Tag: ಅಪರ್ಣಾ ಬಲಮುರಳಿ

  • ಆಸ್ಕರ್ ರೇಸ್‍ನಲ್ಲಿ ಸೂರರೈ ಪೊಟ್ರು – ಕನ್ನಡಿಗ ಗೋಪಿನಾಥ್ ಜೀವನ ಕಥೆ

    ಆಸ್ಕರ್ ರೇಸ್‍ನಲ್ಲಿ ಸೂರರೈ ಪೊಟ್ರು – ಕನ್ನಡಿಗ ಗೋಪಿನಾಥ್ ಜೀವನ ಕಥೆ

    ಬೆಂಗಳೂರು: ಕನ್ನಡಿಗ ಜಿ.ಆರ್.ಗೋಪಿನಾಥ್ ಅವರ ಜೀವನಕಥೆಯ ಸೂರರೈ ಪೊಟ್ರು ಸಿನಿಮಾ ಆಸ್ಕರ್ ಪ್ರಶಸ್ತಿಯ ಸ್ಪರ್ಧೆಗೆ ಎಂಟ್ರಿ ಪಡೆದುಕೊಂಡಿದೆ.

    ಸೂರರೈ ಪೊಟ್ರು ಓಟಿಟಿ ಪ್ಲಾಟ್‍ಫಾರಂನಲ್ಲಿ ಬಿಡುಗಡೆಯಾದ ಮೊದಲ ಸ್ಟಾರ್ ನಟನ ತಮಿಳು ಚಿತ್ರ. ಕನ್ನಡಿಗ ಗೋಪಿನಾಥ್ ಅವರ ಪಾತ್ರದಲ್ಲಿ ನಟ ಸೂರ್ಯ ನಟಿಸಿದ್ದರು. ತಮಿಳು ಭಾಷೆಯ ಬಹುನಿರೀಕ್ಷಿತ ಸಿನಿಮಾ ಆಗಿದ್ದರೂ ಕೋವಿಡ್-19 ಹಿನ್ನೆಲೆ ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಮಾಡಲಾಗಿತ್ತು. ಓಟಿಟಿ ಪ್ಲಾಟ್‍ಫಾರಂನಲ್ಲಿ ವೀಕ್ಷಕರನ್ನ ತನ್ನತ್ತ ಸೆಳೆಯುವಲ್ಲಿ ಚಿತ್ರ ಯಶಸ್ವಿಯಾಗಿತ್ತು. ಅಬ್ಬರ ಪ್ರಚಾರವಿಲ್ಲದಿದ್ರೂ ಅಭಿಮಾನಿಗಳಿಂದಲೇ ದೊಡ್ಡ ಮಟ್ಟದ ಪ್ರಮೋಷನ್ ಪಡೆದುಕೊಂಡಿದ್ದು ಸತ್ಯ. ಹಾಗಾಗಿ ನೆಟ್ಟಿಗರು ಮೊಬೈಲ್ ಗಳಲ್ಲಿ ಸೂರರೈ ಪೊಟ್ರು ಹುಡುಕಾಡಿದ್ದರು.

    ಚಿತ್ರ ಜನರಲ್ ಕೆಟಗಿರಿಯಲ್ಲಿ ಆಸ್ಕರ್ ಪ್ರವೇಶಿಸಿದೆ. ಉತ್ತಮ ನಟ, ಉತ್ತಮ ನಟಿ, ಉತ್ತಮ ನಿರ್ದೇಶಕ, ಉತ್ತಮ ಸಂಯೋಜನೆ, ಉತ್ತಮ ಚಿತ್ರಕಥೆ, ರಚನೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸಿನಿಮಾ ಸ್ಪರ್ಧೆಯಲ್ಲಿದೆ. ಸೂರರೈ ಪೊಟ್ರು ವೀಕ್ಷಿಸಿದ ಅಕಾಡೆಮಿ ಸ್ಕ್ರೀನಿಂಗ್ ಸದಸ್ಯರು ಚಿತ್ರಕ್ಕೆ ಮತ ನೀಡಿ ಆಸ್ಕರ್ ಗೆ ನಾಮಿನೇಷನ್ ಮಾಡಿದ್ದಾರೆ.

    ಸುಧಾ ಕೊಂಗರ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಸೂರ್ಯ, ಪರೇಶ್ ರಾವಲ್, ಅಪರ್ಣಾ ಬಲಮುರಳಿ, ಊರ್ವಶಿ, ಮೋಹನ್ ಬಾಬು, ಕರುಣಾಸ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಪುಟ್ಟ ಗ್ರಾಮದ ಯುವಕ ಹೇಗೆ ಒಂದು ವಿಮಾನಯಾನ ಸಂಸ್ಥೆ ಕಟ್ಟುತ್ತಾನೆ? ಆತನಿಗೆ ಯಾವೆಲ್ಲ ತೊಂದರೆಗಳು ಎದುರಾಗುತ್ತೆ ಅನ್ನೋ ಕಥಾ ಹಂದರವನ್ನು ಸೂರರೈ ಪೊಟ್ರು ಹೊಂದಿದೆ.