Tag: ಅಪರಿಚಿತ

  • 14ರ ಬಾಲಕನನ್ನು ಅಪಹರಿಸಿ 1 ಕೋಟಿ ರೂ. ಬೇಡಿಕೆಯಿಟ್ಟು ಕೊಲೆಗೈದ ಪಾಪಿಗಳು!

    14ರ ಬಾಲಕನನ್ನು ಅಪಹರಿಸಿ 1 ಕೋಟಿ ರೂ. ಬೇಡಿಕೆಯಿಟ್ಟು ಕೊಲೆಗೈದ ಪಾಪಿಗಳು!

    ಲಕ್ನೋ: ಬಾಯ್ ಫ್ರೆಂಡ್ ಸಹಾಯದಿಂದ 19 ವರ್ಷದ ಯುವತಿ, ತಾನೇ ಕಿಡ್ನಾಪ್ ಮಾಡಿಕೊಂಡು ಮನೆಯವರ ಬಳಿ 1 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿರುವ ಅಚ್ಚರಿಯ ಘಟನೆ ನಡೆದ ಬೆನ್ನಲ್ಲೇ ಇದೀಗ ಮತ್ತೊಂದು ಆಘಾತಕಾರಿ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಹೌದು. 14 ವರ್ಷದ ಬಾಲಕನನ್ನು ದುಷ್ಕರ್ಮಿಗಳು ಅಪಹರಿಸಿ 1 ಕೋಟಿ ಬೇಡಿಯಿಟ್ಟು ಬಳಿಕ ಬರ್ಬರವಾಗಿ ಕೊಲೆಗೈದಿದ್ದಾರೆ. ಈ ಘಟನೆ ಉತ್ತರಪ್ರದೇಶದ ಗೊರಕ್‍ಪುರ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. 6ನೇ ತರಗತಿ ಬಾಲಕನ ಮೃತದೇಹವನ್ನು ಇಂದು ಸಂಜೆ ಗೊರಕ್‍ಪುರದಲ್ಲಿರುವ ಕಾಲುವೆಯಿಂದ ಹೊರ ತೆಗೆಯಲಾಗಿದೆ.

    ಕಿರಾಣಿ ಹಾಗೂ ಪಾನ್ ಮಸಾಲ ಅಂಗಡಿ ಮಾಲೀಕರ 14 ವರ್ಷದ ಬಾಲಕನನ್ನು ಪ್ರಿಪ್ರೈಚ್ ಪ್ರದೇಶದಿಂದ ದುಷ್ಕರ್ಮಿಗಳು ಭಾನುವಾರ ಮಧ್ಯಾಹ್ನದ ವೇಳೆ ಅಪಹರಿಸಿದ್ದಾರೆ. ಆ ನಂತರ ಒಂದು ಲಕ್ಷ ಹಣ ನೀಡುವಂತೆ ಬಾಲಕನ ಪೋಷಕರಿಗೆ ಕರೆ ಬಂದಿದೆ.

    ಮಧ್ಯಾಹ್ನ ಊಟ ಆದ ಬಳಿಕ ಮಗ ಮನೆಯ ಹೊರಗಡೆಯೇ ಆಟವಾಡುತ್ತಿದ್ದನು. ಸಂಜೆ ಅಪರಿಚಿತ ನಂಬರಿಂದ ನನ್ನ ಮೊಬೈಲ್ ಗೆ ಕರೆಯೊಂದು ಬಂದಿದೆ. ಕರೆ ಮಾಡಿದ ವ್ಯಕ್ತಿ, ಈ ಕೂಡಲೇ ನನಗೆ 1 ಕೋಟಿ ಹಣ ನೀಡಿ ನಿಮ್ಮ ಮಗನನ್ನು ಬಿಡಿಸಿಕೊಂಡು ಹೋಗು ಎಂದು ಹೇಳಿದ. ಕೂಡಲೇ ನಾನು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಬಾಲಕನ ತಂದೆ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಮಾಹಿತಿ ಸಿಕ್ಕ ಕೂಡಲೇ ಪೊಲೀಸರ ತಂಡ ಕ್ರಮ ಕೈಗೊಂಡು ಅಪಹರಣಕಾರರ ಹುಡುಕಾಟ ಆರಂಭಿಸಿದ್ದು, ಭಾನುವಾರ ರಾತ್ರಿಯೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೊರಖ್ ಪುರ್ ಎಸ್‍ಎಸ್‍ಪಿ ಸುನಿಲ್ ಕುಮಾರ್ ಗುಪ್ತಾ ಹೇಳಿದ್ದಾರೆ. ಇದನ್ನೂ ಓದಿ: ಅಪ್ಪ 1 ಕೋಟಿ ಕೊಡಿ- ಕಿಡ್ನ್ಯಾಪ್ ನಾಟಕವಾಡಿದ ಯುವತಿ

    ತನಿಖೆಯ ವೇಳೆ ಅಪಹರಣಕಾರರು ಬಾಲಕನನ್ನು ಕಿಡ್ನಾಪ್ ಮಾಡಿದ ಕೂಡಲೆ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ಆ ಬಳಿಕ ಕೊಲೆ ಮಾಡಿದ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದು ಬಾಲಕನ ಮೃತದೇಹವನ್ನು ಹೊರತೆಗೆಯಲಾಯಿತು ಎಂದು ಎಸ್‍ಎಸ್‍ಪಿ ವಿವರಿಸಿದ್ದಾರೆ.

    ನಿನ್ನೆ ಸಂಜೆ ಬಾಲಕನ ತಂದೆ ಕರೆ ಮಾಡಿ ಮಗ ನಾಪತ್ತೆಯಾಗಿದ್ದು, ಅಪರಿಚಿತ ನಂಬರಿಂದ ಕರೆ ಬಂದಿರುವ ಬಗ್ಗೆ ಹೇಳಿದ್ದಾರೆ. ಕೂಡಲೇ ಕ್ರೈಂ ಬ್ರ್ಯಾಂಚ್ ಹಾಗೂ ಎಸ್‍ಟಿಎಫ್ ಸೇರಿದಂತೆ ಹಲವು ಪೊಲೀಸರ ತಂಡ ಬಾಲಕನ ಪತ್ತೆಗೆ ಹುಡುಕಾಟ ಆರಂಭಿಸಿತ್ತು ಎಂದು ಅವರು ತಿಳಿಸಿದರು.

  • ಮಾಜಿ ಸಿಎಂ ಮನೆಗೆ ಕಾರು ನುಗ್ಗಿಸಿದವನ ಮೇಲೆ ಭದ್ರತಾ ಪಡೆ ಗುಂಡಿನ ದಾಳಿ

    ಮಾಜಿ ಸಿಎಂ ಮನೆಗೆ ಕಾರು ನುಗ್ಗಿಸಿದವನ ಮೇಲೆ ಭದ್ರತಾ ಪಡೆ ಗುಂಡಿನ ದಾಳಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ನಿವಾಸಕ್ಕೆ ಅನುಮಾನಾಸ್ಪದವಾಗಿ ಕಾರು ನುಗ್ಗಿಸಲು ಯತ್ನಿಸಿದ ಅಪರಿಚಿತ ವ್ಯಕ್ತಿಯ ಮೇಲೆ ಭದ್ರತಾ ಪಡೆ ಸಿಬ್ಬಂದಿ ಗುಂಡು ಹಾರಿಸಿದ್ದಾರೆ.

    ಅಪರಿಚಿತ ವ್ಯಕ್ತಿಯೋರ್ವ ನಿರಾಯುಧನಾಗಿ ತನ್ನ ಮಹೀಂದ್ರ ಎಕ್ಸ್ ಯುವಿ 500 ವಾಹನದೊಂದಿಗೆ ಏಕಾಏಕಿ ಫಾರೂಕ್ ಅಬ್ದುಲ್ಲಾ ಮನೆಯ ಗೇಟಿನಲ್ಲಿ ನುಗ್ಗಿಸಿದ್ದಾನೆ. ಬಳಿಕ ಮನೆಯ ಒಳಗೆ ಹೋಗಿ ಗಾಜಿನ ಮೇಜನ್ನು ಒಡೆದು ಹಾಕಿದ್ದಾನೆ. ಅಲ್ಲದೇ ವ್ಯಕ್ತಿಯನ್ನು ತಡೆಯಲು ಯತ್ನಿಸಿದ ಭದ್ರತಾ ಸಿಬ್ಬಂದಿಯ ಮೇಲೂ ಸಹ ಹಲ್ಲೆ ನಡೆಸಿದ್ದ ಈ ವೇಳೆ ಭದ್ರತೆಯ ದೃಷ್ಟಿಯಿಂದ ಸಿಬ್ಬಂದಿ ವ್ಯಕ್ತಿಯ ಮೇಲೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯಾದ ವಿವೇಕ್ ಗುಪ್ತ ತಿಳಿಸಿದ್ದಾರೆ.

    ಅಪರಿಚಿತ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿಯು ಮನೆಯ ಕೋಣೆಯ ಬಳಿ ಹೊಡೆದು ಹಾಕಿದೆ. ಮೃತ ವ್ಯಕ್ತಿಯ ಬಳಿ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಈತ ಜಮ್ಮು ಕಾಶ್ಮೀರದ ಫೂಂಚ್ ಜಿಲ್ಲೆಯವನಾಗಿದ್ದಾನೆ. ಘಟನೆಯಲ್ಲಿ ಶಂಕಿತ ವ್ಯಕ್ತಿಯನ್ನು ತಡೆಯಲು ಯತ್ನಿಸಿದ ಭದ್ರತಾ ಸಿಬ್ಬಂದಿಯೂ ಸಹ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇನ್ನು ಘಟನೆಗೆ ಸಂಬಂಧಿಸಿ ಟ್ವೀಟ್ ಮಾಡಿ ಆತಂಕ ವ್ಯಕ್ತಪಡಿಸಿರುವ ಫಾರೂಕ್ ಅಬ್ದುಲ್ಲಾ ಅವರ ಪುತ್ರ ಮತ್ತು ಕಾಶ್ಮೀರ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅವರು ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದೇನೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲ್ಲಿದ್ದಾರೆ ಎಂದು ಹೇಳಿದ್ದಾರೆ.

    ಘಟನೆ ನಡೆದ ಸಂದರ್ಭ ಫಾರೂಕ್ ಅಬ್ದುಲ್ಲಾರವರು ಮನೆಯಲ್ಲಿ ಇಲ್ಲವಾದ್ದರಿಂದ ಆಗಬಹುದಾಗಿದ್ದ ಅವಘಡ ತಪ್ಪಿದೆ. ಹಾಲಿ ಶ್ರೀನಗರದ ಸಂಸದರಾಗಿರುವ ಫಾರೂಕ್ ಅಬ್ದುಲ್ಲಾರವರಿಗೆ ಕೇಂದ್ರ ಸರ್ಕಾರ ಜೆಡ್ ಫ್ಲಸ್ ಭದ್ರತೆಯನ್ನು ನೀಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅಪರಿಚಿತರ ಮನೆಯಲ್ಲಿ ಅಪರಿಚಿತ ಮಹಿಳೆ ನೇಣಿಗೆ ಶರಣು!

    ಅಪರಿಚಿತರ ಮನೆಯಲ್ಲಿ ಅಪರಿಚಿತ ಮಹಿಳೆ ನೇಣಿಗೆ ಶರಣು!

    ಮಂಡ್ಯ: ಅಪರಿಚಿತ ಮಹಿಳೆಯೊರ್ವರು ನೇಣು ಹಾಕಿಕೊಂಡ ಘಟನೆ ಜಿಲ್ಲೆಯ ಕೆ.ಆರ್.ಪೇಟೆಯ ಅಗ್ರಹಾರ ಬಡಾವಣೆಯಲ್ಲಿ ನಡೆದಿದೆ.

    ಶನಿವಾರ ತಡರಾತ್ರಿ ಅಗ್ರಹಾರ ಬಡಾವಣೆಯ ಭಾಗ್ಯಮ್ಮ ಎಂಬುವರ ಮನೆಗೆ ಬಂದ ಮಹಿಳೆಯು ತಾನು ಅನಾಥೆ ಎಂದು ಮನೆಯಲ್ಲಿ ಆಶ್ರಯ ಪಡೆದಿದ್ದರು. ಆದರೆ ಇಂದು ಬೆಳಗಿನ ಜಾವ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಭಾಗ್ಯಮ್ಮರವರು, ಮಹಿಳೆ ಯಾರು, ಎಲ್ಲಿಯವರು ಎಂಬುದು ಗೊತ್ತಿಲ್ಲ. ತಡರಾತ್ರಿ ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯು ತಾನು ಅನಾಥೆ ಎಂದು ಹೇಳಿಕೊಂಡಿದ್ದಳು. ಹೀಗಾಗಿ ಮಹಿಳೆಗೆ ಆಶ್ರಯ ನೀಡಿದ್ದೆ, ಇಂದು ಮುಂಜಾನೆ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

    ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕೆ.ಆರ್.ಪೇಟೆ ಟೌನ್ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಹಿಳೆಯ ಎಡಗೈ ಮೇಲೆ ಸುರೇಶ ಎಂಬುವರ ಹೆಸರಿದ್ದು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.