Tag: ಅಪಮಾನ

  • ವಿಜಯಪುರದ ಉಸ್ತುವಾರಿ ಸಚಿವರ ಎದುರಲ್ಲೇ ವಿದೇಶದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ!

    ವಿಜಯಪುರದ ಉಸ್ತುವಾರಿ ಸಚಿವರ ಎದುರಲ್ಲೇ ವಿದೇಶದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ!

    ವಿಜಯಪುರ: ವಿದೇಶದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದರೂ ತೋಟಗಾರಿಕ ಸಚಿವ ಎಂ.ಸಿ ಮನಗೂಳಿ ಸುಮ್ಮನೆ ಕುಳಿತ್ತಿದ್ದಕ್ಕೆ ಟೀಕೆ ವ್ಯಕ್ತವಾಗಿದೆ.

    ತೋಟಗಾರಿಕಾ ಬೆಳೆಗಳ ಅಧ್ಯಯನಕ್ಕಾಗಿ ಮನಗೂಳಿ ಅವರು ಇಸ್ರೇಲ್ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ವಿದೇಶಿ ಅಧಿಕಾರಿಗಳ ಜೊತೆಗೆ ಚರ್ಚೆ ಸಂದರ್ಭದಲ್ಲಿ ಟೇಬಲ್ ಮೇಲೆ ತ್ರಿವರ್ಣ ಧ್ವಜವನ್ನು ತಲೆ ಕೆಳಗಾಗಿ ಇಡಲಾಗಿತ್ತು.

    ಚರ್ಚೆ ನಡೆಸುತ್ತಿದ್ದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಡವಟ್ಟಾಗಿದ್ದರೆ ಧ್ವಜವನ್ನು ಸರಿಪಡಿಸಬಹುದಾಗಿತ್ತು. ಆದರೆ ಕರ್ನಾಟಕದ ಅಧಿಕಾರಿಗಳು ಮತ್ತು ಸಚಿವರು ಯಾಕೆ ಗಮನ ನೀಡಿಲ್ಲ ಎಂದು ಜನರು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಲೆಕ್ಷನ್‍ನಲ್ಲಿ ಅಧಿಕಾರಿಯ ಸಹೋದರ ಸಹಾಯ ಮಾಡಿಲ್ಲಂತ ಸೇಡು -ಎಇಇಗೆ ಪರಮೇಶ್ವರ್ ನಾಯ್ಕ್ ಅವಮಾನ

    ಎಲೆಕ್ಷನ್‍ನಲ್ಲಿ ಅಧಿಕಾರಿಯ ಸಹೋದರ ಸಹಾಯ ಮಾಡಿಲ್ಲಂತ ಸೇಡು -ಎಇಇಗೆ ಪರಮೇಶ್ವರ್ ನಾಯ್ಕ್ ಅವಮಾನ

    ಬಳ್ಳಾರಿ: ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಮಾಜಿ ಸಚಿವರೊಬ್ಬರು ಫೋನ್ ರಿಸೀವ್ ಮಾಡಲಿಲ್ಲ ಅಂತಾ ಡಿವೈಎಸ್ ಪಿ ಅನುಪಮಾ ಶೆಣೈರನ್ನ ಎತ್ತಂಗಡಿ ಮಾಡಿದ ಪ್ರಕರಣ ಇನ್ನೂ ರಾಜ್ಯದ ಜನರ ಮನಸ್ಸಿನಿಂದ ಮಾಸಿಲ್ಲ. ನಾನು ಡಿವೈಎಸ್ಪಿ ಎತ್ತಂಗಡಿ ಮಾಡೇ ಇಲ್ಲಾ ಅಂತಾ ವಾದಿಸಿ ಕೊನೆಗೆ ಸಿಕ್ಕಿಕೊಂಡಿದ್ದ ಮಾಜಿ ಮಂತ್ರಿಗಳು ಇದೀಗ ಮತ್ತೊಂದು ಕಿತಾಪತಿ ಮಾಡಿದ್ದಾರೆ.

    ಮಾಜಿ ಮಂತ್ರಿ ಮತ್ತು ಹಾಲಿ ಶಾಸಕ ಪಿಟಿ ಪರಮೇಶ್ವರ ನಾಯ್ಕ್, ಚುನಾವಣೆಯಲ್ಲಿ ಅಧಿಕಾರಿಯೊಬ್ಬರ ಸಹೋದರ ತಮ್ಮ ಪರವಾಗಿ ಕೆಲಸ ಮಾಡಲಿಲ್ಲ ಅಂತಾ ಜೆಸ್ಕಾ ಇಲಾಖೆಯ ಎಇಇ (ಅಸಿಸ್ಟೆಂಟ್ ಎಜ್ಯೂಕ್ಯೂಟಿವ್ ಎಂಜಿನಿಯರ್) ಗೆ ತುಂಬಿದ ಸಭೆಯಲ್ಲಿ ಎಲ್ಲರೆದುರೆಗೆ ಅವಮಾನ ಮಾಡಿ ಮನೆಗೆ ಕಳುಹಿಸಿದ್ದಾರೆ.

    ಹೂವಿನಹಡಗಲಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಜೆಸ್ಕಾ ಎಇಇ ಆಗಿ ಸೇವೆ ಸಲ್ಲಿಸುತ್ತಿದ್ದ ಶ್ರೀನಿವಾಸ ಮಂತ್ರೋಂಡಿಯವರ ಸಹೋದರರೊಬ್ಬರು ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಓದು ಗಂಗಪ್ಪ ಪರ ಕೆಲಸ ಮಾಡಿದ್ದರು. ಇದನ್ನೆ ಅಸ್ತ್ರವಾಗಿ ಮಾಡಿಕೊಂಡ ಪರಮೇಶ್ವರ ನಾಯ್ಕ್ ಎಇಇ ಶ್ರೀನಿವಾಸರನ್ನ ನೀವೂ ಚುನಾವಣೆಯಲ್ಲಿ ನನ್ನ ಪರವಾಗಿ ಕೆಲಸ ಮಾಡಿಲ್ಲವೆಂದು ತುಂಬಿದ ಸಭೆಯಲ್ಲಿ ಅವಮಾನ ಮಾಡಿದ್ದಾರೆ. ಅಲ್ಲದೇ ನೀವೂ ಇಲ್ಲಿಂದ ಹೋಗಿಬಿಡಿ ಇಲ್ಲದಿದ್ದರೇ ನಿಮ್ಮ ಮೇಲೆ ನಾನೇ ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮಾಡುವೆ ಅಂತಾ ಧಮ್ಕಿ ಹಾಕಿದ್ದಾರೆ.

    ಹೀಗಾಗಿ ಶಾಸಕರ ಸೇಡಿನ ರಾಜಕಾರಣಕ್ಕೆ ಮನನೊಂದ ಜೆಸ್ಕಾನ ಎಇಇ ಶ್ರೀನಿವಾಸರು ದೀರ್ಘ ರಜೆ ಹಾಕಿ ಮನೆಗೆ ಹೋಗಿದ್ದಾರೆ. ಅಲ್ಲದೇ ಈ ಅವಕಾಶವನ್ನೆ ಬಳಸಿಕೊಂಡ ಪರಮೇಶ್ವರ ನಾಯ್ಕ್ ಅದೇ ಜೆಸ್ಕಾಗೆ ತಮ್ಮ ಆಪ್ತರಾದ ಹಡಗಲಿ ಮೂಲದ ಮೋಟ್ಲಾ ನಾಯ್ಕ್ ಅವರನ್ನು ಪೋಸ್ಟಿಂಗ್ ಸಹ ಮಾಡಿಸಿಕೊಂಡು ಬಂದಿದ್ದಾರೆ. ತಮ್ಮ ವಿರುದ್ಧ ಕೆಲಸ ಮಾಡಿದವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿರುವ ಪರಮೇಶ್ವರ ನಾಯ್ಕ್ ರ ವರ್ತನೆಯಿಂದ ಮತ್ತೊಬ್ಬ ಪ್ರಾಮಾಣಿಕ ಅಧಿಕಾರಿ ಮನನೊಂದು ಮನೆಗೆ ಹೋಗಿದ್ದಾರೆ.

    ಅಷ್ಟೇ ಅಲ್ಲದೇ ತಮ್ಮಗಾದ ಅವಮಾನವನ್ನು ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಈಗಾಗಲೇ ಹಲವಾರು ಅಧಿಕಾರಿಗಳಿಗೆ ಕಿರುಕುಳ ನೀಡಿರುವ ಪರಮೇಶ್ವರ ನಾಯ್ಕ್ ಇದೀಗ ಸಿಎಂ ಕುಮಾರಸ್ವಾಮಿಯವರ ಇಲಾಖೆಯ ಅಧಿಕಾರಿಗೆ ಅವಮಾನ ಮಾಡಿ ಮನೆಗೆ ಕಳುಹಿಸಿರುವುದರಿಂದ ಸಿಎಂ ಕುಮಾರಸ್ವಾಮಿ ತಮ್ಮ ಇಲಾಖೆಯ ಅಧಿಕಾರಿಗಾದ ಅವಮಾನಕ್ಕೆ ನ್ಯಾಯ ಕೊಡಿಸುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.

  • ನಾಡಗೀತೆಯನ್ನು ಯಾವ ರಾಗದಲ್ಲಿ ಹಾಡಬೇಕೆಂದು ಇನ್ನೂ ತಿಳಿಸದ ಸರ್ಕಾರ

    ನಾಡಗೀತೆಯನ್ನು ಯಾವ ರಾಗದಲ್ಲಿ ಹಾಡಬೇಕೆಂದು ಇನ್ನೂ ತಿಳಿಸದ ಸರ್ಕಾರ

    ಬೆಂಗಳೂರು: ಇಂದು 62ನೇ ಕನ್ನಡ ರಾಜೋತ್ಸವ. ಎಲ್ಲೆಲ್ಲೂ ಕನ್ನಡದ ಕಂಪು ಹರಡಿದೆ. ನಾಡು-ನುಡಿಯ ಸಂಭ್ರಮದಲ್ಲಿ ನಾಡಗೀತೆಗೆ ಅಪಮಾನ ಮಾಡುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ನಾಡಗೀತೆಯನ್ನು ಯಾವ ರಾಗದಲ್ಲಿ ಹಾಡಬೇಕೆಂದು ಸರ್ಕಾರ ತಿಳಿಸಿಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

    ಕುವೆಂಪು ರಚಿತ ವಿಶಾಲವಾದ ನಾಡಗೀತೆಯನ್ನು ಪರಿಷ್ಕರಣೆ ಮಾಡಿದ್ದು, ಕಡಿಮೆ ಸಮಯದಲ್ಲಿ ನಾಡಗೀತೆಯನ್ನು ಪರಿಷ್ಕರಿಸಲು ರಚಿಸಿದ್ದ ಕಮಿಟಿ ವರದಿ ನೀಡಿ ಸುಮಾರು 2 ವರ್ಷ ಕಳೆದಿದೆ. ಆದರೂ ನಾಡಗೀತೆಯ ಬಗ್ಗೆ ಸರ್ಕಾರ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ 62ನೇ ಕನ್ನಡ ರಾಜ್ಯೋತ್ಸವವು ಪರಿಷ್ಕೃತ ನಾಡಗೀತೆಯಿಲ್ಲದೆ ಸಂಭ್ರಮಿಸುತ್ತಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.

    ಸಾಹಿತಿ ಚೆನ್ನವೀರ ಕಣವಿ ನೇತೃತ್ವದಲ್ಲಿ ಸರ್ಕಾರದ ದೊಡ್ಡದಾಗಿದ್ದ ನಾಡಗೀತೆಯನ್ನ ಪರಿಷ್ಕರಿಸಿ, 2 ರಾಗಗಗಳ ಸಂಯೋಜನೆ ಮಾಡುವಂತೆ ಸಮಿತಿಯನ್ನು ರಚಿಸಿತ್ತು. ಸಮಿತಿ ಇದನ್ನು ಪರಿಶೀಲಿಸಿ ಸರ್ಕಾರಕ್ಕೆ ಎರಡು ರಾಗ ಸಂಯೋಜನೆಯೊಂದಿಗೆ ವರದಿ ನೀಡಿತ್ತು. ನಾಡಗೀತೆಯನ್ನ ಪೂರ್ಣ ಸಾಲುಗಳೊಂದಿಗೆ 2 ನಿಮಿಷ 20 ಸೆಕೆಂಡ್‍ಗಳಲ್ಲಿ ಹಾಡೋದು ಹಾಗೂ ಪರಿಷ್ಕೃತ ನಾಡಗೀತೆಯನ್ನ 1 ನಿಮಿಷ 30 ಸೆಕೆಂಡ್‍ಗಳಲ್ಲಿ ಸಿ.ಅಶ್ವಥ್ ಸಂಯೋಜನೆಯ ರಾಗದಲ್ಲಿ ಹಾಡಲು ವರದಿ ನೀಡಿತ್ತು.

    ಸರ್ಕಾರ ಸಮಿತಿಯ ಪರಿಷ್ಕøತ ನಾಡಗೀತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಬ್‍ಸೈಟ್‍ಗೆ ಹಾಕಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿತ್ತು. ಅಭಿಪ್ರಾಯ ಸಂಗ್ರಹಿಸಿದ್ದರೂ ಸರ್ಕಾರ ಈವರೆಗೂ ನಾಡಗೀತೆ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಸರ್ಕಾರದ ಈ ರೀತಿಯ ವರ್ತನೆಗೆ ಸಾಹಿತಿ ಬರಗೂರು ರಾಮಚಂದ್ರ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.