Tag: ಅಪಹರಣ

  • 1 ಕೋಟಿ ರೂ.ಗಾಗಿ ಸ್ನೇಹಿತರಿಂದಲ್ಲೇ ಖ್ಯಾತ ಖಳನಟನ ಬಾಮೈದನ ಅಪಹರಣ – ಸಿನಿಮಾ ಶೈಲಿಯಲ್ಲಿ ಆರೋಪಿಗಳ ಅರೆಸ್ಟ್

    1 ಕೋಟಿ ರೂ.ಗಾಗಿ ಸ್ನೇಹಿತರಿಂದಲ್ಲೇ ಖ್ಯಾತ ಖಳನಟನ ಬಾಮೈದನ ಅಪಹರಣ – ಸಿನಿಮಾ ಶೈಲಿಯಲ್ಲಿ ಆರೋಪಿಗಳ ಅರೆಸ್ಟ್

    ಬೆಂಗಳೂರು: ಹಣಕ್ಕಾಗಿ ಖಳನಟ ದಿವಂಗತ ವಜ್ರಮುನಿ ಅವರ ಬಾಮೈದನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ ಅಪಹರಣಕಾರರನ್ನು ಪೊಲೀಸರು ಸಿನಿಮಾ ಶೈಲಿಯಲ್ಲಿ ಬಂಧಿಸಿದ್ದಾರೆ.

    ವಜ್ರಮುನಿಯವರ ಬಾಮೈದ ಶಿವಕುಮಾರ್ ಬಾಷ್ ಕಂಪನಿಯಲ್ಲಿ ಟೆಕ್ನಿಷಿಯನ್ ಕೆಲಸ ಮಾಡುತ್ತಿದ್ದರು. ಇವರನ್ನು ಒಂದು ಕೋಟಿ ಹಣಕ್ಕಾಗಿ ಸ್ನೇಹಿತರೇ ಅಪಹರಣ ಮಾಡಿದ್ದರು. ಆದರೆ ಇಂದು ಪೊಲೀಸರ ಕಾರ್ಯಚರಣೆಯಿಂದ ಆರೋಪಿಗಳನ್ನು ಬಂಧಿಸಲಾಗಿದೆ.

    ಘಟನೆಯ ವಿವರ?:
    ಶಿವಕುಮಾರ್ ಸ್ನೇಹಿತ ಸತ್ಯ ಹೊಸ ಕಾರನ್ನು ತೆಗೆದುಕೊಂಡು ಸಾಲ ತೀರಿಸಲು ಆಗದೇ ಪರದಾಡುತ್ತಿದ್ದನು. ಈ ವೇಳೆ ಶಿವಕುಮಾರ್ ಗೆ ಸಾಲ ಕೊಡುವಂತೆ ಬೇಡಿಕೆ ಇಟ್ಟಿದ್ದನು. ಒಂದು ತಿಂಗಳ ಹಿಂದೆ ಶಿವಕುಮಾರ್ ತಮ್ಮ ಹಳೆ ಮನೆಯನ್ನು ಒಂದು ಕೋಟಿ ರೂ.ಗೆ ಮಾರಾಟ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸತ್ಯ ಸಾಲ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದನು. ಶಿವಕುಮಾರ್ ಯಾವಾಗ ಸಾಲವನ್ನು ಕೊಡುವುದಿಲ್ಲ ಎಂದು ತಿಳಿಯಿತೋ ಆಗ ಸತ್ಯ ತನ್ನ ಸ್ನೇಹಿತರ ಜೊತೆ ಸೇರಿ ಅಪಹರಣದ ಪ್ಲಾನ್ ಮಾಡಿದ್ದಾನೆ.

    ಭಾನುವಾರ ಸತ್ಯ ಮತ್ತು ಆತನ ಸ್ನೇಹಿತರು ಸೇರಿ ಶಿವಕುಮಾರ್ ನನ್ನು ಅಪಹರಿಸಿದ್ದಾರೆ. ನಂತರ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಆಪರೇಷನ್ ಶಿವ ಎಂಬ ಹೆಸರಿನಲ್ಲಿ ಕಾರ್ಯಾಚರಣೆಯನ್ನು ಮಾಡಿದ್ದಾರೆ. ನಂತರ ಆರೋಪಿಗಳ ಬಗ್ಗೆ ತಿಳಿದು ಡಿಸಿಪಿ ಹಾಗೂ ಎಸಿಪಿ ಸೇರಿದಂತೆ ಸಿಬ್ಬಂದಿಗಳಾದ ಗಿರಿರಾಜ್, ಭೋಳತ್ತಿನ್, ಮಂಜುನಾಥ್, ಇನ್ಸ್ ಪೆಕ್ಟರ್ ಚೇತನ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಪೊಲೀಸರು ಸಿನಿಮಾ ಶೈಲಿಯಲ್ಲಿ ಚೇಸ್ ಮಾಡಿದ್ದಾರೆ. ಬಳಿಕ ಕೋಲಾರದ ಶ್ರೀನಿವಾಸಪುರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಪ್ರಕರಣದಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದು, ಗೆಳೆಯ ಸತ್ಯ, ಯಶವಂತ, ವಿನೋದ ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ ಬಂಧಿತ ಆರೋಪಿಗಳ ಬಳಿ ಇದ್ದ ಒಂದು ಇನ್ನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆ ವೇಳೆ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ.

  • ಮನೆಯ ಹಿತ್ತಲಲ್ಲಿ ಅಸ್ಥಿಪಂಜರ ಪತ್ತೆ: ಮಗ ಬೇಕೆಂದು 10 ಮಕ್ಕಳನ್ನು ಅಪಹರಿಸಿದ ಆರೋಪ- ತಾಯಿ, ಮಗಳು ಅರೆಸ್ಟ್

    ಮನೆಯ ಹಿತ್ತಲಲ್ಲಿ ಅಸ್ಥಿಪಂಜರ ಪತ್ತೆ: ಮಗ ಬೇಕೆಂದು 10 ಮಕ್ಕಳನ್ನು ಅಪಹರಿಸಿದ ಆರೋಪ- ತಾಯಿ, ಮಗಳು ಅರೆಸ್ಟ್

    ಗಾಂಧಿನಗರ: 10 ಮಕ್ಕಳ ಅಪಹರಣ ಆರೋಪದ ಮೇಲೆ 40 ವರ್ಷದ ಮಹಿಳೆ ಮತ್ತು ಆಕೆಯ ಮಗಳನ್ನು ಪೊಲೀಸರು ಬಂಧಿಸಿದ ಘಟನೆ ಗುಜರಾತ್ ನ ಅಂಕಲೇಶ್ವರ ಪಟ್ಟಣದಲ್ಲಿ ನಡೆದಿದೆ.

    ರಶೀದಾ ಪಟೇಲ್(40) ಮತ್ತು ಮೊಹ್ಸಿನಾ(19) ಬಂಧಿತ ಆರೋಪಿಗಳಾಗಿದ್ದಾರೆ. ಭರೂಚ್ ನ ಅಂಕೆಲೆಶ್ವರ್ ಪೊಲೀಸರು ರಶೀದಾ ಮನೆಯನ್ನು ಪರಿಶೀಲಿಸಿದಾಗ ಮನೆಯ ಹಿಂಭಾಗದಲ್ಲಿ ಬಾಲಕನ ಅಸ್ಥಿಪಂಜರ ಸಿಕ್ಕಿದೆ. ಆದ್ದರಿಂದ ಇವರನ್ನು ಗುರುವಾರ ಕೊಲೆ ಆರೋಪದ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.

    ರಶೀದಾ ಮನೆಯಲ್ಲಿ ದೊರೆತ ಅಸ್ಥಿಪಂಜರವು ಏಳು ವರ್ಷದ ವಿಕಿ ದೇವಿಪುಜಾಕ್ ಎಂಬ ಬಾಲಕನದ್ದು ಎಂದು ತಿಳಿದಿಬಂದಿದೆ. ಈ ಬಾಲಕ 2016ರ ಮಾರ್ಚ್ ನಲ್ಲಿ ನಗರದ ಗುರುದ್ವಾರ ಪ್ರದೇಶದ ತನ್ನ ಮನೆಯಿಂದ ಕಾಣೆಯಾಗಿದ್ದ. ಬಾಲಕನ ಸಾವಿಗೆ ಕಾರಣ ತಿಳಿಯಲು ದೇಹದ ಅವಶೇಷಗಳನ್ನು ಫೋರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಜೆಜಿ ಅಮಿತ್ ಹೇಳಿದ್ದಾರೆ.

    ಆದ್ರೆ ಬಾಲಕ ಕೀಟನಾಶಕ ಸೇವಿಸಿ ಸಾವನ್ನಪ್ಪಿದ್ದ ಎಂದು ರಶೀದಾ ಹೇಳಿದ್ದಾಳೆ. ಈ ಸಂಬಂಧ ಪೊಲೀಸರು ರಶಿದಾಳನ್ನು ವಿಚಾರಣೆಗೆ ಒಳಪಡಿಸಿದಾಗ ಈಕೆಯ ಗಂಡು ಮಗು ಹಲವು ವರ್ಷಗಳ ಹಿಂದೆ ತೀರಿಕೊಂಡಿತ್ತು ಎಂದು ತಿಳಿದುಬಂದಿದೆ. ತನ್ನ ಕೊನೆಗಾಲದಲ್ಲಿ ನೋಡಿಕೊಳ್ಳಲು ಮಗ ಬೇಕೆಂದು ರಶೀದಾ ಈ ಕೃತ್ಯವೆಸಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

    ಮಾರ್ಚ್ 17 ರಂದು ರಶೀದಾ ಪಟೇಲ್ ಮತ್ತು ಮೊಹ್ಸಿನಾಳನ್ನು ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದರು. 2017ರ ನವೆಂಬರ್ 17ರಂದು ಮೋಹಿತ್ ಪಾಸ್ವಾನ್ ಎಂಬ 7 ವರ್ಷದ ಬಾಲಕ ಕಾಣೆಯಾಗಿದ್ದ. ರಶೀದಾ ಬಾಲಕನನ್ನ ತನ್ನ ಮನೆಯಲ್ಲಿ ಕೂಡಿಹಾಕಿದ್ದಳು. ಆದರೆ ಅವನು 4 ತಿಂಗಳ ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಬಂದು ತನ್ನ ಪೋಷಕರಿಗೆ ರಶೀದಾ ಬಗ್ಗೆ ವಿವರಿಸಿ, ಆಕೆ ನನಗೆ ಹೊಡೆಯುತ್ತಿದ್ದಳೆಂದು ತಿಳಿಸಿದ್ದನು. ನಂತರ ಬಾಲಕನ ತಂದೆ ರಶೀದಾ ಮತ್ತು ಮಗಳ ಮೇಲೆ ದೂರು ನೀಡಿದ್ದರು. ದೂರಿನನ್ವಯ ಪೊಲೀಸರು ತನಿಖೆ ನಡೆಸಿದಾಗ ರಶೀದಾ ಮನೆಯ ಹಿತ್ತಲಿನಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ.

    2017ರಲ್ಲಿ ಭರೂಚ್‍ನಲ್ಲಿ ಇನ್ನೂ 8 ಮಕ್ಕಳು ಕಾಣೆಯಾಗಿದ್ದು, ಇದರ ಹಿಂದೆ ರಶೀದಾ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

  • ಬಾವನೊಂದಿಗೆ ಬೈಕ್ ನಲ್ಲಿ ತೆರಳ್ತಿದ್ದಾಗ ಸಿನಿಮೀಯ ರೀತಿಯಲ್ಲಿ  ಕಿಡ್ನಾಪ್ – ಇಂದು ವಿದ್ಯಾರ್ಥಿನಿ ಮದ್ವೆಯಾಗಿ ಪ್ರತ್ಯಕ್ಷ!

    ಬಾವನೊಂದಿಗೆ ಬೈಕ್ ನಲ್ಲಿ ತೆರಳ್ತಿದ್ದಾಗ ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ – ಇಂದು ವಿದ್ಯಾರ್ಥಿನಿ ಮದ್ವೆಯಾಗಿ ಪ್ರತ್ಯಕ್ಷ!

    ಹಾಸನ: ನಗರದ ಹೊರವಲಯದ ಮಣಚನಹಳ್ಳಿ ಬಳಿ ಶನಿವಾರ ಸಂಜೆ ನಡೆದಿದ್ದ ಕಾಲೇಜು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನಾಪತ್ತೆಯಾಗಿದ್ದ ಯುವತಿ ಇಂದು ಮದುವೆಯಾಗಿ ಪ್ರತ್ಯಕ್ಷವಾಗಿದ್ದಾಳೆ.

    ಪೂಜಾ ಮತ್ತು ಅಭಿಲಾಷ್ ಕಳೆದ ಮೂರ್ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಅಭಿಲಾಷ್ ತನ್ನ ಸ್ನೇಹಿತರ ಜೊತೆ ಸೇರಿ ಪೂಜಾಳನ್ನು ಮದುವೆಯಾಗುವುದಕ್ಕಾಗಿಯೇ ಅಪಹರಣ ಮಾಡಿದ್ದಾನೆ ಎಂಬ ಮಾತು ಕೇಳಿಬರುತ್ತಿತ್ತು.

    ಆದ್ರೆ ಅಭಿಲಾಷ್ ಮತ್ತು ಪೂಜಾ ಧರ್ಮಸ್ಥಳಕ್ಕೆ ಹೋಗಿ ಮದುವೆಯಾಗಿದ್ದಾರೆ. ಇಂದು ಪೂಜಾ ಪತಿಯ ಜೊತೆ ಅವರ ಮನೆಗೆ ಹೋಗಿದ್ದಾರೆ. ಮದುವೆಗೆ ಮನೆಯವರ ವಿರೋಧ ಇದ್ದ ಕಾರಣ ಈ ಜೋಡಿ ಅಪಹರಣದ ನಾಟಕವಾಡಿತ್ತು.

    ನಡೆದಿದ್ದೇನು?
    ಹಾಸನದ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ 2ನೇ ವರ್ಷದ ಬಿಕಾಂ ಓದುತ್ತಿರುವ ಮಣಚನಹಳ್ಳಿ ಗ್ರಾಮದ ಪೂಜಾ ಎಂಬ ವಿದ್ಯಾರ್ಥಿನಿಯನ್ನು ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಮಾಡಲಾಗಿತ್ತು. ಪೂಜಾ ಶನಿವಾರ ಸಂಜೆ ಕಾಲೇಜು ಮುಗಿಸಿ ತನ್ನ ಬಾವನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಬಲವಂತವಾಗಿ ಪೂಜಾಳನ್ನು ಕರೆದುಕೊಂಡು ಪರಾರಿಯಾಗಿದ್ದರು. ಪ್ರಕರಣದ ಹಿಂದೆ ಅದೇ ಗ್ರಾಮದ ಹಾಲಿನ ಡೈರಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಲಾಷ್ ಎಂಬಾತನ ಕೈವಾಡ ಇದೆ ಎಂದು ಶಂಕಿಸಲಾಗಿತ್ತು. ಇದನ್ನು ಓದಿ: ಬಾವನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳಿಂದ ವಿದ್ಯಾರ್ಥಿನಿಯ ಅಪಹರಣ!

    ಈ ಸಂಬಂಧ ಪೆನ್ಷನ್ ಮೊಹಲ್ಲಾ ಪೊಲೀಸರು ಪ್ರಕರಣ ದಾಖಲಾಗಿತ್ತು.

  • ಬಾವನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳಿಂದ ವಿದ್ಯಾರ್ಥಿನಿಯ ಅಪಹರಣ!

    ಬಾವನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳಿಂದ ವಿದ್ಯಾರ್ಥಿನಿಯ ಅಪಹರಣ!

    ಹಾಸನ: ನಗರದ ಹೊರವಲಯದ ಮಣಚನಹಳ್ಳಿ ಬಳಿ ಶನಿವಾರ ಸಂಜೆ ನಡೆದಿದ್ದ ಕಾಲೇಜು ವಿದ್ಯಾರ್ಥಿನಿ ಅಪಹರಣ ಪ್ರಕರಣದ ಬಗ್ಗೆ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

    ಹಾಸನದ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ 2 ನೇ ವರ್ಷದ ಬಿಕಾಂ ಓದುತ್ತಿರುವ ಮಣಚನಹಳ್ಳಿ ಗ್ರಾಮದ ಪೂಜಾ ಎಂಬ ವಿದ್ಯಾರ್ಥಿನಿಯನ್ನು ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಮಾಡಲಾಗಿದೆ.

    ಪೂಜಾ ನಿನ್ನೆ ಸಂಜೆ ಕಾಲೇಜು ಮುಗಿಸಿ ತನ್ನ ಬಾವನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಬಲವಂತವಾಗಿ ಪೂಜಾಳನ್ನು ಕರೆದುಕೊಂಡು ಪರಾರಿಯಾಗಿದ್ದರು. ಪ್ರಕರಣದ ಹಿಂದೆ ಅದೇ ಗ್ರಾಮದ ಹಾಲಿನ ಡೈರಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಲಾಷ್ ಎಂಬಾತನ ಕೈವಾಡ ಇದೆ ಎಂದು ಶಂಕಿಸಲಾಗಿದೆ.

    ಪೂಜಾ ಮತ್ತು ಅಭಿಲಾಷ್ ಕಳೆದ ಮೂರ್ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಇವರಿಬ್ಬರ ಪ್ರೀತಿಗೆ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಅಭಿಲಾಷ್ ತನ್ನ ಸ್ನೇಹಿತರ ಜೊತೆ ಸೇರಿ ಪೂಜಾಳನ್ನು ಮದುವೆಯಾಗುವುದಕ್ಕಾಗಿಯೇ ಅಪಹರಣ ಮಾಡಿದ್ದಾನೆ ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ ಇಬ್ಬರೂ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ ಅಂತಾ ಹೇಳಲಾಗುತ್ತಿದೆ.

    ಈ ಸಂಬಂಧ ಪೆನ್ಷನ್ ಮೊಹಲ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ಬಿಗ್ ಬಾಸ್ ಸೆಲಬ್ರಿಟಿ, ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಸುನಾಮಿ ಕಿಟ್ಟಿ ಅರೆಸ್ಟ್!

    ಬಿಗ್ ಬಾಸ್ ಸೆಲಬ್ರಿಟಿ, ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಸುನಾಮಿ ಕಿಟ್ಟಿ ಅರೆಸ್ಟ್!

    ಬೆಂಗಳೂರು: ಬಿಗ್‍ಬಾಸ್ ಸೆಲಬ್ರಿಟಿ, ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಸುನಾಮಿ ಕಿಟ್ಟಿ ಅವರನ್ನು ಕಿಡ್ನಾಪ್ ಕೇಸ್ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಪ್ರಕರಣ ಸಂಬಂಧ ಸುನಾಮಿ ಕಿಟ್ಟಿ ಸೇರಿ ಮೂವರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಸುನೀಲ್ ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

    ಏನಿದು ಪ್ರಕರಣ?
    ಸುನಾಮಿ ಕಿಟ್ಟಿಯ ಗೆಳೆಯ ಸುನೀಲ್ ಪತ್ನಿಯನ್ನು ತೌಶಿಕ್ ಎಂಬಾತ ಪ್ರೀತಿಸುತ್ತಿದ್ದನು. ಫೆಬ್ರವರಿ 28 ರಂದು ತೌಶಿಕ್ ತನ್ನ ಪ್ರಿಯತಮೆಯೊಂದಿಗೆ ಬಾರ್ ಗೆ ಊಟಕ್ಕೆ ಬಂದಿದ್ದನು. ಈ ವಿಚಾರ ತಿಳಿದು ಕಿಟ್ಟಿ ಗ್ಯಾಂಗ್, ಸುನೀಲ್ ಪತ್ನಿಯ ಪ್ರಿಯಕರ ಯಾರೆಂದು ತಿಳಿದುಕೊಳ್ಳಲು ಮುಂದಾಗಿದ್ದರು. ಆದ್ರೆ ಇದೇ ವೇಳೆ ತೌಶಿಕ್ ಬಾರ್ ನಿಂದ ಬಿಲ್ ಕೊಡದೇ ಗಡಿಬಿಡಿಯಲ್ಲಿ ಪರಾರಿಯಾಗಿದ್ದನು. ಈ ಪ್ರಯತ್ನದಲ್ಲಿ ಬಾರ್ ಸಪ್ಲೈಯರ್ ಗಿರೀಶ್ ನನ್ನೇ ತೌಶಿಕ್ ಎಂದು ಭಾವಿಸಿ ಕಿಟ್ಟಿ ಗ್ಯಾಂಗ್ ಕಿಡ್ನಾಪ್ ಮಾಡಿತ್ತು. ಅಲ್ಲದೇ ಹೊರಮಾವು ಬಳಿ ಸುನೀಲ್ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ಯಾ ಎಂದು ಪ್ರಶ್ನಿಸಿ ಗಿರೀಶ್ ಮೇಲೆ ಹಲ್ಲೆ ಕೂಡ ಮಾಡಿತ್ತು. ಈ ವೇಳೆ ಗಿರೀಶ್, ಸುನೀಲ್ ಯಾರು? ಅವರ ಪತ್ನಿ ಯಾರು ಎಂದು ಪ್ರಶ್ನಿಸಿದ್ರು.

    ಕಿಟ್ಟಿ ಗ್ಯಾಂಗ್ ತೌಶಿಕ್ ಫೋಟೋ ತೋರಿಸಿದ್ದಾರೆ. ಈ ವೇಳೆ ಗಿರೀಶ್, ಇವರು ನಮ್ಮ ಬಾರ್ ಗೆ ಬರ್ತಾರೆ ಅಂತ ಹೇಳಿದ್ರು. ಅಲ್ಲದೇ ತೌಶಿಕ್ ಬಿಲ್ ಕೊಡದೇ ಹೋಗಿದ್ದನ್ನು ಕೂಡ ಗಿರೀಶ್, ಸುನಾಮಿ ಕಿಟ್ಟಿ ಮುಂದೆ ಬಾಯ್ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕಿಟ್ಟಿ ಗ್ಯಾಂಗ್, ಗಿರೀಶ್ ಕೈಯಲ್ಲಿಯೇ ತೌಶಿಕ್ ಗೆ ಕರೆ ಮಾಡಿಸಿ ಬಿಲ್ ಕೊಡುವಂತೆ ಹೇಳಿಸಿತ್ತು. ಅಂತೆಯೇ ಬಿಲ್ ಕೊಡಲು ಗೊರಗುಂಟೆ ಪಾಳ್ಯದ ಸಿಗ್ನಲ್ ಬಳಿ ಬರುವುದಾಗಿ ತೌಶಿಕ್ ತಿಳಿಸಿದ್ದನು. ಈ ವೇಳೆ ಗಿರೀಶ್ ನನ್ನು ಗೊರಗುಂಟೆಪಾಳ್ಯಕ್ಕೆ ಕರೆದುಕೊಂಡು ಹೋಗಿ ಗನ್ ಇಟ್ಟಿದ್ದ ಸುನಾಮಿ ಕಿಟ್ಟಿ ಗ್ಯಾಂಗ್, ನಾವು ಹೇಳಿದಂತೆ ಕೇಳು ಎಂದು ಬೆದರಿಕೆ ಹಾಕಿರುವುದಾಗಿ ತಿಳಿದುಬಂದಿದೆ.

    ಹಣ ಕೊಡಲು ಬರುತ್ತಿದ್ದಂತೆಯೇ ಕಿಟ್ಟಿ ಗ್ಯಾಂಗ್ ಗೊರಗುಂಟೆ ಪಾಳ್ಯದಲ್ಲಿ ತೌಶಿಕ್ ನನ್ನು ಕಿಡ್ನಾಪ್ ಮಾಡಿ ಬಳಿಕ ಇಬ್ಬರನ್ನು ಹೊರಮಾವು ಬಳಿಯ ತೋಟದ ಮನೆಗೆ ಕರೆದೊಯ್ದು ಹಲ್ಲೆಮಾಡಿದ್ದಾರೆಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಇತ್ತ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಇತರರು ಈ ಸಂಬಂಧ ದೂರು ದಾಖಲಿಸುತ್ತಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿಸಿದ ಪೊಲೀಸರು, ಬಾರ್ ನ ಸಿಸಿಟಿವಿ ಆಧರಿಸಿ, ಸುನಾಮಿ ಕಿಟ್ಟಿಯ ಫೋನ್ ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ. ಈತ ಆ ಬಾರ್ ಗೆ ಹೋಗಿ ಪ್ರತೀದಿನ ಕುಡಿಯುತ್ತಿದ್ದನು. ಆದ್ರೆ ಕಳೆದ ಎರಡು ದಿನಗಳಿಂದ ಕಿಟ್ಟಿ ಬಾರ್ ಗೆ ಹೋಗಿರಲಿಲ್ಲ. ಈ ಹಿನ್ನೆಲೆಯಲ್ಲಿಯೂ ಪೊಲೀಸರು ಕಿಟ್ಟಿ ಮೇಲೆ ಸಂಶಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

    ಕಿಟ್ಟಿ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಆರೋಪದ ಮೇಲೆಯೂ ಕೇಸ್ ದಾಖಲಾಗಿದೆ.

  • ಅಮ್ಮನಂತೆ ನಾಟಕವಾಡಿ ಬಾಲಕಿಯ ಅಪಹರಣ ತಪ್ಪಿಸಿದ ಮಹಿಳೆ

    ಅಮ್ಮನಂತೆ ನಾಟಕವಾಡಿ ಬಾಲಕಿಯ ಅಪಹರಣ ತಪ್ಪಿಸಿದ ಮಹಿಳೆ

    ಕ್ಯಾಲಿಪೋರ್ನಿಯಾ: ಅಮ್ಮನಂತೆ ನಾಟಕವಾಡಿ ಮಹಿಳೆಯೊಬ್ಬರು ಬಾಲಕಿಯ ಅಪಹರಣವನ್ನು ತಪ್ಪಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

    ಕ್ಯಾಲಿಫೋರ್ನಿಯಾದ ಬಾಲಕಿ ಮಾರ್ಟಿನೆಜ್ ಸಾಂತಾ ಅನಾ ಸ್ಕೂಲ್ ಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಯೊಬ್ಬ ಬಂದು ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲೆ ಇದ್ದ ಕ್ಲೌಡಿಯಾ ಎಂಬ ಮಹಿಳೆ ಇದನ್ನು ಗಮನಿಸಿದ್ದಾರೆ. ನಂತರ ಮಹಿಳೆ ಬಾಲಕಿಯ ಬಳಿ ಬಂದು ಅಮ್ಮನಂತೆ ಪೋಸು ಕೊಟ್ಟಿದ್ದಾರೆ.

    ಮಹಿಳೆ ಬಾಲಕಿಯ ಹೆಗಲ ಮೇಲೆ ಕೈಹಾಕಿಕೊಂಡು ಸುಮ್ಮನೇ ನಡೆದುಕೊಂಡು ಹೋಗಿದ್ದಾರೆ. ಆದರೆ ಬಾಲಕಿ ಅಪರಿಚಿತ ಮಹಿಳೆ ತನ್ನನ್ನು ಕರೆದುಕೊಂಡು ಹೋಗುತ್ತಿರುವುದನ್ನು ನೋಡಿ ಗಾಬರಿಯಿಂದ ಅಳಲಾರಂಭಿಸಿದ್ದಾಳೆ. ಬಾಲಕಿ ಅಳುತ್ತಿದ್ದರಿಂದ ಮಹಿಳೆ ಸ್ಪ್ಯಾನಿಶ್ ಭಾಷೆ ಮಾತನಾಡುತ್ತಿದ್ದರೂ ಬಾಲಕಿಗೆ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ನಂತರ ಅವಳನ್ನು ಶಾಲೆಯವರೆಗೂ ಬಿಟ್ಟಿದ್ದಾರೆ.

    ಮಹಿಳೆ ಶಾಲಾ ಅಧಿಕಾರಿಗಳಿಗೆ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಸಮಯ ಪ್ರಜ್ಞೆಯಿಂದಾಗಿ ಬಾಲಕಿ ಅಪಹರಣದಿಂದ ಪಾರಾಗಿದ್ದಾಳೆ. ಅಪಹರಣಕಾರರಿಂದ ತನ್ನನ್ನು ಕಾಪಾಡಿದ ಮಹಿಳೆ ನಿಜಕ್ಕೂ ಧೈರ್ಯವಂತೆ ಎಂದು ಬಾಲಕಿ ಹೇಳಿದ್ದಾಳೆ.

  • ಆಫ್ರಿಕಾದಲ್ಲಿ ಅಪಹರಣಗೊಂಡಿದ್ದ ಹಡಗಿನಲ್ಲಿದ್ದ 22 ಭಾರತೀಯರ ರಕ್ಷಣೆ- ಭಾರತಕ್ಕೆ ರಾಜತಾಂತ್ರಿಕ ಗೆಲುವು

    ಆಫ್ರಿಕಾದಲ್ಲಿ ಅಪಹರಣಗೊಂಡಿದ್ದ ಹಡಗಿನಲ್ಲಿದ್ದ 22 ಭಾರತೀಯರ ರಕ್ಷಣೆ- ಭಾರತಕ್ಕೆ ರಾಜತಾಂತ್ರಿಕ ಗೆಲುವು

    ನವದೆಹಲಿ: ಆಫ್ರಿಕಾ ಬೆನಿನ್ ಕರಾವಳಿಯಿಂದ ಅಪಹರಣಗೊಂಡಿದ್ದ ಇಂಧನ ಹಡಗಿನಲ್ಲಿದ್ದ 22 ಭಾರತೀಯರನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

    ಫೆಬ್ರವರಿ 1 ರಂದು ಪಶ್ಚಿಮ ಆಫ್ರಿಕಾ ಕರಾವಳಿಯಿಂದ ಹಡಗು ನಾಪತ್ತೆಯಾಗಿತ್ತು. ಈ ಕುರಿತು ಟ್ವೀಟ್ ಮಾಡಿರುವ ಸುಷ್ಮಾ ಸ್ವರಾಜ್ ಅವರು, ನನಗೆ ತುಂಬಾ ಸಂತೋಷವಾಗುತ್ತಿದೆ. 22 ಭಾರತೀಯ ಪ್ರಜೆಗಳಿದ್ದ ಹಡಗನ್ನು ಅಪಹರಣಕಾರರು ಬಿಡುಗಡೆ ಮಾಡಿದ್ದಾರೆ. ಈ ಕಾರ್ಯಕ್ಕೆ ಸಹಕಾರ ನೀಡಿದ ನೈಜೀರಿಯಾ ಹಾಗೂ ಬಿನಿನ್ ಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

    ಈ ಹಿಂದೆ ಘಟನೆ ಕುರಿತು ಮಾಹಿತಿ ನೀಡಿದ್ದ ಅವರು, ತಾನು ನೈಜೀರಿಯಾ ವಿದೇಶಾಂಗ ಇಲಾಖೆಯೊಂದಿಗೆ ಸಂಪರ್ಕ ಮಾಡಿದ್ದು, ಅವರು ಸಹಕಾರ ನೀಡುವುದಾಗಿ ತಿಳಿಸಿದ್ದರು ಎಂದು ಹೇಳಿದ್ದರು.

    13,500 ಟನ್ ಗ್ಯಾಸೋಲಿನ್ ಹೊಂದಿದ್ದ ಹಡಗನ್ನು ಹೈಜಾಕ್ ಮಾಡಲಾಗಿತ್ತು. ಇದಕ್ಕೂ ಮುನ್ನ ಹಡಗಿನ ಎಲ್ಲಾ ಸಂವಹನ ವ್ಯವಸ್ಥೆಗಳನ್ನು ಕಡಿತಗೊಳಿಸಿದ್ದರು. ಹಡಗನ್ನು ಗಲ್ಫ್ ನ ಬೆನಿನ್ ಗಿನಿಯ ಪ್ರದೇಶದಲ್ಲಿ ನಿಲ್ಲಿಸಿದ್ದರು ಎಂದು ತಿಳಿದುಬಂದಿದೆ.

    ಇಂಧನ ಹಡಗು ಮುಂಬೈ ಮೂಲದ ಆಂಗ್ಲೋ ಇಸ್ಟ್ರನ್ ಕಂಪನಿ ಮಾಲೀಕತ್ವ ಹೊಂದಿತ್ತು. ಈ ಮೊದಲು ನೌಕೆಯ ಕಾಣೆಯಾಗಿರುವ ಕುರಿತು ಅನುಮಾನ ವ್ಯಕ್ತವಾಗಿತ್ತು. ಆದರೆ ಅನಂತರದಲ್ಲಿ ಅಪಹರಣವಾಗಿರುವುದು ದೃಢಪಟ್ಟಿತ್ತು. ಶೋಧಕಾರ್ಯಕ್ಕೆ ಸಹಾಯ ಮಾಡುವಂತೆ ಹಡಗು ಮಾಲೀಕರು ಮುಂಬೈನ ನೌಕ ಮಹಾನಿರ್ದೇಶನಾಲಯಕ್ಕೆ ಮನವಿ ಮಾಡಿದ್ದರು. ಭಾರತೀಯ ವಿದೇಶಾಂಗ ಇಲಾಖೆ ನೈಜೀರಿಯಾ ದೇಶದ ಸಹಾಯ ಪಡೆದು ಪತ್ತೆ ಕಾರ್ಯಾಚರಣೆ ನಡೆಸಿತ್ತು.

  • ಶಾಲಾ ಬಸ್ಸಿನಿಂದ ಬಾಲಕನ ಕಿಡ್ನಾಪ್, 50 ಲಕ್ಷಕ್ಕೆ ಬೇಡಿಕೆ- ಕಿಡ್ನಾಪರ್ ಎನ್‍ಕೌಂಟರ್ ಮಾಡಿ ಬಾಲಕನನ್ನು ರಕ್ಷಿಸಿದ ಪೊಲೀಸರು

    ಶಾಲಾ ಬಸ್ಸಿನಿಂದ ಬಾಲಕನ ಕಿಡ್ನಾಪ್, 50 ಲಕ್ಷಕ್ಕೆ ಬೇಡಿಕೆ- ಕಿಡ್ನಾಪರ್ ಎನ್‍ಕೌಂಟರ್ ಮಾಡಿ ಬಾಲಕನನ್ನು ರಕ್ಷಿಸಿದ ಪೊಲೀಸರು

    ನವದೆಹಲಿ: ಅಪಹರಣವಾಗಿದ್ದ ನಾಲ್ಕೂವರೆ ವರ್ಷದ ಬಾಲಕನನ್ನು ಸುಮಾರು 12 ದಿನಗಳ ಬಳಿಕ ಪೊಲೀಸರು ರಕ್ಷಣೆ ಮಾಡಿ ಪೋಷಕರಿಗೆ ಒಪ್ಪಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಬಾಲಕ ವಿಹಾನ್ ಶಾಲಾ ಬಸ್ ನಲ್ಲಿ ದಿಲ್ಶಾನ್ ಗಾರ್ಡನ್ ಬಳಿ ತೆರಳುತ್ತಿದ್ದ ಸಂದರ್ಭದಲ್ಲಿ ಮೂವರು ದುಷ್ಕರ್ಮಿಗಳು ಆತನನ್ನು ಅಪಹರಿಸಿದ್ದರು. ಕೂಡಲೇ ಪೋಷಕರು ಮಗ ನಾಪತ್ತೆಯಾಗಿರುವ ಕುರಿತು ಕ್ರೈಂ ಬ್ರಾಂಚ್ ಪೊಲೀಸರಿಗೆ ದೂರು ನೀಡಿದ್ದರು.

    ವಿಹಾನ್ ನಗರದ ವಿವೇಕಾನಂದ ಶಾಲೆಯಲ್ಲಿ ಓದುತ್ತಿದ್ದು, ಜನವರಿ 25ರಿಂದ ನಾಪತ್ತೆಯಾಗಿದ್ದ. ನಾಪತ್ತೆಯಾದ 3 ದಿನಗಳ ಬಳಿಕ ಅಪರಿಚಿತರು ವಿಹಾನ್ ಪೋಷಕರಿಗೆ ಕರೆ ಮಾಡಿ, 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕರೆ ಬಂದ ಕೂಡಲೇ ಎಚ್ಚೆತ್ತ ಪೊಲೀಸರು ಅಪಹರಣಕಾರರ ಫೋನ್ ಮಾಹಿತಿ ಕಲೆ ಹಾಕಿದಾಗ ಅವರು ಘಜಿಯಾಬಾದ್ ನಲ್ಲಿ ಅಡಗಿಕೊಂಡಿರುವುದು ಗೊತ್ತಾಗಿತ್ತು.

    ಕೂಡಲೇ ಪೊಲೀಸರು ಘಜಿಯಾಬಾದ್ ಪೊಲೀಸ್ ತಂಡದ ನೆರವು ಪಡೆದು ಇಲ್ಲಿನ ಶಾಲಿಮಾರ್ ಸಿಟಿ ಅರ್ಪಾಟ್‍ಮೆಂಟ್ ನಲ್ಲಿ ಅಪಹರಣಕಾರರ ಮೇಲೆ ಗುಂಡಿನ ದಾಳಿ ನಡೆಸಿ ಬಾಲಕನನ್ನು ರಕ್ಷಿಸಿದ್ದಾರೆ. ಗುಂಡಿನ ದಾಳಿಯಿಂದಾಗಿ ಓರ್ವ ಆರೋಪಿ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡಿದ್ದಾನೆ. ಈ ಮಧ್ಯೆ ಮೂರನೇ ಆರೋಪಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

    ಪೊಲೀಸರು ಅಪಹರಣಕಾರರನ್ನು ಬೆನ್ನಟ್ಟುವ ಮೊದಲು ಈ ಕುರಿತು ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಲ್ಲಿ ಮನವಿ ಮಾಡಿದ್ದರು. ಹೀಗಾಗಿ ಬಾಲಕನನ್ನು ರಕ್ಷಿಸಿ ಸುರಕ್ಷಿತವಾಗಿ ಹೆತ್ತವರಿಗೆ ಒಪ್ಪಿಸಿದ ನಂತರವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ.

  • ಮೈಸೂರು: ನಡುರಸ್ತೆಯಲ್ಲೇ ವ್ಯಕ್ತಿಯ ಅಪಹರಣ

    ಮೈಸೂರು: ನಡುರಸ್ತೆಯಲ್ಲೇ ವ್ಯಕ್ತಿಯ ಅಪಹರಣ

    ಮೈಸೂರು: ವ್ಯಕ್ತಿಯೊಬ್ಬರನ್ನು ನಡುರಸ್ತೆಯಲ್ಲೇ ಅಪಹರಣ ಮಾಡಿರುವ ಘಟನೆ ಮೈಸೂರಿನ ಕೆ.ಆರ್.ನಗರ ಬಜಾರ್ ರಸ್ತೆಯಲ್ಲಿ ನಡೆದಿದೆ.

    ನಗರದ ಆಯುರ್ವೇದ ಔಷಧಿ ವೈದ್ಯ ಅಪ್ಸರ್ ಪಾಷ (28) ಅಪಹರಣಕ್ಕೆ ಒಳಗಾದ ವ್ಯಕ್ತಿ. ಬೆಂಗಳೂರು ಮೂಲದ 5 ಮಂದಿ ತಂಡದಿಂದ ಅಪಹರಣ ಶಂಕೆ ವ್ಯಕ್ತವಾಗಿದೆ.

    ಅಪ್ಸರ್ ಪಾಷ ತಮ್ಮ ಅಕ್ಕನ ಮಗನ ಜೊತೆ ಬಟ್ಟೆ ತರಲು ಹೋದ ವೇಳೆ ಈ ಘಟನೆ ನಡೆದಿದೆ. ಈ ವೇಳೆ ಸ್ಥಳಕ್ಕೆ ಬಂದ ಐವರ ತಂಡ ಬೆಂಗಳೂರು ನೋಂದಣಿ ಇರುವ ಕಾರಿನಲ್ಲಿ ಇಬ್ಬರನ್ನೂ ಅಪಹರಿಸಲು ಯತ್ನಿಸಿದ್ದಾರೆ. ಈ ವೇಳೆ ಅಪ್ಸರ್ ಪಾಷ ಅವರ ಜೊತೆಗಿದ್ದ ನದೀಂ ಖಾನ್ ಅಪಹರಣಕಾರರಿಂದ ತಪ್ಪಿಸಿಕೊಂಡಿದ್ದಾರೆ. ಅಪಹರಣ ಮಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಆರೋಪಿಗಳೂ ಅಪ್ಸರ್ ಪಾಷ ರನ್ನು ಏಕೆ? ಅಪಹರಣ ಮಾಡಿದ್ದಾರೆ ಎಂಬುವುದು ತಿಳಿದು ಬಂದಿಲ್ಲ. ಮೈಸೂರಿನ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ.

    https://www.youtube.com/watch?v=6azj64IYa0Q

  • ತಾಯಿಯ ಹುಟ್ಟು ಹಬ್ಬದ ದಿನದಂದೇ ಮುದ್ದು ಮಗನ ಕಿಡ್ನಾಪ್

    ತಾಯಿಯ ಹುಟ್ಟು ಹಬ್ಬದ ದಿನದಂದೇ ಮುದ್ದು ಮಗನ ಕಿಡ್ನಾಪ್

    ಬೆಂಗಳೂರು: ತಾಯಿಯ ಹುಟ್ಟು ಹಬ್ಬದ ಖುಷಿಯಲ್ಲಿ ಮಗು ಮನೆ ಅಂಗಳದಲ್ಲಿ ಆಡುತ್ತಿತ್ತು. ಪೋಷಕರು ಕೂಡ ಮನೆ ಅಂಗಳದಲ್ಲಿ ಆಟ ಆಡುತ್ತಿರಬೇಕೆಂದು ಸುಮ್ಮನಾಗಿದ್ದರು. ಆದ್ರೆ ನಾನು ನಿಮ್ಮ ಮಾವ ಅಂತಾ ಬಂದ ವ್ಯಕ್ತಿಯೊಬ್ಬ ಮಗುವನ್ನು ಕಿಡ್ನಾಪ್ ಮಾಡಿ ಎಸ್ಕೇಪ್ ಆಗಿದ್ದಾನೆ.

    ಬೆಂಗಳೂರಿನ ಕೆಪಿ ಅಗ್ರಹಾರದ ಮಂಜುನಾಥ್ ನಗರದ ರಾಜೇಶ್ ಮತ್ತು ಮಾಲಾ ದಂಪತಿಯ ಐದು ವರ್ಷದ ಮಗ ಚಂದನ್ ಎಂಬಾತನನ್ನು ಅಪಹರಣ ಮಾಡಲಾಗಿದೆ. ಭಾನುವಾರ ಚಂದನ್ ತಾಯಿ ಮಾಲಾರ ಬರ್ತ್ ಡೇ ಇತ್ತು. ಈ ಖುಷಿಯಲ್ಲಿದ್ದ ಪೋಷಕರು ದೇವಸ್ಥಾನಕ್ಕೆ ಹೋಗಲು ಮೊದಲು ಮಗುವನ್ನು ರೆಡಿ ಮಾಡಿ ಆಟವಾಡೋಕೆ ಬಿಟ್ಟು, ನಂತ್ರ ತಾವು ರೆಡಿ ಆಗುತ್ತಿದ್ದರು. ಈ ವೇಳೆಯಲ್ಲಿಯೇ ಚಂದನ್ ಕಿಡ್ನಾಪ್ ಆಗಿದೆ. ಬೈಕಿನಲ್ಲಿ ಬಂದವನೊಬ್ಬ ಚಂದನ್ ಜೊತೆ ಎಸ್ಕೇಪ್ ಆಗಿದ್ದಾನೆ.

    ಇದೇ ವೇಳೆ ಫೋನ್ ಮಾಡಿದ ಕಿಡ್ನಾಪರ್, ನಿಮಗೆ ನಿಮ್ಮ ಮಗು ಬೇಕಾದ್ರೆ 30 ಸಾವಿರ ಕೊಡಿ ಅಂತಾ ಹೇಳಿ ಫೋನ್ ಕಟ್ ಮಾಡಿದ್ದಾನೆ. ಆದ್ರೆ ಸೋಮವಾರ ಬೆಳಗಿನ ಜಾವ ಮತ್ತೆ ಫೋನ್ ಮಾಡಿ ಅದು 30 ಸಾವಿರ ಅಲ್ಲ, 30 ಲಕ್ಷ ಕೊಡಿ ಅಂತಾ ಬೇಡಿಕೆ ಇಟ್ಟಿದ್ದಾನೆ.

    ಆಟೋ ಚಾಲಕರಾಗಿರುವ ಚಂದನ್ ತಂದೆ, ಮೂವತ್ತು ಲಕ್ಷ ನಾನೆಲ್ಲಿಂದ ತರಲಿ ಅಂತಾ ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡಿರೋ ಕೆಪಿ ಅಗ್ರಹಾರ ಪೊಲೀಸರು, ಆರೋಪಿಯ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ.