Tag: ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ

  • ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಇನ್ಸ್‌ಪೆಕ್ಟರ್‌ ಶಾಕ್ – ಲೋಕಾ ದಾಳಿ ವೇಳೆ ಪರಾರಿ

    ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಇನ್ಸ್‌ಪೆಕ್ಟರ್‌ ಶಾಕ್ – ಲೋಕಾ ದಾಳಿ ವೇಳೆ ಪರಾರಿ

    – ಅನ್ನಪೂರ್ಣೇಶ್ವರಿ ಪೊಲೀಸ್ ಇನ್ಸ್‌ಪೆಕ್ಟರ್‌ ವಿರುದ್ಧ ಕಿರುಕುಳ ಆರೋಪ
    – 4 ಕೋಟಿ ಮೌಲ್ಯದ ಮನೆಯನ್ನ 60 ಲಕ್ಷಕ್ಕೆ ಹೇಳಿದವರಿಗೆ ಕೊಡುವಂತೆ ಕಿರುಕುಳ
    – ಡೀಲ್ ಮಾಡುತ್ತಿದ್ದ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಲೋಕಾ ದಾಳಿ

    ಬೆಂಗಳೂರು: ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಪೊಲೀಸ್ ಇನ್ಸ್‌ಪೆಕ್ಟರ್‌(Police Inspector) ಕುಮಾರ್ ಅವರಿಗೆ ಲೋಕಾಯುಕ್ತ ಶಾಕ್ ನೀಡಿದೆ. ಲೋಕಾಯುಕ್ತ ದಾಳಿ ವಿಚಾರ ತಿಳಿಯುತ್ತಿದ್ದಂತೆ, ಇನ್ಸ್‌ಪೆಕ್ಟರ್‌ ಮನೆಯಲ್ಲೇ ಇಲಾಖೆಯ ಜೀಪ್ ಬಿಟ್ಟು ಎಸ್ಕೇಪ್ ಆಗಿದ್ದಾರೆ.

    ಗುತ್ತಿಗೆದಾರ ಚೆನ್ನೇಗೌಡ ಹಾಗೂ ಕುಟುಂಬಕ್ಕೆ ಅನ್ನಪೂರ್ಣೇಶ್ವರಿ ನಗರ(Annapoorneshwari Nagara) ಪೊಲೀಸ್ ಇನ್ಸ್‌ಪೆಕ್ಟರ್‌ ಕುಮಾರ್‌ರಿಂದ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ವಕ್ಫ್‌ ತಿದ್ದುಪಡಿ ಮಸೂದೆಯಲ್ಲಿ ಏನು ಬದಲಾವಣೆಯಾಗಿದೆ? ಹಿಂದೆ ಏನಿತ್ತು?

    ಆರೋಪ ಏನು?
    ಸುಳ್ಳು ಕೇಸ್ ಹಾಕಿ ಚೆನ್ನೇಗೌಡರ 4 ಕೋಟಿ ರೂ. ಮೌಲ್ಯದ ಮನೆಯನ್ನ ಹೇಳಿದವರಿಗೆ ಕಡಿಮೆ ಮೊತ್ತಕ್ಕೆ ನೋಂದಣಿ ಮಾಡಿಕೊಡುವಂತೆ ಇನ್ಸ್‌ಪೆಕ್ಟರ್‌ ಕುಮಾರ್ ಕಿರುಕುಳ ನೀಡುತ್ತಿದ್ದರು. ಚೆನ್ನೇಗೌಡ ಪತ್ನಿ ಸರ್ಕಾರಿ ಉದ್ಯೋಗದಲ್ಲಿದ್ದು, ಇವರಿಬ್ಬರಿಗೂ ಇನ್ಸ್‌ಪೆಕ್ಟರ್‌ ಕಿರುಕುಳ ಕೊಟ್ಟಿದ್ದರು.

    ಈ ಹಿಂದೆ ದಾಖಲಾಗಿದ್ದ ಕೇಸ್ ಒಂದನ್ನು ಬಿ ರಿಪೋರ್ಟ್‌ಗೆ ಹಾಕುತ್ತೇನೆ. ಮನೆಯನ್ನು ಬರೆದುಕೊಡಿ ಎಂದು ಇನ್ಸ್‌ಪೆಕ್ಟರ್‌ ಕುಮಾರ್ ಅವರು ಚೆನ್ನೇಗೌಡ ಅವರ ಮನೆಗೆ ಕೆಲ ಪುಂಡರನ್ನ ನುಗ್ಗಿಸಿ ದಾಂಧಲೆ ಮಾಡಿಸಿದ್ದರು. ಪುಂಡರ ದಾಂಧಲೆಯನ್ನು ಚೆನ್ನೇಗೌಡ ಅವರು ವಿಡಿಯೋ ಮಾಡಿಕೊಂಡಿದ್ದರು. ಇದನ್ನೂ ಓದಿ: ತವರಲ್ಲಿ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡುತ್ತಾ ಆರ್‌ಸಿಬಿ?

    ಪೊಲೀಸ್ ಇನ್ಸ್‌ಪೆಕ್ಟರ್‌, ಸಂಬಂಧಿಯೊಬ್ಬರಿಗೆ ಕಡಿಮೆ ಬೆಲೆಗೆ ಮನೆ ಕೊಡಿಸಲು ಪ್ಲ್ಯಾನ್ ಮಾಡಿದ್ದರು. 4 ಕೋಟಿ ರೂ. ಮೌಲ್ಯದ ಮನೆಯನ್ನ 60 ಲಕ್ಷ ರೂ.ಗೆ ಕೊಡುವಂತೆ ಚೆನ್ನೇಗೌಡ ದಂಪತಿಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಮನೆ ನೋಡಿಕೊಂಡು ಬರಲು ಠಾಣೆಯ ಹೆಡ್ ಕಾನ್ಸ್‌ಟೇಬಲ್ ಉಮೇಶ್ ಅವರ ಜೊತೆ ಅವರ ಸಂಬಂಧಿಕರನ್ನ ಕಳುಹಿಸಿದ್ದರು.

    ಇನ್ಸ್‌ಪೆಕ್ಟರ್‌ ಸೂಚನೆಯಂತೆ ಇಬ್ಬರು ವ್ಯಕ್ತಿಗಳೊಂದಿಗೆ ಮನೆ ನೋಡಬೇಕೆಂದು ಹೆಡ್ ಕಾನ್ಸ್‌ಟೇಬಲ್ ಉಮೇಶ್ ಅವರು ಚೆನ್ನೇಗೌಡ ಅವರ ಮನೆಗೆ ನುಗ್ಗಿದ್ದರು. ಮಾ. 18ರಂದು ಸಮಯ 3:25 ನಿಮಿಷಕ್ಕೆ ಕೆಂಪು ಬಣ್ಣದ ಕೆಎ 42 ಪಿ 0919 ನೋಂದಣಿಯ ಬ್ರೀಝಾ ಕಾರಿನಲ್ಲಿ ಮನೆಗೆ ಬಂದಿದ್ದರು. ಈ ಬಗ್ಗೆ ಪ್ರಶ್ನಿಸಿದ ಚೆನ್ನೇಗೌಡ ಅವರು ವಿಡಿಯೋ ಸಹ ಮಾಡಿದ್ದರು. ಈ ವೇಳೆ ಸ್ಟೇಷನ್‌ನಿಂದ ಕಾರು ಸಮೇತ ಕರೆದುಕೊಂಡು ಬರುವುದಾಗಿ ಹೇಳಿದ್ದಾರೆ ಎಂದು ಹೆಡ್ ಕಾನ್ಸ್ಟೇಬಲ್ ಉಮೇಶ್ ಅವರು ಅಲ್ಲಿಂದ ಎಸ್ಕೇಪ್ ಆಗಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಪೋಷಕರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ – ಜ್ಯೂಸ್ ಎಂದು ಕ್ರಿಮಿನಾಶಕ ಸೇವಿಸಿದ ವಿದ್ಯಾರ್ಥಿನಿ ಸಾವು

    ಮತ್ತೊಂದಡೆ ನಾಗರಭಾವಿಯ ಖಾಸಗಿ ಹೊಟೇಲ್‌ನಲ್ಲಿ ಡೀಲ್ ಮಾಡುತ್ತಿದ್ದ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಲೋಕಾ ದಾಳಿ ನಡೆಸಿದೆ. ಹೆಡ್ ಕಾನ್ಸ್‌ಟೇಬಲ್ ಉಮೇಶ್, ಅನಂತ್ ಲೋಕಾ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಠಾಣೆಯ ಸಿಬ್ಬಂದಿಗಳನ್ನ ಹಾಗೂ ಸಿಕ್ಕಿಬಿದ್ದ ಸಿಬ್ಬಂದಿಗಳನ್ನು ಗುರುವಾರ ಸಂಜೆ 5 ಗಂಟೆಯಿಂದ ಬೆಳಗಿನ ಜಾವದವರೆಗೆ ವಿಚಾರಣೆ ನಡೆಸಿದ್ದು, ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

  • Bengaluru | ಸಾಫ್ಟ್‌ವೇರ್‌ ಹ್ಯಾಕ್‌ ಮಾಡಿ ಡೋರ್‌ಲಾಕ್‌ ಓಪನ್‌ – ಐಷಾರಾಮಿ ಕಾರುಗಳ್ಳರ ಬಂಧನ

    Bengaluru | ಸಾಫ್ಟ್‌ವೇರ್‌ ಹ್ಯಾಕ್‌ ಮಾಡಿ ಡೋರ್‌ಲಾಕ್‌ ಓಪನ್‌ – ಐಷಾರಾಮಿ ಕಾರುಗಳ್ಳರ ಬಂಧನ

    ಬೆಂಗಳೂರು: ಐಷಾರಾಮಿ ಕಾರುಗಳನ್ನು (Luxury Cars) ಕಳವು ಮಾಡುತ್ತಿದ್ದ ಮೂವರು ಖತರ್ನಾಕ್‌ಗಳನ್ನು ಬೆಂಗಳೂರಿನ (Bengaluru) ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

    ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದ ಕಳ್ಳರು ಐಷಾರಾಮಿ ಕಾರುಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದರು. ಸಾಫ್ಟ್‌ವೇರ್‌ ಮೂಲಕ ಹ್ಯಾಕ್‌ ಮಾಡಿ ಕಾರುಗಳ ಡೋರ್‌ ಓಪನ್‌ ಮಾಡುತ್ತಿದ್ದರು. ಇದರಿಂದ ಸುಲಭವಾಗಿ ಕಾರು ಕದ್ದು ಎಸ್ಕೇಪ್‌ ಆಗುತ್ತಿದ್ದರು. ಸದ್ಯ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: 10,000 ಹೆಕ್ಟೇರ್ ಬೆಳೆ ಹಾನಿ – ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ, ರೈತರ ಕಣ್ಣಲ್ಲಿ ನೀರು

    ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದಾಗ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಕಾರು ಕಳವು ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಇದನ್ನೂ ಓದಿ:  ಬೆಂಗಳೂರು ಹೊರವಲಯದ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ಜಾಗ ಅಂತಿಮ

  • ವ್ಯಾಪಕ ಆಕ್ರೋಶದ ಬಳಿಕ ಅನ್ನಪೂರ್ಣೇಶ್ವರಿ ನಗರ ಠಾಣೆ ರಸ್ತೆ ಮುಕ್ತ

    ವ್ಯಾಪಕ ಆಕ್ರೋಶದ ಬಳಿಕ ಅನ್ನಪೂರ್ಣೇಶ್ವರಿ ನಗರ ಠಾಣೆ ರಸ್ತೆ ಮುಕ್ತ

    ಬೆಂಗಳೂರು: ವ್ಯಾಪಕ ಆಕ್ರೋಶದ ಬಳಿಕ ಅನ್ನಪೂರ್ಣೇಶ್ವರಿ ನಗರ ಠಾಣೆ ರಸ್ತೆ (Annapoorneshwari nagar police station) ಸಾರ್ವಜನಿಕರಿಗೆ ಮುಕ್ತವಾಗಿದೆ.

    ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನದ ಬಳಿಕ ರಸ್ತೆಯನ್ನು ಬಂದ್ ಮಾಡಲಾಗಿತ್ತು. ನಿಷೇಧಾಜ್ಞೆ ಹೇರಿ ರಸ್ತೆ ಬಂದ್ ಮಾಡಿದ್ದ ಪೊಲೀಸರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಯಿತು. ಈ ಬೆನ್ನಲ್ಲೇ ಇದೀಗ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

    ಒಂದೆಡೆ ಸಾರ್ವಜನಿಕರ ದೂರುಗಳನ್ನು ಪೊಲೀಸರು ಸ್ವೀಕರಿಸುತ್ತಿರಲಿಲ್ಲ. ಇನ್ನೊಂದೆಡೆ 200 ಮೀಟರ್ ನಿಷೇಧಾಜ್ಞೆ ಹೇರಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು. ರಾತ್ರಿಯಂತೂ ವಾಹನ ಸವಾರರು ಪರದಾಡಿದ್ದರು. ಪೊಲೀಸ್ ಠಾಣೆಯ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿದ್ದರಿಂದ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿರುವ ಸಾರ್ವಜನಿಕರು ಪೊಲೀಸರ ವಿರುದ್ಧ ರೊಚ್ಚಿಗೆದ್ದಿದ್ದರು.

    ಪೊಲೀಸರ ಈ ನಡೆಗೆ ವಾಹನ ಸವಾರರ ಆಕ್ರೋಶ ಭುಗಿಲೆದ್ದಿದ್ದು, ಯಾರೋ ಒಬ್ಬರಿಗೊಸ್ಕರ ರೋಡ್ ಕ್ಲೋಸ್ ಮಾಡೋದು ಸರಿ ಅಲ್ಲ. ಇದು ಪೆÇಲೀಸ್ ಸ್ಟೇಷನಾ..? ಇಲ್ಲ ಮದುವೆ ಮನೆನಾ..?. ಪಕ್ಕದಲ್ಲಿ ಕಂದಾಯ ಭವನ ಇದೆ.. ಅಲ್ಲಿ ಮದುವೆ ಆಗುತ್ತೆ. ಠಾನೆಯಲ್ಲಿ ಪೆಂಡಾಲ್ ಹಾಕಿದ್ದಾರೆ. ಇಲ್ಲಿ ಬಹುಶಃ ಬಿಗರೂಟ ಅನ್ಸತ್ತೆ ಎಂದು ಸಾರ್ವಜನಿಕರು ಕಿಡಿಕಾರಿದ್ದರು. ಇದನ್ನೂಓದಿ: ದರ್ಶನ್ ಇರೋ ಪೊಲೀಸ್ ಠಾಣೆ ಬಳಿ 144 ಸೆಕ್ಷನ್- ವಾಹನ ಸವಾರರ ಪರದಾಟ