Tag: ಅನ್ನಪೂರ್ಣಿ

  • ‘ಅನ್ನಪೂರ್ಣಿ’ ಡಿಲೀಟ್ ಮಾಡಿದ್ದಕ್ಕೆ ನಿರ್ದೇಶಕ ವೆಟ್ರಿಮಾರನ್ ಬೇಸರ

    ‘ಅನ್ನಪೂರ್ಣಿ’ ಡಿಲೀಟ್ ಮಾಡಿದ್ದಕ್ಕೆ ನಿರ್ದೇಶಕ ವೆಟ್ರಿಮಾರನ್ ಬೇಸರ

    ಕ್ಷಿಣದ ಹೆಸರಾಂತ ನಿರ್ದೇಶಕ ವೆಟ್ರಿಮಾರನ್ (Vetrimaran) ಅನ್ನಪೂರ್ಣಿ ಸಿನಿಮಾದ ಪರವಾಗಿ ಮಾತನಾಡಿದ್ದಾರೆ. ನಯನತಾರಾ (Nayantara) ನಟನೆಯ ಅನ್ನಪೂರ್ಣಿ ಸಿನಿಮಾದ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಓಟಿಟಿಯಿಂದ ತೆಗೆದು ಹಾಕಲಾಗಿತ್ತು. ಈ ಕ್ರಮವನ್ನು ಅವರು ವಿರೋಧಿಸಿದ್ದಾರೆ. ಸೆನ್ಸಾರ್ ಆದ ಮೇಲೂ ಈ ರೀತಿ ಒತ್ತಡ ಹಾಕುವುದು ಸರಿಯಾದದ್ದು ಅಲ್ಲವೆಂದು ಅವರು ಹೇಳಿದ್ದಾರೆ.

    ಅನ್ನಪೂರ್ಣಿ ಸಿನಿಮಾದಲ್ಲಿ ಶ್ರೀರಾಮನಿಗೆ ಹಾಗೂ ಹಿಂದೂ ಧರ್ಮಕ್ಕೆ ಧಕ್ಕೆ ಆಗುವಂತಹ ಸನ್ನಿವೇಶಗಳ ಇವೆ ಎನ್ನುವ ಕಾರಣಕ್ಕಾಗಿ ಹಲವಾರು ಜನರು ಆಕ್ರೋಶ ವ್ಯಕ್ತ ಪಡಿಸಿದ್ದರು. ಒಟಿಟಿಯಿಂದ ಚಿತ್ರವನ್ನು ಡಿಲಿಟ್ ಮಾಡಲಾಗಿತ್ತು. ನಂತರ ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ನಟಿ ನಯನತಾರಾ ಅವರ ಮೇಲೂ ಪ್ರಕರಣ ದಾಖಲಾಗಿತ್ತು. ಮಧ್ಯ ಪ್ರದೇಶದ ಜಬಲ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ವಿವಾದ (Controversy) ಭುಗಿಲೇಳುತ್ತಿದ್ದಂತೆಯೇಅನ್ನಪೂರ್ಣಿ‘ (Annapoorani)  ಸಿನಿಮಾವನ್ನು ಕೊನೆಗೂ ನೆಟ್ ಫಿಕ್ಸ್ ತೆಗೆದು ಹಾಕಿದೆ. ಸಿನಿಮಾ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಅಲ್ಲದೇ, ಸಿನಿಮಾ ಬಗ್ಗೆ ದೂರು ಕೂಡ ದಾಖಲಾಗಿತ್ತು. ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ಚಿತ್ರದ ವಿರುದ್ಧ ಪ್ರತಿಭಟನೆ ಕೂಡ ಮಾಡಲಾಗಿತ್ತು.

    ನಾನಾ ಕಡೆಗಳಲ್ಲಿ ಅನ್ನಪೂರ್ಣಿ ಸಿನಿಮಾ ಬಗ್ಗೆ ದೂರುಗಳು ದಾಖಲಾಗುತ್ತಿದ್ದಂತೆಯೇ ಒಟಿಟಿಯಿಂದಲೇ ಚಿತ್ರವನ್ನು ತೆಗೆದು ಹಾಕಲಾಗಿದೆ. ಚಿತ್ರದಲ್ಲಿ ಶ್ರೀರಾಮನನ್ನು ಮಾಂಸಾಹಾರಿಯಾಗಿ ತೋರಿಸಲಾಗಿತ್ತು. ಇಂತಹ ವಿವಾದಿತ ದೃಶ್ಯಗಳನ್ನು ತೆಗೆದು ಹಾಕುವವರೆಗೂ ಅನ್ನಪೂರ್ಣಿ ಒಟಿಟಿಯಲ್ಲಿ ಸಿಗಲಾರದು.

     

    ಲೇಡಿ ಸೂಪರ್ ಸ್ಟಾರ್ ನಯನತಾರಾಗೆ ಇದು 75ನೇ ಸಿನಿಮಾ. ಸಿನಿಮಾದಲ್ಲಿ ನಯನತಾರಾ ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಅವರ ಗೆಟಪ್ ಕಂಡು ಅಭಿಮಾನಿಗಳು ಸಂಭ್ರಮಿಸಿದ್ದರು. ಪಕ್ಕಾ ಸಂಪ್ರದಾಯಸ್ಥ ಕುಟುಂಬದ ಹುಡುಗಿಯಾಗಿ ನಯನತಾರಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

  • ಅನ್ನಪೂರ್ಣಿ ಸಿನಿಮಾ: ನಯನತಾರಾ ವಿರುದ್ಧ ಪ್ರಕರಣ ದಾಖಲು

    ಅನ್ನಪೂರ್ಣಿ ಸಿನಿಮಾ: ನಯನತಾರಾ ವಿರುದ್ಧ ಪ್ರಕರಣ ದಾಖಲು

    ಯನತಾರಾ (Nayanthara) ನಟನೆಯ ಅನ್ನಪೂರ್ಣಿ ಸಿನಿಮಾದಲ್ಲಿ ಶ್ರೀರಾಮನಿಗೆ ಹಾಗೂ ಹಿಂದೂ ಧರ್ಮಕ್ಕೆ ಧಕ್ಕೆ ಆಗುವಂತಹ ಸನ್ನಿವೇಶಗಳ ಇವೆ ಎನ್ನುವ ಕಾರಣಕ್ಕಾಗಿ ಹಲವಾರು ಜನರು ಆಕ್ರೋಶ ವ್ಯಕ್ತ ಪಡಿಸಿದ್ದರು. ಇದೀಗ ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ನಟಿ ನಯನತಾರಾ ಅವರ ಮೇಲೂ ಪ್ರಕರಣ ದಾಖಲಾಗಿದೆ. ಮಧ್ಯ ಪ್ರದೇಶದ ಜಬಲ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ವಿವಾದ (Controversy) ಭುಗಿಲೇಳುತ್ತಿದ್ದಂತೆಯೇ ‘ಅನ್ನಪೂರ್ಣಿ’ (Annapurni)  ಸಿನಿಮಾವನ್ನು ಕೊನೆಗೂ ನೆಟ್ ಫಿಕ್ಸ್ ತೆಗೆದು ಹಾಕಿದೆ. ಈ ಸಿನಿಮಾ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಅಲ್ಲದೇ, ಸಿನಿಮಾ ಬಗ್ಗೆ ದೂರು ಕೂಡ ದಾಖಲಾಗಿತ್ತು. ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ಚಿತ್ರದ ವಿರುದ್ಧ ಪ್ರತಿಭಟನೆ ಕೂಡ ಮಾಡಲಾಗಿತ್ತು.

    ನಾನಾ ಕಡೆಗಳಲ್ಲಿ ಅನ್ನಪೂರ್ಣಿ ಸಿನಿಮಾ ಬಗ್ಗೆ ದೂರುಗಳು ದಾಖಲಾಗುತ್ತಿದ್ದಂತೆಯೇ ಒಟಿಟಿಯಿಂದಲೇ ಚಿತ್ರವನ್ನು ತೆಗೆದು ಹಾಕಲಾಗಿದೆ. ಈ ಚಿತ್ರದಲ್ಲಿ ಶ್ರೀರಾಮನನ್ನು ಮಾಂಸಾಹಾರಿಯಾಗಿ ತೋರಿಸಲಾಗಿತ್ತು. ಇಂತಹ ವಿವಾದಿತ ದೃಶ್ಯಗಳನ್ನು ತೆಗೆದು ಹಾಕುವವರೆಗೂ ಅನ್ನಪೂರ್ಣಿ ಒಟಿಟಿಯಲ್ಲಿ ಸಿಗಲಾರದು.

    ಲೇಡಿ ಸೂಪರ್ ಸ್ಟಾರ್ ನಯನತಾರಾಗೆ ಇದು 75ನೇ ಸಿನಿಮಾ. ಈ ಸಿನಿಮಾದಲ್ಲಿ ನಯನತಾರಾ ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಅವರ ಗೆಟಪ್ ಕಂಡು ಅಭಿಮಾನಿಗಳು ಸಂಭ್ರಮಿಸಿದ್ದರು. ಪಕ್ಕಾ ಸಂಪ್ರದಾಯಸ್ಥ ಕುಟುಂಬದ ಹುಡುಗಿಯಾಗಿ ನಯನತಾರಾ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

     

    ಡಿಸೆಂಬರ್‌ನಲ್ಲಿ ‘ಅನ್ನಪೂರ್ಣಿ’ ಎಂಬ ಸಿನಿಮಾ ರಿಲೀಸ್ ಆಗಿತ್ತು. ಒಟಿಟಿಯಲ್ಲಿ ರಿಲೀಸ್ ಆಗಿ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ಚಿತ್ರದಲ್ಲಿ ನಯನತಾರಾ ತಂದೆ ಪಾತ್ರದಲ್ಲಿ ಕನ್ನಡದ ನಟ ಅಚ್ಯುತ್ ಕುಮಾರ್ ನಟಿಸಿದ್ದರು. ಅವರ ಮನೋಜ್ಞ ನಟನೆಗೆ ನಯನತಾರಾ ಮೆಚ್ಚುಗೆ ಸೂಚಿಸಿದ್ದರು.

  • ಒಟಿಟಿಯಿಂದ ನಯನತಾರಾ ನಟನೆಯ ಸಿನಿಮಾ ಡಿಲಿಟ್

    ಒಟಿಟಿಯಿಂದ ನಯನತಾರಾ ನಟನೆಯ ಸಿನಿಮಾ ಡಿಲಿಟ್

    ಕ್ಷಿಣದ ಖ್ಯಾತ ನಟಿ ನಯನತಾರಾ (Nayantara) ನಟನೆಯ ‘ಅನ್ನಪೂರ್ಣಿ’ (Annapurni)  ಸಿನಿಮಾವನ್ನು ಕೊನೆಗೂ ನೆಟ್ ಫಿಕ್ಸ್ ತೆಗೆದು ಹಾಕಿದೆ. ಈ ಸಿನಿಮಾ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಅಲ್ಲದೇ, ಸಿನಿಮಾ ಬಗ್ಗೆ ದೂರು ಕೂಡ ದಾಖಲಾಗಿತ್ತು. ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ಚಿತ್ರದ ವಿರುದ್ಧ ಪ್ರತಿಭಟನೆ ಕೂಡ ಮಾಡಲಾಗಿತ್ತು.

    ನಾನಾ ಕಡೆಗಳಲ್ಲಿ ಅನ್ನಪೂರ್ಣಿ ಸಿನಿಮಾ ಬಗ್ಗೆ ದೂರುಗಳು ದಾಖಲಾಗುತ್ತಿದ್ದಂತೆಯೇ ಒಟಿಟಿಯಿಂದಲೇ ಚಿತ್ರವನ್ನು ತೆಗೆದು ಹಾಕಲಾಗಿದೆ. ಈ ಚಿತ್ರದಲ್ಲಿ ಶ್ರೀರಾಮನನ್ನು ಮಾಂಸಾಹಾರಿಯಾಗಿ ತೋರಿಸಲಾಗಿತ್ತು. ಇಂತಹ ವಿವಾದಿತ ದೃಶ್ಯಗಳನ್ನು ತೆಗೆದು ಹಾಕುವವರೆಗೂ ಅನ್ನಪೂರ್ಣಿ ಒಟಿಟಿಯಲ್ಲಿ ಸಿಗಲಾರದು.

    ಲೇಡಿ ಸೂಪರ್ ಸ್ಟಾರ್ ನಯನತಾರಾಗೆ ಇದು 75ನೇ ಸಿನಿಮಾ. ಈ ಸಿನಿಮಾದಲ್ಲಿ ನಯನತಾರಾ ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಅವರ ಗೆಟಪ್ ಕಂಡು ಅಭಿಮಾನಿಗಳು ಸಂಭ್ರಮಿಸಿದ್ದರು. ಪಕ್ಕಾ ಸಂಪ್ರದಾಯಸ್ಥ ಕುಟುಂಬದ ಹುಡುಗಿಯಾಗಿ ನಯನತಾರಾ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

     

    ಡಿಸೆಂಬರ್‌ನಲ್ಲಿ ‘ಅನ್ನಪೂರ್ಣಿ’ ಎಂಬ ಸಿನಿಮಾ ರಿಲೀಸ್ ಆಗಿತ್ತು. ಒಟಿಟಿಯಲ್ಲಿ ರಿಲೀಸ್ ಆಗಿ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ಚಿತ್ರದಲ್ಲಿ ನಯನತಾರಾ ತಂದೆ ಪಾತ್ರದಲ್ಲಿ ಕನ್ನಡದ ನಟ ಅಚ್ಯುತ್ ಕುಮಾರ್ ನಟಿಸಿದ್ದರು. ಅವರ ಮನೋಜ್ಞ ನಟನೆಗೆ ನಯನತಾರಾ ಮೆಚ್ಚುಗೆ ಸೂಚಿಸಿದ್ದರು.

  • ‘ಅನ್ನಪೂರ್ಣಿ’ಗೆ ಸಖತ್ ರೆಸ್ಪಾನ್ಸ್ : ನಯನತಾರಾ ನಟನೆಯ 75ನೇ ಚಿತ್ರ

    ‘ಅನ್ನಪೂರ್ಣಿ’ಗೆ ಸಖತ್ ರೆಸ್ಪಾನ್ಸ್ : ನಯನತಾರಾ ನಟನೆಯ 75ನೇ ಚಿತ್ರ

    ಲೇಡಿ ಸೂಪರ್ ಸ್ಟಾರ್ ನಯನತಾರಾ ನಟನೆಯ 75ನೇ ಸಿನಿಮಾದ ಟೀಸರ್ (Teaser) ರಿಲೀಸ್ ಆಗಿದೆ. ಅನ್ನಪೂರ್ಣಿ (Annapurni) ಹೆಸರಿನಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ನಯನತಾರಾ ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಅವರ ಗೆಟಪ್ ಕಂಡು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಪಕ್ಕಾ ಸಂಪ್ರದಾಯಸ್ಥ ಕುಟುಂಬದ ಹುಡುಗಿಯಾಗಿ ನಯನತಾರಾ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

    ಸಿನಿಮಾದಿಂದ ಸಿನಿಮಾಗೆ ನಯನತಾರಾ ಸಾಕಷ್ಟು ಬ್ಯೂಸಿಯಾಗುತ್ತಿದ್ದಾರೆ. ಪ್ರತಿ ಸಿನಿಮಾದಲ್ಲೂ ಸಕ್ಸಸ್ ಕಾಣುತ್ತಿದ್ದಾರೆ. ಹಾಗಾಗಿಯೇ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಸಲೀಸಾಗಿ ಎಲ್ಲ ಪಾತ್ರಗಳನ್ನೂ ಒಪ್ಪಿಕೊಳ್ಳದ ಈ ನಟಿ, ಆಯ್ಕೆಯ ಪಾತ್ರಗಳಿಗಷ್ಟೇ ಬಣ್ಣ ಹಚ್ಚುತ್ತಾರೆ.

    ಖ್ಯಾತ ನಟ ಕಮಲ್ ಹಾಸನ್ ಅವರ ಹೊಸಕ್ಕೂ ನಯನತಾರಾ (Nayanthara) ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಇದೇ ಸಿನಿಮಾಗೆ ತ್ರಿಷಾ ನಾಯಕಿ ಎಂದು ಹೇಳಲಾಗಿತ್ತು. ತ್ರಿಷಾ ಬದಲಾಗಿ ಇದೀಗ ನಯನತಾರಾ ಹೆಸರು ಕೇಳಿ ಬಂದಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಈ ಜೋಡಿಯನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಈಗಲೇ ಕಾತರದಿಂದ ಕಾಯುವಂತಾಗಿದೆ.

    ಭಾರತೀಯ ಸಿನಿಮಾ ರಂಗದ ಇಬ್ಬರು ದಂತಕಥೆಗಳು ಬರೋಬ್ಬರಿ 36 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ. ನಿರ್ದೇಶಕ ಮಣಿರತ್ನಂ (Mani Ratnam) ಮತ್ತು ಕಮಲ್ ಹಾಸನ್ (Kamal Haasan) ‘ನಾಯಗನ್’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆನಂತರ ಈ ಜೋಡಿ ಮತ್ತೆ ಒಟ್ಟಾಗಿ ಕೆಲಸ ಮಾಡಲೇ ಇಲ್ಲ. ಇದೀಗ ಮೂರುವರೆ ದಶಕದ ಬಳಿಕ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಕಮಲ್ ಹಾಸನ್ ನಟನೆಯ 234ನೇ ಚಿತ್ರಕ್ಕೆ ಮಣಿರತ್ನಂ ನಿರ್ದೇಶನ ಮಾಡುತ್ತಿದ್ದಾರೆ.

     

    ಈ ಸಿನಿಮಾ ಶುರುವಾಗುವುದಕ್ಕೆ ಇನ್ನೂ ಹಲವು ತಿಂಗಳು ಬೇಕು. ಅದಕ್ಕೂ ಮುನ್ನ ಅನೇಕ ವಿಷಯಗಳು ಹೊರ ಬಂದಿವೆ. ಈ ಸಿನಿಮಾದಲ್ಲಿ ಸ್ಟಾರ್ ನಟರೇ ದಂಡೇ ಇರಲಿದ್ದು, ತ್ರಿಷಾ (Trisha) ನಾಯಕಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು, ಇದೀಗ ನಯನತಾರಾ ಹೆಸರು ಸೇರ್ಪಡೆ ಆಗಿದೆ. ಅಲ್ಲದೇ, ದುಲ್ಕರ್ ಸಲ್ಮಾನ್ (Dulquer Salmaan) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]