Tag: ಅನ್ನದಾನಿ

  • ರಾಜ್ಯ ಸರ್ಕಾರದಲ್ಲಿ ದಲಿತ IAS, IPS ಅಧಿಕಾರಿಗಳಿಗೆ ಅನ್ಯಾಯ ಆಗ್ತಿದೆ: ಅನ್ನದಾನಿ

    ರಾಜ್ಯ ಸರ್ಕಾರದಲ್ಲಿ ದಲಿತ IAS, IPS ಅಧಿಕಾರಿಗಳಿಗೆ ಅನ್ಯಾಯ ಆಗ್ತಿದೆ: ಅನ್ನದಾನಿ

    ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ದಲಿತ IAS, IPS ಅಧಿಕಾರಿಗಳಿಗೆ ಅನ್ಯಾಯ ಆಗ್ತಿದೆ. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ದಲಿತ ಸಮುದಾಯಕ್ಕೆ ಅನ್ಯಾಯ ಮಾಡ್ತಿದ್ದಾರೆ ಅಂತ ಮಾಜಿ ಶಾಸಕ ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಅನ್ನದಾನಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

    ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನ್ನದಾನಿ, ರಾಜ್ಯದಲ್ಲಿ ಅಹಿಂದ ಸರ್ಕಾರ ನಡೆಯುತ್ತಿದೆ ಅಂತ ಸಿದ್ದರಾಮಯ್ಯ ಹೇಳ್ತಿದ್ದಾರೆ. ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ಮಾಡ್ತಿದ್ದಾರೆ. ಸಿದ್ದರಾಮಯ್ಯ ‌ಸಿಎಂ ಆಗಿ 7 ವರ್ಷ ಕಳೆದಿದೆ. 7 ವರ್ಷಗಳಲ್ಲಿ ಅಹಿಂದ ಸಮಾಜಕ್ಕೆ ಕೊಟ್ಟ ಕೊಡುಗೆ ಶೂನ್ಯ. ಯಾವುದೇ ಸಮಾಜಕ್ಕೆ ಇತಿಹಾಸದಲ್ಲಿ ಉಳಿಯೋ ಯೋಜನೆ ಕೊಡದೇ ಇರೋ ಇತಿಹಾಸ ಸಿದ್ದರಾಮಯ್ಯಗೆ. ದೇವರಾಜ್ ಅರಸ್ ಅವರನ್ನು ಅವಧಿ ಹಿಂದಿಕ್ಕಬೇಕು ಅಂತ ಅಧಿಕಾರ ಸಿದ್ದರಾಮಯ್ಯ ಮಾಡ್ತಿದ್ದಾರೆ. ಸಿದ್ದರಾಮಯ್ಯ ಮುಂದುವರೆಯಲಿ ನಮ್ಮದೇನು ತಕರಾರು ಇಲ್ಲ. ದಲಿತ ಸಮುದಾಯಕ್ಕೆ ಏನ್ ಕೊಟ್ಟಿದ್ದೀರಾ. ದಲಿತರ ಹಕ್ಕು ಸಿದ್ದರಾಮಯ್ಯ ಕಸಿಯುತ್ತಿದ್ದಾರೆ ಎಂದು ಕಿಡಿಕಾರಿದರು.

    ದಲಿತರಿಗೆ ಅನುಕೂಲ ಆಗೋ ಒಂದೇ ಒಂದು ಯೋಜನೆ ಸಿದ್ದರಾಮಯ್ಯ ಕೊಟ್ಟಿಲ್ಲ. ಕುಮಾರಸ್ವಾಮಿ ದಲಿತರ ಮನೆಯಲ್ಲಿ ವಾಸ ಮಾಡಿ ದಲಿತರ ಪರ ಯೋಜನೆ ಕೊಟ್ಟರು. ಕುಮಾರಸ್ವಾಮಿ ಬರೋ ಮುಂಚೆ ನಾಯಿ-ನರಿ ಓಡಾಡದೇ ಇರೋ ರೀತಿ ದಲಿತರ ಜಾಗ ಇತ್ತು. ದಲಿತರ ಕೇರಿಗಳು ಅಚ್ಚುಕಟ್ಟಾಗಲು ಕುಮಾರಸ್ವಾಮಿ ಅವರ ಕಾರ್ಯಕ್ರಮದಿಂದ. ದಲಿತರು ಸೇರಿ ಎಲ್ಲಾ ವರ್ಗದ ಜನ ಸಿದ್ದರಾಮಯ್ಯಗೆ ಅಧಿಕಾರ ಕೊಟ್ಟರು. ನಮ್ಮ ದಲಿತರ ವೋಟ್ ಹೆಚ್ಚಾಗಿ ಸಿದ್ದರಾಮಯ್ಯಗೆ ಕೊಟ್ಟರು. ಬಹುತೇಕ ಎಲ್ಲಾ ದಲಿತ ಕ್ಷೇತ್ರಗಳು ಸಿದ್ದರಾಮಯ್ಯಗೆ, ಕಾಂಗ್ರೆಸ್‌ಗೆ ಮತ ಹಾಕಿದ್ರು. ಆದರೆ, ಸಿದ್ದರಾಮಯ್ಯ ದಲಿತರಿಗೆ ಅನ್ಯಾಯ ಮಾಡಿದ್ದಾರ ಅಂತ ಕಿಡಿಕಾರಿದರು.

    ಈ ಸರ್ಕಾರದಲ್ಲಿ IAS, IPS, ಎ ಗ್ರೇಡ್ ದಲಿತ ಅಧಿಕಾರಿಗಳಿಗೆ ಅನ್ಯಾಯ ಆಗ್ತಿದೆ. ಇದಕ್ಕೆ ದಲಿತ ಮಂತ್ರಿಗಳು ಉತ್ತರ ಕೊಡಬೇಕು. ಈ ಸರ್ಕಾರದಲ್ಲಿ IAS, IPS, KAS ದಲಿತರು ಆಯಕಟ್ಟಿನ ಜಾಗದಲ್ಲಿ ಇಲ್ಲ. ವಿಧಾನಸೌಧ, ಡಿಸಿ, ಎಸ್ಪಿ ಜಾಗದಲ್ಲಿ ಯಾರು ದಲಿತರು ಇದ್ದಾರೆ. ಸಿದ್ದರಾಮಯ್ಯ ಇದರ ಬಗ್ಗೆ ಲೆಕ್ಕಪತ್ರ ಹೊರಡಿಸಲಿ. ನಮ್ಮ ಜನರನ್ನ ಉಪಯೋಗ ಮಾಡಿಕೊಂಡು ನಮ್ಮ ಜನರಿಗೆ ಅನ್ಯಾಯ ಮಾಡ್ತಿದ್ದೀರಾ ಸಿದ್ದರಾಮಯ್ಯ ಅವರೇ ಅಂತ ಪ್ರಶ್ನೆ ಮಾಡಿದರು.

    ರಾಹುಲ್ ಗಾಂಧಿ, ಸುರ್ಜೇವಾಲ 2023 ರಲ್ಲಿ ದಲಿತರ ಪರ ನಾವು ಇರುತ್ತೇವೆ ಅಂದರು. ಅಧಿಕಾರಕ್ಕೆ ಬಂದು ಈಗ ದಲಿತ ವಿರೋಧಿ ಆಗಿದ್ದೀರಾ. ಇದು ದಲಿತ ವಿರೋಧಿ ಸರ್ಕಾರ. ಬೇಕಾದವರಿಗೆ ಎರಡೆರಡು ಹುದ್ದೆ.‌ ಕೊಟ್ಟವರಿಗೆ ಪದೇ ಪದೇ ಹುದ್ದೆ ಕೊಡೋ ಕೆಲಸ ಸಿದ್ದರಾಮಯ್ಯ ಮಾಡ್ತಿದ್ದಾರೆ. ಅಧಿಕಾರ ಮದದಲ್ಲಿ ನೀವು ಮರೆತು ಹೋಗಿರಬಹುದು. ಬಿಜೆಪಿ ಇದ್ದಾಗ ಅನೇಕ ಜಿಲ್ಲೆಗಳಿಗೆ ದಲಿತರನ್ನ ಡಿಸಿಗಳಾಗಿ ಮಾಡಿದ್ರು. ದಲಿತರಿಗೆ ಜಿಲ್ಲಾ ನಿಭಾಯಿಸೋ ಶಕ್ತಿ ಇಲ್ಲವಾ ಸಿದ್ದರಾಮಯ್ಯ ಅವರೇ. ACS, DC, SP ಹುದ್ದೆ ನಿಭಾಯಿಸೋ ಶಕ್ತಿ ದಲಿತರಿಗೆ ಇಲ್ಲ. ನೀವು ದಲಿತರ ರಕ್ಷಣೆ ಮಾಡ್ತೀರಾ. ದಲಿತರಿಗೆ ನೀವು ಮೋಸ ಮಾಡ್ತಿದ್ದೀರಾ ಅಂತ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

    ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ ಅಧಿಕಾರಿಗಳಿಗೂ ಅನ್ಯಾಯ ಆಗ್ತಿದೆ.‌ ಸಿದ್ದರಾಮಯ್ಯ ಅವರೇ ಸ್ವಜನ ಪಕ್ಷಪಾತ ಬೇಡ. ಎಲ್ಲಾ ಸಮುದಾಯಕ್ಕೆ ಹುದ್ದೆಗಳನ್ನು ಸಮಾನವಾಗಿ ಕೊಡಿ. ದಲಿತರಿಗೂ ACS ಹುದ್ದೆ ಕೊಡಿ. ಹೇಳೋವಾಗ ದಲಿತ ಪರ. ಮಾಡೋವಾಗ ದಲಿತರಿಗೆ ಮೋಸ ಮಾಡೋದು. ದಲಿತ ಅಧಿಕಾರಿಗಳು ಅಸಮರ್ಥರಾ? ಹೊರ ರಾಜ್ಯದ ದಲಿತ ಅಧಿಕಾರಿಗಳಿಗೆ ಹುದ್ದೆ ಕೊಟ್ಟು ನಿಮ್ಮ ಸಮುದಾಯಕ್ಕೆ ಕೊಟ್ಡಿದ್ದೇನೆ ಅಂತೀರಾ. ನಿಮಗೆ ಮುಂದೆ ಸಹಕಾರ ಬೇಕಾದ್ರೆ ದಲಿತರ ಪರ ಕೆಲಸ ಮಾಡಿ. ಈಗಾಗಲೇ ನಿಮಗೆ ಸಹಕಾರ ಕಳೆದು ಹೋಗಿದೆ. ಸಿದ್ದರಾಮಯ್ಯ ಜೆಡಿಎಸ್ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಈಗಲೂ ನಮ್ಮ ಮಾತು ಸಿದ್ದರಾಮಯ್ಯ ಕೇಳೋದಿಲ್ಲ. ದಲಿತರಿಗೆ ಆಗಿರೋ ಅನ್ಯಾಯ ಸರಿ ಮಾಡಿ. ಇಲ್ಲ ಅಂದರೆ ಸಿದ್ದರಾಮಯ್ಯ ಅವರನ್ನೇ ದಲಿತರು ಸರಿ ಮಾಡ್ತಾರೆ ಅಂತ ಎಚ್ಚರಿಕೆ ಕೊಟ್ಟರು.

    ದಲಿತ ಸಚಿವರು ಸಿಎಂ ಬಳಿ ಹೋಗಿ ನಮ್ಮ ಸಮುದಾಯ ಅನ್ಯಾಯದ ಬಗ್ಗೆ ಮಾತಾಡಿ. ಪರಮೇಶ್ವರ್ ಸೇರಿದಂತೆ ದಲಿತ ಸಚಿವರಿಗೆ IAS, IPS ಕೂಗು ಕೇಳುತ್ತಿಲ್ಲವಾ? ಈ ಅನ್ಯಾಯದ ಬಗ್ಗೆ ಮಾತಾಡಿ ಅಂತ ಸಚಿವರ ವಿರುದ್ಧವೂ ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್‌‌ನಲ್ಲಿ ದಲಿತ ಶಾಸಕರು, ಮಂತ್ರಿಗಳು ಮಾತಾಡದೇ ಇರೋ ಸ್ಥಿತಿ ನಿರ್ಮಾಣ ಆಗಿದೆ ಅಂತ ಮಾಜಿ ಶಾಸಕ ಜೆಡಿಎಸ್ ಪರಿಶಿಷ್ಟ ಜಾತಿ ಘಟದ ಅಧ್ಯಕ್ಷ ಅನ್ನದಾನಿ ಸರ್ಕಾರ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

    ಕಾಂಗ್ರೆಸ್ ‌ಪಕ್ಷದಲ್ಲಿ ದಲಿತ ಶಾಸಕರಿಗೂ, ಮಂತ್ರಿಗಳಿಗೂ ಕಷ್ಟ ಆಗ್ತಿದೆ. ಇದನ್ನ ಹೇಳಿಕೊಳ್ಳಲು ಆಗ್ತಿಲ್ಲ. ಅಂಬೇಡ್ಕರ್ ಅವರಿಗೆ ಕಷ್ಟ ಕೊಟ್ಟ ಪಕ್ಷ ಕಾಂಗ್ರೆಸ್. ಅಂಬೇಡ್ಕರ್ ಅವರನ್ನು ಸೋಲಿಸಿದ ಪಕ್ಷ ಕಾಂಗ್ರೆಸ್. ಕಾಂಗ್ರೆಸ್‌‌ನಲ್ಲಿ ಭಯದ ವಾತಾವರಣದಲ್ಲಿ ಶಾಸಕರು, ಸಚಿವರು ಕೆಲಸ ಮಾಡ್ತಿದ್ದಾರೆ. ದಲಿತರ ಮೇಲಿನ ಅನ್ಯಾಯವನ್ನ ಸಿದ್ದರಾಮಯ್ಯ ಅವರು ನೋಡಿಯೂ ನೋಡದಂತೆ ಇದ್ದಾರೆ. ಸಚಿವರು ಮಾತಾಡಿದ್ರೆ ಸಚಿವ ಸ್ಥಾನ ಹೋಗುತ್ತದೆ ಅನ್ನೋ ಭಯ. ಶಾಸಕರಿಗೆ ಮುಂದೆ ಟಿಕೆಟ್ ಕೊಡದೇ ಇರ್ತಾರೆ ಅನ್ನೋ ಭಯ. ಹೀಗಾಗಿ, ಯಾರು ಮಾತಾಡುತ್ತಿಲ್ಲ. ಮುಂದೊಂದು ದಿನ ಇದು ಸ್ಫೋಟ ಆಗುತ್ತದೆ. ಅವರು ಹೇಳಿಲ್ಲ ಅಂದರೆ ನಾವೇ ಮುಂದೆ ಕಾಂಗ್ರೆಸ್‌‌ನಲ್ಲಿ ದಲಿತ ಶಾಸಕರು, ಮಂತ್ರಿಗಳಿಗೆ ತೊಂದರೆ ಆಗ್ತಿದೆ ಅಂತ ಹೇಳೋಣ ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

  • ಸಂವಿಧಾನ ಬದಲಾವಣೆ ಮಾತು ಆಡಿರೋ ಡಿಕೆಶಿ ರಾಜೀನಾಮೆ ಕೊಡೋವರೆಗೂ ಹೋರಾಟ – ಅನ್ನದಾನಿ

    ಸಂವಿಧಾನ ಬದಲಾವಣೆ ಮಾತು ಆಡಿರೋ ಡಿಕೆಶಿ ರಾಜೀನಾಮೆ ಕೊಡೋವರೆಗೂ ಹೋರಾಟ – ಅನ್ನದಾನಿ

    ಬೆಂಗಳೂರು: ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ಕೊಡಲು ಸಂವಿಧಾನ ಬದಲಾವಣೆ ಮಾಡ್ತೀವಿ ಎಂಬ ಡಿಕೆಶಿ (DK Shivakumar) ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ದು, ಡಿಕೆಶಿ ರಾಜೀನಾಮೆ ಕೊಡುವವರೆಗೂ ಹೋರಾಟ ಮಾಡುತ್ತೇವೆ ಎಂದು ಜೆಡಿಎಸ್ (JDS) ಎಸ್‌ಸಿ (SC) ಘಟಕದ ಅಧ್ಯಕ್ಷ ಮಾಜಿ ಶಾಸಕ ಅನ್ನದಾನಿ (Annadani) ಕಿಡಿಕಾರಿದ್ದಾರೆ.

    ಫ್ರೀಡಂ ಪಾರ್ಕ್‌ನಲ್ಲಿ (Freedom Park) ಪ್ರತಿಭಟನೆ ನಡೆಸಿದ್ದು, ಡಿಕೆಶಿ ಪೋಸ್ಟರ್ ಹಿಡಿದು, ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು. ಈ ವೇಳೆ ವಿಧಾನಸೌಧ ಮುತ್ತಿಗೆ ಹಾಕಲು ಹೊರಟ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.ಇದನ್ನೂ ಓದಿ: ಉದ್ಯಮಿ ಮಗಳೊಂದಿಗೆ ಪ್ರಭಾಸ್‌ ಮದುವೆ ವಿಚಾರ ಸುಳ್ಳು- ಆಪ್ತರಿಂದ ಸ್ಪಷ್ಟನೆ

    ಈ ವೇಳೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಸಂವಿಧಾನ ಬದಲಾವಣೆ ಮಾಡ್ತೀನಿ ಎಂದು ಹೇಳಿದ್ದಾರೆ. ಡಿಕೆಶಿ ಡಿಸಿಎಂ ಆಗಿದ್ದರೆ ಸಂವಿಧಾನದಿಂದ ಬೇರೆಯವರನ್ನ ಒಲೈಕೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ನೀವು ಯಾರಿಗಾದರೂ ಮೀಸಲಾತಿ ಕೊಡಿ ನಮ್ಮ ಅಭ್ಯಂತರ ಇಲ್ಲ. ಆದರೆ ಸಂವಿಧಾನ ಬದಲಾವಣೆ ಮಾಡುವ ಮಾತು ಆಡಬೇಡಿ. ನಾನು ಮಾತಾಡಿಲ್ಲ ಎಂದು ಹೇಳಿದ್ದೀರಾ. ನೀವು ಹೇಳಿದ್ದೀರಾ ಎಂದು ವಾಗ್ದಾಳಿ ನಡೆಸಿದರು.

    ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್. ಅಂಬೇಡ್ಕರ್ ಸಂವಿಧಾನ ತಿದ್ದುಪಡಿ ಮಾಡಿದ್ದು ಈ ನೀಚ ಕಾಂಗ್ರೆಸ್. ಈ ದೇಶದಲ್ಲಿ ಸಂವಿಧಾನವನ್ನು ಅಪಮಾನ ಮಾಡಿರುವುದು ಕಾಂಗ್ರೆಸ್. ದೇವೇಗೌಡರನ್ನ, ಅಡ್ವಾಣಿ, ಜೆಪಿ ಅವರನ್ನ ಜೈಲಿಗೆ ಹಾಕಿದ್ದೀರಿ. ಅಂಬೇಡ್ಕರ್ ಸಂವಿಧಾನ ಅಮಾನತು ಮಾಡಿ, ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಜಾರಿ ಮಾಡಿದರು. ಇದನ್ನ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ವಿರುದ್ದ ಆಕ್ರೋಶ ಹೊರಹಾಕಿದರು.

    ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣವನ್ನು ಗ್ಯಾರಂಟಿಗೆ ಬಳಕೆ ಮಾಡಿಕೊಂಡಿದ್ದಾರೆ. ಇದನ್ನ ಕೇಳಿದರೆ ಭಂಡ ಮಾತು ಆಡುತ್ತೀರಿ. ಕಾಂಗ್ರೆಸ್‌ನವರು ಮಾನ ಮರ್ಯಾದೆ ಇಟ್ಟುಕೊಂಡು ಮಾತಾಡಬೇಕು. ಡಿಕೆಶಿ ಮನಸಿನಲ್ಲಿ ಇರೋದು ಬಾಯಲ್ಲಿ ಬಂದಿದೆ. ಅವರಿಗೆ ನಾಚಿಕೆ ಆಗಬೇಕು. ಕೂಡಲೇ ಹೇಳಿಕೆ ವಾಪಸ್ ತೆಗೆದುಕೊಂಡು ಕ್ಷಮೆ ಕೇಳಬೇಕು. ಡಿಕೆಶಿ ಅವರೇ ನಿಮ್ಮಿಂದ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ. ದಲಿತರ ಹಣವನ್ನ ನುಂಗಿರುವುದು ಕಾಂಗ್ರೆಸ್. ಸಂವಿಧಾನ ಬದಲಾವಣೆ ಮಾಡ್ತೀನಿ ಎಂದಿರುವ ಡಿಕೆಶಿ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ:Earthquake | ಮ್ಯಾನ್ಮಾರ್‌ನಲ್ಲಿ ಎರಡೆರಡು ಬಾರಿ ಪ್ರಬಲ ಭೂಕಂಪ – ಬ್ಯಾಂಕಾಕ್‌ನಲ್ಲೂ ನಡುಕ

     

  • ಮಂಡ್ಯ ಜನರು ಛತ್ರಿ ಹೇಳಿಕೆ; ಡಿಕೆಶಿ ಜನರ ಕ್ಷಮೆ ಕೇಳಬೇಕು – ಅನ್ನದಾನಿ

    ಮಂಡ್ಯ ಜನರು ಛತ್ರಿ ಹೇಳಿಕೆ; ಡಿಕೆಶಿ ಜನರ ಕ್ಷಮೆ ಕೇಳಬೇಕು – ಅನ್ನದಾನಿ

    ಬೆಂಗಳೂರು: ಮಂಡ್ಯ (Mandya) ಜನರನ್ನು ಛತ್ರಿಗಳು ಎಂದು ಕರೆದಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆದು, ಮಂಡ್ಯ ಜನರ ಕ್ಷಮೆ ಕೇಳಬೇಕು ಎಂದು ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ, ಮಾಜಿ ಶಾಸಕ ಅನ್ನದಾನಿ (K Annadani) ಡಿಕೆ ಶಿವಕುಮಾರ್‌ಗೆ ಆಗ್ರಹಿಸಿದ್ದಾರೆ.

    ಜೆಪಿ ಭವನದಲ್ಲಿ ಮಾತನಾಡಿದ ಅವರು, ಮಂಡ್ಯ ಜನರು ಛತ್ರಿಗಳು ಎಂಬ ಡಿಕೆ ಶಿವಕುಮಾರ್ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಜನರ ವಿರೋಧ ಡಿಕೆಶಿ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಚೆಲುವರಾಯಸ್ವಾಮಿ ಡಿಕೆಶಿ ಪರವಾಗಿ ಮಾತನಾಡುತ್ತಾರೆ. ಶಾಸಕ ಉದಯ್ ಡಿಕೆಶಿ ಹೇಳಿಕೆಗೆ ಬೇರೆ ಅರ್ಥ ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಛತ್ರಿಗಳು ಅನ್ನಬೇಕಿತ್ತು. ಮಂಡ್ಯದ ಜನರಿಗೆ ಛತ್ರಿ ಅನ್ನುತ್ತೀರಾ? ಸಿಎಂ ಆಗುತ್ತಾರೆ ಅಂತ ಜನ 6 ಸೀಟು ಕೊಟ್ಟರು. ಮಂಡ್ಯ ಜನರ ಬಗ್ಗೆ ನಿಮಗೆ ಗೊತ್ತಿಲ್ಲ. ಮಂಡ್ಯಕ್ಕೆ ದೊಡ್ಡ ಇತಿಹಾಸ ಇದೆ ಎಂದು ಡಿಕೆಶಿ ವಿರುದ್ದ ಕಿಡಿಕಾರಿದರು. ಇದನ್ನೂ ಓದಿ: ಹನಿಟ್ರ‍್ಯಾಪ್ ಪ್ರಕರಣ; ಜೆಡಿಎಸ್‌ನಲ್ಲಿ ಯಾರು ಟ್ರ‍್ಯಾಪ್ ಆಗಿಲ್ಲ: ಅನ್ನದಾನಿ

    ಎಸ್‌ಎಂ ಕೃಷ್ಣ (SM Krishna) ಮಂಡ್ಯ ಜಿಲ್ಲೆಯವರು, ಸಿಎಂ ಆದವರು. ಎಸ್‌ಎಂ ಕೃಷ್ಣ ಶಿಷ್ಯರಾಗಿ ಕೃಷ್ಣ ಅವರ ಜಿಲ್ಲೆಯನ್ನು ಛತ್ರಿಗಳು ಅಂತೀರಲ್ಲ, ಇದನ್ನು ನಾವು ಖಂಡಿಸುತ್ತಿದ್ದೇವೆ. ಮಂಡ್ಯದ ಜನ ನಿಮಗೆ ಮುಂದಿನ ದಿನಗಳಲ್ಲಿ ಬುದ್ಧಿ ಕಲಿಸುತ್ತಾರೆ. ನಮಗೆ ಯಾರ ಬಗ್ಗೆಯೂ ಭಯ ಇಲ್ಲ. ಯಾರನ್ನು ಕಂಡರೂ ಭಯವಿಲ್ಲ. ನಾವು ಭಯ ಪಡೋದು ದೇವೇಗೌಡ, ಕುಮಾರಸ್ವಾಮಿಗೆ ಮಾತ್ರ. ಬೇರೆ ಯಾರಿಗೂ ಸೊಪ್ಪು ಹಾಕಲ್ಲ, ಯಾರಿಗೂ ಹೆದರಲ್ಲ. ಎಂತಹ ಸಮಯ ಬಂದರೂ ನಾವು ಎದುರಿಸುತ್ತೇವೆ. ಡಿಕೆ ಶಿವಕುಮಾರ್ ಕೂಡಲೇ ಹೇಳಿಕೆ ವಾಪಸ್ ಪಡೆಯಬೇಕು. ಮಂಡ್ಯ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಏ.1ರಿಂದ ಕರ್ನಾಟಕದಲ್ಲಿ ಟೋಲ್‌ ದರ ಶೇ.5ರಷ್ಟು ಹೆಚ್ಚಳ!

    ಮಂಡ್ಯದ ಜನರಿಗೆ ಛತ್ರಿಗಳು ಅಂತ ಹೇಳಿದ್ದಾರೆ. ಹಿರಿಯರಾಗಿ ಹೀಗೆ ಮಾತನಾಡುವುದು ಸರಿಯಲ್ಲ. ಸಿಎಂ ಆಗಬೇಕು ಎಂದು ಆಸೆ ಇಟ್ಟುಕೊಂಡಿರುವವರು ಹೀಗೆ ಮಾತನಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಂವಿಧಾನ ಬದಲಾವಣೆ ‌ಹೇಳಿಕೆಗೆ ಡಿಕೆಶಿ ದೇಶದ, ರಾಜ್ಯದ ಕ್ಷಮೆ ಕೇಳಿ, ರಾಜೀನಾಮೆ ಕೊಡ್ಬೇಕು – ಅನ್ನದಾನಿ

  • ಹನಿಟ್ರ‍್ಯಾಪ್ ಪ್ರಕರಣ; ಜೆಡಿಎಸ್‌ನಲ್ಲಿ ಯಾರು ಟ್ರ‍್ಯಾಪ್ ಆಗಿಲ್ಲ: ಅನ್ನದಾನಿ

    ಹನಿಟ್ರ‍್ಯಾಪ್ ಪ್ರಕರಣ; ಜೆಡಿಎಸ್‌ನಲ್ಲಿ ಯಾರು ಟ್ರ‍್ಯಾಪ್ ಆಗಿಲ್ಲ: ಅನ್ನದಾನಿ

    ಬೆಂಗಳೂರು: ಹನಿಟ್ರ‍್ಯಾಪ್ ಕೇಸ್ (Honey Trap Case) ಯಾರಿಗೂ ಶೋಭೆ ತರೋದಿಲ್ಲ. ದೇಶಕ್ಕೆ ಕಳಂಕ ತರುತ್ತಿರೋದೆ ಕಾಂಗ್ರೆಸ್ ಎಂದು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಮಾಜಿ ಶಾಸಕ ಅನ್ನದಾನಿ (K Annadani) ವಾಗ್ದಾಳಿ ನಡೆಸಿದ್ದಾರೆ.

    ಹನಿಟ್ರ‍್ಯಾಪ್ ಕೇಸ್ ವಿಚಾರವಾಗಿ ಜೆಪಿ ಭವನದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಜೆಡಿಎಸ್‌ನಲ್ಲಿ ಟ್ರಾಪ್ ಆಗೋರು ಯಾರು ಇಲ್ಲ. ನಮ್ಮಲ್ಲಿ ಮೊದಲ ಬಾರಿಗೆ ಗೆದ್ದವರು ಜಾಸ್ತಿ ಇದ್ದಾರೆ. ಒಳ್ಳೆ ವ್ಯಕ್ತಿತ್ವದಲ್ಲಿ ಕೆಲಸ ಮಾಡುತ್ತಿದ್ದಾರೆ. ಹನಿಟ್ರ‍್ಯಾಪ್ ಯಾರಿಗೂ ಶೋಭೆ ತರೋದಿಲ್ಲ. ನನ್ನಂತ ಪ್ರಾಮಾಣಿಕ ರಾಜಕಾರಣ ಆದವರಿಗೆ ಇಂತಹ ವಿಷಯ ಬೇಸರ ತರಿಸುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಸಂವಿಧಾನ ಬದಲಾವಣೆ ‌ಹೇಳಿಕೆಗೆ ಡಿಕೆಶಿ ದೇಶದ, ರಾಜ್ಯದ ಕ್ಷಮೆ ಕೇಳಿ, ರಾಜೀನಾಮೆ ಕೊಡ್ಬೇಕು – ಅನ್ನದಾನಿ

    ನಾವು ಯಾವತ್ತು ರಾಜಕೀಯ ವ್ಯಭಿಚಾರದ ಕೆಲಸ ಮಾಡಿಲ್ಲ. ದೇವೇಗೌಡರ ಮಾರ್ಗದರ್ಶನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ.ದೇಶಕ್ಕೆ ಕಳಂಕ ತರುತ್ತಿರೋರು ಕಾಂಗ್ರೆಸ್‌ನವರು. 48 ಜನರ ಸಿ.ಡಿ ಇದೆ ಅಂದರೆ ಯಾರದ್ದು ಸರ್ಕಾರ ಇರೋದು? ಈ ದೇಶ, ರಾಜ್ಯದ ಗೌರವವನ್ನು ಹನಿಟ್ರ‍್ಯಾಪ್ ಮಾಡಿ ಹಾಳು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಅನ್ನದಾನಿ ಹರಿಹಾಯ್ದರು. ಇದನ್ನೂ ಓದಿ: ಏ.1ರಿಂದ ಗೋಧಿ ದಾಸ್ತಾನು ಘೋಷಣೆ ಕಡ್ಡಾಯ – ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ

  • ಸಂವಿಧಾನ ಬದಲಾವಣೆ ‌ಹೇಳಿಕೆಗೆ ಡಿಕೆಶಿ ದೇಶದ, ರಾಜ್ಯದ ಕ್ಷಮೆ ಕೇಳಿ, ರಾಜೀನಾಮೆ ಕೊಡ್ಬೇಕು – ಅನ್ನದಾನಿ

    ಸಂವಿಧಾನ ಬದಲಾವಣೆ ‌ಹೇಳಿಕೆಗೆ ಡಿಕೆಶಿ ದೇಶದ, ರಾಜ್ಯದ ಕ್ಷಮೆ ಕೇಳಿ, ರಾಜೀನಾಮೆ ಕೊಡ್ಬೇಕು – ಅನ್ನದಾನಿ

    – ಕಾಂಗ್ರೆಸ್‌ನಿಂದ 99 ಬಾರಿ ಸಂವಿಧಾನ ತಿದ್ದುಪಡಿ ಆಗಿದೆ ಎಂದ ಮಾಜಿ ಶಾಸಕ

    ಬೆಂಗಳೂರು: ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ (Muslims 4% Reservation) ಕೊಡಲು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದಿದ್ದು ಡಿಸಿಎಂ ಡಿಕೆಶಿವಕುಮಾರ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶದ, ರಾಜ್ಯದ ಜನರ ಕ್ಷಮೆ ಕೇಳಬೇಕು ಅಂತ ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ, ಮಾಜಿ ಶಾಸಕ ಅನ್ನದಾನಿ (K. Annadani) ಆಗ್ರಹಿಸಿದ್ದಾರೆ‌.

    ಇಲ್ಲಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಮಿತ್ ಶಾ (Amit Shah) ಅವರು ಅಂಬೇಡ್ಕರ್ ಬಗ್ಗೆ ಮಾತಾಡಿದ್ರು ಅಂತ ಕಾಂಗ್ರೆಸ್ (Congress) ಅವರು ದೊಡ್ಡ ಆಂದೋಲನ ಮಾಡಿದ್ರು. ಈಗ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಸಂವಿಧಾನ ಬದಲಾವಣೆ ಮಾಡೋ ಮಾತುಗಳನ್ನಾಡಿದ್ದಾರೆ. ಯಾಕೆ ಅವರ ಮೇಲೆ ಕ್ರಮ ಇಲ್ಲ ಅಂತ ಕಾಂಗ್ರೆಸ್ ಹೈಕಮಾಂಡ್‌ಗೆ ಪ್ರಶ್ನೆ ಕೇಳಿದ್ರು. ಇದನ್ನೂ ಓದಿ: ಹನಿಟ್ರ್ಯಾಪ್‌ ಪ್ರಕರಣ ತನಿಖೆಗೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ಸುಪ್ರೀಂ

    ರಾಹುಲ್‌ ಗಾಂಧಿ ಅವರು ಸಂವಿಧಾನದ ಪುಸ್ತಕ ಹಿಡಿದು ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಸಂವಿಧಾನ ರಕ್ಷಣೆ ನಾವೇ ಮಾಡೋದು ಅಂದರು‌. ಈಗ ಡಿಕೆ ಶಿವಕುಮಾರ್ ಸಂವಿಧಾನ ಬದಲಾವಣೆ ಮಾಡ್ತೀನಿ ಅಂದರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸುಮ್ಮನೆ ಇದ್ದಾರೆ. ಡಿಕೆಶಿ ಹೇಳಿಕೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮಾತಾಡಬೇಕು ಅಂತ ಆಗ್ರಹ ಮಾಡಿದ್ರು. ಇದನ್ನೂ ಓದಿ: ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲೀಮರೂ ಸುರಕ್ಷಿತ – ಯೋಗಿ ಆದಿತ್ಯನಾಥ್‌

    ಕಾಂಗ್ರೆಸ್ ನವರ ಮನಸು ಕೊಳಕಾಗಿದೆ. ಅಂಬೇಡ್ಕರ್ ವಿರೋಧಿಗಳು ಕಾಂಗ್ರೆಸ್ ಅವರು. ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಅವರು. ಇಂದಿರಾಗಾಂಧಿ ಸಂವಿಧಾನ ವಿರೋಧಿಸಿ ತುರ್ತು ಪರಿಸ್ಥಿತಿಯ ಘೋಷಣೆ ಮಾಡಿದ್ರು ಅಂತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ‌ನಡೆಸಿದರು. ಇದನ್ನೂ ಓದಿ: ದುಬೈ ಮರಳುಗಾಡಿನಲ್ಲಿ ನಟಿ ಫೋಟೋಶೂಟ್- ಬಾಲಿವುಡ್ ಬ್ಯೂಟಿಯಂತೆ ಮಿಂಚಿದ ಇಶಿತಾ

    ಡಿಸಿಎಂ ಆಗೋಕೆ ಸಂವಿಧಾನ ಕಾರಣ:
    ಡಿಕೆಶಿ ಡಿಸಿಎಂ ಆಗೋಕೆ ಸಂವಿಧಾನ ಕಾರಣ. 99 ಬಾರಿ ಸ್ವಾತಂತ್ರ್ಯ ಬಂದಾಗಿನಿಂದ ಸಂವಿಧಾನ ತಿದ್ದುಪಡಿ ಮಾಡಿರೋದು ಕಾಂಗ್ರೆಸ್‌ನವರು. ನರೇಂದ್ರ ಮೋದಿ ಅವರು ಒಂದೇ ಒಂದು ಅರ್ಟಿಕಲ್ ತಿದ್ದಿಲ್ಲ. ನೆಹರು, ಇಂದಿರಾಗಾಂಧಿ, ಮನಮೋಹನ್ ಸಿಂಗ್ ಸಂವಿಧಾನ ತಿದ್ದುಪಡಿ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರೇ ಏನ್ ಮಾಡ್ತಿದ್ದೀರಾ? ಡಿಕೆ ಶಿವಕುಮಾರ್ ಹೇಳಿಕೆ ಬಗ್ಗೆ ಮಾತಾಡಿ, ಮುಸ್ಲಿಮರಿಗೆ ಮೀಸಲಾತಿ ‌ಕೊಡಲು ಸಂವಿಧಾನ ಬದಲಾವಣೆ ಮಾಡ್ತೀನಿ ಅಂತ ಹೇಳಿದ್ದಾರೆ. ಈ ಬಗ್ಗೆ ಮಾತಾಡಿ ಅಂತ ಪ್ರಿಯಾಂಕ್ ಖರ್ಗೆಗೆ ಆಗ್ರಹ ಮಾಡಿದ್ರು.

    ಡಿಕೆಶಿ ಹೇಳಿಕೆ‌ ಖಂಡಿಸಿ ಜೆಡಿಎಸ್ SC ಘಟಕದಿಂದ ಪ್ರತಿಭಟನೆ ಮಾಡಲಾಗುತ್ತದೆ. ಶುಕ್ರವಾರ ರಾಜ್ಯಾದ್ಯಂತ ಹೋರಾಟ ಮಾಡ್ತೀವಿ. ಡಿಕೆ ಶಿವಕುಮಾರ್ ರಾಜೀನಾಮೆ ಕೊಡಬೇಕು. ಕೂಡಲೇ ತಮ್ಮ ‌ಹೇಳಿಕೆ ವಾಪಸ್ ಪಡೆದು ರಾಜೀನಾಮೆ ಕೊಡಬೇಕು ಅಂತ ಆಗ್ರಹ ಮಾಡಿದ್ರು. ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಬಗ್ಗೆ ಮಾತಾಡಿದ್ದಕ್ಕೆ ಟಿಕೆಟ್ ಬಿಜೆಪಿ ಕೊಡದೇ ಇರೋದು ನಾವು ಒಪ್ಪುತ್ತೇವೆ. ಬಿಜೆಪಿ ಶಿಸ್ತುಕ್ರಮ ನಾವು ಸ್ವಾಗತ ಮಾಡ್ತೀನಿ. ಅದೇ ರೀತಿ ಡಿಕೆಶಿವಕುಮಾರ್ ವಿರುದ್ದ ಮಲ್ಲಿಕಾರ್ಜುನ ಖರ್ಗೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಅಂತ ಆಗ್ರಹ ಮಾಡಿದ್ರು. ಇದನ್ನೂ ಓದಿ: ಮಹಾನಗರ ಪಾಲಿಕೆಯ ಗಾರ್ಬೇಜ್ ರೀತಿ ರಾಜ್ಯ ಸರ್ಕಾರದ ಆಡಳಿತ: ಛಲವಾದಿ ನಾರಾಯಣಸ್ವಾಮಿ ಕಿಡಿ

  • ಚುನಾವಣೆಯಲ್ಲಿ ʻಕೈʼ ಶಾಸಕ ನರೇಂದ್ರಸ್ವಾಮಿಗೆ ಐಶ್ವರ್ಯಗೌಡ ಹಣ ನೀಡಿದ್ದಾರೆ: ಅನ್ನದಾನಿ ಬಾಂಬ್‌

    ಚುನಾವಣೆಯಲ್ಲಿ ʻಕೈʼ ಶಾಸಕ ನರೇಂದ್ರಸ್ವಾಮಿಗೆ ಐಶ್ವರ್ಯಗೌಡ ಹಣ ನೀಡಿದ್ದಾರೆ: ಅನ್ನದಾನಿ ಬಾಂಬ್‌

    – ಐಶ್ವರ್ಯಗೌಡರನ್ನ ಮಂಪರು ಪರೀಕ್ಷೆಗೆ ಒಳಪಡಿಸುವಂತೆ ಆಗ್ರಹ

    ಮಂಡ್ಯ: ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಐಶ್ವರ್ಯಗೌಡ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿಯ ಶಾಸಕ ನರೇಂದ್ರಸ್ವಾಮಿ (Narendra Swamy) ಅವರಿಗೆ ಹಣ ನೀಡಿದ್ದಾರೆ ಎಂದು ಮಾಜಿ ಶಾಸಕ ಅನ್ನದಾನಿ (K Annadani) ಗಂಭೀರ ಆರೋಪ ಮಾಡಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಐಶ್ವರ್ಯಗೌಡ (Aishwarya Gowda) ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದವರು. ಈಕೆ ಮಂಡ್ಯ ಜಿಲ್ಲೆಯಲ್ಲೂ ಹಲವರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ. ಅಮಾಯಕರನ್ನ ನಂಬಿಸಿ ಅವರಿಗೆ ಮೋಸ ಮಾಡಿದ್ದಾರೆ. ಈಕೆಯ ಈ ಮೋಸದ ಜಾಲಕ್ಕೆ ಕಾಂಗ್ರೆಸ್‌ನ ಒಂದಷ್ಟು ಮುಖಂಡರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ದಾವಣಗೆರೆ| ನ್ಯೂ ಇಯರ್ ಸಂಭ್ರಮದ ದಿನವೇ ಬೈಕ್ ಅಪಘಾತಕ್ಕೆ ಯುವಕ ಬಲಿ – ಮತ್ತೋರ್ವ ಗಂಭೀರ

    ಈ ಹಿಂದೆ ಸಾಕಷ್ಟು ಜನ ಐಶ್ವರ್ಯಗೌಡ ವಿರುದ್ಧ ವಂಚನೆಯ ಸಂಬಂಧ ದೂರು‌ ನೀಡಲು ಪೊಲೀಸ್ ಠಾಣೆಗೆ ಹೋಗಿದ್ದರು. ಆದ್ರೆ ಪೊಲೀಸರು ದೂರನ್ನು ಸ್ವೀಕಾರ ಮಾಡಿಯೇ ಇಲ್ಲ. ಇದಕ್ಕೆ ಐಶ್ವರ್ಯಗೌಡ ಹಿಂದಿರುವ ಕಾಂಗ್ರೆಸ್ ನಾಯಕರು ಕಾರಣ ಎಂದಿದ್ದಾರೆ. ಇದನ್ನೂ ಓದಿ: ದೇಗುಲದಲ್ಲಿ ಪುರುಷರು ಶರ್ಟ್ ತೆಗೆಯುವ ಪದ್ಧತಿ ಅನಿಷ್ಟ – ಶಿವಗಿರಿ ಶ್ರೀ

    ಸದ್ಯ ಮಳವಳ್ಳಿ ಶಾಸಕರಾಗಿರುವ ನರೇಂದ್ರಸ್ವಾಮಿಗೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಐಶ್ವರ್ಯಗೌಡ ಫಂಡಿಂಗ್‌ ಮಾಡಿದ್ದಾರೆ. ಐಶ್ವರ್ಯಗೌಡರನ್ನ ಮಂಪರು ಪರೀಕ್ಷೆಗೆ ಒಳಪಡಿಸಿದರೆ, ಎಲ್ಲಾ ವಿಚಾರಗಳು ಬೆಳಕಿಗೆ ಬರುತ್ತವೆ. ಐಶ್ವರ್ಯಗೌಡರ ವಂಚನೆ ಪ್ರಕರಣವನ್ನ ಸಿಬಿಐಗೆ ನೀಡಬೇಕೆಂದು ಮಾಜಿ ಶಾಸಕ ಅನ್ನದಾನಿ ಆಗ್ರಹಿಸಿದ್ದಾರೆ.  ಇದನ್ನೂ ಓದಿ: ವಂಚನೆ ಕೇಸಲ್ಲಿ ಐಶ್ವರ್ಯಗೌಡಗೆ ಜಾಮೀನು – ರಾತ್ರಿಯೇ ಜೈಲಿಂದ ರಿಲೀಸ್

  • ನಾನು ಸೋತರೆ ಆರ್ಕೆಸ್ಟ್ರಾದಲ್ಲಿ ಹಾಡಿ ಜೀವನ ಮಾಡ್ತೀನಿ: ಅನ್ನದಾನಿ

    ನಾನು ಸೋತರೆ ಆರ್ಕೆಸ್ಟ್ರಾದಲ್ಲಿ ಹಾಡಿ ಜೀವನ ಮಾಡ್ತೀನಿ: ಅನ್ನದಾನಿ

    ಮಂಡ್ಯ: ಮುಂದಿನ ಚುನಾವಣೆಯಲ್ಲಿ (Election) ನಾನು ಸೋತರೆ ಆರ್ಕೆಸ್ಟ್ರಾದಲ್ಲಿ ಹಾಡು ಹೇಳ್ಕೊಂಡು ಜೀವನ ಮಾಡುತ್ತೇನೆ ಎಂದು ಮಳವಳ್ಳಿಯ ಜೆಡಿಎಸ್ (JDS) ಶಾಸಕ ಕೆ‌.ಅನ್ನದಾನಿ (K Annadani) ಹೇಳಿದರು.

    ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (Malavalli) ಪಟ್ಟಣದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀವು ನನ್ನ ಕೈ ಬಿಟ್ರೆ ನಾನು ಹಾಡು ಹೇಳಿಕೊಂಡು, ನಾಟಕವಾಡಿ ಜೀವನ ಮಾಡುತ್ತೇನೆ. ನಾನೊಬ್ಬ ಸಾಂಸ್ಕೃತಿಕ ವ್ಯಕ್ತಿ, ಬರೀ ರಾಜಕೀಯನೇ ನೆಚ್ಚಿಕೊಂಡಿಲ್ಲ, ರಾಜಕೀಯನೇ ಅಂಟಿಕೊಂಡು ಅದರಿಂದಲೇ ಆಸ್ತಿ ಮಾಡಿಕೊಂಡು ರಾಜಕೀಯದಲ್ಲೇ ಶ್ರೀಮಂತನಾಗಬೇಕೆಂಬುದು ನನಗಿಲ್ಲ ಎಂದರು.

    ನಾನು ಹಾಡು ಹೇಳುತ್ತೇನೆ, ನಾಟಕ ಕಲಿತಿದ್ದೀನಿ, ನೀವೇನಾದ್ರು ನನ್ನ ತೆಗೆದು ಆಚೆಗೆ ಹಾಕಿದರೆ, ಆರ್ಕೆಸ್ಟ್ರಾದಲ್ಲಿ ಹಾಡು ಹೇಳ್ಕೊಂಡು ಜೀವನ ಮಾಡ್ತೀನಿ. ಜೀವನ ಮಾಡಲು ನನಗೆ ತೊಂದರೆ ಇಲ್ಲ. ಹಲವು ಕಲಾವಿದರು ನನಗೆ ಸ್ನೇಹಿತರಿದ್ದಾರೆ. ನಾಲ್ಕು ಒಳ್ಳೆ ಹಾಡು ಹೇಳಿದ್ರೆ ಬದುಕು ನಡೆಸಿಕೊಂಡು ಹೋಗಬಹುದು. ದೇವೇಗೌಡ್ರು, ಕುಮಾರಸ್ವಾಮಿ ಅವರು ಸಣ್ಣ ಲೋಪ ಇಲ್ಲದೆ ಆಡಳಿತ ನಡೆಸಿದ್ದಾರೆ. ಅವರ ಶಿಷ್ಯನಾಗಿ ನಾನು ಇಲ್ಲಿ ಏನ್ ಮಾಡ್ಬೇಕು ಎಂಬ ಚಿಂತನೆ ನಡೆಸುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಚುನಾವಣಾ ಪ್ರಚಾರಕ್ಕಾಗಿ ಸಿದ್ದರಾಮಯ್ಯಗೆ ಸಿದ್ಧವಾಯ್ತು ಹೈಫೈ ಪ್ರಚಾರದ ಬಸ್

    ಕಮಿಷನ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಿಮಗ್ಯಾರಾದ್ರು ಕಮಿಷನ್ ಇಸ್ಕೊತ್ತಾರೆ ಅಂತ ಹೇಳಿದ್ರೆ, ಅದು ಬರೀ ರಾಜಕೀಯ ಟೀಕೆಯಾಗಿದೆ. ಕನಕದಾಸರನ್ನೇ ಬಿಡಲಿಲ್ಲ ಸಮಾಜ, ಇನ್ನ ನನ್ನ ಬಿಡ್ತಾರಾ ಎಂದು ತಮ್ಮ ಮೇಲೆ ಬಂದಿರುವ ಆರೋಪಗಳನ್ನು ತಳ್ಳಿ ಹಾಕಿದರು. ಇದನ್ನೂ ಓದಿ: ದೇಗುಲ ಮಠದ ಮೂವರು ವಿದ್ಯಾರ್ಥಿಗಳು ನಾಪತ್ತೆ‌- ದೂರು ನೀಡಿದ ವಾರ್ಡನ್

    Live Tv
    [brid partner=56869869 player=32851 video=960834 autoplay=true]

  • ಕನ್ನಡ ಧ್ವಜ ಸುಟ್ಟ ದ್ರೋಹಿಗಳ ವಿರುದ್ಧ ಆಕ್ರೋಶ: ಪಕ್ಷಬೇಧ ಮರೆತು ಖಂಡನಾ ನಿರ್ಣಯ

    ಕನ್ನಡ ಧ್ವಜ ಸುಟ್ಟ ದ್ರೋಹಿಗಳ ವಿರುದ್ಧ ಆಕ್ರೋಶ: ಪಕ್ಷಬೇಧ ಮರೆತು ಖಂಡನಾ ನಿರ್ಣಯ

    ಬೆಳಗಾವಿ: ಕೊಲ್ಲಾಪುರದಲ್ಲಿ ಎಂಇಎಸ್ ಪುಂಡರು ಕನ್ನಡ ಧ್ವಜ ಸುಟ್ಟ ಪ್ರಕರಣ ಖಂಡಿಸಿ ವಿಧಾನಸಭೆಯಲ್ಲಿ ಇವತ್ತು ಖಂಡನಾ ನಿರ್ಣಯ ಮಂಡಿಸಲಾಯಿತು. ಜೆಡಿಎಸ್ ಶಾಸಕ ಅನ್ನದಾನಿ ಎಂಇಎಸ್ ಪುಂಡರ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಖಂಡನಾ ನಿರ್ಣಯ ಮಂಡಿಸಿದ್ರು. ಈ ಖಂಡನಾ ನಿರ್ಣಯಕ್ಕೆ ಪಕ್ಷಬೇಧ ಮರೆತು ಸಹಮತ ವ್ಯಕ್ತವಾಯ್ತು.

    ಕನ್ನಡ ಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಕನ್ನಡ ಧ್ವಜ ಹಿಡಿದು ಶೂನ್ಯವೇಳೆಯಲ್ಲಿ ಶಾಸಕ ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದ್ದು, ಇದು ನನ್ನ ತಾಯಿ. ನನ್ನ ತಾಯಿಗೆ ಬೆಂಕಿ ಹಚ್ಚಿದ್ದಾರೆ. ಮಂಗಳವಾರ ಬೆಂಕಿ ಹಚ್ಚಿದ್ದು, ಮಹಾರಾಷ್ಟ್ರ ಸರ್ಕಾರ ಏನು ಮಾಡುತ್ತಿದೆ? ಎರಡು ದಿನ ಆದ್ರೂ ಕ್ರಮ ಕೈಗೊಂಡಿಲ್ಲ. ಕರುನಾಡ ಜನ ಕರುಣಾಮಯಿಗಳು, ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ನಾಡು ನಮ್ಮದು. ಉದ್ದೇಶಪೂರ್ವಕವಾಗಿ ನಮ್ಮನ್ನ ಕೆಣಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ನಿಯಮ 69ರಡಿ ಚರ್ಚೆಗೆ ಅವಕಾಶ ಕೊಡಿ ಎಂದು ಧರಣಿ ಕೂಡ ನಡೆಸಿದ್ರು. ಇದನ್ನೂ ಓದಿ:  ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಅಣ್ಣ-ತಂಗಿಯನ್ನೇ ಮದುವೆಯಾದ!

    ಇದೇ ವೇಳೆ ಮಧ್ಯಪ್ರವೇಶ ಮಾಡಿ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಅನ್ನದಾನಿ ಬಹಳ ಪ್ರಾಮುಖ್ಯ ವಿಷಯ ಪ್ರಸ್ತಾಪಿಸಿದ್ದಾರೆ. ಮಹಾರಾಷ್ಟ್ರ ಪುಂಡರು ಬಾವುಟ ಸುಟ್ಟು ಹಾಕಿದ್ದಾರೆ. ಅವರನ್ನು ಮತಿಹೀನರು ಎಂದು ಕರೆಯಬೇಕಾಗುತ್ತದೆ. ನಾವೆಲ್ಲರೂ ಭಾರತೀಯರು, ಆದರೆ ಭಾಷವಾರು ಪ್ರಾಂತ್ಯವನ್ನಾಗಿ ಮಾಡಿಕೊಂಡಿದ್ದೇವೆ. ಕನ್ನಡ ಬಾವುಟದ ಮೇಲೆ ಭಾವನಾತ್ಮಕ ಸಂಬಂಧ ಇದೆ. ಇದನ್ನು ನಾನು ನಿಜವಾಗಿಯೂ ಖಂಡಿಸುತ್ತೇನೆ. ಇದರಿಂದ ರಾಜ್ಯ-ರಾಜ್ಯಗಳ ನಡುವೆ ದ್ವೇಷ ಅಸೂಯೆಗಳು ಉಂಟಾಗುತ್ತೆ. ಹೀಗಾಗಿ ಕನ್ನಡಕ್ಕೆ ಒಂದು ನಿರ್ಣಯ ಮಾಡಿ, ಶಿಕ್ಷೆ ಕೊಡಿ ಎಂದು ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡೋಣ ಎಂದು ತಿಳಿಸಿದರು.

    ಬಳಿಕ ಸರ್ಕಾರದ ಪರವಾಗಿ ಉತ್ತರಿಸಿದ ಕಂದಾಯ ಸಚಿವ ಆರ್.ಅಶೋಕ್, ಖಂಡನಾ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದ್ರು. ಇದು ನಿಜವಾಗಿಯೂ ನಮಗೆಲ್ಲ ನೋವನ್ನು ತಂದಿದೆ. ಯಾವುದೇ ಸರ್ಕಾರ ಇದ್ರು, ನೆಲ, ಜಲ, ಭಾಷೆ ರಕ್ಷಣೆ ಮಾಡೋದು ನಮ್ಮೆಲ್ಲರ ಕರ್ತವ್ಯ. ಎಂಇಎಸ್ ಅವರು ಪದೇ-ಪದೇ ಪುಂಡಾಡಿಕೆ ಮಾಡ್ತಿದ್ದಾರೆ. ಧ್ವಜ ಸುಟ್ಟು ಹಾಕಿರುವರು ಕಿಡಿಗೇಡಿಗಳು. ನಮ್ಮ ನೆಲದಲ್ಲಿ ಈ ರೀತಿ ಆಗಿದಿದ್ರೆ ಅವರನ್ನು ಸುಮ್ಮನೆ ಬಿಡುತ್ತಿರಲಿಲ್ಲ. ಆದರೆ ಅಲ್ಲಿನ ನೆಲದಲ್ಲಿ ಆಗಿರೋದ್ರಿಂದ ಅಲ್ಲಿನ ಸರ್ಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತಾಡ್ತೇವೆ. ಜೊತೆಗೆ ಖಂಡನಾ ನಿರ್ಣಯವನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಕಳುಹಿಸಿಕೊಡ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪಾಂಡವರ ಕಾಲದ ಕೋಟೆ ಬೆಟ್ಟ ಬೊಳ್ಲಪ್ಪ ಈಶ್ವರ ದೇವಾಲಯದಲ್ಲಿ ಉತ್ಸವ

  • ಅಂಬೇಡ್ಕರ್ ಫೋಟೋ ಅಳವಡಿಕೆ –  ಶಾಸಕ ಅನ್ನದಾನಿ ಮೇಲೆ ಸ್ಪೀಕರ್ ಗರಂ

    ಅಂಬೇಡ್ಕರ್ ಫೋಟೋ ಅಳವಡಿಕೆ – ಶಾಸಕ ಅನ್ನದಾನಿ ಮೇಲೆ ಸ್ಪೀಕರ್ ಗರಂ

    ಬೆಳಗಾವಿ: ಸುವರ್ಣ ಸೌಧದ ಸದನದಲ್ಲಿ ಅಂಬೇಡ್ಕರ್ ಭಾವಚಿತ್ರ ಇನ್ನೂ ಅಳವಡಿಸದ ವಿಚಾರ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು.

    ಬೆಳಗಾವಿ ವಿಧಾನಸಭೆಯ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ಹಾಕಬೇಕು ಅಂತಾ ಹೇಳಿ ಎರಡು ವರ್ಷ ಆದ್ರೂ ಹಾಕಿಲ್ಲ ಎಂದು ಮಳವಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಎರಡು ಡೋಸ್ ಆಗಿದೆ, 2023ಕ್ಕೆ ಬೂಸ್ಟರ್ ಡೋಸ್ – ಜೆಡಿಎಸ್‌ಗೆ ತಿವಿದ ರಾಜೇಂದ್ರ

    ಈ ವೇಳೆ ಕುಳಿತುಕೊಳ್ಳುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅನ್ನದಾನಿಗೆ ಸೂಚಿಸಿದರು. ಸ್ಪೀಕರ್ ಮಾತು ಪರಿಗಣಿಸದೇ ಅನ್ನದಾನಿ ಅವರು ತಮ್ಮ ಆಸನದಿಂದ ಹೊರಗೆ ಬಂದು ನಿಂತರು. ಇದನ್ನೂ ಓದಿ: ಕರೆನ್ಸಿ ನೋಟುಗಳ ಮೇಲೆ ನೇತಾಜಿ ಫೋಟೋ ಮುದ್ರಿಸಿ: ಹರೇನ್ ಬಿಸ್ವಾಸ್ ಮನವಿ

    ಈ ವೇಳೆ ಮತ್ತೆ ಕುಳಿತುಕೊಳ್ಳುವಂತೆ ಶಾಸಕ‌ ಅನ್ನದಾನಿಗೆ ಸ್ಪೀಕರ್ ವಾರ್ನಿಂಗ್ ನೀಡಿ, ಸಂತೆಯಲ್ಲಿ ಮಾತಾಡಿದಂತೆ ಜೋರಾಗಿ ಒದರಿಕೊಂಡು ಮುಂದೆ ಬಂದರೆ ಅದು ಅಶಿಸ್ತಿನ ಪರಮಾವಧಿ ಎಂದೇ ಪರಿಗಣಿಸಬೇಕಾಗುತ್ತದೆ. ಡಾ. ಅನ್ನದಾನಿ ನೀವು ಗೌರವದಿಂದ ನಡೆದುಕೊಳ್ಳಿ ಎಂದು ಸ್ಪೀಕರ್ ಕಾಗೇರಿ ಹೇಳಿದರು.

    ಇದೇ ವೇಳೆ ಅಂಬೇಡ್ಕರ್ ಪೋಟೋ ಹಾಕುವುದಕ್ಕೆ ವಿವಾದವೇ ಆಗಬಾರದು ಎಂದು ಸಿದ್ದರಾಮಯ್ಯ ಹೇಳಿದರು. ಇದನ್ನೂ ಓದಿ: ಅಭ್ಯರ್ಥಿ ರವಿ ಮದ್ದು ಗುಂಡೇಟು ತಿಂದವ್ರೆ: ಡಿಕೆಶಿ

    ಅಂಬೇಡ್ಕರ್ ಫೋಟೋ ಹಾಕುವ ವಿಚಾರ ಕಲಾಪದಲ್ಲಿ ಚರ್ಚೆಯ ವಿಚಾರ ಅಲ್ಲ. ಅಂಬೇಡ್ಕರ್ ಫೋಟೋ ಹಾಕಿಯೇ ಹಾಕ್ತೀವಿ. ಅಂಬೇಡ್ಕರ್ ಫೋಟೋ ಒಳಗೊಂಡಂತೆ ಇನ್ನೂ ಯಾರದೆಲ್ಲ ಫೋಟೋ ಹಾಕಬೇಕು ಎಂದು ಪ್ರಮುಖ ನಾಯಕರ ಸಲಹೆ ಪಡೆದು ಹಾಕ್ತೀವಿ ಎಂದ ಸ್ಪೀಕರ್ ಕಾಗೇರಿ ಸ್ಪಷ್ಟಪಡಿಸಿದರು.

    ಸದನದಲ್ಲಿ ಯಾವುದೇ ವಿಚಾರ ಪ್ರಸ್ತಾಪ ಮಾಡುವುದಿದ್ದರೂ ಮೊದಲು ನನ್ನ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು.

  • ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಭಾಷಣ ಕೇಳಿದ್ರೆ ರೋಮಾಂಚನವಾಗುತ್ತೆ: ಅನ್ನದಾನಿ

    ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಭಾಷಣ ಕೇಳಿದ್ರೆ ರೋಮಾಂಚನವಾಗುತ್ತೆ: ಅನ್ನದಾನಿ

    – ಮಾಜಿ ಸಿಎಂ ಹಾಡಿಹೊಗಳಿದ ಜೆಡಿಎಸ್ ಶಾಸಕ

    ಮಂಡ್ಯ: ಸಿದ್ದರಾಮಯ್ಯ ಹಿಂದುಳಿದವರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡಿದ ಧೀಮಂತ ನಾಯಕರು. ಅವರ ಯೋಜನೆಗಳು ಇಂದಿಗೆ ನಮ್ಮ ಮನಸ್ಸಿನಲ್ಲಿ ಇದೆ. ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರ ಭಾಷಣ ಕೇಳುತ್ತಿದ್ದರೆ ರೋಮಾಂಚನವಾಗುತ್ತದೆ ಎಂದು ಜೆಡಿಎಸ್ ಶಾಸಕ ಅನ್ನದಾನಿ ಅವರು ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದಾರೆ.

    ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಸಾಹಳ್ಳಿ ಗ್ರಾಮದ ಗ್ರಾಮದೇವತೆ ದೇವಸ್ಥಾನದ ಉದ್ಘಾಟನ ಕಾರ್ಯಕ್ರಮದಲ್ಲಿ ಮಾತನಾಡಿದ ಅನ್ನದಾನಿ, ವೇದಿಕೆಯ ಮೇಲೆ ಕೂತಿದ್ದ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದರು. ಸಿದ್ದರಾಮಯ್ಯ ಅವರು ನಮ್ಮ ನಾಯಕರು ಎಂದು ಪದೇ ಪದೇ ಭಾಷಣದ ಉದ್ದಕ್ಕೂ ಹೇಳಿದರು. ಅಲ್ಲದೆ ಮಾಜಿ ಸಿಎಂ ನಮ್ಮ ನಾಯಕರು, ನಾನು ಅವರ ಅಭಿಮಾನಿ ಎಂದು ಹೇಳುವ ಮೂಲಕ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದಾರೆ.

    ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ಕಂಡ ಶೇಷ್ಠ ನಾಯಕ, ನಾನು ಅವರ ಅಭಿಮಾನಿ ಆಗಿದ್ದೇನೆ. ನಾನು ಮೊದಲು ಸಿದ್ದರಾಮಯ್ಯ ಅವರ ಗರಡಿಯಲ್ಲಿ ಬೆಳೆದವನು. ಮೊದಲು ಅವರು ಜೆಡಿಎಸ್‍ನಲ್ಲಿ ಇದ್ದಾಗ ನಾನು ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದೆ. ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟು, ಕಾಂಗ್ರೆಸ್ಸಿಗೆ ಹೋದರು. ನಾನು ಕುಮಾರಸ್ವಾಮಿ ಹಾಗೂ ದೇವೇಗೌಡರ ಬಳಿ ಉಳಿದುಕೊಂಡು ಬಿಟ್ಟೆ. ಆದರು ಸಹ ಈಗಲೂ ನಾನು ಸಿದ್ದರಾಮಯ್ಯ ಅವರ ಜೊತೆ ಚೆನ್ನಾಗಿ ಇದ್ದೀನಿ ಎಂದರು.

    ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಒಂದು ಇತಿಹಾಸ ಇದ್ದ ಹಾಗೆ, ಇಂತಹ ಇತಿಹಾಸ ಇಲ್ಲಿಗೆ ಬಂದಿರೋದು ಒಂದು ಇತಿಹಾಸ ಆಗಲಿದೆ ಎಂದರು.