Tag: ಅನ್ವರ್ ಇಬ್ರಾಹಿಂ

  • ಸಾಕ್ಷ್ಯ ನೀಡಿದ್ರೆ ಝಾಕೀರ್‌ ನಾಯ್ಕ್‌ ಭಾರತಕ್ಕೆ ಹಸ್ತಾಂತರ – ಮಲೇಷ್ಯಾ ಪ್ರಧಾನಿ ಇಬ್ರಾಹಿಂ

    ಸಾಕ್ಷ್ಯ ನೀಡಿದ್ರೆ ಝಾಕೀರ್‌ ನಾಯ್ಕ್‌ ಭಾರತಕ್ಕೆ ಹಸ್ತಾಂತರ – ಮಲೇಷ್ಯಾ ಪ್ರಧಾನಿ ಇಬ್ರಾಹಿಂ

    ನವದೆಹಲಿ:  ಸಾಕ್ಷ್ಯಾಧಾರಗಳನ್ನು ಒದಗಿಸಿದರೆ ವಿವಾದಿತ ಇಸ್ಲಾಮಿಕ್ ಬೋಧಕ ಝಾಕೀರ್‌ ನಾಯ್ಕ್ (Zakir Naik) ವಿರುದ್ಧ ಹಸ್ತಾಂತರಿಸಬೇಕೆಂಬ ಭಾರತದ ಮನವಿಯನ್ನು ನಮ್ಮ ಸರ್ಕಾರ ಪರಿಗಣಿಸಬಹುದು ಎಂದು ಮಲೇಷ್ಯಾ (Malaysia) ಪ್ರಧಾನಿ ಅನ್ವರ್ ಇಬ್ರಾಹಿಂ (Anwar Ibrahim) ಹೇಳಿದ್ದಾರೆ.

    2022 ರಲ್ಲಿ ಪ್ರಧಾನ ಮಂತ್ರಿ ಹುದ್ದೆ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಅನ್ವರ್ ಇಬ್ರಾಹಿಂ ಮೂರು ದಿನಗಳ ಭಾರತ (India) ಪ್ರವಾಸ ಕೈಗೊಂಡಿದ್ದಾರೆ.

    ಮಂಗಳವಾರ ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್‌ನಲ್ಲಿ ನಡೆದ ಅಧಿವೇಶನದಲ್ಲಿ ಝಾಕೀರ್‌ ನಾಯ್ಕ್ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, ಈ ಸಮಸ್ಯೆ ದೇಶದ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರದಿರಲಿ ಎಂದು ತಿಳಿಸಿದರು. ಇದನ್ನೂ ಓದಿ: ಹಣ್ಣುಗಳ ಉತ್ಪಾದನೆ ಹೆಚ್ಚಿಸಲು ಕೇಂದ್ರದ ಮಾಸ್ಟರ್ ಪ್ಲ್ಯಾನ್ – ಏನಿದು ಕ್ಲೀನ್ ಪ್ಲಾಂಟ್ ಪ್ರೋಗ್ರಾಂ?

    ಮಂಗಳವಾರದ ಮಾತುಕತೆಯ ಸಂದರ್ಭದಲ್ಲಿ ಈ ವಿಷಯವನ್ನು ಭಾರತದ ಕಡೆಯಿಂದ ಪ್ರಸ್ತಾಪಿಸಲಾಗಿಲ್ಲ ಎಂದು ಅವರು ಹೇಳಿದರು. ಇದನ್ನೂ ಓದಿ: PublicTV Explainer: ಭಾರತಕ್ಕೆ ಕಾಲಿಡುತ್ತಾ ಡೆಡ್ಲಿ ವೈರಸ್‌ – ಆಫ್ರಿಕಾ ಕಾಡಿದ ‘ಮಂಕಿಪಾಕ್ಸ್‌’ ಪಾಕ್‌ನಲ್ಲಿ ಪತ್ತೆ; ಭಾರತ ಹೈಅಲರ್ಟ್‌

    ನಾವು ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ. ಭಯೋತ್ಪಾದನೆಯ ವಿರುದ್ಧ ಈ ಹಲವು ವಿಷಯಗಳಲ್ಲಿ ನಾವು ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ಅಕ್ರಮ ಹಣ ವರ್ಗಾವಣೆ ಮತ್ತು ದ್ವೇಷದ ಭಾಷಣಗಳ ಮೂಲಕ ಉಗ್ರವಾದವನ್ನು ಪ್ರಚೋದಿಸುವ ಆರೋಪ ಝಾಕೀರ್‌ ನಾಯ್ಕ್ ಮೇಲಿದೆ. 2016 ರಲ್ಲಿ ಭಾರತವನ್ನು ತೊರೆದಿರುವ ನಾಯ್ಕ್‌ಗೆ ಈ ಹಿಂದೆ ಮಲೇಷ್ಯಾದಲ್ಲಿದ್ದ ಮಹತೀರ್ ಮೊಹಮ್ಮದ್ ನೇತೃತ್ವದ ಸರ್ಕಾರ ಶಾಶ್ವತ ಪೌರತ್ವ ನೀಡಿದೆ.

    ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಆರೋಪಿ ಶಾರೀಕ್‌ ಝಾಕೀರ್ ನಾಯ್ಕ್ ಭಾಷಣದ ವಿಡಿಯೋದಿಂದ ಪ್ರಭಾವಿತನಾಗಿದ್ದ.ಈತ ಝಾಕೀರ್‌ ನಾಯ್ಕ್‌ನನ್ನು ʼದಿ ರಿಯಲ್ ಇನ್ಸ್ಪಿರೇಶನ್ʼ ಎಂದು ಸಂಬೋಧಿಸಿದ್ದ. ತನಿಖೆಯ ವೇಳೆ ಶಾರೀಕ್‌ ಮೊಬೈಲ್‌ನಲ್ಲಿ 50ಕ್ಕೂ ಹೆಚ್ಚು ಝಾಕೀರ್ ನಾಯ್ಕ್ ಭಾಷಣಗಳು ಲಭ್ಯವಾಗಿದ್ದವು. ಇದನ್ನೂ ಓದಿ: ಮೀನು ಸಂಸ್ಕರಿಸಿ ಯಶಸ್ವಿ ಉದ್ಯಮಿಯಾದ ಕೊಡಗಿನ ಮಹಿಳೆ – PMFME ಯೋಜನೆಯ ಲಾಭ ನೀವೂ ಪಡೆಯಿರಿ!

    ದ್ವೇಷ ಭಾಷಣ, ಭಯೋತ್ಪಾದನೆಗೆ ಪ್ರೇರಣೆ, ಹಣಕಾಸು ನೆರವು ಆರೋಪ ಹಿನ್ನೆಲೆಯಲ್ಲಿ ವಿವಾದಿತ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್‌ ʼಪೀಸ್‌ ಟಿವಿʼಗೆ ಭಾರತ ನಿರ್ಬಂಧ ಹೇರಿದೆ. ಝಾಕೀರ್ ಭಾಷಣದಿಂದ ಪ್ರಚೋದಿತನಾಗಿದ್ದ ಐಸಿಸ್ ಉಗ್ರನೋರ್ವ 2016ರಲ್ಲಿ ಢಾಕಾದ ಮೇಲೆ ದಾಳಿ ಮಾಡಿದ್ದ. ಈ ಘಟನೆಯಿಂದಾಗಿ ತಕ್ಷಣವೇ ಬಳಿಕ ಝಾಕೀರ್ ಭಾರತ ಬಿಟ್ಟು ಮಲೇಷ್ಯಾಕ್ಕೆ ಹೋಗಿದ್ದ.

    ಯುವಕರನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡುವುದಕ್ಕೆ ಪ್ರೋತ್ಸಾಹ, ಭಯೋತ್ಪಾದಕರನ್ನು ಹೊಗಳುವುದು, ಆತ್ಮಹತ್ಯಾ ಬಾಂಬ್ ದಾಳಿ ಸಮರ್ಥನೆ, ಹಿಂದೂಗಳು, ಹಿಂದೂ ದೇವರುಗಳು ಮತ್ತು ಇತರ ಧರ್ಮಗಳ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್‌, ಇತರ ಧರ್ಮಗಳಿಗೆ ಅವಮಾನ ಈ ಎಲ್ಲಾ ಆರೋಪಗಳು ಝಾಕೀರ್‌ ನಾಯ್ಕ್‌ ಮೇಲಿದೆ.

  • ಡಿಸೆಂಬರ್ 1ರಿಂದ ಭಾರತೀಯರಿಗೆ ಮಲೇಷ್ಯಾಕ್ಕೆ ವೀಸಾ ಮುಕ್ತ ಪ್ರಯಾಣ

    ಡಿಸೆಂಬರ್ 1ರಿಂದ ಭಾರತೀಯರಿಗೆ ಮಲೇಷ್ಯಾಕ್ಕೆ ವೀಸಾ ಮುಕ್ತ ಪ್ರಯಾಣ

    ಕೌಲಾಲಂಪುರ್: ಪ್ರಧಾನಿ ಅನ್ವರ್ ಇಬ್ರಾಹಿಂ (Anwar Ibrahim) ನೇತೃತ್ವದ ಮಲೇಷ್ಯಾ (Malaysia) ಸರ್ಕಾರವು ಚೀನಾ (China) ಮತ್ತು ಭಾರತೀಯ (Indians) ನಾಗರಿಕರಿಗೆ ಪ್ರವೇಶ ವೀಸಾಗಳಿಗೆ ಸಂಬಂಧಿಸಿದಂತೆ ಮಹತ್ವದ ನೀತಿ ಬದಲಾವಣೆಯನ್ನು ಘೋಷಿಸಿದೆ. ಮಲೇಷ್ಯಾ ಸರ್ಕಾರ ಡಿಸೆಂಬರ್ 1ರಿಂದ 30 ದಿನಗಳವರೆಗೆ ವಾಸ್ತವ್ಯ ಹೂಡಲು ಚೀನಾ ಮತ್ತು ಭಾರತದ ನಾಗರಿಕರಿಗೆ ವೀಸಾಮುಕ್ತ ಪ್ರವೇಶವನ್ನು (Visa-Free Entry) ಘೋಷಿಸಿದೆ.

    ಪುತ್ರಜಯದಲ್ಲಿ ನಡೆದ ಪೀಪಲ್ಸ್ ಜಸ್ಟಿಸ್ ಪಾರ್ಟಿಯ ವಾರ್ಷಿಕ ಸಭೆಯಲ್ಲಿ ಭಾಷಣ ಮಾಡುವ ಸಂದರ್ಭ ಇಬ್ರಾಹಿಂ ಈ ಘೋಷಣೆ ಮಾಡಿದರು. ಇದನ್ನೂ ಓದಿ: ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ

    ಭಾರತೀಯ ಪ್ರಯಾಣಿಕರಿಗೆ ಏನು ಬದಲಾವಣೆ?
    ವೀಸಾ ನಿರ್ಮೂಲನೆ: ಮಲೇಷ್ಯಾಕ್ಕೆ ಭೇಟಿ ನೀಡುವ ಭಾರತೀಯ ನಾಗರಿಕರಿಗೆ ಇನ್ನು ಮುಂದೆ ಡಿಸೆಂಬರ್ 1 ರಿಂದ ಪ್ರವೇಶ ವೀಸಾಗಳ ಅಗತ್ಯವಿಲ್ಲ.
    ವೀಸಾ-ಮುಕ್ತ ವಾಸ್ತವ್ಯ: ಭಾರತೀಯರು ವೀಸಾ ಪಡೆಯದೆ 30 ದಿನಗಳವರೆಗೆ ಮಲೇಷ್ಯಾದಲ್ಲಿ ಉಳಿಯಬಹುದು.
    ಭದ್ರತಾ ಸ್ಕ್ರೀನಿಂಗ್: ಮಲೇಷ್ಯಾಕ್ಕೆ ಭೇಟಿ ನೀಡುವ ಭಾರತೀಯ ಪ್ರಜೆಗಳಿಗೆ ಭದ್ರತಾ ಸ್ಕ್ರೀನಿಂಗ್ ಇರುತ್ತದೆ.

    ಈ ಕ್ರಮ ಕೈಗೊಳ್ಳಲು ಕಾರಣವೇನು?
    ವಿಶೇಷವಾಗಿ ಭಾರತ ಮತ್ತು ಚೀನಾದಿಂದ ಪ್ರವಾಸಿಗರು ಮತ್ತು ಹೂಡಿಕೆದಾರರ ಒಳಹರಿವನ್ನು ಮತ್ತಷ್ಟು ಉತ್ತೇಜಿಸಲು ಮುಂಬರುವ ವರ್ಷದಲ್ಲಿ ವೀಸಾ ಸೌಲಭ್ಯಗಳನ್ನು ಹೆಚ್ಚಿಸುವ ಯೋಜನೆಗಳನ್ನು ಪ್ರಧಾನಿ ಇಬ್ರಾಹಿಂ ಈ ಹಿಂದೆ ಬಹಿರಂಗಪಡಿಸಿದ್ದರು. ಇದನ್ನೂ ಓದಿ: Constitution Day: ರಾಷ್ಟ್ರಪತಿಯಿಂದ ಸುಪ್ರೀಂ ಕೋರ್ಟ್ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ

    ಚೀನಾ ಮತ್ತು ಭಾರತವು ಮಲೇಷ್ಯಾಕ್ಕೆ ನಿರ್ಣಾಯಕ ಮಾರುಕಟ್ಟೆಗಳಾಗಿದ್ದು, ಪ್ರವಾಸಿಗರ ಆಗಮನದ ನಾಲ್ಕನೇ ಮತ್ತು ಐದನೇ ಅತಿದೊಡ್ಡ ಮೂಲಗಳಾಗಿವೆ. ಈ ವರ್ಷದ ಜನವರಿ ಮತ್ತು ಜೂನ್ ನಡುವೆ, ಮಲೇಷ್ಯಾವು ಒಟ್ಟು 9.16 ಮಿಲಿಯನ್ ಪ್ರವಾಸಿಗರ ಆಗಮನವನ್ನು ದಾಖಲಿಸಿದೆ. ಭಾರತದಿಂದ ಮಲೇಷ್ಯಾಗೆ ಒಟ್ಟು 2,83,885 ಪ್ರವಾಸಿಗರು ಆಗಮಿಸಿದ್ದು, ಚೀನಾದಿಂದ ಒಟ್ಟು 4,98,540 ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದನ್ನೂ ಓದಿ: ವಿದೇಶಗಳಲ್ಲಿ ಮದುವೆ ಆಗಬೇಡಿ: ಭಾರತೀಯರಿಗೆ ಪ್ರಧಾನಿ ಮೋದಿ ಸಲಹೆ

    ಪ್ರವೇಶ ಪ್ರಕ್ರಿಯೆಯನ್ನು ಸರಳಗೊಳಿಸುವ ಮೂಲಕ, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು ಮತ್ತು ದೇಶದೊಳಗೆ ಅವರ ವೆಚ್ಚವನ್ನು ಹೆಚ್ಚಿಸಬಹುದು. ಆ ಮೂಲಕ ಮಲೇಷ್ಯಾದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಬಹುದು ಎಂದು ಸರ್ಕಾರ ಭರವಸೆ ಹೊಂದಿದೆ. ಪ್ರಸ್ತುತ, ಚೀನಾ ಮತ್ತು ಭಾರತೀಯ ಪ್ರಜೆಗಳು ಮಲೇಷ್ಯಾ ಪ್ರವೇಶಿಸಲು ವೀಸಾಗಳಿಗೆ ಅರ್ಜಿ ಸಲ್ಲಿಸಬೇಕು. ಇದನ್ನೂ ಓದಿ: ಮೋದಿಯ ಮಾಜಿ ಸ್ನೇಹಿತ ಎಂದಿರೋ ರಾಹುಲ್‍ಗೆ ಓವೈಸಿ ತಿರುಗೇಟು

    ಪ್ರವಾಸಿಗರಿಗೆ ವೀಸಾ ಮುಕ್ತ ಪ್ರವೇಶವನ್ನು ಘೋಷಿಸಿದ ಶ್ರೀಲಂಕಾ, ವಿಯೆಟ್ನಾಂ ಮತ್ತು ಥೈಲ್ಯಾಂಡ್ ನಂತರ ಮಲೇಷ್ಯಾ ನಾಲ್ಕನೇ ದೇಶವಾಗಿದೆ. ನವೆಂಬರ್ 10 ರಿಂದ ಥೈಲ್ಯಾಂಡ್ ಭಾರತೀಯರಿಗೆ ವೀಸಾಮುಕ್ತ ಪ್ರವೇಶವನ್ನು ನೀಡಿದ್ದು, 30 ದಿನಗಳ ವಾಸ್ತವ್ಯವನ್ನು ಘೋಷಿಸಿದೆ. ಈ ನೀತಿಯು ಮುಂದಿನ ವರ್ಷದ ಮೇ 10 ರವರೆಗೆ ಜಾರಿಯಲ್ಲಿರುತ್ತದೆ. ಥಾಯ್ ಸರ್ಕಾರವು ಸೂಚಿಸಿದಂತೆ ಬೇಡಿಕೆಯ ಆಧಾರದ ಮೇಲೆ ವಿಸ್ತರಣೆಯ ಸಾಧ್ಯತೆಯಿದೆ. ಇದನ್ನೂ ಓದಿ: ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಹೊಸ ದಾಖಲೆ

    ಭಾರತ, ಚೀನಾ ಮತ್ತು ರಷ್ಯಾ ಸೇರಿದಂತೆ ಏಳು ದೇಶಗಳ ಸಂದರ್ಶಕರಿಗೆ ಶ್ರೀಲಂಕಾ ಅಕ್ಟೋಬರ್‌ನಲ್ಲಿ ವೀಸಾ-ಮುಕ್ತ ಪ್ರವೇಶವನ್ನು ಘೋಷಿಸಿದೆ. ಇದನ್ನೂ ಓದಿ: ಹಲಾಲ್‌ ಉತ್ಪನ್ನ ನಿಷೇಧಿಸುವ ನಿರ್ಧಾರ ತೆಗೆದುಕೊಂಡಿಲ್ಲ – ಅಮಿತ್‌ ಶಾ

  • ಮಲೇಷ್ಯಾ ಪ್ರಧಾನಿ ಭೇಟಿ ಮಾಡಿದ ರಜನಿಕಾಂತ್: ಅಚ್ಚರಿಯ ಹೇಳಿಕೆ ನೀಡಿದ ಪ್ರಧಾನಿ

    ಮಲೇಷ್ಯಾ ಪ್ರಧಾನಿ ಭೇಟಿ ಮಾಡಿದ ರಜನಿಕಾಂತ್: ಅಚ್ಚರಿಯ ಹೇಳಿಕೆ ನೀಡಿದ ಪ್ರಧಾನಿ

    ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ ‘ಜೈಲರ್’ ಸಿನಿಮಾದ ಗೆಲುವಿನ ಬೆನ್ನಲ್ಲೇ ಮಲೇಷ್ಯಾದ (Malaysia) ಪ್ರಧಾನಿ ಅನ್ವರ್ ಇಬ್ರಾಹಿಂ (Anwar Ibrahim) ಅವರು ರಜನಿಯನ್ನು ಭೇಟಿ ಮಾಡಿದ್ದಾರೆ. ತಮ್ಮಿಬ್ಬರ ಭೇಟಿಯ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಭೇಟಿಯ ಕುರಿತು ಅಚ್ಚರಿಯ ಸಂಗತಿಗಳನ್ನು ಹೊರ ಹಾಕಿದ್ದಾರೆ.

    ಜೈಲರ್ ಸಿನಿಮಾ ಬಿಡುಗಡೆಗೂ ಮುನ್ನ ರಜನಿಕಾಂತ್ ಉತ್ತರ ಪ್ರದೇಶದ ಪ್ರವಾಸ ಮಾಡಿದ್ದರು. ಹಿಮಾಲಯದ ಪ್ರವಾಸ ಮುಗಿದ ನಂತರ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದರು. ಜೊತೆಗೆ ಜಾರ್ಖಂಡ್ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರನ್ನು ಭೇಟಿಯಾಗಿದ್ದರು. ಇದೀಗ ಮಲೇಷ್ಯಾದ ಪ್ರಧಾನಿಯನ್ನೇ ತಲೈವ ಮುಖಾಮುಖಿಯಾಗಿದ್ದಾರೆ. ಹಾಗಾಗಿ ರಜನಿ ಬಗ್ಗೆ ಹಲವಾರು ಚರ್ಚೆಗಳು ನಡೆದಿವೆ.

    ರಜನಿಕಾಂತ್ ರಾಜಕಾರಣಕ್ಕೆ ಬರುವ ವಿಚಾರ ಇಂದು ನೆನ್ನೆಯದಲ್ಲ. ಹಲವು ವರ್ಷಗಳಿಂದ ಈ ವಿಷಯ ಚಾಲ್ತಿಯಲ್ಲಿದೆ. ರಜನಿ ಕೂಡ ಹಲವಾರು ಬಾರಿ ರಾಜಕಾರಣಕ್ಕೆ ಬರುವ ಆಸೆಯನ್ನೂ ವ್ಯಕ್ತ ಪಡಿಸಿದ್ದಾರೆ. ಆದರೆ, ಇದೀಗ ಅವರಿಗೆ ರಾಜಕಾರಣದ ಬಗ್ಗೆ ಆಸಕ್ತಿ ಇಲ್ಲವೆಂದು ಹೇಳಲಾಗುತ್ತಿದೆ. ಆದರೆ, ರಾಜ್ಯಪಾಲರ ಹುದ್ದೆಯು ಅವರನ್ನು ಹುಡುಕಿಕೊಂಡು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:‘ಛೂಮಂತರ್’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿದ ರವಿಚಂದ್ರನ್

    ರಜನಿಕಾಂತ್ ಅವರನ್ನು ರಾಜ್ಯಪಾಲರನ್ನು ಮಾಡುವ ಯೋಜನೆಯೊಂದು ಸಿದ್ಧವಾಗಿದ್ದು, ರಜನಿಕಾಂತ್ ಅದಕ್ಕಾಗಿ ಹಲವಾರು ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಹಾಗಾಗಿ ರಾಜಕಾರಣಿಗಳನ್ನು ರಜನಿ ಭೇಟಿ ಮಾಡುತ್ತಿದ್ದಾರೆ ಎನ್ನುವುದು ಕೆಲವರ ವಾದ. ಮಲೇಷ್ಯಾದಲ್ಲಿ ಸಾಕಷ್ಟು ಸಂಖ್ಯೆಯ ತಮಿಳರೂ ಇರುವುದರಿಂದ ಪ್ರಧಾನಿ ಭೇಟಿ ಮಹತ್ವ ಪಡೆದುಕೊಂಡಿದೆ.

     

    ಅಲ್ಲದೇ, ಮಲೇಷ್ಯಾದ ಪ್ರಧಾನಿ ಭೇಟಿಯ ಸಂಗತಿಗಳು ಮುಂದಿನ ಸಿನಿಮಾದಲ್ಲೂ ಇರಲಿವೆ ಎಂದು ಪ್ರಧಾನಿ ಆಡಿದ್ದಾರೆ ಎನ್ನಲಾದ ಮಾತುಗಳು ಕೂಡ ಮಹತ್ವ ಪಡೆದುಕೊಂಡಿವೆ. ಅವರ ಮಾತುಕತೆ ಯಾವುದು? ಏನೆಲ್ಲ ಮಾತನಾಡಿದ್ದಾರೆ ಎನ್ನುವುದು ಮಾತ್ರ ಸಸ್ಪೆನ್ಸ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]