Tag: ಅನ್ನದಾತ

  • ಮಂಡ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಬೀದಿಗಿಳಿದ ಹಿಂದೂ ಕಾರ್ಯಕರ್ತರು, ಅನ್ನದಾತರು!

    ಮಂಡ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಬೀದಿಗಿಳಿದ ಹಿಂದೂ ಕಾರ್ಯಕರ್ತರು, ಅನ್ನದಾತರು!

    ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಸಾವಿರಾರು ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಅನ್ನದಾತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಡಿಸಿದ್ದಾರೆ. ಪ್ರವೀಣ್ ಹತ್ಯೆ ಖಂಡಿಸಿ ಹಿಂದೂ ಸಂಘಟನೆ ಮಾಡಿದ್ರೆ, ಜಿಎಸ್‍ಟಿ ವಿರುದ್ಧ ಅನ್ನದಾತರು ಪ್ರತಿಭಟಿಸಿದ್ರು. ಇಂದು ಮಂಡ್ಯದಲ್ಲಿ ನಡೆದ ನಾಲ್ಕು ಪ್ರತಿಭಟನೆಯಿಂದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಕೂಡ ಆಗಿತ್ತು.

    ಮಂಡ್ಯದಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಮತ್ತು ಪಿಎಫ್‍ಐ ಹಾಗೂ ಎಸ್‍ಟಿಪಿಐ ಸಂಘಟನೆಗಳನ್ನು ಬ್ಯಾನ್ ಮಾಡಬೇಕೆಂದು ಆಗ್ರಹಿಸಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 10 ಸಾವಿರಕ್ಕೂ ಅಧಕ ಮಂದಿ ಮಂಡ್ಯದ ಮಹಿಳಾ ಕಾಲೇಜಿನಿಂದ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ, ಹೀಗಿದ್ದರೂ ಹಿಂದೂಗಳ ಕೊಲೆಯಾಗುತ್ತಿದೆ. ಹಿಂದೂಗಳ ರಕ್ಷಣೆ ನಮ್ಮ ಧ್ಯೇಯ ಎಂದು ಕೊಂಡು ಅಧಿಕಾರಕ್ಕೆ ಬಂದವರು ಇದೀಗ ಹತ್ಯೆಗಳಾದ್ರು ಇದೀಗ ಕಠಿಣ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಅಧಿಕಾರಕ್ಕೆ ಬಂದ ಗಂಟೆಯಲ್ಲೇ ಪಿಎಫ್‍ಐ ಮತ್ತು ಎಸ್‍ಟಿಪಿಐ ಸಂಘಟನೆಗಳನ್ನು ಬ್ಯಾನ್ ಮಾಡುತ್ತೇವೆ ಎಂದವರು ಇದೀಗ ತುಟಿ ಬಿಚ್ಚುತ್ತಿಲ್ಲ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಿಜೆಪಿ ವಿರುದ್ಧ ಆಕ್ರೋಶ ವ್ಯಪಡಿಸಿದರು.

    ಒಂದು ಕಡೆ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ರೆ ಮತ್ತೊಂದೆಡೆ ಕರ್ನಾಟಕ ರಾಜ್ಯ ರೈತ ಸಂಘಟವೂ ಸಹ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿತು. ಬೆಲ್ಲದ ಮೇಲಿನ ಜಿಎಸ್‍ಟಿ ವಾಪಸ್ ಪಡೆಯುವಂತೆ, ಕಬ್ಬಿಗೆ ಟನ್‍ಗೆ 4500 ರೂ ಬೆಲೆ ನಿಗಧಿ ಮಾಡುವಂತೆ, ಬೆಲ್ಲಕ್ಕೆ ವೈಜ್ಞಾನಿಕ ಬೆಲೆ ನಿಗಧಿಪಡಿಸಬೇಕು ಹಾಗೂ ಎಪಿಎಂಸಿಯನ್ನು ಪಾರದರ್ಶಕಗೊಳಿಸಬೇಕೆಂದು ಪ್ರತಿಭಟನೆ ನಡೆಸಿದರು. ಮಂಡ್ಯದ ಕಾಳಮ್ಮ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಎತ್ತಿನಗಾಡಿ, ಟ್ರಾಕ್ಟರ್ ಹಾಗೂ ಟಿಲ್ಲರ್ ಗಳ ಮೂಲಕ ಮೆರವಣಿಗೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಫಾಝಿಲ್ ಹತ್ಯೆ ಪ್ರಕರಣ- ಪರಾರಿಯಾಗುವ ರಸ್ತೆ ಮಾರ್ಗ ಬದಲಿಸಲು ಹೇಳಿರುವ ರೌಡಿ ಸುಹಾಸ್

    ಇತ್ತ ಸಿಐಟಿಯು ಸಂಘಟೆಯಿಂದ ಸಾವರಿರಾರು ಕಾರ್ಯಕರ್ತರು ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಡಿಸಿ ಆಫೀಸ್ ವರೆಗೆ ಕೂಲಿ ಕಾರ್ಯಕರ್ತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಇನ್ನೂ ಅಖಿಲ ಭಾರತ ವಿರಶೈವ ಲಿಂಗಾಯತ ಮಹಾಸಭಾದಿಂದ ವಿರಶೈವ ಲಿಂಗಾಯತ ಸಮೂದಾಯವನ್ನು ಓಬಿಸಿ ಪಟ್ಟಿಗೆ ಸೇರಿಸಬೇಕೆಂದು ಸಂಜಯ್ ಸರ್ಕಲ್‍ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಮಂಡ್ಯದಲ್ಲಿ ನಡೆದ ಈ ಸರಣಿ ಪ್ರತಿಭಟನೆಯಿಂದ ಮಂಡ್ಯ ನಗರದ ಜನರು ಪರದಾಡುವ ಸ್ಥಿತಿ ನಿರ್ಮಾಣವಾದ್ರೆ, ಇನ್ನೊಂದೆಡೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುವ ಸ್ಥತಿ ನಿರ್ಮಾಣವಾಯಿತು.

    ಒಟ್ಟಾರೆ ಮಂಡ್ಯ ಇಂದು ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶದ ಸ್ವರೂಪದಲ್ಲಿ ನಡೆದ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ಇತ್ತ ಈ ಪ್ರತಿಭಟನೆಗಳಿಂದ ಜನ ಸಾಮಾನ್ಯರು ಪರದಾಡಿದರು.

    Live Tv
    [brid partner=56869869 player=32851 video=960834 autoplay=true]

  • ಸಾಲಮನ್ನಾ ಬೇಡ, ನಮ್ಗೆ ನೀರು ಕೊಡಿ ಸ್ವಾಮಿ- ಹಾಸನದಲ್ಲಿ ನೀರಿಗಾಗಿ ರೈತನ ಅಳಲು

    ಸಾಲಮನ್ನಾ ಬೇಡ, ನಮ್ಗೆ ನೀರು ಕೊಡಿ ಸ್ವಾಮಿ- ಹಾಸನದಲ್ಲಿ ನೀರಿಗಾಗಿ ರೈತನ ಅಳಲು

    ಹಾಸನ: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಗೆ ಅನ್ನದಾತರೊಬ್ಬರು ಮನವಿ ಮಾಡಿಕೊಂಡ ವಿಡಿಯೋ ವೈರಲ್ ಆಗಿದೆ.

    ಹಾಸನದ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕರಸಳ್ಳಿ ರೈತ ನಂಜೇಶಿಯವರು ನಮಗೆ ಸಾಲಮನ್ನಾ ಬೇಡ. ದಯವಿಟ್ಟು ನೀರು ಒದಗಿಸಿ ಸ್ವಾಮಿ ಎಂದು ಪರಿಪರಿಯಾಗಿ ಅಲವತ್ತುಕೊಂಡಿರೋ ಈ ವಿಡಿಯೋ ಮನಕಲಕುವಂತಿದೆ.

    ಬಾಗೂರು-ನವಿಲೆ ಸುರಂಗ ಮಾರ್ಗದ ಸಮೀಪದಲ್ಲಿರುವ ತೆಂಗಿನ ತೋಟ ನೀರಿನ ಕೊರತೆಯಿಂದ ಒಣಗಿ ಹೋಗಿದೆ. ಹಾಗಾಗಿ ನೀರಾವರಿ ಸೌಲಭ್ಯ ಒದಗಿಸಿಕೊಡಿ ಎಂದು ಮುಖ್ಯಮಂತ್ರಿ ತವರೂರಿನಲ್ಲಿ ಅನ್ನದಾತನ ನಂಜೇಶಿ ವಿಡಿಯೋ ಮಾಡುವ ಮೂಲಕ ತನ್ನ ಅಲವತ್ತುಕೊಂಡಿದ್ದಾರೆ.

    ವಿಡಿಯೋದಲ್ಲೇನಿದೆ?:
    ಕುಮಾರಣ್ಣ ನಿಮ್ಮೂರು ಕಣಣ್ಣ ನಮ್ದು. ನಮ್ಮ ಪಾಡು ನೋಡಣ್ಣ ಇಲ್ಲಿ ಯಾವ ಮಟ್ಟಕ್ಕೆ ಆಗಿದೆಯೆಂದು. ಇಲ್ಲೇ ಪಕ್ಕದಲ್ಲಿ 5 ಕಿ.ಮೀ ಸುರಂಗ ಹೋಗಿದೆಯಲ್ಲಣ್ಣ. ನಿಮ್ಮೂರಿನ ಪಕ್ಕದಲ್ಲೇ ಇದ್ದೀವಿ ಅಣ್ಣ ನಾವು. ನಮ್ಮನ್ನ ಜ್ಞಾಪಿಸಲೇ ಇಲ್ವಲ್ಲಣ್ಣ. ಎಲೆಕ್ಷನ್ ಬಂದಾಗ ಮಾತ್ರ ನಮ್ಮನ್ನ ನೆನಪು ಮಾಡಿಕೊಳ್ತೀರಲ್ವ ಅಣ್ಣ. ನಮ್ಮ ಪಾಡು ನೋಡಣ್ಣ ಅಂತ ಕಣ್ಣೀರು ಹಾಕಿದ್ದಾರೆ.

    ಒಂದು ಬಾರಿ ಇಲ್ಲಿ ನೋಡಣ್ಣ. ಇಲ್ಲಿ ಬಂದು ನೋಡಿದ್ರೆ ನಮ್ಮ ಕಷ್ಟ ನಿಮಗೆ ಅರ್ಥವಾಗುತ್ತೆ ಅಣ್ಣ. ಸಾಲಮನ್ನಾ ಬೇಡ ಅಣ್ಣ. ನಮಿಗೆ ನೀರು ಕೊಟ್ರೆ ಸಾಕಣ್ಣ. ಕೈ ಮುಗಿದು ಬೇಡಿಕೊಳ್ಳುತ್ತೇನೆ ಅಣ್ಣ. ನನ್ನ ಪರಿಸ್ಥಿಯನ್ನು ಬಂದು ನೋಡ್ಬೇಕು ಅಣ್ಣ ನೀನು ಅಂತ ಕಣ್ಣೀರು ಸುರಿಸುತ್ತಲೇ ಸಿಎಂ ಅವರನ್ನು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

    https://www.youtube.com/watch?v=3L9QDMumJvE&feature=youtu.be

  • ಬರಗಾಲದಿಂದ ಕಂಗಾಲಾದ ಬಡ ರೈತರಿಗೆ ಅನ್ನದಾತರಾದ್ರು- ಗೋಶಾಲೆಯಲ್ಲಿ ನಿತ್ಯ 400 ರೈತರಿಗೆ ಅನ್ನ ದಾಸೋಹ

    ಬರಗಾಲದಿಂದ ಕಂಗಾಲಾದ ಬಡ ರೈತರಿಗೆ ಅನ್ನದಾತರಾದ್ರು- ಗೋಶಾಲೆಯಲ್ಲಿ ನಿತ್ಯ 400 ರೈತರಿಗೆ ಅನ್ನ ದಾಸೋಹ

    ತುಮಕೂರು: ಅನ್ನದಾತರಿಗೆ ಅನ್ನದಾನ ಮಾಡುವ ಮಹಾನುಭಾವರು. ಬರಗಾಲದಿಂದ ಕಂಗಾಲಾದ ಬಡ ರೈತರ ಹೊಟ್ಟೆ ತಣಿಸಿದ್ದಾರೆ. ತೂಮಕೂರಿನ ರಕ್ಷಿತ್ ಜೈ ಗಿರೀಶ್, ಗೋ ಶಾಲೆಯಲ್ಲಿ ಪ್ರತಿದಿನ 400ಕ್ಕೂ ಹೆಚ್ಚು ರೈತರಿಗೆ ಉಚಿತವಾಗಿ ಅನ್ನದಾಸೋಹ ಮಾಡುತ್ತಿದ್ದಾರೆ.

    ಹೌದು, ಈ ಮಹಾನುಭಾವರಿಗೆ ರೈತರೆಂದರೆ ಎಲ್ಲಿಲ್ಲದ ಕರುಣೆ. ಬರಗಾಲದಿಂದ ಬೇಸತ್ತ ರೈತರು ಗೋ ಶಾಲೆಗಳಲ್ಲಿ ತಮ್ಮ ಜಾನುವಾರುಗಳೊಂದಿಗೆ ಹಸಿವಿನಿಂದ ಮಲಗುತ್ತಿದ್ದುದನ್ನ ಕಂಡು ಇವರ ಕರುಳು ಚುರ್ರ್ ಎನ್ನುತಿತ್ತು. ನಮಗೆ ಅನ್ನ ನೀಡೋ ಅನ್ನದಾತರು ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎಂದು ಸಂಕಲ್ಪಿಸಿದ್ದರು. ಹಾಗಾಗಿ ಪ್ರತಿದಿನ ಸುಮಾರು 400 ಕ್ಕೂ ಹೆಚ್ಚು ರೈತರಿಗೆ ಇವರು ಉಚಿತವಾಗಿ ಅನ್ನದಾಸೋಹ ಮಾಡುತಿದ್ದಾರೆ.

    ಕಲ್ಪತರು ನಾಡು ತುಮಕೂರು ಜಿಲ್ಲೆ ಕಳೆದ ನಾಲ್ಕೈದು ವರ್ಷಗಳಿಂದ ನಿರಂತರ ಬರಗಾಲಕ್ಕೆ ತುತ್ತಾಗಿದೆ. ಮಳೆ ಇಲ್ಲದೆ ಬೆಳೆಗಳು ಕೈ ಕೊಟ್ಟು ರೈತರನ್ನು ಸಂಕಷ್ಟಕ್ಕೆ ನೂಕಿವೆ. ಅತ್ತ ಜಾನುವಾರುಗಳಿಗೂ ಮೇವಿಲ್ಲದೆ ದನ-ಕರುಗಳು ಸಾಯುವಂತಾಗಿದೆ. ಅದಕ್ಕಾಗಿಯೇ ಜಿಲ್ಲಾಡಳಿತದಿಂದ ಗೋ ಶಾಲೆಗಳನ್ನು ತೆರೆಯಲಾಗಿತ್ತು. ಈ ಗೋ ಶಾಲೆಗಳಲ್ಲಿ ಜಾನುವಾರುಗಳಿಗೇನೋ ಮೇವು- ನೀರು ಸಿಗುತಿತ್ತು. ಆದ್ರೆ ತಮ್ಮ ಹಸುಗಳೊಂದಿಗೆ ಬಂದ ನೂರಾರು ರೈತರು ಹಸಿವಿನಿಂದಲೇ ದಿನ ದೂಡುತಿದ್ದರು. ಮಧ್ಯಾಹ್ನ ಊಟ ಮಾಡಿದ್ದರೂ ರಾತ್ರಿಹೊತ್ತು ಉಪವಾಸ ಮಲಗುವುದು ಖಚಿತವಾಗಿತ್ತು. ರೈತರ ಈ ಸ್ಥಿತಿ ಕಂಡು ನಿವೃತ್ತ ಬ್ಯಾಂಕ್ ಉದ್ಯೋಗಿ ರಕ್ಷಿತ್ ಜೈ ಗಿರೀಶ್ ರ ಕರುಳು ಚುರ್ರ್ ಅಂದಿತ್ತು.

    ನಮಗೆ ಅನ್ನ ನೀಡೋ ಅನ್ನದಾತರೇ ಉಪವಾಸ ಮಲಗೋದನ್ನು ನೋಡಿ ರಕ್ಷಿತ್ ಜೈ ಗಿರೀಶ್‍ರ ಮನಸ್ಸು ಮರುಗಿತ್ತು. ಆ ಕ್ಷಣದಿಂದಲೇ ರೈತರಿಗೆ ತಮ್ಮಿಂದಾದ ಅಳಿಲು ಸೇವೆ ಮಾಡೋಣ ಎಂದು ಸಂಕಲ್ಪಿಸಿದ್ದರು. ಅದರ ಪರಿಣಾಮವಾಗಿ ಎರಡು ಗೋ ಶಾಲೆಗಳನ್ನು ಅವರು ಆಯ್ಕೆ ಮಾಡಿಕೊಂಡು ರಾತ್ರಿ ಹೊತ್ತು ರೈತರಿಗೆ ಉಚಿತವಾಗಿ ಊಟ ನೀಡುತ್ತಿದ್ದಾರೆ.

    ಶಿರಾ ತಾಲೂಕಿನ ಗಂಡಿಹಳ್ಳಿ ಹಾಗೂ ಉಲ್ಲಾಸಿನ ತೋಪು ಎಂಬ ಎರಡು ಗೋ ಶಾಲೆಗಳನ್ನು ಇವರು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರತಿದಿನ ರಾತ್ರಿ ಹೊತ್ತು ಈ ಗೋಶಾಲೆಯಲ್ಲಿದ್ದ 400 ಕ್ಕೂ ಹೆಚ್ಚು ರೈತರಿಗೆ ಅನ್ನದಾಸೋಹ ನಡೆಸುತಿದ್ದಾರೆ.

    ಕಳೆದ ಜನವರಿಯಿಂದ ನಿರಂತರವಾಗಿ ರಕ್ಷಿತ್ ಜೈ ಗಿರೀಶ್ ಈ ಸೇವೆ ಮಾಡಿಕೊಂಡು ಬಂದಿದ್ದಾರೆ. ಗಂಡಿಹಳ್ಳಿ ಹಾಗೂ ಉಲ್ಲಾಸಿನ ತೋಪಿನಲ್ಲಿರುವ ಗೋ ಶಾಲೆಗಳು ಪಟ್ಟಣದಿಂದ ದೂರ ಇದೆ. ಬಸ್ ವ್ಯವಸ್ಥೆ ಕೂಡಾ ಇಲ್ಲಿ ಇರೋದಿಲ್ಲ. ಹಾಗಾಗಿ ರೈತರು ಹೊಟೇಲ್‍ನಿಂದ ಪಾರ್ಸೆಲ್ ತಂದು ಊಟ ಮಾಡೋಕಾಗಲ್ಲ. ಪರಿಣಾಮ ಈ ಭಾಗದಲ್ಲಿ ಹೆಚ್ಚಿನ ರೈತರು ಉಪವಾಸ ಮಲಗುತಿದ್ದರು.

    ಹಾಗಾಗಿ ರಕ್ಷಿತ್ ಜೈ ಗಿರೀಶ್ ಇಲ್ಲಿಯ ರೈತರಿಗೆ ಉಚಿತವಾಗಿ ರಾತ್ರಿ ಊಟದ ವ್ಯವಸ್ಥೆ ಮಾಡಿದ್ದಾರೆ. ಅನ್ನದೊಂದಿಗೆ ದಿನಕ್ಕೊಂದು ರೀತಿಯ ಸಾಂಬಾರ್, ಪಲ್ಯ, ಕೊಟ್ಟು ರುಚಿ ರುಚಿಯಾದ ಊಟ ಬಡಿಸುತ್ತಿದ್ದಾರೆ. ರಕ್ಷಿತ್ ಜೈ ಗಿರೀಶ್ ತುಮಕೂರಿನವರಾದ್ರೂ ಬೆಂಗಳೂರಲ್ಲಿ ಸೆಟಲ್ ಆಗಿದ್ದಾರೆ. ಐಎನ್‍ಜಿ ವೈಶ್ಯ ಬ್ಯಾಂಕ್‍ನಲ್ಲಿ ಉದ್ಯೋಗಿಯಾಗಿದ್ದ ಇವರು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಸಮಾಜ ಸೇವೆ ಮಾಡುವ ಮನೋಭಾವದಿಂದ ಕೃಷ್ಣ ಗ್ಲೋಬಲ್ ಫೌಂಡೇಷನ್ ಎಂಬ ಸಂಸ್ಥೆ ಕಟ್ಟಿಕೊಂಡು ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

    ರಕ್ಷಿತ್ ಜೈ ಗಿರೀಶ್ ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ರೈತರಿಗಾಗಿ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಬಡ ರೈತ ಸಮುದಾಯ ಕೂಡಾ ಇವರ ಸೇವೆಗೆ ಋಣಿಯಾಗಿದೆ.

    https://youtu.be/aL9eHc85M8g