Tag: ಅನ್ನ ಭಾಗ್ಯ

  • ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ಮಾಡಿದ್ರೆ ಕಠಿಣ ಕ್ರಮ: ಸಿದ್ದರಾಮಯ್ಯ

    ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ಮಾಡಿದ್ರೆ ಕಠಿಣ ಕ್ರಮ: ಸಿದ್ದರಾಮಯ್ಯ

    ಬೆಂಗಳೂರು: ಹಸಿವಿನ ಸಂಕಟ,ಅನ್ನದ ಮೌಲ್ಯ ನನಗೆ ಗೊತ್ತು ಅದಕ್ಕಾಗಿ ನಾನು ಅನ್ನಭಾಗ್ಯ ಜಾರಿಗೆ ತಂದೆ. ಕಾಳಸಂತೆಯಲ್ಲಿ ಯಾರೇ ಅನ್ನ ಭಾಗ್ಯ(Anna Bhgya) ಅಕ್ಕಿ ಮಾರಾಟ ಮಾಡಿದರೂ ಅವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.

    ಆಹಾರ ಮತ್ತು ನಾಗರಿಕ‌ ಸರಬರಾಜು ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ವಿಶ್ವ ಆಹಾರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕವಿ ಬೇಂದ್ರೆಯವರು ರೈತರನ್ನು ಅನ್ನಬ್ರಹ್ಮ ಎಂದು ಕರೆದಿದ್ದಾರೆ. ಆದ್ದರಿಂದ ಅನ್ನ ವ್ಯರ್ಥ ಮಾಡುವುದು, ಬಿಸಾಡುವುದು ಅನ್ನಬ್ರಹ್ಮನಿಗೆ ಮಾಡುವ ಅವಮಾನ ಎಂದರು.

    ನಾವು ಒಂದು ಕಾಲದಲ್ಲಿ ಅನ್ನಕ್ಕಾಗಿ ಅಮೆರಿಕದ ಮೇಲೆ ಅವಲಂಬಿತರಾಗಿದ್ದೆವು. ಈಗ ವಿದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಪ್ರಗತಿ ಸಾಧಿಸಿದ್ದೇವೆ. ಇದರ ಜೊತೆಗೆ ಊಟ ವ್ಯರ್ಥ ಮಾಡುವ ಪ್ರಮಾಣವೂ ಹೆಚ್ಚಾಗುತ್ತಿರುವುದು ಬೇಸರದ ಸಂಗತಿ ಎಂದರು. ಇದನ್ನೂಓದಿ:  ಭಾರತದ ಆರ್ಥಿಕತೆಗೆ ರಷ್ಯಾದ ತೈಲ ಮುಖ್ಯ, ನಮ್ಮ ಸಂಬಂಧ ನಂಬಿಕೆ ಮೇಲೆ ಕಟ್ಟಿರುವ ಸೇತುವೆ: ರಷ್ಯಾ


    ಬೆಂಗಳೂರು ಒಂದರಲ್ಲೇ ಪ್ರತೀ ವರ್ಷ 943 ಟನ್ ಆಹಾರ ವ್ಯರ್ಥ ಆಗುತ್ತಿದೆ. ಹೆಚ್ಚೂಕಡಿಮೆ 360 ಕೋಟಿ ರೂ. ಮೌಲ್ಯದ ಆಹಾರ ವೇಸ್ಟ್ ಮಾಡುತ್ತಿದ್ದೇವೆ ಎಂದು ಜಿಕೆವಿಕೆ ಅಧ್ಯಯನವನ್ನು ಉಲ್ಲೇಖಿಸಿದರು. ಗೊತ್ತಿದ್ದೂ ಗೊತ್ತಿದ್ದೂ ಆಹಾರ ವ್ಯರ್ಥ ಮಾಡುವುದು ಅನ್ನಕ್ಕೆ ತೋರಿಸುವ ಅಹಂಕಾರ. ಅನ್ನ ವೇಸ್ಟ್ ಮಾಡುವುದು ಪಾಪದ ಕೆಲಸ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ‌ ಅಂತ ತಿಳಿಸಿದರು.

    ಯಾರೂ ಹಸಿವಿನಿಂದ ಮಲಗಬಾರದು ಎನ್ನುವುದು ಕಾಂಗ್ರೆಸ್ ಬದ್ದತೆ. ಹೀಗಾಗಿ ಬಡವರ ಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್. ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪ್ರಧಾನಿ ಮನ ಮೋಹನ್ ಸಿಂಗ್. ಆಹಾರ ಭದ್ರತೆ ಕಾಯ್ದೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿತ್ತು. ಬಡವರ ವಿರೋಧಿ ನೀತಿ ಬಿಜೆಪಿಯ ಸಿದ್ಧಾಂತ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಆ ಕಡೆ ಬಿಜೆಪಿಗೂ ಚಪ್ಪಾಳೆ ತಟ್ಟೋದು,ಈ ಕಡೆ ಬಡವರ ಪರ ಕಾರ್ಯಕ್ರಮ ಕೊಟ್ಟ ಕಾಂಗ್ರೆಸ್ಸಿಗೂ ಚಪ್ಪಾಳೆ ತಟ್ಟೋದು ಮಾಡಬೇಡಿ. ಅನ್ನದ ಪರವಾಗಿ ಇರುವ ಕಾಂಗ್ರೆಸ್ ಬದ್ಧತೆ ಅರ್ಥ ಮಾಡಿಕೊಳ್ಳಿ ಎಂದು ಕರೆ ನೀಡಿದರು.

    ಅನ್ನಭಾಗ್ಯದ ಅಕ್ಕಿಯನ್ನು ಸಂಗ್ರಹಿಸಿ ಕಾಳ ಸಂತೆಯಲ್ಲಿ ಮಾರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾಳ ಸಂತೆ ಮಾರಾಟ ತಪ್ಪಿಸಲು 5 ಕೆಜಿ ಅಕ್ಕಿ ಕೊಟ್ಟು ಉಳಿದ ಐದು ಕೆಜಿ ಕಾಳು, ಬೇಳೆ ವಿತರಿಸಲು ತೀರ್ಮಾನಿಸಿದ್ದೇವೆ ಎಂದರು. ಇದನ್ನೂ ಓದಿ: ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ಮೂಗುದಾರ

    ಆಹಾರದ ಬಗ್ಗೆ ಜಾಗ್ರತೆ, ಸಣ್ಣ ರೈತರ ರಕ್ಷಣೆ ಮಾಡುವುದು ನಮ್ಮ ನಿಮ್ಮ ಮತ್ತು ನಾಗರಿಕ ಸಮಾಜದ ಜವಾಬ್ದಾರಿ ಅಂತ ತಿಳಿಸಿದರು. ಡಿಸಿಎಂ ಡಿಕೆಶಿವಕುಮಾರ್, ಸಚಿವ ಮುನಿಯಪ್ಪ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  • ಅನ್ನ ಭಾಗ್ಯಕ್ಕೆ ಅಕ್ಕಿ ಇಲ್ಲ, ಧರ್ಮದ ಹೆಸರಲ್ಲಿ ಮನೆ ಮನೆಗೆ ಅಕ್ಷತೆ: ಕೇಂದ್ರದ ವಿರುದ್ಧ ಮಹದೇವಪ್ಪ ಕಿಡಿ

    ಅನ್ನ ಭಾಗ್ಯಕ್ಕೆ ಅಕ್ಕಿ ಇಲ್ಲ, ಧರ್ಮದ ಹೆಸರಲ್ಲಿ ಮನೆ ಮನೆಗೆ ಅಕ್ಷತೆ: ಕೇಂದ್ರದ ವಿರುದ್ಧ ಮಹದೇವಪ್ಪ ಕಿಡಿ

    ಬೆಂಗಳೂರು: ಅನ್ನಭಾಗ್ಯ ಯೋಜನೆಗೆ (Anna Bhagya Scheme) ಅಕ್ಕಿ ನೀಡದ ಕೇಂದ್ರ ಸರ್ಕಾರ ಧರ್ಮದ ಹೆಸರಲ್ಲಿ ಅಕ್ಷತೆಯ (Mantrakshate) ಗಂಟನ್ನು ಮನೆ ಮನೆಗೆ ಕಳಿಸುತ್ತಿರುವುದು ನೈಜ ಧರ್ಮದ ಕಲ್ಪನೆಗೆ ವಿರುದ್ಧವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ (Mahadevappa) ಕಿಡಿಕಾರಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ (Social Media) ಈ ಸಂಬಂಧ ಕೇಂದ್ರ ಸರ್ಕಾರ ನಡೆಯನ್ನು ವಿರೋಧಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ಅಯೋಧ್ಯೆಗೆ ತಲುಪಿತು 2,400 ಕೆ.ಜಿಯ ದೇಶದ ಅತೀ ದೊಡ್ಡ ಘಂಟೆ

    ಪೋಸ್ಟ್‌ನಲ್ಲಿ ಏನಿದೆ?
    ಹಸಿವು ಮುಕ್ತ ಕರ್ನಾಟಕದ (Karnataka) ಉದ್ದೇಶದಿಂದ ಜಾರಿಗೊಳಿಸಿದ್ದ ಅನ್ನಭಾಗ್ಯ ಯೋಜನೆಗೆ ಹೆಚ್ಚಿನ ಹಣ ನೀಡಿ ಕೊಂಡುಕೊಳ್ಳುತ್ತೇವೆ ಎಂದಾಗಲೂ ಕೇಂದ್ರದಿಂದ ಅಕ್ಕಿ ನೀಡದವರು ಈ ದಿನ ಧರ್ಮದ ಹೆಸರಲ್ಲಿ ಅಕ್ಷತೆಯ ಗಂಟನ್ನು ಮನೆ ಮನೆಗೆ ಕಳಿಸುತ್ತಿರುವುದು ನೈಜ ಧರ್ಮದ ಕಲ್ಪನೆಗೆ ವಿರುದ್ಧವಾಗಿದೆ. ಬಡವರ ಹಸಿವಿಗೆ ಅನ್ನ ನೀಡುವುದಕ್ಕಿಂತಲೂ ದೊಡ್ಡ ಧರ್ಮ ಇದೆಯೇ?

    ಬಡವರ ಹಸಿವಿಗೆ ನೀಡುವ ಅನ್ನದ ವಿಷಯದಲ್ಲೂ ರಾಜಕೀಯ ಮಾಡುವಂತಹ ಅಮಾನವೀಯ ಪ್ರವೃತ್ತಿ ತೋರಿದ ಇವರು ಧರ್ಮದ ಕುರಿತಂತೆ ಮಾತನಾಡುತ್ತಿದ್ದರೆ ಅದನ್ನು ಕಂಡು ನಗಬೇಕೋ ಅಳಬೇಕೋ ಎಂದು ನನಗೆ ತಿಳಿಯುತ್ತಿಲ್ಲ.  ಇದನ್ನೂ ಓದಿ: 8‌ ಕೆಜಿ ಬೆಳ್ಳಿ ಪಾದುಕೆ ಹೊತ್ತು 7,200 km ಪಾದಯಾತ್ರೆ – 64ರ ವೃದ್ಧನ ಭಕ್ತಿಗೆ ರಾಮನ ಭಕ್ತರಿಂದ ಮೆಚ್ಚುಗೆ

     

  • ದುಡ್ಡು ಕೊಡಿ ಪ್ಲೀಸ್‌ – ಇನ್ನೂ ಬಗೆಹರಿಯದ ಗೃಹಲಕ್ಷ್ಮಿ, ಅನ್ನಭಾಗ್ಯ ಸಮಸ್ಯೆ

    ದುಡ್ಡು ಕೊಡಿ ಪ್ಲೀಸ್‌ – ಇನ್ನೂ ಬಗೆಹರಿಯದ ಗೃಹಲಕ್ಷ್ಮಿ, ಅನ್ನಭಾಗ್ಯ ಸಮಸ್ಯೆ

    – ಪಬ್ಲಿಕ್‌ ಟಿವಿ ರಿಯಾಲಿಟಿ ಚೆಕ್‌ನಲ್ಲಿ ಮಹಿಳೆಯರ ಆಕ್ರೋಶ

    ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ (Congress Guarantee) ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ (Gruhalakshmi) ಯೋಜನೆ ಹಳ್ಳಹಿಡಿಯುತ್ತಿದ್ಯಾ ಎಂಬ ಅನುಮಾನ ಶುರುವಾಗಿದೆ.

    ಬೆಂಗಳೂರು, ಹಾಸನ, ರಾಯಚೂರು, ಮಂಡ್ಯ, ಕೋಲಾರ ಜಿಲ್ಲೆಯಲ್ಲಿ ಕೆಲವು ಮಹಿಳೆಯರಿಗೆ (Women) ಮೊದಲ ತಿಂಗಳ ಹಣ ಮಾತ್ರ ಬಂದಿದ್ದರೆ, ಕೆಲವರಿಗೆ ಮೂರು ತಿಂಗಳ ಹಣ ಬಂದಿದೆ. ಆದರೆ ಕಡು ಬಡವರು, ಬೀದಿ ಬದಿ ವ್ಯಾಪಾರಿಗಳಿಗೆ ಒಂದು ತಿಂಗಳ ಹಣವೂ ಬಂದಿಲ್ಲ. ಇದನ್ನೂ ಓದಿ: ಕೃಷಿ ಉಪಕರಣಗಳ ಬೆಲೆ ದುಪ್ಪಟ್ಟು – ಅಂದು 30 ಪೈಪ್‌, 5 ಸ್ಪ್ರಿಂಕ್ಲರ್‌ಗೆ 1,876 ರೂ. – ಈಗ 4,667 ರೂ.ಗೆ ಏರಿಕೆ

     

    ಅಧಿಕಾರಿಗಳನ್ನು ಪ್ರಶ್ನಿಸಿದರೆ ಆಧಾರ್ ಕಾರ್ಡ್ ನಂಬರ್, ಫೋನ್ ನಂಬರ್ ಸರಿಯಲ್ಲ ಎನ್ನುತ್ತಾರೆ. ಎಲ್ಲವನ್ನು ಸರಿಪಡಿಸಿದರೂ ಸಹ ಹಣ ಬಂದಿಲ್ಲ ಎಂದು ಸರ್ಕಾರದ ವಿರುದ್ದ ಮಹಿಳೆಯರು ಕಿಡಿಕಾರಿದ್ದಾರೆ.  ಇದನ್ನೂ ಓದಿ: ಹೊಸ ವರ್ಷಕ್ಕೆ ಎಣ್ಣೆ ಶಾಕ್ ಫಿಕ್ಸ್ – ಜನವರಿಯಿಂದ ಮದ್ಯದ ಬೆಲೆಯಲ್ಲಿ ಭಾರೀ ಏರಿಕೆ

    ಬ್ಯಾಂಕ್ ಹಾಗೂ ಕಂಪ್ಯೂಟರ್ ಸೆಂಟರ್‌ಗಳಲ್ಲಿ ಗ್ಯಾರೆಂಟಿ ಯೋಜನೆ ಹಣದ ಬಗ್ಗೆ ವಿಚಾರಿಸಿ ನಿರಾಶರಾಗಿದ್ದೇವೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದೆ.

     

    ಅನ್ನಭಾಗ್ಯದ ಹಣವೂ ಇಲ್ಲ:
    ಗ್ಯಾರಂಟಿಗಳನ್ನು ಈಡೇರಿಸುವ ಜಂಬದಲ್ಲಿರುವ ರಾಜ್ಯ ಸರ್ಕಾರ ಸಾಕಷ್ಟು ಜನ ಮಹಿಳೆಯರಿಗೆ ಗೃಹ ಲಕ್ಷ್ಮಿ ಇರಲಿ ಅನ್ನಭಾಗ್ಯ ಹಣವನ್ನೂ (Anna Bhagya Yojana) ಕೊಡುತ್ತಿಲ್ಲ

     

    ಕೋಲಾರ ನಗರದ ನೂರ್ ನಗರದಲ್ಲಿ ಸಾಕಷ್ಟು ಜನ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ಹಣ ಮಾತ್ರವಲ್ಲ ಅನ್ನಭಾಗ್ಯ ಯೋಜನೆಯ ಹಣ ಕೂಡ ಸಿಕ್ಕಿಲ್ಲ. ಅಧಿಕಾರಿಗಳನ್ನು ಕೇಳಿದರೆ ಬರುತ್ತೆ ಹೋಗಿ ಎನ್ನುತ್ತಾರೆ. ಅಲ್ಲದೆ ಆಹಾರ ಇಲಾಖೆಯಲ್ಲಿ ಕೇಳಿದರೆ ಬ್ಯಾಂಕ್ ಆಧಾರ್ ಲಿಂಕ್ ಮಾಡಿ ಎನ್ನುತ್ತಾರೆ. ಬ್ಯಾಂಕ್‌ನಲ್ಲಿ ವಿಚಾರಿಸಿದರೆ ಆಹಾರ ಇಲಾಖೆಯಲ್ಲಿ ಕೇಳಿ ಎನ್ನುತ್ತಾರೆ. ಹಾಗಾಗಿ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಸರ್ಕಾರ ಮಾಡಿದೆ ಎಂದು ಮಹಿಳೆಯರು ಸಿಟ್ಟು ಹೊರ ಹಾಕಿದ್ದಾರೆ.

     

  • 12 ಜಿಲ್ಲೆಗಳ ಫಲಾನುಭವಿಗಳಿಗೆ ಇನ್ನೂ ತಲುಪಿಲ್ಲ ಅನ್ನ ಭಾಗ್ಯದ ಹಣ

    12 ಜಿಲ್ಲೆಗಳ ಫಲಾನುಭವಿಗಳಿಗೆ ಇನ್ನೂ ತಲುಪಿಲ್ಲ ಅನ್ನ ಭಾಗ್ಯದ ಹಣ

    ಬೆಂಗಳೂರು: ಕರ್ನಾಟಕ ಸರ್ಕಾರದ (Karnataka Government) ಮಹತ್ವಾಕಾಂಕ್ಷೆಯ ಅನ್ನ ಭಾಗ್ಯದ (Anna Bhagya) ಹೆಚ್ಚುವರಿ 5 ಕೆಜಿಯ ಬದಲಾಗಿ 170 ರೂಪಾಯಿ ಹಣ ನೀಡುವ (Cash Transfer) ಯೋಜನೆಗೆ ಚಾಲನೆ ಸಿಕ್ಕಿ 1 ವಾರ ಕಳೆದರೂ 12 ಜಿಲ್ಲೆಗಳ ಫಲಾನುಭವಿಗಳಿಗೆ ಈವರೆಗೂ ಹಣ ಸಿಕ್ಕಿಲ್ಲ. ಕೇವಲ 19 ಜಿಲ್ಲೆಯ ಫಲಾನುಭವಿಗಳಿಗೆ ಮಾತ್ರ ಅನ್ನಭಾಗ್ಯದ ಹಣ ಜಮೆಯಾಗಿದೆ.

    ಉಳಿದ 12 ಜಿಲ್ಲೆಗಳಿಗೆ ಹಣ ತಲುಪಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಆಧಾರ್ ಕಾರ್ಡ್, ಅಕೌಂಟ್ ಲಿಂಕ್ ಆಗದೇ ಇರುವುದು ಒಂದು ಸಮಸ್ಯೆಯಾದರೆ ಮತ್ತೊಂದು ಕಡೆ ಒಂದು ಫೈಲ್‍ನಲ್ಲಿ 20 ಸಾವಿರ ಕುಟುಂಬಗಳಿಗೆ ಮಾತ್ರ ಹಣ ಹಾಕಲು ಸಾಧ್ಯವಾಗುತ್ತಿದೆ.

     

    ಹಂತ ಹಂತವಾಗಿ ಹಣ ಹಾಕಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ. 12 ಜಿಲ್ಲೆಗಳಿಗೆ ಹಣ ತಲುಪಲು 8 ರಿಂದ 12 ದಿನ ಬೇಕಾಗಬಹುದು ಎನ್ನುತ್ತಿದ್ದಾರೆ ಆಹಾರ ಇಲಾಖೆ ಅಧಿಕಾರಿಗಳು.  ಇದನ್ನೂ ಓದಿ: ವಸತಿ ಯೋಜನೆಗೆ ಫಲಾನುಭವಿಗಳು ನಿರಾಸಕ್ತಿ ತೋರಿದರೆ ಬೇರೆ ಅರ್ಹರಿಗೆ ಹಂಚಿಕೆ ಮಾಡಿ: ಜಮೀರ್‌

    ಹಣ ಜಮೆಯಾಗದ ಜಿಲ್ಲೆಗಳು:
    ಚಾಮರಾಜನಗರ, ಮಂಡ್ಯ, ತುಮಕೂರು, ಉಡುಪಿ, ಉತ್ತರ ಕನ್ನಡ, ವಿಜಯನಗರ, ಹಾಸನ, ವಿಜಯಪುರ, ಹಾವೇರಿ, ಚಿಕ್ಕಬಳ್ಳಾಪುರ, ಶಿವಮೊಗ್ಗ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅನ್ನಭಾಗ್ಯಕ್ಕೆ ಇಂದು ಚಾಲನೆ- ಬಿಪಿಎಲ್ ಕಾರ್ಡ್‍ದಾರರ ಅಕೌಂಟ್‍ಗೆ ರೇಷನ್ ದುಡ್ಡು

    ಅನ್ನಭಾಗ್ಯಕ್ಕೆ ಇಂದು ಚಾಲನೆ- ಬಿಪಿಎಲ್ ಕಾರ್ಡ್‍ದಾರರ ಅಕೌಂಟ್‍ಗೆ ರೇಷನ್ ದುಡ್ಡು

    ಬೆಂಗಳೂರು: ಕಾಂಗ್ರೆಸ್ ಸರ್ಕಾರದ (Congress Government) ಎರಡನೇ ಗ್ಯಾರಂಟಿ ಯೋಜನೆ ಅನ್ನಭಾಗ್ಯಕ್ಕೆ (Anna Bhagya) ಇಂದು ಚಾಲನೆ ಸಿಗಲಿದೆ. ಬಿಪಿಎಲ್ ಕಾರ್ಡ್‌ದಾರರ (BPL Card) ಖಾತೆಗೆ ಹಣ ಹಾಕುವ ಮೂಲಕ ಚಾಲನೆ ಸಿಗಲಿದೆ. ಹಂತಹಂತವಾಗಿ ಖಾತೆಗೆ ಹಣ ಹಾಕುವ ಪ್ಲ್ಯಾನ್ ಅನ್ನು ಆಹಾರ ಇಲಾಖೆ ಮಾಡಿಕೊಂಡಿದೆ.

    ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಅನ್ನಭಾಗ್ಯ. ಅನ್ನಭಾಗ್ಯ ಯೋಜನೆ ಜುಲೈ ಒಂದರಿಂದಲೇ ಜಾರಿ ಆಗಬೇಕಿತ್ತು. ಅಕ್ಕಿ ಸಿಗದ ಕಾರಣ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿಯೊಂದಿಗೆ  5 ಕೆಜಿ ಅಕ್ಕಿಗೆ ಹಣ ಹಾಕಲು ಸರ್ಕಾರ ನಿರ್ಧಾರ ಮಾಡಿದೆ. ಈ ಯೋಜನೆಗೆ ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.  ಇದನ್ನೂ ಓದಿ: 2 ತಿಂಗಳು ನಾವು ಬಾರ್‌ಗೆ ಹೋಗದಿದ್ರೆ ಸರ್ಕಾರವೇ ಬಿದ್ದು ಹೋಗುತ್ತೆ – ಮದ್ಯಪಾನಪ್ರಿಯರ ಸಂಘದ ರಾಜ್ಯಾಧ್ಯಕ್ಷ

    ಸೋಮವಾರ ಕೋಲಾರ ಮತ್ತು ಮೈಸೂರು ಜಿಲ್ಲೆಯ ಬಿಪಿಎಲ್ ಕಾರ್ಡ್‍ದಾರರ ಅಕೌಂಟ್‍ಗೆ ಅಮೌಂಟ್ ಹಾಕಿ ಜಾರಿ ಮಾಡಲಿದ್ದಾರೆ. ನಂತರ ಮಂಗಳವಾರ ಉಳಿದ ಜಿಲ್ಲೆಯ ಬಿಪಿಎಲ್ ಕಾರ್ಡ್‍ದಾರರಿಗೆ ಹಣ ಹಾಕಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ನಿರ್ಧರಿಸಿದೆ.

    ರಾಜ್ಯದಲ್ಲಿ ಒಟ್ಟು 1.28 ಕೋಟಿ ಬಿಪಿಎಲ್ ಕಾರ್ಡ್‍ದಾರರಿದ್ದಾರೆ. 1.28 ಕೋಟಿ ಪೈಕಿ 99.9% ಆಧಾರ್ ಲಿಂಕ್ ಆಗಿದ್ದು ಬ್ಯಾಂಕ್ ಅಕೌಂಟ್ ಲಿಂಕ್ ಕೂಡ ಆಗಿದೆ. ಬಾಕಿ ಉಳಿದಿರುವ 6 ಲಕ್ಷ ಕಾರ್ಡ್‍ಗಳು ಆಧಾರ್ ಲಿಂಕ್ ಆಗಬೇಕಿದೆ. ಪ್ರತಿ ಕೆಜಿಗೆ 34 ರೂಪಾಯಿ ಲೆಕ್ಕದಲ್ಲಿ ತಲಾ ಒಬ್ಬರಿಗೆ 5 ಕೆಜಿಗೆ 170 ರೂಪಾಯಿ ಅಕೌಂಟ್‍ಗೆ ಬೀಳಲಿದೆ.

     

    ಹಣ ಭಾಗ್ಯ ಹೇಗೆ?
    ನೀವು ಬಿಪಿಎಲ್ ಪಡಿತರ ಕಾರ್ಡ್‍ದಾರರಾಗಿರಬೇಕು. ರೇಷನ್ ಕಾರ್ಡ್‍ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಆಧಾರ್ – ಬ್ಯಾಂಕ್ ಖಾತೆ ಲಿಂಕ್ ಆಗದೇ ಇದ್ದರೆ ದುಡ್ಡು ಬರುವುದಿಲ್ಲ. ಕಾರ್ಡ್‌ನಲ್ಲಿ ಯಜಮಾನರಾಗಿರುವವರ ಖಾತೆಗೆ ಡಿಬಿಟಿ ಮೂಲಕ ಹಣ. ಅನ್ನಭಾಗ್ಯದ ಯೋಜನೆಗೆ ಯಾವುದೇ ಅರ್ಜಿ ಸಲ್ಲಿಕೆ ಅಗತ್ಯವಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ಯಾಂಕ್ ಖಾತೆ – ಆಧಾರ್ ಲಿಂಕ್ ಆಗದಿದ್ರೆ ಸಿಗಲ್ಲ ಕಾಸು

    ಬ್ಯಾಂಕ್ ಖಾತೆ – ಆಧಾರ್ ಲಿಂಕ್ ಆಗದಿದ್ರೆ ಸಿಗಲ್ಲ ಕಾಸು

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿದ್ಯುತ್‌ ದರ ಇಳಿಸದಿದ್ರೆ ಪ್ರತಿ ಕೆಜಿ ಅಕ್ಕಿ ಬೆಲೆ 5-10 ರೂ ಏರಿಸುತ್ತೇವೆ: ರೈಸ್‌ ಮಿಲ್‌ ಮಾಲೀಕರ ಎಚ್ಚರಿಕೆ

    ವಿದ್ಯುತ್‌ ದರ ಇಳಿಸದಿದ್ರೆ ಪ್ರತಿ ಕೆಜಿ ಅಕ್ಕಿ ಬೆಲೆ 5-10 ರೂ ಏರಿಸುತ್ತೇವೆ: ರೈಸ್‌ ಮಿಲ್‌ ಮಾಲೀಕರ ಎಚ್ಚರಿಕೆ

    ಬೆಂಗಳೂರು: ಅನ್ನಭಾಗ್ಯ (Anna Bhagya) ಯೋಜನೆಯಡಿ 10 ಕೆಜಿ ಉಚಿತ ಅಕ್ಕಿ (Free Ration) ನೀಡಲು ಸರ್ಕಾರ ಹೆಣಗಾಡುತ್ತಿದ್ದರೆ ಇನ್ನೊಂದು ಕಡೆ ಜನ ಸಮಾನ್ಯರಿಗೆ ಅಕ್ಕಿ ದರ ಏರಿಕೆಯ ಆತಂಕ ಶುರುವಾಗಿದೆ. ರಾಜ್ಯದ ರೈಸ್ ಮಿಲ್‍ಗಳಿಗೆ (Rice Mill) ವಿದ್ಯುತ್ ದರ ದುಪ್ಪಟ್ಟು ಬಂದಿದ್ದು, ಇಲ್ಲಿಂದ ರಪ್ತು ಆಗುವ ಅಕ್ಕಿಗೆ ಪ್ರತಿ ಕೆಜಿಗೆ 5-10 ರೂಪಾಯಿ ದರ ಏರಿಕೆ ಮಾಡುವ ಎಚ್ಚರಿಕೆಯನ್ನ ರೈಸ್ ಮಿಲ್ ಅಸೋಸಿಯೇಷನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

    ರೈಸ್ ಮಿಲ್ ಮಾಲೀಕರ ಸಮಸ್ಯೆಗೆ ಅಲಿಸದೇ, ವಿದ್ಯುತ್ ಬಿಲ್ (Electricity Bill) ಕಡಿಮೆ ಮಾಡದೇ ಇದ್ದರೆ ಪ್ರತಿ ಕ್ವಿಂಟಾಲ್ ಅಕ್ಕಿ ಬೆಲೆಯನ್ನು 400-800 ರೂಪಾಯಿಗಳಷ್ಟು ಹೆಚ್ಚಿಸುವುದಾಗಿ ಎಚ್ಚರಿಸಿದ್ದಾರೆ.   ಇದನ್ನೂ ಓದಿ: 2 ಬಲ್ಬ್ ಇರುವ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ – ಕಂಗಲಾದ ವೃದ್ಧೆ

    ರಾಜ್ಯದಲ್ಲಿ ಸುಮಾರು 2 ಸಾವಿರ ರೈಸ್ ಮಿಲ್‍ಗಳಿದ್ದು, ವರ್ಷಕ್ಕೆ 30 ರಿಂದ 40 ಮೆಟ್ರಿಕ್ ಟನ್ ನಷ್ಟು ಅಕ್ಕಿಯನ್ನ ಉತ್ಪಾದನೆ ಮಾಡಲಾಗುತ್ತದೆ. ದುಬಾರಿ ವಿದ್ಯುತ್ ಬಿಲ್‍ನಿಂದ ರೈಸ್ ಮಿಲ್ ಮಾಲೀಕರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಮುಂದಿನ ವಾರದೊಳಗೆ 15 ರೂಪಾಯಿ ತನಕ ದರ ಏರಿಕೆಯಾಗುವ ಆತಂಕವೂ ಶುರುವಾಗಿದೆ. ಇದನ್ನೂ ಓದಿ: ಗೃಹಜ್ಯೋತಿ – ಅರ್ಜಿ ಸಲ್ಲಿಕೆಗೆ 5ನೇ ದಿನವೂ ಸರ್ವರ್‌ ಸಮಸ್ಯೆ

    ಕಳೆದ 15 ದಿನಗಳಿಂದ ಹೋಲ್ ಸೆಲ್ ಅಕ್ಕಿಯ ದರದಲ್ಲಿ ಏರಿಕೆ ಕಂಡಿದ್ದು, ಮುಂದಿನ ವಾರದೊಳಗೆ ಮತ್ತಷ್ಟು ದುಬಾರಿಯಾಗಲಿದೆ. ಸರ್ಕಾರ ಅನ್ನಭಾಗ್ಯ ಯೋಜನೆಗೆ ಸಾಕಷ್ಟು ಅಕ್ಕಿಯನ್ನು ಸಂಗ್ರಹಿಸಲು ಹೆಣಗಾಡುತ್ತಿರುವಾಗ, ಅಕ್ಕಿ ದರ ಏರಿಕೆ ಬಿಸಿಯನ್ನ ಗ್ರಾಹಕರು ಅನುಭವಿಸುವ ಆತಂಕದಲ್ಲಿದ್ದು ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಅನ್ನ ಭಾಗ್ಯ ಫೈಟ್‌ ದೆಹಲಿಗೆ ಶಿಫ್ಟ್‌

    ಅನ್ನ ಭಾಗ್ಯ ಫೈಟ್‌ ದೆಹಲಿಗೆ ಶಿಫ್ಟ್‌

    ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಅಕ್ಕಿ ಫೈಟ್ ರಾಷ್ಟ್ರ ರಾಜಧಾನಿ ದೆಹಲಿಗೆ ಶಿಫ್ಟ್ ಆಗುವ ಸಾಧ್ಯತೆಗಳಿದೆ.

    ಅನ್ನಭಾಗ್ಯ (Anna Bhagya) ಯೋಜನೆಗೆ ಅಕ್ಕಿ ನೀಡಲು ಭಾರತೀಯ ಆಹಾರ ನಿಗಮ ನಿರಾಕರಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ದೆಹಲಿ ಪ್ರವಾಸ (Delhi) ಹಮ್ಮಿಕೊಂಡಿದ್ದು, ತಮ್ಮ ಪ್ರವಾಸ ವೇಳೆ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ (Piyush Goyal) ಅವರನ್ನ ಭೇಟಿ ಮಾಡಿ ಅಕ್ಕಿ ನೀಡುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.  ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ನಾವು ತಟಸ್ಥವಾಗಿಲ್ಲ: ಮೋದಿ

     

    ಹಲವು ರಾಜ್ಯಗಳಲ್ಲಿ ಅಕ್ಕಿಗಾಗಿ ರಾಜ್ಯ ಸರ್ಕಾರ ಪ್ರಯತ್ನಿಸಿದರೂ ದುಬಾರಿ ಬೆಲೆ ತೆರಬೇಕಾದ ಅನಿವಾರ್ಯತೆ ಹಿನ್ನಲೆ ಸಿದ್ದರಾಮಯ್ಯ ಮತ್ತೊಮ್ಮೆ ಕೇಂದ್ರ ಸರ್ಕಾರದ ಜೊತೆಗೆ ಚರ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನೂ  ಭೇಟಿಯಾಗುತ್ತಿದ್ದು ಸೌಹಾರ್ದಯುತ ಮಾತುಕತೆ ನಡೆಯಲಿದೆ ಎನ್ನಲಾಗಿದೆ.

    ಸಿದ್ದರಾಮಯ್ಯ ತಮ್ಮ ದೆಹಲಿ ಪ್ರವಾಸದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರನ್ನು ಭೇಟಿಯಾಗುತ್ತಿದ್ದು ಸಿಎಂ ಆದ ಬಳಿಕ ಸೌಜನ್ಯಯುತ ಭೇಟಿ ಮಾಡುತ್ತಿದ್ದಾರೆ.

  • ಮೋದಿ ಮುಂದೆ ಮಾತಾಡೋ ಧಮ್ ಇದ್ದಿದ್ದು ಬಿಎಸ್‌ವೈಗೆ ಮಾತ್ರ – ರಾಮಲಿಂಗಾ ರೆಡ್ಡಿ

    ಮೋದಿ ಮುಂದೆ ಮಾತಾಡೋ ಧಮ್ ಇದ್ದಿದ್ದು ಬಿಎಸ್‌ವೈಗೆ ಮಾತ್ರ – ರಾಮಲಿಂಗಾ ರೆಡ್ಡಿ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮುಂದೆ ನಿಂತು ಮಾತನಾಡುವ ಧಮ್, ತಾಕತ್ತು ಇದ್ದಿದ್ದು ಯಡಿಯೂರಪ್ಪ (BS Yediyurappa) ಅವರಿಗೆ ಮಾತ್ರ. ಉಳಿದವರೆಲ್ಲಾ ಶೂನ್ಯ ಎಂದು ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಕುಟುಕಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ (BJP Leaders) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನಲ್ಲಿ ಯಾರಾದ್ರೂ ಕರ್ನಾಟಕದ ಬಗ್ಗೆ ಮಾತಾಡ್ತಾರಾ? 25 ಜನ ಸಂಸದರಿಗೆ ಮೋದಿ ಎದುರಿಗೆ ನಿಂತು ಮಾತನಾಡುವ ಧೈರ್ಯವಿಲ್ಲ. ಆ ಧೈರ್ಯ ಯಡಿಯೂರಪ್ಪ ಅವರಿಗೆ ಮಾತ್ರ ಇತ್ತು. ಈಗ ದೆಹಲಿಗೆ ಹೋಗುವ ಎಂಪಿಗಳು ಸುಮ್ಮನೆ ಹೋಗ್ತಾರೆ. ತಿರುಪತಿಗೆ ಹೋಗಿ ವೆಂಕಟರಮಣಸ್ವಾಮಿಗೆ ನಮಸ್ಕಾರ ಹಾಕುವ ರೀತಿ, ದೆಹಲಿಗೆ ಹೋಗಿ ಮೋದಿಗೆ ನಮಸ್ಕಾರ ಹಾಕಿ ಬರ್ತಾರೆ ಅಷ್ಟೇ ಎಂದು ಕಿಡಿ ಕಾರಿದ್ದಾರೆ.

    ಕಾಂಗ್ರೆಸ್ ರಾಜ್ಯವ್ಯಾಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಸಚಿವರು, ಕಾಂಗ್ರೆಸ್ ಬಹಳ ಸ್ಪಷ್ಟವಾಗಿ 10 ಕೆಜಿ ಕೊಡ್ತೀವಿ ಅಂತಾ ಹೇಳಿದೆ, ಏನೇ ಆದ್ರೂ ಕೊಟ್ಟೆ ಕೊಡ್ತೀವಿ. ಬಿಜೆಪಿ ಅಧಿಕಾರಕ್ಕೆ ಬಂದಾಗ 4 ಕೆ.ಜಿ ಇಳಿಸಿದ್ದರು, ಅವರಿಗೆ ಬಿಪಿಎಲ್ ಕಾರ್ಡ್ದಾರರ ಮೇಲೆ ಅನುಕಂಪ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೋಮು ಗಲಭೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 25 ಲಕ್ಷ ಪರಿಹಾರ – ಶೀಘ್ರದಲ್ಲೇ ಸರ್ಕಾರಿ ಉದ್ಯೋಗ

    ಕೇಂದ್ರ ಸರ್ಕಾರ ಕೇಳಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ರಾ ಎಂಬ ಬಿಜೆಪಿ ಹೇಳಿಕೆ ತಿರುಗೇಟು ನೀಡಿದ ಸಚಿವರು, ಕೇಂದ್ರ ಸರ್ಕಾರ ಯಾರದ್ದು ಬಿಜೆಪಿ ಅವರೇ? ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಆಡಳಿತ ಮಾಡ್ತಿದೆ. ಸಮಸ್ತ ಜನರ ಸರ್ಕಾರ ಅದು. ಅವರು ಕೊಡದಿದ್ರೆ ಮಾರುಕಟ್ಟೆಯಿಂದ ಅಕ್ಕಿ ತಂದು ಕೊಡ್ತೀವಿ. ಮಾತಿಗೆ ತಪ್ಪೋಕೆ ನಾವೇನು ಬಿಜೆಪಿಯವರಾ? ನಮ್ಮಲ್ಲಿ ಇರುವ ದೊಡ್ಡ-ದೊಡ್ಡ ನಾಯಕರು ಕೇಂದ್ರ ಸರ್ಕಾರಕ್ಕೆ ಹೇಳಬೇಕು. ಅಕ್ಕಿ ಕೊಡಲಿಲ್ಲ ಪ್ರತಿಭಟನೆ ಮಾಡ್ತೀವಿ ಅಂತಾರೆ, ನಾಚಿಕೆ ಆಗಬೇಕು ಬಿಜೆಪಿ ನಾಯಕರಿಗೆ ಎಂದು ತಿವಿದಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೆ ಬುಲ್ಡೋಜರ್ ಸದ್ದು – ರಾಜಕಾಲುವೆ ಒತ್ತುವರಿ ತೆರವು ವೇಳೆ ಭಾರೀ ಹೈಡ್ರಾಮಾ

  • ಅಕ್ಕಿ ನೀಡಲು ಸಾಧ್ಯವಿಲ್ಲ ಎಂದ 2 ರಾಜ್ಯಗಳು – ಸರ್ಕಾರಕ್ಕೆ ಮತ್ತಷ್ಟು ತಲೆನೋವು

    ಅಕ್ಕಿ ನೀಡಲು ಸಾಧ್ಯವಿಲ್ಲ ಎಂದ 2 ರಾಜ್ಯಗಳು – ಸರ್ಕಾರಕ್ಕೆ ಮತ್ತಷ್ಟು ತಲೆನೋವು

    ಬೆಂಗಳೂರು: ಅನ್ನಭಾಗ್ಯ (Anna Bhagya) ಯೋಜನೆಯನ್ನು ಜಾರಿ ಮಾಡಿದ ರಾಜ್ಯ ಸರ್ಕಾರ (State Government) ಈಗ ಸಂಕಷ್ಟಕ್ಕೆ ಸಿಲುಕಿದೆ. ಅಕ್ಕಿ (Rice) ಉತ್ಪಾದಿಸುವ ರಾಜ್ಯಗಳ ಪರ ಹೋದರೂ ಸಹಕಾರ ಸಿಗುವುದು ಅನುಮಾನ ಎನ್ನುವ ಮಾತುಗಳು ವ್ಯಕ್ತವಾಗುತ್ತಿದೆ.

    ಸದ್ಯ 4 ರಾಜ್ಯಗಳ ಜತೆ ಸರ್ಕಾರ ಅಕ್ಕಿ ಖರೀದಿ ಮಾತುಕತೆ ನಡೆಸಿದೆ. ಈ ಪೈಕಿ ರಾಜ್ಯಕ್ಕೆ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ಪಂಜಾಬ್, ತೆಲಂಗಾಣ ರಾಜ್ಯಗಳು ಈಗಾಗಲೇ ತಿಳಿಸಿದೆ. ಛತ್ತೀಸ್‍ಗಢ (Chhattisgarh) ರಾಜ್ಯದಿಂದ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸಿಗುವ ಭರವಸೆ ನೀಡಿದರೂ ಅಂದುಕೊಂಡಷ್ಟು ಪೂರೈಕೆ ಮಾಡುವುದು ಅನುಮಾನ ಎನ್ನಲಾಗುತ್ತಿದೆ.

    ಸದ್ಯ ನಮ್ಮ ರಾಜ್ಯಕ್ಕೆ ಮಾಸಿಕ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದೆ. ಛತ್ತೀಸ್‌ಗಢ ಕೊಡುತ್ತೇವೆ ಎಂದು ಹೇಳಿರುವುದು 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮಾತ್ರ. ಆದರೆ ಉಳಿದ 1 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊರತೆ ಎದುರಾಗಲಿದೆ. ಅಕ್ಕಿ ಖರೀದಿ ಸಂಬಂಧ  ಆಂಧ್ರಪ್ರದೇಶ (Andhra Pradesh) ಸರ್ಕಾರದ ಜೊತೆಯೂ ಮಾತುಕತೆ ನಡೆಸಿದ್ದು, ಇಂದು ಅಥವಾ ನಾಳೆ ಉತ್ತರ ಬರಲಿದೆ. ಇದನ್ನೂ ಓದಿ: ಮೆಜೆಸ್ಟಿಕ್‌ನಲ್ಲಿ ಮಹಿಳೆಯರ ʼಶಕ್ತಿʼ ಪ್ರದರ್ಶನ – ಮಧ್ಯರಾತ್ರಿಯೂ ಇತ್ತು ಬುಕ್ಕಿಂಗ್‌ ಸಾಲು!

    ಛತ್ತೀಸ್‍ಗಡ ರಾಜ್ಯದ ಅಕ್ಕಿಯೂ ಸ್ವಲ್ಪ ದುಬಾರಿ ಮತ್ತು ಸಾಗಣೆ ವೆಚ್ಚವೂ ಹೆಚ್ಚಾಗುತ್ತದೆ. ಇದು ರಾಜ್ಯ ಸರ್ಕಾರಕ್ಕೆ ಇನ್ನಿಲ್ಲದ ತಲೆಬಿಸಿಗೆ ಕಾರಣವಾಗಿದೆ.

     

    ಚುನಾವಣಾ ಸಮಯದಲ್ಲಿ ಸಿದ್ದರಾಮಯ್ಯ (Siddaramaiah) ಸೇರಿದಂತೆ ಕಾಂಗ್ರೆಸ್‌ ನಾಯಕರು ನಾವು 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಗ್ಯಾರಂಟಿ ಭರವಸೆ ನೀಡಿದ್ದರು.

    ಕಳೆದ ವರ್ಷದವರೆಗೆ 1 ಕೆಜಿ ಅಕ್ಕಿಗೆ ಕೇಂದ್ರ ಸರ್ಕಾರ 34.28 ರೂ. ಸಬ್ಸಿಡಿ ನೀಡಿದ್ದರೆ, ರಾಜ್ಯ ಸರ್ಕಾರಗಳು 2 ಕೆಜಿ ನೀಡುತ್ತಿತ್ತು. ಈ ವರ್ಷದ ಜನವರಿಯಿಂದ ರಾಜ್ಯ ಸರ್ಕಾರದ ಯಾವುದೇ ಸಬ್ಸಿಡಿ ಇಲ್ಲದೇ ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ 1 ಕೆಜಿ ಅಕ್ಕಿಯನ್ನು ಬಡವರಿಗೆ ಉಚಿತವಾಗಿ ನೀಡಲು ಆರಂಭಿಸಿದೆ.