Tag: ಅನ್ನಪೂರ್ಣೇಶ್ವರಿ ನಗರ

  • Bengaluru | ಮನೆಯ ಎರಡನೇ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿನಿ ಸಾವು

    Bengaluru | ಮನೆಯ ಎರಡನೇ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿನಿ ಸಾವು

    ಬೆಂಗಳೂರು: ಮನೆಯ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿನಿ (PUC Student) ಸಾವನ್ನಪ್ಪಿದ ಘಟನೆ ಬೆಂಗಳೂರಿನ (Bengaluru) ಅನ್ನಪೂರ್ಣೇಶ್ವರಿ ನಗರದಲ್ಲಿ (Annapoorneshwari Nagar) ನಡೆದಿದೆ.

    ಪ್ರಿಯಾಂಕಾ (19) ಮೃತ ಯುವತಿ. ಖಾಸಗಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಪ್ರಿಯಾಂಕಾ ಮನೆಯ ಎರಡನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಹಾಸನ | ಕಂಠಪೂರ್ತಿ ಕುಡಿದು ಪತ್ನಿಗೆ ಚಾಕು ಇರಿದು ಕೊಂದ ಪತಿ

    ಬುಧವಾರ ಸಂಜೆ ಕಾಲೇಜು ಮುಗಿಸಿ ಮನೆಗೆ ಬಂದ ನಂತರ ಪ್ರಿಯಾಂಕಾ ತನ್ನ ಅಮ್ಮ ಟೇರೆಸ್ ಮೇಲೆ ಬಟ್ಟೆ ಒಣಹಾಕುತ್ತಿದ್ದ ವಿಚಾರ ತಿಳಿದು ಟೇರೆಸ್‌ಗೆ ಹೊಗಿದ್ದಾಳೆ. ಎರಡನೇ ಮಹಡಿಗೆ ಹೋಗುತ್ತಿದ್ದಂತೆ ಮೆಟ್ಟಿಲ ಬಳಿ ಕಾಲು ಜಾರಿ ಕೆಳಗೆ ಬಿದ್ದಿದ್ದಾಳೆ. ಮೇಲಿಂದ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಪ್ರಿಯಾಂಕಾ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಐವರು ಐಸಿಸ್ ಉಗ್ರರು ಅರೆಸ್ಟ್‌ – ಭಾರೀ ಪ್ರಮಾಣದ ಕೆಮಿಕಲ್‌ ವೆಪೆನ್‌ ಪತ್ತೆ

    ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಇದನ್ನೂ ಓದಿ: Hyderabad | ಕಟ್ಟಿಹಾಕಿ, ಪ್ರೆಷರ್ ಕುಕ್ಕರ್‌ನಿಂದ ಹೊಡೆದು ಮಹಿಳೆಯ ಭೀಕರ ಕೊಲೆ

  • ಬೆಂಗಳೂರು| ಲೋನ್ ರಿಕವರಿಗೆ ಹೋದ ಬ್ಯಾಂಕ್ ಸಿಬ್ಬಂದಿಗೆ ಕಲ್ಲೇಟು

    ಬೆಂಗಳೂರು| ಲೋನ್ ರಿಕವರಿಗೆ ಹೋದ ಬ್ಯಾಂಕ್ ಸಿಬ್ಬಂದಿಗೆ ಕಲ್ಲೇಟು

    ಬೆಂಗಳೂರು: ಲೋನ್ ರಿಕವರಿಗೆ (Loan Recovery) ಹೋದ ಬ್ಯಾಂಕ್ ಸಿಬ್ಬಂದಿಗೆ (Bank Staff) ಕಲ್ಲಿನಿಂದ ತಲೆಗೆ ಹೊಡೆದಿರುವ ಘಟನೆ ಬೆಂಗಳೂರಿನ (Bengaluru) ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.

    ಚಂದನ್ ಕಲ್ಲೇಟು ತಿಂದ ಬ್ಯಾಂಕ್ ಸಿಬ್ಬಂದಿ. ರಮೇಶ್ ಎಂಬಾತ ಕಳೆದ ಎರಡು ತಿಂಗಳಿನಿಂದ ಇಎಂಐ ಕಟ್ಟಿರಲಿಲ್ಲ. ಫೋನ್ ಮಾಡಿದರೆ ರಿಸೀವ್ ಮಾಡುತ್ತಿರಲಿಲ್ಲ. ಕೊನೆಗೆ ಫೋನ್ ರಿಸಿವ್ ಮಾಡಿದ ರಮೇಶ್ ನಾಗರಭಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಬರುವಂತೆ ಸಿಬ್ಬಂದಿಗೆ ಹೇಳಿದ್ದ. ಬ್ಯಾಂಕ್ ಸಿಬ್ಬಂದಿ ಸ್ಥಳಕ್ಕೆ ಹೋದ ವೇಳೆ ಲೋನ್ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ರಮೇಶ್ ಏಕಾಏಕಿ ಅಲ್ಲೇ ಇದ್ದ ಕಲ್ಲಿನಿಂದ ಬ್ಯಾಂಕ್ ಸಿಬ್ಬಂದಿ ಚಂದನ್ ಮೇಲೆ ಕಲ್ಲೂ ತೂರಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಮಹಿಳೆ ರೋಲರ್‌ ಕೋಸ್ಟರ್‌ ಆಡುವಾಗ ಕೆಳಗೆ ಬಿದ್ದು ಸಾವು

    ಘಟನೆಯಿಂದ ಬ್ಯಾಂಕ್ ಸಿಬ್ಬಂದಿ ಚಂದನ್ ತಲೆಗೆ ಗಂಭೀರವಾದ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ (Annapoorneshwari Nagar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಟೀಲ್‌ಗೆ ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ: ಮಧೂರು ದೇವಸ್ಥಾನದಲ್ಲಿ ಡಿಕೆಶಿ ಪ್ರಾರ್ಥನೆ

  • ಗುರಾಯಿಸಿದ ಅಂತಾ ಬಾರ್ ಮುಂದೆ ನಿಂತಿದ್ದ ಯುವಕನ ಮೇಲೆ ಅಟ್ಯಾಕ್

    ಗುರಾಯಿಸಿದ ಅಂತಾ ಬಾರ್ ಮುಂದೆ ನಿಂತಿದ್ದ ಯುವಕನ ಮೇಲೆ ಅಟ್ಯಾಕ್

    ಬೆಂಗಳೂರು: ಈ ಏರಿಯಾದಲ್ಲಿ ನೈಟ್ ಆದ್ಮೇಲೆ ಓಡಾಡೋಕು ಕಷ್ಟ. ಓಡಾಡಿದ್ರು ಅಪ್ಪಿತಪ್ಪಿ ಬಾರು ಬಳಿ ಹೋದ್ರೆ ಪ್ರಾಣಕ್ಕೆ ಆಪತ್ತು ಬರುತ್ತೆ. ಕೈ ಮುಗಿದು ಬೇಡಿದ್ರು ಬಿಡಲ್ಲ, ಕಾಲಿಗೆ ಬಿದ್ರು ಬಿಡಲ್ಲ ಇಲ್ಲಿನ ಪುಂಡರು. ಬಾರ್ ಮುಂದೆ ತನ್ನಪಾಡಿಗೆ ತಾನು ನಿಂತಿದ್ರು ಯುವಕನ ಮೇಲೆ ಇಲ್ಲಿರುವ ಗ್ಯಾಂಗ್ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಬಾರ್ಡರ್ ಏರಿಯಾದಲ್ಲಿ ಗುಂಡಾ ದರ್ಬಾರ್ ಹೆಚ್ಚಾಗಿದೆ.

    ಮುದ್ದಯ್ಯನಪಾಳ್ಯದ ಎಸ್‍ಆರ್‌ಎಸ್ ಬಾರ್‌ನಲ್ಲಿ ಶುಕ್ರವಾರ ರಾತ್ರಿ ಯುವಕ ಸದಾನಂದನ ಮೇಲೆ ಬಾರ್‌ಗೆ ನುಗ್ಗಿದ ಗ್ಯಾಂಗ್ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ. ಮಂಜೇಶ್ ಅಂಡ್ ಟೀಂ ನಿಂದ ಸದಾನಂದನಿಗೆ ಹಲ್ಲೆ ನಡೆಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಒಬ್ಬನ ಮೇಲೆ ಪ್ರಹಾರ ನಡೆಸಿರೊ ಮಂಜೇಶ್ ತಂಡಕ್ಕೆ ಕೈ ಮುಗಿದು ಬೇಡಿದ್ರು ಬಿಡದೆ ಹಲ್ಲೆ ನಡೆಸಿದೆ. ಇದನ್ನೂ ಓದಿ: ಸ್ಮಶಾನದಲ್ಲಿ ಗುಂಡು, ತುಂಡು ಪಾರ್ಟಿ – ಸ್ನೇಹಿತರಿಂದಲೇ ಕೊಲೆಯಾದ ಯುವಕ

    ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮುದ್ದಯ್ಯನ ಪಾಳ್ಯದಲ್ಲಿ ಘಟನೆ ನಡೆದಿದ್ದು, ಗಲಾಟೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • ಸಿನಿಮಾ ಸ್ಟೈಲ್‍ನಲ್ಲಿ ಪತ್ನಿ ಕೊಲೆಗೆ ಸ್ಕೆಚ್- ವಿಫಲವಾದ ನಂತ್ರ ಚಾಕುವಿಂದ ಇರಿದು ಕೊಂದ!

    ಸಿನಿಮಾ ಸ್ಟೈಲ್‍ನಲ್ಲಿ ಪತ್ನಿ ಕೊಲೆಗೆ ಸ್ಕೆಚ್- ವಿಫಲವಾದ ನಂತ್ರ ಚಾಕುವಿಂದ ಇರಿದು ಕೊಂದ!

    – ಕನ್ನಡದ 2 ಸೂಪರ್ ಹಿಟ್ ಸಿನಿಮಾಗಳೇ ಪ್ರೇರಣೆ

    ಬೆಂಗಳೂರು: ಪತಿ ತನ್ನ ಪತ್ನಿಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದ ಘಟನೆ ಸೆ.22ರ ಸಂಜೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.

    ರೂಪಾ ಮೃತಳಾಗಿದ್ದಾಳೆ. ಈಕೆ ಪತಿ ಕಾಂತರಾಜ್ ಆರೋಪಿಯಾಗಿದ್ದಾನೆ. ಫೈನಾಶ್ಸಿಯರ್ ಆಗಿರುವ ಕಾಂತ್‍ರಾಜ್ ಪತ್ನಿಯೊಂದಿಗೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ವಾಸವಾಗಿದ್ದರು. ಆದರೆ ಕಾಂತರಾಜ್‍ಗೆ ಹೆಂಡತಿ ರೂಪಾ ಮೇಲೆ ಅನುಮಾನವಿತ್ತು. ಪತ್ನಿ ಅಪರಿಚಿತ ವ್ಯಕ್ತಿಯೊಬ್ಬನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನವಿತ್ತು. ಇದರಿಂದ ತೀವ್ರ ಖಿನ್ನೆತೆಗೆ ಒಳಗಾಗಿದ್ದ ಪತಿ ಕಾಂತರಾಜ್, ಪತ್ನಿಯನ್ನು ಹತ್ಯೆಗೈದಿದ್ದಾನೆ. ಇದನ್ನೂ ಓದಿ: 90 ವರ್ಷದ ಅಜ್ಜಿಯ ಕಾರು ಡ್ರೈವಿಂಗ್ ಶ್ಲಾಘಿಸಿದ ಮಧ್ಯಪ್ರದೇಶದ ಸಿಎಂ

    ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಕೊಲೆಗೆ ಸಂಬಂಧಿಸಿದ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಪಕ್ಕಾ ಸಿನಿಮಾ ಸ್ಟೈಲ್‍ನಲ್ಲಿ ಕೊಲೆಗೆ ಸ್ಕೆಚ್ ನಡೆದಿತ್ತು. ಹೆಂಡತಿಯ ಕೊಲೆಗೆ ಮನೆಯಲ್ಲೇ ಸ್ಕೆಚ್ ರೆಡಿಯಾಗಿತ್ತು ಅಂತ ವಿಚಾರಣೆ ನಡೆಸಿದ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

    ಹೆಂಡತಿ ರೂಪಾಳನ್ನು ಕೊಲೆ ಮಾಡಬೇಕು ಅಂತಾ ನಿರ್ಧರಿಸಿದ್ದ ಕಾಂತರಾಜ್, ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ನೋಡಿ ಅದೇ ಶೈಲಿಯಲ್ಲಿ ಕೊಲೆಗೆ ಸ್ಕೇಚ್ ಹಾಕಿದ್ದನು. ಟ್ರಿಪ್ ಹೋಗೋಣ ಅಂತಾ ಪತ್ನಿಯೊಂದಿಗೆ ಕರಾವಳಿ ಭಾಗಕ್ಕೆ ಹೋಗಿದ್ದ. ಪ್ರಕೃತಿ ಸೌಂದರ್ಯ ತೋರಿಸುವ ನೆಪದಲ್ಲಿ ಎತ್ತರಕ್ಕೆ ಕರೆದುಕೊಂಡು ಹೋಗಿದ್ದ. ನಂತರ ಕೆಳಗೆ ತಳ್ಳಿ ಕೊಲೆ ಮಾಡಲು ಸ್ಕೇಚ್ ಹಾಕಿದ್ದ. ಆದರೆ ಇದು ಸಾಧ್ಯವಾಗಿಲ್ಲ. ಬಳಿಕ ಕಾಂತರಾಜ್, ‘ಯುಗಪುರುಷ’ ಸಿನಿಮಾದಲ್ಲಿ ಕಾರಿನಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡುವ ದೃಶ್ಯ ನೋಡಿದ್ದ. ಅದೇ ರೀತಿ ತನ್ನ ಹೆಂಡತಿಯನ್ನು ಕಾರಿನಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಲು ಪ್ಲಾನ್ ಮಾಡಿದ್ದ. ಆದರೆ ಆ ಪ್ಲಾನ್ ಕೂಡ ಸಕ್ಸಸ್ ಆಗಿಲ್ಲ. ಈ ಎರಡು ಪ್ಲಾನ್‍ಗಳಲ್ಲೂ ಪತ್ನಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಳು.

    ಕೊನೆಗೆ ಕೋಪದಲ್ಲಿ ಕಾಂತರಾಜ್ ಮನೆಗೆ ಬಂದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆ ನಂತರ ಮನೆಯ ಬಾಗಿಲು ಹಾಕಿಕೊಂಡು ಗಂಡ ಎಸ್ಕೇಪ್ ಆಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಎಪಿ ನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿಚಾರಣೆ ವೇಳೆ ಸಿನಿಮಾ ರೀತಿ ಪತ್ನಿಯ ಕೊಲೆಗೆ ಸ್ಕೇಚ್ ಹಾಕಿದ್ದು ತಿಳಿದು ಬಂದಿದೆ.

  • ತಲೆಯನ್ನ ಗೋಡೆಗೆ ಹೊಡೆದು ಭೀಕರವಾಗಿ ರೌಡಿಶೀಟರ್ ಹತ್ಯೆ

    ತಲೆಯನ್ನ ಗೋಡೆಗೆ ಹೊಡೆದು ಭೀಕರವಾಗಿ ರೌಡಿಶೀಟರ್ ಹತ್ಯೆ

    ಬೆಂಗಳೂರು: ತಲೆಯನ್ನ ಗೋಡೆಗೆ ಹೊಡೆದು ಭೀಕರವಾಗಿ ರೌಡಿ ಶೀಟರ್‍ನನ್ನು ಹತ್ಯೆಗೈದ ಘಟನೆ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.

    ಚಂದ್ರಲೇಔಟ್ ಪೊಲೀಸ್ ಠಾಣೆಯ ಮಣಿ ಆಲಿಯಾಸ್ ಸುಬ್ರಮಣಿ ಕೊಲೆಯಾದ ರೌಡಿ ಶೀಟರ್. ಇಂದು ಬೆಳಗ್ಗಿನ ಜಾವ ಆತನ ಮನೆಯಲ್ಲೇ ಕೊಲೆ ನಡೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

    ಸುಬ್ರಮಣಿ ದರೋಡೆ, ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಆತನ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆ ಅನೇಕ ಪ್ರಕರಣಗಳು ದಾಖಲಾಗಿದ್ದವು. ಆದರೆ ಇಂದು ಬೆಳಗ್ಗೆ ಆತನ ಮನೆ ನುಗ್ಗಿದ್ದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ತಲೆಯನ್ನು ಗೋಡೆಗೆ ಹೊಡೆದು ಮುಖ ಗುರುತು ಸಿಗದಂತೆ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ.

    ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೌಡಿಶೀಟರ್ ಸುಬ್ರಮಣಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.

  • ಉತ್ತರ ಭಾರತ ಮೂಲದ ಯುವತಿಯರಿಂದ ಫ್ಲವರ್ ಡೆಕೋರೇಟರ್‌ಗೆ ಥಳಿತ

    ಉತ್ತರ ಭಾರತ ಮೂಲದ ಯುವತಿಯರಿಂದ ಫ್ಲವರ್ ಡೆಕೋರೇಟರ್‌ಗೆ ಥಳಿತ

    ಬೆಂಗಳೂರು: ಉತ್ತರ ಭಾರತ ಮೂಲದ ಯುವತಿಯರು ನಾಗರಬಾವಿ ರಿಂಗ್ ರಸ್ತೆಯಲ್ಲಿರುವ ನಮ್ಮೂರ ತಿಂಡಿ ಹೋಟೆಲ್ ಬಳಿ ರಂಪಾಟ ನಡೆಸಿದ್ದಾರೆ. ಹೋಟೆಲ್ ಬಳಿ ಇದ್ದ ಫ್ಲವರ್ ಡೆಕೋರೇಟರ್ ಅಂಗಡಿ ಮಾಲೀಕನನ್ನು ಹಿಡಿದು ಥಳಿಸಿದ್ದಾರೆ.

    ಫ್ಲವರ್ ಡೆಕೋರೇಟರ್ ಅಂಗಡಿಗೆ ನಾಲ್ವರು ಯುವತಿಯರು ಮತ್ತು ಒಬ್ಬ ಯುವಕ ವ್ಯಾಪರಕ್ಕಾಗಿ ಆಗಮಿಸಿ ಅಂಗಡಿ ಮಾಲೀಕನ ಜೊತೆ ಗಲಾಟೆಗೆ ಇಳಿದಿದ್ದಾರೆ. ಮೂವರು ಹುಡುಗಿಯರು ಫ್ಲವರ್ ಡೆಕೋರೇಟರ್ ನನ್ನ ಹಿಡಿದು ಥಳಿಸಿದ್ದಾರೆ.

    ಇದನ್ನು ಗಮನಿಸಿದ ಸ್ಥಳೀಯರು ಅಂಗಡಿ ಬಳಿ ಜಮಾಯಿಸಿದ್ದಾರೆ. ವಿಡಿಯೋ ಮಾಡಲು ಮುಂದಾದ ಜನರ ಮೇಲೂ ಹುಡುಗಿಯರು ರಂಪಾಟ ಮಾಡಿದ್ದಾರೆ. ಜನ ಸೇರುತ್ತಿದ್ದಂತೆ ಒಬ್ಬಾಕೆ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಸ್ಥಳೀಯರಿಂದ ಯುವತಿಯರ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

    ಯುವತಿಯರ ರಂಪಾಟದಿಂದ ರೊಚ್ಚಿಗೆದ್ದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಮೂವರು ಯುವತಿಯರು ಮತ್ತು ಒಬ್ಬ ಯುವಕನನ್ನು ಬಂಧಿಸಿದ್ದಾರೆ. ಅಂಗಡಿ ಮಾಲೀಕನಿಂದ ಮತ್ತು ಪ್ರತ್ಯಕ್ಷದರ್ಶಿಗಳಿಂದ ಹೇಳಿಕೆ ಪಡೆದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    https://www.youtube.com/watch?v=romlKVTH408