Tag: ಅಪರ್ಣಾ ನಾಯರ್

  • ನಟಿ ಅಪರ್ಣಾ ಸಾವಿಗೆ ಮತ್ತೊಂದು ತಿರುವು: ದಿನಕ್ಕೊಂದು ಸ್ಫೋಟಕ ಮಾಹಿತಿ

    ನಟಿ ಅಪರ್ಣಾ ಸಾವಿಗೆ ಮತ್ತೊಂದು ತಿರುವು: ದಿನಕ್ಕೊಂದು ಸ್ಫೋಟಕ ಮಾಹಿತಿ

    ಳೆದ ವಾರವಷ್ಟೇ ನೇಣಿಗೆ ಶರಣಾಗಿದ್ದ (Suicide)  ಮಲಯಾಳಂ ಖ್ಯಾತ ನಟಿ ಅಪರ್ಣಾ ನಾಯರ್ (Aparna Nair) ಸಾವಿನ ಸುದ್ದಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತದೆ.  ಅಪರ್ಣಾ ಸಾವಿಗೆ ಪತಿಯ ಮತ್ತೊಂದು ಸಂಬಂಧ ಎಂದು ಹೇಳಲಾಗುತ್ತಿದ್ದು, ಸ್ವತಃ ಅಪರ್ಣಾ ತಂಗಿಯ ಜೊತೆಯೇ ಪತಿ ಅಫೇರ್ ಇಟ್ಟುಕೊಂಡಿದ್ದ ಎಂದು ತಿಳಿದು ಬಂದಿದೆ.

    ಅಪರ್ಣಾ ತಂಗಿಯೊಂದಿಗೆ ಪತಿಯು ಸಂಬಂಧ ಇಟ್ಟುಕೊಂಡಿರುವ ವಿಚಾರವಾಗಿ ಹಲವಾರು ಬಾರಿ ಮನೆಯಲ್ಲಿ ಗಲಾಟೆ ನಡೆದಿತ್ತು. ಈ ಕುರಿತು ಪೊಲೀಸ್ ಠಾಣೆಗೂ ಅಪರ್ಣಾ ದೂರು ನೀಡಿದ್ದರು. ಆದರೂ ಪತಿ ಸರಿ ಹೋಗಿರಲಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಈ ನಡೆಯೇ ಅಪರ್ಣಾ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ರಮೇಶ್ ಅರವಿಂದ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್

    ಈ ಹಿಂದೆ ಅಪರ್ಣಾ ಅವರ ಪತಿಯ ಕುಡಿತವೇ ಸಾವಿಗೆ ಕಾರಣವೆಂದು ಎಫ್.ಐ.ಆರ್ ನಲ್ಲಿ ದಾಖಲಾಗಿತ್ತು. ಗಂಡನ ಕುಡಿತದ ಚಟಕ್ಕೆ ಅಪರ್ಣಾ ಬೇಸತ್ತು ಹೋಗಿದ್ದರಿಂದ, ಈ ವಿಚಾರವನ್ನು ಹಲವಾರು ಬಾರಿ ತಮ್ಮ ತಾಯಿಯ ಜೊತೆ ಹಂಚಿಕೊಂಡಿದ್ದರಂತೆ. ಸಾವಿಗೂ ಎರಡು ಗಂಟೆ ಮುಂಚೆ ತಾಯಿಗೆ ಕರೆ ಮಾಡಿ, ತನ್ನ ನೋವನ್ನು ಹೇಳಿಕೊಂಡಿದ್ದರು ಎಂದು ಅಪರ್ಣಾ ಸಹೋದರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗಸ್ಟ್ 31ರ ಸಂಜೆ 7.30ರ ಹೊತ್ತಿಗೆ ಅಪರ್ಣಾ ಅವರ ದೇಹ ನೇಣು (Suicide) ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದಿತ್ತು. ಅವರ ತಾಯಿ ಮತ್ತು ಸಹೋದರಿ ಕೂಡಲೇ ಅಪರ್ಣಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆ ತಲುಪುವುದರ ಹೊತ್ತಿಗೆ ಅಪರ್ಣಾ ಉಸಿರು ಚೆಲ್ಲಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದರು.

     

    ತಿರುವನಂತಪುರಂ (Thiruvananthapuram) ನಿವಾಸದಲ್ಲಿ ಪತಿ, ಇಬ್ಬರು ಮಕ್ಕಳೊಂದಿಗೆ ಅಪರ್ಣಾ ವಾಸಿಸುತ್ತಿದ್ದರು. ಕೇವಲ 31ನೇ ವಯಸ್ಸಿನಲ್ಲೇ ಕುಟುಂಬ ಮತ್ತು ಅಪಾರ ಅಭಿಮಾನಿಗಳನ್ನು ನಟಿ ಅಗಲಿದ್ದಾರೆ. ತನಿಖೆ (Investigation) ನಡೆಸುತ್ತಿರುವ ಪೊಲೀಸರಿಗೆ ದಿನಕ್ಕೊಂದು ಮಾಹಿತಿ ಲಭ್ಯವಾಗುತ್ತಿದೆ. ಅಂತಿಮವಾಗಿ ಅಪರ್ಣಾ ಸಾವಿಗೆ ಕಾರಣ ಏನು ಎನ್ನುವುದು ಕೋರ್ಟಿನಲ್ಲೇ ಅಂತಿಮವಾಗಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟಿ ಅಪರ್ಣಾ ಸಾವಿನ ರಹಸ್ಯ ಬಯಲು: ಪತಿಯ ವಿರುದ್ಧ ಎಫ್.ಐ.ಆರ್

    ನಟಿ ಅಪರ್ಣಾ ಸಾವಿನ ರಹಸ್ಯ ಬಯಲು: ಪತಿಯ ವಿರುದ್ಧ ಎಫ್.ಐ.ಆರ್

    ರಡು ದಿನಗಳ ಹಿಂದೆಯಷ್ಟೇ ಮಲಯಾಳಂ (Malayalam) ಖ್ಯಾತ ನಟಿ ಅಪರ್ಣಾ ನಾಯರ್ (Aparna Nair) ನೇಣಿಗೆ ಶರಣಾಗಿದ್ದರು. ಅಸಹಜ ಸಾವು ಎಂದು ಘೋಷಿಸಿದ್ದ ಪೊಲೀಸರು ತೀವ್ರಗತಿಯಲ್ಲಿ ವಿಚಾರಣೆ ನಡೆಸಿದ್ದರು. ಇದೀಗ ಅವರ ಸಾವಿಗೆ ಕಾರಣ ಬಯಲಾಗಿದ್ದು, ಈ ವಿಷಯವನ್ನು ಅಪರ್ಣಾ ಅವರ ಸಹೋದರಿಯೇ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಅದರಂತೆ ಎಫ್.ಐ. ಆರ್ ಕೂಡ ದಾಖಲಾಗಿದೆ.

    ಅಪರ್ಣಾ ಅವರ ಪತಿಯ ಕುಡಿತವೇ ಸಾವಿಗೆ ಕಾರಣವೆಂದು ಎಫ್.ಐ.ಆರ್ ನಲ್ಲಿ ದಾಖಲಾಗಿದ್ದು, ಗಂಡನ ಕುಡಿತದ ಚಟಕ್ಕೆ ಅಪರ್ಣಾ ಬೇಸತ್ತು ಹೋಗಿದ್ದರಿಂದ, ಈ ವಿಚಾರವನ್ನು ಹಲವಾರು ಬಾರಿ ತಮ್ಮ ತಾಯಿಯ ಜೊತೆ ಹಂಚಿಕೊಂಡಿದ್ದರಂತೆ. ಸಾವಿಗೂ ಎರಡು ಗಂಟೆ ಮುಂಚೆ ತಾಯಿಗೆ ಕರೆ ಮಾಡಿ, ತನ್ನ ನೋವನ್ನು ಹೇಳಿಕೊಂಡಿದ್ದರು ಎಂದು ಅಪರ್ಣಾ ಸಹೋದರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಪರ್ಣಾ ಸಹೋದರಿ ನೀಡಿದ್ದ ಹೇಳಿಕೆಯ ಆಧಾರದಲ್ಲಿ ಇದೀಗ ಎಫ್.ಐ.ಆರ್ ದಾಖಲಾಗಿದೆ. ಇದನ್ನೂ ಓದಿ:ಮತ್ತೆ ನಿರ್ದೇಶನಕ್ಕಿಳಿದ ಸುದೀಪ್- ಕಿಚ್ಚನ ಕೈಜೋಡಿಸಿದ KRG Studios

    ಆಗಸ್ಟ್ 31ರ ಸಂಜೆ 7.30ರ ಹೊತ್ತಿಗೆ ಅಪರ್ಣಾ ಅವರ ದೇಹ ನೇಣು (Suicide) ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದಿತ್ತು. ಅವರ ತಾಯಿ ಮತ್ತು ಸಹೋದರಿ ಕೂಡಲೇ ಅಪರ್ಣಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆ ತಲುಪುವುದರ ಹೊತ್ತಿಗೆ ಅಪರ್ಣಾ ಉಸಿರು ಚೆಲ್ಲಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದರು.

     

    ತಿರುವನಂತಪುರಂ ನಿವಾಸದಲ್ಲಿ ಪತಿ, ಇಬ್ಬರು ಮಕ್ಕಳೊಂದಿಗೆ ಅಪರ್ಣಾ ವಾಸಿಸುತ್ತಿದ್ದರು. ಕೇವಲ 31ನೇ ವಯಸ್ಸಿನಲ್ಲೇ ಕುಟುಂಬ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ ಈ ನಟಿ. ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ಅಪರ್ಣಾ ಸಾಕಷ್ಟು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಟಿಯ ಅಗಲಿಕೆಗೆ ಕೇರಳ ಸಿನಿಮಾ ಮತ್ತು ಟಿವಿ ಉದ್ಯಮ ಕಂಬನಿ ಮಿಡಿದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೇಣು ಬಿಗಿದ ಸ್ಥಿತಿಯಲ್ಲಿ ಖ್ಯಾತ ನಟಿ ಅಪರ್ಣಾ ನಾಯರ್: ಚಿತ್ರರಂಗ ಕಂಬನಿ

    ನೇಣು ಬಿಗಿದ ಸ್ಥಿತಿಯಲ್ಲಿ ಖ್ಯಾತ ನಟಿ ಅಪರ್ಣಾ ನಾಯರ್: ಚಿತ್ರರಂಗ ಕಂಬನಿ

    ಭಾರತೀಯ ಸಿನಿಮಾ ರಂಗದಲ್ಲಿ ಅಸಹಜ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅನುಮಾನಾಸ್ಪದ ಸಾವುಗಳಿಗೆ (Death) ಚಿತ್ರರಂಗವೇ ಬೆಚ್ಚಿ ಬಿದ್ದಿದೆ. ಮಲಯಾಳಂ (Malayalam) ಸಿನಿಮಾ ರಂಗದಲ್ಲಿ ಇಂಥದ್ದೊಂದು ಘಟನೆ ಸಂಭವಿಸಿದ್ದು, ಖ್ಯಾತ ನಟಿ ಅಪರ್ಣಾ ನಾಯರ್ (Aparna Nair) ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶಪ ಪತ್ತೆಯಾಗಿದೆ.

    ನಿನ್ನೆ ಸಂಜೆ 7.30ರ ಹೊತ್ತಿಗೆ ಅಪರ್ಣಾ ಅವರ ದೇಹ ನೇಣು (Suicide) ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡ ಅವರ ತಾಯಿ ಮತ್ತು ಸಹೋದರಿ ಕೂಡಲೇ ಅಪರ್ಣಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟೊತ್ತಿಗೆ ಅಪರ್ಣಾ ಉಸಿರು ಚೆಲ್ಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ದೊಡ್ಮನೆ ಆಟಕ್ಕೆ ಮುಹೂರ್ತ ಫಿಕ್ಸ್

    ತಿರುವನಂತಪುರಂ ನಿವಾಸದಲ್ಲಿ ಪತಿ, ಇಬ್ಬರು ಮಕ್ಕಳು, ತಾಯಿ ಮತ್ತು ಸಹೋದರಿಯೊಂದಿಗೆ ಅಪರ್ಣಾ ವಾಸಿಸುತ್ತಿದ್ದರು. ಕೇವಲ 31ನೇ ವಯಸ್ಸಿನಲ್ಲೇ ಕುಟುಂಬ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ ಈ ನಟಿ. ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರೀಯರಾಗಿದ್ದ ಅಪರ್ಣಾ ಸಾಕಷ್ಟು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

     

    ಸಾಕಷ್ಟು ಅವಕಾಶಗಳು ಇದ್ದರೂ ಅಪರ್ಣಾ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದಕ್ಕೆ ಕಾರಣ ಏನಿರಬಹುದು ಎಂದು ಪತ್ತೆ ಮಾಡುತ್ತಿದ್ದಾರೆ ಪೊಲೀಸರು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಟಿಯ ಅಗಲಿಕೆಗೆ ಕೇರಳ ಸಿನಿಮಾ ಮತ್ತು ಟಿವಿ ಉದ್ಯಮ ಕಂಬನಿ ಮಿಡಿದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]