೆಪದಲ್ಲಿ 6 ವರ್ಷದ ಬಾಲಕಿಯನ್ನು ಅಪರಿಚಿತ ವ್ಯಕ್ತಿಯೊಬ್ಬ ಅಪಹರಿಸಿಕೊಂಡು ಹೋಗಿರುವ ಘಟನೆ ಬಳ್ಳಾರಿ ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ನಡೆದಿದೆ.

    6 ವರ್ಷದ ಬಾಲಕಿ ಅಪಹರಣವಾದ ಮಗುವಾಗಿದೆ. ಮಗುವನ್ನು ಅಪಹರಿಸಿಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿರವಾರ ಗ್ರಾಮದಿಂದ ಕಪ್ಪಗಲ್ ಗ್ರಾಮದ ಖಾಸಗಿ ಶಾಲೆಗೆ ಹೋಗಿದ್ದ ಮಗು, ಬುಧವಾರ ಸಂಜೆ ಮನೆಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ.

    ಬೈಕ್‍ನಲ್ಲಿ ಬಂದಿದ್ದ ವ್ಯಕ್ತಿ ಡ್ರಾಪ್ ಮಾಡುವ ನೆಪದಲ್ಲಿ ಮಗುವಿನ ಅಪಹರಣ ಮಾಡಿದ್ದಾನೆ. ನಂತರ ಪೋಷಕರು ಮನೆಗೆ ಮಗು ಬಂದಿಲ್ಲ ಎಂದು ವಿಚಾರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣ ಪೊಲೀಸರು ಕಾರ್ಯಚರಣೆ ಕೈಗೊಂಡಾಗ ಸಿಸಿಟಿವಿ ದೃಶ್ಯಾವಳಿ ಪತ್ತೆಯಾಗಿದ್ದು, ಎಲ್ಲಾ ಕಡೆ ಸಂದೇಶ ಕಳುಹಿಸಿದ್ದಾರೆ.

    ಬುಧವಾರ ರಾತ್ರಿ ಮಗು ಆಂಧ್ರದ ಓಬಳಾಪುರದಲ್ಲಿ ಪತ್ತೆಯಾಗಿದೆ. ಬಳಿಕ ಯಾರೋ ಸ್ವಾಮಿಗೆ ಮಗು ಸಿಕ್ಕಿದ್ದು, ಅವರು ಪೊಲೀಸರಿಗೆ ತಂದು ಒಪ್ಪಿಸಿದ್ದಾರೆ. ಸದ್ಯಕ್ಕೆ ಕಿಡ್ನಾಪ್ ಆದ ಮಗು ಪತ್ತೆಯಾಗಿದ್ದು, ಅತ್ಯಾಚಾರ ಮಾಡಿರುವ ಅನುಮಾನ ಬಂದ ಹಿನ್ನೆಲೆಯಲ್ಲಿ ಮಗುವನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ. ಆದರೆ ಆರೋಪಿ ಪರಾರಿಯಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

  • ಲವ್ ಹೆಸ್ರಲ್ಲಿ ಮೋಸ ಮಾಡೋದೇ ಇವನ ಕಾಯಕ-ಹದಿಹರಿಯದೇ ಹುಡ್ಗಿರೇ ಇವನ ಟಾರ್ಗೆಟ್

    ಲವ್ ಹೆಸ್ರಲ್ಲಿ ಮೋಸ ಮಾಡೋದೇ ಇವನ ಕಾಯಕ-ಹದಿಹರಿಯದೇ ಹುಡ್ಗಿರೇ ಇವನ ಟಾರ್ಗೆಟ್

    ಬೆಂಗಳೂರು: ಪ್ರೀತಿ ಮಾಯೆ ಹುಷಾರು ಅಂತಾ ಹೇಳುತ್ತಾರೆ. ಆದರೂ ಕೆಲ ಮುಗ್ಧ ಹುಡುಗಿಯರನ್ನು ಮೋಸ ಮಾಡಲೆಂದು ಕೆಲವರು ಪ್ರೀತಿ ಎಂಬ ಮುಖವಾಡವನ್ನು ಧರಿಸುತ್ತಾರೆ. ಇದೇ ರೀತಿಯಾದ ಲವ್ ದೋಖಾ ಪ್ರಕರಣವೊಂದು ನಗರದ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

    ವಿನೋದ್ ಎಂಬಾತನೇ ಯುವತಿ ಮತ್ತು ಅಪ್ರಾಪ್ತ ಬಾಲಕಿಗೆ ಮೋಸ ಮಾಡಿದ ಕಾಮುಕ. ವಿನೋದ್ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಯುವತಿಯರಿಗೆ ಮೋಸ ಮಾಡಿದ್ದಾನೆ. ಇತ್ತೀಚೆಗೆ ಥಣಿಸಂದ್ರ ನಿವಾಸಿಯಾಗಿರುವ ಆಶಾ (ಹೆಸರು ಬದಲಾಯಿಸಲಾಗಿದೆ) ಎಂಬ ಬಾಲಕಿಯನ್ನು ಕರೆದುಕೊಂಡು ಎಸ್ಕೇಪ್ ಆಗಿದ್ದಾನೆ.

    ಆಶಾ ಪೋಷಕರು ಮೂಲತಃ ಪಶ್ಚಿಮ ಬಂಗಾಳದ ನಿವಾಸಿಗಳು. ಬೆಂಗಳೂರು ನಗರಕ್ಕೆ ಬಂದು ಸುಮಾರು 10 ವರ್ಷಗಳಾಗಿದ್ದು, ಅಪಾರ್ಟ್ ಮೆಂಟ್ ನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದಾರೆ. ಆಶಾ ನಗರದ ಖಾಸಗಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ವಿನೋದ್ ಬಾಲಕಿಯ ಎದುರು ಮನೆಯಲ್ಲಿ ವಾಸವಾಗಿದ್ದನು. ಮನೆಯಲ್ಲಿ ಪೋಷಕರು ಯಾರೂ ಇಲ್ಲದ ವೇಳೆ ಆಶಾಳೊಂದಿಗೆ ಮಾತನಾಡುತ್ತಿದ್ದನು. ಈ ಸಂಬಂಧ ಆಶಾ ಪೋಷಕರು ವಿನೋದನಿಗೆ ಮನೆಯತ್ತ ಬರಕೂಡದು ಎಂದು ಎಚ್ಚರಿಸಿದ್ದರು.

    ಡಿಸೆಂಬರ್ 02ರಂದು ಆಶಾ ಶಾಲೆಗೆ ಹೋಗದೇ ಮನೆಯಲ್ಲಿದ್ದಳು. ಪೋಷಕರು ಎಂದಿನಂತೆ ತಮ್ಮ ಕೆಲಸಕ್ಕೆ ತೆರಳಿದ ವೇಳೆ ವಿನೋದ್ ಬಾಲಕಿಯನ್ನು ಕರೆದುಕೊಂಡು ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಆಶಾ ಪೋಷಕರು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ವಿನೋದನ ಪತ್ತೆಗೆ ವಿಶೇಷ ಜಾಲ ಬೀಸಿದ್ದಾರೆ.

  • 10 ಜನ ದುಷ್ಕರ್ಮಿಗಳು ಯುವಕನ ಕಿಡ್ನ್ಯಾಪ್ ಮಾಡಿ ಡ್ರಾಗರ್, ಚಾಕುಗಳಿಂದ ಹಲ್ಲೆಗೈದ್ರು!

    10 ಜನ ದುಷ್ಕರ್ಮಿಗಳು ಯುವಕನ ಕಿಡ್ನ್ಯಾಪ್ ಮಾಡಿ ಡ್ರಾಗರ್, ಚಾಕುಗಳಿಂದ ಹಲ್ಲೆಗೈದ್ರು!

    ಬೆಂಗಳೂರು: ಕೊಲೆ ಮಾಡುವ ಉದ್ದೇಶದಿಂದ ಕಿಡ್ನ್ಯಾಪ್ ಮಾಡಿ ಥಳಿಸಿದ ಘಟನೆ ಇಂದಿರಾನಗರದಲ್ಲಿ ನಡೆದಿದೆ.

    ಅರುಣ್ ಕುಮಾರ್ ಹಲ್ಲೆಗೊಳಗಾದ ಯುವಕ. ಶನಿವಾರ ಸಂಜೆ ವೇಳೆ ಇಂದಿರಾನಗರ ಡಿಪೋ ಬಳಿ ತಾಯಿಯನ್ನು ಬಿಟ್ಟು ಬರುತ್ತಿದ್ದಾಗ 10 ಜನ ದುಷ್ಕರ್ಮಿಗಳು ಅರುಣ್ ನನ್ನು ಕಿಡ್ನ್ಯಾಪ್ ನಾಡಿ ಹತ್ತಿರದ ಗ್ರೌಂಡ್‍ಗೆ ಕರೆದೊಯ್ದಿದ್ದರು.

    ಅಪಹರಣಗೈದ ಬಳಿಕ ಮಾತನಾಡಲೂ ಬಿಡದೆ ಕೊಲೆ ಮಾಡುವ ಉದ್ದೇಶದಿಂದ ಡ್ರಾಗರ್, ಚಾಕುಗಳಿಂದ ಹಲ್ಲೆಯನ್ನ ನಡೆಸಿದ್ರು. ಬಳಿಕ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದ ಅರುಣ್, ಪೋಷಕರಿಗೆ ವಿಷಯ ತಿಳಿಸಿದ್ದಾನೆ. ನಂತರ ಆತನನ್ನು ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ರು.

    ಕಳೆದ ಮೂರು ತಿಂಗಳ ಹಿಂದೆ ಮನೆಯ ಬಳಿ ವಿಜಯ್ ಕುಮಾರ್ ಎಂಬಾತನ ಜೊತೆ ಕಿರಿಕ್ ಮಾಡಿಕೊಂಡಿದ್ದ ಅರುಣ್, ನಂತರ ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನದ ಬಳಿಕ ವಿಜಯ್ ಕುಮಾರ್ ಕೊಲೆ ಬೆದರಿಕೆ ಹಾಕಿದ್ದನಂತೆ. ಹೀಗಾಗಿ ಈತನೆ ಕೊಲೆಗೆ ಯತ್ನಿಸಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

    ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಟ್ಯೂಷನ್ ಶಿಕ್ಷಕಿಯಿಂದಲೇ ಅಪ್ರಾಪ್ತ ಬಾಲಕಿಯ ಅಪಹರಣ

    ಟ್ಯೂಷನ್ ಶಿಕ್ಷಕಿಯಿಂದಲೇ ಅಪ್ರಾಪ್ತ ಬಾಲಕಿಯ ಅಪಹರಣ

    ಮಂಡ್ಯ: ಟ್ಯೂಷನ್ ಮಾಡುತ್ತಿದ್ದ ಶಿಕ್ಷಕಿಯೇ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿರುವ ಘಟನೆ ಜಿಲ್ಲೆಯ ಕೀಲಾರ ಗ್ರಾಮದಲ್ಲಿ ನಡೆದಿದೆ.

    ಲಕ್ಷ್ಮಿ ಮತ್ತು ವಿಜಿ ದಂಪತಿಯ ಪುತ್ರಿಯಾದ 13 ವರ್ಷದ ಮಹಾಲಕ್ಷ್ಮಿ ಕಿಡ್ನಾಪ್ ಆಗಿರೋ ಬಾಲಕಿ. ಈ ದಂಪತಿ ಬೆಂಗಳೂರಿನಲ್ಲಿ ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿದ್ದು, ತಮ್ಮ ಮಗಳನ್ನು ಅಜ್ಜಿ ಮನೆಯಲ್ಲಿ ಬಿಟ್ಟು ಓದಿಸುತ್ತಿದ್ದರು. ಇದೀಗ ಟ್ಯೂಷನ್ ಮಾಡುತ್ತಿದ್ದ ಪೂಜಾ ಎಂಬ ಶಿಕ್ಷಕಿಯೇ ಬಾಲಕಿಯನ್ನ ಅಪಹರಿಸಿದ್ದಾಳೆ.

    20 ದಿನಗಳ ಹಿಂದೆ ಕೀಲಾರ ಗ್ರಾಮಕ್ಕೆ ಆಗಮಿಸಿದ್ದ ಪೂಜಾ, ತನ್ನ ಗಂಡ ಯೋಗೇಶ್ ಮತ್ತು ಸುನೀಲ್ ಎಂಬ ಯುವಕನೊಂದಿಗೆ ಬಾಡಿಗೆ ಮನೆ ಪಡೆದು ವಾಸವಿದ್ದಳು. ಮಹಾಲಕ್ಷ್ಮಿ ಎಂಟನೇ ತರಗತಿ ಓದುತ್ತಿದ್ದು, ಇತ್ತೀಚೆಗೆ ಗ್ರಾಮಕ್ಕೆ ಬಂದಿದ್ದ ಪೂಜಾ ಬಳಿ ಟ್ಯೂಷನ್‍ಗೆ ಹೋಗುತ್ತಿದ್ದಳು. ಕಳೆದ ನವೆಂಬರ್ 19 ರಂದು ಮಹಾಲಕ್ಷ್ಮಿಯನ್ನು ತನ್ನ ಜೊತೆ ಕರೆದುಕೊಂಡು ಹೋದ ಪೂಜಾ ನಾಪತ್ತೆಯಾಗಿದ್ದಾಳೆ.

    ಪೂಜಾಳ ಜೊತೆ ಆಕೆಯ ಗಂಡ ಯೋಗೇಶ್ ಮತ್ತು ಸುನೀಲ್‍ಕುಮಾರ್ ಕೂಡ ನಾಪತ್ತೆಯಾಗಿದ್ದಾರೆ. ಇದರಿಂದ ಆತಂಕಗೊಂಡ ಬಾಲಕಿಯ ಪೋಷಕರು ಕೆರಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಹೇಗಾದರೂ ಮಾಡಿ ನಮ್ಮ ಮಗಳನ್ನು ಹುಡುಕಿಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

  • ಗ್ರಾಮ ಪಂಚಾಯ್ತಿ ಅಧ್ಯಕ್ಷರ ಚುನಾವಣೆ ವೇಳೆ ಸದಸ್ಯನೇ ಅಪಹರಣ

    ಗ್ರಾಮ ಪಂಚಾಯ್ತಿ ಅಧ್ಯಕ್ಷರ ಚುನಾವಣೆ ವೇಳೆ ಸದಸ್ಯನೇ ಅಪಹರಣ

    ತುಮಕೂರು: ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನದ ಚುನಾವಣೆ ಸಂದರ್ಭದಲ್ಲಿ ಸದಸ್ಯರನ್ನೇ ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಹುತ್ರಿದುರ್ಗದಲ್ಲಿ ನಡೆದಿದೆ.

    ಕಾಂಗ್ರೆಸ್ ಸದಸ್ಯ ಶಿವಾನಂದ್ (40) ಕಳೆದ ಐದು ದಿನದಿಂದ ಕಣ್ಮರೆಯಾಗಿದ್ದಾರೆ. ಇಂದು ಅಧ್ಯಕ್ಷ ಚುನಾವಣೆ ನಡೆಯಬೇಕಿದ್ದು, ಉದ್ದೇಶ ಪೂರ್ವಕವಾಗಿಯೇ ಶಿವಾನಂದ್ ಅವರನ್ನು ಅಪಹರಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

    ಶಿವಾನಂದ್ ಕಣ್ಮರೆಯಾದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಅಧ್ಯಕ್ಷ ಚುನಾವಣೆಯನ್ನು ಕುಣಿಗಲ್ ತಹಶೀಲ್ದಾರ್ ನಾಗರಾಜು ಅವರು ಮುಂದೂಡಿದ್ದಾರೆ. ಆದರೆ ಇದರಿಂದ ಆಕ್ರೋಶಗೊಂಡ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಇಂದು ಚುನಾವಣೆ ನಡೆಸಬೇಕೆಂದು ಪಟ್ಟು ಹಿಡಿದಿದ್ದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿ ಗಲಾಟೆಯಾಗುವ ಸನ್ನಿವೇಶ ನಿರ್ಮಾಣವಾಗಿತ್ತು.

    ಅಷ್ಟೇ ಅಲ್ಲದೇ ಚುನಾವಣೆ ನಡೆಸುವಂತೆ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ತಹಶೀಲ್ದಾರ್ ಅವರನ್ನು ತಡೆದಿದ್ದಾರೆ. ಆದರೆ ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

  • ಅಪಹರಣಕಾರರ ಕೈಕಚ್ಚಿ ಬಾಗಲಕೋಟೆಯ ಬಾಲಕ ಗ್ರೇಟ್ ಎಸ್ಕೇಪ್

    ಅಪಹರಣಕಾರರ ಕೈಕಚ್ಚಿ ಬಾಗಲಕೋಟೆಯ ಬಾಲಕ ಗ್ರೇಟ್ ಎಸ್ಕೇಪ್

    ಬಾಗಲಕೋಟೆ: ಅಪಹರಣಕಾರರ ಕೈಯನ್ನು ಕಚ್ಚಿ ಬಾಲಕನೋರ್ವ ಗ್ರೇಟ್ ಎಸ್ಕೇಪ್ ಆಗಿರುವ ಘಟನೆ ನಗರದಲ್ಲಿ ನಡೆದಿದೆ.

    ಅಪಹರಣದ ನಡೆದ ಬಗ್ಗೆ ಈಗ ಬಾಲಕನ ಪೋಷಕರು ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    ನಮ್ಮ ಮಗ ಪ್ರಥಮ್ ಖಾಸಗಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗಮಾಡುತ್ತಿದ್ದಾನೆ. ಪ್ರಥಮ್ ಎಂದಿನಂತೆ ಬೆಳಗ್ಗೆ ಬೇಗ ಶಾಲೆಗೆ ಹೋಗಿ ಮೈದಾನದಲ್ಲಿ ಆಟ ಆಡಿ ಗಿಡದ ಕೆಳಗೆ ಕುಳಿತಿದ್ದ. ಆ ವೇಳೆ ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಕ್ರಿಕೆಟ್ ಆಡಲು ಮೈದಾನಕ್ಕೆ ಇಬ್ಬರು ದುಷ್ಕರ್ಮಿಗಳು ಆಗಮಿಸಿದ್ದಾರೆ. ಬಾಲ್ ಕಾಂಪೌಂಡ್ ಹೊರಗೆ ಹೊಡೆದ ಬಳಿಕ ಅದನ್ನು ತರಲು ಪ್ರಥಮ್ ಗೆ ಇವರು ಬೆದರಿಕೆ ಹಾಕಿದ್ದಾರೆ. ಆಗ ಪ್ರಥಮ್ ಬಾಲ್ ತರಲು ಕಾಂಪೌಂಡ್ ಬಳಿಗೆ ತೆರಳಿದ್ದಾನೆ. ಈ ವೇಳೆ ಅಲ್ಲಿದ್ದ ಇನ್ನಿಬ್ಬರು ಮುಸುಕುಧಾರಿಗಳು ಮಗನನ್ನು ಬಾಯಲ್ಲಿ ಬಟ್ಟೆ ಇಟ್ಟು ಬೈಕ್ ನಲ್ಲಿ ಎತ್ತಿಕೊಂಡು ಪರಾರಿಯಾಗಿದ್ದಾರೆ.

    ಶಿಕ್ಕೇರಿ ಕ್ರಾಸ್ ಬಳಿಯ ರೈಲು ಹಳಿಯ ಹತ್ತಿರ ಮುಳ್ಳು ಗಂಟಿಯಲ್ಲಿ ಬೈಕ್ ನಿಲ್ಲಿಸಿ ಮೊಬೈಲ್ ನಲ್ಲಿ ಮಾತನಾಡುತ್ತಾ ಸವಾರ ದೂರಕ್ಕೆ ತೆರಳಿದ್ದಾನೆ. ಈ ವೇಳೆ ಪ್ರಥಮ್ ಬಾಯಲ್ಲಿದ್ದ ಕರವಸ್ತ್ರ ಕಿತ್ತುಹಾಕಿ, ತನ್ನನ್ನು ಹಿಡಿದುಕೊಂಡಿದ್ದವನ ಕೈಯನ್ನು ಬಲವಾಗಿ ಕಚ್ಚಿ ಅಲ್ಲಿಂದ ಓಡಿ ಬಂದಿದ್ದಾನೆ.

    ಓಡಿ ಬಂದ ಬಳಿಕ ರಸ್ತೆಯ ಪಕ್ಕದ ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದವರ ಬಳಿ ವಿಚಾರ ತಿಳಿಸಿದ್ದಾನೆ. ನಂತರ ಅಪಹರಣಕಾರರು ಅಲ್ಲಿಂದ ಪರಾರಿಯಾಗಿದ್ದಾರೆ. ಕೆಲಸಗಾರರ ಸಹಾಯದಿಂದ ನಮಗೆ ಮಾಹಿತಿ ಸಿಕ್ಕಿತು ಎಂದು ಪೋಷಕರು ಘಟನೆಯ ಬಗ್ಗೆ ದೂರಿನಲ್ಲಿ ವಿವರಿಸಿದ್ದಾರೆ.

  • ಕುತ್ತಿಗೆಗೆ ಚಾಕು ಇಟ್ಟು ಫೋಟೋ ತೆಗೆದು ವಾಟ್ಸಪ್ ಮಾಡಿ 3 ಕೋಟಿಗೆ ಡಿಮ್ಯಾಂಡ್

    ಕುತ್ತಿಗೆಗೆ ಚಾಕು ಇಟ್ಟು ಫೋಟೋ ತೆಗೆದು ವಾಟ್ಸಪ್ ಮಾಡಿ 3 ಕೋಟಿಗೆ ಡಿಮ್ಯಾಂಡ್

    ಹೈದರಾಬಾದ್: ವ್ಯಾಪಾಸ್ಥರೊಬ್ಬರನ್ನು ಕಿಡ್ನಾಪ್ ಮಾಡಿ ಕುತ್ತಿಗೆಗೆ ಚಾಕು ಇಟ್ಟು ಫೋಟೋ ತೆಗೆದು ಅದನ್ನು ಕುಟುಂಬವರಿಗೆ ವಾಟ್ಸಪ್ ಮೂಲಕ ಕಳುಹಿಸಿ ಹಣಕ್ಕಾಗಿ ಬೇಡಿಕೆ ಮಾಡಿದ್ದಾರೆ. ಆದರೆ ಕುಟುಂಬದವರು ಹಣ ಕೊಡಲು ನಿರಾಕರಿಸಿದ್ದರಿಂದ ಕೋಪಗೊಂಡು ಅಪಹರಣಕಾರರು ವ್ಯಕ್ತಿಯನ್ನು ಕೊಂದೇ ಬಿಟ್ಟಿದ್ದಾರೆ.

    ಕುಶೈಗುಡಾ ಪೊಲೀಸ್ ವ್ಯಾಪ್ತಿಯ ಮಹೇಶ್ ನಗರದ ನಿವಾಸಿ ವಾಸುದೇವ್‍ರಾಜ್ ಅಪಹರಣಗಾರರಿಂದ ಹತ್ಯೆಯಾದ ದುರ್ದೈವಿ. ಈ ಘಟನೆ ಹೈದರಾಬಾದಿನ ಕುಶೈಗುಡಾದಲ್ಲಿ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಅಪರಿಚಿತ ವ್ಯಕ್ತಿಯೊಬ್ಬ ವಾಸುದೇವ್ ಬಳಿ ಬಂದು ನಿಮ್ಮ ಬಳಿ ವ್ಯಾಪಾರದ ಒಪ್ಪಂದ ಮಾಡಿಕೊಳ್ಳಬೇಕು ನಮ್ಮ ಮನೆಗೆ ಬನ್ನಿ ಎಂದು ಹೇಳಿದ್ದಾನೆ. ಅದರಂತೆ ವಾಸ್‍ದೇವ್ ಆತನ ಮನೆಗೆ ತೆರಳಿದಾಗ ಅಲ್ಲಿ ಅವರನ್ನು ಸಿಂಗಾಪುರಕ್ಕೆ ಕರೆದುಕೊಂಡಿದ್ದಾರೆ. ಅಲ್ಲಿ ಅವರ ಶರ್ಟ್ ಬಿಚ್ಚಿಸಿ, ಕೈ ಕಾಲು ಕಟ್ಟಿ ಹೊಡೆದು ಕುತ್ತಿಗೆಗೆ ಚಾಕು ಇಟ್ಟು ಫೋಟೋ ತೆಗೆದು ವಾಟ್ಸಪ್ ಮೂಲಕ 3 ಕೋಟಿ ರೂ. ಹಣದ ಬೇಡಿಕೆ ಇಟ್ಟಿದ್ದಾರೆ.

    ಆದರೆ ಕುಟುಬಂಸ್ಥರು ಹಣ ಕೊಡಲು ನಿರಾಕರಿಸಿ ಅಪಹರಣಕಾರರ ಬಳಿ ವಾಸುದೇವ್ ಅವರನ್ನು ಬಿಡುವಂತೆ ಕೇಳಿಕೊಂಡಿದ್ದರು. ಆದರೆ ಹಣ ಸಿಗಲಿಲ್ಲ ಎಂದು ಕೋಪಗೊಂಡ ಅಪಹರಣಗಾರರು ವಾಸುದೇವ್ ಅವರನ್ನು ಕೊಲೆ ಮಾಡಿದ್ದಾರೆ.

    ಹತ್ಯೆಯಾದ ವಾಸುದೇವ್ ಆರ್.ಕೆ ಎಂಟರ್‍ಪ್ರೈಸ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ಆರ್ಥಿಕವಾಗಿ ಸಮಸ್ಯೆಗಳನ್ನ ಹೊಂದಿದ್ದು, ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಕೂಡ ಬಳಲುತ್ತಿದ್ದರು. ಈಗ ಭಾರತೀಯ ರಾಯಭಾರಿ ಅಧಿಕಾರಿಗಳು ವಾಸುದೇವ್ ಅವರ ಶವವನ್ನು ಹೈದರಾಬಾದ್‍ಗೆ ಶನಿವಾರ ತರುವ ಪ್ರಯತ್ನ ನಡೆಸುತ್ತಿದ್ದಾರೆ.

     

  • ಉದ್ಯಮಿ ನವೀನ್ ಕಿಡ್ನಾಪ್ ಮಾಡಿದ್ದ ಆರೋಪಿಗಳ ಬಂಧನ

    ಉದ್ಯಮಿ ನವೀನ್ ಕಿಡ್ನಾಪ್ ಮಾಡಿದ್ದ ಆರೋಪಿಗಳ ಬಂಧನ

    ಬೆಂಗಳೂರು: ನಗರದಲ್ಲಿ ನಡೆದ ಉದ್ಯಮಿ ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯ ಕಂಡಿದೆ. ಹಣ ಪಡೆದು ಕಾರು ಕೊಡಿಸುವುದಾಗಿ ಹೇಳಿದ್ದ ಉದ್ಯಮಿ ನವೀನ್ ರನ್ನು ಅಪಹರಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ರೌಡಿ ನಾಗ ಅಲಿಯಾಸ್ ಗೆಡ್ಡ ನಾಗರಾಜ್, ಮೊಹಮ್ಮದ್ ಅಮೀರ್, ಪ್ರಕಾಶ್ ಹಾಗೂ ರಘು ಬಂಧಿತ ಆರೋಪಿಗಳು. ರೌಡಿ ನಾಗ 26 ಲಕ್ಷ ಹಣವನ್ನು ಉದ್ಯಮಿ ನವೀನ್ ಗೆ ನೀಡಿದ್ದ. ಕಾರ್ ಕೊಡಿಸುವುದಾಗಿ ಹೇಳಿ ನವೀನ್ ಹಣ ಪಡೆದಿದ್ದರು. ಆದರೆ ನವೀನ್ ಕಾರ್ ಕೊಡಿಸದೇ ಹಣವನ್ನೂ ಕೊಡದೇ ಸತಾಯಿಸುತ್ತಿದ್ದರು. ಹೀಗಾಗಿ ಕಳೆದ ಶುಕ್ರವಾರ ಉದ್ಯಮಿ ಕಂ ಕಾರ್ ಡಿಲರ್ ನವೀನ್ ರನ್ನು ಅಪಹರಣ ಮಾಡಿದ್ದರು.

    ಈ ಘಟನೆಯ ಬಳಿಕ ನವೀನ್ ಪತ್ನಿ ಮಾಗಡಿ ರಸ್ತೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ರೌಡಿ ನಾಗನ ತಂಡವು ನವೀನ್ ರನ್ನು ಅಪಹರಿಸಿ ರಾಮಮೂರ್ತಿನಗರದಲ್ಲಿ ಇಟ್ಟುಕೊಂಡಿದ್ದರು ಎಂಬುದು ಗೊತ್ತಾಗಿತ್ತು. ಇದೀಗ ಪೊಲೀಸರು ನಾಲ್ಕು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.