Tag: ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ

  • ಠಾಣೆಯಲ್ಲಿ ಪವಿತ್ರಾ ಗೌಡ ಕುಸಿದು ಬಿದ್ದಿದ್ದು ಲೋ ಬಿಪಿಯಿಂದ: ವೈದ್ಯೆ

    ಠಾಣೆಯಲ್ಲಿ ಪವಿತ್ರಾ ಗೌಡ ಕುಸಿದು ಬಿದ್ದಿದ್ದು ಲೋ ಬಿಪಿಯಿಂದ: ವೈದ್ಯೆ

    ಬೆಂಗಳೂರು: ಕಿಡ್ನಾಪ್‌ ಹಾಗೂ ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಪವಿತ್ರಾ ಗೌಡ (Pavithra Gowda) ಅವರು ಇಂದು ಲೋ ಬಿಪಿಯಿಂದಾಗಿ ಕುಸಿದು ಬಿದ್ದಿರುವುದಾಗಿ ವೈದ್ಯೆ ಸವಿತಾ ಹೇಳಿದ್ದಾರೆ.

    ಪವಿತ್ರಾ ಗೌಡ ಅವರಿಗೆ ಚಿಕಿತ್ಸೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ ರೆಗ್ಯುಲರ್ ಚೆಕಪ್ ಮಾಡಲಾಗುತ್ತದೆ. ನಾನೇ ಠಾಣೆಗೆ ಹೋಗಿ ಎಲ್ಲರನ್ನೂ ಚೆಕಪ್ ಮಾಡುತ್ತಿದ್ದೆ. ಇವರು ಬೆಳಗ್ಗೆಯಿಂದ ತಿಂಡಿ, ಊಟ ಸರಿಯಾಗಿ ಮಾಡುತ್ತಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಲಾಯ್ತು ಎಂದರು.

    ಠಾಣೆಗೆ ಹೋಗಿದ್ವಿ. ಈ ವೇಳೆ ಪವಿತ್ರಾ ಗೌಡ ಬಿಪಿ ಲೋ ಇತ್ತು. ಹೀಗಾಗಿ ಆಕೆಯನ್ನ ಇಲ್ಲಿಗೆ ಕರೆ ತಂದು ಚಿಕಿತ್ಸೆ ಕೊಟ್ಟಿದ್ದೇವೆ, ಡ್ರಿಪ್ಸ್‌ ಹಾಕಲಾಗಿತ್ತು. ಗ್ಲೂಕೋಸ್ ನೀಡಲಾಗಿದೆ. ಈಗ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ. ಉಳಿದ ಆರೋಪಿಗಳ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದು ಅವರು ತಿಳಿಸಿದರು.

    ಇನ್ನು ಚಿಕಿತ್ಸೆಯ ಬಳಿಕ ಪವಿತ್ರಾ ಗೌಡ ಅವರನ್ನು ಪೊಲೀಸರು ವಾಪಸ್ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆದುಕೊಂಡು‌ ಹೋಗಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಆರೋಪಿ ಪವಿತ್ರಾ ಗೌಡ ಅಸ್ವಸ್ಥ

  • ರಕ್ಷಣೆಗಾಗಿ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿಸಿಕೊಂಡಿದ್ದಾರೆ: ಡಿಕೆಶಿ

    ರಕ್ಷಣೆಗಾಗಿ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿಸಿಕೊಂಡಿದ್ದಾರೆ: ಡಿಕೆಶಿ

    ಬೆಂಗಳೂರು: ಸ್ಟಾರ್ ನಟ ಕಂ ಕೊಲೆ ಆರೋಪಿ ದರ್ಶನ್ ಇರುವ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿದ ವಿಚಾರ ಭಾರೀ ಚರ್ಚೆಯಾಗುತ್ತಿದ್ದಂತೆಯೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

    13 ಜನ ಆರೋಪಿಗಳು ಇದ್ದಾರೆ. ಬೆಳಗ್ಗೆಯಿಂದ ಟಿವಿಯವರು ಕ್ಯಾಮೆರಾ ಹಾಕೊಂಡು ಕುಳಿತಿರುತ್ತಾರೆ. ಪೊಲೀಸರಿಗೆ ಫ್ರೀಯಾಗಿ ಕೆಲಸ ಮಾಡಲು ಅವಕಾಶಬೇಕು. ಆ ದೃಷ್ಟಿಯಿಂದ ರಕ್ಷಣೆಗೆ ಶಾಮೀಯಾನ ಹಾಕಿಸಿಕೊಂಡಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

    ಇದೇ ವೇಳೆ ದರ್ಶನ್ (Darshan) ಕೇಸ್ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡದ ಆರೋಪದ ಬಗ್ಗೆ ಮಾತನಾಡಿ, ಯಾವ ಒತ್ತಡವೂ ಇಲ್ಲ, ಏನೂ ಇಲ್ಲ ನಾನು ವಿಚಾರಿಸಿದ್ದೇನೆ. ನಮ್ಮ ಹೋಮ್ ಮಿನಿಸ್ಟರ್ ಇನ್ವಾಲ್ ಆಗಿಲ್ಲ. ಯಾರೂ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡ್ತಿಲ್ಲ. ಈ ಪ್ರಕರಣದ ಬಗ್ಗೆ ನಾವು ರೆಸ್ಪಾನ್ಸ್ ಸಹ ಮಾಡ್ತಿಲ್ಲ ಎಮದು ಡಿಕೆಶಿ ತಿಳಿಸಿದ್ದಾರೆ. ಇದನ್ನೂ ಓದಿ: ದರ್ಶನ್ ಇರೋ ಠಾಣೆಗೆ ಶಾಮಿಯಾನ ಹಾಕಿದ್ದರ ಹಿಂದಿನ ಸೀಕ್ರೆಟ್ ರಿವೀಲ್

    ಚಾಲೆಂಜಿಂಗ್ ಸ್ಟಾರ್ ದರ್ಶನ್, ಗೆಳತಿ ಪವಿತ್ರಾ ಗೌಡ ಸೇರಿದಂತೆ ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದ 15 ಮಂದಿ ಆರೋಪಿಗಳು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ನಡುವೆ ನಿನ್ನೆ (ಗುರುವಾರ) ಪೊಲೀಸರು ಏಕಾಏಕಿ ಠಾಣೆಯ ಸೈಡ್‍ವಾಲ್‍ಗೆ ಶಾಮಿಯಾನ ಹಾಕಿದ್ದಾರೆ. ಜೊತೆಗೆ ಠಾಣೆ ಬಳಿ ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಇದರು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ದರ್ಶನ್ ಇರೋ ಠಾಣೆಗೆ ಶಾಮಿಯಾನ ಹಾಕಿದ್ದರ ಹಿಂದಿನ ಸೀಕ್ರೆಟ್ ರಿವೀಲ್

    ದರ್ಶನ್ ಇರೋ ಠಾಣೆಗೆ ಶಾಮಿಯಾನ ಹಾಕಿದ್ದರ ಹಿಂದಿನ ಸೀಕ್ರೆಟ್ ರಿವೀಲ್

    ಬೆಂಗಳೂರು: ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ (Annapoorneshwari Police Station) ಶಾಮಿಯಾನ ಹಾಕಿದ್ದರ ಹಿಂದಿನ ನಿಜವಾದ ಕಾರಣ ರಿವೀಲ್ ಆಗಿದೆ.

    ನಟ ದರ್ಶನ್ (Challenging Star Darshan), ಗೆಳತಿ ಪವಿತ್ರಾ ಗೌಡ (Pavithra Gowda) ಸಹಿತ ರೇಣುಕಾಸ್ವಾಮಿ (Renukaswamy Case) ಕಿಡ್ನಾಪ್ ಹಾಗೂ ಕೊಲೆ ಪ್ರಕರಣದ 15 ಮಂದಿ ಆರೋಪಿಗಳು ಅನ್ನಪೂರ್ಣೇಶ್ವರಿ ನಗರ ಪೊಲಿಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ನಡುವೆ ನಿನ್ನೆ (ಗುರುವಾರ) ಏಕಾಏಕಿ ಪೊಲೀಸ್ ಠಾಣೆಯ ಆವರಣದ ಗೋಡೆಗೆ ಶಾಮಿಯಾನ ಹಾಕಲಾಗಿತ್ತು. ಈ ವಿಚಾರ ಈಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಈ ಬೆನ್ನಲ್ಲೇ ಇದೀಗ ದರ್ಶನ್ & ಗ್ಯಾಂಗ್‍ಗೆ ವಿಐಪಿ ಟ್ರೀಟ್‍ಮೆಂಟ್ ಹಿಂದಿನ ಸೀಕ್ರೆಟ್ ಬಯಲಾಗಿದೆ. ಶಾಮಿಯಾನದ ಸೈಡ್ ವಾಲ್ ಹಾಕಿಸಿದ್ದು ನಟ ದರ್ಶನ್‍ಗಾಗಿಯೇ ಎಂಬುದು ಇದರ ಹಿಂದಿನ ಸತ್ಯವಾಗಿದೆ. ಪೊಲೀಸರ ಮುಂದೆ ದರ್ಶನ್ ಮನವಿ ಹಿನ್ನೆಲೆಯಲ್ಲಿ ಪೊಲೀಸರು ಈ ಕೆಲಸ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ದರ್ಶನ್ ಇರೋ ಪೊಲೀಸ್ ಠಾಣೆ ಬಳಿ 144 ಸೆಕ್ಷನ್- ವಾಹನ ಸವಾರರ ಪರದಾಟ

    ದರ್ಶನ್ ಹೇಳಿದ್ದೇನು..?: ಸಾರ್ ನನಗೆ ಒಂದೇ ಕಡೆ ಕುಳಿತು ಇರಲು ಆಗುತ್ತಿಲ್ಲ. ನಾನು ವಾಕ್ ಮಾಡಬೇಕು ನನ್ನ ಕೈಲಿ ಆಗ್ತಿಲ್ಲ. ನಾನು ಬಾಡಿ ರಿಲ್ಯಾಕ್ಸ್ ಮಾಡಬೇಕು. ಸಿಗರೇಟ್ ಇಲ್ಲವಾದ್ರೆ ನನಗೆ ಕೈ ನಡುಗುತ್ತೆ. ನೀವು ಪದೇ ಪದೇ ಪ್ರಶ್ನೆ ಮಾಡುತ್ತಲೇ ಇದ್ದೀರಿ. ನಾನು ಎಷ್ಟು ಸಲ ಹೇಳಲಿ ನನಗೆ ಏನು ಗೊತ್ತಿಲ್ಲ ಅಂತಾ. ಪದೇ ಪದೇ ಅದೇ ಪ್ರಶ್ನೆ ಕೇಳ್ತೀರಿ ಎಂದು ಪೊಲೀಸರ ಮುಂದೆ ದರ್ಶನ್ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ಠಾಣೆ ಒಳಗೆ ತಿರುಗಾಡಲು ಜಾಗ ಇಲ್ಲ ಅದಕ್ಕೆ ಸೈಡ್ ವಾಲ್ ಹಾಕಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ.