Tag: ಅಪರಿಚಿತ ವೃದ್ಧೆ

  • ಕೆರೆಯಲ್ಲಿ ಅಪರಿಚಿತ ವೃದ್ಧೆಯ ಶವಪತ್ತೆ – ವಾರಿಸುದಾರರಿಗೆ ಪೊಲೀಸರ ಹುಡುಕಾಟ

    ಕೆರೆಯಲ್ಲಿ ಅಪರಿಚಿತ ವೃದ್ಧೆಯ ಶವಪತ್ತೆ – ವಾರಿಸುದಾರರಿಗೆ ಪೊಲೀಸರ ಹುಡುಕಾಟ

    ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯ ವ್ಯಾಪ್ತಿಯ ರಾಯನಕಲ್ಲು ಕೆರೆಯಲ್ಲಿ ಅಪರಿಚಿತ ವೃದ್ಧೆಯ ಶವ ಪತ್ತೆಯಾಗಿದೆ.

    ಸರಿ ಸುಮಾರು 65 ರಿಂದ 70 ವರ್ಷದ ವೃದ್ಧೆಯ ಶವ ಪತ್ತೆಯಾಗಿದ್ದು, ವೃದ್ಧೆಯ ಗುರುತು ಪತ್ತೆಯಾಗಿಲ್ಲ. ಕೆರೆ ಬಳಿ ಜಾನುವಾರುಗಳ ಸಮೇತ ಗ್ರಾಮಸ್ಥರು ಕೆರೆಯಲ್ಲಿ ವೃದ್ಧೆಯ ಶವ ತೇಲಾಡುತ್ತಿರುವುದನ್ನು ಗಮನಿಸಿ ಮಂಚೇನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಬಂದ ಮಂಚೇನಹಳ್ಳಿ ಪೊಲೀಸರು ಮೃತದೇಹವನ್ನು ಹೊರ ತೆಗೆದು ಸದ್ಯ ಗೌರಿಬಿದನೂರು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಮೃತ ಮಹಿಳೆಯ ಬಳಿ ಐದಾರು ವಿಧದ ಮಾತ್ರೆಗಳು ಲಭ್ಯವಾಗಿದ್ದು, ಜೀವನದಲ್ಲಿ ಖಾಯಿಲೆಗಳಿಂದ ಮನನೊಂದು ಮನೆ ಬಿಟ್ಟು ಬಂದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಮೃತರ ಮಾಹಿತಿ ಇಲ್ಲದ ಕಾರಣ ಮೃತ ವೃದ್ಧೆಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಗುರುತು ವಿಳಾಸ ಗೊತ್ತಿದ್ದಲ್ಲಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆ ಪಿಎಸ್‍ಐ ಮನವಿ ಮಾಡಿಕೊಂಡಿದ್ದಾರೆ.